Tag: ಸಿಎಂ ಶಿವರಾಜ್ ಚೌಹಾಣ್

  • ಕರ್ತವ್ಯದಲ್ಲಿದ್ದ ವೇಳೆ ಪತ್ರಕರ್ತ ಮೃತಪಟ್ಟರೆ 4 ಲಕ್ಷ ರೂ. ಪರಿಹಾರ

    ಕರ್ತವ್ಯದಲ್ಲಿದ್ದ ವೇಳೆ ಪತ್ರಕರ್ತ ಮೃತಪಟ್ಟರೆ 4 ಲಕ್ಷ ರೂ. ಪರಿಹಾರ

    ಭೋಪಾಲ್: ಕರ್ತವ್ಯದಲ್ಲಿದ್ದಾಗ ಪತ್ರಕರ್ತ ಮೃತಪಟ್ಟರೆ ಅವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಘೋಷಿಸಿದ್ದಾರೆ.

    ಪತ್ರಕರ್ತರ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದ ಅವರು, ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟರೆ, ಗಾಯಗೊಂಡ್ರೆ ಅಥವಾ ಇನ್ಯಾವುದೇ ಘಟನೆ ನಡೆದ್ರೆ ಅಂತಹ ಪತ್ರಕರ್ತರಿಗೆ ಇನ್ನು ಮುಂದೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಇನ್ನು ಘಟನೆಯಲ್ಲಿ ಅವರ ಸಲಕರಣೆಗಳಿಗೆ ಹಾನಿಯಾದ್ರೆ ಕೂಡ ಅವುಗಳ ರಿಪೇರಿಗಾಗಿ 50,000 ರೂ. ಗಳನ್ನು ಕ್ಯಾಮೆರಾಮ್ಯಾನ್ ಗೆ ನೀಡುವುದಾಗಿಯೂ ತಿಳಿಸಿದ್ದಾರೆ.

    ಪತ್ರಕರ್ತರಿಗೆ ಸಾಲ ನೀಡುವ ಸೌಲಭ್ಯಗಳನ್ನು ಒದಗಿಸುವ ಯೋಜನೆಯ ಬಗ್ಗೆ ಚರ್ಚಿಸಿದ್ದೇವೆ. ಇದರಿಂದ ಅವರು ಮನೆಗಳನ್ನು ಸುಲಭವಾಗಿ ಹೊಂದಬಹುದಾಗಿದೆ ಅಂತ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭಿಂಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ರಕರ್ತರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಈ ನಿಧಾರ ಕೈಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದ ಸಂದೀಪ್ ಶರ್ಮಾ ಅವರ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾರ್ಚ್ 25ರಂದು ನಡೆದಿತ್ತು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.