ದಾವಣಗೆರೆ: ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ, ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ. ಇವರಲ್ಲಿ ಎಲ್ಲರಿಗಿಂತ ಹೆಚ್ಚು ಕೋಮುವಾದ ಇದೆ ಎಂದು ನಟ ಚೇತನ್ ಅಹಿಂಸಾ ಕಿಡಿಕಾರಿದರು.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವದಾಸಿಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದನ್ನು ನೋಡುವಷ್ಟು ತಾಳ್ಮೆ ರಾಜಕಾರಣಿಗೆ ಇಲ್ಲ. ಸಿಎಂ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ. ಇವರಲ್ಲಿ ಎಲ್ಲರಿಗಿಂತ ಹೆಚ್ಚು ಕೋಮುವಾದ ಇದೆ. ಅವರ ತಂದೆ ಒಳ್ಳೆಯ ಪ್ರಗತಿಪರ ಸಿಎಂ ಆಗಿದ್ದರು. ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ವಿರೋಧ ನೀತಿ. ಅಂಬೇಡ್ಕರ್, ಬಸವಣ್ಣನವರು ಕೂಡ ಅವರಿಗೆ ಬೇಕಾದ ಧರ್ಮ ಸ್ಥಾಪನೆ ಮಾಡಿದ್ದಾರೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎನ್ನುವುದು ಸಂವಿಧಾನದಲ್ಲಿದೆ. ಬಲವಂತವಾಗಿ ಮತಾಂತರ ಮಾಡಿದರೆ ಅದಕ್ಕೆ ಬೇಕಾದರೆ ಕ್ರಮ ಕೈಗೊಳ್ಳಲಿ. ಜನರಿಗೆ ಹೆದರಿಸಿ, ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ. ಅಲ್ಪಸಂಖ್ಯಾತ, ಕ್ರಿಸ್ಚಿಯನ್‍ರ ಮೇಲೆ ದಬ್ಬಾಳಿಕೆ ಮಾಡಿ ಕಾಯ್ದೆ ತರುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?
ಕೆಲ ಸ್ವಾಮೀಜಿಗಳು ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯುವಂತೆ ಕೇಳುತ್ತಿರುವುದು ಬೇಸರದ ವಿಚಾರ. ಮೊಟ್ಟೆ ತಿನ್ನುವವರ ಶಾಲೆ, ಮಟನ್ ತಿನ್ನುವವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಚಿದ್ರ ಮಾಡುವುದು ಸ್ವಾಮೀಜಿಗಳ ಉದ್ದೇಶವೆ? ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳಿದ್ದರು. ಇದನ್ನು ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡೀ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್
ಬೆಂಗಳೂರು: ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ 2023ರ ಚುನಾವಣೆ ವೇಳೆಗೂ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ 2023ರ ಚುನಾವಣೆ ವೇಳೆಗೂ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಕೇವಲ ಕಪೋಲಕಲ್ಪಿತ. ಬಿಜೆಪಿ ಸರ್ಕಾರದಲ್ಲಿ ಅರಾಜಕತೆ ಹುಟ್ಟುಹಾಕಲು ಇಂತಹ ಸುದ್ದಿ ಹರಡಿಸುತ್ತಾರೆ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಸಿಎಂಗೆ ಯಾವುದೇ ಅನಾರೋಗ್ಯ ಇಲ್ಲ, ಕಾಲು ನೋವು ಮಾತ್ರ ಇದೆ. ಅದಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೊಮ್ಮಾಯಿ ಅವರು ವಿದೇಶಕ್ಕೂ ಹೋಗಲ್ಲ, ಅವರ ಕಾಲಿನ ಸಮಸ್ಯೆಗೆ ಇಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ: ಪ್ರಹ್ಲಾದ್ ಜೋಶಿ
ಇದೇ ವೇಳೆ ಸಚಿವ ಸಂಪುಟ ಪುನರ್ ರಚನೆ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಪುನರ್ ರಚನೆ ಆಗುವುದಾದರೆ ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ಮರುದಿನ ಅದರ ಬಗ್ಗೆ ನಿಮಗೆ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್
