Tag: ಸಿಟಿ ರವಿ

  • ಪ್ರಿಯಾಂಕ್ ಖರ್ಗೆಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ, ಅದ್ರ ಅಹಂನಲ್ಲಿ ಮಾತಾಡ್ತಿದ್ದಾರೆ – CT ರವಿ ವಾಗ್ದಾಳಿ

    ಪ್ರಿಯಾಂಕ್ ಖರ್ಗೆಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ, ಅದ್ರ ಅಹಂನಲ್ಲಿ ಮಾತಾಡ್ತಿದ್ದಾರೆ – CT ರವಿ ವಾಗ್ದಾಳಿ

    -RSSನ 100 ವರ್ಷದ ಇತಿಹಾಸದಲ್ಲಿ ಭಯೋತ್ಪಾದನೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ

    ಬೆಂಗಳೂರು: ಪ್ರಿಯಾಂಕ್ ಖರ್ಗೆಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ, ಅದರ ಅಹಂನಲ್ಲಿ ಮಾತಾಡ್ತಿದ್ದಾರೆ ಎಂದು ಎಂಎಲ್‌ಸಿ ಸಿ.ಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾನುವಾರ (ಅ.12) ಪ್ರಿಯಾಂಕ್ ಖರ್ಗೆ (Priyank Kharge) ಸಿಎಂಗೆ ಪತ್ರ ಬರೆದು, ಸಂಘದ ಚಟುವಟಿಕೆ ನಿರ್ಬಂಧಕ್ಕೆ ಮುಂದಾಗಿದ್ದಾರೆ. ನಾನು ಪ್ರಿಯಾಂಕ್ ಖರ್ಗೆ ಅವರನ್ನು ಸಾರ್ವಜನಿಕ ಚರ್ಚೆಗೆ ಆಹ್ವಾನ ಕೊಡ್ತೇನೆ. ಅವರಿಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ. ಅದರ ಅಹಂನಲ್ಲಿ ಮಾತಾಡ್ತಿದ್ದಾರೆ. ಸಂಘದ ನೂರು ವರ್ಷದ ಇತಿಹಾಸದಲ್ಲಿ ಭಯೋತ್ಪಾದನೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಆದರೆ ಪ್ರಕೋಪ, ವಿಕೋಪ ಸಮಸ್ಯೆಗಳ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ನೂರಾರು ಉದಾಹರಣೆಗಳಿವೆ. ಆರ್‌ಎಸ್‌ಎಸ್ ಪ್ರೇರಣೆ ಪಡೆದು ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ. ಸಮಾಜಕ್ಕೆ ತನ್ನದೇ ಆದ ಸಕಾರಾತ್ಮಕ ಕೊಡುಗೆ ಕೊಡ್ತಿದೆ. ಸಕಾರಾತ್ಮಕ ಕೊಡುಗೆ ಕೊಡ್ತಿರೋ ಸಂಘವನ್ನು ನಕಾರಾತ್ಮಕವಾಗಿ ಬಿಂಬಿಸೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

    ಕಾಂಗ್ರೆಸ್ (Congress) ಭ್ರಷ್ಟಾಚಾರದ ಪಕ್ಷ, ಭ್ರಷ್ಟಾಚಾರದ ಪಿತಾಮಹರೇ ಕಾಂಗ್ರೆಸ್‌ನಲ್ಲಿದ್ದಾರೆ. ಇವರೇ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಕೊಟ್ಟು ಬೆಳೆಸಿದ್ದಾರೆ. ಅಂತಹ ಕಾಂಗ್ರೆಸ್‌ನಲ್ಲಿರುವ ನೀವು ಸಂಘದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಪಾಕ್ ಪರ ಘೋಷಣೆ, ಗೋಹತ್ಯೆ, ಗೋಭಕ್ಷಣೆಗೆ ಕುಮ್ಮಕ್ಕು ಕೊಡೋರನ್ನು ಬೆಂಬಲಿಸುವ ನೀಚತನ ನಿಮ್ಮ ಪಕ್ಷಕ್ಕಿದೆ. ಗಾಂಧಿಯವರ ಹತ್ಯೆಗೂ ಸಂಘಕ್ಕೂ ಸಂಬಂಧ ಇಲ್ಲ ಅಂತ ನೆಹರೂ ಅವರು ನೇಮಿಸಿದ ಸಮಿತಿಗಳೇ ಹೇಳಿವೆ. ಆದರೂ ಮತ್ತೆ ಗಾಂಧಿ ಹತ್ಯೆ ಮಾಡಿದ್ದು ಆರ್‌ಎಸ್‌ಎಸ್ ಅಂತ ಸುಳ್ಳು ಹೇಳ್ತಿದ್ದೀರಿ. ಸರ್ವಾಧಿಕಾರಿ ಮನಸ್ಥಿತಿ ಅಂದಿದ್ದೀರಿ, ತುರ್ತು ಪರಿಸ್ಥಿತಿ ಹೇರಿದ ಇತಿಹಾಸ ನಿಮ್ಮ ಪಕ್ಷಕ್ಕಿದೆ. ಸರ್ವಾಧಿಕಾರಿ ಅನ್ನೋದೂ ನಿಮ್ಮ ಪಕ್ಷಕ್ಕೆ ಅನ್ವಯ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ RSS ಅಜೆಂಡಾ ಇಟ್ಕೊಂಡೇ ನೀವು ಚುನಾವಣೆಗೆ ಬನ್ನಿ. ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬರಲಿ. ನೀವು ಗೆಲ್ತೀರೋ ಇಲ್ಲವೋ ಎಂದು ನೋಡೇಬಿಡೋಣ ಎಂದು ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.

    ಇನ್ನೂ ಸಿಎಂ ಅವರಿಂದ ಸಚಿವರಿಗೆ ಡಿನ್ನರ್ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಅವರು ಗುತ್ತಿಗೆದಾರರ ಕಮಿಷನ್ ಆರೋಪ ಮಾಡಿದ್ದಾರೆ, ಅದರ ಬಗ್ಗೆ ಕಳಕಳಿ ವ್ಯಕ್ತಪಡಿಸಬೇಕಿತ್ತು. ಇದು ಅಪಮಾನ ಅಂತ ಹೇಳಬೇಕಿತ್ತು. ಇನ್ನೂ ಸಿಎಂ ಹೆಲಿಕಾಪ್ಟರ್ ಸಮೀಕ್ಷೆ ಮಾಡಿದರು, ಆದರೆ ಕೆಳಗಿಳಿದು ರೈತರ ಕಷ್ಟ ಕೇಳಲಿಲ್ಲ. ಮೇಲಷ್ಟೇ ಹಾರಾಟ ಮಾಡಿ ರೈತರ ಕಷ್ಟ ಕೇಳಲಿಲ್ಲ. ಸಚಿವರ ಔತಣ ಕೂಟ ಜನರು ಸಂಕಷ್ಟದಲ್ಲಿದ್ದಾಗ ಇಟ್ಕೊಳ್ಳೋದಲ್ಲ. ಸಂವೇದನೆ ಇರೋರು ಈ ಔತಣ ಕೂಟ ಇಟ್ಕೊಳ್ಳಲ್ಲ. ಸಿಎಂಗೆ ಸಂವೇದನೆ ಇದೆಯಾ? ಎಂದಿದ್ದಾರೆ.

