Tag: ಸಿಖಂದರ್‌ ರಝಾ

  • ಸಂಜು ಅಮೋಘ ಫಿಫ್ಟಿ, ಶಿವಂ ದುಬೆ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ; 4-1ರಲ್ಲಿ ಸರಣಿ ಗೆದ್ದ ಭಾರತ!

    ಸಂಜು ಅಮೋಘ ಫಿಫ್ಟಿ, ಶಿವಂ ದುಬೆ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ; 4-1ರಲ್ಲಿ ಸರಣಿ ಗೆದ್ದ ಭಾರತ!

    ಹರಾರೆ: ಸಂಜು ಸ್ಯಾಮ್ಸನ್ (Sanju Samson)​ ಅಮೋಘ ಅರ್ಧ ಶತಕ, ಶಿವಂ ದುಬೆ ಆಲ್‌ರೌಂಡ್‌ ಆಟ ಹಾಗೂ ಮುಕೇಶ್‌ ಕುಮಾರ್‌ ಮಾರಕ ಬೌಲಿಂಗ್‌ ದಾಳಿಯಿಂದ ಭಾರತ ತಂಡ (Team India) ಜಿಂಬಾಬ್ವೆ ವಿರುದ್ಧ ಟಿ20 ಸರಣಿಯ 5ನೇ ಪಂದ್ಯದಲ್ಲೂ 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಗೆದ್ದುಕೊಂಡಿದೆ.

    ಆರಂಭಿಕ ಪಂದ್ಯದಲ್ಲಿ ಅತ್ಯಲ್ಪ ಮೊತ್ತವಿದ್ದರೂ ಅಚ್ಚರಿ ಸೋಲು ಕಂಡಿದ್ದ ಯುವ ಬಳಗದ ಭಾರತ ತಂಡ ಬಳಿಕ ಸತತ ನಾಲ್ಕೂ ಪಂದ್ಯಗಳಲ್ಲೂ ಭರ್ಜರಿ ಗೆಲುವಿನೊಂದಿಗೆ ಸರಣಿ ತನ್ನದಾಗಿಸಿಕೊಂಡಿದೆ. ಅಲ್ಲದೇ ತನ್ನ ನಾಯಕತ್ವದಲ್ಲಿ ನಡೆದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಗೆಲುವು ಸಾಧಿಸುವ ಮೂಲಕ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

    ಭಾನುವಾರ ಹರಾರೆ ಸ್ಪೋರ್ಟ್ಸ್‌ಕ್ಲಬ್‌ ಮೈದಾನದಲ್ಲಿ ನಡೆದ ಕೊನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 6 ವಿಕೆಟ್‌ ನಷ್ಟಕ್ಕೆ 167 ರನ್‌ ಬಾರಿಸಿತ್ತು. 168 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಜಿಂಬಾಬ್ವೆ (Zimbabwe), ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ 18.3 ಓವರ್‌ಗಳಲ್ಲೇ 125 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

    ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಗಿದ್ದ ಭಾರತ ತಂಡಕ್ಕೆ ಆಘಾತ ಎದುರಾಗಿತ್ತು. ಮೊದಲ ಐದು ಓವರ್‌ಗಳಲ್ಲೇ 40 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾಯಿತು. 56 ಎಸೆತಗಳಲ್ಲಿ ಈ ಜೋಡಿ 4ನೇ ವಿಕೆಟ್‌ಗೆ 65 ರನ್‌ ಬಾರಿಸಿತ್ತು. ಈ ವೇಳೆ ಸಿಕ್ಸರ್‌ ಬಾರಿಸಲು ಮುಂದಾದ ರಿಯಾನ್‌ ಪರಾಗ್‌ ಕ್ಯಾಚ್‌ ನೀಡಿ ಔಟಾದರು. ಬಳಿಕ ಕ್ರೀಸ್‌ಗಿಳಿದ ಶಿವಂ ದುಬೆ (Shivam Dube) ಆರಂಭದಿಂದಲೇ ಸಿಕ್ಸರ್‌, ಬೌಂಡರಿ ಅಬ್ಬರಿಸಲು ಶುರು ಮಾಡಿದರು. ಇದರಿಂದ ಭಾರತ ತಂಡ 160 ರನ್‌ ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಸಂಜು 110 ಮೀಟರ್‌ ಸಿಕ್ಸರ್‌:
    ಸಂಕಷ್ಟ ಸಮಯದಲ್ಲಿ ಉತ್ತಮ ಇನ್ನಿಂಗ್ಸ್‌ ಕಟ್ಟಿದ ಸಂಜು ಸ್ಯಾಮ್ಸನ್‌ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ನೊಂದಿಗೆ 58 ರನ್‌ ಚಚ್ಚಿದರು. ಈ ವೇಳೆ ಸಂಜು ಸ್ಯಾಮ್ಸನ್‌ ಬಾರಿಸಿದ ಸಿಕ್ಸರ್‌ವೊಂದು 110 ಮೀಟರ್‌ ಸಾಗಿತು. ಸಂಜು ಸಿಡಿಲಬ್ಬರದ ಸಿಕ್ಸರ್‌ ಕಂಡು ಪ್ರೇಕ್ಷಕರೇ ದಂಗಾದರು. ಇದರೊಂದಿಗೆ ಶಿವಂ ದುಬೆ 28 ರನ್‌ (12 ಎಸೆತ, 2 ಸಿಕ್ಸರ್‌, 2 ಬೌಂಡರಿ), ರಿಯಾನ್‌ ಪರಾಗ್‌ 22 ರನ್‌, ಯಶಸ್ವಿ ಜೈಸ್ವಾಲ್‌ 12 ರನ್‌, ಶುಭಮನ್‌ ಗಿಲ್‌ 13 ರನ್‌, ಅಭಿಷೇಕ್‌ ಶರ್ಮಾ 14 ರನ್‌, ರಿಂಕು ಸಿಂಗ್‌ 11 ರನ್‌, ವಾಷಿಂಗ್ಟನ್‌ 10 ರನ್‌ಗಳ ಕೊಡುಗೆ ನೀಡಿದರು.  ಇದನ್ನೂ ಓದಿ: ಮುಸ್ಲಿಂ ಮಹಿಳೆ ವಿಚ್ಚೇದನ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ತೀರ್ಪು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದ ಮುಸ್ಲಿಂ ಬೋರ್ಡ್‌

    ಮುಕೇಶ್‌ ಮಾರಕ ದಾಳಿ:
    ಭಾರತ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಜಿಂಬಾಬ್ವೆ 15 ರನ್​ಗೆ 2 ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಬಳಿಕ ಡಿಯೋನ್​ ಮೈರ್ಸ್​ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಲ್ಲದೇ ಕೊನೆಯಲ್ಲಿ ಫರಾಜ್ ಅಕ್ರಮ್ 27 ರನ್ ಬಾರಿಸಿದರು. ಮರುಮಣಿ 27 ರನ್ ಕೊಡುಗೆ ನೀಡಿದ್ದು ಬಿಟ್ಟರೆ ಉಳಿದ ಯಾರೊಬ್ಬರೂ ಕ್ರೀಸ್‌ನಲ್ಲಿ ನೆಲೆಯೂರದ ಕಾರಣ ಜಿಂಬಾಬ್ವೆ ಕೊನೇ ಪಂದ್ಯದಲ್ಲೂ ಹೀನಾಯ ಸೋಲಿಗೆ ತುತ್ತಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಮುಕೇಶ್ ಕುಮಾರ್​ 3.3 ಓವರ್‌ಗಳಲ್ಲಿ 22 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರೆ ಶಿವಂ ದುಬೆ 2 ವಿಕೆಟ್ ಪಡೆದರು. ಇದರೊಂದಿಗೆ ತುಷಾರ್‌ ದೇಶ್‌ಪಾಂಡೆ, ವಾಷಿಂಗ್ಟನ್‌ ಸುಂದರ್‌, ಅಭಿಷೇಕ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: AR Wedding Celebrations: ಉದ್ಯಮಿ ಅಂತ ಹೇಳ್ಕೊಂಡು ಆಹ್ವಾನವಿಲ್ಲದೇ ಬಂದಿದ್ದ ಇಬ್ಬರ ವಿರುದ್ಧ ಕೇಸ್‌! 