ಮತಾಂತರದಿಂದ ಸಾಮಾಜಿಕ ಕಲಹ ಆಗುತ್ತಿತ್ತು. ಅದಕ್ಕೆ ತಡೆಯೊಡ್ಡಲು ಕಾಯ್ದೆ ಜಾರಿ ಮಾಡಲಾಗಿದೆ. ಬಡತನ, ನಿರುದ್ಯೋಗದಿಂದ ನಗರದಲ್ಲಿ ಇದ್ದ ಮತಾಂತರ ಹಳ್ಳಿಗೂ ವ್ಯಾಪಿಸಿದೆ. ಹಾಗಾಗಿ ಬೊಮ್ಮಾಯಿ ಒಳ್ಳೆ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ವಿರೋಧ ಮಾಡುವುದು ಸಹಜ. ಸಿದ್ದರಾಮಣ್ಣನೇ ಮತಾಂತರ ನಿಷೇಧ ಕಾಯ್ದೆಗೆ ಸಹಿ ಹಾಕಿದ್ದಾರೆ. ಅಧಿಕಾರ ಇದ್ದಾಗ ಒಂದು, ಇಲ್ಲದಾಗ ಒಂದು. ಅವರಿಗೆ ಮರೆವು. ಅರಳು, ಮರಳು ಇಲ್ಲಿ ಬಂದು ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಶಾಸಕರೇ ನಾವು ತಂದ ಕಾಯ್ದೆ ಪರವಾಗಿದ್ದಾರೆ ಎಂದು ಟಾಂಗ್ ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರುದ್ರಭೂಮಿ ಸ್ವಚ್ಚತೆ ಕೈಗೆತ್ತಿಕೊಳ್ಳಲಾಗಿದೆ. ಶಾಶ್ವತವಾಗಿ ಸ್ವಚ್ಚಗೊಳಿಸಿ, ಸುಣ್ಣ-ಬಣ್ಣ ಬಳಿದು ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಪ್ರಧಾನಿಗಳ ಆಶಯ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಸೆಯಂತೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದರು.
ಸಂಸತ್ ಸದನದಲ್ಲಿ ಪ್ರತಿಪಕ್ಷಗಳ ವರ್ತನೆಗೆ ವಿಷಾದ ವ್ಯಕ್ತಪಡಿಸಿ ಅಂದರೂ ಕೇಳಲಿಲ್ಲ. ಮೋದಿ ಏನೇ ಮಾಡಿದರೂ ಕಾಂಗ್ರೆಸ್‍ನವರು ವಿರೋಧ ಮಾಡುತ್ತಿದ್ದಾರೆ. ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಸಹ ಬಹಿಷ್ಕಾರ ಮಾಡಿದರು. ಕಾಂಗ್ರೆಸ್ ಪಕ್ಷ ಬಹಿಷ್ಕಾರ ಮಾಡಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್
ಸಿಎಂ ಬದಲಾವಣೆ ಕುರಿತು ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಇಲ್ಲ. ಊಹಾಪೋಹಗಳಿಗೆ ಕಿವಿಗೊಡಬಾರದು. ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳನ್ನು ಹರಡುವುದು ತಪ್ಪು. ಅವರು ಅಮೆರಿಕಾಗೆ ಹೋಗುತ್ತಾರೆ, ಅವರನ್ನು ತೆಗೆಯುತ್ತಾರೆ ಎಂಬುದೆಲ್ಲ ಸುಳ್ಳು. ಸಿಎಂ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಆ ರೀತಿಯ ಬೆಳವಣಿಗೆ ಇದಿದ್ದರೆ ನನಗೆ ತಿಳಿಯುತ್ತಿತ್ತು. ಸುಮ್ಮನೆ ಊಹಾಪೋಹಗಳನ್ನು ಹರಡಬಾರದು. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು: ಜಿಲ್ಲಾಡಳಿತ ಹಾಗೂ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವತಿಯಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟವರ ವಾರಸುದಾರರು ಹಾಗೂ ಕುಟುಂಬಸ್ಥರಿಗೆ ಪರಿಹಾರ ಧನ ವಿತರಣಾ ಕಾರ್ಯಕ್ರಮವನ್ನು ಡಿಸೆಂಬರ್ 27 ಬೆಳಗ್ಗೆ 11:00 ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನ, ಕೆ.ಆರ್.ರಸ್ತೆ, ಬಸವನಗುಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಅವರೊಂದಿಗೆ ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಉದಯ್.ಜಿ.ಗರುಡಾಚಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಂದಾಯ ಸಚಿವ ಆರ್.ಅಶೋಕ್ ಘನ ಉಪಸ್ಥಿತಿಯಲ್ಲಿ ಇರುತ್ತಾರೆ.
