Tag: ಸಿಎಂ ಬಸವರಾಜ ಬೊಮ್ಮಾಯಿ

  • ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ

    ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ

    ಕಲಬುರಗಿ: ನಾಳೆಯಿಂದ ಎರಡು ದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಲಬುರಗಿ ವಿಭಾಗ ಮಟ್ಟದ ಪದಾಧಿಕಾರಿಗಳ ಸಂಘಟನಾ ಸಭೆ ಕರೆಯಲಾಗಿದೆ. ಈ ಮೂಲಕ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಬಿಜೆಪಿ ಮುಂದಾಗಿದೆ. ನಾಳೆಯ ಸಭೆಗೆ ಸ್ವಾಗತ ಕಮಾನ್‍ಗಳು ರಾರಾಜಿಸುತ್ತಿವೆ.

    ಸೇಡಂ ರಸ್ತೆಯಲ್ಲಿರುವ ಗೀತಾನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಾಳೆ ಮಧ್ಯಾಹ್ನ 2 ಗಂಟೆಯಿಂದ ಕೋರ್ ಕಮಿಟಿ ಪ್ರಾರಂಭಗೊಳ್ಳಿಸಲಾಗಿದೆ. ಇವರ ನೇತೃತ್ವವನ್ನು ಸಿಎಂ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಭಗವಂತ ಖೂಭಾ ಮತ್ತು ಅಶ್ವಥ್ ನಾರಾಯಣ್, ವಿಜಯೇಂದ್ರ, ಲಕ್ಷ್ಮಣ್ ಸೌದಿ, ನಿರ್ಮಲ್‍ಕುಮಾರ್ ಸುರನ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಖ್ಯಾತ ನಿರ್ದೇಶಕ ಎನ್.ಟಿ.ರಾಮರಾವ್ ವಿಧಿವಶ

    ಕಲಬುರಗಿ, ಬೀದರ್, ಯಾದಗಿರಿ, ಮೂರು ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪಕ್ಷದ ಸಂಘಟನೆ, ಕಾರ್ಯಕರ್ತರ ಕುಂದುಕೊರತೆ ಸೇರಿ ಅನೇಕ ಮಹತ್ವದ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಹೇಳಿದ್ದಾರೆ.

    ನಾಳಿನ(ಗುರುವಾರ) ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಮಧ್ಯಾಹ್ನ 2 ಗಂಟೆಗೆ ಡಿಎಆರ್ ಮೈದಾನಕ್ಕೆ ಹೇಲಿಕ್ಯಾಪ್ಟರ್ ಮೂಲಕ ಬಂದಿಳಿಯಲಿದ್ದಾರೆ. ನಂತರ ಗೀತಾ ನಗರಕ್ಕೆ ತೆರಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎರಡನೇ ದಿನ ಪಕ್ಷದ ಹಲವು ಕಾರ್ಯಕ್ರಮಗಳಲ್ಲಿಯೂ ಸಿಎಂ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಏಪ್ರಿಲ್ 28 ರಂದು ಇಸ್ರೇಲ್‍ನಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್ ಫೈಲ್ಸ್’

    ನಾಯಕರ ಸ್ವಾಗತ ಕೊರಲು ನಗರದ ಹೃದಯ ಭಾಗವಾದ ಸರ್ದಾರ ಪಟೇಲ್ ವೃತ್, ವಿಧಾನಸೌದಾ ಮುಂಭಾಗ ಸೇರಿ ಹಲವಡೆ ಸ್ವಾಗತ ಕಮಾನ್‍ಗಳು ರಾರಾಜಿಸುತ್ತಿವೆ. ನಾಯಕರ ಸ್ವಾಗತ ಕೋರಿ ಹಲವಡೆ ಫ್ಲೇಕ್ಸ್‌ಗಳು, ಭಾಜಪಾ ಧ್ವಜಗಳು ಸಹ ಕಟ್ಟಲಾಗಿದೆ.

  • ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

    ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

    ಕಲಬುರಗಿ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಕಾ9ರದಲ್ಲಿ ಪರ್ಸೆಂಟೆಜ್ ವ್ಯವಹಾರ ನಡೆದಿಲ್ಲ. ಬಸವಣ್ಣನಂತೆ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಜಗದ್ಗುರು ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ ಶ್ರೀ ಶೈಲಂ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಠಗಳಿಗೆ ಅನುದಾನ ನೀಡಲು 30% ನೀಡಬೇಕು ಎಂಬ ಆರೋಪದ ಬಗ್ಗೆ ಮಹಾಸ್ವಾಮಿ ಶ್ರೀ ಶೈಲಂ ಅವರು ಮಾತನಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿಗೆ ಟಾಂಗ್ ಕೊಟ್ಟರು. ಈ ವೇಳೆ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಕಲಬುರಗಿ ಜಿಲ್ಲೆಯ ಮಠಗಳಿಗೆ 6 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಅನುದಾನ ಬಿಡುಗಡೆಗೆ ನಾವು ನಯಾ ಪೈಸೆ ಕಮೀಷನ್ ಕೊಟ್ಟಿಲ್ಲ. ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಈ ಭಾಗದ ಪ್ರೀಯಾಂಕ್ ಖರ್ಗೆ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು. ಅವರು ಸಹ 25 ಕೋಟಿ ರೂ. ಅನುದಾನವನ್ನು ಎಲ್ಲ ಮಠಗಳಿಗೆ ನೀಡಿದ್ದು, ಅವರು ಸಹ ನಯಾ ಪೈಸೆ ಕಮೀಷನ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾಮಾನ್ಯರ ಮೇಲಿರುವ ಬೆಲೆ ಏರಿಕೆ ಒತ್ತಡ ಕಡಿಮೆ ಮಾಡಲು ಯತ್ನ: ನಿರ್ಮಲಾ

    ಯಡಿಯೂರಪ್ಪ ಸಿಎಂ ಅವಧಿಯಲ್ಲಿಯೂ ಸಹ ನಮ್ಮ ಮಠಕ್ಕೆ 20 ಲಕ್ಷ ರೂ. ಅನುದಾನ ಬಂದಿದೆ. ಆದರೆ ಯಾವತ್ತೂ ಸಹ ಕಮೀಷನ್ ಪಡೆದಿಲ್ಲ. ಅದೇ ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸಕಾ9ರ ಸಾಕಷ್ಟು ಮಠಗಳಿಗೆ ಅನುದಾನ ನೀಡಿದ್ದು, ಒಂದು ದಿನವಾದರೂ ರಾಜ್ಯ ಸರ್ಕಾರ ಪರ್ಸೆಂಟೆಜ್ ಕೇಳಿಲ್ಲ ಎಂದು ಹೇಳಿದರು.

    ಬೊಮ್ಮಾಯಿ ಅವರು ಸಿಎಂ ಆಗಲು ನಾವು ಕಾರಣವೆಂದು ಇತ್ತೀಚೆಗೆ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದರು. ಸದ್ಯ ಅಣ್ಣ ಬಸವಣ್ಣನವರಂತೆ ಬೊಮ್ಮಾಯಿ ಅವರು ಕೆಲಸವನ್ನು ಮಾಡುತ್ತಿದ್ದು, ಅವರ ಸರ್ಕಾರದಲ್ಲಿ ಕಮೀಷನ್ ಎಂಬ ವ್ಯವಹಾರ ನಡೆದಿಲ್ಲ ಎಂದು ನುಡಿದರು.

    basavanna

    ಸ್ವಾಮಿಜೀಗಳು ಸೂಜಿಯಾಗಬೇಕೆ ವಿನಃ, ಕತ್ತರಿಯಾಗಬಾರದು ಎಂದು ಹೇಳಿದ್ದು, ಪರೋಕ್ಷವಾಗಿ ದಿಂಗಾಲೇಶ್ವರ ಸ್ವಾಮೀಜಿಯನ್ನು ಕತ್ತರಿಗೆ ಹೋಲಿಸಿದರು. ಈ ರೀತಿ ಹೇಳಿಕೆ ಕೊಡುವುದು ಸ್ವಾಮೀಜಿಗಳಿಗೆ ಶೋಭೆ ತರುವಂತಹದಲ್ಲ. ಕಮೀಷನ್ ಪಡೆದಿರುವ ಬಗ್ಗೆ ಏನಾದರೂ ದಾಖಲೆಗಳಿದ್ರೆ ಬಹಿರಂಗ ಪಡಿಸಲು ಆಗ್ರಹಿಸಿದರು. ಇದನ್ನೂ ಓದಿ:  KGF-2 ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಪೈರಿಂಗ್ – ಆರೋಪಿ ಪತ್ತೆಗೆ ಎರಡು ತಂಡ ರಚನೆ

    ಮಠಾಧೀಶರಲ್ಲು ಸಹ ಎರಡು ಪಂಗಡಗಳಿವೆ. ಮಠಾಧೀಶರು ರಾಜಕೀಯ ಮಾಡುವುದನ್ನು ಬಿಟ್ಟು, ಮಠಕ್ಕೆ ಬಂದ ಭಕ್ತಾದಿಗಳಿಗೆ ಆಶೀರ್ವಾದ ಮಾಡುವುದನ್ನು ಕಲಿಯಬೇಕು ಎಂದು ಕಿವಿ ಮಾತನ್ನು ಹೇಳಿದರು.

