Tag: ಸಿಡಬ್ಲ್ಯೂಆರ್‌ಸಿ

  • ಕಾವೇರಿ ನೀರು ಬಿಡುಗಡೆ ವಿಚಾರ; ರಾಜ್ಯ ಸರ್ಕಾರ ನಿರ್ಧಾರದ ಬೆನ್ನಲ್ಲೇ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ

    ಕಾವೇರಿ ನೀರು ಬಿಡುಗಡೆ ವಿಚಾರ; ರಾಜ್ಯ ಸರ್ಕಾರ ನಿರ್ಧಾರದ ಬೆನ್ನಲ್ಲೇ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ

    ನವದೆಹಲಿ/ಚೆನ್ನೈ: ಕಾವೇರಿ ನದಿಯಿಂದ (Cauvery River) ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರಾಕರಿಸಿದ್ದು, ಪ್ರತಿನಿತ್ಯ 8 ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಂಡ ಮರುದಿನವೇ ತಮಿಳುನಾಡು ಸರ್ಕಾರ (Tamil Nadu Government) ಸರ್ವಪಕ್ಷಗಳ ಸಭೆ ಕರೆದಿದೆ. ನಾಳೆ (ಮಂಗಳವಾರ) ಚೆನ್ನೈನಲ್ಲಿ ಜಲಸಂಪನ್ಮೂಲ ಸಚಿವ ದೊರೈಮುರುಗನ್ (Durai Murugan) ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

    ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದ ಕರ್ನಾಟಕ ಸರ್ಕಾರ ಕಾವೇರಿ ನೀರು  ನಿಯಂತ್ರಣಾ ಸಮಿತಿ (CWRC) ಶಿಫಾರಸ್ಸು ಅನ್ವಯ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡದಿರಲು ತಿರ್ಮಾನಿಸಿತ್ತು. ಜುಲೈ 31ರ ವರೆಗೆ ನಿತ್ಯ 8 ಕ್ಯುಸೆಕ್‌ ನೀರು ಹರಿಸಲು, ಮಳೆ ಕಡಿಮೆಯಾದ್ರೆ, ಅದಕ್ಕಿಂತಲೂ ಕಡಿಮೆ ನೀರು ಹರಿಸಲು ತೀರ್ಮಾನಿಸಿತ್ತು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

    ಅಲ್ಲದೇ ಮಳೆಯ ಪ್ರಮಾಣ ನಿರೀಕ್ಷೆಗಿಂತ ಸರಿ ಸುಮಾರು 28% ಕೊರತೆ ಇದ್ದು ಈವರೆಗಿನ ಮಳೆಗೆ ಜಲಾಶಯಗಳು ಕೂಡಾ ಭರ್ತಿಯಾಗಿಲ್ಲ. ಹವಮಾನ ಇಲಾಖೆ ಮಳೆಯ ಭರವಸೆ ನೀಡಿದ್ದರೂ ಗ್ಯಾರಂಟಿ ಇಲ್ಲ ಹೀಗಾಗೀ ಜುಲೈ ಅಂತ್ಯದವರೆಗೂ 1 ಟಿಎಂಸಿ ನೀರು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸಿನ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಲು ನಿರ್ಧರಿಸಿದ್ದು ಅಲ್ಲಿಯವರೆಗೂ ನೀರು ಬಿಡುಗಡೆ ಮಾಡದಿರಲು ಸರ್ವ ಪಕ್ಷಯಲ್ಲಿ ತಿರ್ಮಾನಿಸಿತ್ತು. ರಾಜ್ಯ ಸರ್ಕಾರದ ಈ ತಿರ್ಮಾನದ ಬೆನ್ನಲ್ಲೇ ಈಗ ತಮಿಳುನಾಡಿನ ಪಕ್ಷಗಳ ಸಭೆಯನ್ನು ಸಚಿವ ದೊರೈಮುರುಗನ್ ಕರೆದಿದ್ದು, ಒತ್ತಡ ಹೆಚ್ಚಿಸುವ ಪ್ರಯತ್ನ ಆರಂಭಿಸಿದೆ. ಇದನ್ನೂ ಓದಿ: Karnataka Assembly Session| ಟಾರ್ಗೆಟ್‌ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು 

  • ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    – ತಮಿಳಿನಾಡಿನವರು ಸಮರ್ಥವಾಗಿ ವಾದಿಸಿದ್ದಾರೆ, ನಮ್ಮವರು ವಿಫಲರಾಗಿದ್ದಾರೆ: ಶಾಸಕ ಜಿಟಿಡಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashoka) ಸೇರಿದಂತೆ ಇತರ ನಾಯಕರು ಪ್ರತಿಕ್ರಿಯಿಸಿದ್ದಾರೆ.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್‌. ಅಶೋಕ್‌, ಅಗತ್ಯವಿದ್ದರೆ ಕಾವೇರಿ ನೀರಿನ (Cauvery Water) ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ ಅಂತ ಸಲಹೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

    ಸುಪ್ರೀಂ ವರೆಗೂ ಹೋಗೋಣ:
    ಕಳೆದ ವರ್ಷ ಬರಗಾಲ ಇತ್ತು, ಈಗೇನೋ ಅಲ್ಪಸ್ವಲ್ಪ ಮಳೆ ಬಂದು ನೀರು ಬಂದಿದೆ. ಇಂಥ ಸಮಯದಲ್ಲಿ ಕಾವೇರಿ ನಿರ್ವಹಣಾ ಸಮಿತಿ ಆದೇಶ ಆಘಾತ ತಂದಿದೆ. ಇಂತಹ ಸಮಯದಲ್ಲಿ ನೀರು ಬಿಡುವುದು ಸರಿಯಲ್ಲ ಅಂತ ಹೇಳಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬಳಿ ಮೇಲ್ಮನವಿ ಹಾಕಿ ಅಂದಿದ್ದೇವೆ, ಬೇಕಾದ್ರೆ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ವರೆಗೂ ಹೋಗೋಣ ಅಂತ ಸಲಹೆ ಕೊಟ್ಟಿದ್ದೇವೆ. ಆದರೆ ಸಿಎಂ, ಎಜಿ ಅವರೆಲ್ಲ ಏಕಾಏಕಿ ಆಗಲ್ಲ ಅಂದರೆ ಹಿನ್ನಡೆ ಆಗಲಿದೆ, ಅಲ್ಪಸ್ವಲ್ಪ ಬಿಡೋಣ ಅಂದಿದ್ದಾರೆ. ಜೊತೆಗೆ ನೀರಿನ ಪ್ರಮಾಣ ಕಡಿಮೆ ಮಾಡಲು ಮನವಿ ಮಾಡುವಂತೆ ಪ್ರಧಿಕಾರದ ಬಳಿ ಮನವಿ ಮಾಡುವುದಾಗಿ ಸಿಎಂ ಹೇಳಿದ್ದಾರೆಂದು ತಿಳಿಸಿದ್ದಾರೆ.