ಈ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಸಚಿವ ಸಿ.ಎಸ್.ಅಶ್ವಥ್ ನಾರಾಯಣ, ವಸತಿ ಸಚಿವ ವಿ.ಸೋಮಣ್ಣ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನಗರಾಭಿವೃದ್ಧಿ ಸಚಿವ ಬಿ.ವಿ.ಬಸವರಾಜ್, ಸಹಕಾರ ಸಚಿವ ಸೋಮಶೇಖರ್, ಅಬಕಾರಿ ಸಚಿವ ಗೋಪಾಲಯ್ಯ.ಕೆ, ಸಂಸದರಾದ ಎಲ್.ಎಸ್.ತೇಜಸ್ವಿ ಸೂರ್ಯ, ಡಿ.ವಿ.ಸದಾನಂದ ಗೌಡ, ಪಿ.ಸಿ.ಮೋಹನ್, ಡಿ.ಕೆ.ಸುರೇಶ್, ಬಚ್ಚೇಗೌಡ ಸೇರಿದಂತೆ ರಾಜ್ಯಸಭೆಯ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಬಿಬಿಎಂಪಿ ಆಡಳಿತಗಾರರು ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತರು ಗೌರವ್ ಗುಪ್ತ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು
ಹಾವೇರಿ: ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ ಹೇಳಿ ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾದರು.
ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭಕ್ಕೆ ಸಿಎಂ ಆಗಮಿಸಿದ್ದರು.
ಎರಡು ಪೀಠದ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಇದು ಸಂತರ ನಾಡು, ಇಲ್ಲಿ ವೈಚಾರಿಕ ಕ್ರಾಂತಿಯನ್ನ ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ ಶರೀಫರು ಇದ್ದ ತಾಲೂಕು. ಯಾವುದು ಶಾಶ್ವತವಲ್ಲ, ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ. ಸ್ಥಾನಮಾನಗಳು ಶಾಶ್ವತವಲ್ಲ ಎಂದು ಹೇಳಿ ಭಾವುಕರಾದರು. ಇದನ್ನೂ ಓದಿ: ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ
ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಿ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ನಾನೇನು ಕೆಲಸ ಮಾಡಿದ್ರೂ ಆ ಋಣ ತೀರಿಸಲು ಆಗೋದಿಲ್ಲ ಎಂದು ಭಾವುಕರಾದರು.
ಶಾಶ್ವತವಾಗಿ ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕೆಂಬ ಆಸೆಯಿದೆ. ನಾನು ಭಾವನಾತ್ಮಕವಾಗಿ ಮಾತನಾಡಬಾರ್ದು ಅಂದ್ಕೊಂಡಿದ್ದೆ. ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಎಲ್ಲ ಸಮುದಾಯಗಳ ಭಾವನೆಗೆ ಸ್ಪಂದಿಸೋದು ಸೇರಿದಂತೆ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರಕ್ಕೆ ಸವಾಲುಗಳಿವೆ, ಅವುಗಳನ್ನ ಎದುರಿಸಿಕೊಂಡು ಹೋಗಬೇಕಿದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು, ಯಾವುದೋ ಒಂದು ರಾಜ್ಯ ಪಡೆದುಕೊಳ್ಳಲು ಅಲ್ಲ. ವಿಸ್ತರಣೆಗಾಗಿ ಹೋರಾಟ ಮಾಡಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದಳು. ಎಲ್ಲ ಸಮುದಾಯದವರನ್ನ ಸೇರಿಸಿಕೊಂಡು ಚೆನ್ನಮ್ಮ ರಾಜ್ಯವನ್ನ ಉಳಿಸೋ ಕೆಲಸ ಮಾಡಿದಳು. ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಕಿತ್ತೂರು ಚೆನ್ನಮ್ಮ ಕುಸಿದು ಹೋದಳು. ಅಲ್ಲಿಯವರೆಗೂ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಯಾವುದಕ್ಕೂ ಕುಸಿದಿರಲಿಲ್ಲ. ಸಾಧಕರಿಗೆ ಸಾವು ಅಂತ್ಯವಲ್ಲ ಎಂದು ಸ್ಪೂರ್ತಿ ಮಾತುಗಳನ್ನು ಆಡಿದರು.
