Tag: ಸಿಡಿಎಸ್

  • ಪಾಕ್‌ನ 48 ಗಂಟೆಗಳ ಪ್ಲ್ಯಾನ್‌, 8 ಗಂಟೆಗಳಲ್ಲೇ ಬುಡಮೇಲು; ಸಿಡಿಎಸ್

    ಪಾಕ್‌ನ 48 ಗಂಟೆಗಳ ಪ್ಲ್ಯಾನ್‌, 8 ಗಂಟೆಗಳಲ್ಲೇ ಬುಡಮೇಲು; ಸಿಡಿಎಸ್

    – ಟ್ರಂಪ್‌ಗೆ ಮೋದಿ ಸರೆಂಡರ್ ಎಂದ ರಾಹುಲ್

    ನವದೆಹಲಿ: 100 ಗಂಟೆಗಳ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಫೈಟರ್ ಜೆಟ್, 2 ಅವಾಕ್, 30ಕ್ಕೂ ಹೆಚ್ಚು ಮಿಸೈಲ್ಸ್, ಒಂದು ಸಿ-130 ವಿಮಾನವನ್ನ ಭಾರತ (India) ಧ್ವಂಸಗೊಳಿಸಿದೆ ಅಂತ ತಿಳಿದುಬಂದಿದೆ.

    ಇನ್ನೂ ಭಾರತದ ನಷ್ಟಗಳ ಕುರಿತು ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ (CDS Anil Chauhan) ಪುಣೆ ವಿವಿಯಲ್ಲಿ ಮಾತಾಡಿದ್ದಾರೆ. ಸಶಸ್ತ್ರ ಪಡೆಗಳು ತಮ್ಮ ತಪ್ಪುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಸಮರ್ಥವಾಗಿರಬೇಕು. ಸೋಲುಗಳು ಮುಖ್ಯವಲ್ಲ, ಫಲಿತಾಂಶ ಮುಖ್ಯ. ನಷ್ಟಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಭಾರತದ ಮೇಲೆ ದಾಳಿ ಮಾಡುವ ಪಾಕಿಸ್ತಾನದ 48 ಗಂಟೆಗಳ ಪ್ಲ್ಯಾನನ್ನು ಕೇವಲ 8 ಗಂಟೆಯಲ್ಲೇ ಉಡೀಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ಗೆ ಆಪರೇಷನ್ ಸಿಂಧೂರದ ಸೂಕ್ಷ್ಮ ಮಾಹಿತಿ ಹಂಚಿಕೆ – ಪಂಜಾಬ್ ವ್ಯಕ್ತಿ ಅರೆಸ್ಟ್

    ಭವಿಷ್ಯದ ಯುದ್ಧಗಳು ವೃತ್ತಿಪರ ಶಕ್ತಿಗಳು ಹಿನ್ನಡೆ ಅಥವಾ ನಷ್ಟಗಳಿಂದ ಪ್ರಭಾವಿತವಾಗುವುದಿಲ್ಲ. ಯುದ್ಧದಲ್ಲಿ ಹಿನ್ನಡೆಗಳಿದ್ದರು ಸಹ ನೈತಿಕತೆಯು ಉನ್ನತ ಮಟ್ಟದಲ್ಲಿ ಉಳಿಯುವುದು ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ನಾಲ್ಕೂ ಅಲ್ಲ, ಐದೂ ಅಲ್ಲ; ಭಾರತ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯೇ?- ಆರ್ಥಿಕ ತಜ್ಞರು ಹೇಳೋದೇನು?