  • ಯಶಸ್ವಿ ಕೈ ತಪ್ಪಿದ ಚೊಚ್ಚಲ T20I ಶತಕ – 10 ವಿಕೆಟ್‌ ಜಯದೊಂದಿಗೆ ಸರಣಿ ಗೆದ್ದ ಭಾರತ!

    ಯಶಸ್ವಿ ಕೈ ತಪ್ಪಿದ ಚೊಚ್ಚಲ T20I ಶತಕ – 10 ವಿಕೆಟ್‌ ಜಯದೊಂದಿಗೆ ಸರಣಿ ಗೆದ್ದ ಭಾರತ!

    ಹರಾರೆ: ಯಶಸ್ವಿ ಜೈಸ್ವಾಲ್‌ (Yashasvi Jaiswal), ನಾಯಕ ಶುಭಮನ್‌ ಗಿಲ್‌ (Shubman Gill) ಅವರ ಶತಕದ ಜೊತೆಯಾಟದಿಂದ ಜಿಂಬಾಬ್ವೆ ವಿರುದ್ಧ ಭಾರತ 10 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಸರಣಿ ಗೆದ್ದುಕೊಂಡಿದೆ.

    ಇಲ್ಲಿನ ಹರಾರೆ ಸ್ಫೋರ್ಟ್ಸ್‌ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಜಿಂಬಾಬ್ವೆಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ (Zimbabwe) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. 153 ರನ್‌ ಗುರಿ ಪಡೆದ ಭಾರತ 15.2 ಓವರ್‌ಗಳಲ್ಲೇ 156 ರನ್‌ ಚಚ್ಚಿ ಗೆಲುವು ಸಾಧಿಸಿತು.

    153 ಗುರಿ ಪಡೆದ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಎದುರಾಳಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಇದರೊಂದಿಗೆ ನಾಯಕ ಶುಭಮನ್‌ ಗಿಲ್‌ ಸಹ ಬ್ಯಾಟಿಂಗ್‌ ಸಾಥ್‌ ನೀಡಿದರು. ಮುರಿಯದ ಮೊದಲ ವಿಕೆಟ್‌ಗೆ ಈ ಜೋಡಿ 15.2 ಓವರ್‌ಗಳಲ್ಲಿ 156 ರನ್‌ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿತು.

