Tag: ಸಿಎಂ ಸ್ಥಾನ

  • ಸಿಎಂ ಸ್ಥಾನ ಖಾಲಿ ಇಲ್ಲ, ಖಾಲಿ ಆಗುವ ಪ್ರಶ್ನೆಯೂ ಇಲ್ಲ: ಹೆಚ್.ಕೆ.ಪಾಟೀಲ್

    ಸಿಎಂ ಸ್ಥಾನ ಖಾಲಿ ಇಲ್ಲ, ಖಾಲಿ ಆಗುವ ಪ್ರಶ್ನೆಯೂ ಇಲ್ಲ: ಹೆಚ್.ಕೆ.ಪಾಟೀಲ್

    ಗದಗ: ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆಗುವ ಪ್ರಶ್ನೆಯೂ ಇಲ್ಲ ಎಂದು ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ (H K Patil) ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಕಿಡಿಕಾರಿದರು.

    ಗದಗ ಹೊರವಲಯದ ನಾಗಾವಿ ಬಳಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (Karnataka State Rural Development and Panchayat Raj University) ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿ ಆಗುವ ಪ್ರಶ್ನೆಯೂ ಇಲ್ಲ. ಸಿದ್ದರಾಮಯ್ಯನವರೇ (CM Siddaramaiah) ನಮ್ಮ ಸಿಎಂ ಹಾಗೂ ನಮ್ಮ ನಾಯಕರು. ಅನಾವಶ್ಯಕವಾಗಿ ಸಿಎಂ ಸ್ಥಾನದ ಬಗ್ಗೆ ಮಾಧ್ಯಮದವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.ಇದನ್ನೂ ಓದಿ: ರಾಹುಲ್‌ ಹೇಳಿಕೆ ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಬೇಡಿಕೆ ಮುಂದಿಟ್ಟ ಉಗ್ರ ಪನ್ನುನ್

    ಸಿಎಂ ಸ್ಥಾನದ ರೇಸ್‌ನಲ್ಲಿ ಹೆಚ್.ಕೆ.ಪಾಟೀಲ್ ಹೆಸರು ಕೇಳಿ ಬರುತ್ತಿರುವ ವಿಷಯವಾಗಿ ಮಾತನಾಡಿ, ಸಿಎಂ ಸ್ಥಾನ ಖಾಲಿಯೂ ಇಲ್ಲ. ಆ ಪ್ರಶ್ನೆ ಉದ್ಭವಿಸುವುದಿಲ್ಲ, ಇದು ಸಮಯವೂ ಅಲ್ಲ. ಈ ಬಗ್ಗೆ ಅನಾವಶ್ಯಕ ಚರ್ಚೆಯನ್ನು ವಿವೇಕ ಇದ್ದವರು ಮಾಡೋದಿಲ್ಲ ಎಂದು ಸಿಡಿಮಿಡಿಗೊಂಡರು.

    ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆ, ಪ್ರಗತಿ, ಸಮನ್ವಯ ಕಾರ್ಯಗಳಿಗೆ ಸಂಬಂಧಿಸಿದ ಸಚಿವರು ಕ್ರಮವಹಿಸಲು ಸಮಿತಿ ರಚನೆಯ ಕುರಿತು ತಿಳಿಸಿದರು. ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವರ ಅಧ್ಯಕ್ಷತೆಯಲ್ಲಿ 5 ಜನ ಸಚಿವರ ಸಮಿತಿ ರಚಿಸಿದ್ದಾರೆ. ಪ್ರಮಾದಗಳು, ತಪ್ಪು ಎಸಗಿರುವ ಬಗ್ಗೆ ತನಿಖೆ ಹಾಗೂ ಮುಂದಿನ ಕ್ರಮಗಳನ್ನು ಶಿಫಾರಸು ಮಾಡಲು ಈ ಬಗ್ಗೆ ನಮ್ಮ ಸಮಿತಿ ಬೇಗ ಕೆಲಸ ಮಾಡಲು ಪ್ರಾರಂಭ ಮಾಡಲಿದೆ ಎಂದರು.ಇದನ್ನೂ ಓದಿ: ರಾಜ್ಯದ ಅರಣ್ಯ ಸಿಬ್ಬಂದಿಗೂ ಪೊಲೀಸ್ ಕ್ಯಾಂಟೀನ್ ಸೌಲಭ್ಯ: ಈಶ್ವರ ಖಂಡ್ರೆ

