Tag: ಸಿಕ್ವೆಲ್

  • ಕಾಂತಾರ 2 ಸಿನಿಮಾ ಬಗ್ಗೆ ಸುಳಿವು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು

    ಕಾಂತಾರ 2 ಸಿನಿಮಾ ಬಗ್ಗೆ ಸುಳಿವು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು

    ಈ ವರ್ಷದ ಸೂಪರ್ ಹಿಟ್ ‘ಕಾಂತರ’ ಸಿನಿಮಾ ಸಿಕ್ವಲ್ ಆಗತ್ತಾ, ಇಲ್ಲವಾ ಅನ್ನುವ ಗೊಂದಲವಿತ್ತು. ಮೊನ್ನೆಯಷ್ಟೇ ರಿಷಬ್ ಶೆಟ್ಟಿ ಅವರು ಕಾಂತಾರ 2 ಬಗ್ಗೆ ಸದ್ಯಕ್ಕೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಈ ಗೊಂದಲವನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಬಗೆಹರಿಸಿದ್ದಾರೆ. ಸದ್ಯದಲ್ಲೇ ಕಾಂತಾರ 2 ಸಿನಿಮಾ ಮಾಡದೇ ಇದ್ದರೂ, ಮಾಡುವುದು ನಿಜ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ರಿಷಬ್ ಶೆಟ್ಟಿ ಅವರು ಬೇರೊಂದು ಕೆಲಸದಲ್ಲಿ ಬ್ಯುಸಿ ಆಗಿರುವುದರಿಂದ ಕಾಂತಾರ 2 ಸಿನಿಮಾದ ಕೆಲಸ ತಡವಾಗಬಹುದು. ಈ ಸಿನಿಮಾ ಸಿಕ್ವಲ್ ಮಾಡಬೇಕಾ? ಅಥವಾ ಪ್ರೀಕ್ವಲ್ ಮಾಡಬೇಕಾ ಎನ್ನುವ ಯೋಚನೆ ಮಾಡುತ್ತಿದ್ದೇವೆ. ಆದರೆ, ಸಿನಿಮಾ ಎರಡನೇ ಭಾಗ ಬರುವುದು ಪಕ್ಕಾ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಕಾಂತಾರ 2 ಸಿನಿಮಾ ಬರುವುದು ಖಾತರಿಪಡಿಸಿದ್ದಾರೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಈ ವರ್ಷದಲ್ಲಿ ಭಾರೀ ಸದ್ದು ಮಾಡಿತ್ತು. ದೇಶಾದ್ಯಂತ ಭರ್ಜರಿ ಗೆಲುವು ಪಡೆದಿತ್ತು. ನಾನಾ ಭಾಷೆಯ ಸಿನಿಮಾ ಗಣ್ಯರು ಈ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಹಾಗಾಗಿ ಕಾಂತಾರ 2 ಸಿನಿಮಾದ ಬಗ್ಗೆ ಅಭಿಮಾನಿಗಳು ಆಗ್ರಹಿಸಿದ್ದರು. ಈ ಕುರಿತು ದೈವವನ್ನೂ ಕೇಳಲಾಗಿತ್ತು. ದೈವವೂ ಕೂಡ ಅನುಮತಿ ಕೊಟ್ಟಿದ್ದರಿಂದ ಸಿನಿಮಾ ಬರುವುದು ಪಕ್ಕಾ ಆಗಿದೆ.

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಿಂದ ಮೂಡಿ ಬಂದಿರುವ ಕಾಂತರ ಸಿನಿಮಾ, ಇದೀಗ ಆಸ್ಕರ್ ಅಂಗಳವನ್ನೂ ಮುಟ್ಟಿದೆ. ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿಯೂ ಇದೆ. ಜೊತೆಗೆ ಭಾರತದ ಆರ್.ಆರ್.ಆರ್  ರೀತಿಯ ಚಿತ್ರಗಳನ್ನು ಆಸ್ಕರ್ ಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ಪಾರ್ಟ್ 2: ರಿಷಬ್ ಶೆಟ್ಟಿ ಕೊನೆಗೂ ಕೊಟ್ಟರು ಪ್ರತಿಕ್ರಿಯೆ

    ‘ಕಾಂತಾರ’ ಪಾರ್ಟ್ 2: ರಿಷಬ್ ಶೆಟ್ಟಿ ಕೊನೆಗೂ ಕೊಟ್ಟರು ಪ್ರತಿಕ್ರಿಯೆ

    ದೇಶ ವಿದೇಶಗಳಲ್ಲಿ ಕಾಂತಾರ (Kantara) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಗೆಲುವಿನ ಬೆನ್ನಲ್ಲೇ ಕಾಂತಾರ ಸಿಕ್ವೆಲ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸಿನಿಮಾದ ಕೊನೆಯಲ್ಲಿ ಸಿಕ್ವೆಲ್ (Sequel) ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ಸಣ್ಣದೊಂದು ಸುಳಿವು ಕೂಡ ಕೊಟ್ಟಿದ್ದರಿಂದ ಪಾರ್ಟ್ 2 ಬರುತ್ತಾ? ಬರಲ್ಲವಾ? ಎನ್ನುವ ಪ್ರಶ್ನೆ ಮೂಡಿತ್ತು. ಕೊನೆಗೂ ರಿಷಬ್ ಶೆಟ್ಟಿ (Rishabh Shetty) ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಕಾಂತಾರ ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ರಿಪೀಟ್ ಆಡಿಯನ್ಸ್ ಬರುತ್ತಿದ್ದಾರೆ. ಹಾಗಾಗಿ ಪಾರ್ಟ್ 2 ಕುರಿತು ಸದ್ಯಕ್ಕೆ ಏನೂ ಹೇಳಲಾರೆ. ‘ನೋ ಕಾಮೆಂಟ್ಸ್’ ಎಂದು ಹೇಳುವ ಮೂಲಕ ಕುತೂಹಲ ಉಳಿಸಿದ್ದಾರೆ. ಸದ್ಯ ಏನೂ ಹೇಳಲಾರೆ ಎನ್ನುವ ಅವರ ಮಾತು ಸಿಕ್ವೆಲ್ ಸಿನಿಮಾದ ಮುನ್ಸೂಚನೆಯನ್ನಂತೂ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಗಬಹುದು.

    ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ (Hombale Films)‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ‘ಕಾಂತಾರ’  ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.

    ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.

    Live Tv
    [brid partner=56869869 player=32851 video=960834 autoplay=true]