ಮುಂಬೈ: ಉತ್ತರ ಪ್ರದೇಶದ ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ ಹಾಕಿದ್ದ ಯುವಕನನ್ನು ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹ ದಳ ಬಂಧಿಸಿದೆ. ಯುವಕ ಬಾಂಬ್ ಬ್ಲಾಸ್ಟ್ ನಲ್ಲಿ ಮುಖ್ಯಮಂತ್ರಿಗಳನ್ನ ಕೊಲ್ಲುವದಾಗಿ ಬೆದರಿಕೆ ಹಾಕಿದದ್ದನು.
ಕಮ್ರಾನ್ ಅಮಿನ್ ಖಾನ್ ಬಂಧಿತ ಯುವಕ. ಮುಂಬೈನ ಚುನಬತ್ತಿ ಏರಿಯಾದಲ್ಲಿ ಕಮ್ರಾನ್ ವಾಸವಾಗಿದ್ದನು. ಸೋಶಿಯಲ್ ಮೀಡಿಯಾ ಮೂಲಕ ಲಕ್ನೋ ಹೆಲ್ಪ್ ಡೆಸ್ಕ್‍ಗೆ ಬೆದರಿಕೆ ಸಂದೇಶವನ್ನು ರವಾನಿಸಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಉತ್ತರ ಪ್ರದೇಶದ ಪೊಲೀಸರು ಸಂದೇಶದ ಮೂಲ ಪತ್ತೆ ಆರಂಭಿಸಿದ್ದರು.
ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹದಳ ಸಹಾಯದೊಂದಿಗೆ ಯುವಕನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಯುಪಿ ಎಸ್‍ಟಿಎಫ್ ತಂಡದ ವಶಕ್ಕೆ ನೀಡಲಾಗಿದೆ.
ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಮುಸ್ಲಿಂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಧಾರ್ಮಿಕ ಟೋಪಿಯನ್ನು ಧರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಫೈರ್ ಬ್ರಾಂಡ್ ಸಿಎಂ ಯೋಗಿ ಅದಿತ್ಯನಾಥ್ ಅವರು ಸಂತ ಕಬೀರ್ ಅವರ ಸ್ಮಾರಕ ಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಮಾರಕದ ಉಸ್ತುವಾರಿ ವಹಿಸಿದ್ದ ಧಾರ್ಮಿಕ ಮುಖಂಡರು ಯೋಗಿ ಅವರಿಗೆ ಟೋಪಿ ಧರಿಸಲು ಮುಂದಾಗಿದ್ದರು. ಆದರೆ ಈ ವೇಳೆ ಯೋಗಿ ಅವರು ಟೋಪಿ ಧರಿಸಲು ನಿರಾಕರಿಸಿ ಬಳಿಕ ಅಲ್ಲಿಂದ ತೆರಳಿದ್ದರು.
ಸದ್ಯ ಸಿಎಂ ಯೋಗಿ ಅದಿತ್ಯನಾಥ್ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿರುವ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ ಕಬೀರ್ ಅವರ 500 ನೇ ಪುಣ್ಯಸ್ಮರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ಗುರುವಾರ ಭೇಟಿ ನೀಡಿದ್ದರು. ಪ್ರಧಾನಿ ಆಗಮನ ಹಿನ್ನೆಲೆ ಸಿಎಂ ಯೋಗಿ ಅದಿತ್ಯನಾಥ್ ಬುಧವಾರ ಸಿದ್ಧತೆಗಳ ಪರಿಶೀಲನೆಗೆ ತೆರಳಿದ್ದರು.
ಇದೇ ಮೊದಲಲ್ಲ: 2019 ರ ಲೋಕಾಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಆದರೆ ಪ್ರಧಾನಿ ಮೋದಿ ಸೇರಿದಂತೆ, ಸಿಎಂ ಯೋಗಿ ಅದಿತ್ಯನಾಥ್ ಈ ಹಿಂದೆಯೂ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿದ್ದರು. ಸದ್ಯ ಯೋಗಿ ಅದಿತ್ಯನಾಥ್ ಅವರ ನಡೆಯನ್ನು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರು ಟೀಕಿಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಇತ್ತೀಚೆಗೆ ಎಐಸಿಸಿ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ನೀಡಿದ ಟೋಪಿಯನ್ನು ಧರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದರು. ಈ ವೇಳೆ ಬಿಜೆಪಿ ಕೆಲ ನಾಯಕರು ಸಹ ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
Sant Kabir Nagar: Prime Minister Narendra Modi offers 'chadar' at Sant Kabir's Mazar in Maghar pic.twitter.com/kKJo4hwNwL
ನವದೆಹಲಿ: ಕರ್ನಾಟಕ ವಿಧಾನಸಭೆಯ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಮ ರಥ ಸಂಚರಿಸಲಿದೆ. ಈ ಮೂಲಕ ಚುನಾವಣೆ ಗೆಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್‍ಎಸ್) ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಮ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.
ಉತ್ತರಪ್ರದೇಶದಿಂದ ಕರ್ನಾಟಕಕ್ಕೆ ರಾಮರಾಜ್ಯ ರಥಯಾತ್ರೆ ಬರಲಿದ್ದು, 6 ರಾಜ್ಯಗಳಲ್ಲಿ ರಥ ಸಂಚರಿಸಲಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ನಡೆಯಲಿರುವ ಈ ಯಾತ್ರೆ ಉತ್ತರಪ್ರದೇಶದ ಲಕ್ನೋದಿಂದ ಫೆಬ್ರವರಿ 13ರಿಂದ ಹೊರಡಲಿದ್ದು, ಫೆಬ್ರವರಿ 25ಕ್ಕೆ ತಮಿಳುನಾಡಿನ ರಾಮೇಶ್ವರದಲ್ಲಿ ಕೊನೆಗೊಳ್ಳಲಿದೆ.