    ವಾಲ್ಮೀಕಿ ನಿಗಮ ಹಗರಣ (Valmiki Scam) ಕುರಿತು ಮಾತನಾಡಿ, ವಾಲ್ಮೀಕಿ ನಿಗಮ ಹಗರಣ ಬಗ್ಗೆ ಎಸ್‌ಐಟಿ ಹಾಗೂ ಇಡಿ ತಂಡ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಕಾನೂನು ಕ್ರಮ, ಕಾನೂನು ಪ್ರಕ್ರಿಯೆ ಮುಂದುವರೆಯುತ್ತದೆ. ಕೋರ್ಟ್ಗಳ ಮೂಲಕ ಸತ್ಯಾಸತ್ಯತೆ ಹೊರಬರುತ್ತದೆ. ಸತ್ಯಾಸತ್ಯತೆ ಕೋರ್ಟ್‌ನಲ್ಲಿ ನಡೆಯುವ ಪ್ರಕರಣವನ್ನು ಹೊರಹಾಕುತ್ತದೆ ಎಂದು ಹೇಳಿದರು.

    ಅಮೆರಿಕಾದಲ್ಲಿ ರಾಹುಲ್ ಗಾಂಧಿ (Rahul Gandhi) ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ಭಾರತ ಚುನಾವಣೆ ವ್ಯವಸ್ಥೆ, ಬೇರೆ ವಿಷಯ ಏನಿಲ್ಲದಿದ್ದರೂ ಬಿಜೆಪಿಯವರು ಇಲ್ಲದ ಕಾರಣ ಹುಡುಕುವ ಪ್ರಯತ್ನ ಮಾಡುತ್ತಾರೆ. ರಾಹುಲ್ ಗಾಂಧಿ ಅವರು ಏನು ಹೇಳಿಕೆ ಕೊಟ್ಟಿರುತ್ತಾರೆ, ಅದನ್ನು ಗಮನಿಸಿಕೊಂಡು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕೆ ವಿನಃ ಟೀಕೆ ಮಾಡುವುದಕ್ಕೆ ಅದನ್ನು ಬಳಕೆ ಮಾಡಿಕೊಳ್ಳಬಾರದು. ಬಿಜೆಪಿಯವರು ರಾಹುಲ್ ಗಾಂಧಿ ಅವರನ್ನು ಎಷ್ಟೇ ಅವಹೇಳನ ಮಾಡಲು ಪ್ರಯತ್ನ ಮಾಡಲಿ. ನಮ್ಮ ದೇಶದ ಜನರು ರಾಹುಲ್ ಗಾಂಧಿಯವರನ್ನು ಎತ್ತರದ ನಾಯಕ ಎಂದು ಗುರುತಿಸಿದ್ದಾರೆ. ಬಿಜೆಪಿಯವರು ಏನು ಮಾಡಿದರೂ ಅವರ ಉದ್ದೇಶ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

  • ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ, ಅನುಮಾನವೇ ಬೇಡ: ಸಿದ್ದರಾಮಯ್ಯ ಕೌಂಟರ್

    ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ, ಅನುಮಾನವೇ ಬೇಡ: ಸಿದ್ದರಾಮಯ್ಯ ಕೌಂಟರ್

    ಬೆಂಗಳೂರು: ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ ಇದರಲ್ಲಿ ಯಾವುದೇ ಅನುಮಾನವೇ ಬೇಡ ಎಂದು ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೌಂಟರ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದ ಬಗ್ಗೆ ಹಲವು ಸಚಿವರ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಿಎಂ ಸ್ಥಾನದ ಚರ್ಚೆ ಬಗ್ಗೆ ಕೆಲ ಕಾಂಗ್ರೆಸ್ ನಾಯಕರಿಂದ ಹೈಕಮಾಂಡ್‌ಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ: ಯಾವುದೇ ಬೆಂಬಲವನ್ನು ನೀಡಿಲ್ಲ- ಪಿ.ಟಿ.ಉಷಾ ವಿರುದ್ಧ ಫೋಟೋ ಕ್ಲಿಕ್ಕಿಸಿದ ಬಗ್ಗೆ ಫೋಗಟ್ ಕಿಡಿ

    ಯಾರೂ ಕೂಡಾ ಸಿಎಂ ಆಗ್ತೀವಿ ಅಂತಾ ಹೇಳಿಕೆ ಕೊಟ್ಟಿಲ್ಲ. ಕುರ್ಚಿನೇ ಖಾಲಿ ಇಲ್ಲ. ಸಿಎಂ ಆಗ್ತೀವಿ ಅಂತಾ ಯಾಕೆ ಹೇಳ್ತಾರೆ. ಅವರೆಲ್ಲರೂ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಅಂತಾ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಸೂಚಿಸಿದರೆ ಸಿಎಂ ಆಗ್ತೀವಿ ಎಂಬ ಕೆಲವರ ಹೇಳಿಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ.