    ಮೊದಲು ಕುಚಿಕುಗಳ ಮನವೊಲಿಸಲಿ:
    ಇನ್ನು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಮಾತನಾಡಿ, ತಮಿಳುನಾಡಿನಲ್ಲಿ ಇಂಡಿ ಒಕ್ಕೂಟದ ಸರ್ಕಾರ ಇದೆ. ಅವರನ್ನು ಕಾಂಗ್ರೆಸ್ ಮನವೊಲಿಸಲಿ. ಆಗ ಕೇಂದ್ರವೂ ಬೇಡ, ಸುಪ್ರೀಂ ಕೋರ್ಟು ಬೇಡ. ಜಗಳ ಇಲ್ಲದೆಯೇ ಸಮಸ್ಯೆ ಬಗೆಹರಿಸಬಹುದು. ತಮಿಳುನಾಡು ಸರ್ಕಾರ ಇವರ ಕುಚಿಕು, ಹಾಗಾಗಿ ಮೊದಲು ಅವರ ಮನವೊಲಿಸಲಿ. ಕೇಂದ್ರಕ್ಕೆ ನಿಯೋಗ ಅಗತ್ಯವೇ ಇರಲ್ಲ ಎಂದು ಕುಟುಕಿದ್ದಾರೆ.

    ಸರ್ವ ಪಕ್ಷ ಸಭೆಗೆ ಇವರು ಆಹ್ವಾನ ಕೊಟ್ಟಿದ್ದು ಒಂದು ದಿನದ ಹಿಂದೆ. ಆದರೂ ನಾವು ಬಂದಿದ್ದೇವೆ, ಅಭಿಪ್ರಾಯ ಹೇಳಿದ್ದೇವೆ. ಮುಂಚಿತವಾಗಿ ಆಹ್ವಾನ ಬಂದಿದ್ದಿದ್ರೆ ಎಲ್ಲರೂ ಸಮಯ ಸರಿ ಮಾಡಿಕೊಂಡು ಬರುತ್ತಿದ್ದರು. ಇನ್ಮುಂದೆಯಾದರೂ ಇಂತಹ ಸಭೆಗಳಿಗೆ ಮುಂಚಿತವಾಗಿ ಆಹ್ವಾನ ಕೊಡಲಿ ಎಂದು ಸಿ.ಟಿ ರವಿ ಸಲಹೆ ನೀಡಿದ್ದಾರೆ.

    ತಮಿಳಿನಾಡಿನವರು ಸಮರ್ಥವಾಗಿ ವಾದಿಸಿದ್ದಾರೆ:
    ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ಕಾವೇರಿ ಪ್ರಾಧಿಕಾರದಲ್ಲಿ ಸಮರ್ಥವಾಗಿ ವಾದ ಮಾಡುವಲ್ಲಿ ನಮ್ಮವರು ವಿಫಲರಾಗಿದ್ದಾರೆ. ತಮಿಳಿನಾಡಿನವರು ಸಮರ್ಥವಾಗಿ ವಾದ ಮಾಡಿದ್ದರಿಂದ ಅವರ ಪರವಾಗಿ ತೀರ್ಪು ಬರ್ತಿದೆ. ಕಬಿನಿಯಲ್ಲಿ ನೀರು ತುಂಬಿದೆ ಡ್ಯಾಮ್ ಸುರಕ್ಷತೆ ದೃಷ್ಟಿಯಿಂದ ನೀರು ಬಿಟ್ಟಿದ್ದೇವೆ. ಭದ್ರತಾ ದೃಷ್ಟಿಯಿಂದ ನೀರನ್ನ ಬಿಡ್ತೇವೆ ಎಂದಿದ್ದಾರೆ. ಒಳಹರಿವು ನಿಂತರೆ ನೀರು ಬಿಡೋದನ್ನ ನಿಲ್ಲಿಸ್ತೇವೆ ಎಂದಿದ್ದಾರೆ, ನಾವು ಅದೇ ಹೇಳಿದ್ದೇವೆ. ರೈತರಿಗೆ ನೀರು ಸರಿಯಾಗಿ ಕೊಡಬೇಕು ಇಲ್ಲದೇ ಹೋದರೆ ಸಮಸ್ಯೆಯಾಗುತ್ತೆ. ಕಳೆದ ವರ್ಷ ಬರಗಾಲದಲ್ಲಿ ಸಾಕಷ್ಟು ಸಮಸ್ಯೆಯನ್ನ ರೈತರು ಅನುಭವಿಸಿದ್ದಾರೆ. ನೀರಿಲ್ಲದಿದ್ದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಕೇಳಬೇಕು. ಸಮರ್ಥವಾಗಿ ಕಾವೇರಿ ಪ್ರಾಧಿಕಾರದಲ್ಲಿ ವಾದವನ್ನ ಮಂಡಿಸಬೇಕು. ಅದಕ್ಕಾಗಿ ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದ್ದೇವೆ ಎಂದು ವಿವರಿಸಿದ್ದಾರೆ.

  • ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

    ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

    ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಶಿಫಾರಸು ಹಿನ್ನೆಲೆಯಲ್ಲಿ ಭಾನುವಾರ ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು. ಸಮಗ್ರ ಚರ್ಚೆಯ ಬಳಿಕ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

    ನಿರ್ಣಯ – 1

    ಲೀಗಲ್ ಟೀಂ ಮೋಹನ್ ಕಾತರಕಿ ಅವರ ಸಲಹೆ ಮೇರೆಗೆ ತಮಿಳುನಾಡಿಗೆ 1 ಟಿಎಂಸಿ ಬದಲಾಗಿ 8 ಸಾವಿರ ಕ್ಯುಸೆಕ್ ನೀರು ಬಿಡಲು ತೀರ್ಮಾನ.

    ನಿರ್ಣಯ – 2

    1 ಟಿಎಂಸಿ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಕ್ಕೆ ವಿರುದ್ಧವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯೂಎಂಎ) ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನ.

    ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, 8 ಸಾವಿರ ಕ್ಯೂಸೆಕ್‌ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೇ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕಾವೇರಿ ವಿಚಾರವಾಗಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂದಿನ ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಅಶೋಕ್, ಸದಾನಂದಗೌಡ, ಜಿ.ಟಿ ದೇವೇಗೌಡ, ಸಿಟಿ ರವಿ, ಎ.ಮಂಜು, ರೈತ ಸಂಘದವರು, ಯದವೀರ್, ಕಾವೇರಿ ಭಾಗದ ಶಾಕಸರ ಇದ್ದರು. ಸಭೆಯಲ್ಲಿ ವಸ್ತು ಸ್ಥಿತಿಯನ್ನ ನಾನು, ಡಿಕೆ ಶಿವಕುಮಾರ್ ಕೊಟ್ಟಿದ್ದೇವೆ. ಲೀಗಲ್ ಟೀಂ ಕಾತರಕಿ, ಎ.ಜಿ ಶಶಿಕಿರಣ್ ಶೆಟ್ಟಿ ಅವರು ಸಭೆಯಲ್ಲಿ ಇದ್ದರು.

    ಸಂಗ್ರಹವಿರುವ ನೀರು 2 ತಿಂಗಳಿಗೆ ಆಗುತ್ತೆ:
    ಜುಲೈ 11 ರಂದು ನಡೆದ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆಯಲ್ಲಿ 31ರ ವರೆಗೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಶಿಫಾರಸು ಮಾಡಲಾಗಿತ್ತು. ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. ಜುಲೈನಲ್ಲಿ 31.24 ಟಿಎಂಸಿ ನೀರು ಬಿಡಬೇಕಿತ್ತು. ಆದ್ರೆ ಸಂಗ್ರಹವಿರುವ 40.43 ಟಿಎಂಸಿ ನೀರು 2 ತಿಂಗಳಿಗೆ ಆಗುತ್ತೆ. ಈಗ ನಾವು 5 ಟಿಎಂಸಿಗೂ ಹೆಚ್ಚು ನೀರು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.

    1 ಟಿಎಂಸಿ ನೀರು ಬಿಡೋಕೆ ಆಗಲ್ಲ: 
    ಸಭೆಯಲ್ಲಿ ಕಾತರಕಿ ಅವರು ನೀರಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ಸುಮಾರು 30% ಒಳಹರಿವು ಕಡಿಮೆಯಾಗಿದೆ. ಕಬಿನಿಯಲ್ಲಿ 96%, ಹಾರಂಗಿಯಲ್ಲಿ 76%, ಹೇಮಾವತಿಯಲ್ಲಿ 56%, ಕೆಆರ್‌ಎಸ್‌ನಲ್ಲಿ 54% ನೀರು ಸಂಗ್ರಹವಾಗಿದೆ. ಒಟ್ಟಾರೆಯಾಗಿ 63% ಮಾತ್ರ ನೀರು ಸಂಗ್ರಹ ಆಗಿದೆ. ಜುಲೈ 12ರಂದು 5 ಸಾವಿರ ಕ್ಯುಸೆಕ್‌ ಒಳಹರಿವು ಆಗಿತ್ತು, ಅಷ್ಟೇ ಹೊರಹರಿವೂ ಆಗಿದೆ. ಜು.13 ಮತ್ತು 14ರಂದು ಒಳಹರಿವು ಹೆಚ್ಚಾಗಿದ್ದರೂ, ಒಂದು ಟಿಎಂಸಿ ನೀರು ಬಿಡೋಕೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಮಳೆ ಕಡಿಮೆಯಾದ್ರೆ ಬಿಡೋ ನೀರೂ ಕಡಿಮೆ ಮಾಡ್ತೀವಿ: 
    ಸದ್ಯ 8 ಸಾವಿರ ಕ್ಯುಸೆಕ್‌ ನೀರು ಬಿಡುವ ನಿರ್ಧಾರ ಆಗಿದೆ. 1 ಟಿಎಂಸಿ ನೀರಿನ ಬದಲಾಗಿ 8 ಸಾವಿರ ಕ್ಯುಸೆಕ್ ಬಿಡಲು ಕಾತರಕಿ ಸಲಹೆ ಕೊಟ್ಟರು. ಮಳೆ ಬಾರದೇ ಹೋದರೆ ಕ್ಯುಸೆಕ್ ನೀರಿನಲ್ಲೂ ಕಡಿಮೆ ಮಾಡೋಣ, ಜೊತೆಗೆ ಅಪೀಲು ಹಾಕೋಣ ಅಂತಾ ಸಲಹೆ ಕೊಟ್ಟರು. ಅದರಂತೆ ತೀರ್ಮಾನ ಆಗಿದೆ. ಒಂದು ವೇಳೆ ಮಳೆ ಜಾಸ್ತಿ ಆದಲ್ಲಿ ಎಷ್ಟು ಬಿಡಬೇಕೋ ಅಷ್ಟು ನೀರು ಬಿಡ್ತೀವಿ. ಮಳೆ ಕಡಿಮೆ ಆದರೆ ಈಗ ಬಿಡುವ 8 ಸಾವಿರ ಕ್ಯುಸೆಕ್ ನೀರಿನಲ್ಲೂ ಕಡಿಮೆ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.

  • ತಮಿಳುನಾಡಿಗೆ ಕಾವೇರಿ – CWRC ಶಿಫಾರಸು ವಿರೋಧಿಸಿ ಮೇಲ್ಮನವಿ ಸಲ್ಲಿಕೆಗೆ ತೀರ್ಮಾನ!

    ತಮಿಳುನಾಡಿಗೆ ಕಾವೇರಿ – CWRC ಶಿಫಾರಸು ವಿರೋಧಿಸಿ ಮೇಲ್ಮನವಿ ಸಲ್ಲಿಕೆಗೆ ತೀರ್ಮಾನ!

    – ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ

    ಬೆಂಗಳೂರು: ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸ್ಸನ್ನು ಸರ್ವಪಕ್ಷ ಸಭೆಯಲ್ಲಿ ತಿರಸ್ಕರಿಸಲಾಯಿತು. ಶಿಫಾರಸು ಕುರಿತು ಮರುಪರಿಶೀಲನೆ ನಡೆಸುವಂತೆ ಮೇಲ್ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಇತ್ತೀಚೆಗಷ್ಟೇ ಕಾವೇರಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿತ್ತು. ಈ ಸಂಬಂಧ ತೀರ್ಮಾನ ಕೈಗೊಳ್ಳಲು ಭಾನುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ (ALL Party Meeting) ಕರೆಯಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿ ಆದೇಶಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿದರು.

