Tag: ಸಿಕಂದರ್‌ ಸಿನಿಮಾ

  • ‘ಸಿಕಂದರ್’ ಸೋಲಿನ ಹಿನ್ನೆಲೆ ಪ್ರಭಾಸ್ ಚಿತ್ರದಿಂದ ರಶ್ಮಿಕಾ ಮಂದಣ್ಣ ಔಟ್?

    ‘ಸಿಕಂದರ್’ ಸೋಲಿನ ಹಿನ್ನೆಲೆ ಪ್ರಭಾಸ್ ಚಿತ್ರದಿಂದ ರಶ್ಮಿಕಾ ಮಂದಣ್ಣ ಔಟ್?

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ ‘ಸಿಕಂದರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ. ಈ ಬೆನ್ನಲ್ಲೇ ಪ್ರಭಾಸ್ ನಟನೆಯ ‘ಸ್ಪಿರಿಟ್’ (Spirit) ಚಿತ್ರದಿಂದ ರಶ್ಮಿಕಾ ಹೊರಬಿದ್ದಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಏ.16ರಿಂದ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಆರಂಭ- ಅಪ್‌ಡೇಟ್ ಕೊಟ್ರು ಕಿಚ್ಚ

    ಸಲ್ಮಾನ್ ಜೊತೆ ಬ್ಯಾಕ್ ಟು ಬ್ಯಾಕ್ 3 ಸಕ್ಸಸ್‌ಫುಲ್ ಸಿನಿಮಾ ಕೊಟ್ಟು ಗೆದ್ದ ರಶ್ಮಿಕಾ ಮಂದಣ್ಣ ಇದ್ರೂ ಕೂಡ ‘ಸಿಕಂದರ್’ (Sikandar) ಚಿತ್ರ ಗೆಲ್ಲೋದ್ರಲ್ಲಿ ವಿಫಲವಾಯ್ತು. ಈ ಸೋಲಿನ ಕಹಿಯ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ರಶ್ಮಿಕಾನೇ ನಾಯಕಿ ಎಂಬ ವಿಚಾರ ದಟ್ಟವಾಗಿ ಕೇಳಿ ಬಂದಿತ್ತು. ಸಿಕಂದರ್ ಸೋಲಿನ ಹಿನ್ನೆಲೆ ಚಿತ್ರತಂಡ ಬೇರೆ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಸದ್ಯ ಈ ಸುದ್ದಿ ಕೇಳಿ ಶ್ರೀವಲ್ಲಿ ಫ್ಯಾನ್ಸ್‌ಗೆ ಬೇಸರದಲ್ಲಿದ್ದಾರೆ. ಇದನ್ನೂ ಓದಿ:ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

    ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಸ್ಪಿರಿಟ್’ ಸಿನಿಮಾ ಇದೇ ಮೇ ರಿಂದ ಶುರುವಾಗಲಿದೆ. ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಮುಂದಿನ ರಿಲೀಸ್‌ಗೆ ತಂಡ ಯೋಜನೆ ಹಾಕಿಕೊಂಡಿದೆ. ದಿ ರಾಜಾ ಸಾಬ್ ಸಿನಿಮಾ ಮುಗಿಸಿ ಸದ್ಯದಲ್ಲೇ ಪ್ರಭಾಸ್ ಸ್ಪಿರಿಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

  • ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್

    ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಸಿಕಂದರ್’ (Sikandar) ಸಿನಿಮಾದ ಸಂದರ್ಶನದಲ್ಲಿ ನೀಡಿರುವ ಹೇಳಿಕೆವೊಂದು ವೈರಲ್ ಆಗಿದೆ. ಅಂದು ಹೈದರಾಬಾದ್‌ನವಳು ಎಂದಿದ್ದ ರಶ್ಮಿಕಾ, ಈಗ ನಾನು ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದಲ್ಲಿ ಎಂದಿದ್ದಾರೆ. ಈಗ ತಾಯ್ನಾಡು ನೆನಪಿಗೆ ಬಂತಾ ಎಂದೆಲ್ಲಾ ನಟಿಗೆ ಕಾಲೆಳೆದಿದ್ದಾರೆ.