    ಬಿಕೆ ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ ಎಂದು ಹೇಳಿದ್ದಾರೆ. ಹೀಗೆಲ್ಲ ಮಾತಾಡಿದರೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆ, ಅಧಿಕಾರ ಪಡೆದುಕೊಳ್ಳಲು ಹರಿಪ್ರಸಾದ್ ಹೀಗೆ ಮಾತಾಡಿದ್ದಾರೆ. ಇನ್ನೂ ದೇಶಪಾಂಡೆ ಅವರು ಹಿರಿಯರು, ಅವರು ಹೇಳಿದ್ದು ಸರಿ ಇದೆ. ನಾವು ಹೇಳಿದರೆ ಟೀಕೆ, ರಾಜಕೀಯ ಅಂತಾರೆ. ಆದರೆ ಅವರ ಪಕ್ಷದ ದೇಶಪಾಂಡೆ ಅವರೇ ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ನಾನು  ಸಿಎಂ ಆಗಿದ್ದಿದ್ರೆ ʻಪಂಚ ಗ್ಯಾರಂಟಿʼ ಅನುಷ್ಠಾನ ಮಾಡ್ತಿರಲಿಲ್ಲ, ಗ್ಯಾರಂಟಿ ಹೊರೆಯಾಗಿದೆ: ಆರ್.ವಿ.ದೇಶಪಾಂಡೆ

  • ಯುದ್ಧೋಪಾದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಹಕ್ಕೆ ಸರ್ಕಾರ ಸ್ಪಂದಿಸಬೇಕು: ಸಿ.ಟಿ ರವಿ

    ಯುದ್ಧೋಪಾದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಹಕ್ಕೆ ಸರ್ಕಾರ ಸ್ಪಂದಿಸಬೇಕು: ಸಿ.ಟಿ ರವಿ

    ಬೆಂಗಳೂರು: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಆಗುತ್ತಿರುವ ಪ್ರವಾಹಕ್ಕೆ (Flood) ಸರ್ಕಾರ ಯುದ್ಧೋಪಾದಿಯಾಗಿ ಪರಿಹಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi) ಸರ್ಕಾರವನ್ನ ಆಗ್ರಹಿಸಿದ್ದಾರೆ.

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಪ್ರವಾಹ ಸಮಯವನ್ನ ಫಿಲ್ಮ್ ಶೂಟಿಂಗ್ ರೀತಿ ಅಂದುಕೊಂಡಿದ್ದಾರೆ. ಪ್ರವಾಹ ಅನ್ನೋದು ಪಿಕ್ಚರ್ ಶೂಟಿಂಗ್ ಅಲ್ಲ. ಈ ಮೂವಿ ಶೂಟಿಂಗ್ ಟೈಂನಲ್ಲಿ ಮುಂಚೆಯೇ ಎಲ್ಲಾ ಲೋಕೇಶನ್ ನೋಡಿ, ಅಮೇಲೆ ಅಲ್ಲಿಗೆ ಕ್ಯಾಮೆರಾ ಕಳಿಸಿ ಅಲ್ಲಿ ಡೈರಕ್ಟರ್ ಎಲ್ಲಾ ತಯಾರಿ ಮಾಡಿಕೊಂಡು ಅಲ್ಲಿಗೆ ಹೋಗುತ್ತಾರೆ. ಆಕ್ಷನ್ ಕಟ್ ಹೇಳೋ ರೀತಿಯಲ್ಲಾ ಇದು. ಇದಕ್ಕೆ ಸಂವೇದನೆ ಇರಬೇಕು. ಸಿಎಂಗೆ ಸಂವೇದನೆ ಇದ್ದಿದ್ದರೆ ಮುಳುಗಿರೋ ಪ್ರದೇಶಕ್ಕೆ ಹೋಗಬೇಕಿತ್ತು. ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದ ಮೇಲೆ ಸಂವೇದನೆ ಸತ್ತು ಹೋಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!

    ಸರ್ಕಾರದಲ್ಲೂ ಸಂವೇದನೆ ಸತ್ತು ಹೋಗಿದೆ. ಎಲ್ಲಾ ಕೆಲಸ ಬದಿಗೊತ್ತಿ ಆದ್ಯತೆ ವಿಷಯ ಆಗಬೇಕಿತ್ತು. ನಾನು ನೀವು ಮಾಡಿದ ಬೆಂಗಳೂರು ಸಿಟಿ ರೌಂಡ್ಸ್ ನೋಡಿದೆ. ನೀವು ಹಾಕಿದ್ದ ಬಿಳಿ ಪಂಚೆ, ಜುಬ್ಬ ಕೊಳೆ ಆಗದ ರೀತಿ ರೌಂಡ್ಸ್ ಮಾಡಿದ್ದೀರಿ. ಚಪ್ಪಲಿಗೆ ನೀರು ತಾಗದ ರೀತಿ ಮುಗಿಸಿದ್ರಿ. ಇದು ಹಾಗೇನಾ? ಇದು ಪಿಕ್ಚರ್ ಶೂಟಿಂಗ್ ಅಲ್ಲ. ಜನರ ಕಷ್ಟಕ್ಕೆ ಸ್ಪಂದನೆ ಮಾಡಬೇಕು. ಜನರ ಬವಣೆಗೆ ಸ್ಪಂದಿಸೋ ಕೆಲಸ ಮಾಡಬೇಕಿತ್ತು. ಸರ್ಕಾರದ ಸಂವೇದನೆ ಸತ್ತು ಹೋಗಿದೆ. ತಕ್ಷಣ ಯುದ್ಧೋಪಾದಿಯಲ್ಲಿ ಪರಿಹಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಜಾತಿಗಣತಿಗೆ ಬಿಜೆಪಿ ವಿರೋಧ ಮಾಡೋದಿಲ್ಲ: ಸಿ.ಟಿ ರವಿ

  • ಜಾತಿಗಣತಿಗೆ ಬಿಜೆಪಿ ವಿರೋಧ ಮಾಡೋದಿಲ್ಲ: ಸಿ.ಟಿ ರವಿ

    ಜಾತಿಗಣತಿಗೆ ಬಿಜೆಪಿ ವಿರೋಧ ಮಾಡೋದಿಲ್ಲ: ಸಿ.ಟಿ ರವಿ

    ಬೆಂಗಳೂರು: ಬಿಜೆಪಿ (BJP) ಜಾತಿಗಣತಿಗೆ (Caste Census) ವಿರೋಧ ಮಾಡುವುದಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ ರವಿ (CT Ravi) ಸ್ಪಷ್ಟಪಡಿಸಿದ್ದಾರೆ.

    ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬಿಜೆಪಿಗೆ ವಿರೋಧ ಮಾಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಜಾತಿಗಣತಿ ವಿರೋಧ ಮಾಡಲ್ಲ ಎಂದರು. ಜಾತಿಗಣತಿಗೆ ಬಿಜೆಪಿಯ ವಿರೋಧ ಇಲ್ಲ. ಜಾತಿಗಣತಿ ಹೆಸರಿನಲ್ಲಿ ಸಮಾಜ ಒಡೆಯೋಕೆ ಮಾತ್ರ ನಮ್ಮ ವಿರೋಧ ಇದೆ. ಜಾತಿ ಒಡೆಯೋದು, ಹೊಸ ಜಾತಿ ಸೃಷ್ಟಿ ಮಾಡೋದು, ಹಿಂದೂ ಜಾತಿಗಳನ್ನ ಕ್ರಿಶ್ಚಿಯನ್ ಜಾತಿಗೆ ಸಮೀಕರಣ ಮಾಡೋದು. ಹಿಂದೂಗಳನ್ನ ಒಡೆಯುವುದು, ಒಳ ಜಾತಿ ಒಡೆಯೋದಕ್ಕೆ ನಮ್ಮ ವಿರೋಧ ಇದೆ. ಸಮೀಕ್ಷೆಗೆ ವಿರೋಧ ಇಲ್ಲ ಎಂದರು. ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು: ಹೈಕೋರ್ಟ್ ಸೂಚನೆ

    ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ. ನಿಮಗೆ ಅದರ ಬದ್ಧತೆ ಇಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇದ್ದಿದ್ದರೆ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಹಾಕುತ್ತಿದ್ದರು? ನಾಗಮೋಹನ್ ದಾಸ್ ವರದಿ ಯಾಕೆ ತಿಪ್ಪೇಗುಂಡಿಗೆ ಸೇರುತ್ತಿತ್ತು? ನಿಮಗೆ ಬದ್ಧತೆ ಇಲ್ಲ. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಆದರೆ ಬಿಜೆಪಿ ನಿರ್ಣಯ ತೆಗೆದುಕೊಂಡಿದೆ, ಜಾತಿಗಣತಿಗೆ ನಮ್ಮ ವಿರೋಧ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ಅರ್ಜಿ – ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

  • ಸಮಸ್ಯೆ ಬಗೆಹರಿಸದೇ ಸಿಎಂ ಧಮ್ಕಿ ಹಾಕೋದು ಸರಿಯಲ್ಲ: ಸಿ.ಟಿ ರವಿ

    ಸಮಸ್ಯೆ ಬಗೆಹರಿಸದೇ ಸಿಎಂ ಧಮ್ಕಿ ಹಾಕೋದು ಸರಿಯಲ್ಲ: ಸಿ.ಟಿ ರವಿ

    ಬೆಂಗಳೂರು: ಸಮೀಕ್ಷೆಯಲ್ಲಿ (Caste Census) ಪಾಲ್ಗೊಳ್ಳದಿದ್ದರೆ ಸಿಎಂ ಕ್ರಮ ಕೈಗೊಳ್ಳುವ ಧಮ್ಕಿ ಹಾಕಿದ್ದಾರೆ. ಮೊದಲು ಗಣತಿದಾರರು, ಶಿಕ್ಷಕರ ಸಮಸ್ಯೆ ಬಗೆಹರಿಸಿ ಎಂದು ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ಆಪ್‌ನಲ್ಲಿ ಸಮಸ್ಯೆ ಇದೆ, ಒಟಿಪಿ ಸಮಸ್ಯೆ ಇದೆ, ಸೀರಿಯಲ್ ಪ್ರಕಾರ ಮನೆಗಳನ್ನು ಕೊಟ್ಟಿಲ್ಲ, ಪ್ರಾಂತ್ಯವಾರು ಶಿಕ್ಷಕರ ನಿಯೋಜನೆ ಆಗಿಲ್ಲ, ಎಲ್ಲೋ ಇರೋರನ್ನು ಇನ್ನೆಲ್ಲೋ ಸಮೀಕ್ಷೆಗೆ ಹಾಕಿದ್ದಾರೆ. ಪೂರ್ವ ತಯಾರಿ ಮಾಡಿಕೊಳ್ಳದೇ ಸಮೀಕ್ಷೆ ನಡೆಯುತ್ತಿದೆ. ಪ್ರಾಯೋಗಿಕ ಸಮೀಕ್ಷೆ ಮಾಡದೇ ನೇರವಾಗಿ ಫೀಲ್ಡ್‌ನಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ. 60 ಪ್ರಶ್ನೆಗಳಿಗೆ ಉತ್ತರಿಸಲು ಜನಕ್ಕೆ ತಾಳ್ಮೆ ಇರಲ್ಲ, ಆದರೆ ಅಷ್ಟೂ ಪ್ರಶ್ನೆಗಳಿಗೆ ಉತ್ತರ ಭರ್ತಿ ಮಾಡಬೇಕು. ಇದರಿಂದ ಒಂದೊಂದು ಸಮೀಕ್ಷೆ ಪ್ರತಿ ಭರ್ತಿಗೆ 1.5 ರಿಂದ 2 ಗಂಟೆ ಬೇಕು. ಎಲ್ಲರಿಗೂ ತಾಂತ್ರಿಕ ಜ್ಞಾನ ಇರಲ್ಲ, ಇದನ್ನು ಸರ್ಕಾರ ಗಮನಿಸಬೇಕಿತ್ತು ಎಂದರು. ಇದನ್ನೂ ಓದಿ: ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್‌ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್

    ನೆಟ್ವರ್ಕ್ ಸಮಸ್ಯೆ, ಅಪ್‌ಲೋಡ್ ಸಮಸ್ಯೆ, ಒಟಿಪಿ ವಿಳಂಬ ಸಮಸ್ಯೆ ಇವೆ. ಇವೆಲ್ಲ ಸಮಸ್ಯೆ ಮೊದಲು ಸರಿಪಡಿಸಿ ನಂತರ ಸಮೀಕ್ಷೆ ಮಾಡಿ. ಪೂರ್ವಸಿದ್ಧತೆ ಮಾಡಿಕೊಂಡು ಸಮೀಕ್ಷೆ ಮಾಡಿ. ಸಿಎಂ ಅವರು ಸಮಸ್ಯೆ ಬಗೆಹರಿಸದೇ ಧಮ್ಕಿ ಹಾಕೋದು ಸರಿಯಲ್ಲ. ಧಮ್ಕಿಯಿಂದ ಕೆಲಸ ಆಗಲ್ಲ. ಇವೆಲ್ಲ ಸಮಸ್ಯೆಗಳಿಂದ ಗಣತಿದಾರರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮೀಕ್ಷೆಯ ಸಂಕಷ್ಟ ಬಗ್ಗೆ ಸಿಎಂ ಗಮನಕ್ಕೆ ನಾನು ತಂದಿದ್ದೇನೆ. ತೇಜಸ್ವಿ ಅವರು ಯಾವುದನ್ನೂ ಹೇಳಿದ್ದಾರೋ ಅದನ್ನೂ ಸೇರಿಸಿ ಎಲ್ಲ ವಿಚಾರ ಇವತ್ತಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಅವರು ಹೇಳಿರುವ ಅಭಿಪ್ರಾಯದ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಅವರ ಅಭಿಪ್ರಾಯ ಪಕ್ಷ ಒಪ್ಪಿಕೊಂಡರೆ ಪಕ್ಷದ ಅಭಿಪ್ರಾಯವೂ ಅದೇ ಆಗಲಿದೆ. ಪಕ್ಷ ಅವರ ಅಭಿಪ್ರಾಯ ಒಪ್ಪದಿದ್ದರೆ ಅದು ಅವರ ವೈಯಕ್ತಿಕ ಹೇಳಿಕೆ ಆಗಲಿದೆ. ಆಗ ವೈಯಕ್ತಿಕ ಹೇಳಿಕೆಗಳು ಪಕ್ಷದ್ದಾಗುವುದಿಲ್ಲ. ಇವತ್ತು ಕೋರ್ ಕಮಿಟಿ ಸಭೆಯಲ್ಲಿ ಅದನ್ನೂ ಚರ್ಚೆ ಮಾಡಿ ಮುಂದಿನ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಮೀಕ್ಷೆಗೆ ಸಿದ್ಧತೆ ಸರಿಯಾಗಿ ಮಾಡದೇ ಸರ್ಕಾರದಿಂದ ಗೊಂದಲ: ನಿಖಿಲ್

    ಐ ಲವ್ ಮುಹಮ್ಮದ್ ವರ್ಸಸ್ ಐ ಲವ್ ಮಹಾದೇವ ಪೋಸ್ಟರ್ ಜಟಾಪಟಿ ವಿಚಾರವಾಗಿ ಮಾತನಾಡಿ, ಐ ಲವ್ ಮುಹಮ್ಮದ್ ಅಂತ ಅವರು ಮಹಾದೇವ ಅಂತ ಇವರು ಶುರು ಮಾಡಿದ್ದಾರೆ. ಈಗ ಏಕಾಏಕಿ ಮಹಮದ್ ಮೇಲೇನು ಲವ್? ಈ ಲವ್ ಮೊದಲು ಇರಲಿಲ್ವಾ? ಇದರ ಹಿಂದೆ ಏನೋ ಷಡ್ಯಂತ್ರ ಇದೆ. ಕೇಂದ್ರ, ರಾಜ್ಯ ಗುಪ್ತಚರ ದಳ ಇದರ ಬಗ್ಗೆ ನಿಗಾ ಇಡಬೇಕು ಎಂದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ಮಾಡಿದೆ: ನಿಖಿಲ್ ಕುಮಾರಸ್ವಾಮಿ