    ಸಭೆ ಆರಂಭಗೊಂಡ ನಂತರ ಮೊದಲಿಗೆ ಕಾವೇರಿ ತಾಂತ್ರಿಕ ಸಮಿತಿ, ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ (Reservoirs) ನೀರಿನ ಸಂಗ್ರಹ, ಒಳ ಹರಿವು, ಮಳೆಯ ಪ್ರಮಾಣದ ಕುರಿತ ವರದಿ ನೀಡಿತು. ಸಭೆಯಲ್ಲಿ 4 ಜಲಾಶಯದ ನೀರಿನ ಸಂಗ್ರಹದ ಮಾಹಿತಿ ನೀಡಿದ ಅಧಿಕಾರಿಗಳು, ಹಾರಂಗಿಯಲ್ಲಿ 76%, ಹೇಮಾವತಿಯಲ್ಲಿ 56%, ಕೆಆರ್‌ಎಸ್‌ಯಲ್ಲಿ 54% ಹಾಗೂ ಕಬಿನಿ-96% ನೀರು ಇದೆ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದಿತು. ವರದಿ ಆಧರಿಸಿ ಸರ್ವಪಕ್ಷಗಳೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಿಂದ ಅಷ್ಟು ಪ್ರಮಾಣದ ನೀರನ್ನು ಬಿಡಲು ಅಸಾಧ್ಯ ಎಂದು ಕಾಂಗ್ರೆಸ್‌ ನಾಯಕರು ಪ್ರಸ್ತಾಪಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷಗಳು ಕಾಂಗ್ರೆಸ್‌ ಸರ್ಕಾರದ (Congress Government) ಧೋರಣೆಯನ್ನು ಖಂಡಿಸಿದವು, ಮುಂಚೆಯಿಂದಲೂ ಕೇಳಿದಷ್ಟು ನೀರು ಬಿಟ್ಟು ಅಭ್ಯಾಸ ಮಾಡಿಬಿಟ್ಟಿದ್ದೀರಿ. ಪ್ರತೀ ಸಲವೂ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಕಾವೇರಿ ನೀರು ನಿಯಂತ್ರಣಾ ಮಡಳಿಗಳ ಆದೇಶ ಜಾರಿ ಮಾಡಿದ್ರಿ. ಸರ್ಕಾರದ ಈ ನಡೆಯಿಂದ ನಮ್ಮ ನೀರು ತಮಿಳುನಾಡಿಗೆ ಹರಿದುಹೋಯ್ತು. ನಮ್ಮ ರೈತರಿಗೆ ಸಮಸ್ಯೆ ಆದರೂ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ದನಿ, ರೈತರ ದನಿ ನೀವು ಕೇಳಿಸಿಕೊಳ್ಳಲೇ ಇಲ್ಲ ಎಂದು ವಿಪಕ್ಷ ನಾಯರು ಆರೋಪಿಸಿದರು. ಬಳಿಕ ಸರ್ವಪಕ್ಷಗಳು ಸಿಡಬ್ಲ್ಯೂಆರ್‌ಸಿ ಶಿಫಾರಸ್ಸನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದವು.

    ಪ್ರಮುಖ ನಾಯಕರು ಭಾಗಿ:
    ಸರ್ವಪಕ್ಷ ಸಭೆಯಲ್ಲಿ ನಾಯಕ ಆರ್. ಅಶೋಕ್, ದೆಹಲಿ ಪ್ರತಿನಿಧಿ ಜಯಚಂದ್ರ, ಸಚಿವ ಚೆಲುವರಾಯಸ್ವಾಮಿ, ಜವರಾಯೇಗೌಡ, ಸದಾನಂದಗೌಡ, ಕಾಂಗ್ರೆಸ್‌ ನಾಯಕರಾದ ಶಿವಲಿಂಗೇಗೌಡ, ದಿನೇಶ್ ಗುಂಡೂರಾವ್, ಸುನೀಲ್ ಬೋಸ್, ಯತೀಂದ್ರ ಸಿದ್ದರಾಮಯ್ಯ, ಪರಮೇಶ್ವರ್, ಯು.ಬಿ ವೆಂಕಟೇಶ್, ಹೆಚ್‌.ಸಿ ಮಹದೇವಪ್ಪ, ಕೆ.ಜೆ ಜಾರ್ಜ್, ಪೊನ್ನಣ್ಣ, ಕೃಷ್ಣಭೈರೇಗೌಡ, ಮೈಸೂರಿನ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಟಿ ರವಿ, ಮಂಜುಳಾ ಲಿಂಬಾವಳಿ, ಶ್ರೀವತ್ಸವ, ಜಿ.ಟಿ ದೇವೇಗೌಡ, ಸುರೇಶ್ ಬಾಬು, ಭೋಜೇಗೌಡ, ಶರವಣ, ಮಂಜೇಗೌಡ ಪಾಲ್ಗೊಂಡಿದ್ದರು. ಇದರೊಂದಿಗೆ ಕಾವೇರಿ ಭಾಗದ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಅಡ್ವೋಕೇಟ್ ಜನರಲ್, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಎಸ್ ಸೇರಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಭೆಗೆ ಕೇಂದ್ರ ಸಚಿವರ ಗೈರು:
    ಮಹ್ವದ ಸಭೆಗೆ ಕೇಂದ್ರ ಸಚಿವರಾದ ಹೆಚ್‌.ಡಿ ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಸಂಸದರಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್‌ ಮಂಜುನಾಥ್, ಪಿ.ಸಿ ಮೋಹನ್ ಗೈರಾಗಿದ್ದರು.

  • ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್‌ – ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ

    ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್‌ – ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ

    ನವದೆಹಲಿ: ತಮಿಳುನಾಡಿಗೆ (Tamil Nadu) ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ (Karnataka) ಕಾವೇರಿ ನೀರು ನಿಯಂತ್ರಣಾ ಸಮಿತಿ ಸೂಚನೆ ನೀಡಿದೆ.

    ಗುರುವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಶಿಫಾರಸು ಮಾಡಿದೆ. ಜುಲೈ 12 ರಿಂದ 31ರ ವರೆಗೆ ಪ್ರತಿನಿತ್ಯ 1 ಟಿಎಂಸಿ ಹರಿಸವಂತೆ ಶಿಫಾರಸು ಮಾಡಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಅಕ್ರಮ; ಸಿಬಿಐನಿಂದ ತನಿಖೆ ತೀವ್ರಗೊಳಿಸಿ – ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಪತ್ರ

    ಕರ್ನಾಟಕದ ಡ್ಯಾಂಗಳಲ್ಲಿ ಒಳಹರಿವು 41 ಟಿಎಂಸಿ ಇದೆ. ಜೂ.1 ರಿಂದ ಇಲ್ಲಿಯವರಗೆ 41 ಟಿಎಂಸಿ ನೀರು ಸೇರಿದೆ. ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, 28% ಮಳೆ ಕೊರತೆಯಾಗಿದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಒಟ್ಟು 58 ಟಿಎಂಸಿ ನೀರಿದೆ. ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಸಂಗ್ರಹವಿದೆ. ಸಧ್ಯಕ್ಕೆ ನೀರು ಬಿಡುವ ಬಗ್ಗೆ ಯಾವುದೇ ಶಿಫಾರಸು ಮಾಡಬೇಡಿ. ಜು.25 ರ ವರೆಗೆ ಮಳೆಯ ಪ್ರಮಾಣ ನೋಡಿಕೊಂಡು ಶಿಫಾರಸು ಮಾಡಿ. ಈಗಲೇ ನೀರು ಬಿಡುವಂತೆ ಶಿಫಾರಸು ಮಾಡಬೇಡಿ ಎಂದು CWRC ಸಭೆಯಲ್ಲಿ ಕರ್ನಾಟಕ ಮನವಿ ಮಾಡಿತು.

    ಕಳೆದ ಜಲವರ್ಷದಲ್ಲಿ ಕರ್ನಾಟಕ ನೀರು ಸರಿಯಾಗಿ ಹರಿಸಿಲ್ಲ. ಪ್ರಸಕ್ತ ಜಲವರ್ಷದಲ್ಲಿ ಮನ್ಸೂನ್ ಸಾಮಾನ್ಯವಾಗಿದೆ. ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ನೀರು ಬಿಡುವಂತೆ ಶಿಫಾರಸು ಮಾಡಬೇಕು ಎಂದು ತಮಿಳುನಾಡು ಮನವಿ ಮಾಡಿತು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಸಚಿವೆ ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ತರಾಟೆ

    ಎರಡು ರಾಜ್ಯಗಳ ವಾದ ಆಲಿಸಿದ CWRC, ನೀರು ಹರಿಸುವಂತೆ ಶಿಫಾರಸು ಮಾಡಿದೆ. ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ಬಿಳಿಗುಂಡ್ಳುವಿನಲ್ಲಿ ಪ್ರತಿನಿತ್ಯ 1 ಟಿಎಂಸಿ ನೀರಿನ ಹರಿವು ದಾಖಲಿಸುವಂತೆ ಸೂಚಿಸಿದೆ.

  • ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು – ತಮಿಳುನಾಡು ಕ್ಯಾತೆ

    ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು – ತಮಿಳುನಾಡು ಕ್ಯಾತೆ

    – ತಮಿಳುನಾಡು ಆಗ್ರಹಕ್ಕೆ ರಾಜ್ಯದ ವಿರೋಧ

    ನವದೆಹಲಿ: ಭೀಕರ ಬರಕ್ಕೆ ತತ್ತರಿಸಿರುವ ಕರ್ನಾಟಕ (Karnataka) ಸುಡುವ ಬೇಸಿಗೆಗೆ ಬೆಂದು ಕುಡಿಯುವ ನೀರಿಗೆ ತಾತ್ವರ ಎದುರಿಸುತ್ತಿದೆ. ಈ ನಡುವೆ ಕಾವೇರಿ ನೀರು (Cauvery Water) ಹಂಚಿಕೆ ವಿಚಾರದಲ್ಲಿ ತಮಿಳುನಾಡು (Tamil Nadu) ಮತ್ತೆ ಕ್ಯಾತೆ ತೆಗೆದಿದ್ದು, ಮೇ ತಿಂಗಳ ಪರಿಸರ ಹಂಚಿಕೆಯ ಪಾಲು 2.5 ಟಿಎಂಸಿಯ ಜೊತೆಗೆ ಬಾಕಿ ಉಳಿಸಿಕೊಂಡ‌ ನೀರಿನ ಪಾಲಿನ ಪೈಕಿ 25 ಟಿಎಂಸಿ ನೀರು ಹರಿಸಲು ಕರ್ನಾಟಕದ ಮೇಲೆ ಒತ್ತಡ ಹೇರಿದೆ.

    ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಅಧಿಕಾರಿಗಳು, ಮಳೆಯ ಕೊರತೆ ಹಿನ್ನೆಲೆ ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ. ನಿಗದಿತ ಪ್ರಮಾಣದ ನೀರು ಹರಿಸಿಲ್ಲ. ಫೆ.1 ರಿಂದ ಏ.28 ವರೆಗೂ ಪರಿಸರಕ್ಕೆ 7.33 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಕರ್ನಾಟಕ 5.31 ಟಿಎಂಸಿ ನೀರು ಹರಿಸಿದೆ. ಇದರಲ್ಲೂ 2.016 ಟಿಎಂಸಿ ಬಾಕಿ ಉಳಿಸಿಕೊಂಡಿದೆ ಎಂದರು. ಇದನ್ನೂ ಓದಿ: ರಾಯ್‌ಬರೇಲಿಯಿಂದ ಸ್ಪರ್ಧಿಸಲ್ಲ ಪ್ರಿಯಾಂಕಾ – ಇನ್ನೂ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್‌

    ಮೆಟ್ಟೂರಿನಲ್ಲಿ 20 ಟಿಎಂಸಿಯಷ್ಟು ನೀರಿದೆ. ಕುಡಿಯಲು ಮತ್ತು ಪರಿಸರಕ್ಕೆ ಬಳಸಲಾಗುತ್ತಿದೆ. ಕರ್ನಾಟಕ ಬಾಕಿ ಉಳಿಸಿಕೊಂಡ ಪರಿಸರ ಬಳಕೆ ನೀರು ಬಿಡುಗಡೆ ಮಾಡಬೇಕು. ಈ 2.5 ಟಿಎಂಸಿ ಜೊತೆಗೆ ಕೊರತೆಯ ಭಾಗದಲ್ಲಿ 25 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿ ರಾಕೇಶ್‌ ಸಿದ್ದರಾಮಯ್ಯ ವಿಚಾರ ಕೆದಕಿದ ಹೆಚ್‌ಡಿಕೆ

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಈ ಹಂತದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಮಧ್ಯಪ್ರವೇಶ ಮಾಡಿದ ತಮಿಳುನಾಡು, ಕುಡಿಯಲು 0.5 ಟಿಎಂಸಿ ನೀರು ಸಾಕು. ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು. ಹವಾಮಾನ ಇಲಾಖೆ ಉತ್ತಮ ಮಳೆಯ ಭರವಸೆ‌ ನೀಡಿದೆ. ಹೀಗಾಗೀ ನೀರು ಹರಿಸಬೇಕು ಎಂದು ಒತ್ತಾಯಿಸಿತು. ಇದನ್ನೂ ಓದಿ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಹಿನ್ನಡೆ – ಎರಡನೇ ಬಾರಿಗೆ ಜಾಮೀನು ಅರ್ಜಿ ವಜಾ