    ಇನ್ನೂ ಕದನ ವಿರಾಮದ ಬಗ್ಗೆ ರಾಹುಲ್ ಗಾಂಧಿ ಟೀಕೆ ಮುಂದುವರಿದಿದೆ. ಟ್ರಂಪ್ ಒಂದೇ ಒಂದು ಕಾಲ್‌ಗೆ ಪ್ರಧಾನಿ ಮೋದಿ ಶರಣಾಗಿದ್ದಾರೆ ಅಂತ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅಲ್ಲಿಂದ ಟ್ರಂಪ್ ಕಾಲ್ ಮಾಡಿ ನರೇಂದರ್… ಸರೆಂಡರ್ ಅಂದ್ರು. ಇವರು `ಯೆಸ್ ಸರ್’ ಅಂತ ಶರಣಾಗಿಬಿಟ್ಟಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್‌ ನವರ ಮೇಲೆ ಸ್ವಲ್ಪ ಒತ್ತಡ ಹಾಕಿದರೂ ಭಯದಿಂದ ಶರಣಾಗಿಬಿಡ್ತಾರೆ. ಇವರು ಹೇಡಿಗಳು. ಆದರೆ, 1971ರಲ್ಲಿ ಇಂದಿರಾ ಗಾಂಧಿ ಈ ರೀತಿ ಮಾಡಿಲ್ಲ ಅಂತ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಿಒಕೆ ಮೂಲದ ಉಗ್ರನ ಭೂಮಿ ವಶ

  • ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

    ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

    ನವದೆಹಲಿ: ಆಪರೇಷನ್ ಸಿಂಧೂರದಲ್ಲಿ (Operation Sindoor) ಪಾಕಿಸ್ತಾನದ (Pakistan) ಜೊತೆಗಿನ ಸಂಘರ್ಷದಲ್ಲಿ ಭಾರತದ ಎಷ್ಟು ಜೆಟ್‌ಗಳನ್ನು ಕಳೆದುಕೊಂಡಿದ್ದೇವೆ ಅಂತ ಕಾಂಗ್ರೆಸ್ ಲೆಕ್ಕ ಕೇಳುತ್ತಿರುವ ಹೊತ್ತಲ್ಲೇ ಇದೇ ಮೊದಲ ಬಾರಿಗೆ ಭದ್ರತಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ (Anil Chauhan) ಪ್ರತಿಕ್ರಿಯೆ ನೀಡಿದ್ದಾರೆ.

    ಭಾರತೀಯ ಜೆಟ್‌ಗಳು ಧ್ವಂಸಗೊಂಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. (ಬ್ಲೂಂಬರ್ಗ್) ಟಿವಿ ಸಂದರ್ಶನವೊಂದರಲ್ಲಿ ಮಾತಾಡಿರುವ ಅನಿಲ್ ಚೌಹಾಣ್, ಪಾಕಿಸ್ತಾನವು ‘6 ಭಾರತದ ಯುದ್ಧವಿಮಾನಗಳನ್ನು ಹೊಡೆದಿದ್ದೇವೆ’ ಅಂತ ಹೇಳಿಕೊಳ್ತಿರೋದು ಖಂಡಿತವಾಗಿಯೂ ಸರಿಯಲ್ಲ. ಆದರೆ, ಎಷ್ಟು ಜೆಟ್‌ಗಳು ಪತನಗೊಂಡಿವೆ ಅನ್ನೋದನ್ನು ಹೇಳಿಲ್ಲ. ಆದರೆ, ಎಷ್ಟು ಜೆಟ್‌ಗಳು ಪತನ ಆಗಿದೆ ಎನ್ನುವ ನಂಬರ್‌ಗಳು ಮುಖ್ಯವಲ್ಲ. ಅವು ಏಕೆ ಪತನಗೊಂಡವು? ನಾವೇನು ತಪ್ಪು ಮಾಡಿದ್ದೇವೆ ಅನ್ನೋದು ಮುಖ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಗುಂಡಿಗೆ ಫಿರಂಗಿ ಗುಂಡುಗಳಿಂದಲೇ ಉತ್ತರ – ಭಯೋತ್ಪಾದಕರಿಗೆ ಮೋದಿ ಮತ್ತೆ ವಾರ್ನಿಂಗ್‌

    ಯುದ್ಧತಂತ್ರದ ತಪ್ಪುಗಳನ್ನು ಅರ್ಥೈಸಿಕೊಂಡಿದ್ದೇವೆ. ಪತ್ತೆಹಚ್ಚಿ ಪರಿಹಾರವನ್ನೂ ಕಂಡುಕೊಂಡಿದ್ದೇವೆ. 2 ದಿನಗಳ ಬಳಿಕ ಮತ್ತೆ ನಮ್ಮ ಜೆಟ್‌ಗಳು ಲಾಂಗ್‌ರೇಂಜ್ ಟಾರ್ಗೆಟ್ ಮಾಡಿ ಹಾರಿವೆ ಎಂದಿದ್ದಾರೆ.