  • ಆಧಾರಸಹಿತ ಆರೋಪವಾಗಿದ್ರೆ ದೂರು ಕೊಡ್ಲಿ, ಹಿಟ್ ಆಂಡ್ ರನ್ ಮಾಡೋದೇ ನಿಮ್ಮ ಉದ್ದೇಶವೇ? – ಸಿಟಿ ರವಿ ಕಿಡಿ

    ಆಧಾರಸಹಿತ ಆರೋಪವಾಗಿದ್ರೆ ದೂರು ಕೊಡ್ಲಿ, ಹಿಟ್ ಆಂಡ್ ರನ್ ಮಾಡೋದೇ ನಿಮ್ಮ ಉದ್ದೇಶವೇ? – ಸಿಟಿ ರವಿ ಕಿಡಿ

    * ಇಸಿಗೆ ಪ್ರಮಾಣಪತ್ರದ ಮೂಲಕ ದೂರು ಕೊಡುತ್ತಿಲ್ಲವೇಕೆ ಎಂದು ಪ್ರಶ್ನೆ

    ಬೆಂಗಳೂರು: ತಮ್ಮ ಮತಗಳ್ಳತನ (Vote Theft) ಆರೋಪದ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರದ ಮೂಲಕ ದೂರು ಕೊಡುತ್ತಿಲ್ಲವೇಕೆ? ಹಿಟ್ ಆಂಡ್ ರನ್ ಮಾಡುವುದೇ ಇವರ ಉದ್ದೇಶವೇ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಅವರು ಪ್ರಶ್ನಿಸಿದ್ದಾರೆ.

    ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್‌ನಲ್ಲಿ ಇಂದು ಮಾಧ್ಯಮಗಳ ಜೊತೆ ಆಳಂದದಲ್ಲಿ (Alanda) ಮತದಾರರ ಪಟ್ಟಿಯಿಂದ ಹೆಸರು ತೆಗೆದ ಆರೋಪದ ಬಗ್ಗೆ ಮಾತನಾಡಿದರು. ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಯಾವುದಾದರೂ ದೂರಿದ್ದರೆ ಅಫಿಡವಿಟ್ ಮೂಲಕ ಸಲ್ಲಿಸಲು ತಿಳಿಸಿದ್ದರು. ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ಚುನಾವಣೆಯ ನೇತೃತ್ವವಹಿಸಿ 8-9 ಕಡೆ ಯಶಸ್ಸು ಕಂಡಿದ್ದಾರೆ. ಸುಮಾರು ಶೇ.92ರಷ್ಟು ವೈಫಲ್ಯ ಅವರದು. ತಮ್ಮ ಚುನಾವಣಾ ವೈಫಲ್ಯವನ್ನು ಅವರು ಚುನಾವಣಾ ಆಯೋಗದ ಹೆಗಲಿಗೆ ಕಟ್ಟಲು ಹೊರಟಿದ್ದಾರಾ ಎಂದು ಆಗ್ರಹಿಸಿದರು. ಇದನ್ನೂ ಓದಿ: `ಆಳಂದ ಫೈಲ್ಸ್’ | ರಾಹುಲ್ ಗಾಂಧಿ ಆರೋಪಕ್ಕೆ ಕರ್ನಾಟಕ ಚುನಾವಣಾ ಆಯೋಗ ಹೇಳಿದ್ದೇನು?

    ಅವರದ್ದು ಆಧಾರಸಹಿತ ಆರೋಪವಾಗಿದ್ದರೆ ಆಧಾರದ ಜೊತೆ ಪ್ರಮಾಣಪತ್ರದೊಂದಿಗೆ ದೂರು ಸಲ್ಲಿಸಲಿ. ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆ ಮೇಲೆ ನಂಬಿಕೆ ಇದ್ದರೆ, ಕಾನೂನುಬದ್ಧವಾಗಿ ದೂರು ಕೊಡಬೇಕು. ಅವರಿಗೆ ತಮ್ಮ ವೈಫಲ್ಯವನ್ನು ಬೇರೆಯವರ ತಲೆಗೆ ಕಟ್ಟುವ ದುರುದ್ದೇಶ ಇದ್ದಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಚುನಾವಣಾ ಆಯೋಗವು ದೆಹಲಿ, ಬೆಂಗಳೂರು ಕಚೇರಿ ಹೊಂದಿದ್ದು, ರಾಜ್ಯಮಟ್ಟದ ಆಡಳಿತದ ಮೇಲೆ ಅವಲಂಬಿತವಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ನೇತೃತ್ವ, ಕಂದಾಯ ಇನ್‌ಸ್ಪೆಕ್ಟರ್ ನೇತೃತ್ವ, ಬೂತ್ ಮಟ್ಟದ ಅಧಿಕಾರಿಯಾಗಿ ಬಹುತೇಕ ಶಾಲಾ ಶಿಕ್ಷಕರು, ಕಂದಾಯ ಇಲಾಖೆ, ಬಿಬಿಎಂಪಿ ನೌಕರರ ಮೇಲೆ ಅವಲಂಬಿತವಾಗಿದೆ. ಇವರ ಆರೋಪ ಯಾರ ಮೇಲೆ? ಅವರ ಮೇಲೆ ಆರೋಪವಾದರೆ ಇವರಿಗೆ ಯಾರ ಮೇಲೂ ನಂಬಿಕೆ ಇಲ್ಲ ಎಂಬುದನ್ನು ಅದು ತೋರಿಸುತ್ತದೆ ಎಂದು ಟೀಕಿಸಿದರು.

    ಇವರು ಆಸ್ತಿಕರೋ ನಾಸ್ತಿಕರೋ ಗೊತ್ತಿಲ್ಲ. ಆದರೆ, ಸಾವಿರ ಬಾರಿ ಸುಳ್ಳು ಹೇಳಿದರೆ, ಆ ಸುಳ್ಳೇ ಸತ್ಯವಾಗಿ ನಿರೂಪಿತ ಆಗುತ್ತದೆ ಎಂಬ ಮಾತನ್ನು ಗೊಬೆಲ್ ಹೇಳಿದ್ದ. ಬಹುಶಃ ಇವರು ಎಲ್ಲ ದೇವರನ್ನು ಹೊರಹಾಕಿ ಗೊಬೆಲನ್ನು ದೇವರಾಗಿ ಆರಾಧಿಸುವ ಸಾಧ್ಯತೆ ಇದೆ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ

  • ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲು – ರಾಮಲಿಂಗಾರೆಡ್ಡಿ ಸಮರ್ಥನೆ

    ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲು – ರಾಮಲಿಂಗಾರೆಡ್ಡಿ ಸಮರ್ಥನೆ

    – ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಗಲಾಟೆ

    ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ ರವಿ (CT Ravi) ದ್ವೇಷ ಭಾಷಣ ಮಾಡಿದ್ದಕ್ಕೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಎಫ್‌ಐಆರ್ (FIR) ಹಾಕಿರೋದನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.