    ಸಿಎಂ ಸ್ಥಾನ ಖಾಲಿ ಆದರೆ ಅಲ್ಲವಾ? ಇನ್ನು ಸೂಚನೆ ಯಾಕೆ ಕೊಡ್ತಾರೆ? ಯಾವುದೇ ಡೌಟ್ ಇಲ್ಲ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ: ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ: ಸಿದ್ದರಾಮಯ್ಯ

  • ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

    ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

    – ಹಿಂದೂಸ್ತಾನದಲ್ಲಿ ಅಲ್ಲದೆ ಪಾಕಿಸ್ತಾನದಲ್ಲಿ ಗಣೇಶೋತ್ಸವ ಮಾಡೋಕಾಗುತ್ತಾ?

    ವಿಜಯಪುರ: ಸಿಎಂ ಆಗುವ ಆಸೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಚ್ಚಿಟ್ಟಿದ್ದಾರೆ. ಸಿಎಂ ಆಗುವ ಆ ಕಾಲ ಬಂದೆ ಬರುತ್ತೆ ಎಂದಿದ್ದಾರೆ.

    ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಿಶ್ವಕರ್ಮ ಸಮಾಜದ ಕಾರ್ಯಕ್ರಮದ ವೇದಿಕೆಯಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಮುಂದೊಂದು ದಿನ ಆ ಕಾಲ ಬಂದೇ ಬರುತ್ತೆ. ಆ ಜಾಗದಲ್ಲಿ ಒಯ್ದು ನನ್ನ ಕೂರಿಸುತ್ತೆ. ಸಿಎಂ ಆಗುವ ಆ ಕಾಲ ಬಂದೇ ಬರುತ್ತೆ. ಇನ್ನು ಯತ್ನಾಳ್‍ದು ಮುಗಿತು ಎನ್ನುವ ಹುಚ್ಚು ಭ್ರಮೆಯಲ್ಲಿ ಇದ್ದರೆ ಅದನ್ನ ತಲೆಯಿಂದ ತೆಗೆಯಿರಿ. ಉಪದ್ಯಾಪಿಗಳು ಎಷ್ಟು ಹಾರಾಡಿದರು ಏನೂ ಆಗಲ್ಲ. ಯೋಗಿ ಆದಿತ್ಯನಾಥರನ್ನು ಸಿಎಂ ಮಾಡಬೇಕು ಎಂದು ಇರಲಿಲ್ಲ. ಹಿಂದುತ್ವದ ಉಳುವಿಗಾಗಿ ಸಿಎಂ ಮಾಡಬೇಕಾದ ಅನಿವಾರ್ಯತೆ ಬಂತು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕೋರಮಂಗಲದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಬಲಿ

    ನಾನು ಮಂತ್ರಿ ಸ್ಥಾನವನ್ನು ಕೇಳಲಿಲ್ಲ, ಮಂತ್ರಿ ಆಗಬೇಕೆಂದು ಯಾರ ಮನೆಗೂ ಹೋಗಿಲ್ಲ. ಸಿಎಂ ಮಾಡಿ ಎಂದು ದೆಹಲಿಗೂ ಹೋಗಿಲ್ಲ. ನನಗೆ ಅದರ ಮೇಲೆ ಆಸೆಯೂ ಇಲ್ಲ ಎಂದು ಮಂತ್ರಿ ಸ್ಥಾನ ಹಾಗೂ ಸಿಎಂ ಸ್ಥಾನ ಸಿಗದಿದ್ದರ ಕುರಿತು ಹೇಳಿದರು.

