Tag: ಸಿಕ್ಕಿಂ

  • ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಗೆ ಭೂಕುಸಿತ; 14 ಮಂದಿ ಸಾವು – ಸಿಕ್ಕಿಂ ಸಂಪರ್ಕ ಕಡಿತ

    ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಗೆ ಭೂಕುಸಿತ; 14 ಮಂದಿ ಸಾವು – ಸಿಕ್ಕಿಂ ಸಂಪರ್ಕ ಕಡಿತ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ (Darjeeling) ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ.

    ಪ್ರಮುಖ ಮಾರ್ಗಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಜನ ಮೃತಪಟ್ಟಿದ್ದಾರೆ. ಈ ವಿಪತ್ತು ಹಿಮಾಲಯ ರಾಜ್ಯವಾದ ಸಿಕ್ಕಿಂ ಜೊತೆಗಿನ ಸಂಪರ್ಕ ಕಡಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉತ್ತರ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಸ್ತೆ, ಡಾರ್ಜಿಲಿಂಗ್ ಮತ್ತು ಸಿಲಿಗುರಿಯನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಗಳು ರಸ್ತೆ ತಡೆಗಳಿಗೆ ಕಾರಣವಾಗಿವೆ.

    ದುರ್ಗಾ ಪೂಜೆಯ ನಂತರ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸುತ್ತಾರೆ. ಈ ವಿಪತ್ತಿನಲ್ಲಿ ಅನೇಕ ಪ್ರವಾಸಿಗರು ಸಿಲುಕಿಕೊಳ್ಳುವ ಸಾಧ್ಯತೆಯಿದೆ.

    ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವು ಡಾರ್ಜಿಲಿಂಗ್‌ನ ಟೈಗರ್ ಹಿಲ್ ಮತ್ತು ರಾಕ್ ಗಾರ್ಡನ್ ಸೇರಿದಂತೆ ಪ್ರವಾಸಿ ತಾಣಗಳನ್ನು ಮುಚ್ಚಲು ನಿರ್ಧರಿಸಿದೆ. ಆಟಿಕೆ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

  • ಉತ್ತರ ಸಿಕ್ಕಿಂನಲ್ಲಿ ಭಾರೀ ಭೂಕುಸಿತ – ದುರ್ಘಟನೆಯಲ್ಲಿ ಮೂವರು ಸೈನಿಕರು ಬಲಿ, 6 ಸೈನಿಕರು ಮಿಸ್ಸಿಂಗ್

    ಉತ್ತರ ಸಿಕ್ಕಿಂನಲ್ಲಿ ಭಾರೀ ಭೂಕುಸಿತ – ದುರ್ಘಟನೆಯಲ್ಲಿ ಮೂವರು ಸೈನಿಕರು ಬಲಿ, 6 ಸೈನಿಕರು ಮಿಸ್ಸಿಂಗ್

    ಗ್ಯಾಂಗ್‌ಟಕ್‌: ಈಶಾನ್ಯ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಈ ನಡುವೆ ಉತ್ತರ ಸಿಕ್ಕಿಂನಲ್ಲಿ (North Sikkim) ನಿರಂತರ ಮಳೆಯಿಂದಾಗಿ ಮಿಲಿಟರಿ ಶಿಬಿರಗಳಿರುವ‌ ಛಾತೆನ್‌ನಲ್ಲಿ (Landslide at Chaten) ಭೂಕುಸಿತ ಸಂಭವಿಸಿದ್ದು, ಮೂವರು ಸೈನಿಕರು ದುರ್ಮರಣಕ್ಕೀಡಾಗಿದ್ದಾರೆ.

    ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 6 ಮಂದಿ ಸೈನಿಕರು (Soldiers) ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಸೈನಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಉತ್ತರ ಸಿಕ್ಕಿಂನಲ್ಲಿ ಭಾರೀ ಭೂಕುಸಿತ – ದುರ್ಘಟನೆಯಲ್ಲಿ ಮೂವರು ಸೈನಿಕರು ಬಲಿ, 6 ಸೈನಿಕರು ಮಿಸ್ಸಿಂಗ್

    ಇದುವರೆಗಿನ ಕಾರ್ಯಾಚರಣೆಯಲ್ಲಿ ಮೃತಪಟ್ಟ ಸೈನಿಕರಾದ ಹವ್ ಲಖ್ವಿಂದರ್ ಸಿಂಗ್, ಲ್ಯಾನ್ಸ್ ನಾಯಕ್ ಮುನೀಶ್ ಠಾಕೂರ್ ಮತ್ತು ಪೋರ್ಟರ್ ಅಭಿಷೇಕ್ ಲಖಾಡ ಅವರ ಮೃತದೇಹಗಳು ಪತ್ತೆಯಾಗಿವೆ. ರಕ್ಷಿಸಲಾದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಪ್ರಕೃತಿಯಿಂದಲೇ ಕೈಬೀಸಿ ಕರೆಯೋ ನೈನಿತಾಲ್‌ಗೆ ಬರೋ ಪ್ರವಾಸಿಗರ ಸಂಖ್ಯೆ ಕುಸಿತ – ಯಾಕೆ?