    ಸಿ.ಟಿ ರವಿ ಮೇಲೆ ಎಫ್‌ಐಆರ್ ಆಗಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ ರವಿ ಅವರ ಮಾತು ಕೇಳಿದ್ದೇನೆ. ತೊಡೆ ಮುರಿಯೋದು, ತಲೆ ತೆಗೆಯೋದು ಅಂತೆಲ್ಲ ಮಾತಾಡಿದ್ದಾರೆ. ರವಿ ಅವರು ಸಚಿವರಾಗಿದ್ದವರು,ಶಾಸಕರು. ಅಂತಹವರ ಬಾಯಿಂದ ಇಂತಹ ಪದ ಬಳಕೆ ಸರಿನಾ? ಜನರೇ ಇದನ್ನ ತೀರ್ಮಾನ ಮಾಡಲಿ. ಹಾಗೆ ದ್ವೇಷ ಭಾಷಣ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಅದರಲ್ಲಿ ತಪ್ಪೇನು ಎಂದು ಎಫ್‌ಐಆರ್ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಸಿ.ಟಿ ರವಿ ಸಂಸ್ಕೃತಿ ಬಗ್ಗೆ ಜನರಿಗೆ ಗೊತ್ತಿದೆ – ಡಿಕೆಶಿ

    ಇದೇ ವೇಳೆ ಸಿಎಂ ಪಾಕಿಸ್ತಾನ ಹೋಗಲಿ ಎಂಬ ವಿಪಕ್ಷ ನಾಯಕ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್ ಹೀಗೆ ಮಾತಾಡೋದು ಸರಿಯಲ್ಲ. ಅವರ ಹೇಳಿಕೆ ವಿಪಕ್ಷ ನಾಯಕನ ಸ್ಥಾನಕ್ಕೆ ಗೌರವ ತರೋದಿಲ್ಲ. ಪ್ರಧಾನಿ ಮೋದಿ ಅವರು ಅಹ್ವಾನ ಇಲ್ಲದೆ ಪಾಕಿಸ್ತಾನಕ್ಕೆ ಹೋದರು, ಯಾಕೆ ಹೋದ್ರು? ಆಪರೇಷನ್ ಸಿಂಧೂರದಲ್ಲಿ ಇಡೀ ದೇಶ ಮೋದಿ ಪರ ಇತ್ತು. ಆದರೆ ಇವರು ರಾತ್ರೋರಾತ್ರಿ ಯುದ್ಧ ನಿಲ್ಲಿಸಿದ್ರು. ಪಾಕಿಸ್ತಾನವನ್ನ ಭೂಪಟದಲ್ಲಿ ಇಲ್ಲದಂತೆ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ? ಅಶೋಕ್ ಹೀಗೆ ಮಾತಾಡೋದು ಸರಿಯಲ್ಲ. ಅಶೋಕ್ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

    ಮುಂದಿನ 10 ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತೆ ಎಂಬ ಅಶೋಕ್ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಬಿಜೆಪಿ ಇನ್ನು 10 ವರ್ಷ ವಿಪಕ್ಷದಲ್ಲೇ ಇರುತ್ತದೆ. ಕೇಂದ್ರದಲ್ಲೂ ಬಿಜೆಪಿ ವಿಪಕ್ಷಕ್ಕೆ ಬರಲಿದೆ. ಬಿಜೆಪಿಯವರಿಗೆ ಅಧಿಕಾರ ಮಾತ್ರ ಮುಖ್ಯ. ನಾವು ಜನರ ಕೆಲಸ ಮಾಡುತ್ತೇವೆ. ಬಿಜೆಪಿ ಅವರು ಧರ್ಮ, ದೇವರ ಹೆಸರಿನಲ್ಲಿ ಮತ ಕೇಳುತ್ತಾರೆ. 10 ವರ್ಷ ಬಿಜೆಪಿ ಅವರು ವಿಪಕ್ಷದಲ್ಲಿ ಇರುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ – ಸಿ.ಟಿ ರವಿ ವಿರುದ್ಧ ಕೇಸ್ ದಾಖಲು

    ಇನ್ನು ಮದ್ದೂರು ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಬೆನ್ನಲ್ಲೇ ಈ ನೆಪ ಇಟ್ಟುಕೊಂಡು ಬಿಜೆಪಿ ಮದ್ದೂರಿನಂತಹ ಘಟನೆಗಳನ್ನ ಮಾಡಿಸುತ್ತಿದ್ದಾರೆ. ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ಮಾಡಿದರು. ಈಗಾಗಲೇ ಕಲ್ಲು ಹೊಡೆದವರ ಮೇಲೆ ಕೇಸ್ ಹಾಕಲಾಗಿದೆ. ಕಾನೂನು ಪ್ರಕಾರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಬಿಜೆಪಿ ಎಲ್ಲಾದರೂ ಇಂತಹ ಘಟನೆ ಆಗಲಿ ಅಂತ ಕಾಯುತ್ತಿರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೀದರ್‌ನಲ್ಲಿ ಧಾರಾಕಾರ ಮಳೆ – ಜನಜೀವನ ಸಂಪೂರ್ಣ ಅಸ್ತವ್ಯಸ್ತ

    ಸ್ವಾತಂತ್ರ‍್ಯ ಮುಂಚೆಯೂ ಕೋಮು ಗಲಭೆಗಳು ಆಗಿತ್ತು. ಈಗ ಮದ್ದೂರಿನಲ್ಲಿ ಬಿಜೆಪಿ ಅವರು ಬೆಂಕಿಗೆ ತುಪ್ಪ ಹಾಕೋ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡೋ ಕೆಲಸ ಮಾಡುತ್ತಿದ್ದಾರೆ. ಕಲ್ಲು ಹೊಡೆದವರ ಮೇಲೆ ಕ್ರಮ ಆಗದೇ ಇದ್ದರೆ ಬಿಜೆಪಿ ಮಾತಾಡಬಹುದಿತ್ತು. ಬಾನು ಮುಷ್ತಾಕ್ ಅವರನ್ನ ದಸರಾಗೆ ಕರೆಯಬಾರದು ಅಂತ ಇಂತಹ ವಿಷಯ ಶುರುವಾಗಿದೆ. 1924ರಲ್ಲಿ ಒಡೆಯರ್ ಅವರು ಮಿರ್ಜಾ ಇಸ್ಮಾಯಿಲ್ ಅವರನ್ನ ಕೂರಿಸಿಕೊಂಡು ದಸರಾ ದಲ್ಲಿ ಭಾಗಿಯಾಗಿದ್ರು. ಆಗ ಮೈಸೂರು, ಮಂಡ್ಯ ಬೆಂಗಳೂರಿನಲ್ಲಿ ಗಲಾಟೆ ಮಾಡಿಸಿದ್ದರು. ಈಗ ಬಾನು ಮುಷ್ತಾಕ್ ನೆಪ ಇಟ್ಟುಕೊಂಡು ಬಿಜೆಪಿ ಗಲಾಟೆ ಮಾಡಿಸುತ್ತಿದ್ದಾರೆ. ಇದು ಖಂಡನೀಯ. ಬಿಜೆಪಿ ಅವರು ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೇಪಾಳದಲ್ಲಿ ಸಿಲುಕಿದೆ ಹೊಸಪೇಟೆಯ ಕುಟುಂಬ

  • ಕಾಂಗ್ರೆಸ್ಸಿನವರೇ ಸಿಕ್ಸ್, ಫೋರ್ ಹೊಡೆದು ಆರ್‌ಸಿಬಿಯನ್ನು ಗೆಲ್ಲಿಸಿದಂತೆ ಅವರಿಗೆ ಆತುರ ಇತ್ತು – ಸಿ.ಟಿ.ರವಿ

    ಕಾಂಗ್ರೆಸ್ಸಿನವರೇ ಸಿಕ್ಸ್, ಫೋರ್ ಹೊಡೆದು ಆರ್‌ಸಿಬಿಯನ್ನು ಗೆಲ್ಲಿಸಿದಂತೆ ಅವರಿಗೆ ಆತುರ ಇತ್ತು – ಸಿ.ಟಿ.ರವಿ

    -ಸಿಎಂ ಬ್ಯಾಟ್ಸ್‌ಮನ್, ಡಿಸಿಎಂ ಬೌಲರ್, ಪರಂ ವಿಕೆಟ್ ಕೀಪರ್ ಎಂದು ವಾಗ್ದಾಳಿ

    ಬೆಂಗಳೂರು: ಕಾಂಗ್ರೆಸ್ಸಿನವರೇ (Congress) ಸಿಕ್ಸ್, ಫೋರ್ ಹೊಡೆದು ಆರ್‌ಸಿಬಿಯನ್ನು ಗೆಲ್ಲಿಸಿದಂತೆ ವಿಜಯೋತ್ಸವದ ವೇಳೆ ಅವರಿಗೆ ಆತುರ ಇತ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಕಿಡಿಕಾರಿದ್ದಾರೆ.

    ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರೇ ಸಿಕ್ಸ್, ಫೋರ್ ಹೊಡೆದು ಗೆಲ್ಲಿಸಿದಂತೆ ಅವರ ಆತುರ ಇತ್ತು. ಡಿಕೆಶಿ ಬೌಲರ್, ಸಿದ್ದರಾಮಯ್ಯನವರೇ ಬ್ಯಾಟ್ಸ್ಮನ್, ಪರಮೇಶ್ವರ್ ವಿಕೆಟ್ ಕೀಪರ್ ಎಂಬಂತೆ ನಿಮ್ಮ ವರ್ತನೆ ಇತ್ತು. ಆರ್‌ಸಿಬಿ ತಂಡದ ಗೆಲುವಿಗೆ ನೀವೇ ಪಾತ್ರಧಾರಿಗಳೆಂಬಂತೆ ನಿಮ್ಮ ವ್ಯವಹಾರ ಇತ್ತು. ನಿಮ್ಮ ಆತುರ, ಕ್ರೆಡಿಟ್ ವಾರ್‌ನಿಂದ 11 ಅಮಾಯಕರು ಬಲಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ

    ಆಗ ಆತುರ ಮಾಡಿ, ಈಗ ಕೋರ್ಟಿಗೆ 2 ತಿಂಗಳು ಬೇಕೆಂದು ಕೇಳುತ್ತಿರುವುದೇಕೆ? ಮಾಹಿತಿಯನ್ನು ರಿ-ರೈಟ್ ಮಾಡಬೇಕೇ? ಯಾವ ಕಾರಣಕ್ಕೆ 2 ತಿಂಗಳು ಕೇಳುತ್ತೀರಿ? 2 ದಿನದಲ್ಲಿ ಕೊಡಿ ಎಂದು ನ್ಯಾಯಾಲಯ ಸರಿಯಾಗಿ ಹೇಳಿದೆ. ಎಲ್ಲವೂ ಸಿದ್ಧವಿರುವಾಗ 2 ದಿನವೂ ಬೇಕಿರಲಿಲ್ಲ. ಈಗ ಕೋರ್ಟಿಗೆ ಉತ್ತರ ನೀಡಲು 2 ತಿಂಗಳು ಕೇಳಿದ್ದು, ಜನಮಾನಸದಿಂದ ಮರೆಯಾಗಲಿ ಎಂಬ ಕಾರಣಕ್ಕೆ ಹೀಗೆ ಕೇಳಿದ್ದಾರಾ? ಇಷ್ಟೇ ತಾಳ್ಮೆಯನ್ನು ಬಳಸಿ 2 ದಿನ ತೆಗೆದುಕೊಂಡಿದ್ದರೆ, ಕಾರ್ಯಕ್ರಮವೂ ಚೆನ್ನಾಗಿ ಆಗುತ್ತಿತ್ತು. ರಾಜ್ಯದ ಮರ್ಯಾದೆಯೂ ಉಳಿಯುತ್ತಿತ್ತು. 11 ಜನರ ಜೀವವೂ ಉಳಿಯುತ್ತಿತ್ತು ಎಂದರು.

    ಆರ್‌ಸಿಬಿ ಫ್ರ್ಯಾಂಚೈಸಿ ಗೆದ್ದ ಕೆಲವೇ ಗಂಟೆಗಳಲ್ಲಿ ಮೈಮೇಲೆ ಬಿದ್ದು ನಾನು ಮುಂದೆ, ನಾನು ಮುಂದೆ ಎಂದು ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮ ಆಯೋಜಿಸಲು ಒಂದು ದಿನವೂ ಸಮಯ ತೆಗೆದುಕೊಂಡಿಲ್ಲ. ಜೂ.3ರಂದು ಕ್ರಿಕೆಟ್ ಮ್ಯಾಚ್ ಇತ್ತು. ಜೂ.4ರಂದು ವಿಜಯೋತ್ಸವ ಮಾಡಿದ್ದಾರೆ. ಆಗ ನೀವು 2 ಗಂಟೆ ಶಾಂತವಾಗಿ ಯೋಚಿಸಿದ್ದರೆ 11 ಅಮಾಯಕ ಯುವ ಪ್ರತಿಭೆಗಳ ಪ್ರಾಣ ಉಳಿಯುತ್ತಿತ್ತಲ್ಲವೇ ಎಂದು ಕೇಳಿದರು.

    ಈಗ ಅಘೋಷಿತ ತುರ್ತು ಪರಿಸ್ಥಿತಿ:
    ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಆಡಳಿತ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷವಾಗಿದೆ. ಆಗ ಪ್ರತಿಭಟಿಸುವ ಹಕ್ಕು ಇರಲಿಲ್ಲ. ಜೂನ್ 25ಕ್ಕೆ ತುರ್ತು ಪರಿಸ್ಥಿತಿಗೆ 50 ವರ್ಷವಾಗಲಿದೆ. ತುರ್ತು ಪರಿಸ್ಥಿತಿ ಗುಂಗಿನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಇದ್ದಂತಿದೆ. ಆಗ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಚಳವಳಿ ಮಾಡುತ್ತಾರೆಂಬ ಬೆದರಿಕೆಗೆ ಕಾಂಗ್ರೆಸ್ ಭಯ ಬಿದ್ದಿದೆ. ಕಾಂಗ್ರೆಸ್ ವೈಫಲ್ಯಕ್ಕೆ ಜನರು ನುಗ್ಗಿ ಬಡಿಯುವ ದಿನ ದೂರವಿಲ್ಲ, ಜನರೇ ಬೀದಿಗೆ ಇಳಿದರೆ ಏನಾದೀತು ಎಂದು ಎಚ್ಚರಿಸಿದರು.