    ಸಂದರ್ಶನದಲ್ಲಿ ಹೊಸ ಭಾಷೆಗಳನ್ನು ಕಲಿಯುವುದರ ಕುರಿತು ರಶ್ಮಿಕಾ ಮಂದಣ್ಣಗೆ ಪ್ರಶ್ನೆ ಎದುರಾಗಿದೆ. ನೀವು ಯಾವ ಊರಿನಲ್ಲಿ ಇರುತ್ತಿರೋ ಮತ್ತು ಆ ಊರಿನ ಜನರು ನಿಮ್ಮ ಸುತ್ತಮುತ್ತ ಇರುವಾಗ, ಆ ಊರಿನ ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದಿದ್ದು ಕರ್ನಾಟಕದಲ್ಲಿ ಹಾಗಾಗಿ ನನಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆ ಮಾತ್ರ ತಿಳಿದಿತ್ತು ಎಂದಿದ್ದಾರೆ. ಇದನ್ನೂ ಓದಿ:ಕ್ರೇಜಿ ಕ್ವೀನ್‌ ರಕ್ಷಿತಾ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್

    ಸದ್ಯಕ್ಕೆ ನಾನು ಹೈದರಾಬಾದ್‌ನಲ್ಲಿ ಇದ್ದೇನೆ. ಹಾಗಾಗಿ, ನನ್ನ ಸಹಾಯಕರು, ನನ್ನ ಭದ್ರತಾ ಸಿಬ್ಬಂದಿ ಎಲ್ಲರೂ ತೆಲುಗಿನಲ್ಲೇ ಮಾತನಾಡುತ್ತಾರೆ. ಆದ್ದರಿಂದ ಅವರೊಂದಿಗೆ ಮಾತನಾಡಲು ನಾನು ತೆಲುಗು ಭಾಷೆಯನ್ನು ಬೇಗ ಕಲಿಯಬೇಕಾಯಿತು. ನಾನು ಈಗ ಹಿಂದಿಯನ್ನು ಮಾತನಾಡುತ್ತೇನೆ. ಆದರೆ ತುಂಬಾ ಅಂದ್ರೆ ತುಂಬಾ ಜಾಗೃತಳಾಗಿರುತ್ತೇನೆ. ಯಾಕೆಂದರೆ, ಹಿಂದಿ ಮಾತನಾಡುವಾಗ ನಾನು ಏನಾದರೂ ತಪ್ಪು ಮಾತನಾಡಬಾರದು ಎಂಬ ಕಾರಣಕ್ಕೆ ಎಂದಿದ್ದಾರೆ ರಶ್ಮಿಕಾ. ಇದನ್ನೂ ಓದಿ:ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

    ಆಗ ಸಂದರ್ಶನದಲ್ಲಿದ್ದ ಸಲ್ಮಾನ್ ಖಾನ್ ಅವರು ರಶ್ಮಿಕಾಗೆ ತಮಾಷೆಯಾಗಿ ಕಾಲೆಳೆದಿದ್ದಾರೆ. ಒಂದು ವೇಳೆ ನಾನು ಮುಂಬೈಗೆ ಶಿಫ್ಟ್ ಸುಲಭವಾಗಿ ಹಿಂದಿ ಭಾಷೆಯನ್ನು ಕಲಿಯುತ್ತೇನೆ ಎಂದ ನಟಿಗೆ ಸಲ್ಮಾನ್ ಕೌಂಟರ್ ಕೊಟ್ಟಿದ್ದಾರೆ. ಅದು ಸಾಧ್ಯವಿಲ್ಲ. ನೀವು ಮುಂಬೈಗೆ ಬಂದರೂ ಕೂಡ ಹಿಂದಿಯಲ್ಲಿ ಕಲಿಯಲು ಸಾಧ್ಯವಿಲ್ಲ. ಏಕೆಂದರೆ, ನಿಮ್ಮ ಸುತ್ತಮುತ್ತ ಇರುವವರೆಲ್ಲಾ ಇಂಗ್ಲಿಷ್‌ನಲ್ಲೇ ಮಾತಾಡುತ್ತಾರೆ ಎಂದು ಅವರು ಕಾಲೆಳೆದಿದ್ದಾರೆ.