  • ಸಮಾಜಘಾತಕ ಶಕ್ತಿಗಳನ್ನು ಸದೆ ಬಡಿಯುತ್ತೇವೆ: ಬೊಮ್ಮಾಯಿ

    ಸಮಾಜಘಾತಕ ಶಕ್ತಿಗಳನ್ನು ಸದೆ ಬಡಿಯುತ್ತೇವೆ: ಬೊಮ್ಮಾಯಿ

    ಶಿವಮೊಗ್ಗ: ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಾಗಿ ಹಾಗೂ ಕಾನೂನು ವಿರೋಧಿ ಮತ್ತು ಸಮಾಜಘಾತಕ ಶಕ್ತಿಗಳನ್ನು ಸದೆಬಡಿಯುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಹಿಂದೆ ಯಾರಿದ್ದಾರೆ ಎಂದು ತನಿಖೆ ಮೂಲಕ ಪತ್ತೆ ಮಾಡಲಾಗುವುದು. ಗಲಭೆಗೆ ಸಂಬಂಧಿಸಿದಂತೆ ಅನೇಕ ವೀಡಿಯೋ ದೃಶ್ಯಗಳಿದ್ದು, ಅದರ ಮೂಲಕ ನೂರಾರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಅಂಗಡಿ ದೋಚಿದ ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಕಳ್ಳ – ವೀಡಿಯೋ ವೈರಲ್ 

    ಈ ಹಿಂದೆ ಡಿ.ಜೆ.ಹಳ್ಳಿ ಹಾಗೂ ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ವೇಳೆ ಕಲ್ಲು ತೂರಾಟ ನಡೆಸಿದ ಹಾಗೂ ಸಾರ್ವಜನಿಕ ಆಸ್ತಿ ಹಾಳು ಮಾಡಿದ ಕಿಡಿಗೇಡಿಗಳಿಂದಲೇ ನಷ್ಟವನ್ನು ರಿಕವರಿ ಮಾಡಲು ತನಿಖಾ ಸಮಿತಿ ಆದೇಶಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಗಲಭೆ ಪ್ರಕರಣಗಳು ರಾಜ್ಯಕ್ಕೆ ಪಾಠವಾಗಿದೆ. ಇದನ್ನು ಇಟ್ಟುಕೊಂಡು ಹುಬ್ಬಳ್ಳಿ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳನ್ನು ನೋಡಲಾಗುವುದು ಎಂದು ತಿಳಿಸಿದರು.

    ಯುಪಿ ಮಾದರಿ ಆಡಳಿತ ಜಾರಿಗೆ ತರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಯಾ ರಾಜ್ಯದ ಪರಿಸ್ಥಿತಿಗೆ ತಕ್ಕಂತೆ ಅವರು ಕ್ರಮ ಕೈಗೊಂಡಿದ್ದಾರೆ. ನಾವು ಇಲ್ಲಿ ಪರಿಸ್ಥಿತಿ ಹಾಗೂ ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ. ಗಲಭೆಗೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಹೇಳಿದರು.

    ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಇದನ್ನು ಹಿಂದುಳಿದ ವರ್ಗಗಳ ಆಯೋಗ ನೋಡಿಕೊಳ್ಳುತ್ತದೆ. ಅವರು ನೀಡಿದ ವರದಿ ಆಧರಿಸಿ ಸರ್ಕಾರ ಕ್ರಮಕೈಗೊಳ್ಳುವುದು ಎಂದರು. ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಶಾಸಕ ಎಸ್.ರುದ್ರೇಗೌಡರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಹಲವರು ಹಾಜರಿದ್ದರು. ಇದನ್ನೂ ಓದಿ:  ಬಂಡೀಪುರದಲ್ಲಿ ಅವಳಿ ಮರಿಗಳಿಗೆ ಜನ್ಮ ಕೊಟ್ಟ ಕಾಡಾನೆ 

  • ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು, ಉತ್ತಮ ಆಡಳಿತವೂ ಬೇಕು: ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

    ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು, ಉತ್ತಮ ಆಡಳಿತವೂ ಬೇಕು: ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ನಂತಹ ಧಾರ್ಮಿಕ ವಿಚಾರಗಳು ಸಾಲದು ಉತ್ತಮ ಆಡಳಿತ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯೂ ಮುಖ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಹೇಳಿದೆ.

    ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬೊಮ್ಮಾಯಿ ಅವರು ಎರಡು ದಿನಗಳ ಕಾಲ ದೆಹಲಿಗೆ ತೆರಳಿದ್ದರು. ಈ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ನಡ್ಡಾ ಅವರು ರಾಜ್ಯದ ಹಲವು ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ:  ಗ್ರಾಮ ಪಂಚಾಯಿತಿ ಅಧ್ಯಕ್ಷನ ಶೋಕಿ ಲೈಫ್ – ಸ್ವಂತ ಗಾಡಿಗೆ ಸರ್ಕಾರದ ಲೋಗೋ ಹಾಕಿ ಪ್ರವಾಸ

