Tag: ಸಿಓಡಿ

  • ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಉಡುಪಿ: ಕೊರಗರ ಮೇಲೆ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ ಎಂದು ಜಿಲ್ಲೆ ಬ್ರಹ್ಮಾವರ ತಾಲೂಕು ಕೋಟತಟ್ಟು ಕೊರಗ ಕಾಲೊನಿಗೆ ಆಗಮಿಸಿದ ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

    ಆರು ದಿನಗಳ ಹಿಂದೆ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಮದುವೆ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಬಂದ ಕೋಟ ಪೊಲೀಸ್ ಠಾಣೆ ಸಿಬ್ಬಂದಿ ಲಾಠಿಚಾರ್ಜ್ ಮಾಡಿದ್ದರು. ಈ ವೇಳೆ ಆರು ಜನರನ್ನು ಥಳಿಸಿ, ಕೆಲವರನ್ನು ವಿವಸ್ತ್ರ ಮಾಡಿ ತಾಕೀತನ್ನು ಮಾಡಿದ್ದರು. ಈ ಪರಿಣಾಮ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬವನ್ನು ಇಂದು ಸುನಿಲ್ ಕುಮಾರ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ಈ ವೇಳೆ ಸುನಿಲ್ ಅವರು, ಮೆಹಂದಿ ದಿನ ನಡೆದ ಪೂರ್ತಿ ವಿವರಗಳನ್ನು ಪಡೆದುಕೊಂಡಿದ್ದು, ಅಂದು ರಾತ್ರಿ ನಡೆದ ಘಟನೆಯ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮನೆಯವರು ನ್ಯಾಯಕ್ಕಾಗಿ ವಿನಂತಿಸಿದರು. ಈ ಸಂಬಂಧ ಅವರು ಘಟನೆಯನ್ನು ಖಂಡಿಸಿದ್ದು, ಈ ಕುಟುಂಬದ ಮೇಲೆ ಸುಳ್ಳು ಮೊಕದ್ದಮೆ ಹೂಡಿರುವ ಆರೋಪ ನನ್ನ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಡಿಸಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಸಮಾಜದ ಕಟ್ಟಕಡೆಯ ವರ್ಗಕ್ಕೆ ಆಗಿರುವ ತೊಂದರೆ ಮತ್ತೊಮ್ಮೆ ಮರುಕಳಿಸಬಾರದು ಎಂದು ಭರವಸೆಯನ್ನು ನೀಡಿದರು.

    ಸರ್ಕಾರಿ ಅಧಿಕಾರಿಗಳು ಕರ್ತವ್ಯ ಮಾಡುವಾಗ ತಮ್ಮ ವ್ಯಾಪ್ತಿ ಮೀರಿ ವರ್ತಿಸಬಾರದು. ಸರ್ಕಾರಿ ಅಧಿಕಾರಿಗಳು ಜನರ ಹಿತ ಕಾಪಾಡಬೇಕಾದ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಅವರೇ ಈ ರೀತಿ ಮಾಡಿರುವುದು ವಿಷಾದನೀಯ. ಈ ಕುಟುಂಬಗಳಿಗೆ ಮತ್ತು ಈ ಸಮಾಜದ ಜನರಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್‌ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

    ಈಗಾಗಲೇ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಅರಗ ಜ್ಞಾನೆಂದ್ರ, ಉಡುಪಿ ಡಿಸಿ, ಎಸ್‍ಪಿ ಘಟನಾ ಸ್ಥಳಕ್ಕೆ ತೆರಳಿ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಲಾಗಿದೆ.

  • ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ- ಪೊಲೀಸರ ವಿರುದ್ಧವೇ ಆಕ್ರೋಶ!

    ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ- ಪೊಲೀಸರ ವಿರುದ್ಧವೇ ಆಕ್ರೋಶ!

    ಮಂಗಳೂರು: ಕಳೆದ ವರ್ಷ ಜುಲೈನಲ್ಲಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ ಮತ್ತೆ ಚಿಗುರಿಕೊಳ್ಳುವ ಲಕ್ಷಣ ಕಂಡು ಬಂದಿದೆ.

    ಪ್ರಕರಣ ನಡೆದು ವರ್ಷವಾದರೂ ವಿದ್ಯಾರ್ಥಿನಿ ಸಾವಿನ ಬಗ್ಗೆ ಇನ್ನೂ ಫೈನಲ್ ರಿಪೋರ್ಟ್ ತಯಾರಿಸದ ಪೊಲೀಸರ ವಿರುದ್ಧವೇ ಈಗ ಆಕ್ರೋಶ ಎದ್ದಿದೆ. ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿ ಸ್ಥಳೀಯ ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆರ್‍ಟಿಐ ಕಾಯ್ದೆಯಡಿ ಬಯಲಾಯ್ತು ಆಳ್ವಾಸ್ ಸಂಸ್ಥೆಯ ಸ್ಫೋಟಕ ರಹಸ್ಯ

    ಅಷ್ಟೇ ಅಲ್ಲದೇ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ. ಒಂದು ತಿಂಗಳ ಒಳಗೆ ಸಿಓಡಿ ತನಿಖೆಗೆ ಒಪ್ಪಿಸದಿದ್ದರೆ, ಕಾವ್ಯಾ ಕೊಲೆಯಾದ ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಇದನ್ನೂ ಓದಿ:  ಕಾವ್ಯಾ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ

    ಈ ಬಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿ, ಸಮಿತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ. ಶಿಕ್ಷಣ ಸಂಸ್ಥೆಯ ಪ್ರಭಾವಿಗಳಿಗೆ ಮಣಿದು ತನಿಖೆಯನ್ನು ವಿಳಂಬಿಸುತ್ತಿದ್ದಾರೆಯೇ ಅನ್ನೋ ಆರೋಪ ಕೇಳಿಬಂದಿದೆ.