    ಇದೇ ವೇಳೆ, 4 ದಿನಗಳ ಸಂಘರ್ಷವು ಎಂದಿಗೂ ನ್ಯೂಕ್ಲಿಯರ್ ವಾರ್ ಹಂತಕ್ಕೆ ತಲುಪಿರಲಿಲ್ಲ ಅಂತ ಸಿಡಿಎಸ್ ಅನಿಲ್ ಚೌಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

  • ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ

    ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ

    ನವದೆಹಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ (General Bipin Rawat) ಹುತಾತ್ಮರಾದ 9 ತಿಂಗಳ ಬಳಿಕ ಕೇಂದ್ರ ಸರ್ಕಾರ (Central Government Of India) ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (Anil Chauhan) (ನಿವೃತ್ತ) ಅವರನ್ನ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (CDS)ರಾಗಿ ನೇಮಕ ಮಾಡಿದೆ.

    ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ 2021ರ ಮೇ ತಿಂಗಳಲ್ಲಿ ಪೂರ್ವ ಕಮಾಂಡ್ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಇದನ್ನೂ ಓದಿ: 500 ರೂ. ಕೊಟ್ರೆ ಒಂದು ರಾತ್ರಿ ಜೈಲಲ್ಲಿ ಇರಲು ಅವಕಾಶ

    ತಮಿಳುನಾಡಿನ (Tamilnadu) ಕುನೂರು ಬಳಿ ವಾಯುಸೇನೆಯ MI17V5 ಹೆಲಿಕಾಪ್ಟರ್ ಪತನವಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹುತಾತ್ಮರಾದರು. ಇದರೊಂದಿಗೆ ದುರಂತದಲ್ಲಿ 13 ಜನರೂ ಹುತಾತ್ಮರಾದರು. ಇದರಲ್ಲಿ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಕೊನೆಯುಸಿರೆಳೆದರು. ಸೇನಾ ಸಿಬ್ಬಂದಿಯ ಮೊದಲ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ದೇಶದ ರಕ್ಷಣೆಗಾಗಿ 4 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.

    ಅವರು ಮೃತಪಟ್ಟ 9 ತಿಂಗಳ ಬಳಿಕ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶೀಘ್ರವೇ ಸಿಡಿಎಸ್‌ ನೇಮಕ: ರಾಜನಾಥ್‌ ಸಿಂಗ್‌ ಮಾಹಿತಿ

    ಶೀಘ್ರವೇ ಸಿಡಿಎಸ್‌ ನೇಮಕ: ರಾಜನಾಥ್‌ ಸಿಂಗ್‌ ಮಾಹಿತಿ

    ನವದೆಹಲಿ: ಭಾರತದಲ್ಲಿ ಮುಂದಿನ ಸಿಡಿಎಸ್‌ ನೇಮಕದ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕೊನೆಗೂ ಮೌನ ಮುರಿದಿದ್ದಾರೆ. ಶೀಘ್ರವೇ ಸೇನಾ ಪಡೆಗಳ ಮುಖ್ಯಸ್ಥರನ್ನು (CDS) ನೇಮಕ ಮಾಡುವುದಾಗಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ನೂತನ ʼಅಗ್ನಿಪಥ್‌ʼ ನೇಮಕಾತಿ ಯೋಜನೆ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಸಿಡಿಎಸ್‌ ನೇಮಕ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುವಕರಿಗೆ ಸೇನೆಯಲ್ಲಿ ಹೊಸ ಅವಕಾಶ – ಅಗ್ನಿಪಥ್ ನೇಮಕಾತಿ ಯೋಜನೆ ಪ್ರಾರಂಭ

    2021ರ ಡಿಸೆಂಬರ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತದ ಮೊದಲ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹುತಾತ್ಮರಾಗಿದ್ದರು. ಆ ಬಳಿಕ ಸಿಡಿಎಸ್‌ ಹುದ್ದೆ ತೆರವಾಗಿದೆ.