ಕಿತ್ತೂರು ಚೆನ್ನಮ್ಮ ಅಂದು ಯುದ್ಧ ಮಾಡಿದ್ದನ್ನ ಇಂದು ನಾವು ನೆನಪಿಸಿಕೊಳ್ತಿದ್ದೇವೆ. ಈಗಾಗಲೇ ಅಂಬೇಡ್ಕರ್ ಮೂರ್ತಿ ಕೂಡ ತಯಾರಾಗಿದೆ. ಏಪ್ರಿಲ್ ಒಳಗಾಗಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡ್ತೇವೆ. ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡ್ತೇವೆ. ಪಂಚಮಸಾಲಿ ಸಮಾಜಕ್ಕೆ 2ಎ ಕೊಡೋ ಬಗ್ಗೆ ಈಗಾಗಲೇ ಸಭೆಯಲ್ಲಿ ಹೇಳಿದ್ದೇನೆ. ಹಿಂದುಳಿದ ವರ್ಗದ ಆಯೋಗಕ್ಕೆ ಸಹಕಾರ ಕೊಡಿ. ಈ ನಾಡಿದ ಬಹುತೇಕ ಜನರಿಗಾಗಿ ಒಳ್ಳೆಯ ದಿನಗಳು, ನ್ಯಾಯ ಕೊಡಲು ನಿರ್ಣಯ ತೆಗೆದುಕೊಳ್ಳುತ್ತೇವೆ. ನನಗೆ ಶಿಗ್ಗಾಂವಿ-ಸವಣೂರು ಏತ ನೀರಾವರಿ ಯೋಜನೆಯ ಕೆರೆ ತುಂಬಿಸೋ ಕೆಲಸ ಮಾಡಬೇಕು ಅಂತಾ ಇತ್ತು. ಅದು ಪೂರ್ಣವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಅಕ್ಕ-ಪಕ್ಕದಲ್ಲಿ ಓಮಿಕ್ರಾನ್ ಹಾವಳಿ ಇದ್ದರೂ ಕೊಡಗಿನಲ್ಲಿ ಪ್ರವಾಸಿಗರದ್ದೇ ದರ್ಬಾರ್
ನೂರಕ್ಕಿಂತ ಹೆಚ್ಚು ಕೆರೆಗಳು ತುಂಬಿವೆ. ನಿಮ್ಮ ಬೆಂಬಲ, ಆರ್ಶೀವಾದಕ್ಕೆ ಶ್ರೇಯಸ್ಸು ತರೋ ಕೆಲಸ ಮಾಡ್ತೇನೆ. ಎಲ್ಲರೂ ಬಹಳ ಚೆನ್ನಾಗಿ ಮಾತನಾಡಿದ್ದೀರಿ. ಇವತ್ತು ನನಗೆ ಬಹಳ ಸಂತೋಷ ಆಗಿದೆ. ಸಮುದಾಯದ ಅಭಿವೃದ್ಧಿ ಬಗ್ಗೆ ಇಬ್ಬರು ಪರಮಪೂಜ್ಯರು ಹೇಳಿದ ವಿಚಾರಗಳನ್ನ ಶಿರಸಾ ವಹಿಸಿ ಮಾಡ್ತೇನೆ. ಇವತ್ತಿನಿಂದ ಕಿತ್ತೂರು ಚೆನ್ನಮ್ಮ ನಾವು ಮಾಡೋದನ್ನ ನೋಡ್ತಿದ್ದಾಳೆ ಅನ್ನೋ ಅರಿವಿನಿಂದ ಕೆಲಸ ಮಾಡೋಣ. ಹರಜಾತ್ರೆ ಮತ್ತು ಕೂಡಲಸಂಗಮ ಸಂಕ್ರಮಣ ಕಾರ್ಯಕ್ರಮ ಎರಡಕ್ಕೂ ಕರೆದಿದ್ದಾರೆ. ಸಮಯ ನಿಗದಿ ಮಾಡಿಕೊಂಡು ಎರಡೂ ಕಡೆ ಬರೋ ಕೆಲಸವನ್ನ ಮಾಡ್ತೇನೆ. ಈ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಸಮುದಾಯ ಕಡೆಗಣಿಸದೆ ಎಲ್ಲರಿಗೂ ನ್ಯಾಯ ಕೊಡೋ ಕೆಲಸವನ್ನ ಮಾಡ್ತೇವೆ ಎಂದು ಭರವಸೆಯ ಮಾತುಗಳನ್ನು ಆಡಿದರು.