    ಸಿಕ್ಕಿಂನಲ್ಲಿ ನಿರಂತರ ಮಳೆಯಿಂದ ಮತ್ತಷ್ಟು ಭೂಕುಸಿತವಾಗುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಸೇನೆ ಕಳವಳ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಸಂಭಾವ್ಯ ಭೂಕುಸಿತ ಪ್ರದೇಶಗಳಲ್ಲಿರುವ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಇದನ್ನೂ ಓದಿ: ಅಸ್ಸಾಂ | ಹಠಾತ್‌ ಆಗಿ ಹೆಚ್ಚಿದ ಪ್ರವಾಹ – ಸಂಕಷ್ಟದಲ್ಲಿ  ಸಿಲುಕಿದ್ದ 14 ಮಂದಿಯನ್ನು ರಕ್ಷಿಸಿದ ವಾಯುಪಡೆ

  • ಸಹ ಸೈನಿಕನನ್ನು ರಕ್ಷಿಸಲು ಹೊಳೆಗೆ ಹಾರಿದ 23ರ ಯೋಧ ಪ್ರವಾಹಕ್ಕೆ ಸಿಲುಕಿ ದುರಂತ ಸಾವು

    ಸಹ ಸೈನಿಕನನ್ನು ರಕ್ಷಿಸಲು ಹೊಳೆಗೆ ಹಾರಿದ 23ರ ಯೋಧ ಪ್ರವಾಹಕ್ಕೆ ಸಿಲುಕಿ ದುರಂತ ಸಾವು

    – 6 ತಿಂಗಳ ಹಿಂದಷ್ಟೇ ಸೇನೆ ಸೇರಿದ್ದ ಲೆಫ್ಟಿನೆಂಟ್‌

    ಗ್ಯಾಂಗ್ಟಾಕ್: ತನ್ನ ಸಹ ಸೈನಿಕನನ್ನು ರಕ್ಷಿಸಲು ಹೊಳೆಗೆ ಹಾರಿದ ಭಾರತೀಯ ಸೇನಾ ಯೋಧ (Army Officer) ಪ್ರವಾಹಕ್ಕೆ ಸಿಲುಕಿ ದಾರುಣ ಸಾವಿಗೀಡಾಗಿರುವ ಘಟನೆ ಸಿಕ್ಕಿಂನಲ್ಲಿ ನಡೆದಿದೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೇನೆಗೆ ನಿಯೋಜನೆಗೊಂಡಿದ್ದ ಸಿಕ್ಕಿಂ ಸ್ಕೌಟ್ಸ್‌ನ 23 ವರ್ಷದ ಲೆಫ್ಟಿನೆಂಟ್ ಶಶಾಂಕ್ ತಿವಾರಿ (Lieutenant Shashank Tiwar) ಮೃತಪಟ್ಟವರು. ಸಿಕ್ಕಿಂನಲ್ಲಿರುವ (Sikkim) ಯುದ್ಧತಂತ್ರದ ಕಾರ್ಯಾಚರಣಾ ನೆಲೆಯ ಕಡೆಗೆ ಮಾರ್ಗ ತೆರೆಯುವ ಗಸ್ತು ನಡೆಸುತ್ತಿದ್ದರು. ಭವಿಷ್ಯದ ನಿಯೋಜನೆಗಾಗಿ ಸಿದ್ಧವಾಗುತ್ತಿರುವ ಪ್ರಮುಖ ಪೋಸ್ಟ್ ಕಡೆಗೆ ಹೋಗುತ್ತಿದ್ದಾಗ, ಗಸ್ತು ತಂಡದ ಸದಸ್ಯರಲ್ಲಿ ಒಬ್ಬರು ಬೆಳಗ್ಗೆ 11 ಗಂಟೆ ಸುಮಾರಿಗೆ ಮರದ ಸೇತುವೆಯನ್ನು ದಾಟುವಾಗ ಕಾಲು ಜಾರಿ ಬಿದ್ದರು. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಡ್ರೋನ್‌ ದಾಳಿ!

