Tag: ಸಿಎಂ ಉದ್ಧವ್ ಠಾಕ್ರೆ

  • ಠಾಕ್ರೆ ಪತ್ನಿಯನ್ನು “ಮರಾಠಿ ರಾಬ್ರಿ ದೇವಿ” ಅಂದ ಬಿಜೆಪಿ ಕಾರ್ಯಕರ್ತ – ಮುಂಬೈ ಪೊಲೀಸರಿಂದ ಸಮನ್ಸ್

    ಠಾಕ್ರೆ ಪತ್ನಿಯನ್ನು “ಮರಾಠಿ ರಾಬ್ರಿ ದೇವಿ” ಅಂದ ಬಿಜೆಪಿ ಕಾರ್ಯಕರ್ತ – ಮುಂಬೈ ಪೊಲೀಸರಿಂದ ಸಮನ್ಸ್

    ಮುಂಬೈ: ಮಹಾರಾಷ್ಟ್ರ ಬಿಜೆಪಿ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿಯನ್ನು “ಮರಾಠಿ ರಾಬ್ರಿ ದೇವಿ” ಎಂದು ಕರೆಯುವ ಮೂಲಕ ಟ್ವೀಟ್ ಮಾಡಿದ್ದು, ಈ ಪೋಸ್ಟ್ ಇದೀಗ ಭಾರೀ ವಿವಾದ ಸೃಷ್ಟಿಸಿದೆ.

    ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರಿಗೆ ರಶ್ಮಿ ಠಾಕ್ರೆ ಅವರನ್ನು ಹೋಲಿಸಿದ ಆರೋಪದಡಿ ಮುಂಬೈ ಪೊಲೀಸರು ಗುರುವಾರ ಬಿಜೆಪಿ ಕಾರ್ಯಕರ್ತ ಜಿತೇನ್ ಗಜಾರಿಯಾ ಅವರಿಗೆ ಸಮನ್ಸ್ ನೀಡಿದ್ದಾರೆ. ಬಿಜೆಪಿ ಸೋಶಿಯಲ್ ಮೀಡಿಯಾ ವಿಭಾಗದ ಜಿತೇನ್ ಗಜಾರಿಯಾ ಆಕ್ಷೇಪಾರ್ಹ ಟ್ವೀಟ್ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ರಶ್ಮಿ ಠಾಕ್ರೆ ಅವರ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ರಾಬ್ರಿ ದೇವಿ ಎಂದು ಜಿತೇನ್ ಗಜಾರಿಯಾ ಟ್ವೀಟ್ ಮಾಡಿದ್ದರು. ಈ ಹೇಳಿಕೆ ಕುರಿತಂತೆ ಗಜಾರಿಯಾ ಅವರನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ಗೆ ವಿಚಾರಣೆಗೆ ಪೊಲೀಸರು ಕರೆಸಿರುವುದಾಗಿ ಮುಂಬೈ ವಕ್ತಾರ ವಿವೇಕಾನಂದ ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಮತ್ತೊಂದೆಡೆ ಬೆನ್ನು ಮೂಳೆಯ ಸಮಸ್ಯೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ಉದ್ಧವ್ ಠಾಕ್ರೆ ಅವರು ಅಸ್ವಸ್ಥರಾಗಿರುವ ಕಾರಣ ಮಹಾರಾಷ್ಟ್ರದ ಹಲವು ಬಿಜೆಪಿ ನಾಯಕರು, ಠಾಕ್ರೆ ಅವರಿಗೆ ತಮ್ಮ ಶಿವಸೇನೆ ಸಹೋದ್ಯೋಗಿಗಳು, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರಲ್ಲಿ ನಂಬಿಕೆ ಇಲ್ಲದಿದ್ದರೆ, ಅವರ ಪತ್ನಿ ಅಥವಾ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮಹಾರಾಷ್ಟ್ರದ ಸಿಎಂ ಆಗಿ ನೇಮಿಸಬೇಕು ಎಂದು ಪತ್ತಾಯಿಸುತ್ತಿದ್ದಾರೆ.

