Tag: ಸಿಎಂ ಹಿಮಂತ ಬಿಸ್ವಾ ಶರ್ಮಾ

  • ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ

    ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ

    ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಅಸ್ಸಾಂ ಮುಖ್ಯಮಂತ್ರಿ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.

    ಟಿಪಿಸಿಸಿ ಅಧ್ಯಕ್ಷ, ಸಂಸದ ಮಲ್ಕಾಜ್‍ಗಿರಿ ಎ ರೇವಂತ್ ರೆಡ್ಡಿ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 ಮತ್ತು 505 (2)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿಯ ಹೇಳಿಕೆಗಳು ಮಹಿಳೆಗೆ ಅವಮಾನಕರವಾಗಿದೆ. ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಬಂಧಿಸಲು ಏಕೆ ಆದೇಶಿಸಲಿಲ್ಲ. ಬಿಜೆಪಿ ಹಿಮಂತ ಬಿಸ್ವಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ಆದರೆ ಬಿಜೆಪಿ ಅಸ್ಸಾಂ ಮುಖ್ಯಮಂತ್ರಿಯ ಟೀಕೆಗಳನ್ನು ಬೆಂಬಲಿಸುತ್ತಿದೆ ಎಂದು ರೇವಂತ್ ಹೇಳಿದ್ದಾರೆ.  ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ

    ಗಾಂಧಿ ಕುಟುಂಬಕ್ಕೆ ಅವಮಾನ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಈ ದೇಶದ ಮಹಿಳೆಯರಿಗೆ ಅವಮಾನವಾಗಿದೆ. ನಮ್ಮ ದೂರು ವಿರುದ್ಧ ತಕ್ಷಣವೇ ಎಫ್‍ಐಆರ್ ದಾಖಲಿಸಬೇಕು. ಅಸ್ಸಾಂ ಮುಖ್ಯಮಂತ್ರಿಗೆ ತಕ್ಷಣವೇ ನೋಟೀಸ್ ನೀಡಬೇಕು. ಅವರನ್ನು ಬಂಧಿಸುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ

    ಹಿಮಂತ ಬಿಸ್ವಾ ಶರ್ಮಾ ಹೇಳಿದ್ದೇನು?: ಫೆಬ್ರವರಿ 11ರಂದು ಉತ್ತರಾಖಂಡದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಹಿಮಂತ ಬಿಸ್ವ ಶರ್ಮಾ, ಭಾರತೀಯ ಸೇನೆಯು ನಡೆಸಿದ್ದ ನಿರ್ದಿಷ್ಟ ದಾಳಿಗೆ (ಸರ್ಜಿಕಲ್ ಸ್ಟ್ರೈಕ್) ಸಾಕ್ಷ್ಯ ಕೇಳಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ ಎಂದು ಪ್ರಶ್ನಿಸಿದ್ದರು.

  • ಖಾಲಿ ಇರುವ 6 ಸಾವಿರ ಪೊಲೀಸ್ ಹುದ್ದೆಗಳನ್ನು ವಾರದೊಳಗೆ ಭರ್ತಿ ಮಾಡಿ: ಅಸ್ಸಾಂ ಸಿಎಂ

    ಖಾಲಿ ಇರುವ 6 ಸಾವಿರ ಪೊಲೀಸ್ ಹುದ್ದೆಗಳನ್ನು ವಾರದೊಳಗೆ ಭರ್ತಿ ಮಾಡಿ: ಅಸ್ಸಾಂ ಸಿಎಂ

    ಡಿಸ್ಪುರ್: ಐದು ಕಮಾಂಡೋ ಬೆಟಾಲಿಯನ್‍ಗಳನ್ನು ಒಳಗೊಂಡಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 6,000 ಹುದ್ದೆಗಳನ್ನು ಒಂದು ವಾರದೊಳಗೆ ಭರ್ತಿ ಮಾಡಲು ಅಸ್ಸಾಂ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.

