Tag: ಸಿಖಂದರ್

  • ಸಲ್ಮಾನ್ ಖಾನ್ ಸಿನಿಮಾ ನೋಡಲು ಕಾಯುತ್ತಿದ್ದೇವೆ: ರಾಮ್ ಚರಣ್

    ಸಲ್ಮಾನ್ ಖಾನ್ ಸಿನಿಮಾ ನೋಡಲು ಕಾಯುತ್ತಿದ್ದೇವೆ: ರಾಮ್ ಚರಣ್

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ ಕಾರ್ಯಕ್ರಮ ಅಂತ್ಯವಾಗಲು ಕೆಲವೇ ದಿನಗಳು ಬಾಕಿಯಿವೆ. ಇತ್ತ ಹಿಂದಿ ‘ಬಿಗ್ ಬಾಸ್’ ಸೀಸನ್ 18 (Bigg Boss Hindi 18) ಕೂಡ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ (Salman Khan) ನಿರೂಪಣೆಯ ಈ ಕಾರ್ಯಕ್ರಮಕ್ಕೆ ರಾಮ್ ಚರಣ್ ಮತ್ತು ಕಿಯಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ, ನಿಮ್ಮ ಸಿನಿಮಾ ನೋಡಲು ಕಾಯುತ್ತೀದ್ದೇವೆ ಎಂದು ಸಲ್ಮಾನ್‌ರನ್ನು ರಾಮ್ ಚರಣ್ ಹಾಡಿ ಹೊಗಳಿದ್ದಾರೆ.

     

    View this post on Instagram

     

    A post shared by beingsalmankhan (@salmanic_mun)

    ರಾಮ್ ಚರಣ್ (Ram Charan) ಮತ್ತು ಕಿಯಾರಾ ಅಡ್ವಾಣಿ (Kiara Advani) ‘ಗೇಮ್ ಚೇಂಜರ್’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಿಮಿತ್ತ ಹಿಂದಿ ಬಿಗ್ ಬಾಸ್‌ಗೂ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ ರಾಮ್ ಚರಣ್ ಮಾತನಾಡಿ, ಸಲ್ಮಾನ್ ಭಾಯ್ ನಿಮ್ಮ ಸಿನಿಮಾ ನೋಡಿ ಬಹಳ ಸಮಯ ಆಯಿತು. ನಿಮ್ಮಲಿರುವ ಸಿಖಂದರ್ ಅನ್ನು ನೋಡಲು ಕಾಯುತ್ತಿದ್ದೇವೆ ಎಂದರು. ಆಗ ಕಿಯಾರಾ ಕೂಡ ‘ಸಿಖಂದರ್’ ಚಿತ್ರದ ಟೀಸರ್ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     

    View this post on Instagram

     

    A post shared by ColorsTV (@colorstv)

    ಅಂದಹಾಗೆ, ‘ಸಿಖಂದರ್’ ಸಿನಿಮಾದಲ್ಲಿ ಸಲ್ಮಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.