    ಕೈತಪ್ಪಿದ ಯಶಸ್ವಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ:
    ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಗಿದ್ದ ಯಶಸ್ವಿ ಜೈಸ್ವಾಲ್‌ 29 ಎಸೆತಗಳಲ್ಲೇ ಸ್ಫೋಟಕ ಫಿಫ್ಟಿ ಬಾರಿಸಿದ್ದರು. ಬಳಿಕವೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ಮುಂದುವರಿಸಿ 53 ಎಸೆತಗಳಲ್ಲಿ 93 ರನ್‌ (2 ಸಿಕ್ಸರ್‌, 13 ಬೌಂಡರಿ) ಗಳಿಸಿ ಅಜೇಯರಾಗುಳಿದರು. ಈ ವೇಳೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸುವ ಸನಿಹದಲ್ಲಿದ್ದ ಯಶಸ್ವಿ ಜೈಸ್ವಾಲ್‌ ಶತಕ ವಂಚಿತರಾದರು. ಮತ್ತೊಂದೆಡೆ ತಾಳ್ಮೆಯ ಬ್ಯಾಟಿಂಗ್‌ನೊಂದಿಗೆ ಸಾಥ್‌ ನೀಡಿದ ನಾಯಕ ಶುಭಮನ್‌ ಗಿಲ್‌ 39 ಎಸೆತಗಳಲ್ಲಿ 58 ರನ್‌ (6 ಬೌಂಡರಿ), 2 ಸಿಕ್ಸರ್)‌ ಗಳಿಸಿ ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಜಿಂಬಾಬ್ವೆ ಪರ ನಾಯಕ ಸಿಖಂದರ್‌ ರಝಾ 28 ಎಸೆತಗಳ್ಲಲಿ ಸ್ಫೋಟಕ 46 ರನ್‌ (3 ಸಿಕ್ಸರ್, 2 ಬೌಂಡರಿ)‌ ಬಾರಿಸಿದರೆ, ಆರಂಭಿಕರಾದ ವೆಸ್ಲಿ ಮಾಧೆವೆರೆ 25 ರನ್‌, ತಡಿವಾನಾಶೆ ಮರುಮಣಿ 32 ರನ್‌ಗಳ ಕೊಡುಗೆ ನೀಡಿದರು. ಇದರೊಂದಿಗೆ ಜಿಂಬಾಬ್ವೆ 152 ರನ್‌ ಕಲೆಹಾಕಿತ್ತು.

    ಟೀಂ ಇಂಡಿಯಾ ಪರ ಖಲೀಲ್‌ ಅಹ್ಮದ್‌ 2 ವಿಕೆಟ್‌ ಕಿತ್ತರೆ, ತುಷಾರ್‌ ದೇಶ್‌ಪಾಂಡೆ, ವಾಷಿಂಗ್ಟನ್‌ ಸುಂದರ್‌, ಅಭಿಷೇಕ್‌ ಶರ್ಮಾ, ಶಿವಂ ದುಬೆ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • 134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌ – ಭಾರತಕ್ಕೆ ಜಯದ ʻಅಭಿಷೇಕʼ

    134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌ – ಭಾರತಕ್ಕೆ ಜಯದ ʻಅಭಿಷೇಕʼ

    ಹರಾರೆ: ಅಭಿಷೇಕ್‌ ಶರ್ಮಾ (Abhishek Sharma) ಸ್ಫೋಟಕ ಶತಕ, ರುತುರಾಜ್‌ ಗಾಯಕ್ವಾಡ್‌ , ರಿಂಕು ಸಿಂಗ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು (Team India) ಜಿಂಬಾಬ್ವೆ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಇಲ್ಲಿನ ಹರಾರೆ ಸ್ಫೋರ್ಟ್‌ ಕ್ಲಬ್‌ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 234 ರನ್‌ ಸಿಡಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಜಿಂಬಾಬ್ವೆ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    ಚೇಸಿಂಗ್‌ ಆರಂಭಿಸಿದ ಜಿಂಬಾಬ್ವೆ ಮೊದಲ ಓವರ್‌ನಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2ನೇ ವಿಕೆಟ್‌ಗೆ 15 ಎಸೆತಗಳಲ್ಲಿ 36 ರನ್‌ಗಳ ಸ್ಫೋಟಕ ಜೊತೆಯಾಟ ನಂತರ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಲು ವಿಫಲರಾದರು. ಅವೇಶ್‌ ಖಾನ್‌, ಮುಕೇಶ್‌ ಕುಮಾರ್‌ (Mukesh Kumar) ಬೌಲಿಂಗ್‌ ಪ್ರಹಾರಕ್ಕೆ ಜಿಂಬಾಬ್ವೆ ಬ್ಯಾಟರ್‌ಗಳು ಮಕಾಡೆ ಮಲಗಿದರು. ಅಂತಿಮವಾಗಿ ಭಾರತ 100 ರನ್‌ಗಳ ಗೆಲುವು ಸಾಧಿಸಿತು.

    ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 43 ರನ್‌, ಬ್ರಿಯಾನ್ ಬೆನೆಟ್ (Brian Bennett) 26 ರನ್‌, ಲ್ಯೂಕ್ ಜೊಂಗ್ವೆ 33 ರನ್‌ ಗಳಿಸಿದರು. ಇನ್ನೂ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮುಕೇಶ್‌ ಕುಮಾರ್‌ ಮತ್ತು ಅವೇಶ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರೆ, ರವಿ ಬಿಷ್ಣೋಯಿ 2 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಪ್ಲ್ಯಾನ್‌!

    ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ, 234 ರನ್‌ ಬಾರಿಸಿತ್ತು. ಐಪಿಎಲ್‌ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನಾಡುತ್ತಿರುವ ಪಂಜಾಬ್‌ ಮೂಲದ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಮೊದಲ 33 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್‌, 7 ಬೌಂಡರಿಗಳೂ ಸೇರಿವೆ.

    ಮಿಂಚಿದ ರಿಂಕು, ರುತು:
    ಇತ್ತ ಅಭಿಷೇಕ್‌ ಶರ್ಮಾ ಶತಕ ಸಿಡಿಸಿ ಪೆವಿಲಿಯನ್‌ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್‌ ಗಾಯಕ್ವಾಡ್‌, ರಿಂಕು ಸಿಂಗ್‌ ಜೋಡಿ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್‌ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್‌ 47 ಎಸೆತಗಳಲ್ಲಿ 77 ರನ್‌ (1 ಸಿಕ್ಸರ್‌, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್‌ ಸ್ಫೋಟಕ 48 ರನ್‌ (22 ಎಸೆತ, 5 ಸಿಕ್ಸರ್‌, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್‌ ಗಿಲ್‌ 2 ರನ್‌ ಗಳಿಸಿದರು.

  • ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    – ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದ ಭಾರತ

    ಹರಾರೆ: ಟೀಂ ಇಂಡಿಯಾದ ಯುವ ಬ್ಯಾಟರ್‌ ಅಭಿಷೇಕ್‌ ಶರ್ಮಾ (Abhishek Sharma) ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಆಗಿ ಭಾರೀ ಟೀಕೆಗೆ ಗುರಿಯಾಗಿದ್ದ ಅಭಿ, ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟಿದ್ದಾರೆ.

    ಇಲ್ಲಿನ ಹರಾರೆ ಸ್ಫೋರ್ಟ್‌ ಕ್ಲಬ್‌ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ (Team India) 10 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ಬಳಿಕ ಅಭಿಷೇಕ್‌ ಶರ್ಮಾ ಅವರ ಸ್ಪೋಟಕ ಶತಕ ಹಾಗೂ ರುತುರಾಜ್‌ ಗಾಯಕ್ವಾಡ್‌ ಅವರ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 234 ರನ್‌ ಸಿಡಿಸಿದೆ.

    ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
    ಐಪಿಎಲ್‌ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನಾಡುತ್ತಿರುವ ಪಂಜಾಬ್‌ ಮೂಲದ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ 33 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್‌, 7 ಬೌಂಡರಿಗಳೂ ಸೇರಿವೆ.

    ಶತಕ ವೀರರ ಎಲೈಟ್‌ ಪಟ್ಟಿಗೆ ಅಭಿ:
    ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲೇ ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ ಕಡಿಮೆ ಎಸೆತಗಳಲ್ಲಿ ಶತಕ ಪೂರೈಸಿದ ದಿಗ್ಗರ ಎಲೈಟ್‌ ಪಟ್ಟಿ ಸೇರಿದ್ದಾರೆ. ಆರನ್‌ ಫಿಂಚ್‌, ಕ್ರಿಸ್‌ಗೇಲ್‌, ಕೊಲಿನ್‌ ಮನ್ರೋ, ರವೀಂದರ್‌ಪಾಲ್‌ ಸಿಂಗ್‌, ಜೋಶ್‌ ಇಂಗ್ಲಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಈವರೆಗೆ 47 ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರರಾಗಿದ್ದರು. ಇದೀಗ ಈ ದಿಗ್ಗಜರ ಪಟ್ಟಿಗೆ ಅಭಿಷೇಕ್‌ ಶರ್ಮಾ ಸೇರ್ಪಡೆಗೊಂಡಿದ್ದಾರೆ.

