Tag: ಸಿಎಂ ಫೈಟ್‌

  • ಕರ್ನಾಟಕದ ನೂತನ ಮುಖ್ಯಮಂತ್ರಿ ಮೇ 18 ರಂದು ಪ್ರಮಾಣ ವಚನ?

    ಕರ್ನಾಟಕದ ನೂತನ ಮುಖ್ಯಮಂತ್ರಿ ಮೇ 18 ರಂದು ಪ್ರಮಾಣ ವಚನ?

    ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿ (Karnataka CM) ಹಾಗೂ ಸಂಪುಟ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಸಮಾನ ಮನಸ್ಕ ಪಕ್ಷಗಳಿಗೆ ಕಾಂಗ್ರೆಸ್‌ ಆಹ್ವಾನ ಕಳುಹಿಸಿದೆ. ಇದನ್ನೂ ಓದಿ: ಈ ಬಾರಿ ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು: ಉಮಾಪತಿ ಶ್ರೀನಿವಾಸ ಗೌಡ

    ಕರ್ನಾಟಕ ಸಚಿವ ಸಂಪುಟದ ಅಂತಿಮ ರೂಪುರೇಷೆ ಒಂದೆರೆಡು ದಿನದಲ್ಲಿ ರೂಪುಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

    ಕರ್ನಾಟಕದಲ್ಲಿ ಕಾಂಗ್ರೆಸ್‌ ಬಹುಮತದ ಜಯ ಸಾಧಿಸಿದ ಬಳಿಕ, ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್‌ (DK Shivakumar) ಸಿಎಂಗಾದಿ ರೇಸ್‌ನಲ್ಲಿದ್ದಾರೆ. ಇಂದು ಸಿಎಲ್‌ಪಿ ಸಭೆ ನಡೆಯಲಿದೆ. ಸಭೆ ಕುರಿತು ದೆಹಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇಂದು ಸಿಎಲ್‌ಪಿ ಸಭೆ ನಡೆಯಲಿದೆ. ವರದಿಯನ್ನು ಹೈಕಮಾಂಡ್‌ಗೆ ಹಸ್ತಾಂತರಿಸಲಿದ್ದು, ನಂತರ ಸಿಎಂ ಹೆಸರನ್ನು ಘೋಷಿಸಲು ಹೈಕಮಾಂಡ್ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

    ಕರ್ನಾಟಕದ ಜನರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಜನರು ನಮಗೆ ದಾಖಲೆಯ ಮತಗಳನ್ನು ನೀಡಿದ್ದಾರೆ. ನಾವು ಸಚಿವ ಸಂಪುಟ ರಚನೆಯ ನಂತರ ನಮ್ಮ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ ಎಲ್ಲಾ 5 ಭರವಸೆಗಳನ್ನು ಜಾರಿಗೆ ತರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿತು. ಬಿಜೆಪಿ 66, ಜೆಡಿಎಸ್‌ 19 ಹಾಗೂ ಇತರರು 4 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಯಾರಾಗ್ತಾರೆ ಮುಖ್ಯಮಂತ್ರಿ..?

  • ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

    ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಪಾಳಯದಲ್ಲಿ ಈಗ ಸಿಎಂ ಕುರ್ಚಿ (CM Fight) ಫೈಟ್‌ ಸದ್ದು ಮಾಡುತ್ತಿದೆ. ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್‌ (DK Shivakumar) ಇದ್ದು, ಮುಂದಿನ ಸಿಎಂ ಯಾರಾಗ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸಿಎಂ ವಿಷಯದಲ್ಲಿ ಸಿದ್ದರಾಮಯ್ಯ ಪ್ಲಾನ್‌ ಏನು? ಸಿದ್ದು ಪ್ಲಾನ್‌ಗೆ ಡಿ.ಕೆ.ಶಿವಕುಮಾರ್‌ ಒಪ್ಪದಿದ್ದರೆ ಮುಂದೇನಾಗುತ್ತದೆ ಎಂಬ ಚರ್ಚೆಯೂ ಜೋರಾಗಿದೆ.

    ಸಿದ್ದರಾಮಯ್ಯ ಅವರ ಬಳಿ 50-50 ಫಾರ್ಮುಲ ಪ್ರಪೋಸಲ್‌ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಡಿ.ಕೆ.ಶಿವಕುಮಾರ್ ಒಪ್ಪದಿದ್ದರೆ ಸಿದ್ದರಾಮಯ್ಯ ಮೊದಲ 2 ವರ್ಷ ಹಾಗೂ ಡಿಕೆಶಿ 3 ವರ್ಷದ ಪ್ರಪೋಸಲ್ ಮುಂದಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದರಾಮಯ್ಯ ಪ್ಲಾನ್ ಎ 50-50 ಫಾರ್ಮುಲ ಹಾಗೂ ಪ್ಲಾನ್ ಬಿ ಅನಿವಾರ್ಯವಾದರೆ 2-3 ವರ್ಷದ ಅಧಿಕಾರ ಹಂಚಿಕೆ. ಈ ಸಂಧಾನ ಸೂತ್ರ ಮುಂದಿಡುವ ಸಾಧ್ಯತೆ ಇದೆ ಎಂಬ ಮಾತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಯಾರಾಗ್ತಾರೆ ಮುಖ್ಯಮಂತ್ರಿ..?

    ಡಿಕೆಶಿ ಇದ್ಯಾವುದಕ್ಕೂ ಒಪ್ಪದಿದ್ದರೆ ಸಿದ್ದರಾಮಯ್ಯ ಸಹ ತಮ್ಮ ಪಟ್ಟಿನಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ. ಸಿದ್ದರಾಮಯ್ಯ ಸಂಧಾನ ಸೂತ್ರಕ್ಕೆ ಡಿಕೆಶಿ ಒಪ್ಪದಿದ್ದರೆ ಶಾಸಕರ ತಲೆ ಎಣಿಕೆ‌ ಅಸ್ತ್ರ ಬಳಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

    ಶಾಸಕರ ಸಭೆ ಕರೆದು ಅವರ ಮೂಲಕವೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಲಿ ಎಂದು ಸಿದ್ದು ಪಟ್ಟು ಹಿಡಿಯಲು ತೀರ್ಮಾನಿಸಿದ್ದಾರೆ. ಶಾಸಕರೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಿ. ಆಯ್ಕೆ ಆದವರು ಮುಂದಿನ 5 ವರ್ಷ ಸಿಎಂ ಆಗಲಿ ಎಂದು ಸಿದ್ದು ಪಟ್ಟು ಹಿಡಿಯಬಹುದು. ಇದೇ ವಿಚಾರವನ್ನ ಸ್ಪಷ್ಟವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ನಿಲುವೇನು ಎಂಬುದನ್ನ ಮಲ್ಲಿಕಾರ್ಜುನ ಖರ್ಗೆ ಮೂಲಕ ಸೋನಿಯ ಹಾಗೂ ರಾಹುಲ್ ಗಾಂಧಿಗೆ ತಲುಪಿಸಲು ಸಿದ್ದು ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಸಹಕಾರ ಕೊಡುವ ವಿಶ್ವಾಸವಿದೆ: ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