  • ಮಹಾರಾಷ್ಟ್ರದ ಶಾಲಾ ಶುಲ್ಕದಲ್ಲಿ ಶೇ.15ರಷ್ಟು ಕಡಿತ

    ಮಹಾರಾಷ್ಟ್ರದ ಶಾಲಾ ಶುಲ್ಕದಲ್ಲಿ ಶೇ.15ರಷ್ಟು ಕಡಿತ

    ಮುಂಬೈ: ಕೊರೊನಾದಿಂದಾಗಿ ಮುಚ್ಚಿದ್ದ ಶಾಲಾ ಕಾಲೇಜುಗಳು ಮತ್ತೆ ಪುನರಾರಂಭವಾಗುತ್ತಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕದಲ್ಲಿ ಶೇ.15 ಕಡಿತಗೊಳಿಸುವಂತೆ ಆದೇಶ ಹೊರಡಿಸಿದೆ.

    ಈಗಾಗಲೇ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಾವತಿ ಮಾಡಿಸಿಕೊಂಡಿದ್ದರೆ, ಅದರಲ್ಲಿ ಶೇ.15 ಶುಲ್ಕವನ್ನು ಮರುಪಾವತಿ ಮಾಡುವಂತೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದನ್ನೂ ಓದಿ: ಗುಜರಾತ ರಾಜಕಾರಣದಲ್ಲಿ ಸೆಕ್ಸ್ ಸಿಡಿ ಸದ್ದು – ಬಿಜೆಪಿ ಸಂಸದನ ಪುತ್ರರಿಂದ ದೂರು ದಾಖಲು

    ಶಾಲೆಗಳಲ್ಲಿ ಕಟ್ಟಿಸಿಕೊಂಡಿರುವ ಶುಲ್ಕವನ್ನು ಶೇ.15 ಕಡಿತಗೊಳಿಸಿದ್ದು, ಖಾಸಗಿ ಶಾಲೆಗಳು ಮತ್ತು ಸರ್ಕಾರದ ಅನುದಾನ ರಹಿತ ಶಾಲೆಗಳು ಕೂಡ ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿ ತಿಳಿಸಿದ್ದು, ಈ ಆದೇಶದಿಂದಾಗಿ ಹಲವಾರು ಮಕ್ಕಳ ಪೋಷಕರಿಗೆ ವರದಾನವಾಗಿದೆ. ಕೊರೊನಾ ಕಷ್ಟಕಾಲದಲ್ಲಿ ಶಾಲಾ ಶುಲ್ಕ ಕಟ್ಟಲು ಪರದಾಡುತ್ತಿದ್ದ ಮಕ್ಕಳ ಪೋಷಕರು ಈ ಆದೇಶವನ್ನು ಸ್ವಾಗತಿಸಿದ್ದಾರೆ.

  • ಪ್ರಧಾನಿಗಳನ್ನ ಭೇಟಿಯಾಗಿದ್ದು, ನವಾಜ್ ಶರೀಫ್‍ರನಲ್ಲ: ಸಿಎಂ ಠಾಕ್ರೆ

    ಪ್ರಧಾನಿಗಳನ್ನ ಭೇಟಿಯಾಗಿದ್ದು, ನವಾಜ್ ಶರೀಫ್‍ರನಲ್ಲ: ಸಿಎಂ ಠಾಕ್ರೆ

    ನವ ದೆಹಲಿ: ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿದ್ದೇನೆ, ಹೊರತು ನವಾಜ್ ಶರೀಫ್ ರನಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

    ಕೊರೊನಾ ಸಂಕಷ್ಟದ ನಡುವೆ ಇಂದು ಪ್ರಧಾನಿಗಳನ್ನು ಸಿಎಂ ಉದ್ಧವ್ ಠಾಕ್ರೆ ಭೇಟಿಯಾದರು. ಭೇಟಿ ವೇಳೆ ಕರೊನಾ ನಿರ್ವಹಣೆ, ಲಸಿಕಾಕರಣ ಮತ್ತು ಮರಾಠ ಆರಕ್ಷಣ ಕುರಿತು ಚರ್ಚೆ ನಡೆದಿದೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಸಿಎಂ ಉದ್ಧವ್ ಠಾಕ್ರೆ ಮಾತನಾಡಿದರು. ಈ ವೇಳೆ ದಿಢೀರ್ ಭೇಟಿಗೆ ಕಾರಣ ಏನು ಪ್ರಶ್ನೆಗೆ ಉತ್ತರಿಸಿದ ಸಿಎಂ ಠಾಕ್ರೆ, ನಾನು ನಮ್ಮ ಪ್ರಧಾನಿಗಳನ್ನ ಭೇಟಿಯಾಗಿದ್ದೇನೆಯೇ ಹೊರತು ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಜ್ ಶರೀಫ್ ಅವರನಲ್ಲ ಎಂದು ಉತ್ತರಿಸಿದರು.

