Tag: ಸಿಡಿಪಿ

  • ನಾಳೆ ದರ್ಶನ್ ಹುಟ್ಟುಹಬ್ಬ: ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ  ಟ್ರೆಂಡಿಂಗ್

    ನಾಳೆ ದರ್ಶನ್ ಹುಟ್ಟುಹಬ್ಬ: ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ ಟ್ರೆಂಡಿಂಗ್

    ನ್ನಡದ ಹೆಸರಾಂತ ನಟ ದರ್ಶನ್ ಅವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದಾರೆ. ನಿನ್ನಯಷ್ಟೇ ಹುಟ್ಟು ಹಬ್ಬಕ್ಕಾಗಿ (Birthday) ಸಿಡಿಪಿ ರಿಲೀಸ್ ಆಗಿದ್ದು, ಕಾಮನ್ ಡಿಪಿಯಲ್ಲಿ(CDP)  ‘ನಿಮ್‍ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ’ ಮಾತು ಟ್ರೆಂಡ್ ಆಗಿದೆ.

    ಹುಟ್ಟು ಹಬ್ಬದ ಜೊತೆ ಜೊತೆಗೆ ದರ್ಶನ್ (Darshan) ಚಂದನವನಕ್ಕೆ (sandalwood) ಪದಾರ್ಪಣೆ ಮಾಡಿ ಭರ್ತಿ 25 ವರ್ಷಗಳಾಗಿವೆ. ಇದೇ ಶುಭ ಸಂದರ್ಭದಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾದ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಬೇಬಿ ಮಠ  ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.

    ಫೆಬ್ರವರಿ 17ರ ಶನಿವಾರ ಸಂಜೆ 5 ಗಂಟೆಗೆ ಬೆಳ್ಳಿ ಪರ್ವ ಡಿ-25 ಎಂಬ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದ್ದು, ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ.

    ವಿನೋದ್ ರಾಜ್ ಕುಮಾರ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ, ಝೈದ್ ಖಾನ್, ಶಿವರಾಜ್ ಕೆ.ಆರ್ ಪೇಟೆ ಹಾಗೂ ಸೂರಜ್ ಸೇರಿದಂತೆ ಸಾಕಷ್ಟು ನಟ, ನಟಿಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಿಮಿಕಾ ರತ್ನಾಕರ್, ನಿಶ್ವಿಕಾ ನಾಯ್ಡು, ಬೃಂದಾ ಆಚಾರ್ಯ, ಶರಣ್ಯ ಶೆಟ್ಟಿ, ನಮ್ರತಾ ಗೌಡ, ತನ್ವಿಯ ಬಾಲರಾಜ್, ಪ್ರಿಯಾಂಕ ಗೌಡ ನೃತ್ಯ ಮಾಡಲಿದ್ದಾರೆ.

     

    ಹಲವು ಸಾಮಾಜಿಕ ಕಾರ್ಯಕ್ರಮಗಳು ಇದೇ ವೇಳೆ ಜರುಗಲಿದೆ. ಇವೆಲ್ಲ ಕಾರ್ಯಗಳ ಉಸ್ತುವಾರಿಯನ್ನು ದರ್ಶನ್ ಅವರ ಆತ್ಮೀಯರಾದ ಎಸ್.ಸಚ್ಚಿದಾನಂದ ಇಂಡುವಾಳು ವಹಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮೈದಾನದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಲಿದೆ.

  • ಸುದೀಪ್ ಸಿಡಿಪಿಯಲ್ಲಿ ರಾರಾಜಿಸುತ್ತಿದೆ ಮಾಹಿಯ ನಾನಾ ಅವತಾರ

    ಸುದೀಪ್ ಸಿಡಿಪಿಯಲ್ಲಿ ರಾರಾಜಿಸುತ್ತಿದೆ ಮಾಹಿಯ ನಾನಾ ಅವತಾರ

    ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಅಪ್ರತಿಮ ನಾಯಕ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜುಲೈ 7ರಂದು 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಮಾಹಿಯ ಜನ್ಮದಿನಕ್ಕಾಗಿ ಸ್ಯಾಂಡಲ್‍ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಸಿಡಿಪಿ ಅನಾವರಣಗೊಳಿಸಿದ್ದಾರೆ.

