Tag: ಸಿಎಂ ಸ್ಥಾನ

  • ಸಿಎಂ ಆಗೋದಕ್ಕೆ ನನಗಿನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿರೋ ಮಂದಿಗೆ ಆಲ್ ದಿ ಬೆಸ್ಟ್: ಡಿಕೆಶಿ

    ಸಿಎಂ ಆಗೋದಕ್ಕೆ ನನಗಿನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿರೋ ಮಂದಿಗೆ ಆಲ್ ದಿ ಬೆಸ್ಟ್: ಡಿಕೆಶಿ

    ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಬಿಟ್ಟಿಟ್ಟ ಬಳಿಕ ಜಲಸಂಪ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನನಗಿನ್ನೂ ಸಿಎಂ ಆಗಲು ಟೈಮ್ ಇದೆ, ಸಿಎಂ ರೇಸ್‍ನಲ್ಲಿ ಇರುವವರಿಗೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ವಿಚಾರ ಪ್ರತಿಕ್ರಿಯಿಸಿದರು. ಸಿಎಂ ರೇಸ್ ನಲ್ಲಿ ಇರುವವರಿಗೆ ವಿಶ್ ಮಾಡ್ತೀನಿ ಬಿಡಿ. ಆಲ್ ದಿ ಬೆಸ್ಟ್ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಮತ್ತೆ ಸಿಎಂ ಆಗೋ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ

    ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರ ಡೈರಿ ವಿಚಾರವಾಗಿ ಮಾತನಾಡುತ್ತ ನಾನು ಇನ್ನೂ ಸಿಎಂ ಆಗಿಲ್ಲ. ಸಿಎಂ ಆಗಲೂ ನನಗಿನ್ನೂ ಟೈಮ್ ಇದೆ. ಆ ನಂತರ ಎಲ್ಲದ್ದಕ್ಕೂ ಉತ್ತರ ನೀಡುತ್ತೇನೆ ಎಂದು ತಮಗಿರುವ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿರು.

    ನನ್ನ ಹತ್ತಿರ ಯಡಿಯೂರಪ್ಪ ಅವರ ಡೈರಿ ಇದ್ದಿದ್ದು ನಿಜ. ಅದನ್ನು ಐಟಿಯವರು ತೆಗೆದುಕೊಂಡು ಹೋಗಿದ್ದೂ ನಿಜ. ಆದರೆ ಕೋರ್ಟ್ ನಲ್ಲಿ ಈ ವಿಚಾರ ಇರುವುದರಿಂದ ಎಲ್ಲವನ್ನೂ ಹೇಳೋಕಾಗಲ್ಲ. ನಮ್ಮ ಹತ್ತಿರ ಯಾರ್ ಯಾರದ್ದೋ ಸೀಕ್ರೆಟ್ ಇರುತ್ತವೆ. ಐಟಿ ಅಧಿಕಾರಿಗಳನ್ನು ಎಲ್ಲ ವಿಚಾರ ಹೇಳಿ ಮುಜುಗರ ಮಾಡಲು ಇಷ್ಟಪಡುವುದಿಲ್ಲ. ನಾವು ಸಾರ್ವಜನಿಕ ಜೀವನದಲ್ಲಿ ಇರುವವರು. ಬಹಳ ಜನರ ರಹಸ್ಯ ನನಗೆ ಗೊತ್ತಿರುತ್ತದೆ ಎಂದರು. ನಂತರ ಯಡಿಯೂರಪ್ಪ ತಮ್ಮ ಮನೆಗೆ ಬಂದಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ಸೀಕ್ರ್ರೆಟ್ ಗಳನ್ನು ಹೇಳೋದಕ್ಕೆ ಆಗೋದಿಲ್ಲ. ಎಸ್‍ಐಟಿ ರಚನೆ ಬಗ್ಗೆ ಸಿಎಂ ಹತ್ತಿರವೇ ಕೇಳಿ. ನಾನು ಇನ್ನೂ ಸಿಎಂ ಆಗಿಲ್ಲ. ಸಿಎಂ ಆದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಈಗ ನಾನು ಸಿಎಂ ವಕ್ತಾರ ಅಲ್ಲ ಎಂದು ಹೇಳಿದರು.