    ಈಗ ಸರ್ಕಾರವು ಸಶಸ್ತ್ರ ಪಡೆಗಳ ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ಸೇವೆಯಲ್ಲಿರುವ ಅಥವಾ 62ಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಹಾಗೂ ವೈಸ್–ಅಡ್ಮಿರಲ್ ಸಿಡಿಎಸ್ ಹುದ್ದೆಗೆ ಅರ್ಹರಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ಇದ್ದೂ ಪ್ರವೇಶ ನಿರಾಕರಿಸಿದ ಏರ್‌ಇಂಡಿಯಾಕ್ಕೆ 10 ಲಕ್ಷ ದಂಡ

  • ಸಿಡಿಎಸ್ ಹುದ್ದೆಗೆ ಕಾರ್ಯನಿರತ, ನಿವೃತ್ತ ಎರಡೂ ಅಧಿಕಾರಿಗಳ ಪರಿಗಣನೆ

    ಸಿಡಿಎಸ್ ಹುದ್ದೆಗೆ ಕಾರ್ಯನಿರತ, ನಿವೃತ್ತ ಎರಡೂ ಅಧಿಕಾರಿಗಳ ಪರಿಗಣನೆ

    ನವದೆಹಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಹುದ್ದೆಗೆ ಸೇವೆ ಸಲ್ಲಿರುತ್ತಿರುವ ಹಾಗೂ ನಿವೃತ್ತ ಎರಡೂ ವರ್ಗದ ಅಧಿಕಾರಿಗಳನ್ನು ಪರಿಗಣಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

    ಭಾರತದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಮರಣದ 4 ತಿಂಗಳ ಬಳಿಕ ಸರ್ಕಾರ ಸೇವೆಯಲ್ಲಿರುವ ಹಾಗೂ ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಈ ಹುದ್ದೆಗೆ ಪರಿಗಣಿಸಬಹುದು ಎಂದಿದೆ. ಇದನ್ನೂ ಓದಿ: 5 ಲಕ್ಷ ಅಲ್ಲ, 40 ಲಕ್ಷ ಭಾರತೀಯರು ಕೋವಿಡ್‌ನಿಂದ ಸಾವು: ಕೇಂದ್ರಕ್ಕೆ ರಾಹುಲ್‌ ತರಾಟೆ

    ಈ ವಾರ ಮುಂದಿನ ಸೇನಾ ಮುಖ್ಯಸ್ಥರ ಕುರಿತು ಸರ್ಕಾರ ಘೋಷಣೆ ಮಾಡಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಹುದ್ದೆಗೆ ನೇಮಕಗೊಳ್ಳಲು ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಅಧಿಕಾರಿಗಳನ್ನು ಪರಿಗಣಿಸಬಹುದು. ನೇಮಕಗೊಳ್ಳುವ ಅಧಿಕಾರಿಗಳು ಲೆಫ್ಟಿನೆಂಟ್ ಜನರಲ್ ಅಥವಾ ಸೇವಾ ಮುಖ್ಯಸ್ಥರ ಸಮಾನ ಶ್ರೇಣಿಯವರು ಇರಬಹುದು ಎಂದು ಮೂಲಗಳು ಮಾಹಿತಿ ನೀಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮ ಜಯಂತಿ ವೇಳೆ ಹಿಂಸಾಚಾರ – ಯುಪಿಯಲ್ಲಿ ಕಟ್ಟೆಚ್ಚರ

    ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಕಚೇರಿ ಮಿಲಿಟರಿ ರಚನೆ ಸುಧಾರಣೆಯಲ್ಲಿ ಅತಿ ದೊಡ್ಡ ಪಾತ್ರ ವಹಿಸುತ್ತದೆ. ಇದು ಸರ್ಕಾರ ಹಾಗೂ ರಕ್ಷಣಾ ಪಡೆಗಳ ನಡುವೆ ಸಮನ್ವಯದಿಂದ ಕೆಲಸ ಮಾಡಲು ಅನುಕೂಲವಾಗಿಸುತ್ತದೆ.