ಬೆಂಗಳೂರು: ವೀರ ಸಾವರ್ಕರ್ ಅವರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅಂತಾ ಬ್ರಿಟಷರಿಗೆ ಗೊತ್ತಿತ್ತು. ಸಾವರ್ಕರ್ ಬ್ರಿಟಿಷರ ಪಾಲಿಗೆ ನ್ಯೂಕ್ಲಿಯರ್ ಆಗಿದ್ರು. ಹಾಗಾಗಿ ದೇಶದ ಜನರಿಂದ ಬ್ರಿಟಿಷರು ಅವರನ್ನು ದೂರ ಇಟ್ಟರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಟೌನ್ ಹಾಲ್ ನಲ್ಲಿ ನಡೆದ ವೀರ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ವೀರ ಸಾರ್ವಕರ್ ಅವರ ಈ ಪುಸ್ತಕದ ಟೈಟಲ್‍ನಲ್ಲೇ ಇದೊಂದು ಅಪರೂಪದ ಪುಸ್ತಕ ಅನ್ನೋದು ತಿಳಿಯುತ್ತೆ. ಈ ಪುಸ್ತಕ ಬಿಡುಗಡೆಯಲ್ಲಿ ನಾನು ಭಾಗಿಯಾಗಿರೋದು ನನಗೆ ಹೆಮ್ಮೆ. ವೀರ ಸಾರ್ವಕರ್ ಹೆಸರಿನಲ್ಲಿ ಒಂದು ಶಕ್ತಿ ಇದೆ. ನಾವು ಎಲ್ಲರನ್ನೂ ವೀರರು ಎಂದು ಕರೆಯುವುದಿಲ್ಲ. ಆದರೆ ಸಾವರ್ಕರ್ ಇಡೀ ದೇಶದಲ್ಲಿ ವೈಚಾರಿಕತೆ ಕಿಚ್ಚು ಹಚ್ಚಿ ನಾಗರೀಕತೆ ಹಾಗೂ ಸಂಸ್ಕೃತಿಯ ಕಿಡಿ ಹಚ್ಚಿದ್ರು ಎಂದು ಸ್ಮರಿಸಿಕೊಂಡರು. ಇದನ್ನೂ ಓದಿ: ಶಿಕ್ಷಕರು ಅನಕ್ಷರಸ್ಥ ಬಾಳಲ್ಲಿ ಅಕ್ಷರ ಬೆಳಕು ಮೂಡಿಸಿರಿ: ಅಶೋಕ್ ಸಿಂದಗಿ
ಸಾವರ್ಕರ್ ಅವರನ್ನ ಸಾಕಷ್ಟು ಜನ ದೂರುತ್ತಾರೆ. ಅಂತವರೆಲ್ಲ ದಯಾಮಾಡಿ ಸಾವರ್ಕರ್ ಇದ್ದ ಜೈಲು ಕೋಣೆಗೆ ಹೋಗಿ ಬನ್ನಿ. ಆಗ ಅವರ ಬಗ್ಗೆ ನಿಮಗಿರುವ ಕೊಳಕು ಮನಸ್ಥಿತಿ ಹೋಗುತ್ತದೆ. ಇತಿಹಾಸವನ್ನು ಸರಿಯಾಗಿ ಓದಿದರೆ ಮಾತ್ರ ಭವಿಷ್ಯವನ್ನ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ನಾಗರಿಕತೆಯೇ ಸಂಸ್ಕೃತಿ ಅಲ್ಲ, ನಮ್ಮಲ್ಲಿ ಏನು ಇದೆ ಅದು ನಾಗರಿಕತೆ, ನಾವು ಏನಾಗಿದ್ದೀವಿ ಅನ್ನೋದು ಸಂಸ್ಕೃತಿ. ಸಿಂಧೂ ತಟ್ಟದಲ್ಲಿ ಬೆಳೆದುಬಂದ ಮೌಲ್ಯಗಳೇ ಸಂಸ್ಕೃತಿ. ನಮ್ಮ ಸಂಸ್ಕೃತಿ ಮಾತ್ರ ನಮ್ಮ ಅಂತಃಕರಣವನ್ನು ಜಾಗೃತಿಗೊಳಿಸಲು ಸಾಧ್ಯ ಅನ್ನೊದನ್ನು ಹೇಳೋದೆ ವೀರ ಸಾರ್ವಕರ್ ಪುಸ್ತಕವಾಗಿದೆ. ಕೆಲವು ಧರ್ಮಗಳು ಹಿಂಸೆಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿವೆ. ನಮ್ಮ ಧರ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿದೆ ಎಂದರು.
ವೈಚಾರಿಕವಾಗಿ ಬಾಬಾ ಸಾಹೇಬರ ಜೊತೆ ಸಾರ್ವಕರ್ ಉತ್ತಮ ಸಂಬಂಧ ಹೊಂದಿದ್ದರು. ಬ್ರಿಟಿಷರು ನಮ್ಮನ್ನ ಒಡೆಯಲಿಕ್ಕೆ ಅಸ್ಪೃಶ್ಯತೆ ಆರಂಭಿಸಿದರು. ಬಳಿಕ ಬಂದ ರಾಜಕಾರಣಿಗಳು ಲಾಭಕ್ಕಾಗಿ ಬಳಸಿಕೊಂಡು ಮುಂದುವರೆಸಿದರು. ಈಗ ಇದೆಲ್ಲ ಬದಲಾಗಬೇಕಿದೆ ಎಂದು ಸಾರಿದರು.