    ಮುಡಾ ಹಗರಣದ ಬಗ್ಗೆ ಇಡಿಗೆ ಸ್ಪಷ್ಟ ಪುರಾವೆ ಸಿಕ್ಕಿರುವ ಕುರಿತು ಮಾತನಾಡಿದ ಅವರು, ಮುಡಾದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸ್ಪಷ್ಟ ಪುರಾವೆ ಜಾರಿ ನಿರ್ದೇಶನಾಲಯದ (ಇಡಿ) ಕೈಗೆ ಸಿಕ್ಕಿದೆ. ಈಗ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ? ಮುಡಾದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಾರಾ? ಅಥವಾ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡು ತಮ್ಮ ಜವಾಬ್ದಾರಿ ಹೊತ್ತುಕೊಳ್ಳುವರೇ? ಇ.ಡಿ 99 ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರೆ, ಅಲ್ಲಿಗೆ ಭ್ರಷ್ಟಾಚಾರ ನಡೆದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿದೆ ಎಂದು ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಉಳಿದೆಲ್ಲರಿಗೂ ನೈತಿಕತೆಯ ಪಾಠ ಹೇಳುವ ಮುಖ್ಯಮಂತ್ರಿಗಳು ಈಗ ನೈತಿಕತೆಯ ಪಾಠವನ್ನು ತಮಗೂ ಅನ್ವಯ ಮಾಡಿಕೊಳ್ಳಬೇಕಿದೆ. ತಪ್ಪಿತಸ್ಥರ ಮೇಲೆ ಕ್ರಮ ಆಗಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಸರ್ಕಾರದ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ – ಸಿದ್ದರಾಮಯ್ಯ

  • ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ: ಸಿ.ಟಿ.ರವಿ

    ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ: ಸಿ.ಟಿ.ರವಿ

    ಬೆಂಗಳೂರು: ಕೇವಲ ರಾಜಕೀಯ ಲಾಭಕ್ಕೆ ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ. ಇದನ್ನು ಕಾಂಗ್ರೆಸ್ (Congress) ಮುಂದುವರಿಸಿದೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿರೋರು ದೇಶ ಪ್ರೇಮಿಗಳಾ? ರೈತರ ಅಥವಾ ಕನ್ನಡ ಪ್ರೇಮಿಗಳಾ? ಅವರು ಮತಾಂಧರು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 430ನೇ ಜನ್ಮದಿನ ಸಂಭ್ರಮ – ನೂರಾರು ಕಲಾವಿದರಿಂದ ನಾದಹಾರ ಸೇವೆ

    ತಮ್ಮ ಮತೀಯ ವಿಚಾರಕ್ಕಾಗಿ ಸಣ್ಣಸಣ್ಣ ವಿಷಯಕ್ಕೂ ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್‌ಗಳು ಪೋಲೀಸ್ ಠಾಣೆ ಮೇಲೆ ಬೆಂಕಿ ಹಾಕಲು ಬರುತ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡುತ್ತಾರೆ. ಅವರ ಕೇಸ್ ವಾಪಸ್ ತೆಗೆದುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇವರಿಗೆ ಯಾವುದರಲ್ಲಿ ಹೊಡಿಬೇಕು. ಇವರ ರಾಜನೀತಿಗೆ ಯಾವುದರಲ್ಲಿ ಹೊಡಿಬೇಕು. ಶಬ್ದಗಳಿಂದ ಖಂಡಿಸಿದರೆ ಸಾಕಾಗೋದಿಲ್ಲ. ಜನ ಮುಖಕ್ಕೆ ಮಂಗಳಾರತಿ ಮಾಡಬೇಕು. ಕ್ಯಾಕರಿಸಿ ಉಗಿಬೇಕು, ಇವರ ಕೆಟ್ಟ ಮನಸ್ಥಿತಿಯ ರಾಜಕಾರಣಕ್ಕೆ ನಿದರ್ಶನ ಇದು ಎಂದು ಕೆಂಡಕಾರಿದರು. ಇದನ್ನೂ ಓದಿ: ಸನಾತನ ಧರ್ಮದ ಕುರಿತ ಹೇಳಿಕೆ – ಉದಯನಿಧಿ ಸ್ಟಾಲಿನ್ ವಿರುದ್ಧ ಕೋರ್ಟ್ ಅನುಮತಿಯಿಲ್ಲದೇ ದೂರು ದಾಖಲಿಸುವಂತಿಲ್ಲ: ಸುಪ್ರೀಂ

  • ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಲಕ್ಷಾಂತರ ಕಾರ್ಯಕರ್ತರಿಗೆ ದುಃಖ ಉಂಟು ಮಾಡಿದೆ: ಸಿ.ಟಿ.ರವಿ

    ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಲಕ್ಷಾಂತರ ಕಾರ್ಯಕರ್ತರಿಗೆ ದುಃಖ ಉಂಟು ಮಾಡಿದೆ: ಸಿ.ಟಿ.ರವಿ

    ಬೆಂಗಳೂರು : ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟಕ್ಕೆ ಸ್ವಪಕ್ಷದವರೇ ಈಗ ತಿರುಗಿ ಬಿದ್ದಿದ್ದಾರೆ. ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪರಿಷತ್‌ ಸದಸ್ಯ ಸಿಟಿ ರವಿ (CT Ravi) ಬಿಜೆಪಿಯಲ್ಲಿ (BJP) ಕಿತ್ತಾಟಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

    ಬಿಜೆಪಿ ರೆಬಲ್ಸ್ ಗಳಿಂದ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿರುವ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಲಕ್ಷಾಂತರ ಕಾರ್ಯಕರ್ತರಿಗೆ ನನ್ನನ್ನು ಸೇರಿ ದುಃಖ ತಂದಿದೆ. ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಆಲೋಚನೆ ಮಾಡುವ ಅವಶ್ಯಕತೆ ಇದೆ. ಎಷ್ಟೋ ಜನ ತಮ್ಮ ಜೀವನವನ್ನು ಕೊಟ್ಟು, ಮನೆ ಮಠ ಹಾಳು ಮಾಡಿಕೊಂಡು ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ.ಅಧಿಕಾರ ಮರಿಚಿಕೆಯಾಗಿದ್ದ ಕಾಲದಲ್ಲಿ ದುಡಿದ್ದಾರೆ. ಕಾಂಗ್ರೆಸ್ ಇವತ್ತು ಜನ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ನಿತ್ಯ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾವು ತಪ್ಪಿದ್ದಿಲ್ಲ. ಕಳಪೆ ಔಷಧಿ ಕಾರಣಕ್ಕೆ ಬಾಣಂತಿಯರು, ಮಕ್ಕಳು ಸಾಯ್ತಿದ್ದಾರೆ. ಅಭಿವೃದ್ಧಿ ನಿಂತ ಸ್ಥಿತಿಯಲ್ಲಿ ನಿಂತಿದೆ. ಆಡಳಿತ ಪಕ್ಷದವರಿಗೆ ಅಸಹನೆ ನಿರ್ಮಾಣ ಮಾಡಿದೆ. ನಾವು ಇಂತಹ ಸಮಯದಲ್ಲಿ ಜನರ ಪರವಾಗಿ ಹೋರಾಟ ಮಾಡಬೇಕು.ನಮ್ಮ ಕರ್ತವ್ಯ ಜನರ ಪರ ಹೋರಾಟ ಮಾಡೋದಾಗಿತ್ತು. ಆದರೆ ನಾವು ಮಾಡ್ತಿಲ್ಲ ಅಂತ ಆಕ್ರೋಶ ಹೊರ ಹಾಕಿದರು.