  • ‘ಸಿಖಂದರ್’ ಟೀಸರ್ ಔಟ್: ರಗಡ್ ಲುಕ್‌ನಲ್ಲಿ ಸಲ್ಮಾನ್ ಖಾನ್

    ‘ಸಿಖಂದರ್’ ಟೀಸರ್ ಔಟ್: ರಗಡ್ ಲುಕ್‌ನಲ್ಲಿ ಸಲ್ಮಾನ್ ಖಾನ್

    ಬಾಲಿವುಡ್‌ನ ಬಹುನಿರೀಕ್ಷಿತ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಖಂದರ್’ (Sikandar) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಲ್ಮಾನ್ ಖಾನ್ (Salman Khan) ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ‘ಸಿಖಂದರ್’ ಆದ ಸಲ್ಮಾನ್ ಅವತಾರಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ‘ಸಿಖಂದರ್’ 1:41 ನಿಮಿಷದ ಟೀಸರ್ ಇದಾಗಿದ್ದು, ಬಹಳಷ್ಟು ಜನ ನನ್ನ ಹಿಂದೆ ಬಿದ್ದಿದ್ದಾರೆ ಎಂದು ಕೇಳಿದ್ದೇನೆ. ಆದರೆ ನಾನು ತಿರುಗಿ ಬೀಳುವವರೆಗೆ ಮಾತ್ರ ಎಂದು ಸಲ್ಮಾನ್ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ರಿಯಲ್ ಆಗಿಯೂ ಎದುರಾಳಿಗಳಿಗೆ ಈ ಡೈಲಾಗ್ ಠಕ್ಕರ್ ಕೊಡುವಂತಿದೆ. ಇನ್ನೂ ಟೀಸರ್‌ನಲ್ಲಿ ಸಖತ್ ಸ್ಟೈಲೀಶ್ ಮತ್ತು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

    ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಿದ್ದಾರೆ. ಎಆರ್ ಮುರುಗದಾಸ್ ನಿರ್ದೇಶನದಲ್ಲಿ ಸಲ್ಮಾನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ‘ಮಗಧೀರ’ ನಟಿ ಕಾಜಲ್ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.

    ಇನ್ನೂ ಸಾಲು ಸಾಲು ಸಿನಿಮಾ ಸೋಲುಗಳನ್ನು ಅನುಭವಿಸಿರುವ ಸಲ್ಮಾನ್ ಖಾನ್‌ಗೆ ಈ ಚಿತ್ರ ಸಕ್ಸಸ್ ಸಿಗುತ್ತಾ? ನಟರ ಪಾಲಿಗೆ ಲಕ್ಕಿ ಚಾರ್ಮ್ ಆಗಿರೋ ರಶ್ಮಿಕಾ ಫೇಮ್, ‘ಸಿಖಂದರ್’ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.

  • ಸಲ್ಮಾನ್ ಖಾನ್ ಸಿನಿಮಾದಲ್ಲಿ ಕನ್ನಡದ ನಟ ಕಿಶೋರ್?

    ಸಲ್ಮಾನ್ ಖಾನ್ ಸಿನಿಮಾದಲ್ಲಿ ಕನ್ನಡದ ನಟ ಕಿಶೋರ್?

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಖಂದರ್’ (Sikandar) ಸಿನಿಮಾದಲ್ಲಿ ಕನ್ನಡದ ನಟ ಕಿಶೋರ್ (Kishore) ಎಂಟ್ರಿ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದರ್ಶನ್‌ ಮಧ್ಯಂತರ ಜಾಮೀನು ಆದೇಶ ನಾಳೆಗೆ

    ಎ.ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದ ಮೂಲಕ ಕಿಶೋರ್ ನಟಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರೀಕರಣದಲ್ಲಿ ಕೂಡ ಅವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಕಿಶೋರ್ ಈ ತಂಡವನ್ನು ಸೇರಿರುವ ಬಗ್ಗೆ ನಟನಾಗಲಿ, ‘ಸಿಖಂದರ್’ ಚಿತ್ರತಂಡವಾಗಲಿ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯ ಹರಿದಾಡುತ್ತಿರುವ ಸುದ್ದಿ ನಿಜನಾ? ಎಂದು ಅನೌನ್ಸ್ ಆಗುವವರೆಗೂ ಕಾಯಬೇಕಿದೆ.

    ಇನ್ನೂ ಕಿಶೋರ್ ಅವರು ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಕಲಾವಿದ. ತೆಲುಗು, ತಮಿಳು ಚಿತ್ರಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್ (Rajanikanth) ಜೊತೆ ‘ಜೈಲರ್’, ‘ವೆಟ್ಟೈಯಾನ್‌’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಜೊತೆಗೆ ಕನ್ನಡದ ಸಿನಿಮಾದಲ್ಲೂ ಅವರಿಗೆ ಬೇಡಿಕೆ ಇದೆ.

  • ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್

    ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್

    ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ 25ರ ಸುಂದರಿಯೊಬ್ಬರು ಮದುವೆ ಪ್ರಪೋಸಲ್ ಇಟ್ಟಿದ್ದಾರೆ. ನಿಮಗೆ ಯಾವ ರೀತಿ ಹುಡುಗ ಬೇಕು ಎಂದು ಸಲ್ಮಾನ್ ಕೇಳಿದ್ರೆ, ನೀವೇ ನನ್ನ ಮದುವೆ (Wedding) ಮಾಡಿಕೊಳ್ಳಿ ಎಂದು ಸ್ಪರ್ಧಿ ಚಾಹತ್ ಪಾಂಡೆ (Chahat Pandey) ಮನವಿ ಮಾಡಿದ್ದಾರೆ. ಇದನ್ನೂ ಓದಿ:ಪ್ರೀತಿಸಿ ಮದುವೆಯಾಗೋಕೆ ನನಗೆ ಸಮಯವಿಲ್ಲ: ಸುನೈನಾ

    ಹಿಂದಿ ಕಿರುತೆರೆಯ ಜನಪ್ರಿಯ ನಟಿ ಚಾಹತ್ ಪಾಂಡೆ ಅವರು ಬಿಗ್ ಬಾಸ್ ಹಿಂದಿ 18ರಲ್ಲಿ (Bigg Boss Hinid 18) ಸ್ಪರ್ಧಿಯಾಗಿ ಕಾಣಿಸಿಕೊಳ್ತಿದ್ದಾರೆ. ಇತ್ತೀಚಿನ ವೀಕೆಂಡ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ನಿಮಗೆ ಯಾವ ರೀತಿಯ ಹುಡುಗ ಬೇಕು ಎಂದು ಚಾಹತ್‌ರನ್ನು ಪ್ರಶ್ನಿಸಿದರು. ಅದಕ್ಕೆ, ಸ್ಪರ್ಧಿ ಕರಣ್ ವೀರ್ ಮೆಹ್ತಾ ರೀತಿ ಜಿಮ್‌ಗೆ ಹೋಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವವರು, ಅವಿನಾಶ್ ಹಾಗೆ ಡ್ಯಾನ್ಸ್ ಮಾಡುವವರು, ವಿವಿನ್ ತರ ಹೇರ್ ಸ್ಟೈಲ್ ಇರುವವರು ಬೇಕು ಎಂದಿದ್ದಾರೆ.

    ಆ ನಂತರ ಸರ್ ನೀವೇ ನನ್ನಾ ಮದುವೆ ಮಾಡಿಕೊಳ್ಳಿ ಎಂದು ಸಲ್ಮಾನ್‌ಗೆ ಚಾಹತ್ ಹೇಳಿದ್ದಾರೆ. ಅದಕ್ಕೆ ನೀವು ಹೇಳಿದ ಯಾವುದೇ ಗುಣಗಳು ನನ್ನಲ್ಲಿ ಇಲ್ಲ ಎಂದು ನಟ ಪ್ರತಿಯುತ್ತರ ನೀಡಿದ್ದಾರೆ. ಈ ಮೂಲಕ ಚಾಹತ್ ಮದುವೆ ಪ್ರಪೋಸಲ್‌ಗೆ ನಟ ಬ್ರೇಕ್ ಹಾಕಿದ್ದಾರೆ. ಸದ್ಯ ಈ ಸಂಚಿಕೆಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಇನ್ನೂ ಸಲ್ಮಾನ್‌ಗೆ ಇರುವ ಜೀವ ಬೆದರಿಕೆಯ ನಡುವೆಯೂ ರಶ್ಮಿಕಾ ಮಂದಣ್ಣ (Rashmika Mandanna) ಜೊತೆಗಿನ ‘ಸಿಖಂದರ್’ (Sikandar) ಸಿನಿಮಾ ಮತ್ತು ಬಿಗ್ ಬಾಸ್ ಹಿಂದಿ 18ರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸಲ್ಮಾನ್‌ಗೆ ಬಿಗಿ ಭದ್ರತೆ ನೀಡಲಾಗಿದೆ.

  • ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳಲ್ಲಿ ಬ್ಯುಸಿಯಾದ ರಶ್ಮಿಕಾ ಮಂದಣ್ಣ

    ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳಲ್ಲಿ ಬ್ಯುಸಿಯಾದ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸೌತ್ ಮತ್ತು ಬಾಲಿವುಡ್ (Bollywood) ಚಿತ್ರರಂಗದಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಬ್ಯಾಕ್ ಟು ಬ್ಯಾಕ್ 3 ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ರಜನಿಕಾಂತ್ ಚಿತ್ರದಲ್ಲಿ ವಿಲನ್ ರೋಲ್ ಮಾಡ್ತಿಲ್ಲ: ಪಾತ್ರದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ

    ಬಹುಭಾಷಾ ನಟಿಯಾಗಿ ಜನಪ್ರಿಯತೆ ಗಳಿಸಿರುವ ನಟಿ ರಶ್ಮಿಕಾ, ಏಕಕಾಲದಲ್ಲಿ ಸಲ್ಮಾನ್ ಖಾನ್ ಜೊತೆ ಸಿಖಂದರ್ (Sikandar), ‘ಪುಷ್ಪ 2’ (Pushpa 2) ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಇದರ ಜೊತೆಗೆ ಮುಂಬೈನಲ್ಲಿ ಧನುಷ್ ಜೊತೆಗಿನ ‘ಕುಬೇರ’ (Kubera) ಸಿನಿಮಾದ ಶೂಟಿಂಗ್ ಕೂಡ ಮಾಡಲಾಗ್ತಿದೆ. ನಟಿಯ ಹಾರ್ಡ್‌ ವರ್ಕ್‌ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ‘ಪುಷ್ಪ 2’ ಮತ್ತು ‘ಛಾವಾ’ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗಿದೆ. ಕುಬೇರ, ಸಿಖಂದರ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಚಿತ್ರಗಳು ರಶ್ಮಿಕಾ ಕೈಯಲ್ಲಿವೆ. ಇನ್ನೂ ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ (Prashanth Neel) ಸಿನಿಮಾಗೆ ರಶ್ಮಿಕಾರನ್ನೇ ಹೀರೋಯಿನ್ ಆಗಿ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದೆ. ಇದು ನಿಜನಾ? ಚಿತ್ರತಂಡ ಘೋಷಣೆ ಮಾಡಬೇಕಿದೆ.

    ಸದ್ಯ ಬೇಡಿಕೆ ನಟಿಯಾಗಿರು ರಶ್ಮಿಕಾ ಕಥೆಗೆ ಮತ್ತು ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ನೀಡುತ್ತಾರೆ. ಅದರಿಂದಲೇ ಸಕ್ಸಸ್‌ಫುಲ್ ಪ್ಯಾನ್ ಇಂಡಿಯಾ ನಾಯಕಿಯಾಗಿ ಸದ್ದು ಮಾಡುತ್ತಿದ್ದಾರೆ.