ಪುಸ್ತಕ ಬಿಡುಗಡೆ ವೇಳೆ ಕನ್ನಡ ಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಹೈಡ್ರಾಮ ಸೃಷ್ಟಿಯಾಗಿತ್ತು. ಈ ವೇಳೆ ಟೌನ್ ಹಾಲ್ ಮುಂಭಾಗ ಹಿಂದೂ ಪರ ಕಾರ್ಯಕರ್ತರು ಮತ್ತು ಕನ್ನಡ ಪರ ಸಂಘಟನೆಗಳ ಪರ ವಿರೋಧ ಕೂಗಾಟ ನಡೆಯುತ್ತಿತ್ತು. ಪರಿಣಾಮ ಪೊಲೀಸರು ಈ ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಂಡರು. ಸಿಎಂ ಬರುವುದಕ್ಕೂ ಮುನ್ನ ಈ ಪ್ರತಿಭಟನೆ ನಡೆದಿತ್ತು.
ಬೆಳಗಾವಿ: ಹೆಲಿಕಾಪ್ಟರ್ ಪತನದಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೇ.80 ಕ್ಕಿಂತ ಹೆಚ್ವು ಸುಟ್ಟ ಗಾಯಗಳಾಗಿತ್ತು. ವೈದ್ಯರ ಚಿಕಿತ್ಸೆಯ ಹೊರತಾಗಿಯೂ ಅವರು ನಿಧನರಾಗಿದ್ದಾರೆ. ಭಾರತ ಮಾತೆಯ ವೀರ ಯೋಧನನ್ನು ಕಳೆದುಕೊಂಡಿದೆ. ಅವರ ಮರಣದಿಂದ ಭಾರತದ ಸೇನೆ ಮತ್ತು ಜನತೆ ದು:ಖತಪ್ತವಾಗಿದೆ. ಅವರ ಕುಟುಂಬದವರೆಲ್ಲರೂ ಸೈನ್ಯದಲ್ಲಿದ್ದರು ಎಂದು ನೆನೆದರು. ಇದನ್ನೂ ಓದಿ: ದುರ್ಗಾಪೂಜೆಗೆ ಪಾರಂಪರಿಕ ಸ್ಥಾನಮಾನ ಕೊಟ್ಟ UNESCO
ಇತ್ತೀಚಿಗೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ದೇಶವು ಒಬ್ಬ ವೀರ ಯೋಧನನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.
ಓಂ ಶಾಂತಿ pic.twitter.com/cuxwnYyyVb
ಬೆಂಗಳೂರು: ಯಾವುದೇ ರೀತಿಯ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೋವಿಡ್-19 ಕುರಿತು ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಎಸ್‍ಸಿ ಅಧ್ಯಕ್ಷರಾದ ಸುದರ್ಶನ್ ಅವರು ಈ ಕುರಿತು ನಮಗೆ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ಓಮಿಕ್ರಾನ್ ಕುರಿತು ಸಹ ಮಾಹಿತಿಯನ್ನು ನೀಡಿದ್ದಾರೆ. ಈಗಿರುವ ಪಾಸಿಟಿವಿಟಿ ರೇಟ್ ನೋಡಿದರೆ ಬಹಳ ಗಾಬರಿಯಾಗುವಂತಹ ಅವಶ್ಯಕತೆ ಇಲ್ಲ ಎಂಬುದು ಅವರ ವಾದವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್
ಗಡಿಭಾಗದಲ್ಲಿ ಈಗಿರುವ ಕಟ್ಟೆಚ್ಚರವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಅದರಲ್ಲಿಯೂ ಕೇರಳ ವಿದ್ಯಾರ್ಥಿಗಳಿಗೆ ಇರುವ ಎಚ್ಚರಿಕೆಗಳೆಲ್ಲ ಮುಂದುವರಿಯುತ್ತೆ. ಅವರಿಗೆ ಎಲ್ಲ ರೀತಿಯ ಟೆಸ್ಟ್ ಗಳನ್ನು ಮಾಡಿಸಲಾಗುತ್ತೆ. ನೈಟ್ ಕಫ್ರ್ಯೂ, ಕ್ರಿಸ್ ಮಸ್ ಮತ್ತೆ ಹೊಸ ವರ್ಷಕ್ಕೆ ಇನ್ನೂ ಒಂದು ವಾರ ಈ ಸೋಂಕಿನ ಬೆಳವಣೆಗೆಯನ್ನು ನೋಡಿ ನಂತರ ಈ ಕುರಿತು ನಿರ್ಧರಿಸಲಾಗುತ್ತೆ. ನಂತರ ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಯಾವುದೇ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತಿಲ್ಲ ಎಂದರು.