    ಸೇತುವೆಯಿಂದ ಬಿದ್ದು ಪರ್ವತದ ಹೊಳೆಯಲ್ಲಿ ಸಿಲುಕಿ ಅಗ್ನಿವೀರ್ ಸ್ಟೀಫನ್ ಸುಬ್ಬಾ ಕೊಚ್ಚಿ ಹೋದರು. ಮುಳುಗುತ್ತಿದ್ದ ಸುಬ್ಬಾ ಅವರನ್ನು ರಕ್ಷಿಸಲು ಲೆಫ್ಟಿನೆಂಟ್ ತಿವಾರಿ ನೀರಿಗೆ ಹಾರಿದರು. ಮತ್ತೊಬ್ಬ ಸೈನಿಕ ನಾಯಕ್ ಪುಕಾರ್ ಕಟೀಲ್ ತಕ್ಷಣವೇ ಬೆಂಬಲವಾಗಿ ಹಿಂಬಾಲಿಸಿದರು. ಅವರು ಮುಳುಗುತ್ತಿದ್ದ ಅಗ್ನಿವೀರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

    ಸುಬ್ಬಾ ಅವರನ್ನು ಸುರಕ್ಷಿತವಾಗಿ ಕರೆತರುವಷ್ಟರಲ್ಲಿ, ಲೆಫ್ಟಿನೆಂಟ್ ತಿವಾರಿ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿಹೋದರು. ಅವರ ದೇಹವು ಸುಮಾರು 30 ನಿಮಿಷಗಳ ನಂತರ 800 ಮೀಟರ್ ಕೆಳಗೆ ಪತ್ತೆಯಾಗಿತ್ತು. ಅವರ ಪೋಷಕರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

    ಚಿಕ್ಕ ವಯಸ್ಸು ಮತ್ತು ಅಲ್ಪಾವಧಿಯ ಸೇವೆಯ ಹೊರತಾಗಿಯೂ ಲೆಫ್ಟಿನೆಂಟ್‌ ತಿವಾರಿ ಮುಂದಿನ ಪೀಳಿಗೆಯ ಸೈನಿಕರಿಗೆ ಸ್ಫೂರ್ತಿ ನೀಡುವ ಧೈರ್ಯ ಮತ್ತು ಸೌಹಾರ್ದತೆಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.

  • 20 ಓವರ್‌ಗಳಲ್ಲಿ 37 ಸಿಕ್ಸರ್‌, 349 ರನ್‌ – ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ

    20 ಓವರ್‌ಗಳಲ್ಲಿ 37 ಸಿಕ್ಸರ್‌, 349 ರನ್‌ – ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ

    ಮುಂಬೈ: ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಬರೋಡಾ (Baroda), ಸಿಕ್ಕಿಂ ತಂಡದ ವಿರುದ್ಧ ರನ್‌ ರಣಮಳೆಯನ್ನೇ ಸುರಿಸಿದೆ.

    ಇಂದೋರ್​​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೃನಾಲ್‌ ಪಾಂಡ್ಯ ನಾಯಕತ್ವದ ಬರೋಡಾ ತಂಡ 20 ಓವರ್‌ನಲ್ಲಿ ಬರೋಬ್ಬರಿ 349 ರನ್‌ ಸಿಡಿಸಿ ವಿಶ್ವ ದಾಖಲೆ ಬರೆದಿದೆ. ಆರಂಭಿಕರಾಗಿ ಕಣಕ್ಕಿಳಿದ ಬರೋಡಾದ ಶಾಶ್ವತ್ ರಾವತ್ ಹಾಗೂ ಅಭಿಮನ್ಯು ಸಿಂಗ್ 92 ರನ್‌ ಗಳ ಜೊತೆಯಾಟ ನೀಡಿ ಸ್ಫೋಟಕ ಆರಂಭ ನೀಡಿದರು. ಇದರಲ್ಲಿ ಅಭಿಮನ್ಯು 17 ಎಸೆತಗಳಲ್ಲಿ 53 ರನ್‌ ಬಾರಿಸಿದ್ರೆ, ಶಾಶ್ವತ್‌ 16 ಎಸೆತಗಳಲ್ಲಿ 43 ರನ್ ಸಿಡಿಸಿದರು.

    ಇವರಿಬ್ಬರ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಕ್ರೀಗಿಳಿದ ಭಾನು ಪಾನಿಯಾ (Bhanu Pani) ಭರ್ಜರಿ ಸಿಕ್ಟರ್‌ ಬೌಂಡರಿಗಳ ಮಳೆ ಸುರಿಸಿದರು. ತಾನು ಎದುರಿಸಿದ 51 ಎಸೆಯಗಳಲ್ಲಿ 15 ಭರ್ಜರಿ ಸಿಕ್ಸರ್‌, 5 ಬೌಂಡರಿ ಸೇರಿ 262.74 ಸ್ಟ್ರೈಕ್‌ರೇಟ್‌ನೊಂದಿಗೆ ಅಜೇಯ 134 ರನ್‌ ಚಚ್ಚಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ‌ ಆಯಿಶಾ ಹಫೀಝ್‌ಗೆ ಚಿನ್ನ