  • ಬಿಪಿನ್ ಸ್ಥಾನ ತುಂಬುವವರೆಗೆ ನರಾವಣೆ ಚೀಫ್ ಆಫ್ ಸ್ಟಾಫ್ ಅಧ್ಯಕ್ಷ

    ನವದೆಹಲಿ: ಭಾರತದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ನಿಧನದ ನಂತರ ಹೊಸ ಸಿಡಿಎಸ್ ನೇಮಕಗೊಳ್ಳ ಬೇಕಿದೆ. ಈಗಿರುವ ಮೂರು ಸೇನಾ ಮುಖ್ಯಸ್ಥರಲ್ಲಿ ಜನರಲ್ ಎಂಎಂ ನರಾವಣೆ ಅವರು ಚೀಫ್ ಆಫ್ ಸ್ಟಾಫ್ ಕಮಿಟಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಅವರು ಹಿರಿಯ ಅಧಿಕಾರಿಯಾಗಿದ್ದು, ಸಿಡಿಎಸ್ ಕಚೇರಿ ಅಸ್ತಿತ್ವಕ್ಕೆ ಬರುವ ಮೊದಲು ಇದ್ದ ಸ್ಥಿತಿಯಂತೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸ ಸಿಡಿಎಸ್ ನೇಮಕಗೊಳ್ಳುವವರೆಗೆ ಅಥವಾ ಸಿಡಿಎಸ್ ಅನುಪಸ್ಥಿತಿಯಲ್ಲಿ ಅತ್ಯಂತ ಹಿರಿಯ ಮುಖ್ಯಸ್ಥರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಕಾರ್ಯ ವಿಧಾನದ ಹಂತವಾಗಿದೆ. ಇದನ್ನೂ ಓದಿ: ಸಿಎಂ ರ‍್ಯಾಲಿ ವೇಳೆ ನಿರುದ್ಯೋಗಿ ಶಿಕ್ಷಕರ ಮೇಲೆ ಪೊಲೀಸರ ದಬ್ಬಾಳಿಕೆ – ವೀಡಿಯೋ ವೈರಲ್

    ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಫ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ರಕ್ಷಣಾ ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಮತ್ತು ಇತರ 10 ಮಂದಿ ಸಾವನ್ನಪ್ಪಿದ್ದರು. ಇದರ ಹಿನ್ನೆಲೆಯಲ್ಲಿ ಬದಲಾವಣೆಯನ್ನು ತರಲಾಗಿದೆ. ಇದನ್ನೂ ಓದಿ: ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?

    ಈ ಹಿಂದೆಯೂ ಸಿಡಿಎಸ್ ನೇಮಕಕ್ಕೂ ಮುನ್ನ ಇದೇ ವ್ಯವಸ್ಥೆ ಅನುಸರಿಸಲಾಗುತ್ತಿತ್ತು.

  • ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್

    ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್

    ನವದೆಹಲಿ: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ಸ್ (ಸಿಡಿಎಸ್) ಬಿಪಿನ್ ರಾವತ್ ಅವರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಊಹಾಪೋಹಗಳನ್ನು ನಿಲ್ಲಿಸಿ. ಮೃತರ ಘನತೆಯನ್ನು ಕಾಪಾಡುವಂತೆ ಭಾರತೀಯ ವಾಯುಸೇನೆ ಮನವಿ ಮಾಡಿದೆ.