ಅದರೂ ಸಹ ಈ ಬಗ್ಗೆ ನಾವು ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೋರುವುದಿಲ್ಲ. ಅದರ ಬದಲು ನಾವು ಈ ಕುರಿತು ಹೆಚ್ಚಿನ ಗಮನ ಕೊಟ್ಟು ಮುಂಜಾಗ್ರತೆಯ ಕ್ರಮವನ್ನು ನಾವು ತೆಗೆದುಕೊಳ್ಳಬೇಕು. ಅದರಲ್ಲಿಯೂ ಹಾಸ್ಟೆಲ್ ಗಳಲ್ಲಿ ವಿಶೇಷವಾದ ಸೂಚನೆಯನ್ನು ನೀಡುತ್ತಿದ್ದೇವೆ. ಸರಿಯಾಗಿ ಹಾಸ್ಟೆಲ್ ಗಳನ್ನು ನೋಡಿಕೊಳ್ಳುವುದು ಎರಡೂ ಬಾರಿ ಸ್ಯಾನಿಟೈಸರ್ ಮಾಡುವುದು, ಒಂದೇ ಬಾರಿ ಎಲ್ಲರೂ ಊಟಕ್ಕೆ ಬರದಂತೆ ನೋಡಿಕೊಳ್ಳುವುದು. ಎಸ್‍ಓಪಿಗಳನ್ನು ಹಾಸ್ಟೆಲ್ ಮತ್ತು ಕ್ಲಸ್ಟರ್ ಮ್ಯಾನೇಜ್ಮೆಂಟ್ ನಲ್ಲಿ ಬರಬೇಕು ಎಂದು ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮೂವರನ್ನ ಗುಂಡಿಕ್ಕಿ ಕೊಂದ ಯೋಧನಿಗೆ ಜೀವಾವಧಿ ಶಿಕ್ಷೆ!
ಮೂರು ಜನರಿಗೆ ಕೊರೊನಾ ಬಂದರೂ ಅಲ್ಲಿ ಕ್ಲಸ್ಟರ್ ಅನ್ನು ಘೋಷಿಸಲಾಗುತ್ತೆ ಎಂದು ಸೂಚನೆಯನ್ನು ನೀಡಲಾಗಿದೆ. ಅದು ಅಲ್ಲದೇ ಇದು ಬೆಂಗಳೂರಿನಲ್ಲಿಯೂ ಆಗಿದೆ. ಈ ಬಗ್ಗೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಾಸ್ಟೆಲ್ ನಲ್ಲಿ ಅಡುಗೆ ಮಾಡುವವರಿಗೆ 2 ಡೋಸ್ ವಾಕ್ಸಿನೇಷನ್ ಕಡ್ಡಾಯ ಮಾಡಲಾಗಿದ್ದು, ಈ ವೇಳೆ ನಮ್ಮ ಸಚಿವರು ಡ್ರ್ಯವ್ ಮೂಲಕ ವಾಕ್ಸಿನೇಷನ್ ಕೊಡಿಸಬೇಕು ಎಂದು ಸಲಹೆಯನ್ನು ನೀಡಿದ್ದಾರೆ. ಎಲ್ಲವನ್ನು ಸೇರಿಸಿ ವಾಕ್ಸಿನೇಷನ್ ಡ್ರೈವ್ ಅನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.