    ಮಂಗಳವಾರ ಪೊಲೀಸ್ ಅಧಿಕಾರಿಗಳೊಂದಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಭೆ ನಡೆಸಿದ್ದು, ಈ ಪರಿಶೀಲನಾ ಸಭೆಯಲ್ಲಿ ರಾಜ್ಯದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಎಂಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

    ಈ ಕುರಿತು ಶರ್ಮಾ ಅವರು ಟ್ವಿಟ್ಟರ್ ನಲ್ಲಿ, ರಾಜ್ಯದಲ್ಲಿ ಪೊಲೀಸಿಂಗ್ ಅನ್ನು ಬಲಪಡಿಸಲು, ಪೊಲೀಸರಿಗೆ 1,000 ಹೊಸ ಕ್ವಾರ್ಟರ್‍ಗಳು, ಡೈರೆಕ್ಟರ್ ಜನರಲ್ ಪೊಲೀಸ್ ಮತ್ತು ಕಮಿಷನರ್ ಕಚೇರಿಗಳಿಗೆ ಮೂಲಸೌಕರ್ಯಗಳನ್ನು ನವೀಕರಣಗೊಳಿಸುವ ಜೊತೆಗೆ ವಿವಿಧ ಸುಧಾರಣಾ ಕ್ರಮಗಳನ್ನು ಪರಿಚಯಿಸಿದರು. ಇದನ್ನೂ ಓದಿ: 116 ಕೋಟಿ ಒಡೆಯ ಸೋಮಶೇಖರ್ ಕಾಂಗ್ರೆಸ್‍ನಿಂದ ಸ್ಪರ್ಧೆ

    5 ಕಮಾಂಡೋ ಬೆಟಾಲಿಯನ್ ಸೇರಿದಂತೆ 6,000 ಹುದ್ದೆಗಳನ್ನು ಮುಂದಿನ ವಾರದೊಳಗೆ ಭರ್ತಿ ಮಾಡಲಾಗುವುದು. ನಮ್ಮ ಸಮಾಜದ ಸುರಕ್ಷತೆ ಮತ್ತು ಬೆಳವಣಿಗೆಗೆ ಪ್ರಮುಖವಾಗಿ ಕಾರಣರಾದ ನಮ್ಮ ಪೊಲೀಸಿಂಗ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ, ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪರಿಶೀಲನಾ ಸಭೆಯನ್ನು ನಡೆಸಲಾಗಿದ್ದು, ನಾವು ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದರು. ಇದನ್ನೂ ಓದಿ: ಕಾವೇರಿದ ಮಂಡ್ಯ ಎಂಎಲ್‍ಸಿ ಚುನಾವಣೆ – ಯಾರಿಗೆ ಸಿಗುತ್ತೆ ಸುಮಲತಾ ಬೆಂಬಲ?

    1992 ರಿಂದ ಗುವಾಹಟಿ ಪೊಲೀಸರು ವಜಾಗೊಳಿಸಿದ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಬಗೆಹರಿಸಲು ತೀರ್ಮಾನಿಸಲಾಗುವುದು. ಈ ಸಮಸ್ಯೆಗಳನ್ನು 31 ಮಾರ್ಚ್ 2022 ರೊಳಗೆ ಸಾಧ್ಯವಾದಷ್ಟು ಬಗೆಹರಿಸಲಾಗುವುದು ಎಂದರು.

    ಇನ್ನೂ ಮುಂದೆ ಎಫ್‍ಐಆರ್ ದಾಖಲಿಸಿದ 24 ಗಂಟೆಯೊಳಗೆ ತನಿಖೆ ಆರಂಭಿಸಲಾಗುವುದು. ಅಪಘಾತ ವರದಿ, ಪಾಸ್‍ಪೋರ್ಟ್, ಮರಣೋತ್ತರ ಪರೀಕ್ಷೆಯ ವರದಿಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಕುರಿತು ಜನವರಿ 8 ಮತ್ತು ಜನವರಿ 9 ರಂದು ದುಲಿಯಾಜಾನ್‍ನಲ್ಲಿ ಎರಡನೇ ಎಸ್‍ಪಿ ಸಮ್ಮೇಳನ ನಡೆಯಲಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.