    ಇದರೊಂದಿಗೆ ಜೊತೆಯಾದ ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 6 ಸಿಕ್ಸರ್‌ ಗಳನ್ನು ಬಾರಿಸಿ 55 ರನ್‌ ಗಳಿಸಿದರು. ಇನ್ನಿಂಗ್ಸ್‌ನ ಕೆಲ ಓವರ್‌ ಬಾಕಿ ಇರುವಾಗ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ಸೋಲಂಕಿ 16 ಎಸೆತಗಳಲ್ಲಿ 6 ಸಿಕ್ಸರ್​​ಗಳೊಂದಿಗೆ 50 ರನ್ ಬಾರಿಸಿದರು.

    ಒಟ್ಟಾರೆಯಾಗಿ ಬರೋಡಾ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 349 ರನ್‌ ಪೇರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ್ದ ಸಿಕ್ಕಿಂ ತಂಡ 20 ಓವರ್‌ಗಳಲ್ಲಿ ಕೇವಲ 86 ರನ್‌ಗಳಿಸಿ 7 ವಿಕೆಟ್‌ ಕಳೆದುಕೊಂಡು 263 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

    ಈ ಹಿಂದೆ (2024 ರಲ್ಲಿ) ಜಿಂಬಾಬ್ಬೆ ತಂಡ ಗಾಂಬಿಯಾ ವಿರುದ್ಧದ ಪಂದ್ಯದಲ್ಲಿ ತಂಡವು 344 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಇದಕ್ಕೂ ಮುನ್ನ ನೇಪಾಳ ತಂಡ ಮಂಗೋಲಿಯಾ ವಿರುದ್ಧ ಹ್ಯಾಂಗ್‌ಝೌ (2023ರಲ್ಲಿ) 314/3 ರನ್‌ ಗಳಿಸಿತ್ತು.

    ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ಟಾಪ್‌-5 ತಂಡಗಳು
    * ಜಿಂಬಾಬ್ವೆ – 344 ರನ್‌
    * ನೇಪಾಳ – 314 ರನ್‌
    * ಭಾರತ – 297 ರನ್‌
    * ಜಿಂಬಾಬ್ವೆ – 286 ರನ್‌
    * ಭಾರತ – 283 ರನ್‌

  • ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ – ಬೀದರ್ ಯೋಧ ಹುತಾತ್ಮ

    ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ – ಬೀದರ್ ಯೋಧ ಹುತಾತ್ಮ

    ಬೀದರ್: ಭಾರೀ ಹಿಮಪಾತ (Avalanche) ಸಂಭವಿಸಿ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ಬೀದರ್‌ನ (Bidar) ಯೋಧರೊಬ್ಬರು ಸಿಕ್ಕಿಂನಲ್ಲಿ (Sikkim) ಹುತಾತ್ಮರಾಗಿದ್ದಾರೆ.

    20 ವರ್ಷಗಳಿಂದ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಕೊರಿಯಾಳ ಗ್ರಾಮದ ಯೋಧ (Soldier) ಅನಿಲ್ ಕುಮಾರ್ ಉಮಾಕಾಂತರಾವ್ ನವಾಡೆ (40) ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ನಿಂದ 1.30 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

    2004 ರಲ್ಲಿ ಭಾರತೀಯ ಸೇನೆ (Indian Army) ಸೇರಿದ್ದ ಅನಿಲ್‌ ಕುಮಾರ್ ಜಮ್ಮು ಕಾಶ್ಮೀರ, ರಾಜಸ್ಥಾನ, ನಾಗಲಾಂಡ್, ಶಿಮ್ಲಾ, ಮಣಿಪುರ ಹಾಗೂ ಸಿಕ್ಕಿಂ ಸೇರಿದಂತೆ ಹಲವು ರಾಜ್ಯದ ಗಡಿಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಸಿಕ್ಕಿಂ ರಾಜ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಿಲ್ ಕುಮಾರ್ ಪಾರ್ಥಿವ ಶರೀರ ಭಾನುವಾರ ಸಂಜೆ ಸ್ವಗ್ರಾಮಕ್ಕೆ ಬರುವ ಸಾಧ್ಯತೆಯಿದೆ.

  • ಸಿಕ್ಕಿಂ ಅಸೆಂಬ್ಲಿಯಲ್ಲಿ SKM ಸುನಾಮಿ- ಚಾಮ್ಲಿಂಗ್ ಪಕ್ಷ ಧೂಳೀಪಟ!

    ಸಿಕ್ಕಿಂ ಅಸೆಂಬ್ಲಿಯಲ್ಲಿ SKM ಸುನಾಮಿ- ಚಾಮ್ಲಿಂಗ್ ಪಕ್ಷ ಧೂಳೀಪಟ!