    ಈ ಹಿಂದೆ ನಟಿ ನಾನು ಹೈದರಾಬಾದ್‌ನವಳು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಈಗ ನಾನು ಕರ್ನಾಟಕದವಳು ಎಂದು ದಿಢೀರ್ ಎಂದು ಹೇಳಿಕೆ ನೀಡಿರೋದು ನೆಟ್ಟಿಗರಿಗೆ ಆಹಾರವಾಗಿದೆ.

    ಸಲ್ಮಾನ್ ಖಾನ್ (Salman Khan) ಮತ್ತು ರಶ್ಮಿಕಾ ನಟನೆಯ ‘ಸಿಕಂದರ್’ ಸಿನಿಮಾ ಮಾ.30ರಂದು ರಿಲೀಸ್ ಆಗಿದೆ. ಸಲ್ಮಾನ್ ಪ್ರೇಯಸಿಯಾಗಿ ಕನ್ನಡತಿ ರಶ್ಮಿಕಾ ನಟಿಸಿದ್ದಾರೆ.

  • ರಶ್ಮಿಕಾ ಅಪ್ಪನಿಗೆ ಇಲ್ಲದಿರೋ ತೊಂದರೆ ನಿಮ್ಮಗ್ಯಾಕೆ- ಟ್ರೋಲಿಗರಿಗೆ ಸಲ್ಮಾನ್ ಖಾನ್ ತಿರುಗೇಟು

    ರಶ್ಮಿಕಾ ಅಪ್ಪನಿಗೆ ಇಲ್ಲದಿರೋ ತೊಂದರೆ ನಿಮ್ಮಗ್ಯಾಕೆ- ಟ್ರೋಲಿಗರಿಗೆ ಸಲ್ಮಾನ್ ಖಾನ್ ತಿರುಗೇಟು

    ಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ (Sikandar) ಚಿತ್ರ ಮಾ.30ರಂದು ರಿಲೀಸ್‌ಗೆ ರೆಡಿಯಿದೆ. ಸದ್ಯ ಮುಂಬೈನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ರಶ್ಮಿಕಾ (Rashmika Mandanna) ಜೊತೆಗಿನ ವಯಸ್ಸಿನ ಅಂತರದ ಬಗ್ಗೆ ಸಲ್ಮಾನ್‌ರನ್ನು ಟ್ರೋಲ್ ಮಾಡಿದ್ದರ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಅವರ ಅಪ್ಪನಿಗೆ ಏನು ತೊಂದರೆ ಇಲ್ಲ ಮತ್ಯಾಕೆ ನಿಮಗೆ ಸಮಸ್ಯೆ ಎಂದು ಖಡಕ್ ಆಗಿ ಸಲ್ಮಾನ್ (Salman Khan) ಮಾತನಾಡಿದ್ದಾರೆ. ಇದನ್ನೂ ಓದಿ:Sikandar ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್‌ ಔಟ್‌- ಸಲ್ಮಾನ್‌ ಖಾನ್‌ ಫೈಟ್‌, ರೊಮ್ಯಾನ್ಸ್‌ ನೋಡಿ ಸೂಪರ್‌ ಎಂದ ಫ್ಯಾನ್ಸ್