    ಟ್ವೀಟ್‍ನಲ್ಲಿ ಏನಿದೆ?: ಡಿಸೆಂಬರ್ 8ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದ ಕಾರಣದ ತನಿಖೆಗಾಗಿ ಭಾರತೀಯ ವಾಯುಪಡೆಯು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ರಚಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ದುರಂತಕ್ಕೆ ಕಾರಣವಾದ ಸತ್ಯವನ್ನೂ ಹೊರತರಲಾಗುತ್ತದೆ. ಮಡಿದವರ ಘನತೆಯನ್ನು ಕಾಪಾಡಲು, ಮಾಹಿತಿ ಇಲ್ಲದ ಊಹಾಪೋಹಗಳನ್ನು ತಡೆಯಬೇಕು ಎಂದು ವಾಯುಪಡೆಯ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿದೆ. ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ

    ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸಲಿದೆ. ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ ವೀಡಿಯೋ ಅಸಲಿಯತ್ತಿನ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

  • ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?

    ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?

    ನವದೆಹಲಿ: ರಾವತ್ ಆಕಸ್ಮಿಕ ಮರಣದ ಕಾರಣ ಮುಂದಿನ ಸಿಡಿಎಸ್ ಯಾರಾಗ್ತಾರೆ ಎಂಬ ಚರ್ಚೆ ನಡೆದಿದೆ. ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆ ಮುಂದಿನ ತ್ರಿದಳಾಧಿಪತಿ ಆಗುವ ಸಂಭವ ಇದೆ.

    ನಿಯಮದ ಪ್ರಕಾರ ಭೂಸೇನೆ, ವಾಯುಸೇನೆ, ನೌಕಾ ಸೇನೆಯ ಮುಖ್ಯಸ್ಥರ ಪೈಕಿ ಒಬ್ಬರನ್ನು ಸೀನಿಯಾರಿಟಿ ಪ್ರಕಾರ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಇತ್ತೀಚಿಗೆ ತ್ರಿದಳಗಳ ಉನ್ನತ ಹುದ್ದೆಗೇರಿದವರಲ್ಲಿ ಹಿರಿಯರಾದ ಜನರಲ್ ನರಾವಣೆಗೆ ಸಿಡಿಎಸ್ ಆಗುವ ಅವಕಾಶ ಹೆಚ್ಚಿದೆ. ಸೇನಾ ಮುಖ್ಯಸ್ಥರಾಗಿ 2019ರ ಡಿಸೆಂಬರ್ 31ರಂದು ಬಿಪಿನ್ ರಾವತ್‍ರಿಂದ ನರಾವಣೆ ಅಧಿಕಾರ ಸ್ವೀಕರಿಸಿದ್ದರು. ವಾಯುಸೇನೆಯ ಏರ್ ಚೀಫ್ ಮಾರ್ಷಲ್ ಆಗಿ ಸೆಪ್ಟೆಂಬರ್ 30ರಂದು ವಿವೇಕ್ ರಾಮ್ ಚೌಧರಿ. ನೌಕಾಪಡೆಯ ಅಡ್ಮಿರಲ್ ಆಗಿ ಹರಿಕುಮಾರ್ ಕೇವಲ 8 ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ

    ನರಾವಣೆ ಸಿಡಿಎಸ್ ಆಗಿ ಪದೋನ್ನತಿ ಹೊಂದಿದಲ್ಲಿ, ನಾರ್ತರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನೆರಲ್ ವೈಕೆ ಜೋಷಿ ಅಥವಾ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಚಂಡಿಪ್ರಸಾದ್ ಮೋಹಂತಿ ಸೇನಾ ಮುಖ್ಯಸ್ಥರಾಗುವ ಅವಕಾಶಗಳು ಹೆಚ್ಚಿವೆ. ಸದ್ಯ ವಾಯುಪಡೆ, ನೌಕಾಪಡೆ ಮುಖ್ಯಸ್ಥರಿಗಿಂತ ವೈಕೆ ಜೋಷಿ ಅವರೇ ಸೀನಿಯರ್ ಎಂಬುದು ವಿಶೇಷ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

    ಸಿಡಿಎಸ್ ವಿಶೇಷತೆ ಏನು?:
    ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡುತ್ತಿದ್ದರು. ಈ ಹುದ್ದೆಗೆ ಆಯ್ಕೆ ಆಗುವವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

  • ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಚೆನ್ನೈ: ತಮಿಳುನಾಡಿನಲ್ಲಿ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದು, ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತಿದೆ.