    ಗ್ಯಾಂಗ್ಟಾಕ್: ಲೋಕಸಭಾ ಚುನಾವಣೆ ಫಲಿತಾಂಶ ಬರುವ ಮುನ್ನವೇ ಇಂದು ಸಿಕ್ಕಿಂ (Sikkim) ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result 2024) ಹೊರಬಿದ್ದಿದೆ.

    ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಕ್ಲೀನ್ ಸ್ವೀಪ್ ಮಾಡಿದೆ. 32 ಸ್ಥಾನಗಳ ಪೈಕಿ ಬರೋಬ್ಬರಿ 31ರಲ್ಲಿ ಗೆದ್ದು ದಿಗ್ವಿಜಯ ಸಾಧಿಸಿದೆ. ಎಸ್‌ಡಿಎಫ್ ಪಕ್ಷ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿದೆ. ಸಿಕ್ಕಿಂನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು ಆದರೆ ಈ  ಎರಡೂ ಪಕ್ಷಗಳು ಖಾತೆಯನ್ನೇ ತೆರೆದಿಲ್ಲ.

    ಸಿಕ್ಕಿಂನಲ್ಲಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‍ಕೆಎಂ ಮತ್ತು ಮಾಜಿ ಸಿಎಂ  ಪವನ್ ಕುಮಾರ್ ಚಾಮ್ಲಿಂಗ್ (Pawan Kumar Chamling)  ನೇತೃತ್ವದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. 146 ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಅವರ ಪತ್ನಿ ಕೃಷ್ಣ ಕುಮಾರಿ ರೈ, ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ಮಾಜಿ ಭಾರತೀಯ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಮತ್ತು ಬಿಜೆಪಿಯ ನರೇಂದ್ರ ಕುಮಾರ್ ಸುಬ್ಬಾ ಪ್ರಮುಖ ಅಭ್ಯರ್ಥಿಗಳಾಗಿದ್ದರು. ಬೈಚುಂಗ್ ಭುಟಿಯಾ ಚುನಾವಣೆಯಲ್ಲಿ ಸೋತಿದ್ದಾರೆ. 2019 ರಲ್ಲಿ ಪ್ರೇಮ್ ಸಿಂಗ್ ತಮಾಂಗ್ (Prem Singh Tamang)  ನೇತೃತ್ವದ ಎಸ್‍ಕೆಎಂ 17 ಸ್ಥಾನಗಳನ್ನು ಗೆದ್ದರೆ, ಎಸ್‍ಡಿಎಫ್ 15 ಸ್ಥಾನಗಳನ್ನು ಗೆದ್ದಿತ್ತು. ಇದನ್ನೂ ಓದಿ: ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ

    ಇತ್ತ ಅರುಣಾಚಲದಲ್ಲಿ (Arunachalpradesh) ಬಿಜೆಪಿ ಮತ್ತದರ ಮಿತ್ರಪಕ್ಷ ಕಾನ್ರಡ್ ಸಂಗ್ಮಾ ನೇತೃತ್ವದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 42ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯ ಪೆಮಾಖಂಡು ಮೂರನೇ ಬಾರಿ ಸಿಎಂ ಆಗೋದು ಖಚಿತವಾಗಿದೆ. 60 ಸ್ಥಾನಗಳ ಸದಸ್ಯ ಬಲದ ಅರುಣಾಚಲದಲ್ಲಿ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ರು.

  • Sikkim Assembly Election Results: 2ನೇ ಬಾರಿಗೆ ಅಧಿಕಾರಕ್ಕೇರಿದ ಎಸ್‌ಕೆಎಂ

    Sikkim Assembly Election Results: 2ನೇ ಬಾರಿಗೆ ಅಧಿಕಾರಕ್ಕೇರಿದ ಎಸ್‌ಕೆಎಂ

    ಗ್ಯಾಂಗ್ಟಾಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಭಾನುವಾರ ಹಿಮಾಲಯ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ.

    ಸಿಕ್ಕಿಂ ವಿಧಾನಸಭಾ ಚುನಾವಣೆ (Sikkim Assembly Election Results 2024) ಮತ ಎಣಿಕೆ ಭಾನುವಾರ ನಡೆಯಿತು. 32 ಸದಸ್ಯ ಬಲದ ವಿಧಾನಸಭೆಯಲ್ಲಿ 26 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸುವ ಮೂಲಕ ಎಸ್‌ಕೆಎಂ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ: ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ – 60ರ ಪೈಕಿ 47 ಸ್ಥಾನಗಳಲ್ಲಿ ಮುನ್ನಡೆ

    ಮತ ಎಣಿಕೆ ಇನ್ನೂ ನಡೆಯುತ್ತಿದೆ. ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (Prem Singh Tamang) ನೇತೃತ್ವದ ಎಸ್‌ಕೆಎಂ ಇತರ 10 ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದೆ. ಸಿಎಂ ತಮಾಂಗ್ ಅವರು ರೆನಾಕ್ ಕ್ಷೇತ್ರದಿಂದ 7,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಸೋರೆಂಗ್ ಚಕುಂಗ್ ಕ್ಷೇತ್ರದಲ್ಲೂ ಅವರು ಮುನ್ನಡೆ ಸಾಧಿಸಿದ್ದಾರೆ.