  • ಅದ್ಧೂರಿಯಾಗಿ ನಡೆಯಿತು ಸಲ್ಮಾನ್ ಖಾನ್, ರಶ್ಮಿಕಾ ನಟನೆಯ ಸಿನಿಮಾ ಮುಹೂರ್ತ

    ಅದ್ಧೂರಿಯಾಗಿ ನಡೆಯಿತು ಸಲ್ಮಾನ್ ಖಾನ್, ರಶ್ಮಿಕಾ ನಟನೆಯ ಸಿನಿಮಾ ಮುಹೂರ್ತ

    ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಖಂದರ್’ (Sikandar) ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು (ಜೂನ್ 27) ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮ ಫೋಟೋಗಳನ್ನು ನಿರ್ದೇಶಕ ಎ.ಆರ್ ಮುರುಗದಾಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಸಲ್ಮನ್ ಖಾನ್ (Salman Khan) ಮತ್ತು ರಶ್ಮಿಕಾ ಮುಹೂರ್ತ ಕಾರ್ಯಕ್ರಮಕ್ಕೆ ಹಾಜರಿ ಹಾಕಿರಲಿಲ್ಲ. ಆದರೆ ಚಿತ್ರತಂಡದ ಜೊತೆ ಖ್ಯಾತ ನಿರ್ದೇಶಕ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದ್ದು, ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.‌ ಇದನ್ನೂ ಓದಿ:ವಾರಾಹಿ ದೀಕ್ಷೆ ಪಡೆದ ಡಿಸಿಎಂ ಪವನ್ ಕಲ್ಯಾಣ್


    ಅಂದಹಾಗೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿಯಾಗಿದ್ದಾರೆ. ರಶ್ಮಿಕಾ ಹೀರೋಯಿನ್ ಆಗಿ ನಟಿಸಿರುವ ‘ಪುಷ್ಪ 2’ ಮತ್ತು ‘ಚಾವಾ’ ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ.

    ಆಗಸ್ಟ್ 15ರಂದು ಬಿಡುಗಡೆಯಾಗಬೇಕಿದ್ದ ‘ಪುಷ್ಪ 2’ ಸಿನಿಮಾ ಇದೀಗ ಡಿಸೆಂಬರ್ 6ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅದೇ ದಿನ ವಿಕ್ಕಿ ಕೌಶಲ್, ರಶ್ಮಿಕಾ ನಟನೆಯ ಚಾವಾ ಕೂಡ ರಿಲೀಸ್ ಆಗ್ತಿದೆ. ರಶ್ಮಿಕಾ ವರ್ಸಸ್ ರಶ್ಮಿಕಾ ಸಿನಿಮಾನೇ ಪೈಪೋಟಿಗಿಳಿದಿದೆ. ರಿಲೀಸ್ ಬಳಿಕ ಎರಡು ಸಿನಿಮಾ ಭವಿಷ್ಯ ನಿರ್ಧಾರವಾಗಲಿದೆ.

    ಇನ್ನೂ ಅನಿಮಲ್ ಪಾರ್ಕ್, ಕುಬೇರ, ಸಿಖಂದರ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಪುಷ್ಪ 2, ಚಾವಾ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.

  • Sikandar: ಸಲ್ಮಾನ್, ರಶ್ಮಿಕಾ ನಟನೆಯ ಸಿನಿಮಾ ಶೂಟಿಂಗ್ ಶುರುವಾಗೋದು ಯಾವಾಗ?

    Sikandar: ಸಲ್ಮಾನ್, ರಶ್ಮಿಕಾ ನಟನೆಯ ಸಿನಿಮಾ ಶೂಟಿಂಗ್ ಶುರುವಾಗೋದು ಯಾವಾಗ?

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಅದೃಷ್ಟದ ಬಾಗಿಲು ತೆರೆದಿದೆ. ಬಿಟೌನ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಜೊತೆ ರಶ್ಮಿಕಾ ನಟಿಸೋದು ಕೂಡ ಪಕ್ಕಾ ಆಗಿದೆ. ‘ಸಿಖಂದರ್‌’ ಚಿತ್ರದ (Sikandar Film) ಶೂಟಿಂಗ್ ಯಾವಾಗ ಶುರುವಾಗಲಿದೆ ಎಂಬುದಕ್ಕೆ ಇದೀಗ ಉತ್ತರ ಕೂಡ ಸಿಕ್ಕಿದೆ.