    ರಾಜಕೀಯ ಹೊರತಾಗಿಯೂ ಪ್ರಧಾನಿಗಳ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ. ನಾನು ಖಾಸಗಿಯಾಗಿ ಪ್ರಧಾನಿಗಳನ್ನ ಭೇಟಿಯಾದ್ರೆ ಏನು ತಪ್ಪು? ನಮ್ಮಿಬ್ಬರ ಮಧ್ಯೆ ಪನ್ ಟ ಒನ್ ಮೀಟಿಂಗ್ ನಡೆದಿದೆ ಎಂದು ತಿಳಿಸಿದರು.

    ರಾಜ್ಯದ ಎಲ್ಲ ಜನತೆಗೆ ಲಸಿಕೆ ನೀಡುವ ಅಭಿಯಾನಕ್ಕೆ ವೇಗ ನೀಡಬೇಕಿದೆ. ಕೇಂದ್ರವೇ ಉಚಿತ ಲಸಿಕೆ ನೀಡಲು ಮುಂದಾಗಿರೋದನ್ನ ಸ್ವಾಗತಿಸುತ್ತೇವೆ. ಈ ಮೊದಲು ರಾಜ್ಯಗಳಿಗೆ ಈ ಜವಾಬ್ದಾರಿ ನೀಡಿದ್ದಾಗ, ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಹಾರಾಷ್ಟ್ರದಲ್ಲಿ 18 ರಿಂದ 44 ವರ್ಷದೊಳಗಿರುವ ಜನರ ಸಂಖ್ಯೆ 6 ಕೋಟಿಗೂ ಹೆಚ್ಚಿದೆ. ನಮಗೆ ಸದ್ಯ 12 ಕೋಟಿ ಡೋಸ್ ಬೇಕಿದ್ದು, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿದರು.

    ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚನೆ ಮಾಡಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಜಗಜ್ಜಾಹೀರು ಆಗಿತ್ತು. ಕೇಂದ್ರದ ನಡೆ ಪ್ರಶ್ನಿಸಿ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿತ್ತು.

  • ನಾಚಿಕೆ ಆಗ್ಬೇಕು, ನಾನು ನಿಮ್ಮ ಮಗನ ವಯಸ್ಸಿನವಳು: ಠಾಕ್ರೆಗೆ ಕಂಗನಾ ತಿರುಗೇಟು

    ನಾಚಿಕೆ ಆಗ್ಬೇಕು, ನಾನು ನಿಮ್ಮ ಮಗನ ವಯಸ್ಸಿನವಳು: ಠಾಕ್ರೆಗೆ ಕಂಗನಾ ತಿರುಗೇಟು

    – ಸಿಎಂ ಸ್ಥಾನದಲ್ಲಿರಲು ಠಾಕ್ರೆ ಯೋಗ್ಯರಲ್ಲ
    – ನಿಮ್ಮ ಕೊಳಕು ಭಾಷಣ, ಅಯೋಗ್ಯತನದ ಪ್ರತೀಕ

    ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮತ್ತೆ ಮುನ್ನಲೆಗೆ ಬಂದಿದೆ. ಭಾನುವಾರ ದಸರಾ ಸಮಾವೇಶದಲ್ಲಿ ಸಿಎಂ ನೀಡಿದ ಹೇಳಿಕೆಯನ್ನ ಖಂಡಿಸಿರುವ ಮಣಿಕರ್ಣಿಕಾ ಸಾಲು ಸಾಲು ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದ್ದಾರೆ.