    ಸಾರ್ವಜನಿಕ ಗಣೇಶೋತ್ಸವಕ್ಕ ಅನುಮತಿ ನೀಡುವ ವಿಚಾರವಾಗಿ ಮಾತನಾಡಿ, ಮೊನ್ನೆ ಎಲ್ಲರೂ ಅವರವರ ಜಾತ್ರೆ ಮಾಡಿಕೊಂಡಿದ್ದಾರೆ. ಮೊಹರಂ ಅದ್ಧೂರಿಯಾಗಿ ಆಚರಿಸಿದ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಗೌರವಯುತವಾಗಿ ಗಣೇಶ ಕೂರಿಸಲು ಅವಕಾಶ ಕೊಡಿ ಎಂದಿದ್ದೇನೆ. ಗೃಹ ಸಚಿವರ ಜೊತೆಗೆ ಮಾತನಾಡಿದ್ದೇನೆ. ನಮ್ಮ ಬೇಡಿಕೆ ಇಡೇರಿಸುತ್ತೇವೆ ಎಂದಿದ್ದಾರೆ. ಗಣೇಶ ಚತುರ್ಥಿ ಹಿಂದೂಸ್ತಾನದಲ್ಲಿ ಮಾಡದೇ ಪಾಕಿಸ್ತಾನದಲ್ಲಿ ಮಾಡಲು ಆಗುತ್ತಾ? ಮುಂದೊಂದು ದಿನ ಪಾಕಿಸ್ತಾನದಲ್ಲೂ ಗಣೇಶ ಕೂರಿಸುವ ಕಾಲ ಬರುತ್ತದೆ. ಪಾಕಿಸ್ತಾನದಲ್ಲಿ ಗಣೇಶ ಕೂರಿಸುವ ಕಾಲ ದೂರ ಇಲ್ಲ ಎಂದರು.

  • ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ: ಸಿದ್ದರಾಮಯ್ಯ

    ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ: ಸಿದ್ದರಾಮಯ್ಯ

    ಗದಗ: ಯಡಿಯೂರಪ್ಪ ರಾಜ್ಯ ಕಂಡ ಕಡು ಭ್ರಷ್ಟ ಮುಖ್ಯಮಂತ್ರಿ, ಅವರು ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರುವುದರಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

    ಸ್ವ ಕ್ಷೇತ್ರ ಬಾದಾಮಿಗೆ ಹೋಗುವ ಮುನ್ನ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದರು. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ, ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ. ಯಡಿಯೂರಪ್ಪ ಕರ್ನಾಟಕ ಕಂಡ ಒಬ್ಬ ಭ್ರಷ್ಟ ಮುಖ್ಯಮಂತ್ರಿ, ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿಯೇ ಆಗಿರುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಭ್ರಷ್ಟ ಮುಖ್ಯಮಂತ್ರಿ ತೆಗೆದು ಭ್ರಷ್ಟನನ್ನು ಮಾಡಿದರೆ ಸಾಮಾನ್ಯ ಜನರಿಗೇನು ಲಾಭ: ಸಿದ್ದರಾಮಯ್ಯ

    ಮುಂದಿನ ಸಿಎಂ ಯಾರಾಗಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನೇನು ಬಿಜೆಪಿ ಅಧ್ಯಕ್ಷನೇ? ಅದು ಅವರ ಪಕ್ಷದ ವಿಚಾರ ಎಂದು ಉತ್ತರಿಸಿದರು. ಯಡಿಯೂರಪ್ಪನವರ ಪರ ಸ್ವಾಮೀಜಿಗಳು ನಿಂತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರುವುದು ಒಳ್ಳೆಯದು, ಧರ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತ ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವರಾಗುವಂತೆ ವಾಜಪೇಯಿ ಹೇಳಿದ್ದನ್ನು ನೆನೆದು ಕಣ್ಣೀರಿಟ್ಟ ಸಿಎಂ ಯಡಿಯೂರಪ್ಪ

    ರಾಜ್ಯಕ್ಕೆ ಹೊಸ ಸಿಎಂ ಬಂದರೂ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡವ ನಮ್ಮ ಹೋರಾಟ ಮುಂದುವರಿಯಲಿದೆ. ಕಾಂಗ್ರೆಸ್ ವಲಸಿಗರ ಪರಿಸ್ಥಿತಿ ನನಗೆ ಗೊತ್ತಿಲ್ಲ. ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋದವರಿಗೆ ಜನ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.

  • ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಬಿಎಸ್‍ವೈ, ಸಿದ್ದರಾಮಯ್ಯ, ಜಮೀರ್ ಎಲ್ಲರೂ ಆಪ್ತರು – ಯತ್ನಾಳ್

    ಹಾವೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎರಡು ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೋ ಹೊರತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಇರುತ್ತಾರೆ ಎಂದು ಘೋಷಿಸಿಲ್ಲ ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್  ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಜೊತೆ ಬಹಳ ಆಪ್ತರಾಗಿದ್ದಾರೆ. ಹಾಗಾಗಿ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂಬುದು ಅವರಿಗೆ ಮಾತ್ರ ಗೊತ್ತಿದೆ. ಯಡಿಯೂರಪ್ಪ, ಜಾರ್ಜ್, ಜಮೀರ್ ಅಹಮ್ಮದ್ ಖಾನ್ ಎಲ್ಲರೂ ಬಹಳ ಆಪ್ತರು. ಅಮಿತ್ ಶಾ ಎರಡೂವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪನವರೆ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ್ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅಂತಹ ಕಡೆಗಳಲ್ಲಿ ಸಚಿವ ಸ್ಥಾನ ನೀಡುವಂತೆ ಹೇಳಿದ್ದೇನೆ. ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.

    ಇದೇ ವೇಳೆ ಸಿಡಿ ವಿಚಾರವಾಗಿ ನಾನು ಏನು ಹೇಳಿಲ್ಲ. ನಾನು ಶರಣರ ವಚನಗಳ ಸಿಡಿ ನೋಡುತ್ತೇನೆ ಹೊರತು ಅಂತಹ ಸಿಡಿಗಳನ್ನು ನೋಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ನಾನು ಹೇಳಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

    ಸದ್ಯ ಈಗ ಮೋದಿಯವರ ಗಾಳಿ ಇರುವುದರಿಂದ ವಲಸಿಗ ಶಾಸಕರು ಮೋದಿಯವರಿಗೆ ಜೈ ಅಂತಿದ್ದಾರೆ. ನಾಳೆ ಗಾಳಿ ಬೇರೆಯಾದರೆ ಸೋನಿಯಾಕಿ ಜೈಕಾರ ಹಾಕುತ್ತಾರೆ. ದೇವೇಗೌಡ ಅಪ್ಪಾಜಿ ಎಂದು ಕೂಡ ಕರೆಯುತ್ತಾರೆ. ವಲಸಿಗ ಶಾಸಕರು ಈಗ ಮೂಲ ಬಿಜೆಪಿ ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾ ಇದೇ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಲ್ಲ, ಅವರು ಉಪಾದ್ಯಾಪಿ ಠಾಕ್ರಿ. ಚುನಾವಣಾ ಸ್ಟಂಟ್ ಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.

  • ಡಿಕೆಶಿ ಸಿಎಂ ಆಗೋವರೆಗೂ ಮದ್ವೆಯಾಗಲ್ಲ: ಅಭಿಮಾನಿ ಶಪಥ

    ಡಿಕೆಶಿ ಸಿಎಂ ಆಗೋವರೆಗೂ ಮದ್ವೆಯಾಗಲ್ಲ: ಅಭಿಮಾನಿ ಶಪಥ

    – ಈ ದೇಹ ಮಣ್ಣಿಗೆ, ಪ್ರಾಣ ಡಿಕೆಶಿ ಅಣ್ಣನಿಗೆ
    – ಅಭಿಮಾನಿಯ ವಿಡಿಯೋ ವೈರಲ್

    ರಾಮನಗರ: ಮಾಜಿ ಸಚಿವ, ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವವರೆಗೂ ನಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಡಿಕೆಶಿ ಅಭಿಮಾನಿಯೊಬ್ಬ ಶಪಥ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಾಜಿ ಸಚಿವರ ಅಭಿಮಾನಿ ರಿಜ್ವಾನ್ ಪಾಷಾ, ತಮ್ಮ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಸೆಲ್ಫಿ ವಿಡಿಯೋ ಮೂಲಕ ಪಾಷಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಈ ದೇಹ ಮಣ್ಣಿಗೆ, ಪ್ರಾಣ ಡಿಕೆಶಿ ಅಣ್ಣನಿಗೆ. ಅಣ್ಣ ಸಿಎಂ ಅಗುವವರೆಗೆ ನಾನು ಮದುವೆ ಆಗುವುದಿಲ್ಲ. ಡಿಕೆ ಸಾಹೇಬರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ನಂತರ ಮದುವೆ ಮಾಡಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ.

    ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಲವಾರು ಮಂದಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಅನೇಕರು ಹರಕೆ ಹೊತ್ತು ಅಭಿಮಾನ ತೋರಿಸಿದ್ದರು. ಆದರೆ ರಿಜ್ವಾನ್ ಪಾಷಾ, ಒಂದು ಹೆಜ್ಜೆ ಮುಂದೆ ಹೋಗಿ ಡಿಕೆ ಶಿವಕುಮಾರ್ ಅವರು ಸಿಎಂ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

    ರಿಜ್ವಾನ್ ಪಾಷಾ ಕನಕಪುರ ನಗರದ ಮೇಳೆಕೋಟೆಯ ನಿವಾಸಿಯಾಗಿದ್ದು, ಡಿ.ಕೆ.ಶಿವಕುಮಾರ್ ಅವರ ಅಪ್ಪಟ ಅಭಿಮಾನಿ. ಈ ಹಿಂದೆ ಡಿಕೆ ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯ(ಇಡಿ)ದ ವಿಚಾರಣೆ ವೇಳೆ ಜೈಲು ಸೇರಿದ್ದಾಗ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಕನಕಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಿಜ್ವಾನ್ ಪಾಷಾ ತಲೆ ಬೋಳಿಸಿಕೊಂಡು ಹುಚ್ಚು ಅಭಿಮಾನ ಮೆರೆದಿದ್ದರು.

  • ಬಿಎಸ್‍ವೈ ನಂತರ ನಾನೇ ರಾಜ್ಯದ ಸಿಎಂ ಎಂದ ಕತ್ತಿ

    ಬಿಎಸ್‍ವೈ ನಂತರ ನಾನೇ ರಾಜ್ಯದ ಸಿಎಂ ಎಂದ ಕತ್ತಿ

    ಹುಬ್ಬಳ್ಳಿ: ಸಿಎಂ ಬಿಎಸ್ ಯಡಿಯೂರಪ್ಪ ನಂತರ ನಾನೇ ರಾಜ್ಯದ ಸಿಎಂ. ಅದಕ್ಕಾಗಿಯೇ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವರಾಗಿ ಮುಖ್ಯಮಂತ್ರಿಯಾಗಬೇಕು. ಡಿಸಿಎಂ ಆಗಿ ಅಲ್ಲ. ಡಿಸಿಎಂ ಹುದ್ದೆ ಅಸಂವಿಧಾನಿಕ ಹುದ್ದೆಯಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಬದಲಾವಣೆ ಮಾಡೋದಕ್ಕಾಗೇ ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಸದ್ಯಕ್ಕೆ ಬಿಎಸ್‍ವೈ ಸಿಎಂ ಆಗಿದ್ದಾರೆ. ಅವರ ನಂತರ ನಾನು ಸಿಎಂ ಆಗುವೆ. ನಾನು ಎಕಾಂಗಿ ಎನೂ ಅಲ್ಲ. ನನ್ನ ಹಿಂದೆಯೂ ಸಾಕಷ್ಟು ಜನರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನೆರೆ ಪರಿಹಾರ ನನಗೆ ಸಮಾಧಾನ ತಂದಿದೆ. ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಕೇಂದ್ರ ಸರ್ಕಾರ ಇನ್ನೂ 400 ಕೋಟಿ ಕೊಡುವುದಾಗಿ ಹೇಳಿದೆ. ಡಿಸಿಎಂ ಲಕ್ಷ್ಮಣ್ ಸವದಿ ನನ್ನ ಆತ್ಮೀಯ ಸ್ನೇಹಿತ. ಯಡಿಯೂರಪ್ಪ ಅವರು ನನ್ಮ ರಾಜಕೀಯ ಗುರುಗಳು ಎಂದು ಕತ್ತಿ ಹೇಳಿದರು. ಇದೇ ವೇಳೆ ಅನರ್ಹ ಶಾಸಕರಿಗೂ ಬಿಜೆಪಿ ಸಂಬಂಧವಿಲ್ಲ ಅನ್ನೋ ವಿಚಾರವಾಗಿ ಮಾತನಾಡಿ, ಅನರ್ಹರಿಂದಲೇ ನಮ್ಮ ಸರ್ಕಾರ ಬಂದಿದೆ ಎಂದರು.