    ಮಧ್ಯಪ್ರವೇಶ ಮಾಡಿದ CWRC ಅಧ್ಯಕ್ಷ ವಿನೀತ್ ಗುಪ್ತಾ, ಸುಪ್ರೀಂ ಆದೇಶದ ಅನ್ವಯ ಬಿಳಿಗುಂಡ್ಲು ಬಳಿ ಮೇ ತಿಂಗಳ 2.5 ಟಿಎಂಸಿ ಪರಿಸರ ನೀರು ಹರಿವಿನ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಆದರೆ ಇದಕ್ಕೆ ಪರಿಸ್ಥಿತಿ ಅವಲೋಕಿಸುವುದಾಗಿ ಕರ್ನಾಟಕದ ಅಧಿಕಾರಿಗಳು ಹೇಳಿದ್ದಾರೆ. ಇನ್ನು 25 ಟಿಎಂಸಿ ನೀರು ಹರಿಸುವ ಬೇಡಿಕೆಯನ್ನು ತಿರಸ್ಕರಿಸಲಾಯಿತು.  ಎರಡೂ ರಾಜ್ಯಗಳ ವಾದ ಆಲಿಸಿರುವ ಸಿಡಬ್ಲ್ಯೂಆರ್‌ಸಿ ಮೇ 16ಕ್ಕೆ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದನ್ನೂ ಓದಿ: ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ಬಂಧನ ಮಾಡಿದ್ಯಾಕೆ – ಇಡಿಗೆ ಸುಪ್ರೀಂ ಪ್ರಶ್ನೆ

  • ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಕೊಂಚ ರಿಲೀಫ್ – ನೀರು ನಿಯಂತ್ರಣ ಸಮಿತಿ ಹೇಳಿದ್ದೇನು?

    ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಕೊಂಚ ರಿಲೀಫ್ – ನೀರು ನಿಯಂತ್ರಣ ಸಮಿತಿ ಹೇಳಿದ್ದೇನು?

    ನವದೆಹಲಿ: ತಮಿಳುನಾಡಿನಲ್ಲಿ (Tamil Nadu) ಉತ್ತಮ ಹಿಂಗಾರು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಕೊಂಚ ರಿಲೀಫ್ ನೀಡಿದ್ದು ಇಂತಿಷ್ಟೆ ನೀರು ಹರಿಸುವಂತೆ ಯಾವುದೇ ಸೂಚನೆ ನೀಡಿಲ್ಲ. ಗುರುವಾರ (ಇಂದು) ಸಭೆ ನಡೆಸಿದ ಅಧ್ಯಕ್ಷ ವೀನಿತ್ ಗುಪ್ತಾ ನೈಸರ್ಗಿಕ ಹರಿವು ಕಡಿಮೆಯಾದಲ್ಲಿ ಮಾತ್ರ ಸುಪ್ರೀಂ ಕೋರ್ಟ್ (Supreme Court) ನಿಯಮದ ಅನ್ವಯ ನೀರು ಹರಿಸಲು ಸೂಚನೆ ನೀಡಿದ್ದಾರೆ.

    ಸಭೆಯಲ್ಲಿ ಕರ್ನಾಟಕ ಬಾಕಿ ಉಳಿಸಿಕೊಂಡಿರುವ 11 TMC ಹಾಗೂ ಡಿಸೆಂಬರ್ ತಿಂಗಳ 6 TMC ಸೇರಿ ಒಟ್ಟು 17 TMC ನೀರು ಹರಿಸಬೇಕು ಎಂದು ತಮಿಳುನಾಡು ಪರ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿತು. ನವೆಂಬರ್‌ನಲ್ಲಿ 2,600 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಆದ್ರೆ 2,600 ಕ್ಯೂಸೆಕ್‌ಗಿಂತ ಹೆಚ್ಚಿನ ನೀರು ಹರಿದು ಹೋಗಿದೆ. ಇದನ್ನೂ ಓದಿ: ನೀರು ಹರಿಸಲು ಸಾಧ್ಯವಿಲ್ಲ; CWMA, ಸುಪ್ರೀಂಗೆ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಸಲ್ಲಿಕೆ

    ಜಲಾಶಯಗಳ (Reservoirs) ಕೆಳ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ನಿಗದಿತ ಪ್ರಮಾಣಕ್ಕಿಂತ ನೀರು ನೈಸರ್ಗಿಕವಾಗಿ ಹರಿಯುತ್ತಿದೆ. ನಿತ್ಯ 3,000 ಕ್ಯೂಸೆಕ್ ನೀರು ನೈಸರ್ಗಿಕವಾಗಿ ಹರಿಯುತ್ತಿದೆ. ತಮಿಳುನಾಡಿನಲ್ಲೂ ಉತ್ತಮ ಹಿಂಗಾರು ಮಳೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ನೀರು ಕೇಳಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿತು. ಇದನ್ನೂ ಓದಿ: ಕರ್ನಾಟಕ ಬಂದ್ ದಿನವೇ CWMA ಸಭೆ – ನೀರು ಹಂಚಿಕೆಯಲ್ಲಿ ಸಿಗಲಿದ್ಯಾ ರಿಲೀಫ್?

    ಎರಡೂ ಬದಿಯ ಮನವಿ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ನವೆಂಬರ್ 23ರಿಂದ ಡಿಸೆಂಬರ್ 23ರ ವರಗೆ ನೀರು ಹರಿಸಿ, ನೈಸರ್ಗಿಕವಾಗಿ ಎಷ್ಟು ನೀರು ತಮಿಳುನಾಡು ಸೇರುತ್ತಿದೆ ಅದು ಸೇರಲಿ, ಕಾವೇರಿ ಅಚ್ಚುಕಟ್ಟು ಜಲಾಶಯಗಳಿಂದ ನೀರು ಹರಿಸುವ ಅಗತ್ಯ ಇಲ್ಲ, ಒಂದು ವೇಳೆ ನೈಸರ್ಗಿಕ ಹರಿವು ತಗ್ಗಿದ್ದಲ್ಲಿ ಮಾತ್ರ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡಬೇಕು ಎಂದು ಶಿಫಾರಸು ಮಾಡಿತು. ಹೀಗಾಗಿ ಸದ್ಯ ಕರ್ನಾಟಕದ ಮೇಲೆ ಸದ್ಯ ಯಾವುದೇ ಒತ್ತಡಗಳು ಇಲ್ಲದಂತಾಗಿದ್ದು ನೈಸರ್ಗಿಕ ಹರಿವು ಕಡಿಮೆಯಾದಲ್ಲಿ ಮಾತ್ರ ಜಲಾಶಯಗಳಿಂದ ನಿತ್ಯ 2,700 ಕ್ಯೂಸೆಕ್ ನೀರು ಹರಿಸಬೇಕಿದೆ.  ಇದನ್ನೂ ಓದಿ: ಮುಂದಿನ 23 ದಿನ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಆದೇಶ

  • ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು

    ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು

    ಮಂಡ್ಯ: ಕಾವೇರಿ ನೀರು (Cauvery Water Issue) ವಿಚಾರದಲ್ಲಿ ಪದೇ ಪದೆ ನಮಗೆ ಅನ್ಯಾಯ ಆಗುತ್ತಿದೆ. ಮುಂದೆ ಹೀಗೆ ಆದ್ರೆ ಕುಡಿಯೋಕು ನೀರು ಇರಲ್ಲ ಎಂದು ಮಂಡ್ಯದಲ್ಲಿ ಪ್ರತಿಭಟನಾನಿರತ ಅಜ್ಜಿಯೊಬ್ಬರು ಕಣ್ಣೀರಿಟ್ಟರು.

    ತಮಿಳುನಾಡಿಗೆ (Tamil Nadu) ನೀರು ಹರಿಸುವ ವಿಚಾರವಾಗಿ ಕರ್ನಾಟಕಕ್ಕೆ (Karnataka) ಸಿಡಬ್ಲ್ಯೂಆರ್‌ಸಿ (CWRC) ನೀಡಿದ ಆದೇಶಕ್ಕೆ ಬೇಸರ ವ್ಯಕ್ತಪಡಿಸಿ ಮಂಡ್ಯದಲ್ಲಿ (Mandya) ಪ್ರತಿಭಟನೆ ನಡೆಸಲಾಯಿತು. ತಮಿಳುನಾಡಿಗೆ ನೀರು ಹರಿಸಲು ಹೊರಡಿಸಿದ ಶಿಫಾರಸಿನ ವಿರುದ್ಧ ಸೋಮವಾರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಮುಂದಿನ 15 ದಿನ ನಿತ್ಯ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಬಿಡಿ – ಕರ್ನಾಟಕಕ್ಕೆ CWRC ನಿರ್ದೇಶನ

    ಹಳೆ ಮೈಸೂರು-ಬೆಂಗಳೂರು ರಸ್ತೆ ತಡೆದು ಸಿಡಬ್ಲ್ಯೂಆರ್‌ಸಿ ಆದೇಶಕ್ಕೆ ಧಿಕ್ಕಾರ ಕೂಗಿದರು. ಹೆದ್ದಾರಿಯಲ್ಲಿಯೇ ಮಲಗಿ ಪ್ರಾಧಿಕಾರ, ನಿಯಂತ್ರಣ ಸಮಿತಿ ವಿರುದ್ಧ ಅಸಮಾಧಾನ ಹೊರಹಾಕಿದರು. ‘ಹೋಯ್ತಲಪ್ಪ ನೀರು’ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.

    ಈ ವೇಳೆ ಮಾತನಾಡಿದ ಅವರು, ಪದೇ ಪದೆ ನಮಗೆ ಅನ್ಯಾಯವಾಗುತ್ತಿದೆ. ನಮ್ಮ ಹೊಲ, ಗದ್ದೆಗಳು ಒಣಗುತ್ತಿವೆ. ಮುಂದೆ ಹೀಗೆ ಆದರೆ ಕುಡಿಯೋಕು ಸಹ ನೀರು ಇರಲ್ಲ. ನಮ್ಮ ಗೋಳು ಕೇಳೋರು ಯಾರು ಎಂದು ಅಜ್ಜಿ ಕಣ್ಣೀರು ಹಾಕಿದರು. ಇದನ್ನೂ ಓದಿ: ಒಕ್ಕಲಿಗ ನಾಯಕತ್ವ ಮುಗಿಸಲು ಒಂದು ತಂಡ ಪ್ರಯತ್ನಿಸುತ್ತಿದೆ: ರವಿಕುಮಾರ್‌ ಗಣಿಗ

    ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧ ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಸಭೆ ನಡೆಸಿದ್ದು, ನವೆಂಬರ್ 1 ರಿಂದ ಮುಂದಿನ 15 ದಿನಗಳ ಕಾಲ ನಿತ್ಯ 26೦೦ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಶಿಫಾರಸು ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅ.31 ರವರೆಗೆ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ CWRC ಸೂಚನೆ

    ಅ.31 ರವರೆಗೆ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ CWRC ಸೂಚನೆ

    ನವದೆಹಲಿ: ಅಕ್ಟೋಬರ್ 16 ರಿಂದ 31ರ ವರೆಗೆ ತಮಿಳುನಾಡಿಗೆ ಪ್ರತಿ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.

    ಕಾವೇರಿ ನದಿ ನೀರು (Cauvery River Water) ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಸಭೆ ನಡೆಸಿದ ಸಮಿತಿಯು ತಮಿಳುನಾಡಿಗೆ (Tamil Nadu) ಇನ್ನೂ 15 ದಿನಗಳ ಕಾಲ ಅಂದ್ರೆ ಅಕ್ಟೋಬರ್ 16ರಿಂದ 31ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಭೆ ನಡೆಸಿದ ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತಾ ಶಿಫಾರಸ್ಸು ಮಾಡಿದ್ದಾರೆ‌. ಇದನ್ನೂ ಓದಿ: ನಾಳೆ CWRC ಸಭೆ – ಈ ಬಾರಿ ತಮಿಳುನಾಡು ಬೇಡಿಕೆಯಿಟ್ಟ ನೀರಿನ ಪ್ರಮಾಣ ಎಷ್ಟು ಗೊತ್ತಾ?  