    32 ಸ್ಥಾನಗಳ ಪೈಕಿ ಎಸ್‌ಕೆಎಂ 26ರಲ್ಲಿ ಗೆದ್ದು ಇನ್ನೂ ಐದರಲ್ಲಿ ಮುನ್ನಡೆ ಸಾಧಿಸಿದೆ. ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಕೇವಲ ಒಂದು ಸ್ಥಾನವನ್ನು ಗೆದ್ದಿದೆ. ಹಾಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ನಾನು ಸಿಕ್ಕಿಂ ಜನರಿಗೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ನಾವು ಜನರಿಗಾಗಿ ಕೆಲಸ ಮಾಡಿದ್ದೇವೆ. ಅದಕ್ಕಾಗಿಯೇ ನಾವು ಗೆದ್ದಿದ್ದೇವೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಇದು ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಫ್ಯಾಂಟಸಿ ಪೋಲ್‌ – ʻಇಂಡಿಯಾʼ ಒಕ್ಕೂಟಕ್ಕೆ 295 ಸೀಟ್‌ ಪಕ್ಕಾ: ರಾಗಾ ವಿಶ್ವಾಸ

    ಎಸ್‌ಡಿಎಫ್ ನಾಯಕ ಪವನ್ ಚಾಮ್ಲಿಂಗ್ ಅವರು ದೇಶದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದು, ಅವರು ಸ್ಪರ್ಧಿಸಿದ ಎರಡೂ ಸ್ಥಾನಗಳಲ್ಲಿ ಸೋತಿದ್ದಾರೆ.

  • ಸಿಕ್ಕಿಂನಿಂದ 150 ಕಿಮೀ ದೂರದ ಗಡಿಯಲ್ಲಿ ಚೀನಾ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜನೆ!

    ಸಿಕ್ಕಿಂನಿಂದ 150 ಕಿಮೀ ದೂರದ ಗಡಿಯಲ್ಲಿ ಚೀನಾ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜನೆ!

    – ಜೆ-20 ಸ್ಟೆಲ್ತ್ ಫೈಟರ್ ಜೆಟ್ ವಿಶೇಷನೆ ಏನು?
    – ಭಾರತಕ್ಕೆ ಇದರ ಸಂದೇಶ ಏನು?

    ಗ್ಯಾಂಗ್ಟಾಕ್/ಬೀಜಿಂಗ್: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನವು ತನ್ನ ರಕ್ಷಣಾ ಬಲ ಹೆಚ್ಚಿಸಿಕೊಳ್ಳಲು ಚೀನಾ (China) ನೆರವು ನೀಡಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿರುವ ಹೊತ್ತಿನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸಿಕ್ಕಿಂನಲ್ಲಿ ಭಾರತದ ಗಡಿಯಿಂದ ಸುಮಾರು 150 ಕಿಮೀ ದೂರದಲ್ಲಿ ಚೀನಾ ತನ್ನ ಅತ್ಯಾಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳನ್ನು (Stealth Fighter Jets) ಭದ್ರತೆಗೆ ನಿಯೋಜಿಸಿದೆ. ಮೇ 27ರಂದು ಸಂಗ್ರಹಿಸಲಾದ ಉಪಗ್ರಹ ಚಿತ್ರಗಳು ಇದನ್ನು ದೃಢಪಡಿಸಿವೆ.

    ಟಿಬೆಟ್‌ನ 2ನೇ ಅತಿದೊಡ್ಡ ನಗರವಾದ ಶಿಗಾಟ್ಸೆಗೆ ಸೇವೆ ಸಲ್ಲಿಸುತ್ತಿರುವ ಮಿಲಿಟರಿ ಮತ್ತು ನಾಗರಿಕ ವಿಮಾನ ನಿಲ್ದಾಣದಲ್ಲಿ 6 ಚೀನೀ ವಾಯುಪಡೆಯ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳ ಉಪಸ್ಥಿತಿಯನ್ನು ಉಪಗ್ರಹ ಚಿತ್ರವು ಬಹಿರಂಗಪಡಿಸುತ್ತದೆ. ಈ ವಿಮಾನ ನಿಲ್ದಾಣವು ಸುಮಾರು ಸಮುದ್ರಮಟ್ಟದಿಂದ 12,408 ಅಡಿಗಳಷ್ಟು ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