ಫೆಬ್ರವರಿ 13 ರಿಂದ ಆರಂಭವಾಗುವ ಯಾತ್ರೆ 39 ದಿನಗಳ ಕಾಲ ನಡೆಯಲಿದೆ. ಈ ವೇಳೆ ಸುಮಾರು 40 ಸಾರ್ವಜನಿಕ ಸಭೆಗಳು ಆಯೋಜನೆ ಮಾಡಲಾಗುತ್ತಿದೆ. ಈ ಸಭೆಗಳಲ್ಲಿ ಪ್ರಮುಖವಾಗಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಯಲಿದೆ. ಈ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆ ಸೇರಿದಂತೆ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ರಾಮಮಂದಿರ ವಿಚಾರವನ್ನೇ ಪ್ರಮುಖ ಆಸ್ತ್ರವಾಗಿ ಬಿಜೆಪಿ ಬಳಕೆ ಮಾಡುವ ಸಾಧ್ಯತೆಗಳಿವೆ.
ಯಾತ್ರೆಗೆ ಉತ್ತರಪ್ರದೇಶದ ಕರಸೇವಾಕಪುರ ದಿಂದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದಿಂದ ಆರಂಭವಾಗುವ ಯಾತ್ರೆ ಮಧ್ಯಪ್ರದೇಶ, ಮಹಾರಾಷ್ಟ್ರ ಮೂಲಕ ಕರ್ನಾಟಕ್ಕೆ ಪ್ರವೇಶ ಪಡೆಯಲಿದ್ದು, ನಂತರ ಕೇರಳಕ್ಕೆ ಸಾಗಿ ತಮಿಳುನಾಡಿನ ರಾಮೇಶ್ವರದಲ್ಲಿ ಅಂತ್ಯಗೊಳ್ಳಲಿದೆ.
1990ರ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ರಾಮ ರಥ ಯಾತ್ರೆ ನಡೆಸಿದ್ದರು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಯನ್ನು ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆಯುವಂತೆ ಮಾಡಿದ್ದರು.
ಲಕ್ನೋ: ಪದ್ಮಾವತಿ ಚಿತ್ರದ ನಿರ್ದೇಶಕ ಸಜಯ್ ಲೀಲಾ ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪದ್ಮಾವತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಜನರ ಭಾವನೆಗಳ ಜೊತೆ ಆಟವಾಡಿರುವ ನಿರ್ದೇಶಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಚಿತ್ರದಲ್ಲಿ ಇರುವ ಆಕ್ಷೇಪಗಳ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದ್ದು, ಸಲಹೆ ನೀಡುವಂತೆ ಕೇಳಿಕೊಂಡಿದ್ದೇವೆ. ಜನರ ಭಾವನೆಗಳ ಜೊತೆ ಆಟವಾಡಲು ಯಾರನ್ನು ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಡುಗಡೆಗೂ ಮುನ್ನ ಭಾರೀ ವಿವಾದಗಳನ್ನು ಸೃಷ್ಟಿಸಿರುವ ಪದ್ಮಾವತಿ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಹಾಗೂ ರಾಣಿ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್‍ಗಳಿವೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಗೆ ರಾಜಪುತ ಸಂಘಟನೆಗಳು ಪ್ರತಿಭಟಿಸಿದ್ದವು.
ರಾಜಪೂತ ಕರ್ನಿಸೇನಾ ಸಂಘಟನೆಯ ನಾಯಕರು ಸಹ ಚಿತ್ರ ಬಿಡುಗಡೆ ಕುರಿತು ನಿರ್ದೇಶಕರಿಗೆ ಬೆದರಿಕೆ ಹಾಕಿದ್ದರು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.
ಹರ್ಯಾಣದ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸೂರಜ್ ಪಾಲ್ ಅಮು, ಪದ್ಮಾವತಿ ಚಿತ್ರದ ನಟಿ ದೀಪಿಕಾ ಅವರ ಹಾಗೂ ನಿರ್ದೇಶಕ ಬನ್ಸಾಲಿ ಅವರ ಶಿರಚ್ಛೇದ ಮಾಡಿವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ಮಾಡಿರುವ ರಣವೀರ್ ಸಿಂಗ್ ರ ಕಾಲು ಮುರಿಯುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ಬಿಜೆಪಿ ಆಡಳಿತ ಇರುವ ರಾಜಸ್ಥಾನ, ಮಧ್ಯಪ್ರದೇಶ ಜೊತೆ ಕಾಂಗ್ರೆಸ್ ಆಡಳಿತ ಇರುವ ಪಂಜಾಬ್ ಸರ್ಕಾರ ಪದ್ಮಾವತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿವೆ.
We have made our stand clear on it, have already given it in written to the Information & Broadcasting Ministry. SC has also clarified that CBFC should take a decision: UP CM Yogi Adityanath #Padmavatipic.twitter.com/QKrkm7KH3T
Nobody will accept distortion of history and those who are protesting are rightly doing so: Capt Amarinder Singh,Punjab CM #Padmavatipic.twitter.com/rkk7udI5Kf