    ಆಡಳಿತದ ಮೇಲೆ ಗಮನ ಹರಿಸಬೇಕು. ರೈತರ ಮನ ಗೆಲ್ಲಲ್ಲು ನೀರಾವರಿ ಯೋಜನೆಗಳನ್ನು ಹೆಚ್ಚು ಕೇಂದ್ರಿಕರಿಸಬೇಕು. ಜನಪ್ರಿಯ ಆಡಳಿತ ನೀಡಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಹಲಾಲ್ – ಹಿಜಬ್ ಎಂದು ಸಮುದಾಯದವೊಂದನ್ನು ಟಾರ್ಗೆಟ್ ಮಾಡಿ ಚುನಾವಣೆ ಗೆಲ್ಲಲು ಕನಸು ಉತ್ತಮವಲ್ಲ ಎಂದು ನಡ್ಡಾ ಅವರು, ಬೊಮ್ಮಾಯಿ ಅವರಿಗೆ ಹೇಳಿದ್ದಾರೆ.

    ಹಿಜಬ್, ಹಲಾಲ್ ಒಂದು ಸಮುದಾಯದ ಮತಗಳನ್ನು ಕ್ರೋಢೀಕರಿಸಬಹುದು. ಆದರೆ ಇದು ಗೆಲುವಿಗೆ ಸಾಲದು, ಮತ್ತೆ ಅಧಿಕಾರಕ್ಕೆ ಬರಲು ಉತ್ತಮ ಆಡಳಿತವೂ ಬಹಳ ಮುಖ್ಯ ಎಂದು ಹೇಳಿದ್ದಾರೆ. ಇದೇ ವೇಳೆ ಬೊಮ್ಮಾಯಿ ಅವರು ರಾಜ್ಯದ ಹಲವು ನಾಯಕರ ವಿರುದ್ಧ ದೂರು ಕೂಡಾ ನೀಡಿದ್ದಾರೆ. ಕೆಲವು ನಾಯಕರ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ ಎಂದು ಬೇಸರ ಹೊರಹಾಕಿದ್ದಾರೆ.

    ಮುಖ್ಯವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹಲಾಲ್ ಮಾಂಸವನ್ನು ಹಿಂದೂಗಳು ಖರೀದಿಸಬಾರದು. ಹಲಾಲ್ ಆರ್ಥಿಕ ಜಿಹಾದ್ ಹೇಳಿಕೆ ಪ್ರಸ್ತಾಪವಾಗಿದೆ ಎನ್ನಲಾಗಿದ್ದು, ಈ ಹೇಳಿಕೆಗೆ ಜೆ.ಪಿ.ನಡ್ಡಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

    ಚುನಾವಣಾ ದೃಷ್ಟಿಯಿಂದ ಸರ್ಕಾರದ ಮೇಲೆ ಉತ್ತಮ ಅಭಿವೃದ್ಧಿ ಮೂಡಿಸಲು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉದ್ಘಾಟನೆ, ಭೂಮಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಾರ್ಯಕರ್ತರು ಪ್ರಮುಖ ನಾಯಕರು ಅಸಮಾಧಾನ ಹೊರ ಹಾಕುತ್ತಿದ್ದು, ಆ ಬಗ್ಗೆ ಗಮನಹರಿಬೇಕು ಎಂದು ನಡ್ಡಾ ಅವರು ಸೂಚಿಸಿದ್ದಾರೆ. ಇದನ್ನೂ ಓದಿ: ಸೋನಂ ಕಪೂರ್ ನಿವಾಸದಲ್ಲಿ 1.41 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

    Siddaramaiah, DK Shivakumar condemn ED raids on MLA Zameer Ahmed, says move politically motivated

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಳಿಕ ಪಕ್ಷದ ವರ್ಚಸ್ಸು ಕುಗ್ಗಿದ್ದು, ಸ್ಥಳೀಯ ಚುನಾವಣೆಗಳಲ್ಲಿ ಅದು ಸಾಬೀತಾಗಿದೆ. ಪಕ್ಷದ ವರ್ಚಸ್ಸು ಹೆಚ್ಚಿಸಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಜಗಳದ ಲಾಭ ಪಡೆಯಲು ಪೂರ್ಣ ಪ್ರಮಾಣದಲ್ಲಿ ಅವಲಂಬನೆಯಾಗುವುದು ಬೇಡ. ಅಭಿವೃದ್ಧಿ ಕೇಂದ್ರಿಕರಿಸಿ ಕಾರ್ಯನಿರ್ವಹಿಸುವಂತೆ ನಡ್ಡಾ ಅವರು ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ.

  • ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ಸರ್ಜರಿ ಫೈನಲ್: ಸಿಎಂ

    ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ಸರ್ಜರಿ ಫೈನಲ್: ಸಿಎಂ

    ನವದೆಹಲಿ: ಈ ಬಾರಿ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಜಲಶಕ್ತಿ, ಇಂಧನ, ಪರಿಸರ, ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದೇವೆ. ಈ ವೇಳೆ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಗುರುವಾರ ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, BJP ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ದೊರಕಿರುವುದು ಸಂತೋಷ ತಂದಿದೆ ಎಂದರು.  ಇದನ್ನೂ ಓದಿ: ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ? – ಚಂದ್ರು ಕೊಲೆ ದಿನ ನಡೆದಿದ್ದು ಏನು?