    ಸೇನಾ ವಿಮಾನದಲ್ಲಿ ರಾವತ್, ಪತ್ನಿ ಮೃತದೇಹ ದೆಹಲಿಗೆ ರವಾನೆಯಾಗಲಿದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ದೆಹಲಿಯ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಳಿಕ ಕಾಮ್‍ರಾಜ್ ಮಾರ್ಗದಿಂದ ಅಂತಿಮಯಾತ್ರೆ ನಡೆಯಲಿದ್ದು, ದೆಹಲಿ ಕಂಟೋನ್‍ಮೆಂಟ್‍ನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿರುವ ಪಾರ್ಥಿವ ಶರೀರರವಿದೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?

    ನಡೆದಿದ್ದೇನು..?
    ತಮಿಳುನಾಡಿನ ವೆಲ್ಲಿಂಗ್ಟನ್‍ನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಬುಧವಾರ ಬಿಪಿನ್ ರಾವತ್ ಉಪನ್ಯಾಸ ನೀಡಬೇಕಿತ್ತು. ಹೀಗಾಗಿ ದೆಹಲಿಯಿಂದ ಬೆಳಗ್ಗೆ 9ಕ್ಕೆ ಸೇನಾ ವಿಮಾನದಲ್ಲಿ ಸೂಳೂರಿನತ್ತ 9 ಮಂದಿ ಪ್ರಯಾಣ ಬೆಳೆಸಿದ್ದರು. ಬೆಳಗ್ಗೆ 11:35ಕ್ಕೆ ಸೂಳೂರಿಗೆ ಬಿಪಿನ್ ರಾವತ್ ಅವರಿದ್ದ ಸೇನಾ ವಿಮಾನ ಲ್ಯಾಂಡ್ ಆಗಿದೆ. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‍ನಲ್ಲಿ 14 ಮಂದಿ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12:22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು

    ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಹೆಲಿಕಾಪ್ಟರ್ ಪತನಗೊಂಡಿದೆ. ಈ ವೇಳೆ ಭಾರೀ ಬೆಂಕಿ, ದಟ್ಟ ಹೊಗೆ ಕಾಣಿಸಿದೆ. ಮರಗಳ ಮೇಲೆ ಕಾಪ್ಟರ್ ಪತನ ಆಗುವಾಗ ಬೆಂಕಿಯುಂಡೆಯಂತೆ ನಾಲ್ವರು ಹೊರಗೆ ಜಿಗಿದಿದ್ದಾರೆ. 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ

  • ಸಿಡಿಎಸ್ ರಾವತ್ ಸೇರಿ 13 ಮಂದಿ ಹುತಾತ್ಮ – ಬೆಳಗ್ಗೆಯಿಂದ ಏನೇನಾಯ್ತು?

    ಸಿಡಿಎಸ್ ರಾವತ್ ಸೇರಿ 13 ಮಂದಿ ಹುತಾತ್ಮ – ಬೆಳಗ್ಗೆಯಿಂದ ಏನೇನಾಯ್ತು?

    – ತಮಿಳುನಾಡಿನ ಊಟಿ ಬಳಿ ಘನಘೋರ ದುರಂತ
    – ಭಾರತೀಯ ಸೇನೆಯ ಬಲಿಷ್ಠ ನಾಯಕ ದುರ್ಮರಣ

    ಚೆನ್ನೈ/ನವದೆಹಲಿ: ತಮಿಳುನಾಡಿನಲ್ಲಿ ಘನಘೋರ ಅನಾಹುತ ಸಂಭವಿಸಿದ್ದು ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರು ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದಾರೆ.

    ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ನೀಲಗಿರಿ ಅರಣ್ಯ ವ್ಯಾಪ್ತಿಯ ಊಟಿ ಬಳಿ ದೊಡ್ಡ ಸ್ಫೋಟದೊಂದಿಗೆ ಪತನವಾಗಿದೆ.