ಬೀದರ್: ವಿಶೇಷ ಕ್ಲಸ್ಟರ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ದೇಶದಲ್ಲಿ ಓಮಿಕ್ರಾನ್ ಹೊಸ ರೂಪಾಂತರಿಯ ಅಬ್ಬರದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಬೇರೆ ರಾಜ್ಯಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಪತ್ತೆಯಾಗುತ್ತಿರುವುದು ಗಮನಿಸಿದ್ದೇವೆ. ಈಗಾಗಲೇ ತಜ್ಞರು ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಅವುಗಳನ್ನು ಅನುಷ್ಠಾನ ಮಾಡುವ ಕೆಲಸ ಮಾಡುತ್ತಿದ್ದೇವೆ. ಇದರ ಮೇಲೆ ಗಮನ ಇಟ್ಟಿದ್ದೇವೆ. ಅದರಲ್ಲಿಯೂ ವಿಶೇಷವಾಗಿ ಕ್ಲಸ್ಟರ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೆಚ್ಚು ಸೋಂಕು ಬರುತ್ತಿದೆ. ಈ ಕ್ಲಸ್ಟರ್ ಮ್ಯಾನೇಜರ್ ಗಾಗಿ ಕೆಲವು ಮಾರ್ಗವನ್ನು ಸೂಚನೆಗಳನ್ನು ಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ
ಚಿಕ್ಕಮಗಳೂರಿನಲ್ಲಿ ನಿನ್ನೆ ದೊಡ್ಡ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ಟೆಸ್ಟ್ ಮಾಡಲಾಗಿದೆ. ಪ್ರೈಮರಿ, ಸೆಕೆಂಡರಿ ಸಂಪರ್ಕಿತರನ್ನು ಪತ್ತೆ ಮಾಡಿ ಸೀಲ್‍ಡೌನ್ ಮಾಡಿದ್ದೇವೆ. ಅವರಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದೇವೆ. ನಮ್ಮ ಸರ್ಕಾರ ಎಲ್ಲ ರೀತಿಯ ಸನ್ನದ್ಧವಾಗಿದೆ. ಕಾಲ ಕಾಲಕ್ಕೆ ಅದರ ಪರಿಣಾಮ ಹಾಗೂ ವಿಸ್ತೀರ್ಣವನ್ನು ತಜ್ಞರಿಂದ ಮಾಹಿತಿ ಪಡೆದು ಚಿಕಿತ್ಸೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ. ನಾವು ಎಲ್ಲ ಕಡೆ ಗೆಲುತ್ತೇವೆ. ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಮನಸ್ಸು ಬಹಳಷ್ಟು ಹಗುರ ಹಾಗೂ ಸಂತೋಷವಾಗಿದೆ. ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡುವ ಆತ್ಮಸ್ಥೈರ್ಯ ಭಾಲ್ಕಿಗೆ ಬಂದ ಮೇಲೆ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ಕೋವಿಡ್ ವಾರಿಯರ್‌ಗಳಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೂಸ್ಟರ್ ಡೋಸ್ ಕುರಿತು ಟಾಸ್ಕ್‌ಫೋರ್ಸ್‌ನಲ್ಲಿ ಚರ್ಚೆ ಮಾಡಲಿದ್ದೇವೆ. ಒಂದು ಡೋಸ್ ಅನ್ನು ಎನ್‌ಸಿಬಿಎಸ್‌ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಬೂಸ್ಟರ್ ಡೋಸ್ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಕೋವಿಡ್ ಲಸಿಕೆ ಕಡ್ಡಾಯವಲ್ಲ. ಆದರೆ ಲಸಿಕಾಕರಣವನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?
ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರ ಮೇಲೆ ಒಂದು ವಾರಗಳ ಕಾಲ ನಿಗಾವಹಿಸಲಾಗುವುದು. ವಿದೇಶ ಹಾಗೂ ಕೇರಳದಿಂದ ಬಂದವರ ಮೇಲೆ ನಿಗಾವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ವಿದೇಶದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.
ಹಾವೇರಿಯಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಬಿಜೆಪಿಯವರಲ್ಲ. ಒಮ್ಮೆ ಕಾಂಗ್ರೆಸ್ ಅಂತಾರೆ, ಇನ್ನೊಮ್ಮೆ ಬಿಜೆಪಿ ಅಭ್ಯರ್ಥಿ ಅಂತಾರೆ. ನಮ್ಮ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಕಣದಲ್ಲಿ ಇದ್ದಾರೆ. ಎಚ್.ಡಿ.ದೇವೇಗೌಡರು ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ನಿನ್ನೆ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಚರ್ಚಿಸಿ ಮೈತ್ರಿ ವಿಚಾರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 2 ಡೋಸ್ ಪಡೆದವರಿಗೆ ಚಿಕಿತ್ಸೆ – ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕಡಿತಗೊಳಿಸಿ
ರಾಜ್ಯದಲ್ಲಿ ಲಾಕ್‌ಡೌನ್ ಕುರಿತು ಮಾತನಾಡಿ, ಲಾಕ್‌ಡೌನ್ ಪ್ರಸ್ತಾಪ ಇಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ವೇಳೆ ನಿರ್ಬಂಧ ಹೇರುವ ಬಗ್ಗೆ ತೀರ್ಮಾನ ಮಾಡಿಲ್ಲ. ಜನರು ಭಯಭೀತರಾಗಬಾರದು ಎಂದು ಸ್ಪಷ್ಟಪಡಿಸಿದರು.