    ಸಂಜಯ್ ರಾವತ್ ನನ್ನನ್ನು ಹರಾಮ್‍ಕೋರ್ ಅಂದ, ಉದ್ಧವ್ ನನಗೆ ನಮಕ್ ಹರಾಮ್ ಅಂತ ಹೇಳಿದ್ದಾನೆ. ಮುಂಬೈನಲ್ಲಿ ನನಗೆ ಆಶ್ರಯ ಸಿಗದಿದ್ರೆ ನನಗೆ ಊಟವೇ ಸಿಗುತ್ತಿರಲಿಲ್ಲ ಅಂತಾ ಹೇಳ್ತಿದ್ದಾರೆ. ನಿಮಗೆ ನಾಚಿಕೆ ಆಗಬೇಕು, ನಾನು ನಿಮ್ಮ ಮಗನ ವಯಸ್ಸಿನ ಸ್ವಾವಲಂಭಿ ಮಹಿಳೆ. ನಿಮ್ಮ ವ್ಯಕ್ತಿತ್ವವನ್ನ ನೀವು ನೀಡಿದ ಹೇಳಿಕೆಗಳು ತೋರಿಸುತ್ತಿವೆ. ಸ್ವಜನಪಕ್ಷಪಾತದ ಅತಿ ಕೆಟ್ಟ ಉತ್ಪನ್ನವೇ ಮುಖ್ಯಮಂತ್ರಿ ಠಾಕ್ರೆ ಎಂದು ಕಂಗನಾ ಮತ್ತೆ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಕಂಗನಾಗೆ ಎದುರಾಯ್ತು ಮತ್ತೊಂದು ಕಂಟಕ – 10 ದಿನದಲ್ಲಿ 3 ಎಫ್‍ಐಆರ್

    ಹಿಮಾಲಯದ ಸುಂದರತೆಯನ್ನ ಎಲ್ಲ ಭಾರತೀಯರು ಅನುಭವಿಸಬಹುದು. ಹಾಗೆಯೇ ಮುಂಬೈನಲ್ಲಿರುವ ಕೆಲಸಗಳು ನಮ್ಮೆಲ್ಲರಿಗಾಗಿ ಇವೆ. ಎರಡೂ ನನ್ನ ಮನೆಗಳು. ಪ್ರಜಾಪ್ರಭುತ್ವದಲ್ಲಿ ನೀವು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಡಿ. ನಿಮ್ಮ ಕೊಳಕು ಭಾಷಣ, ನಿಮ್ಮ ಅಯೋಗ್ಯತೆಯ ಮಟ್ಟದ ಪ್ರದರ್ಶನವಾಗಿದೆ ಎಂದು ಕಂಗಣಾ ಟೀಕಿಸಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ 

    ಮುಖ್ಯಮಂತ್ರಿಯಾಗಿರುವ ಉದ್ಧವ್ ಠಾಕ್ರೆ ತನ್ನನ್ನು ತಾನು ಮಹಾರಾಷ್ಟ್ರದ ಗುತ್ತಿಗೆದಾರ ಅಂದುಕೊಂಡು ದೇಶದ ವಿಭಜನೆ ಮಾಡುತ್ತಿದ್ದಾನೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಕೇವಲ ಜನರ ಸೇವಕ, ಸರ್ವಾಧಿಕಾರಿ ಅಲ್ಲ. ಸಿಎಂ ಸ್ಥಾನ ಬದಲಾಗುತ್ತಿರುತ್ತದೆ, ಆದ್ರೆ ಠಾಕ್ರೆ ಮಹಾರಾಷ್ಟ್ರ ಕೇವಲ ತನ್ನದೇ ಎಂಬ ರೀತಿ ವರ್ತಿಸುತ್ತಿರೋದು ಏಕೆ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶದಂತೆ ತುಮಕೂರಲ್ಲಿ ಕಂಗನಾ ವಿರುದ್ಧ ಎಫ್‍ಐಆರ್

    ಸಿಎಂ ಠಾಕ್ರೆ ಹೇಳಿದ್ದೇನು?: ಕೆಲಸ ಅರಸಿಕೊಂಡು ಬಂದ ಕೆಲವರು ಮುಂಬೈಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ. ತಮ್ಮ ರಾಜ್ಯದಲ್ಲಿ ಸರಿಯಾಗಿ ಊಟ ಸಿಗದಕ್ಕೆ ಇಲ್ಲಿಗೆ ಬಂದಿರುತ್ತಾರೆ ಎಂದು ಕಂಗನಾ ವಿರುದ್ಧ ಕಿಡಿಕಾರಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

    ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಒಂದು ವರ್ಷವಾಯ್ತು. ಅಂದಿನಿಂದ ಇಂದಿನವರೆಗೂ ಕೆಲವರು ಸರ್ಕಾರ ಪತನವಾಗುತ್ತೆ ಅಂತ ಹೇಳುತ್ತಿದ್ದಾರೆ. ನಿಮಗೆ ತಾಕತ್ತು ಇದ್ರೆ ನಮ್ಮ ಸರ್ಕಾರ ಬೀಳಿಸಿ ಎಂದು ನಾನು ನಿಮಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ. ಕೆಲವರು ರಾಜ್ಯದಲ್ಲಿ ದೇವಸ್ಥಾನಗಳನ್ನು ತೆಗೆಯದಿರುವುದಕ್ಕೆ ಬಾಳಾ ಠಾಕ್ರೆ ಮತ್ತು ನನ್ನ ಹಿಂದುತ್ವ ಬೇರೆ ಎಂದು ಹೇಳುತ್ತಿದ್ದಾರೆ. ನಿಮ್ಮ ಹಿಂದುತ್ವ ಅಂದ್ರೆ ಗಂಟೆ ಬಾರಿಸುವುದು ಮತ್ತು ಭಜನೆ ಮಾಡೋದು ಎಂದರ್ಥ. ನಾವು ಇಷ್ಟು ಚಿಕ್ಕದಾಗಿ ಹಿಂದುತ್ವ ವ್ಯಾಖ್ಯಾನ ಮಾಡಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿಗೆ ಹೆಸರು ಹೇಳದೇ ತಿರುಗೇಟು ನೀಡಿದ್ದರು. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

  • ಕಂಗನಾ ಕಚೇರಿ ನೆಲಸಮ ಅರ್ಜಿ- ಸೆ.22ಕ್ಕೆ ವಿಚಾರಣೆ ಮುಂದೂಡಿಕೆ

    ಕಂಗನಾ ಕಚೇರಿ ನೆಲಸಮ ಅರ್ಜಿ- ಸೆ.22ಕ್ಕೆ ವಿಚಾರಣೆ ಮುಂದೂಡಿಕೆ

    -ಕೋರ್ಟ್ ನಲ್ಲಿ ಬಿಎಂಸಿ ಹೇಳಿದ್ದೇನು?
    -ನೆಲಸಮದಿಂದ ಕಂಗನಾಗೆ ನಷ್ಟವಾಗಿದೆಷ್ಟು?

    ಮುಂಬೈ: ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನ ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.

    ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಎಂಸಿ(ಬೃಹತ್ ಮುಂಬೈ ಕಾರ್ಪೋರೇಷನ್) ಪರ ವಕೀಲರು, ನ್ಯಾಯಾಲಯ ಬುಧವಾರ ಆದೇಶ ನೀಡಿದ ನಂತರ ಕಟ್ಟಡ ನೆಲಸಮ ಮಾಡುವ ಕೆಲಸಗಳನ್ನು ನಿಲ್ಲಿಸಲಾಗಿದೆ. ಆದ್ರೆ ಸದ್ಯವಿರುವ ಸ್ಥಿತಿಯಲ್ಲಿಯೇ ಕಟ್ಟಡವಿರುವಂತೆ ಇರಬೇಕು ಎಂದರು. ಇತ್ತ ಕಂಗನಾ ಪರ ವಕೀಲರಾದ ರಿಜ್ವಾನ್ ಸಿದ್ಧಿಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನ ಒಟ್ಟಾಗಿಸಬೇಕಿದೆ. ನನ್ನ ಕಕ್ಷಿದಾರರು ಬುಧವರ ಮುಂಬೈಗೆ ಆಗಮಿಸಿದ್ದಾರೆ. ಫೈಲ್ ಸಿದ್ಧ ಮಾಡಿಕೊಳ್ಳಲು ನ್ಯಾಯಾಲಯ ಸಮಯ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು.