    ಏಳು ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಉಮೇಶ ಕತ್ತಿ ಏಕಾಂಗಿಯಾಗಿ ಸಾಮಾನ್ಯ ಕಾರ್ಯಕರ್ತರಂತೆ ಹಿಂಭಾಗದಲ್ಲಿ ಕುಳಿತ್ತಿದ್ದು ಕಂಡು ಬಂದಿತು. ವೇದಿಕೆ ಮೇಲಿದ್ದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹಾಗೂ ಸಿಎಂ ಬಿಎಸ್‍ವೈ ಸಭೆಗೆ ಆಗಮಿಸಿದ್ದ ಸಂಸದರು ಹಾಗೂ ಶಾಸಕರನ್ನು ಕರೆದು ವೇದಿಕೆ ಮುಂಭಾಗದಲ್ಲಿ ಕುಳಿತುಕೊಳ್ಳಲು ಸೂಚನೆ ನೀಡಿದರು. ಆದರೆ ಉಮೇಶ ಕತ್ತಿಯವರನ್ನು ನೋಡಿಯೂ ಮುಂದೆ ಕರೆಯದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ನಾನು ಸಭೆಯಲ್ಲಿ ಎಲ್ಲಿ ಕೂತರೇ ಎನು? ನಾನು ಎಕಾಂಗಿಯಲ್ಲ, ಹೇಳಬೇಕಾಗಿದ್ದನ್ನು ಹೇಳಿದ್ದೇನೆ ಎಂದು ಕತ್ತಿ ಉತ್ತರಿಸಿದರು.

  • ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ: ಮೈಲಾರಲಿಂಗ ಸ್ವಾಮೀಜಿ ಭವಿಷ್ಯ

    ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ: ಮೈಲಾರಲಿಂಗ ಸ್ವಾಮೀಜಿ ಭವಿಷ್ಯ

    ಧಾರವಾಡ: ಧರ್ಮ ಶ್ರೇಷ್ಠದಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ ಆಗುತ್ತಾರೆ. ಯಾರು ಮುಂದಿನ ಸಿಎಂ ಅನ್ನೋದು ಇಂದು ಮಧ್ಯಾಹ್ನ 2.45ರೊಳಗೆ ಗೊತ್ತಾಗುತ್ತದೆ ಎಂದು ರಾಜ್ಯ ರಾಜಕಾರಣದ ಕುರಿತು ಮೈಲಾರಲಿಂಗ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಆದಿಶಕ್ತಿ ಹೊಳೆಮ್ಮದೇವಿ ಆರಾಧಕರಾಗಿರುವ ಮೈಲಾರಲಿಂಗ ಸ್ವಾಮೀಜಿ ಅವರು ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮಾವನ್ನು ನೋಡಿ ಭವಿಷ್ಯ ಹೇಳಿದ್ದಾರೆ. ಧರ್ಮ ಶ್ರೇಷ್ಠತೆಯಿಂದ ನಡೆದುಕೊಳ್ಳುವ ವ್ಯಕ್ತಿ ಮುಂದಿನ ಸಿಎಂ ಆಗುತ್ತಾರೆ. ಜನ ಯಾವುದು ಹೌದು, ಹೌದು ಎನ್ನುತ್ತಿದ್ದಾರೋ ಅದು ಅಲ್ಲವಾಗುತ್ತೆ. ಯಾವುದು ಆಗುವುದಿಲ್ಲ ಎಂದು ಜನ ತಿಳಿದಿದ್ದಾರೆಯೋ ಅದು ನಿಜವಾಗಲಿದೆ ಅಂತ ದೇವಿ ವಾಣಿಯಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

    ಧರ್ಮ ಶ್ರೇಷ್ಠತೆಯ ವ್ಯಕ್ತಿ ರಾಜ್ಯದ ಆಡಳಿತ ನಡೆಸುತ್ತಾನೆ. ಇಂದು ಮಧ್ಯಾಹ್ನ 2.45ರೊಳಗೆ ಎಲ್ಲಾ ತಿಳಿಯಲಿದೆ. ಧರ್ಮದ ಸೇವೆ ಮಾಡುವ ವ್ಯಕ್ತಿ ಸಿಎಂ ಸ್ಥಾನವನ್ನು ಏರುತ್ತಾನೆ ಎಂದು ದೇವಿ ನನ್ನ ಮೂಲಕ ಹೇಳಿಸುತ್ತಿದ್ದಾಳೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

  • ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ, ಒಲವಿದೆ: ರೇವಣ್ಣ

    ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ, ಒಲವಿದೆ: ರೇವಣ್ಣ

    ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ನನ್ನ ಮೇಲೆ ಅಭಿಮಾನವಿದೆ ಮತ್ತು ಒಲವಿದೆ, ಹೀಗಾಗಿ ಸಿಎಂ ಸ್ಥಾನಕ್ಕೆ ನಾನೂ ಕೂಡ ಅರ್ಹ ಅಂತ ಟ್ವೀಟ್ ಮಾಡಿದ್ದಾರೆ ಎಂದು ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.

    ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನಕ್ಕಾಗಿ ನಾವು ಅಣ್ಣ ತಮ್ಮಂದಿರು ಬಡಿದಾಡಿಕೊಳ್ಳಲ್ಲ. ನಮ್ಮ ವರಿಷ್ಠರು ದೇವೇಗೌಡರು ಏನು ಹೇಳುತ್ತಾರೆ ಹಾಗೆಯೇ ನಾನು ಕೇಳುತ್ತೇನಿ. ಭಿನ್ನವಾಡುವ ಪ್ರಶ್ನೆಯೇ ಉದ್ಭವಿಸಲ್ಲ. ನನ್ನ ಮತ್ತು ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಅಭಿಮಾನವಿದೆ ಅದಕ್ಕೆ ಸಿಎಂ ಸ್ಥಾನಕ್ಕೆ ಅರ್ಹ ಎಂದಿದ್ದಾರೆ ಎಂದು ಮಾಜಿ ಸಿಎಂ ಪರ ನಿಂತಿದ್ದಾರೆ. ಇದನ್ನೂ ಓದಿ:ಖರ್ಗೆಗೆ ಸಿಎಂ ಪೋಸ್ಟ್ – ಸಿದ್ದರಾಮಯ್ಯ ಟಾಂಗಿಗೆ ಸಿಎಂ ತಿರುಗೇಟು

    ಸಿದ್ದರಾಮಯ್ಯ ಹೇಳಿದ್ದೇನು?
    ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್.ಡಿ.ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದರು.

  • ಅರಸ್ ಬಳಿಕ ರಾಜ್ಯ ಕಂಡ ಉತ್ತಮ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ : ಮಹದೇವಪ್ಪ

    ಅರಸ್ ಬಳಿಕ ರಾಜ್ಯ ಕಂಡ ಉತ್ತಮ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ : ಮಹದೇವಪ್ಪ

    ಹುಬ್ಬಳ್ಳಿ: ಮಾಜಿ ಸಿಎಂ ದೇವರಾಜ್ ಅರಸ್ ಅವರ ನಂತರ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ವ್ಯಕ್ತಿ ಅಂದರೆ ಅದು ಸಿದ್ದರಾಮಯ್ಯ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಹಾಡಿ ಹೊಗಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ದೇವರಾಜ್ ಅರಸ್ ಅವರ ನಂತರ ಉತ್ತಮ ಆಡಳಿತ ಮಾಡಿದ ವ್ಯಕ್ತಿ. ಅಭಿವೃದ್ಧಿ ಪರವಾದ ಆಡಳಿತ ಕೊಟ್ಟದ್ದಾರೆ ಎಂದರು.

    ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಆದರೆ ಜನರ ಮನಸ್ಸಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಮುಖ್ಯಮಂತ್ರಿ ಅಲ್ಲದಿದ್ದರೂ ಜನರಿಗೆ ಮಾತ್ರ ಮುಖ್ಯಮಂತ್ರಿಯೇ. ದೋಸ್ತಿ ಸರ್ಕಾರದ ಎರಡು ಪಕ್ಷದ ವರಿಷ್ಠರು ಸೇರಿ ಈಗಾಗಲೇ ಮುಖ್ಯಮಂತ್ರಿ ಅವರನ್ನ ನೇಮಕ ಮಾಡಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಇಲ್ಲ, ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಕೂಗೂ ಇದೆ. ಹೀಗಾಗಿ ದಲಿತ ಮುಖಂಡರಿಗೆ ಸಿಎಂ ಆಗುವ ಅವಕಾಶ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಬಗ್ಗೆ ಜೆಡಿಎಸ್ ನಾಯಕ ವಿಶ್ವನಾಥ್ ಮಾತನಾಡಿರುವ ಬಗ್ಗೆ ಪ್ರತಿಕ್ರಯಿಸಿ, ಗುಣಕ್ಕೆ ಮತ್ಸರ ಪಡೋರು ಲೀಡರ್ ಅಲ್ಲ, ಸಾರ್ವಜನಿಕ ಸ್ಥಳದಲ್ಲಿ ಬದುಕಲು ಅರ್ಹರಲ್ಲ ಎಂದು ಹೇಳಿ ಟಾಂಗ್ ನೀಡಿದರು.