    ಸಿನಿಮಾ ಸಕ್ಸಸ್‌ಗಾಗಿ ಎದುರು ನೋಡ್ತಿರುವ ಸಲ್ಮಾನ್ ಖಾನ್ ಇದೀಗ ಕಾಲಿವುಡ್ ಸ್ಟಾರ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ

    ಇದೇ ಜೂನ್ 18ರಿಂದ ಮುಂಬೈ ಸೇರಿದಂತೆ ಹಲವೆಡೆ ಚಿತ್ರದ ಶೂಟಿಂಗ್ ಶುರುವಾಗಲಿದೆ. ಸಲ್ಮಾನ್‌ಗಾಗಿ ನಿರ್ದೇಶಕ ಉತ್ತಮ ಕಥೆಯನ್ನೇ ಬರೆದಿದ್ದಾರೆ. ಸಲ್ಮಾನ್ ಮತ್ತು ರಶ್ಮಿಕಾ ಕೂಡ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

    ಅಂದಹಾಗೆ, ಕುಬೇರ, ಪುಷ್ಪ 2, ಅನಿಮಲ್ 2, ರೈನ್‌ಬೋ, ಗರ್ಲ್‌ಫ್ರೆಂಡ್ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

  • Sikandar: ಸಲ್ಮಾನ್ ಖಾನ್‌ಗೆ ತಮಿಳು ನಟ ಸತ್ಯರಾಜ್ ವಿಲನ್

    Sikandar: ಸಲ್ಮಾನ್ ಖಾನ್‌ಗೆ ತಮಿಳು ನಟ ಸತ್ಯರಾಜ್ ವಿಲನ್

    ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ (Sikandar Film) ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಸಲ್ಮಾನ್‌ಗೆ (Salman Khan) ಯಶಸ್ಸು ಬೇಕಾಗಿದೆ. ಹಾಗಾಗಿ ದಕ್ಷಿಣದ ತಾರೆಯರಿಗೆ ಚಿತ್ರತಂಡ ಮಣೆ ಹಾಕುತ್ತಿದೆ. ಇದೀಗ ಸಲ್ಮಾನ್‌ಗೆ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ.

    ವಿಲನ್ ಖಡಕ್ ಆಗಿ ಇದ್ದರೆ ತಾನೇ ಹೀರೋಗೆ ಬೆಲೆ. ಅದಕ್ಕಾಗಿ ಸಲ್ಮಾನ್ ಖಾನ್ ಎದುರು ಅಬ್ಬರಿಸಲು ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಸೂಕ್ತ ಎನಿಸಿ ‘ಸಿಖಂದರ್’ ತಂಡ ಅವರನ್ನು ಸಂಪರ್ಕಿಸಿದೆ. ಪಾತ್ರದ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ. ಆದರೆ ಚಿತ್ರತಂಡ ಅಧಿಕೃತ ಘೋಷಣೆ ಆಗಬೇಕಿದೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ‘ಸಿಖಂದರ್’ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್‌ಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಸಾಜಿದ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

    ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸುತ್ತಿರೋದ್ರಿಂದ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • 10 ವರ್ಷಗಳಲ್ಲಿ ಭಾರತ ಅದ್ಭುತ ಅಭಿವೃದ್ಧಿಯನ್ನು ಸಾಧಿಸಿದೆ- ‘ನಮೋ’ ಸಾಧನೆ ಹೊಗಳಿದ ರಶ್ಮಿಕಾ ಮಂದಣ್ಣ

    10 ವರ್ಷಗಳಲ್ಲಿ ಭಾರತ ಅದ್ಭುತ ಅಭಿವೃದ್ಧಿಯನ್ನು ಸಾಧಿಸಿದೆ- ‘ನಮೋ’ ಸಾಧನೆ ಹೊಗಳಿದ ರಶ್ಮಿಕಾ ಮಂದಣ್ಣ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುಂಬೈನಲ್ಲಿಯೇ ಬೀಡು ಬಿಟ್ಟಿರುವ ರಶ್ಮಿಕಾ, ಇದೀಗ ಮುಂಬೈನ ಅಟಲ್ ಸೇತು ಬಗ್ಗೆ ಸಂದರ್ಶನವೊಂದರಲ್ಲಿ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ನಂತರ ಚರಣ್‍ ಚಿತ್ರಕ್ಕೆ ಕಾಲ್‍ ಶೀಟ್ ಕೊಟ್ಟ ಸುದೀಪ್