    ನಮ್ಮ ಪಕ್ಷದ ಬೆಳವಣಿಗೆ ನನಗೆ ಸಮಾಧಾನ ತಂದಿಲ್ಲ. ಪಕ್ಷಕ್ಕೆ ಮಾಲೀಕರು ಪಕ್ಷದ ಸಾಮಾನ್ಯ ಕಾರ್ಯಕರ್ತರು. ಅವರಿಗೆ ನೋವಾಗುವಂತೆ,ಅವರಿಗೆ ದುಃಖ ತರುವಂತೆ ನಾವು ನಡೆದುಕೊಳ್ಳಬಾರದು. ಜನಹಿತ ಮರೆತು ರಾಜಕಾರಣ ಮಾಡಬಾರದು. ಜನಪರವಾದ ಹೋರಾಟ ಮಾಡದೇ ಹೋದರೆ ನಾವು ಕಳೆದು ಹೋಗುತ್ತೇವೆ. ಪಕ್ಷಕ್ಕೂ ನಷ್ಟ ಆಗುತ್ತದೆ ಅಂತ ಅಸಮಾಧಾನ ಹೊರ ಹಾಕಿದರು.  ಇದನ್ನೂ ಓದಿ: ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ವಿಜಯೇಂದ್ರ ಬದಲಾವಣೆಗೆ ರೆಬಲ್ಸ್ ಗಳ ಪಟ್ಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಹೊರಗೆ ಮಾತನಾಡುವುದಿಲ್ಲ. ನಮಗೆ ಹೇಳುವ ಜಾಗ ಇವೆ ಹೇಳಿದ್ದೇವೆ‌. ಹೇಳುವ ವ್ಯಕ್ತಿಗಳ ಹತ್ರ ಹೇಳಿದ್ದೇವೆ. ಪಕ್ಷದ ಬಗ್ಗೆ ಗೌರವ ಇದೆ. ನಮಗೆ ಎರಡನೇ ಆಯ್ಕೆ ಇಲ್ಲ. ಸೈದ್ಧಾಂತಿಕ ಕಾರಣಕ್ಕೆ ನಾವು ಬಿಜೆಪಿ ಆಯ್ಕೆ ಮಾಡಿಕೊಂಡಿದ್ದೇವೆ. 36 ವರ್ಷಗಳ ಹಿಂದೆ ಆಯ್ಕೆ ಮಾಡಿಕೊಂಡಿದ್ದು. ನಮಗೆ ಎರಡನೇ ಆಯ್ಕೆ ಇಲ್ಲ. ಸುಖ ದುಃಖದಲ್ಲೂ ಪಕ್ಷದ ಜೊತೆ ಇರುತ್ತೇವೆ. ಪಕ್ಷ ಸರಿ ಮಾಡಲು ಪ್ರಾಮಾಣಿಕ ಪ್ರಯತ್ನ ನಮ್ಮ ಕಡೆಯಿಂದ ಮಾಡುತ್ತೇವೆ. ಹೈಕಮಾಂಡ್ ಮನಸಿನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ ಅಂತ ತಿಳಿಸಿದರು.

     

    ವಿಜಯೇಂದ್ರ ಹಿರಿಯರನ್ನ ಕಡೆ ಕಣಿಸುತ್ತಿದ್ದಾರೆ ಎಂಬ ರಮೇಶ್ ಜಾರಕಿಹೋಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದನ್ನೂ ಸಾರ್ವಜನಿಕವಾಗಿ ಕಾಮೆಂಟ್ ಮಾಡೋಕೆ ಬಯಸೊಲ್ಲ. ಸಾಮಾನ್ಯ ಕಾರ್ಯಕರ್ತ ಆಗಿದ್ದ ನನಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಕ್ಷ ಮಾಡಿದೆ. ಕೆಲವು ಕಾಲ ನಾವು ನೇಪಥ್ಯಕ್ಕೆ ಸರಿದಿದ್ದೇವೆ ಅಂದರೆ ಶಾಶ್ವತವಾಗಿ ನೇಪಥ್ಯಕ್ಕೆ ಸರಿದ್ದೇವೆ ಅಂತ ಅಲ್ಲ. ಸಂಕಷ್ಟವೂ ಕೂಡಾ ನಮ್ಮ ಸಾಮರ್ಥ್ಯ ಹೆಚ್ಚು ಮಾಡಲು ಬರುತ್ತದೆ. ನಮ್ಮ ಆತ್ಮ ವಿಶ್ವಾಸ ಪರೀಕ್ಷೆ ಮಾಡೋಕೆ ಸಂಕಷ್ಟ ಬರುತ್ತದೆ. ನನ್ನ ಜೀವನದಲ್ಲಿ ಬರುವ ಸಂಕಷ್ಟಗಳನ್ನ ನನ್ನ ಸಾಮರ್ಥ್ಯ ಹೆಚ್ಚಳಕ್ಕೆ ಬರುತ್ತದೆ ಅಂತ ನನ್ನ ಭಾವನೆ. ಸಂಕಷ್ಟ ಕಾಲದಲ್ಲಿ ಹಿಂದೆ ಹೆಜ್ಜೆ ಇಟ್ಟಿಲ್ಲ. ಸಂಕಷ್ಟ ಕಾಲ ಹೀಗೆ ಇರೊಲ್ಲ ಅಂತ ಭಗವದ್ಗೀತೆಯಲ್ಲಿ ಹೇಳಿದೆ. ಕಾಲ ಹೀಗೆ ಇರುವುದಿಲ್ಲ.. ಕಾಲ ಸರಿಬೇಕು ನೋಡೋಣ ಅಂತ ಮಾರ್ಮಿಕವಾಗಿ ಮಾತನಾಡಿದರು.

  • ಹೆಬ್ಬಾಳ್ಕರ್‌ಗೆ ನಿಂದನೆ – ಸಿಟಿ ರವಿಗೆ ತಾತ್ಕಾಲಿಕ ರಿಲೀಫ್‌

    ಹೆಬ್ಬಾಳ್ಕರ್‌ಗೆ ನಿಂದನೆ – ಸಿಟಿ ರವಿಗೆ ತಾತ್ಕಾಲಿಕ ರಿಲೀಫ್‌

    ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಬಿಜೆಪಿ ಪರಿಷತ್‌ ಸದಸ್ಯ ಸಿಟಿ ರವಿ (CT Ravi) ಅವರಿಗೆ ಹೈಕೋರ್ಟ್‌ (High Court) ತಾತ್ಕಾಲಿಕ ರಿಲೀಫ್‌ ನೀಡಿದೆ.

    ಎಫ್‌ಐಆರ್‌ ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಿತು. ತನಿಖೆಯ ವ್ಯಾಪ್ತಿಯ ಪ್ರಶ್ನೆಯನ್ನು ತೀರ್ಮಾನಿಸಬೇಕಿದೆ ಎಂದು ಅಭಿಪ್ರಾಯಪಟ್ಟು ಫೆ.20 ರವರೆಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿ ನೀಡಿ ದೂರುದಾರೆ ಲಕ್ಷ್ಮಿ ಹೆಬ್ಬಾಳ್ಕರ್ ನೋಟಿಸ್‌ ಜಾರಿ ಮಾಡಿದೆ. ಇದನ್ನೂ ಓದಿ: ಬಿಗ್‌ ಬಾಸ್‌ ವಿನ್ನರ್‌ ಹನುಮಂತಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

    ಸಿಟಿ ರವಿ ಪರ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ, ಸದನದೊಳಗೆ ಭೀತಿರಹಿತವಾಗಿ ಮಾತನಾಡಲು ಅವಕಾಶವಿದೆ. ಮಾನನಷ್ಟ ಪ್ರಕರಣದ ಭೀತಿಯಿಲ್ಲದೇ ಚರ್ಚೆ ನಡೆಸಬಹುದು. ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಮಾತುಗಳಿದ್ದರೂ ಸಭಾಪತಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.

    ಎಸ್‌ಪಿಪಿ ಬಿ.ಎ.ಬೆಳ್ಳಿಯಪ್ಪ ಅವರು,ರವಿ ಅವರ ಧ್ವನಿ ಮಾದರಿ ಪಡೆಯಲು ಅವಕಾಶ ನೀಡಬೇಕೆಂದು. ಸದನದ ವ್ಯಾಪ್ತಿಯ ಚರ್ಚೆಗೆ ಮಾತ್ರ ಕ್ರಮದಿಂದ ವಿನಾಯಿತಿ ಇದೆ. ಟೇಬಲ್ ಮುರಿದು ದಾಂಧಲೆ, ಅಶ್ಲೀಲ ಪದ ಬಳಕೆಗೆ ವಿನಾಯಿತಿ ಇಲ್ಲ ಎಂದು ವಾದಿಸಿದರು.