    ಸದ್ಯ ಜೆ-20 ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿರುವ ಬಗ್ಗೆ ಭಾರತೀಯ ವಾಯುಪಡೆ (IAF) ಗಮನಕ್ಕೆ ಬಂದಿದ್ದು, ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಜೆ-20 ಸ್ಟೆಲ್ತ್ ಫೈಟರ್ ಜೆಟ್‌ನ ವಿಶೇಷತೆ ಏನು?
    ಮೈಟಿ ಡ್ರ‍್ಯಾಗನ್ ಎಂದೂ ಕರೆಯಲ್ಪಡುವ, ಡಬಲ್ ಇಂಜಿನ್ ಸಾಮರ್ಥ್ಯದ ಜೆ-20 ಸ್ಟೆಲ್ತ್ ಫೈಟರ್ ಜೆಟ್ ಅನ್ನು 2017ರಲ್ಲಿ ಸೇವೆಗೆ ಪರಿಚಯಿಸಲಾಯಿತು. ಜೆ-20 ಸ್ಟೆಲ್ತ್ ಯುದ್ಧ ವಿಮಾನವು ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.

    ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ಭದ್ರತೆಗೆ ಇವುಗಳನ್ನು ನಿಯೋಜಿಸಿದೆ. ಈ ವಿಮಾನಗಳು ಇದೀಗ ಟಿಬೆಟ್‌ನ ಶಿಗಾಟ್ಸೆ ಮತ್ತು ಭಾರತೀಯ ಗಡಿ ಸಮೀಪದಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ. ಇವು ಭಾರತ ನಿಯೋಜಿಸಿರುವ ಫ್ರಾನ್ಸ್ ನಿರ್ಮಿತ ರಫೇಲ್ (Rafale) ಯುದ್ಧ ವಿಮಾನಗಳಿಗೆ ಪೈಪೋಟಿ ನೀಡಲಿವೆ. ಚೀನಾ ಒಟ್ಟು 250 ಸ್ಟೆಲ್ತ್ ಫೈಟರ್‌ಗಳನ್ನು ಹೊಂದಿರಬಹುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

    ಟಿಬೆಟ್‌ನಗರದಲ್ಲಿ ಚೀನಾ ಜೆ-20 ಯುದ್ಧ ವಿಮಾನ ನಿಯೋಜನೆ ಮಾಡಿರುವುದು ಇದೇ ಮೊದಲೇನಲ್ಲ. 2020 ಮತ್ತು 2023ರ ಸಂದರ್ಭದಲ್ಲೂ ಚೀನಾದ ಹೊಟಾನ್ ಪ್ರಾಂತ್ಯದ ಕ್ಸಿನ್‌ಜಿಯಾಂಗ್‌ನಲ್ಲಿ ಜೆಟ್‌ಗಳನ್ನು ನಿಯೋಜಿಸಲಾಗಿತ್ತು.

    ಕಳೆದ 5 ವರ್ಷಗಳಲ್ಲಿ ಟಿಬೆಟ್ ಮತ್ತು ಭಾರತದ ಗಡಿ ಭಾಗಗಳಲ್ಲಿ ಚೀನಾ ವ್ಯವಸ್ಥಿತವಾಗಿ ತನ್ನ ವಾಯುಶಕ್ತಿ ಸಾಮರ್ಥ್ಯವನ್ನು ನಿಯೋಜಿಸುತ್ತಾ ಬಂದಿದೆ. ಹೊಸ ವಾಯುನೆಲೆಗಳನ್ನು ನಿರ್ಮಿಸಿದ್ದು, ಅಸ್ತಿತ್ವದಲ್ಲಿರುವ ವಾಯುನೆಲೆಗಳಿಗೆ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಇದರೊಂದಿಗೆ ಚೀನಾ ಜೆ-20 ಮತ್ತು ಹೆಚ್-6 ಪರಮಾಣು ಬಾಂಬರ್‌ಗಳಂತಹ ವಿಮಾನಗಳನ್ನು ಈ ಗಡಿ ಪ್ರದೇಶಗಳಿಗೆ ನಿಯೋಜಿಸಲು ಪ್ರಾರಂಭಿಸಿದೆ ಎಂದು ಚೀನಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಅರುಣಾಚಲ, ಸಿಕ್ಕಿಂ ಅಸೆಂಬ್ಲಿ ಎಲೆಕ್ಷನ್ ಮತ ಎಣಿಕೆ ದಿನಾಂಕ ಬದಲಾವಣೆ