    ಇದೇ ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಅಟಲ್ ಸೇತು ಬಗ್ಗೆ ಹಾಗೂ ಒಟ್ಟಾರೆ ದೇಶದ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಮಾತನಾಡಿದ್ದಾರೆ. ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು, ಈಗ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಅಸಾಧ್ಯವಾಗಿರೋದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹೀಗೆ ಪ್ರಯಾಣಿಸುವುದನ್ನು ಸುಲಭ ಮಾಡಿದ್ದಾರೆ. ಭಾರತ ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

    ಭಾರತ ಈಗ ವೇಗವಾಗಿ ಸಾಗುತ್ತಿದೆ. ಎಲ್ಲೂ ನಿಲ್ಲುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿಯನ್ನು ಸಾಧಿಸಿದೆ. ಪ್ರಗತಿ ಎಂಬುದು ಬಹಳ ವೇಗವಾಗಿ ಆಗುತ್ತಿದೆ. ಈ ಅಟಲ್ ಸೇತು ಕೇವಲ ಏಳು ವರ್ಷಗಳಲ್ಲಿ ಮುಗಿದಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತ ವಿಶ್ವದ ಬುದ್ಧಿವಂತ ದೇಶ ಎಂದು ಹೇಳಲು ಬಯಸುತ್ತೇನೆ. ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶ ಸಾಧಿಸುತ್ತಿರುವ ಪ್ರಗತಿ ನಿಲ್ಲಬಾರದು. ಹಾಗಾಗಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು ಎಂದು ನಟಿ ಮಾತನಾಡಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಅವರ ಸಾಧನೆಯನ್ನು ನಟಿ ಕೊಂಡಾಡಿದ್ದಾರೆ.

    ರಶ್ಮಿಕಾ ಹೇಳಿಕೆಯ ಬೆನ್ನಲ್ಲೇ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಮೊದಲು ವೋಟ್ ಮಾಡಿ ಎಂದು ನಟಿಗೆ ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಸರ್ಕಾರದ ಪರ ಪ್ರಚಾರ ಮಾಡುತ್ತಿದ್ದೀರಾ ಎಂದು ನೆಟ್ಟಿಗರು ರಶ್ಮಿಕಾಗೆ ಹೇಳಿದ್ದಾರೆ.

    ಪುಷ್ಪ, ಅನಿಮಲ್ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗಿದೆ. ಸಲ್ಮಾನ್ ಖಾನ್ (Salman Khan) ಜೊತೆ ಸಿಖಂದರ್, ಧನುಷ್ (Dhanush) ಜೊತೆ ಕುಬೇರ, ಪುಷ್ಪ 2, ಅನಿಮಲ್ ಪಾರ್ಕ್, ಚಾವಾ, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.

  • ‘ಸಿಖಂದರ್‌’ ಸಲ್ಮಾನ್ ಖಾನ್‌ಗೆ ರಶ್ಮಿಕಾ ನಾಯಕಿ

    ‘ಸಿಖಂದರ್‌’ ಸಲ್ಮಾನ್ ಖಾನ್‌ಗೆ ರಶ್ಮಿಕಾ ನಾಯಕಿ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಅದೃಷ್ಟ ಖುಲಾಯಿಸಿದೆ. ಇದೀಗ ಬಾಲಿವುಡ್‌ನಲ್ಲಿ ನಟಿ ಬಂಪರ್‌ ಅವಕಾಶ ಬಾಚಿಕೊಂಡಿದ್ದಾರೆ. ರಣ್‌ಬೀರ್ ಕಪೂರ್ ಜೊತೆ ರೊಮ್ಯಾನ್ಸ್ ಮಾಡಿದ್ದು ಆಯ್ತು, ಈಗ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಜೊತೆ ರಶ್ಮಿಕಾ ಡ್ಯುಯೇಟ್‌ ಹಾಡಲು ರೆಡಿಯಾಗಿದ್ದಾರೆ.