    ಏಪ್ರಿಲ್ 16 ಮತ್ತು 17 ರಂದು BJP ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಚುನಾವಣೆಗೆ ಯಾವ ರೀತಿಯಲ್ಲಿ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಳ್ಳಬೇಕೆಂದು ಪಕ್ಷಕ್ಕೆ ಹಾಗೂ ನನಗೆ BJP ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

    ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಸ್ಥೂಲ ಚರ್ಚೆ
    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಥೂಲವಾಗಿ ಚರ್ಚೆಯಾಗಿದೆ. ವರಿಷ್ಠರು ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕಾರ್ಯಕಾರಿಣಿ ಸಭೆಗೆ ಬಂದ ಸಂದರ್ಭದಲ್ಲಿ ಮಿಕ್ಕ ವಿಚಾರಗಳನ್ನು ಮಾತನಾಡುವುದಾಗಿ ತಿಳಿಸಿದ್ದಾರೆ. ಇಲ್ಲಿಯ ವರಿಷ್ಠರು, ನಾಯಕರು, ಸಂಘಟನಾ ಕಾರ್ಯದರ್ಶಿಗಳೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ 

    ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಮಹತ್ವ
    ಬೆಂಗಳೂರಿಗೆ ಹಿಂತಿರುಗಿದ ನಂತರ ಬಜೆಟ್‍ನಲ್ಲಿ ಘೋಷಿಸಿರುವ ಯೋಜನೆಗಳ ಆದೇಶಗಳನ್ನು ನೀಡಿ ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದರು.

  • ಸೌಹಾರ್ದತೆ ಕೆಡಿಸುವ ಕೆಲಸ ಬಿಜೆಪಿಗೆ ತಿರುಗುಬಾಣ ಆಗುತ್ತೆ: ಸಿದ್ದರಾಮಯ್ಯ

    ಸೌಹಾರ್ದತೆ ಕೆಡಿಸುವ ಕೆಲಸ ಬಿಜೆಪಿಗೆ ತಿರುಗುಬಾಣ ಆಗುತ್ತೆ: ಸಿದ್ದರಾಮಯ್ಯ

    ಬೆಂಗಳೂರು: ದೇವಸ್ಥಾನ, ಮಸೀದಿ, ಚರ್ಚ್ ಹೀಗೆ ಎಲ್ಲ ಕಡೆ ಧ್ವನಿವರ್ಧಕಗಳನ್ನು ಹಾಕುತ್ತಾರೆ. ಇದರಿಂದ ಯಾರಿಗೆ ತೊಂದರೆ ಆಗಿದೆ? ಚುನಾವಣಾ ವರ್ಷ ಎಂದು ಈ ರೀತಿ ಬೇಕಂತಲೇ ಕ್ಯಾತೆ ತೆಗೆಯುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಧ್ವನಿವರ್ಧಕ ನಿಷೇಧ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ವಿಷಯಗಳು ಸಮಾಜದ ಶಾಂತಿ, ಸಾಮರಸ್ಯ ಹಾಳುಮಾಡುವ ಪ್ರಯತ್ನಗಳು. ಇಂಥಾ ಘಟನೆಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲ್ಲ. ರಾಜ್ಯಕ್ಕೆ ಯಾವ ಬಂಡವಾಳ ಹೂಡಿಕೆದಾರರು ಬರಲ್ಲ. ಉದ್ಯೋಗ ಸೃಷ್ಟಿಯಾಗಲ್ಲ, ನಿರುದ್ಯೋಗ ಸಮಸ್ಯೆ ಹೋಗಲ್ಲ, ರಾಜ್ಯದ ಜಿಡಿಪಿ ಬೆಳವಣಿಗೆಯಾಗಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ನಸುಕಿನಲ್ಲಿ ಸುಪ್ರಭಾತ, ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ, ಇಂದಿನದಲ್ಲ: ಕುಮಾರಸ್ವಾಮಿ

    ಈ ಎಲ್ಲ ಬೆಳವಣಿಗೆಗಳು ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ. ಈ ವೇಳೆ ಮುಖ್ಯಮಂತ್ರಿಗಳು ಮೌನವಾಗಿರುವುದಲ್ಲ. ಅವರೇ ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿದ್ದಾರೆ. ಸಮಾಜದ ಕೋಮು ಸಾಮರಸ್ಯ ಹಾಳುಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇದು ನಿಮಗೆ ಮುಂದೆ ತಿರುಗುಬಾಣವಾಗಲಿದೆ ಎಂದು ಸಿಎಂ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದರು.