    ಅರುಣಾಚಲ, ಸಿಕ್ಕಿಂ ಅಸೆಂಬ್ಲಿ ಎಲೆಕ್ಷನ್ ಮತ ಎಣಿಕೆ ದಿನಾಂಕ ಬದಲಾವಣೆ

    – ಜೂ.4ರ ಬದಲು ಜೂ.2ರಂದು ಮತ ಎಣಿಕೆ

    ನವದೆಹಲಿ: ಲೋಕಸಭಾ ಚುನಾವಣೆ (Lok sabha Election) ಹಾಗೂ ಮತ ಎಣಿಕೆ (Vote Counting) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ (Election Commission Of India) ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕದಲ್ಲಿ ಬದಲಾವಣೆ ಮಾಡಿದೆ.

    ಏಪ್ರಿಲ್ 19ರಿಂದ ಮತದಾನ ಆರಂಭವಾಗಲಿದ್ದು, ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಆದರೆ ಇದೀಗ ಅರುಣಾಚಲ (Arunachal Pradesh) ಹಾಗೂ ಸಿಕ್ಕಿಂ (Sikkim) ವಿಧಾನಸಭೆ ಚುನಾವಣೆಯ (Assembly Election) ಮತ ಎಣಿಕೆಯನ್ನು ಜೂ.4ರ ಬದಲು ಜೂ.2ರಂದು ನಡೆಸುವಂತೆ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್‌ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?

    ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಯ ಅವಧಿ ಜೂನ್ 2ರಂದು ಮುಕ್ತಾಯಗೊಳ್ಳುವ ಹಿನ್ನೆಲೆ ಈ ಮಹತ್ತರ ಬದಲಾವಣೆ ತರಲಾಗಿದೆ. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗೆ ಏಪ್ರಿಲ್ 19ರಂದು ಒಂದೇ ಹಂತದ ಮತದಾನ ನಡೆಯಲಿದೆ. ಇನ್ನು ಅರುಣಾಚಲ ಮತ್ತು ಸಿಕ್ಕಿಂ ಲೋಕಸಭಾ ಕ್ಷೇತ್ರಗಳ ಫಲಿತಾಂಶ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಇದನ್ನೂ ಓದಿ: ಅಬಕಾರಿ ನೀತಿ ಹಗರಣ – ಇ.ಡಿಯಿಂದ ಕೇಜ್ರಿವಾಲ್‌ಗೆ 9ನೇ ಬಾರಿ ಸಮನ್ಸ್

  • ಸಿಕ್ಕಿಂನಲ್ಲಿ ಹಿಮಪಾತ – ಸಿಲುಕಿಕೊಂಡಿದ್ದ 800 ಪ್ರವಾಸಿಗರನ್ನು ರಕ್ಷಿಸಿದ ಸೇನೆ

    ಸಿಕ್ಕಿಂನಲ್ಲಿ ಹಿಮಪಾತ – ಸಿಲುಕಿಕೊಂಡಿದ್ದ 800 ಪ್ರವಾಸಿಗರನ್ನು ರಕ್ಷಿಸಿದ ಸೇನೆ

    ಗ್ಯಾಂಗ್ಟಾಕ್: ಪೂರ್ವ ಸಿಕ್ಕಿಂನ (Sikkim) ಪರ್ವತ ಪ್ರದೇಶದಲ್ಲಿ ಹಿಮಪಾತವಾದ (Snowfall) ಹಿನ್ನೆಲೆ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಪ್ರವಾಸಿಗರನ್ನು ಸೇನಾ ಅಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ.

    ಬುಧವಾರ ಹಿಮಪಾತವಾದ ಹಿನ್ನೆಲೆ ಭಾರತೀಯ ಸೇನೆಯ ವಿಭಾಗವಾದ ತ್ರಿಶಕ್ತಿ ಕಾರ್ಪ್ಸ್‌ನ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಕ್ಷಣಾ ಕಾರ್ಯಾಚರಣೆ ಸಂಜೆಯವರೆಗೂ ಮುಂದುವರಿದಿದೆ. ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ – 8 ಲೋಕಸಭಾ ಸಿಬ್ಬಂದಿಯ ಅಮಾನತು

    ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಅವರಿಗೆ ಆಶ್ರಯ, ಬೆಚ್ಚಗಿನ ಬಟ್ಟೆ, ವೈದ್ಯಕೀಯ ನೆರವು ಹಾಗೂ ಬಿಸಿ ಊಟವನ್ನೂ ಒದಗಿಸಲಾಗಿದೆ. ಇದನ್ನೂ ಓದಿ: ಸಂಸತ್ ಭವನದಲ್ಲಿ ಸ್ಮೋಕ್ ದಾಳಿ – ‘ಕೈ’ ಕಾರ್ಯಕರ್ತರಿಂದ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