    ಇದೇ ಸೆಪ್ಟೆಂಬರ್‌ 29 ರಂದು 15 ದಿನಗಳವರೆಗೆ ಪ್ರತಿ ನಿತ್ಯ 3,000 ಕ್ಯೂಸೆಕ್‌ ಕಾವೇರಿ ನೀರನ್ನು ತಮಿಳುನಾಡಿಗೆ (Tamil Nadu) ಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿತ್ತು. ಆದೇಶ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಿತು. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

    ಸಭೆಯಲ್ಲಿ ತಮಿಳುನಾಡು ಪರ ಭಾಗಿಯಾಗಿದ್ದ ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಮಣಿಯನ್, ಮುಖ್ಯ ಎಂಜಿನಿಯರ್ ಸುಬ್ರಮಣಿಯನ್ ಮತ್ತು ಪಟ್ಟಬ್ರಮಣ್ ನಿತ್ಯ 16000 ಕ್ಯೂಸೆಕ್ ನಂತೆ ಹದಿನೈದು ದಿನಗಳ ಕಾಲ 20.75 ಟಿಎಂಸಿ ನೀರು ಹರಿಸಲು ಒತ್ತಡ ಹೇರಿತು. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಅಧಿಕಾರಿಗಳು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 50% ಮಳೆಯ ಕೊರತೆ ಇದೆ. ಮುಂದಿನ ದಿನಗಳ ಮಳೆಯಾಗುವ ಯಾವುದೇ ಭರವಸೆಗಳಿಲ್ಲ ಹೀಗಾಗೀ ನೀರು ಹರಿಸಲು ಸಾಧ್ಯವಿಲ್ಲ ಎಂದರು. ಎರಡು ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯಲು ಸಮಿತಿಯೂ ಹಳೆ ಆದೇಶವನ್ನು ಅಕ್ಟೋಬರ್ 31 ವರೆಗೂ ಮುಂದುವರಿಸಲು ಶಿಫಾರಸ್ಸು ಮಾಡಿತು. ಮುಂದಿನ ಒಂದೇರಡು ದಿನಗಳಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದ್ದು ಈ ಆದೇಶ ಪ್ರಶ್ನಿಸಬಹುದಾಗಿದೆ. ಇದನ್ನೂ ಓದಿ: ಜಾತಿ, ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ: ಮಂತ್ರಿ ಸ್ಥಾನಕ್ಕೆ ದಲಿತ ನಾಯಕಿ ರಾಜೀನಾಮೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ CWRC ಸಭೆ – ಈ ಬಾರಿ ತಮಿಳುನಾಡು ಬೇಡಿಕೆಯಿಟ್ಟ ನೀರಿನ ಪ್ರಮಾಣ ಎಷ್ಟು ಗೊತ್ತಾ?

    ನಾಳೆ CWRC ಸಭೆ – ಈ ಬಾರಿ ತಮಿಳುನಾಡು ಬೇಡಿಕೆಯಿಟ್ಟ ನೀರಿನ ಪ್ರಮಾಣ ಎಷ್ಟು ಗೊತ್ತಾ?

    ನವದೆಹಲಿ: ಕಾವೇರಿ ನದಿ ನೀರು (Cauvery River Water) ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆ ನಡೆಯಲಿದೆ‌. ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ 88ನೇ ಸಭೆ ಕರೆಯಲಾಗಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳು ವರ್ಚ್ಯುವಲ್ ಮೂಲಕ ಭಾಗಿಯಾಗಲಿದ್ದಾರೆ.

    ಅಕ್ಟೋಬರ್‌ 15ರ ವರೆಗೆ ಪ್ರತಿ ನಿತ್ಯ 3,000 ಕ್ಯೂಸೆಕ್‌ ಕಾವೇರಿ ನೀರನ್ನು ತಮಿಳುನಾಡಿಗೆ (Tamil Nadu) ಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆಪ್ಟೆಂಬರ್‌ 29 ರಂದು ಆದೇಶಿಸಿತ್ತು. ಈ ಆದೇಶ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ಸಭೆ ನಡೆಸುವ ಮೂಲಕ ನೀರಿ ಹರಿವು ಸರಿಯಾಗಿದೆಯೇ? ಅಣೆಕಟ್ಟುಗಳಲ್ಲಿ ಎಷ್ಟು ಪ್ರಮಾಣದ ನೀರಿನ ಸಂಗ್ರಹ ಇದೆ? ಜೊತೆಗೆ ಒಳ ಹರಿವು ಗಮನಿಸಿಕೊಂಡು ಮುಂದಿನ ಹಂತದಲ್ಲಿ ಹೊಸ ಆದೇಶ ನೀಡುವ ಸಾಧ್ಯತೆಗಳಿವೆ.

    ತಮಿಳುನಾಡು ಸರ್ಕಾರದ (Tamil Nadu Government) ಪರವಾಗಿ ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ, ಮುಖ್ಯ ಎಂಜಿನಿಯರ್ ಸುಬ್ರಮಣ್ಯಂ ಮತ್ತು ಪಟ್ಟಾಭಿ ರಾಮನ್ ಭಾಗವಹಿಸಲಿದ್ದಾರೆ. ನಾಳಿನ ಸಭೆಯಲ್ಲಿ ತಮಿಳುನಾಡು ನಿತ್ಯ 13,000 ಕ್ಯೂಸೆಕ್ ನೀರು 15 ದಿನಗಳ ಕಾಲ ನೀರು ಬಿಡುವಂತೆ ಮನವಿ ಮಾಡಲು ನಿರ್ಧರಿಸಿದೆ. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

    ಕರ್ನಾಟಕ ಸರ್ಕಾರವು (Government Of Karnataka) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಮ್ಮ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿನ ಕೊರತೆ ಮತ್ತು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಉಲ್ಲೇಖಿಸಿ ನಿತ್ಯ 3000 ಕ್ಯೂಸೆಕ್ ಅಡಿ ನೀರು ಬಿಡಲು ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದೆ. ಆದರೆ ಈವರೆಗೂ ಯಾವುದೇ ಆದೇಶ ರದ್ದಾಗಿಲ್ಲ, ಈ ನಡುವೆ ಮತ್ತೊಂದು ಸಭೆಗೆ ಸಿದ್ಧತೆ ನಡೆದಿದೆ. ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕೇಂದ್ರ ನಿರ್ದೇಶನ ನೀಡಬೇಕು: ವಿಧಾನಸಭೆಯಲ್ಲಿ ಸ್ಟಾಲಿನ್‌ ನಿರ್ಣಯ ಮಂಡನೆ

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಪಾಲಿಸಲು ಸೂಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಪಾಸ್ ಮಾಡಿದೆ. ಈ ನಡುವೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಭೇಟಿಯಾಗಿರುವ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೀರು ಹರಿಸಲು ಆದೇಶ ನೀಡದಂತೆ ಸೂಚಿಸಲು ಒತ್ತಡ ಹೇರಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸುತ್ತೇನೆ – ಕಾವೇರಿ ಸಮಸ್ಯೆ ಪರಿಹಾರಕ್ಕೆ ಸಂಕಷ್ಟ ಸೂತ್ರ ರಚನೆಯಾಗಬೇಕು: SM ಕೃಷ್ಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]