    ಮಾಹಿಯ ಅಭಿಮಾನಿಯಾಗಿರುವ ಕಿಚ್ಚ, ಧೋನಿಯ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ಕಾಮನ್ ಡಿಸ್‍ಪ್ಲೇ ಪಿಕ್ಚರ್(ಸಿಡಿಪಿ)ಯನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‍ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಟೀಂ ಇಂಡಿಯಾದ ಜೆರ್ಸಿಯನ್ನು ಒಟ್ಟಿಗೆ ಧರಿಸಿರುವಂತೆ ಭಾಸವಾಗುತ್ತಿದ್ದಾರೆ. ಇದರ ಹಿಂದೆ ಮಾಹಿಯ ನಾನಾ ಅವತಾರದ ಫೋಟೋಗಳು ಕೂಡ ಕಂಗೊಳಿಸುತ್ತಿದೆ. ಇದನ್ನೂ ಓದಿ : ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಸ್ವತಃ ಕ್ರಿಕೆಟ್ ಆಟಗಾರನಾಗಿ ಕ್ರಿಕೆಟ್ ಪ್ರೇಮಿಯಾಗಿರುವ ಅಭಿನಯಚಕ್ರವರ್ತಿ, ಮಾಹಿಯ ಅಭಿಮಾನಿಯಾಗಿ ಅವರಿಗೆ ತುಂಬಾ ಗೌರವವನ್ನು ಕೊಡುತ್ತಾರೆ. ಈ ಸಿಡಿಪಿಯನ್ನು ಕಿಚ್ಚ ಟ್ವಿಟ್ಟರ್‍ ನಲ್ಲಿ ಪೋಸ್ಟ್ ಮಾಡಿ “ಅವರು ಎಲ್ಲರ ನಾಯಕ, ಎಲ್ಲರ ಅಚ್ಚುಮೆಚ್ಚಿನವರು, ಅವರು ಎಲ್ಲರ ಸ್ಟಾರ್ ಮತ್ತು ಎಲ್ಲರ ಸ್ಫೂರ್ತಿ ಅವರ ಸಿಡಿಪಿ ಬಿಡುಗಡೆ ಮಾಡುತ್ತಿವುರುದು ನನಗೆ ತುಂಬಾ ಸಂತೋಷ ನೀಡಿದೆ. ಹೆಮ್ಮೆ ಅನಿಸುತ್ತಿದೆ. ನಟನಾಗಿ ಅಲ್ಲದೆ, ನಾನೊಬ್ಬ ನಿಮ್ಮ ಅಭಿಮಾನಿಯಾಗಿ ನಿಮಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದೇನೆ ಸರ್ ಎಂದು ಬರೆದುಕೊಂಡಿದ್ದಾರೆ.

  • ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸಿಡಿಪಿ ತಯಾರಿ- ಚಂದನವನದ ಗಣ್ಯರಿಂದ ಶುಭಾಶಯಗಳ ಮಹಾಪೂರ

    ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸಿಡಿಪಿ ತಯಾರಿ- ಚಂದನವನದ ಗಣ್ಯರಿಂದ ಶುಭಾಶಯಗಳ ಮಹಾಪೂರ

    ಬೆಂಗಳೂರು: ಚಂದನವನದಲ್ಲಿ ತಮ್ಮದೇಯಾದ ವಿಭಿನ್ನ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ನಿರ್ದೇಶಕ, ನಟ, ನಿರ್ಮಾಪಕ ರಿಷಬ್ ಶೆಟ್ಟಿ 37ನೇ ವಸಂತಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದಾರೆ.

    ಕೊರೊನಾ ಹೊತ್ತಲ್ಲಿ ಇದೇನಪ್ಪ ಭರ್ಜರಿ ಅಂತೀರಾ, ಹೌದು ನೇರವಾಗಿ ಆಚರಿಸದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅವರ ಅಭಿಮಾನಿಗಳು ಸದ್ದು ಮಾಡುತ್ತಿದ್ದು, ಜುಲೈ 7ರಂದು ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೆ ಕಾಮನ್ ಡಿಪಿ ಮೂಲಕ ತಮ್ಮ ನೆಚ್ಚಿನ ನಟನಿಗೆ ಸರ್ಪ್ರೈಸ್ ನೀಡಿದ್ದು, ನಿರ್ದೇಶಕ ಕೃಷ್ಣ ಎರಡು ದಿನ ಮೊದಲೇ ಈ ಕಾಮನ್ ಡಿಪಿಯನ್ನು ಬಿಡುಗಡೆಗೊಳಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