    RSS ಮತ್ತು ಭಜರಂಗದಳ ಸರ್ಕಾರಕ್ಕೆ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡುತ್ತಾ? ಇದನ್ನು ಸರ್ಕಾರ ಹತ್ತಿಕ್ಕಬೇಕು. ಸಮಾಜದ ಶಾಂತಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ – ಮೂವರು ಆಸ್ಪತ್ರೆಗೆ ದಾಖಲು 

  • ಗ್ರಾಮಕ್ಕೆ ಬಸ್‌ ಬಿಡಿ: ಸಿಎಂ ಕಾರು ತಡೆದು ಮನವಿ ಪತ್ರ ಕೊಟ್ಟ ವಿದ್ಯಾರ್ಥಿನಿಯರು

    ಗ್ರಾಮಕ್ಕೆ ಬಸ್‌ ಬಿಡಿ: ಸಿಎಂ ಕಾರು ತಡೆದು ಮನವಿ ಪತ್ರ ಕೊಟ್ಟ ವಿದ್ಯಾರ್ಥಿನಿಯರು

    ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಹೋಗುತ್ತಿದ್ದ ಕಾರ್ ತಡೆದು ನಮ್ಮ ಗ್ರಾಮಕ್ಕೆ ಬಸ್ ಬಿಡುವಂತೆ ಶಾಲಾ ವಿದ್ಯಾರ್ಥಿನಿಯರು ಮನವಿ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಬೊಮ್ಮಾಯಿ ಅವರು ಶನಿವಾರ(ಇಂದು) ಆಗಮಿಸಿದ್ದರು. ಈ ವೇಳೆ ಬೊಮ್ಮಾಯಿ ಅವರು ಗ್ರಾಮದ ಮಲಿಯಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ದೇವಿಯ ದರ್ಶನ ಪಡೆದ ನಂತರ ಗ್ರಾಮದಲ್ಲಿ ಕಂದಾಯ ದಾಖಲೆಗಳು ಮನೆಮನೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಿಮ್ಮಾಪುರ ಗ್ರಾಮದ ವಿದ್ಯಾರ್ಥಿನಿಯರ ಗುಂಪೊಂದು ಅವರ ಕಾರನ್ನು ತಡೆದು ನಮ್ಮ ಗ್ರಾಮಕ್ಕೆ ಬಸ್ ಬಿಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ:ಡಿಕೆಶಿ

    ಈ ವೇಳೆ ವಿದ್ಯಾರ್ಥಿನಿಯರು, ಬಸ್ ಇಲ್ಲದ ಕಾರಣ ನಾವು ಶಾಲೆಗೆ ಪ್ರತಿದಿನ ತೀರ್ಥ ಗ್ರಾಮದಿಂದ ನಾಲ್ಕೈದು ಕಿ.ಮೀ ನಡೆದುಕೊಂಡು ಹೋಗಬೇಕಾಗುತ್ತದೆ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಅದಕ್ಕೆ ನೀವು ನಮ್ಮ ಗ್ರಾಮಕ್ಕೆ ಬಸ್ ಬಿಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಬೊಮ್ಮಾಯಿ ಅವರು ವಿದ್ಯಾರ್ಥಿನಿಯರ ಮನವಿ ಸ್ವೀಕರಿಸಿದ್ದು, ಅವರ ತಲೆ ಮೇಲೆ ಕೈ ಇಟ್ಟು ಬಸ್ ಬಿಡಿಸುವ ಭರವಸೆ ನೀಡಿದ್ದಾರೆ.

    ಇದೇ ವೇಳೆ ವಿದ್ಯಾರ್ಥಿನಿಯರು, ಕೋವಿಡ್ ಸಮಯದಿಂದ ನಮಗೆ ಸೈಕಲ್‍ಗಳೂ ಬಂದಿಲ್ಲ ಎಂದು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ದೇಶದ್ರೋಹಿ PFI, SDPI ಸಂಘಟನೆಗಳು: ಎಂ.ಪಿ.ರೇಣುಕಾಚಾರ್ಯ

     

  • ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ

    ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ

    ಬೆಂಗಳೂರು: ಕೆಪಿಎಸ್‍ಸಿಗೆ ಕಾಯಕಲ್ಪ ಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ಶೂನ್ಯವೇಳೆಯಲ್ಲಿ ಕಾಂಗ್ರೆಸ್‍ನ ರವಿ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ನೇಮಕಾತಿ ಪೂರ್ಣ ಮಾಡಲು ಏನು ಪ್ರಕ್ರಿಯೆ ನಡೆಯುತ್ತಿದೆ? ಎಂದು ಪ್ರಶ್ನೆ ಮಾಡಿದರು.