    ‘ಸಿಕಂದರ್’ ಸಿನಿಮಾಗೆ ‘ಪುಷ್ಪ 2’ ನಟಿ ನಾಯಕಿ ಎನ್ನುತ್ತಿದ್ದಂತೆ ಸಲ್ಮಾನ್ ಮತ್ತು ರಶ್ಮಿಕಾ ವಯಸ್ಸಿನ ಬಗ್ಗೆ ಚರ್ಚೆ ನಡೆದಿತ್ತು. ಸಲ್ಮಾನ್‌ಗಿಂತ ರಶ್ಮಿಕಾ 31 ವರ್ಷ ಚಿಕ್ಕವರು. ಹಾಗಾಗಿ ಸಹಜವಾಗಿ ಸಲ್ಮಾನ್ ಟೀಕೆಗೆ ಗುರಿಯಾಗಿದ್ರು. ಹಾಗಾಗಿ ಇದೀಗ ಚಿತ್ರದ ಪ್ರಚಾರ ಕಾರ್ಯದ ವೇಳೆ ಸಲ್ಮಾನ್ ಮಾತನಾಡಿ, ಹೀರೋಯಿನ್‌ಗೆ ಯಾವುದೇ ಸಮಸ್ಯೆ ಇಲ್ಲ. ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ಮದೇನು? ನಿಮಗ್ಯಾಕೆ? ಇದು ಸಮಸ್ಯೆಯಂತೆ ಕಾಣುತ್ತಿದೆ ಎಂದು ಕೇಳಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಮುಂದುವರೆದು, ರಶ್ಮಿಕಾಗೆ ನಾಳೆ ಮದುವೆಯಾಗ್ತಾರೆ, ಮುಂದೆ ಮಕ್ಕಳಾಗುತ್ತೆ, ಆಗಲೂ ಕೂಡ ಅವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವರ ಪತಿಯಿಂದ ಅನುಮತಿ ಸಿಗುತ್ತೆ ಎಂದು ಭಾವಿಸಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ. ಮುಂದೆಯೂ ಕೂಡ ಅವರೊಂದಿಗೆ ಸಿನಿಮಾ ಮಾಡುತ್ತೇನೆ ಎಂದು ಟ್ರೋಲಿಗರಿಗೆ ನಟ ತಿರುಗೇಟು ನೀಡಿದ್ದಾರೆ. ಇತ್ತ ಸಲ್ಮಾನ್ ಖಾನ್ ಅವರ ಈ ಮಾತಿಗೆ ಹೌದು ಎಂದು ರಶ್ಮಿಕಾ ಹಿಂದೆ ನಿಂತು ತಲೆಯಾಡಿಸಿದ್ದಾರೆ.

    ಒಟ್ನಲ್ಲಿ ಮಗಳ ವಯಸ್ಸಿನ ನಾಯಕಿ ಜೊತೆ ರೊಮ್ಯಾನ್ಸ್ ಮಾಡ್ತಿದ್ದೀರಾ ಎಂದು ಸಲ್ಮಾನ್‌ಗೆ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ನಟನ ಮಾತಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

  • Sikandar ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್‌ ಔಟ್‌- ಸಲ್ಮಾನ್‌ ಖಾನ್‌ ಫೈಟ್‌, ರೊಮ್ಯಾನ್ಸ್‌ ನೋಡಿ ಸೂಪರ್‌ ಎಂದ ಫ್ಯಾನ್ಸ್

    Sikandar ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್‌ ಔಟ್‌- ಸಲ್ಮಾನ್‌ ಖಾನ್‌ ಫೈಟ್‌, ರೊಮ್ಯಾನ್ಸ್‌ ನೋಡಿ ಸೂಪರ್‌ ಎಂದ ಫ್ಯಾನ್ಸ್

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ‘ಸಿಕಂದರ್’ (Sikandar Film) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ‘ಸಿಕಂದರ್’ ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್  ನೋಡಿ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ಇದನ್ನೂ ಓದಿ:ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

    ‘ಸಿಕಂದರ್’ ಚಿತ್ರದ 3 ನಿಮಿಷ 8 ಸೆಕೆಂಡ್‌ಗಳ ಟ್ರೈಲರ್ ರಿಲೀಸ್ ಆಗಿದೆ. ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಭ್ರಷ್ಟ ರಾಜಕಾರಣಿಯ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ನಟಿಸಿದ್ದಾರೆ. ಸಲ್ಮಾನ್ ಮತ್ತು ಸತ್ಯರಾಜ್ ಇಬ್ಬರ ಜಟಾಪಟಿ ಟ್ರೈಲರ್‌ನಲ್ಲಿ ಹೈಲೈಟ್ ಆಗಿದೆ.

    ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್ ಸ್ಟೈಲೀಶ್ ಲುಕ್, ಪಂಚ್ ಡೈಲಾಗ್, ಆ್ಯಕ್ಷನ್ ಅದ್ಭುತವಾಗಿ ತೋರಿಸಲಾಗಿದೆ. ನಾಯಕಿ ರಶ್ಮಿಕಾ ಮತ್ತು ಸಲ್ಮಾನ್ ರೊಮ್ಯಾನ್ಸ್ ಕ್ಯೂಟ್ ಆಗಿದೆ. ಕನ್ನಡತಿ ರಶ್ಮಿಕಾ ಪಾತ್ರಕ್ಕೂ ‘ಸಿಕಂದರ್‌’ನಲ್ಲಿ ಪ್ರಾಮುಖ್ಯತೆ ಇದೆ. ಒಟ್ನಲ್ಲಿ ‘ಸಿಕಂದರ್’ ಸಿನಿಮಾ ನೋಡಲೇಬೇಕು ಎಂಬಷ್ಟರ ಮಟ್ಟಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ಈ ಚಿತ್ರದಲ್ಲಿ ಸಲ್ಮಾನ್, ರಶ್ಮಿಕಾ ಜೊತೆ ಕಾಜಲ್, ಸತ್ಯರಾಜ್, ಕಾಂತಾರ ಖ್ಯಾತಿಯ ಕಿಶೋರ್, ಶರ್ಮಾನ್ ಜೋಶಿ, ಜತಿನ್ ಸರ್ನಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾ ಮಾ.30ರಂದು ರಿಲೀಸ್ ಆಗಲಿದೆ.

  • ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್

    ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್

    ಸೌತ್‌ನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ (A.R. Murugadoss) ಸದ್ಯ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಮೀರ್ ಖಾನ್ ನಟನೆಯ ‘ಘಜಿನಿ’ ಚಿತ್ರದ ಸೀಕ್ವೆಲ್ ಬರಲಿದೆಯಾ? ಎಂಬುದಕ್ಕೆ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. ‘ಘಜಿನಿ’ ಪಾರ್ಟ್ 2 ಬರೋದಾಗಿ ಅವರು ತಿಳಿಸಿದ್ದಾರೆ.

    ಆಮೀರ್ ಖಾನ್ (Aamir Khan) ಸದ್ಯ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್‌ಗೆ ಇತ್ತೀಚೆಗೆ ಮುರುಗದಾಸ್ ಭೇಟಿ ನೀಡಿರೋದಾಗಿ ತಿಳಿಸಿದ್ದಾರೆ. ಈ ವೇಳೆ, ‘ಘಜಿನಿ 2’ (Ghajini 2) ಬಗ್ಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಬಳಿ ಕೆಲವು ಐಡಿಯಾಗಳಿವೆ. ಮತ್ತೊಮ್ಮೆ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ‘ಘಜಿನಿ 2’ ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ತಿಳಿಸಿದ್ದಾರೆ. ಇದನ್ನೂ ಓದಿ:ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ: ಬ್ರೇಕಪ್‌ ಬಗ್ಗೆ ತಮನ್ನಾ ಮಾತು

    ಇನ್ನೂ 2008ರಲ್ಲಿ ‘ಘಜಿನಿ’ (Ghajini) ಸಿನಿಮಾ ರಿಲೀಸ್ ಆಗಿತ್ತು. ಆಮೀರ್ ಖಾನ್ ಮತ್ತು ಆಸಿನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ಸಕ್ಸಸ್ ಕಂಡಿತ್ತು. ಇದೀಗ ಹಲವು ವರ್ಷಗಳ ನಂತರ ಇದರ ಸಿಕ್ವೇಲ್ ತರಲು ಪ್ಲ್ಯಾನ್ ನಡೆಯುತ್ತಿದೆ.‌ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದ್ದು, ಈ ಸುದ್ದಿ ತಿಳಿದು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • ಮಾ.30ರಂದು ರಿಲೀಸ್‌ ಆಗಲಿದೆ ಸಲ್ಮಾನ್‌ ಖಾನ್‌ ನಟನೆಯ ‘ಸಿಕಂದರ್‌’ ಸಿನಿಮಾ

    ಮಾ.30ರಂದು ರಿಲೀಸ್‌ ಆಗಲಿದೆ ಸಲ್ಮಾನ್‌ ಖಾನ್‌ ನಟನೆಯ ‘ಸಿಕಂದರ್‌’ ಸಿನಿಮಾ

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ (Sikandar) ಚಿತ್ರದ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಮಾ.30ರಂದು ‘ಸಿಕಂದರ್’ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಶರಣ್ಯ ಶೆಟ್ಟಿ ಹೆಸರಿನಲ್ಲಿ ಹಣ ವಂಚನೆ- ಎಚ್ಚರಿಕೆ ನೀಡಿದ ನಟಿ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ‌’ಸಿಕಂದರ್’ ಸಿನಿಮಾ ಇದೇ ಮಾ.30ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸಲಿದೆ. ಈಗಾಗಲೇ ಸಾಂಗ್ಸ್, ಟೀಸರ್ ಮೂಲಕ ‘ಸಿಕಂದರ್’ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಏಬ್ಬಿಸಿದೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