    ಕಂಗನಾ ಪರ ವಕೀಲರ ವಾದ ಪ್ರತಿವಾದ ಮಂಡಿಸಿದ ಬಿಎಂಸಿ ಪರ ವಕೀಲರು, ಸೋಮವಾರದೊಳಗೆ ತಮ್ಮ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಜ್ವಾನ್ ಸಿದ್ಧಿಕಿ, ಬದಲಾವಣೆ ಕುರಿತು ಪಿಸಿಶನ್ ಫೈಲ್ ಮಾಡಬೇಕು ಎಂದರು. ವಕೀಲ ಸಿದ್ಧಿಕಿ, ಕಂಗನಾ ವರ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲ ಎಂದರು. ಕೊನೆನೆಗೆ ನ್ಯಾಯಾಲಯದ ಅರ್ಜಿ ವಿಚಾರಣೆಯನ್ನ ಸೆ.22ಕ್ಕೆ ಮುಂದೂಡಿ, ಮುಂದಿನ ಆದೇಶದವರೆಗೂ ಕಟ್ಟಡ ನೆಲಸಮ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

    ಮಾಧ್ಯಮಗಳ ಜೊತೆ ಮಾತನಾಡಿದ ವಕೀಲ ರಿಜ್ವಾನ್ ಸಿದ್ಧಿಕಿ, ಕನಸಿನ ಕಚೇರಿ ಕಟ್ಟಡ ನೆಲಸಮ ಮಾಡಿದ್ದರಿಂದ ಕಂಗನಾ ನೊಂದುಕೊಂಡಿದ್ದಾರೆ. ಆದ್ರೆ ಕಂಗನಾ ಓರ್ವ ಶಕ್ತಿಶಾಲಿ ಮಹಿಳೆಯಾಗಿದ್ದು, ಕಾನೂನಿನಲ್ಲಿ ನಂಬಿಕೆ ಹೊಂದಿದ್ದಾರೆ. ಬಿಎಂಸಿ ಅಕ್ರಮ ಪ್ರವೇಶ ನಡೆಸಿ ಕಟ್ಟಡ ಒಳಾಂಗಣವನ್ನ ಕೆಡವಿದೆ. ಬಿಎಂಸಿ ನಡೆಸಿದ ಕಾರ್ಯಚರಣೆಯಿಂದ ಕಂಗನಾ ಅವರಿಗೆ ಅಂದಾಜು 2 ಕೋಟಿ ರೂ. ನಷ್ಟವಾಗಿದೆ. ಬಿಎಂಸಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಆ್ಯಕ್ಷನ್ ತೆಗೆದುಕೊಳ್ಳುವದರ ಕುರಿತು ಚಿಂತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವಸೇನಾ ಅಲ್ಲ ಸೋನಿಯಾ ಸೇನಾ – ಮಹಾ ಸರ್ಕಾರದ ಮೇಲೆ ಮತ್ತೆ ಕಂಗನಾ ಕಿಡಿ

    ಕಟ್ಟಡದ ಒಳವಿನ್ಯಾಸ ನೆಲಸಮ ಬಳಿಕ ಇಂದು ತಮ್ಮ ಕಚೇರಿಗೆ ಕಂಗನಾ ಭೇಟಿ ನೀಡಿದ್ದರು. 10 ನಿಮಿಷ ಕಚೇರಿಯೊಳಗಿದ್ದ ಕಂಗನಾ ನಿರಾಶೆಗೊಂಡು ಹೊರ ಬಂದಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕಾರ್ ಹತ್ತಿ ಹೊರಟರು. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    ಇತ್ತ ಶಿವಸೇನೆಯ ಸಂಸದ ಸಂಜಯ್ ರಾವತ್, ಈ ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷಕ್ಕೆ ಮತ್ತು ಕಂಗನಾಗೂ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ಬಿಎಂಸಿ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಪಕ್ಷ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಳಿ ಬಂದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಕಂಗನಾ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಶಿವಸೇನೆ

    ಅಹಂಕಾರ ನೆಲಸಮ ಆಗುತ್ತೆ: ಬುಧವಾರ ಮುಂಬೈಗೆ ವೈ ದರ್ಜೆಯಲ್ಲಿ ಬಂದಿಳಿದ ಕಂಗನಾ ರಣಾವತ್ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?. ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ. ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತಾನೆ. ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ. ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