    ಸಿಡಿಪಿ ಚಿತ್ರವನ್ನು ಟ್ವೀಟ್ ಮಾಡಿ ಸಾಲುಗಳನ್ನು ಬರೆದಿರುವ ನಿರ್ದೇಶಕ ಕೃಷ್ಣ, ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಸಿಡಿಪಿ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವಾಗಿದೆ. ಅಡ್ವಾನ್ಸ್ ಹ್ಯಾಪಿ ಬರ್ತ್‍ಡೇ ಟು ಆಕ್ಟರ್, ಡೈರೆಕ್ಟರ್, ಪ್ರೊಡ್ಯೂಸರ್ ಎಂದು ಬರೆದಿದ್ದಾರೆ. ರಿಷಬ್ ಶೆಟ್ಟಿ ಹುಟ್ಟುಹಬ್ಬದ ಕಾಮನ್ ಡಿಪಿ ಇದೀಗ ಸಾಮಾಜಿಕ ಜಾಲತಾಣಗಳ್ಲಿ ಸಖತ್ ವೈರಲ್ ಆಗಿದೆ. ಕೇವಲ ರಿಷಬ್ ಶೆಟ್ಟಿ ಫ್ಯಾನ್ಸ್ ಮಾತ್ರವಲ್ಲ, ದರ್ಶನ್, ಯಶ್, ಸುದೀಪ್, ಉಪೇಂದ್ರ, ರಶ್ಮಿಕಾ ಮಂದಣ್ಣ ಫ್ಯಾನ್ಸ್ ಸಹ ಸಿಡಿಪಿ ಪೋಸ್ಟ್ ಮಾಡಿ ಶುಭ ಕೋರಿದ್ದಾರೆ.

    ಅಲ್ಲದೆ ಚಂದನವನದ ತಾರಾಗಣವೇ ರಿಷಬ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದು, ನಟ ಜಗ್ಗೇಶ್ ಟ್ವೀಟ್ ಮಾಡಿ ಹಾರೈಸಿದ್ದಾರೆ. ನಲ್ಮೆಯ ಯುವ ಮಿತ್ರ ರಿಷಬ್ ಹುಟ್ಟುಹಬ್ಬದ ಶುಭಾಶಯಗಳು, ಗಾಡ್ ಬ್ಲೆಸ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಿಷಬ್ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಅಣ್ಣಯ್ಯ ಎಂದಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಹವಾ ಕ್ರಿಯೇಟ್ ಮಾಡುವ ಮೂಲಕ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.

    ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕಾಗಿ ಸಂದೇಶ್ ನಾಗರಾಜ್ ಜೊತೆ ಕೈ ಜೋಡಿಸಿದ್ದಾರೆ. ಸಿನಿಮಾದ ಮುಹೂರ್ತ ಸಹ ಇತ್ತೀಚೆಗೆ ನೆರವೇರಿದ್ದು, ಇನ್ನೇನು ಚಿತ್ರೀಕರಣ ಆರಂಭವಾಗಬೇಕಿದೆ. ಇದರ ನಡುವೆಯೇ ಚಿತ್ರದ ನಾಯಕಿಯ ಹುಡುಕಾಟದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ರಿಷಬ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವಿಡಿಯೋ ಕಳುಹಿಸುವಂತೆ ಮನವಿ ಮಾಡಿದ್ದರು.

  • ಹುಟ್ಟುಹಬ್ಬದ ಮುನ್ನವೇ ‘ಯುವರತ್ನ’ನಿಗೆ ಸ್ಪೆಷಲ್ ಗಿಫ್ಟ್

    ಹುಟ್ಟುಹಬ್ಬದ ಮುನ್ನವೇ ‘ಯುವರತ್ನ’ನಿಗೆ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೇನು 1 ದಿನ ಬಾಕಿ ಇದೆ. ಆದರೆ ಜನ್ಮದಿನ ಮುನ್ನವೇ ‘ಯುವರತ್ನ’ ಚಿತ್ರತಂಡ ಅಪ್ಪುಗೆ ಗಿಫ್ಟ್ ಕೊಟ್ಟಿದೆ.

    ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಲ್ಲಿ ಸಂಭ್ರಮ ಜೋರಾಗಿದೆ. ಈಗಾಗಲೇ ತಮ್ಮ ನೆಚ್ಚಿನ ಹೀರೋಗೆ ಅಭಿನಂದನೆಗಳ ಮಹಾಪೂರವನ್ನೇ ಅಭಿಮಾನಿಗಳು ಹರಿಸಿದ್ದಾರೆ. ಪುನೀತ್ ಸಿನಿಮಾಗಳ ವಿವಿಧ ಪೋಸ್ಟರ್ ಗಳನ್ನು ರೆಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

    ಈ ಮಧ್ಯೆ ಪುನೀತ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಉಡುಗೊರೆ ನೀಡಲು ಚಿತ್ರರಂಗ ಕೂಡ ಸಜ್ಜಾಗಿದೆ. ಇತ್ತ ‘ಯುವರತ್ನ’ ಚಿತ್ರತಂಡ ಇಂದು ಸಂಜೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಅತ್ತ ಅಪ್ಪು ಹುಟ್ಟುಹಬ್ಬದ ದಿನದಂದು ‘ಜೇಮ್ಸ್’ ಚಿತ್ರತಂಡ ಕೂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಮುಂದಾಗಿದ್ದು, ಅಭಿಮಾನಿಗಳಿಗೆ ಡಬಲ್ ಖುಷಿ ನೀಡಲು ಸಿದ್ಧತೆ ನಡೆಸಿದೆ.

    ‘ಯುವರತ್ನ’ ಸಿನಿಮಾದ ಎರಡನೆಯ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ, ಅದಕ್ಕೂ ಮೊದಲೇ ಪವರ್ ಸ್ಟಾರ್ ಗಾಗಿ ‘ಯುವರತ್ನ’ದ ಪವರ್‌ಫುಲ್ ಸಿಡಿಪಿ (ಕಾಮನ್ ಡಿಸ್‍ಪ್ಲೇ ಪಿಕ್ಚರ್) ಬಿಡುಗಡೆ ಮಾಡಿದೆ. ಈ ಸಿಡಿಪಿಯನ್ನ ಪುನೀತ್ ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್‍ಗಳಲ್ಲಿ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ.

    ಪುನೀತ್ 18 ವರ್ಷಗಳ ಹಿಂದೆ ಮೊದಲು ನಾಯಕರಾಗಿ ನಟಿಸಿದ್ದ ‘ಅಪ್ಪು’ ಚಿತ್ರದ ಗೆಟಪ್‍ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯುವರತ್ನ ಚಿತ್ರತಂಡ ಮಾಹಿತಿ ನೀಡಿತ್ತು. ಆ ಸಿನಿಮಾವನ್ನು ನೆನಪಿಸುವ ಲುಕ್‍ನಲ್ಲಿಯೇ ಚಿತ್ರತಂಡ ಸಿಡಿಪಿ ಶೇರ್ ಮಾಡಿಕೊಂಡಿದೆ. ಕರ್ನಾಟಕದ ಧ್ವಜದ ಎರಡು ಬಣ್ಣಗಳ ನಡುವೆ ಪುನೀತ್ ಅವರ ವಿವಿಧ ಸಿನಿಮಾಗಳ ಕಟೌಟ್ ಹಾಗೂ ಪೋಸ್ಟರ್ ಚಿತ್ರಗಳನ್ನು ಬಳಸಿ ಸಿಡಿಪಿಯನ್ನ ಚಿತ್ರತಂಡ ರೆಡಿಮಾಡಿದೆ. ಜೊತೆಗೆ ಸಿಡಿಪಿಯಲ್ಲಿ ‘ಹ್ಯಾಪಿ ಬರ್ಥ್ ಡೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್’ ಎಂದು ಶುಭ ಹಾರೈಸಲಾಗಿದ್ದು, ಪುನೀತ್‍ಗೆ ಬಾಕ್ಸ್ ಆಫೀಸ್ ಬಾದ್‍ಷಾ ಎಂಬ ಬಿರುದು ನೀಡಿ ಶ್ಲಾಘಿಸಲಾಗಿದೆ.

    ನಿರ್ದೇಶಕ ಸಂತೋಷ್ ಆನಂದರಾಮ್ ಈ ಹೊಸ ಪ್ರೊಫೈಲ್ ಪಿಕ್ಚರ್ ರಿಲೀಸ್ ಮಾಡಿದ್ದಾರೆ. ‘ಯುವರತ್ನ’ ಚಿತ್ರದ ಡೈಲಾಗ್ ಪೋಸ್ಟರ್ ಸೋಮವಾರ ಸಂಜೆ 6.03ಕ್ಕೆ ಬಿಡುಗಡೆಯಾಗಲಿದ್ದು, ಇದು ಪವರ್ ಪ್ಯಾಕ್ಡ್ ಡೈಲಾಗ್ ಟೀಸರ್ ಎಂದು ಚಿತ್ರತಂಡ ತಿಳಿಸಿದೆ. ಅಷ್ಟೇ ಅಲ್ಲದೇ ಇದು ಪವರ್ ಸ್ಟಾರ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಡೆಡಿಕೇಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.