     

    View this post on Instagram

     

    A post shared by Salman Khan (@beingsalmankhan)

    ಅಂದಹಾಗೆ, ಸಲ್ಮಾನ್, ರಶ್ಮಿಕಾ ಮಂದಣ್ಣ, ‘ಮಗಧೀರ’ ನಟಿ ಕಾಜಲ್ (Kajal Aggarwal) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಾಜಿದ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

    ಇನ್ನೂ ಮೊದಲ ಬಾರಿಗೆ ಸಲ್ಮಾನ್ ಜೊತೆ ರಶ್ಮಿಕಾ ನಟಿಸಿರೋ ಕಾರಣ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇತ್ತೀಚಿಗೆ ರಶ್ಮಿಕಾ ನಟಿಸಿದ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿದೆ. ಇತ್ತೀಚೆಗೆ ಸಲ್ಮಾನ್ ನಟಿಸಿರುವ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದೆ. ಹಾಗಾಗಿ ‘ಸಿಕಂದರ್’ ಚಿತ್ರ ಸಕ್ಸಸ್ ಕಾಣುತ್ತಾ? ಎಂಬುದನ್ನು ಕಾದುನೋಡಬೇಕಿದೆ.

  • ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಖತ್ ಡ್ಯಾನ್ಸ್- ‘ಸಿಕಂದರ್’ ಸಾಂಗ್ ಔಟ್

    ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಖತ್ ಡ್ಯಾನ್ಸ್- ‘ಸಿಕಂದರ್’ ಸಾಂಗ್ ಔಟ್

    ಲ್ಮಾನ್ ಖಾನ್ (Salman Khan), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ (Sikandar) ಚಿತ್ರದ ಕಲರ್‌ಫುಲ್ ಸಾಂಗ್ ರಿಲೀಸ್ ಆಗಿದೆ. ಚೆಂದದ ಹಾಡಿಗೆ ಸಲ್ಮಾನ್ ಜೊತೆ ಮಸ್ತ್ ಆಗಿ ರಶ್ಮಿಕಾ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ವಯಸ್ಸಿನ ಟೀಕೆಯ ನಡುವೆಯೂ ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಇದನ್ನೂ ಓದಿ:ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿ ರನ್ಯಾ ರಾವ್‌ಗೆ 14 ದಿನ ನ್ಯಾಯಾಂಗ ಬಂಧನ

    ‘ಸಿಕಂದರ್’ ಚಿತ್ರದ ‘ಜೊಹ್ರಾ ಜಬೀನ್’ ಹಾಡು ರಿಲೀಸ್ ಆಗಿದೆ. ಸಲ್ಮಾನ್, ರಶ್ಮಿಕಾ ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಅದ್ಧೂರಿ ಸೆಟ್‌ನಲ್ಲಿ ಇಬ್ಬರೂ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಕೆಮಿಸ್ಟ್ರಿ ಕೂಡ ನೋಡುಗರಿಗೆ ಕಮಾಲ್ ಮಾಡ್ತಿದೆ.