    ಕೆಪಿಎಸ್‍ಸಿಯಲ್ಲಿ 517 ಕ್ರಮಬದ್ಧವಾದ ಪ್ರಸ್ತಾವನೆ ಸಲ್ಲಿಕೆ ಆಗಿದೆ. 25 ಸಾವಿರ ಹುದ್ದೆಗಳಿಗೆ 45 ಅಧಿಸೂಚನೆ ಹೊರಡಿಸಲಾಗಿದೆ. 17 ಸಾವಿರ ನೇಮಕಾತಿಗಳು ನೆನೆಗುದಿಗೆ ಬಿದ್ದಿದೆ. ಕೆಪಿಎಸ್‍ಸಿಯಲ್ಲಿ ಸರಿಯಾಗಿ ನೇಮಕಾತಿ ಪ್ರಕ್ರಿಯೆ ಆಗುತ್ತಿಲ್ಲ. ಹೀಗಾಗಿ ಕೆಪಿಎಸ್‍ಸಿ ರದ್ದು ಮಾಡುವುದು ಸೂಕ್ತ ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು

    ಈ ಕುರಿತು ಉತ್ತರ ನೀಡಿದ ಸಿಎಂ, ಕಳೆದ ಹಲವಾರು ವರ್ಷಗಳಿಂದ ಆರ್ಥಿಕ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಖಾಲಿ ಹುದ್ದೆಗಳ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅನೇಕ ಇಲಾಖೆಗಳಿಗೆ ನೇಮಕ ಮಾಡಿಕೊಳ್ತಿದ್ದೇವೆ. 16 ಸಾವಿರ ಪೊಲೀಸರ ನೇಮಕಾತಿ, 15 ಸಾವಿರ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ 14 ಸಾವಿರ ಪೋಸ್ಟ್ ನೇಮಕಾತಿ ಮಾಡ್ತಿದ್ದೇವೆ. ಕೆಲವು ವರ್ಷಗಳಲ್ಲಿ ಖಾಲಿ ಇರೋ ಹುದ್ದೆ ಭರ್ತಿ ಮಾಡುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.

    KPSC Recruitment For Assistant Engineers And Junior Engineers Post, Apply Online Before September 16 - Careerindia

    ಕೆಪಿಎಸ್‍ಸಿಯಲ್ಲಿ ಎರಡು ಮೂರು ಸಮಸ್ಯೆ ಇದೆ. ಇನ್ನಷ್ಟು ಸಿಬ್ಬಂದಿ ಅಲ್ಲಿಗೆ ಒದಗಿಸಬೇಕು. ಕಂಟ್ರೋಲರ್ ನೇಮಕ ಕೂಡ ಆಗಬೇಕು. ಶೀಘ್ರವೇ ಅವುಗಳ ನೇಮಕಾತಿ ಮಾಡುತ್ತೇವೆ. ಕೆಪಿಎಸ್‍ಸಿಯನ್ನ ಸಂಪೂರ್ಣವಾಗಿ ಕಾಯಕಲ್ಪ ಮಾಡುವ ಅಗತ್ಯವಿದೆ. ಇಲ್ಲಿ ರಿಸಲ್ಟ್ ಬಂದ ಮೇಲೆ ತಕರಾರು ಬರುತ್ತದೆ ಎಂದು ಮುಂದಾಗುವ ಸಮಸ್ಯೆಗಳ ಬಗ್ಗೆ ತಿಳಿಸಿದರು.

    ಇಂಟರ್ ವ್ಯೂ ಆದ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಹೀಗಾಗಿ ನೇಮಕಾತಿ ವಿಳಂಬ ಆಗುತ್ತಿದೆ. ಕೆಪಿಎಸ್‍ಸಿಗೆ ಕಾಯಕಲ್ಪ ಕೊಡಲು ಈಗಾಗಲೇ ಕೆಲ ಸಭೆ ಮಾಡಿದ್ದೇನೆ. ಸಂದರ್ಶನದ ಅಂಕಗಳನ್ನು ಕಡಿತ ಮಾಡಲಾಗಿದೆ. ಆದಷ್ಟು ಬೇಗ ಕೆಪಿಎಸ್‍ಗೆ ಹೊಸ ರೂಪ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 2025ರ ವೇಳೆಗೆ ಭಾರತದಲ್ಲಿ ತಲೆ ಎತ್ತಲಿವೆ 220 ವಿಮಾನ ನಿಲ್ದಾಣ: ಸಿಂಧಿಯಾ

  • ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ: ಸಿಎಂ

    ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ: ಸಿಎಂ

    ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ನಂತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂಬುದು ಒಮ್ಮತದ ತೀರ್ಮಾನವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ವಿಧಾನಸೌಧದಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನಡೆದ ಸರ್ವಪಕ್ಷಗಳ ನಾಯಕರ ಸಭೆಯ ನಂತರ ಮಾಧ್ಯಮದವರೊಂದಿಗೆ ಬೊಮ್ಮಾಯಿ ಅವರು  ಮಾತನಾಡಿದರು. ಈ ವೇಳೆ ಅವರು, ಎಲ್ಲ ಆಯಾಮಗಳಲ್ಲಿ ವಿಚಾರ ಮಾಡಿ ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ಹಿಂದುಳಿದಿರುವುದನ್ನು ಗುರುತಿಸಬೇಕು. ಅದಕ್ಕಾಗಿ ಸಮಿತಿ ರಚಿಸಬೇಕು. ಒಟ್ಟಾರೆ ಮೀಸಲಾತಿ ಶೇ 50% ನ್ನು ಮೀರಬಾರದು ಎನ್ನುವ ಸರ್ವೋಚ್ಚ ನ್ಯಾಯಾಲಯದ ಷರತ್ತುಗಳನ್ವಯ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’ 

    ಈ ತಿಂಗಳ ಅಂತ್ಯದೊಳಗೆ ಮುಂದಿನ ಸಭೆ ನಿಗದಿಪಡಿಸಲಾಗುವುದು. ಆ ಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಹಾಜರಾತಿಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಯಾವ ರೀತಿ ಚುನಾವಣೆ ನಡೆಯಬೇಕು ಎಂಬ ವಿಚಾರದಲ್ಲಿ ಸುದೀರ್ಘ ಚರ್ಚೆಯಾಗಿದೆ. ಅಡ್ವೊಕೇಟ್ ಜನರಲ್ ಅವರು ಕಾನೂನಿನ ವಸ್ತುಸ್ಥಿತಿಯ ವಿವರಗಳನ್ನು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ತಂದೆ ಸಾವು – ಮಗಳ ಸ್ಥಿತಿ ಗಂಭೀರ

    ಈ ಕುರಿತು ಆಯೋಗ ರಚಿಸಿ ವರದಿ ಪಡೆದು ಚುನಾವಣೆಗೆ ಹೋಗಬೇಕೆ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಹಾಕಬೇಕೆ ಎನ್ನುವ ಆಯ್ಕೆ ನಮ್ಮ ಮುಂದಿದೆ. ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡದೆ ಚುನಾವಣೆಗೆ ಹೋಗಲು ಸಾಧ್ಯವಿಲ್ಲ ಎಂದರು.

  • ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಬೆಂಗಳೂರು: ಪಾಠ-ಪ್ರವಚನಗಳಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೋ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬುಧವಾರದಂದು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

    ಕ್ಷೇತ್ರದ ಶಾಸಕರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡು, ರೋಬೋ ಕಾರ್ಯಕ್ಷಮತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ರೋಬೋಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಹಾಗೆಯೇ, ಅದು ನೀಡಿದ ಉತ್ತರ ನೆರವನ್ನು ಕಂಡು ಬೆರಗಾದರು. ಇದನ್ನೂ ಓದಿ: ಮಲ್ಲೇಶ್ವರಂ 18ನೇ ಅಡ್ಡರಸ್ತೆ ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಾಣ ಇಲ್ಲ: ಅಶ್ವತ್ಥನಾರಾಯಣ

    ರೋಬೋ ಬೋಧನೆ ನಂತರ ಮಾತನಾಡಿದ ಅಶ್ವತ್ಥನಾರಾಯಣ ಅವರು, ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೋದ ಕಾರ್ಯ ಸಾಮಥ್ರ್ಯವನ್ನು ವೀಕ್ಷಿಸಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯ ಸಲುವಾಗಿ, ಇಂತಹ ರೋಬೋಗಳು ಇದ್ದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

    ರೋಬೋ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು.

    21ನೇ ಶತಮಾನವು ತಂತ್ರಜ್ಞಾನದ ಯುಗವಾಗಿದ್ದು, ಬೋಧನೆಯಲ್ಲಿ ಇದರ ಅಳವಡಿಕೆ ಅಗತ್ಯವಾಗಿದೆ. ಇದರಿಂದಾಗಿ, ಸರ್ಕಾರಿ ಶಾಲಾ-ಕಾಲೇಜುಗಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಇದರಿಂದ ಬಡಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.

    ಮುಂದಿನ ದಿನಗಳಲ್ಲಿ `ಈಗಲ್’ ರೋಬೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು. ನಂತರ ಅವರಿಂದಲೇ ಈ ಯೋಜನೆಗೆ ಚಾಲನೆ ಕೊಡಿಸುವ ಉದ್ದೇಶ ಇದೆ. ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಇಂಡಸ್ ಟ್ರಸ್ಟ್‌ನ ಸ್ಥಾಪಕ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲೆ.ಜನರಲ್ ಅರ್ಜುನ್ ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ, ಶಾಲೆ ಉಪ ಪ್ರಾಂಶುಪಾಲ ರವಿಕುಮಾರ್ ಈ ಸಂದರ್ಭದಲ್ಲಿ ಇದ್ದರು.