    ಈ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪಯಣಿಸುತ್ತಿದ್ದರು. ದುರಂತದಲ್ಲಿ ಬಿಪಿನ್ ರಾವತ್, ಮತ್ತವರ ಪತ್ನಿ ಸೇರಿ 13 ಮಂದಿ ಬಲಿ ಆಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‍ಗೆ ವೆಲ್ಲಿಂಗ್ಟನ್‍ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೇ.95ಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ಬಳಲುತ್ತಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ

    ಘಟನಾ ಸ್ಥಳದ ಚಿತ್ರಣ ಭೀಕರವಾಗಿತ್ತು. ಗಂಟೆಗಳ ಕಾಲ ಬೆಂಕಿ ಧಗಧಗಿಸುತ್ತಿತ್ತು. ಮೃತದೇಹಗಳು ಮತ್ತು ಹೆಲಿಕಾಪ್ಟರ್ ಬಿಡಿಭಾಗಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಕೆಲ ಹೊತ್ತು ಕಾಪ್ಟರ್ ಸನಿಹಕ್ಕೆ ಹೋಗದಷ್ಟು ಬೆಂಕಿ ಜ್ವಾಲೆ ಇತ್ತು. ಬೆಂಕಿಯ ತೀವ್ರತೆಗೆ ಇಡೀ ಪ್ರದೇಶ ಸುಟ್ಟು ಕರಕಲಾಗಿದೆ. ಕೂಡಲೇ ಪೊಲೀಸರು, ಅಗ್ನಿಶಾಮಕ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ದುರಂತ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯೊಬ್ಬನನ್ನು ಸಿಆರ್‌ಪಿಎಫ್‌ನ ಕೋಬ್ರಾ ಪಡೆ ವಶಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

    ಬೆಳಗ್ಗೆಯಿಂದ ಏನೇನಾಯ್ತು?
    ತಮಿಳುನಾಡಿನ ವೆಲ್ಲಿಂಗ್ಟನ್‍ನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಇಂದು ಬಿಪಿನ್‌ ರಾವತ್‌ ಉಪನ್ಯಾಸ ನೀಡಬೇಕಿತ್ತು. ಹೀಗಾಗಿ ದೆಹಲಿಯಿಂದ ಬೆಳಗ್ಗೆ 9ಕ್ಕೆ ಸೇನಾ ವಿಮಾನದಲ್ಲಿ ಸೂಳೂರಿನತ್ತ 9 ಮಂದಿ ಪ್ರಯಾಣ ಬೆಳೆಸಿದ್ದರು. ಬೆಳಗ್ಗೆ 11:35ಕ್ಕೆ ಸೂಳೂರಿಗೆ ಬಿಪಿನ್ ರಾವತ್ ಅವರಿದ್ದ ಸೇನಾ ವಿಮಾನ ಲ್ಯಾಂಡ್ ಆಗಿದೆ. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‌ನಲ್ಲಿ 14 ಮಂದಿ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12:22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು

    ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಹೆಲಿಕಾಪ್ಟರ್‌ ಪತನಗೊಂಡಿದೆ. ಈ ವೇಳೆ ಭಾರೀ ಬೆಂಕಿ, ದಟ್ಟ ಹೊಗೆ ಕಾಣಿಸಿದೆ. ಮರಗಳ ಮೇಲೆ ಕಾಪ್ಟರ್ ಪತನ ಆಗುವಾಗ ಬೆಂಕಿಯುಂಡೆಯಂತೆ ನಾಲ್ವರು ಹೊರಗೆ ಜಿಗಿದಿದ್ದಾರೆ. 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಊಟಿ ಬಳಿ ಸೇನಾ ಹೆಲಿಕಾಪ್ಟರ್‌ ಪತನ- Mi-17 V5 ಹೆಲಿಕಾಪ್ಟರ್ ವಿಶೇಷತೆ ಏನು?