    ಇನ್ನೂ ಸಾಂಗ್ ವೀಕ್ಷಿಸಿದ ಕೆಲವರು ಮಗಳ ವಯಸ್ಸಿನ ನಟಿಯ ಜೊತೆ ಡ್ಯಾನ್ಸ್ ಮಾಡಿದ್ದೀರಾ ಎಂದು ಸಲ್ಮಾನ್‌ಗೆ ಟೀಕೆಗಳು ವ್ಯಕ್ತವಾಗಿದೆ. ಹಾಗಿದ್ದರೂ ಕೂಡ ಯೂಟ್ಯೂಬ್‌ನಲ್ಲಿ ಈ ಸಾಂಗ್ ಸಖತ್ ವಿವ್ಸ್ ಗಿಟ್ಟಿಸಿಕೊಂಡಿದೆ. ಇಬ್ಬರ ಕೆಮಿಸ್ಟ್ರಿ ಕಿಕ್‌ ಕೊಡುತ್ತಿದೆ. ಈದ್ ಹಬ್ಬಕ್ಕೆ ರಿಲೀಸ್ ಆಗಲಿರುವ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    ಇನ್ನೂ ಈ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸೋಲಿನ ಸುಳಿಯಲ್ಲಿರುವ ಸಲ್ಮಾನ್‌ಗೆ ಲಕ್ಕಿ ನಟಿ ರಶ್ಮಿಕಾ ಸಾಥ್ ನೀಡಿರೋದ್ರಿಂದ ಸಿನಿಮಾ ಗೆಲ್ಲಲಿದೆ ಎಂಬುದು ಸಿನಿಮಾ ಪ್ರೇಮಿಗಳ ಲೆಕ್ಕಾಚಾರ. ಎಲ್ಲದಕ್ಕೂ ಸಿನಿಮಾ ರಿಲೀಸ್ ಆಗೋವರೆಗೂ ಕಾದುನೋಡಬೇಕಿದೆ.

  • ಮಾಸ್‌ ಅವತಾರ ತಾಳಿದ ಸಲ್ಮಾನ್‌ ಖಾನ್‌- ‌’ಸಿಕಂದರ್‌’ ಟೀಸರ್‌ ಮೆಚ್ಚಿದ ಫ್ಯಾನ್ಸ್

    ಮಾಸ್‌ ಅವತಾರ ತಾಳಿದ ಸಲ್ಮಾನ್‌ ಖಾನ್‌- ‌’ಸಿಕಂದರ್‌’ ಟೀಸರ್‌ ಮೆಚ್ಚಿದ ಫ್ಯಾನ್ಸ್

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ (Sikandar) ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದ ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್‌

    ಎದುರಾಳಿಗಳಿಗೆ ಸದೆಬಡಿಯುವ ಮಾಸ್ ಅವತಾರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಸಖತ್ ಡೈಲಾಗ್ ಕೂಡ ಹೊಡೆದಿದ್ದಾರೆ. ‘ಸಿಕಂದರ್’ ಟೀಸರ್‌ನಲ್ಲಿ ಸಲ್ಮಾನ್ ಖಾನ್ ಖಡಕ್ ಲುಕ್ ಹಾಗೂ ಆ್ಯಕ್ಷನ್ ಸೀಕ್ವೆನ್ಸ್ ನೋಡುಗರಿಗೆ ಕಿಕ್ ಕೊಟ್ಟಿದೆ. ಸಲ್ಮಾನ್ ಪ್ರೇಯಸಿಯಾಗಿ ರಶ್ಮಿಕಾ ಮಿಂಚಿದ್ದಾರೆ.

    ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕೆಂಗೆಟ್ಟಿರುವ ಸಲ್ಮಾನ್‌ಗೆ ಲಕ್ಕಿ ನಟಿ ರಶ್ಮಿಕಾ ಜೊತೆಯಾಗಿರೋದ್ರಿಂದ ಸಿನಿಮಾ ಸಕ್ಸಸ್ ಕಾಣುತ್ತಾ? ಎಂಬುದನ್ನು ಕಾದುನೋಡಬೇಕಿದೆ. ಈದ್ ಹಬ್ಬದಂದು ಸಿನಿಮಾ ಬಿಡುಗಡೆಯಾಗಲಿದೆ.

    ಈ ವರ್ಷ ರಶ್ಮಿಕಾ ನಟನೆಯ ‘ಪುಷ್ಪ 2’ ಮತ್ತು ‘ಛಾವಾ’ಗೆ ಉತ್ತಮ ಪ್ರಶಂಸೆ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅಭಿನಯದ ಜೊತೆ ಗಲ್ಲಾಪೆಟ್ಟಿಗೆ ಕೂಡ ಲೂಟಿ ಮಾಡಿದೆ. ಹಾಗಾಗಿ ಸಹಜವಾಗಿ ‘ಸಿಕಂದರ್’ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದೆ.