Tag: ಸಿಎಜಿ

  • AEE ಮನೆ ಮೇಲೆ ದಾಳಿ – ಐಶಾರಾಮಿ ಹೋಂ ಥಿಯೇಟರ್ ಕಂಡು ಎಸಿಬಿ ಶಾಕ್

    AEE ಮನೆ ಮೇಲೆ ದಾಳಿ – ಐಶಾರಾಮಿ ಹೋಂ ಥಿಯೇಟರ್ ಕಂಡು ಎಸಿಬಿ ಶಾಕ್

    ಚಿಕ್ಕಮಗಳೂರು: ತಾಲೂಕಿನ ಲೋಕೋಪಯೋಗಿ ಇಲಾಖೆ ಅಸ್ಟಿಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (AEE) ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಪಾರ ಅಕ್ರಮ ಆಸ್ತಿಯನ್ನು ಸೀಜ್ ಮಾಡಿದ್ದಾರೆ.

    ನಗರದ ಗಾಂಧಿ ಬಡವಾಣೆಯ ದೋಣಿಕಣದಲ್ಲಿರುವ ಅವರ ನಿವಾಸನಗರದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬೆಳ್ಳಂಬೆಳಗ್ಗೆಯಿಂದ ತನಿಖೆ ನಡೆಸಿದ್ದಾರೆ. ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಎಇಇ ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು-ಉಡುಪಿ ಎಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಈ ವೇಳೆ, ಮನೆಯಲ್ಲಿ ಐಶಾರಾಮಿ ಹೋಂ ಥಿಯೇಟರ್ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳು ಕೂಡ ಮನೆಯಲ್ಲಿ ಪತ್ತೆಯಾಗಿದೆ. 750 ಗ್ರಾಂ ಚಿನ್ನದ ಬಿಸ್ಕೇಟ್, 900 ಗ್ರಾಂ ಬೆಳ್ಳಿ, 2 ಲಕ್ಷದ 74 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳು ಪತ್ತೆಯಾಗಿವೆ. ಇದನ್ನೂ ಓದಿ: ಎಸಿಬಿಯವರನ್ನು ಬೀಗರೆಂದು ಭಾವಿಸಿದ ಕೆಲಸದಾಕೆ – ಡಸ್ಟ್‌ಬಿನ್, ಸಿಂಟೆಕ್ಸ್‌ನಲ್ಲೂ ಕಾಂಚಾಣ

    ಜೊತೆಗೆ ಬೇರೆ-ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಿರುವ ಬಗ್ಗೆಯೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಗವಿರಂಗಪ್ಪನವರ ಸ್ವಂತ ಊರಾದ ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದಲ್ಲೂ ಸಾಕಷ್ಟು ಆಸ್ತಿ ಮಾಡಿ, ಫಾರ್ಮ್ ಹೌಸ್ ನಿರ್ಮಿಸಿಕೊಂಡಿದ್ದಾರೆ. ತಮ್ಮ ಸಂಬಂಧಿಕರ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಇಂದು ದಿನ ಪೂರ್ತಿ ತನಿಖೆ ನಡೆಸಿದ್ದು, ನಾಳೆಯೂ ಕೂಡ ದಾಳಿ ಮುಂದುವರಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಜಪಾನ್‌ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ – ಸುನಾಮಿ ಎಚ್ಚರಿಕೆ

  • ಬೆಂಗಳೂರು ರಸ್ತೆಗಳಲ್ಲಿ ಸಂಚಾರ ಮಾಡಿದ್ರೆ ಹೆಚ್ಚಿನ ಅಪಾಯ: ಸಿಎಜಿ ವರದಿಯಲ್ಲಿ ಬಹಿರಂಗ

    ಬೆಂಗಳೂರು ರಸ್ತೆಗಳಲ್ಲಿ ಸಂಚಾರ ಮಾಡಿದ್ರೆ ಹೆಚ್ಚಿನ ಅಪಾಯ: ಸಿಎಜಿ ವರದಿಯಲ್ಲಿ ಬಹಿರಂಗ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ರಸ್ತೆಗಳು ಸಂಚಾರ ಮಾಡಲು ಯೋಗ್ಯ ಅಲ್ಲ ಎಂದು ಮಹಾಲೇಖಪಾಲರ(ಸಿಎಜಿ) ವರದಿ ತಿಳಿಸಿದೆ.

    ವಿಧಾನಸಭೆಯಲ್ಲಿ ಇವತ್ತು ರಸ್ತೆ ಸುರಕ್ಷತಾ ವಿಚಾರಗಳಿಗೆ ಸಂಬಂಧಿಸಿದ ಸಿಎಜಿ ವರದಿ ಮಂಡನೆ ಮಾಡಲಾಯಿತು. ಕೆಟ್ಟ ದುರಸ್ಥಿಗಳು ಮತ್ತು ರಸ್ತೆಯಲ್ಲಿನ ಅಪಾಯದ ಗುಂಡಿಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿವೆ ಎಂದು ಸಿಎಜಿ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

    ವರದಿಯಲ್ಲಿ ಏನಿದೆ?
    ರಸ್ತೆ ವಿಸ್ತರಣೆಗಳ ಅತಿಕ್ರಮಣವೂ ಸೇರಿದಂತೆ ವಿವಿಧ ರೀತಿಯ ರಸ್ತೆ ಅಪಾಯಗಳಲ್ಲಿ ಇವೆ. ಅದರಲ್ಲೂ ಬಿಬಿಎಂಪಿ ರಸ್ತೆಗಳಲ್ಲಿ ಹೆಚ್ಚಿನ ಅಪಾಯಗಳು ಎದುರಾಗುತ್ತಿವೆ. ಅಂದರೆ ಪ್ರತಿ ಕಿಲೋಮೀಟರ್‍ಗೆ 19 ರಿಂದ 20 ಅಪಾಯಗಳು ಎದುರಾಗುತ್ತಿವೆ. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

    ರಾಜ್ಯದೆಲ್ಲೆಡೆ ಹೆಚ್ಚಿನ ಸಂಖ್ಯೆಯ ವಾಹನಗಳು ತಮ್ಮ ನೋಂದಣಿ ಪ್ರಮಾಣಪತ್ರ ಅಥವಾ ಅರ್ಹತಾ ಪ್ರಮಾಣಪತ್ರಗಳನ್ನು ನವೀಕರಿಸದೇ ರಸ್ತೆಗಳಲ್ಲಿ ಸಂಚರಿಸುತ್ತಿವೆ. 22 ಜಿಲ್ಲೆಗಳಲ್ಲಿ ಆಘಾತ ಆರೈಕೆ ಕೇಂದ್ರಗಳನ್ನು (ಟಿಸಿಸಿ) ಸ್ಥಾಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ಇದನ್ನೂ ಓದಿ: ಹಿಜಬ್ ವಿವಾದ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್ – ಹೋಳಿ ರಜೆ ಬಳಿಕ ವಿಚಾರಣೆ

    ಅಂಬುಲೆನ್ಸ್‍ಗಳ ಮೂಲ ಸ್ಥಳವು ದೂರದಲ್ಲಿದ್ದುದರಿಂದ ಅಥವಾ ಪ್ರೀ-ಟ್ರಿಪ್ ವಿಳಂಬ 30 ನಿಮಿಷಗಳಿಗಿಂತ ಹೆಚ್ಚಾಗಿದ್ದರಿಂದ ಅಪಘಾತಗೊಂಡವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸುಮಾರು 90,000 ಪ್ರಕರಣಗಳಲ್ಲಿ ಸಮಯೋಚಿತ ವೈದ್ಯಕೀಯ ಆರೈಕೆಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಪಘಾತಗಳನ್ನ, ಸಾವುಗಳನ್ನ ಕಡಿಮೆ ಮಾಡುವ ರಸ್ತೆ ಸುರಕ್ಷತಾ ಕ್ರಮಗಳು ಸಾಕಾರವಾಗಿಲ್ಲ.

    ಶಿಫಾರಸು ಏನು?
    – ಯಾವುದೇ ವಿಳಂಬವಿಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ-2017 ರ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಬೇಕು
    – ಎಲ್ಲಾ ರಸ್ತೆ ಬಳಕೆದಾರರಿಗಾಗಿ ವಿವಿಧ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಬಹುದು.
    – ಅಪಘಾತಕ್ಕೊಳಗಾದವರು ಗೋಲ್ಡನ್ ಅವರ್‍ನಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ತಜ್ಞರನ್ನೊಳಗೊಂಡಂತೆ ಅಪಘಾತ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು.

    – ರಸ್ತೆ ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು ಹೆದ್ದಾರಿ ಗಸ್ತು ವ್ಯವಸ್ಥೆಯನ್ನು ಬಲಪಡಿಸಬೇಕು.
    – ಆರ್‍ಟಿಒಗಳನ್ನು ಬಲಪಡಿಸಲು ಕ್ರಮ ತೆಗೆದುಕೊಳ್ಳಬೇಕು, ವೈಜ್ಞಾನಿಕ ಪರೀಕ್ಷಾ ಟ್ರ್ಯಾಕ್‍ಗಳನ್ನು ಒದಗಿಸಬೇಕು.
    – ವಿಳಂಬವನ್ನ ತಪ್ಪಿಸಲು ಅಂಬುಲೆನ್ಸ್‍ಗಳ ಮೂಲ ಸ್ಥಳಗಳನ್ನು ಸಮರ್ಪಕವಾಗಿ ಗುರುತಿಸಬೇಕು. ಅಂಬುಲೆನ್ಸ್ ಸಂಖ್ಯೆ ಹೆಚ್ಚಿಸಬೇಕು.

     

  • ರಫೇಲ್‌ ಡೀಲ್‌  – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ರಫೇಲ್‌ ಡೀಲ್‌ – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ನವದೆಹಲಿ: ರಕ್ಷಣಾ ವ್ಯವಹಾರದ ವೇಳೆ ಈಗ ಇದ್ದ ಆಫ್‌ಸೆಟ್‌ ನಿಯಮವನ್ನೇ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    36 ರಫೇಲ್ ಯುದ್ಧ ವಿಮಾನ ಸಂಬಂಧ 59 ಸಾವಿರ ಕೋಟಿ ರೂ. ಒಪ್ಪಂದ ನಡೆದು 5 ವಿಮಾನ ಭಾರತಕ್ಕೆ ಬಂದರೂ ಡಸಾಲ್ಟ್ ಕಂಪನಿ ತನ್ನ ಆಫ್‍ಸೆಟ್ ನಿಯಮ ಪಾಲನೆ ಮಾಡಿಲ್ಲ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಉಲ್ಲೇಖಿಸಿತ್ತು. ಸಂಸತ್ತಿನಲ್ಲಿ ಸಿಎಜಿ ವರದಿ ಮಂಡನೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ರಕ್ಷಣಾ ಖರೀದಿ ನಿಯಮಗಳಿಗೆ ಬದಲಾವಣೆ ಮಾಡಿದೆ.

    ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ವಿಶೇಷ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕ (ಸ್ವಾಧೀನ) ಅಪೂರ್ವ ಚಂದ್ರ ಅವರು, ನಾವು ಆಫ್‌ಸೆಟ್ ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ಮಾಡಿದ್ದೇವೆ. ಈಗ ಸರ್ಕಾರದಿಂದ ಸರಕಾರದ ನಡುವೆ ಮತ್ತು ಒಂದೇ ಕಂಪನಿಯಿಂದ ರಕ್ಷಣಾ ಸಾಮಾಗ್ರಿ ಖರೀದಿ ವೇಳೆ ಆಫ್‌ಸೆಟ್‌ ನಿಯಮಗಳು ಇರುವುದಿಲ್ಲ ಎಂದು ಎಂದು ತಿಳಿಸಿದ್ದಾರೆ.

    ಈ ನಿಯಮಗಳು ಖರೀದಿಗೆ ಅಡ್ಡಿಯಾಗುತ್ತದೆ ಮತ್ತು ಯಾವುದೇ ಉದ್ದೇಶವನ್ನು ಸಾಧಿಸುತ್ತಿಲ್ಲ. ಹೀಗಾಗಿ ನಿಯಮವನ್ನು ಬದಲಾವಣೆ ಮಾಡಲಾಗಿ ಎಂದು ಸರ್ಕಾರ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ರಫೇಲ್ ತೀರ್ಪಿನಲ್ಲಿ ಸಿಎಜಿ ಉಲ್ಲೇಖ: ತಿದ್ದುಪಡಿಗಾಗಿ ಕೇಂದ್ರದಿಂದ ಅಫಿಡವಿಟ್

    ರಕ್ಷಣಾ ಖರೀದಿ ವೇಳೆ ವಿದೇಶಿ ಕಂಪನಿಗಳೊಂದಿಗೆ ಆಫ್‌ಸೆಟ್‌ ನೀತಿಯನ್ನು 2005ರಲ್ಲಿ ಭಾರತ ಸರ್ಕಾರ ಜಾರಿಗೆ ತಂದಿದೆ. 300 ಕೋಟಿ ರೂ.ಗೂ ಅಧಿಕ ಮೊತ್ತದ ರಕ್ಷಣಾ ವಸ್ತುಗಳ ಖರೀದಿಯ ವೇಳೆ ವಿದೇಶಿ ಕಂಪನಿ ಕನಿಷ್ಟ ಶೇ.30 ರಷ್ಟು ಹೂಡಿಕೆಯನ್ನು ಭಾರತದಲ್ಲಿ ಮಾಡಬೇಕು ಮತ್ತು ತಂತ್ರಜ್ಞಾನವನ್ನು ವರ್ಗಾವಣೆ ಮಾಡಬೇಕು ಎಂಬ ನಿಯಮ ವಿಧಿಸಲಾಗಿತ್ತು.

    ದೇಶೀಯವಾಗಿ ರಕ್ಷಣಾ ಸಲಕರಣೆಗೆ ಉತ್ಪಾದನೆಗೆ ಉತ್ತೇಜನ ನೀಡಲು ಈ ನಿಯಮವನ್ನು ತರಲಾಗಿತ್ತು. ರಫೇಲ್‌ ಖರೀದಿಯಲ್ಲಿ ಆಫ್‌ಸೆಟ್‌ ನಿಯಮವನ್ನು ಶೇ.50ರಷ್ಟುಎಂದು ನಿಗದಿ ಮಾಡಲಾಗಿತ್ತು.

  • ರಫೇಲ್ ತೀರ್ಪಿನಲ್ಲಿ ಸಿಎಜಿ ಉಲ್ಲೇಖ: ತಿದ್ದುಪಡಿಗಾಗಿ ಕೇಂದ್ರದಿಂದ ಅಫಿಡವಿಟ್

    ರಫೇಲ್ ತೀರ್ಪಿನಲ್ಲಿ ಸಿಎಜಿ ಉಲ್ಲೇಖ: ತಿದ್ದುಪಡಿಗಾಗಿ ಕೇಂದ್ರದಿಂದ ಅಫಿಡವಿಟ್

    ನವದೆಹಲಿ: ಸಿಎಜಿ ವರದಿಯನ್ನು ಆಧಾರಿಸಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿದ್ದ ರಫೇಲ್ ತೀರ್ಪಿನಲ್ಲಿ ಕೆಲ ತಿದ್ದುಪಡಿಯಾಗಬೇಕೆಂದು ಹೇಳಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

    ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ ತೀರ್ಪಿನ 25 ಪ್ಯಾರಾದಲ್ಲಿ ಮಹಾಲೆಕ್ಕಪಾಲರ(ಸಿಎಜಿ) ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿಯ(ಪಿಎಸಿ) ಮುಂದೆ ಇಡಲಾಗಿದೆ. ಅಷ್ಟೇ ಅಲ್ಲದೇ ಇದು ಸಾರ್ವಜನಿಕವಾಗಿ ಲಭ್ಯವಿದೆ ಎಂದು ಉಲ್ಲೇಖಿಸಿತ್ತು. ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ ಈ ವಿಚಾರಗಳನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ : ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಸುಪ್ರೀಂ ಕೋರ್ಟ್ ಈ ವಿಚಾರವನ್ನು ಉಲ್ಲೇಖಿಸಿದ ಬೆನ್ನಲ್ಲೇ ಪಿಐಎಲ್ ಸಲ್ಲಿಸಿದ ಪ್ರಮುಖ ವ್ಯಕ್ತಿಗಳಾದ ಪ್ರಶಾಂತ್ ಭೂಷಣ್, ಸಾರ್ವಜನಿಕ ಲೆಕ್ಕ ಸಮಿತಿಯ ಮುಂದೆ ಸಿಎಜಿ ವರದಿ ಸಲ್ಲಿಕೆಯಾಗಿಲ್ಲ. ಸಾರ್ವಜನಿಕವಾಗಿಯೂ ಈ ವರದಿ ಲಭ್ಯವಿಲ್ಲ. ಮೋದಿ ಸರ್ಕಾರ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಹೇಳಿ ಕಿಡಿಕಾರಿದ್ದರು.

    ತೀರ್ಪು ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ ಶನಿವಾರ, ಈ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಮನವಿ ಸಲ್ಲಿಸಿ ಅಫಿಡವಿಟ್ ಸಲ್ಲಿಸಿದೆ.ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಕಾನೂನು ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಸಿಎಜಿ ಹಾಗೂ ಪಿಎಸಿ ಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

     

     

  • ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ

    ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ

    ಬೆಂಗಳೂರು: ಕಳೆದ ಬಾರಿಯ ಸಿದ್ದರಾಮಯ್ಯನವರ ಸರ್ಕಾರದಿಂದ 35 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಪ್ರಧಾನ ಮಹಲೇಖಪಾಲರ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್) ವರದಿ ಆಧರಿಸಿ ಬಿಜೆಪಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದೆ.

    ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಶಾಸಕ ಅಶ್ವಥ್ ನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ಅವಧಿ 2016-17 ಎಂಬ ಶೀರ್ಷಿಕೆಯಡಿಯಲ್ಲಿ 36 ಪುಟಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ್ದಾರೆ.

    ಸಿಎಜಿ ವರದಿಯಾಧರಿಸಿ ಬಿಡುಗಡೆ ಮಾಡಿರುವ ಪುಸ್ತಕದ ಮುಖಪುಟದಲ್ಲಿ ಸಿದ್ದರಾಮಯ್ಯನವರು ಕರ್ನಾಟಕ ಸರ್ಕಾರದ ಖಜಾನೆಯಿಂದ ಹಣ ಹೊತ್ತುಕೊಂಡು ಹೋಗಿ, ಪಾರ್ಟಿ ಫಂಡ್‍ಗೆ ಕೊಡುವುದನ್ನು ಚಿತ್ರಿಸಲಾಗಿದೆ.

    2016-17ನೇ ಆಯ-ವ್ಯಯದಲ್ಲಿ 35 ಸಾವಿರ ಕೋಟಿ ರೂಪಾಯಿಯಷ್ಟು ವೆಚ್ಚ ಹಾಗೂ ಸ್ವೀಕೃತಿಯ ಲೆಕ್ಕ ತಾಳೆ ಆಗುತ್ತಿಲ್ಲ. ಇದೇ ಸಿಎಜಿ ವರದಿ ಆಧರಿಸಿ ಸಿದ್ದರಾಮಯ್ಯನವರ ಮೇಲೆ ಕ್ರಮಕ್ಕೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಸಿಎಜಿ ವರದಿ ಆಧರಿಸಿ ಬಿಜೆಪಿ ಬಿಡುಗಡೆ ಮಾಡಿದ ಕಿರುಹೊತ್ತಿಗೆಯಲ್ಲಿರುವ ಪ್ರಮುಖ ಆರೋಪಗಳು

    * 788 ಕೆರೆಗಳಿಗೆ ನೀರು ತುಂಬಲಿಲ್ಲ. ಆದರೆ 1433.41 ಕೋಟಿ ರೂ. ಬಿಡುಗಡೆಯಾಗಿದೆ
    * ಶಾಸಕಾಂಗದ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಹಣ ಬಿಡುಗಡೆ.
    * ಬಡ್ಡಿ ಹಣದಲ್ಲಿ ಅಧಿಕಾರಿಗಳ ಮೋಜು
    * ಯೂನಿಫಾರಂ ಖರೀದಿಯಲ್ಲಿ 1.72 ಕೋಟಿ ರೂ. ಹಗರಣ
    * 115.10 ಕೋಟಿ ರೂ. ಲ್ಯಾಪ್ ಟಾಪ್ ಹಗರಣ
    * ಬಳಕೆಯಾಗದ 1199.81 ಕೋಟಿ ರೂ. ಸರ್ಕಾರಕ್ಕೆ ಮರು ಪಾವತಿ ಮಾಡಿಲ್ಲ
    * 254.34 ಕೋಟಿ ರೂ. ಗಳಿಗೆ ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ
    * 7378.34 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡದೆ ಕಾಮಗಾರಿಗೆ ಅವಕಾಶ

    ಈ ಕುರಿತು ಮಾತನಾಡಿದ ರವಿಕುಮಾರ್, ಕಳೆದ 3 ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಸಿಎಜಿ ವರದಿಯನ್ನು ಮಂಡಿಸಲಾಗಿದೆ. 2016-17ರ ಆಯವ್ಯಯದ ವೆಚ್ಚದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ವರದಿ ಆಧರಿಸಿ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ರಮ ಕೈಗೊಳ್ಳಬೇಕು. ಸಾಕಷ್ಟು ಹಗರಣದ ವರದಿಯು ಕಿರು ಹೊತ್ತಿಗೆಯಲ್ಲಿ ನೀಡಲಾಗಿದೆ. ಸಿಎಜಿ ವರದಿ ಮತ್ತೊಮ್ಮೆ ಪಬ್ಲಿಕ್ ಡಿಬೇಟ್ ಆಗಬೇಕು. ಅಲ್ಲದೇ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯ ಬಗ್ಗೆ ಚರ್ಚೆಯಾಗಬೇಕು. ರಮೇಶ್ ಕುಮಾರ್ ನಮ್ಮ ಮಾವನ ಮಗ ಅಲ್ಲ. ರಮೇಶ್ ಕುಮಾರ್ ಸಚಿವರಾಗಿರುವಾಗಲೇ, ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ. ಈ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಕರಣ ಸಾಬೀತಾಗಿದೆ. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಅಶ್ವಥ್ ನಾರಾಯಣ್, 2016-17ರ ಸಿಎಜಿ ವರದಿಯಲ್ಲಿ 35 ಸಾವಿರ ಕೋಟಿ ರೂಪಾಯಿ ಹಣ ಟ್ಯಾಲಿ ಆಗಿಲ್ಲವೆಂದು ಉಲ್ಲೇಖಿಸಲಾಗಿದೆ. ಹೀಗಾಗಿ ವಿವಿಧ ಇಲಾಖೆಗಳಲ್ಲಿ ಆಗಿರುವ ಹಗರಣಗಳನ್ನು ಕಿರುಹೊತ್ತಿಗೆ ರೂಪದಲ್ಲಿ ತರಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಲೆಕ್ಕ ನೀಡಬೇಕು. ಈ ಬಗ್ಗೆ ಕೂಡಲೇ ಸಿಎಂ ಎಚ್‍ಡಿಕೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಪಟ್ಟುಹಿಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಆಸ್ಪತ್ರೆಗೆ ಹೋಗೋಕು ಮುನ್ನ ಈ ಸ್ಟೋರಿ ನೋಡಿ-ಬೆಚ್ಚಿ ಬೀಳಿಸಿದೆ ಸಿಎಜಿ ರಿಪೋರ್ಟ್

    ಸರ್ಕಾರಿ ಆಸ್ಪತ್ರೆಗೆ ಹೋಗೋಕು ಮುನ್ನ ಈ ಸ್ಟೋರಿ ನೋಡಿ-ಬೆಚ್ಚಿ ಬೀಳಿಸಿದೆ ಸಿಎಜಿ ರಿಪೋರ್ಟ್

    ಬೆಂಗಳೂರು: ಕಾಯಿಲೆ ಬಂದಾಗ ಸರ್ಕಾರಿ ಆಸ್ಪತ್ರೆಗ ಹೋಗೋ ನೀವು ಅಲ್ಲಿ ಸರಬರಾಜಾಗೋ ಔಷಧಿಗಳ ಗುಣಮಟ್ಟ ಕೇಳಿದರೆ ಬೆಚ್ಚಿ ಬೀಳುತ್ತೀರಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಬರಾಜಾಗೋ ಔಷಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಔಷಧಿಗಳು ಕಳೆಪ ಗುಣಮಟ್ಟದಿಂದ ಕೂಡಿರೋದು ಎಂಬ ಆತಂಕಕಾರಿ ವರದಿಯನ್ನ ಸಿಎಜಿ (Comptroller and Auditor General of India) ನೀಡಿದೆ.

    20 ರಾಜ್ಯಗಳಲ್ಲಿ ಕಪ್ಪು ಪಟ್ಟಿ (ಬ್ಲ್ಯಾಕ್ ಲಿಸ್ಟ್) ಗೆ ಸೇರಿರುವ ಕಂಪೆನಿಗಳ ಜೊತೆ ಅಧಿಕಾರಿಗಳು ಔಷಧಿ ಖರೀದಿ ಮಾಡಿದ್ದಾರೆ. 2014 ರಿಂದ 17 ರ ವರೆಗೆ ರಾಜ್ಯಕ್ಕೆ 14,209 ಬ್ಯಾಚ್‍ಗಳಲ್ಲಿ ಔಷಧಿ ಸರಬರಾಜು ಆಗಿದೆ. ಇವುಗಳಲ್ಲಿ 7,433 ಬ್ಯಾಚ್ ಅಂದರೆ ಅರ್ಧಕ್ಕಿಂತ ಹೆಚ್ಚು ಕಳೆಪ ಗುಣಮಟ್ಟದ ಔಷಧಿಗಳನ್ನು ಆಸ್ಪತ್ರೆ ಮುಖಾಂತರ ರೋಗಿಗಳಿಗೆ ಸರಬರಾಜಾಗಿದೆ ಎಂಬ ಆತಂಕಕಾರಿ ವರದಿಯಲ್ಲಿ ಹೇಳಲಾಗಿದೆ.

    ಸರ್ಕಾರಿ ನೊಂದಾಯಿತ ಲ್ಯಾಬೋರೇಟರಿನ ಸಹ ಕಳೆಪ ಗುಣಗುಣಮಟ್ಟದ ಔಷಧಿಗೆ ಫುಲ್ ಮಾರ್ಕ್ ನೀಡಿದೆ ಅಂತಾನು ವರದಿ ನೀಡಿದೆ. ವಿಪರ್ಯಾಸ ಅಂದ್ರೆ ಸಿಎಜಿ ವರದಿ ಮೇಲೆ ಇದುವರೆಗು ಯಾವ ಅಧಿಕಾರಿ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳದೇ ಇರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • 42 ಕೋಟಿ ರೂ. ವೆಚ್ಚದಲ್ಲಿ 3,350 ಟ್ರಕ್ ಸಗಣಿ ಖರೀದಿಸಲಿದೆ ಭಾರತೀಯ ರೈಲ್ವೇ!

    42 ಕೋಟಿ ರೂ. ವೆಚ್ಚದಲ್ಲಿ 3,350 ಟ್ರಕ್ ಸಗಣಿ ಖರೀದಿಸಲಿದೆ ಭಾರತೀಯ ರೈಲ್ವೇ!

    ನವದೆಹಲಿ: ಭಾರತೀಯ ರೈಲ್ವೇ ದೋಷಪೂರಿತವಾಗಿರುವ ಬಯೋ ಟಾಯ್ಲೆಟ್ ಸರಿಪಡಿಸಲು 42 ಕೋಟಿ ರೂ. ವೆಚ್ಚದಲ್ಲಿ 3,350 ಟ್ರಕ್ ಲೋಡ್ ಸಗಣಿಯನ್ನು ಖರೀದಿಸಲು ಮುಂದಾಗಿದೆ.

    2014-2015-2016-2017 ಮಹಾಲೇಖಪಾಲರ(ಸಿಎಜಿ) ವರದಿ ಸಂಸತ್ತಿನಲ್ಲಿ ಮಂಡನೆಯಾಗಿದ್ದು, ಇದರಲ್ಲಿ 1,99,689 ಬಯೋ ಟಾಯ್ಲೆಟ್ ಗಳ ಪೈಕಿ 25 ಸಾವಿರ ಟಾಯ್ಲೆಟ್ ಗಳು ದೋಷಪೂರಿತವಾಗಿದೆ ಎಂದು ತಿಳಿಸಿದೆ. ಈ ದೋಷಪೂರಿತವಾಗಿರುವ ಟಾಯ್ಲೆಟ್ ಗಳ ಸರಿ ಪಡಿಸಲು 2018ರಲ್ಲಿ ರೈಲ್ವೇ ಸಚಿವಾಲಯ ಖಾಸಗಿ ಅವರಿಂದ ಪ್ರತಿ ಲೀಟರ್ ಗೆ 19 ರೂ. ನೀಡಿ ಸಗಣಿ ಖರೀದಿಸಲು ಮುಂದಾಗಿದೆ.

    ಏನಿದು ಬಯೋ ಟಾಯ್ಲೆಟ್?
    ಶೌಚ ಹಳಿಗೆ ಬೀಳುವುದನ್ನು ತಪ್ಪಿಸಲು ಟಾಯ್ಲೆಟ್ ಕೆಳಗಡೆ ಬಯೋ ಟಾಯ್ಲೆಟ್ ಟ್ಯಾಂಕ್ ಗಳನ್ನು ಜೋಡಣೆ ಮಾಡಲಾಗಿದೆ. ಈ ಟ್ಯಾಂಕ್‍ಗಳು ಆರು ವಿಭಾಗಗಳನ್ನು ಒಳಗೊಂಡಿದ್ದು, ವಿವಿಧ ಹಂತದ ಸಂಸ್ಕರಣೆ ಬಳಿಕ ಶೌಚ ಜಲ ಹಾಗೂ ಅನಿಲವಾಗಿ ಪರಿವರ್ತನೆಯಾಗುತ್ತದೆ.

    ಸಗಣಿ ಯಾಕೆ?
    ಬಯೋ ಟಾಯ್ಲೆಟ್ ಟ್ಯಾಂಕ್ ನಲ್ಲಿ ಮನುಷ್ಯನ ಮಲವನ್ನು ಬ್ಯಾಕ್ಟೀರಿಯಗಳು ಸಂಸ್ಕರಿಸುತ್ತವೆ. ದೋಷಪೂರಿತಗೊಂಡಿರುವ ಬಯೋ ಟಾಯ್ಲೆಟ್ ಸರಿ ಪಡಿಸಲು ಬ್ಯಾಕ್ಟೀರಿಯಾಗಳ ಅಗತ್ಯವಿದೆ. ಹೀಗಾಗಿ ಈ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸಲು ದನದ ಸಗಣಿಯನ್ನು ಖರೀದಿಸಲು ರೈಲ್ವೇ ಮುಂದಾಗಿದೆ.

    ಬಯೋ ಟಾಯ್ಲೆಟ್ ಎಷ್ಟಿದೆ?
    ಪ್ರಸ್ತುತ ಒಟ್ಟು 44.8% ರೈಲಿನಲ್ಲಿ ಬಯೋ ಟಾಯ್ಲೆಟ್ ಅಳವಡಿಸಲಾಗಿದೆ. ಈ 2018ರಲ್ಲಿ ಎಲ್ಲ ರೈಲಿನಲ್ಲಿ ಬಯೋ ಟಾಯ್ಲೆಟ್ ಅಳವಡಿಸಬೇಕೆಂಬ ಗುರಿಯನ್ನು ಸಚಿವಾಲಯ ಹಾಕಿಕೊಂಡಿದೆ.

    ಯಾಕೆ ಹಾಳಾಗುತ್ತೆ?
    ಬಯೋ ಟಾಯ್ಲೆಟ್ ಯಶಸ್ವಿಯಾಗಬೇಕಾದರೆ ಪ್ರಯಾಣಿಕರ ಸಹಕಾರ ಅಗತ್ಯ. ಬಾಟಲಿ, ತಿಂಡಿ, ಪ್ಲಾಸ್ಟಿಕ್, ನ್ಯಾಪ್ ಕಿನ್, ಗುಟ್ಕಾ ಪಾಕೆಟ್, ಪ್ಲಾಸ್ಟಿಕ್ ಗಳನ್ನು ಶೌಚಾಲಯಕ್ಕೆ ಎಸೆಯದಂತೆ ಇಲಾಖೆ ಮನವಿ ಮಾಡಿದ್ದರೂ ಕೆಲ ಮಂದಿ ಎಸೆದ ಕಾರಣ ಟ್ಯಾಂಕ್ ನಲ್ಲಿ ಸರಿಯಾಗಿ ಸಂಸ್ಕರಣೆಯಾಗದೇ ಹಾಳಾಗುತ್ತದೆ.

    ವರದಿಯಲ್ಲಿರುವ ಪ್ರಮುಖ ಅಂಶಗಳು:
    ಶೌಚಾಲಯ ಕೆಟ್ಟು ಹೋಗಿದೆ ಎಂದು 1,02,792 ದೂರುಗಳು ಬಂದಿದ್ದು, ಒಂದು ಶೌಚಾಲಯ ವರ್ಷದಲ್ಲಿ ನಾಲ್ಕು ಬಾರಿ ಹಾಳಾಗುತ್ತದೆ. 2015-16ರಲ್ಲಿ ಶೌಚಾಲಯ ಹಾಳಾಗಿದೆ ಎಂದು 61,088 ದೂರು ದಾಖಲಾಗಿದ್ದವು. ನೈರುತ್ಯ ರೈಲ್ವೆ ವಲಯದಲ್ಲಿ ಬರುವ ಬೆಂಗಳೂರು ಕೋಚ್ ಡಿಪೊವೊಂದಲ್ಲೇ ಇಂತಹ ಶೇ 33.89ರಷ್ಟು ಪ್ರಕರಣಗಳನ್ನು ವರದಿಯಾಗಿದೆ. ಈ ಕೇಂದ್ರವು ಒಟ್ಟು ಜೈವಿಕ ಶೌಚಾಲಯಗಳ ಪೈಕಿ ಶೇ 1.6ರಷ್ಟನ್ನು ಮಾತ್ರ ನಿರ್ವಹಿಸುತ್ತದೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

    ಸಚಿವಾಲಯದ ಹೇಳೋದು ಏನು?
    ಪ್ರಯಾಣಿಕರು ಈ ಸೇವೆಯನ್ನು ದುರುಪಯೋಗ ಪಡಿಸಿಕೊಂಡಿದ್ದರಿಂದ ಈ ಸಮಸ್ಯೆಯಾಗಿದೆ. ಶೌಚಾಲಯದಲ್ಲಿ ಇರಿಸಿರುವ ಸ್ಟೀಲ್ ಕಸದ ಡಬ್ಬಿಗಳು ಕಳುವಾಗುತ್ತಿದೆ. ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಈಗ ಶೌಚಾಲಯಗಳು ಹಾಳಾಗುವ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!