    ಪುಷ್ಪ, ಅನಿಮಲ್ (Animal) ಸಿನಿಮಾದಿಂದ ರಶ್ಮಿಕಾ ಮಂದಣ್ಣ ವರ್ಚಸ್ಸು ಜಾಸ್ತಿಯಾಗಿದೆ. ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾನೇ ಬೇಕು ಎಂಬಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ‘ಸಿಖಂದರ್’ ಸಲ್ಮಾನ್‌ಗೆ ರಶ್ಮಿಕಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

    ತಮಿಳಿನ ಸೂಪರ್ ಹಿಟ್ ನಿರ್ದೇಶಕ ಮುರುಗದಾಸ್ ಜೊತೆ ಸಲ್ಮಾನ್ ಸಿನಿಮಾ ಮಾಡುವ ಬಗ್ಗೆ ಇತ್ತೀಚೆಗೆ ಅನೌನ್ಸ್ ಆಗಿತ್ತು. ‘ಸಿಖಂದರ್’ ಎಂಬ ಆ್ಯಕ್ಷನ್ ಕಥೆಗೆ ಸಲ್ಮಾನ್ ಖಾನ್ ಕೈಜೋಡಿಸಿದ್ದಾರೆ. ನಮ್ಮ ಸಿನಿಮಾಗೆ ರಶ್ಮಿಕಾನೇ ಸೂಕ್ತ‌ ನಾಯಕಿ ಅಂತ ಶ್ರೀವಲ್ಲಿಗೆ ಮಣೆ ಹಾಕಿದ್ದಾರೆ. ಈ ಬಗ್ಗೆ ಚಿತ್ರತಂಡ ಕೂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಇದನ್ನೂ ಓದಿ:ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ನಾಗಿಣಿ’ ಸೀರಿಯಲ್ ನಟಿ ಶಿಲ್ಪಾ ರವಿ

    ಸಿನಿಮಾದ ಕಥೆ, ತಮ್ಮ ಪಾತ್ರಕ್ಕೆ ಕೊಟ್ಟಿರುವ ಪ್ರಾಮುಖ್ಯತೆ ನೋಡಿ ರಶ್ಮಿಕಾಗೂ ಇಷ್ಟವಾಗಿ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನೀವೆಲ್ಲರೂ ನನ್ನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ಅನ್ನು ಕೇಳುತ್ತಿದ್ರಿ. ಇದೀಗ ಸಿಖಂದರ್ ಚಿತ್ರತಂಡವನ್ನು ಸೇರಿಕೊಳ್ಳುತ್ತಿರುವ ಬಗ್ಗೆ ಖುಷಿಯಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸದ್ಯ ಬಿಟೌನ್ ಅಡ್ಡಾದಲ್ಲಿ ಸಿಖಂದರ್ ಸಿನಿಮಾದೇ ಸುದ್ದಿ. ಕೆಲವರು ಈ ಹೊಸ ಜೋಡಿಯನ್ನು ತೆರೆಯ ಮೇಲೆ ನೋಡಲು ಥ್ರಿಲ್ ಆಗಿದ್ರೆ, ಇನ್ನೂ ಕೆಲವರು 58ರ ಹೀರೋಗೆ 28ರ ರಶ್ಮಿಕಾ ನಾಯಕಿನಾ? ಪ್ರಶ್ನೆ ಮಾಡುತ್ತಿದ್ದಾರೆ. ವಯಸ್ಸಿನ ಅಂತರ ಇಟ್ಟುಕೊಂಡು ಕಾಲೆಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಚಿತ್ರತಂಡ ಈ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.