Tag: ಸಿಟಾಡೆಲ್ ವೆಬ್ ಸಿರೀಸ್

  • ಪ್ರಿಯಾಂಕಾ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಪ್ರಿಯಾಂಕಾ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಈ ನಟಿ, ರಕ್ತ ಸಿಕ್ತ ಆಗಿರುವ ಮುಖದ ಫೋಟೋ ಶೇರ್‌ ಮಾಡಿದ್ದು, ಫೋಟೋ ನೋಡಿ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಬ್ಯೂಟಿ ಜತೆ ಪ್ರತಿಭೆ ಇರುವ ನಟಿ ಪ್ರಿಯಾಂಕ ಚೋಪ್ರಾ, ಸದ್ಯ ಹಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ದೈನಂದಿನ ಬದುಕಿನ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುವ ನಟಿ ಪ್ರಿಯಾಂಕಾ, ಇದೀಗ ಅವರು ಹಂಚಿಕೊಂಡಿರುವ ಫೋಟೋವೊಂದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

    ಹಾಲಿವುಡ್‌ನ `ಸಿಟಾಡೆಲ್’ ಚಿತ್ರೀಕರಣದಲ್ಲಿರುವ ನಟಿ ಪ್ರಿಯಾಂಕ, ಶೂಟಿಂಗ್ ಸೆಟ್‌ನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಿಯಾಂಕಾ ಮುಖಕ್ಕೆ ಏಟು ಬಿದ್ದಂತಿದೆ ಜತೆಗೆ ರಕ್ತಸಿಕ್ತವಾಗಿದೆ. `ನಿಮಗೂ ಇದು ಕಠಿಣ ದಿನವಾಗಿದೆಯೇ’ ಎಂದು ಕ್ಯಾಷ್ಯನ್ ನೀಡಿದ್ದಾರೆ. ಹಾಗೆಯೇ ಹ್ಯಾಶ್ ಟ್ಯಾಗ್‌ನಲ್ಲಿ ಕಲಾವಿದರ ಜೀವನ, `ಸಿಟಾಡೆಲ್’ ಎಂದು ಬರೆದುಕೊಂಡಿದ್ದಾರೆ. ಒಟ್ನಲ್ಲಿ ನೆಚ್ಚಿನ ನಟಿಯ ಮುಖ ನೋಡಿ ನಿಜವಾಗಲೂ ಪ್ರಿಯಾಂಕಾಗೆ ಏನೋ ಆಗಿದೆ ಎಂದು ಆತಂಕಗೊಂಡಿದ್ದಾರೆ. ಜತೆಗೆ ನಟಿಯ ಯೋಗಕ್ಷೇಮ ವಿಚಾರಿಸಿದ್ದಾರೆ.

     

    View this post on Instagram

     

    A post shared by Priyanka (@priyankachopra)

    `ಸಿಟಾಡೆಲ್’ ಇದೊಂದು ಸೈನ್ಸ್ ಫಿಕ್ಷನ್ ಸೀರೀಸ್ ಆಗಿದ್ದು, ರಿಚರ್ಡ್ ಮ್ಯಾಡೆನ್ ಜತೆ ಪ್ರಿಯಾಂಕಾ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿಯ ಸಾಲು ಸಾಲು ಸಿನಿಮಾಗಳ ಜತೆಗೆ ಬಾಲಿವುಡ್‌ಗೆ ಪ್ರಿಯಾಂಕಾ ಕಮ್ ಬ್ಯಾಕ್ ಆಗುತ್ತಿದ್ದಾರೆ.

  • ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ಬಾಲಿವುಡ್ ನ ಖ್ಯಾತ ನಟ ವರುಣ್ ದವನ್ ಜತೆ ಇದೇ ಮೊದಲ ಬಾರಿಗೆ ಸಮಂತಾ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಿನವೂ ನೆಟ್ಟಿಗರ ಪ್ರಶ್ನೆಗೆ ಬೇಸತ್ತು ಹೋಗಿರುವ ಈ ಚೆಲುವೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಒಂದರ ಮೇಲೊಂದು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಲವು ದಿವಸಗಳ ಹಿಂದೆ ಸಮಂತಾ ಮತ್ತೆ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜತೆ ಕೆಲಸ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಅದು ಈಗ ನಿಜವೂ ಆಗಿದೆ. ಅತೀ ಶೀಘ್ರದಲ್ಲೇ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರಾದ ರಾಜ್ ಮತ್ತು ಡಿಕೆ  ಅವರ ಹೊಸ ವೆಬ್ ಸರಣಿಯ ಚಿತ್ರೀಕರಣದಲ್ಲೂ ಸಮಂತಾ ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್

    ಈ ವೆಬ್ ಸರಣಿಗೆ ಹೀರೋ ಆಗಿ ವರುಣ್ ದವನ್ ಆಯ್ಕೆಯಾಗಿದ್ದರೆ, ಸಮಂತಾ ಅವರದ್ದು ಪ್ರಮುಖ ಪಾತ್ರ. ಈ ವೆಬ್ ಸರಣಿಗೆ ‘ಸಿಟಾಡೆಲ್’ ಎಂದು ಹೆಸರಿಡಲಾಗಿದೆ. ಇದೇ ಮೊದಲ ಬಾರಿಗೆ ವರುಣ್ ದವನ್ ಮತ್ತು ಸಮಂತಾ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಹಾಗಾಗಿಯೇ ಮೊನ್ನೆಯಷ್ಟೇ ಮುಂಬೈನಲ್ಲಿ ಸಮಂತಾ ಮತ್ತು ವರುಣ್ ಕೂಡ ಭೇಟಿಯಾಗಿದ್ದಾರೆ. ಸ್ವತಃ ಸಮಂತಾ ಅವರನ್ನು ವರುಣ್ ಕಾರಿನವರೆಗೂ ಬಿಟ್ಟು ಬಂದು ಒಲವು ತೋರಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    ಈ ವೆಬ್ ಸರಣಿಯ ಚಿತ್ರೀಕರಣ ಮುಂದಿನ ತಿಂಗಳಿಂದ ಶುರುವಾಗಲಿದ್ದು, ಮೊದಲು ಮುಂಬೈನಲ್ಲಿಯೇ ಶೂಟ್ ಮಾಡಲಿದೆಯಂತೆ ಚಿತ್ರತಂಡ. ಆನಂತರ  ಯುರೋಪ್ ಭಾಗಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಕೂಡ ಹಾಕಿಕೊಂಡಿದೆ. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

    ಇದೊಂದು ಸಾಹಸಮಯ ವೆಬ್ ಸೀರಿಸ್ ಆಗಿದ್ದು, ದವನ್ ಅವರಿಗೆ ಹೇರಳಾಗಿ ಸಾಹಸ ದೃಶ್ಯಗಳು ಇವೆಯಂತೆ. ಹಾಗಾಗಿಯೇ ಅವರು ಮಾರ್ಷಲ್ ಆರ್ಟ್ ಕೂಡ ಕಲಿಯುತ್ತಿದ್ದಾರಂತೆ.