    ಜಿಂಬಾಬ್ವೆಗೆ 235 ರನ್‌ ಗುರಿ:
    ಜಿಂಬಾಬ್ವೆ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 234 ರನ್‌ ಬಾರಿಸಿದ್ದು, ಎದುರಾಳಿ ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದೆ.

    ಮಿಂಚಿದ ರಿಂಕು, ರುತು:
    ಇತ್ತ ಅಭಿಷೇಕ್‌ ಶರ್ಮಾ ಶತಕ ಸಿಡಿಸಿ ಪೆವಿಲಿಯನ್‌ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್‌ ಗಾಯಕ್ವಾಡ್‌, ರಿಂಕು ಸಿಂಗ್‌ ಜೋಡಿ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್‌ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್‌ 47 ಎಸೆತಗಳಲ್ಲಿ 77 ರನ್‌ (1 ಸಿಕ್ಸರ್‌, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್‌ ಸ್ಫೋಟಕ 48 ರನ್‌ (22 ಎಸೆತ, 5 ಸಿಕ್ಸರ್‌, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್‌ ಗಿಲ್‌ 2 ರನ್‌ ಗಳಿಸಿದರು.

  • ಕಳಪೆ ಬ್ಯಾಟಿಂಗ್‌ಗೆ ಬೆಲೆತೆತ್ತ ʻಯಂಗ್‌ ಇಂಡಿಯಾʼ – ಜಿಂಬಾಬ್ವೆಗೆ 13 ರನ್‌ಗಳ ರೋಚಕ ಗೆಲುವು!

    ಕಳಪೆ ಬ್ಯಾಟಿಂಗ್‌ಗೆ ಬೆಲೆತೆತ್ತ ʻಯಂಗ್‌ ಇಂಡಿಯಾʼ – ಜಿಂಬಾಬ್ವೆಗೆ 13 ರನ್‌ಗಳ ರೋಚಕ ಗೆಲುವು!

    ಹರಾರೆ: ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದ ಭಾರತ (Team India) ಕಳಪೆ ಬ್ಯಾಟಿಂಗ್‌ನಿಂದ ಬೆಲೆತೆತ್ತಿದೆ. ಅತ್ತ ಸಂಘಟಿತ ಪ್ರದರ್ಶನ ನೀಡಿದ ಜಿಂಬಾಬ್ವೆ (Zimbabwe) ತಂಡವು ಭಾರತದ ವಿರುದ್ಧ 13 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಜಿಂಬಾಬ್ವೆ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಇಲ್ಲಿನ ಹರಾರೆ ಸ್ಫೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಜಿಂಬಾಬ್ವೆ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದರೂ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 115 ರನ್‌ ಕಲೆಹಾಕಿತ್ತು. 116 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 19.5 ಓವರ್‌ಗಳಲ್ಲೇ 102 ರನ್‌ಗೆ ಆಲೌಟ್‌ ಆಗಿ ಹೀನಾಯ ಸೋಲು ಕಂಡಿತು.

    ಚೇಸಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಯಿತು. ಪವರ್‌ ಪ್ಲೇನಲ್ಲಿ 28 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಒಂದಂತದಲ್ಲಿ ರನ್‌ ಕದಿಯಲು ತಿಣುಕಾಡುತ್ತಿದ್ದ ಟೀಂ ಇಂಡಿಯಾ ಮತ್ತೊಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. ಪರಿಣಾಮ 61 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

    8ನೇ ವಿಕೆಟ್‌ಗೆ ಜೊತೆಯಾಗಿದ್ದ ವಾಷಿಂಗ್ಟನ್‌ ಸುಂದರ್‌ ಹಾಗೂ ಅವೇಶ್‌ ಖಾನ್ (Washington Sundar) ‌ಜೋಡಿ ನೀಡಿದ 23 ರನ್‌ಗಳ ಸಣ್ಣ ಜೊತೆಯಾಟ ಮತ್ತೆ ಗೆಲುವಿನ ಕನಸು ಚಿಗುರಿಸಿತ್ತು. ಈ ವೇಳೆ ಲಾಂಗ್‌ಆಫ್‌ನಲ್ಲಿ ಸಿಕ್ಸರ್‌ಗೆ ಯತ್ನಿಸಿ ಅವೇಶ್‌ ಖಾನ್‌ ಕ್ಯಾಚ್‌ ನೀಡಿ ಔಟಾದರು. ಇನ್ನೂ ಕೊನೇ ಓವರ್‌ ವರೆಗೂ ಗೆಲುವಿನ ಭರವಸೆ ಮೂಡಿಸಿದ್ದ ವಾಷಿಂಗ್ಟನ್‌ ಸುಂದರ್‌ ರನ್‌ ಕದಿಯುವಲ್ಲಿ ವಿಫಲರಾದರು. ಪರಿಣಾಮ ಜಿಂಬಾಬ್ವೆ ಎದುರು ಮಂಡಿಯೂರಬೇಕಾಯಿತು. ಟೀಂ ಇಂಡಿಯಾ ಪರ ನಾಯಕ ಶುಭಮನ್‌ ಗಿಲ್‌ (Shubman Gill )34 ರನ್‌ (29 ಎಸೆತ, 5 ಬೌಂಡರಿ), ವಾಷಿಂಗ್ಟನ್‌ ಸುಂದರ್‌ 27 ರನ್‌, ಅವೇಶ್‌ ಖಾನ್‌ 16 ರನ್‌ ರನ್‌ ಗಳಿಸಿದರು.

    ಜಿಂಬಾಬ್ವೆ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಸಿಖಂದರ್‌ ರಝಾ (Sikandar Raza), ಟೆಂಡಿ ಛಟಾರ ತಲಾ ಮೂರು ವಿಕೆಟ್‌ ಕಿತ್ತರೆ, ಬ್ರಿಯಾನ್ ಬೆನೆಟ್ (Brian Bennett), ವೆಲ್ಲಿಂಗ್ಟನ್ ಮಸಕಡ್ಜಾ, ಮುಜರಬಾನಿ, ಲ್ಯೂಕ್ ಜೊಂಗ್ವೆ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 21 ರನ್‌, ಬ್ರಿಯಾನ್ ಬೆನೆಟ್ 22 ರನ್‌, ಸಿಕಂದರ್ ರಝಾ 17 ರನ್‌, ಡಿಯೋನ್ ಮೈಯರ್ಸ್ 23 ರನ್‌, ಕ್ಲೈವ್ ಮದಂಡೆ 29 ರನ್‌ಗಳ ಕೊಡುಗೆ ನೀಡಿದರು. ಉಳಿದ ಬ್ಯಾಟರ್ಸ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ 20 ಓವರ್‌ಗಳಲ್ಲಿ 115 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಟೀಂ ಇಂಡಿಯಾ ಪರ ರವಿ ಬಿಷ್ಣೋಯಿ (Ravi Bishnoi) 4 ಓವರ್‌ಗಳಲ್ಲಿ ಕೇವಲ 13 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಹಾಗೂ ಮುಕೇಶ್‌ ಕುಮಾರ್‌ 1 ವಿಕೆಟ್‌ ಪಡೆದು ಮಿಂಚಿದರು.