Tag: ಸಿಎಂ ಅವಾರ್ಡ್

  • ಠಾಣೆಯನ್ನೇ ಬಾರ್ ಮಾಡಿ ಮದ್ಯ ಕುಡಿದು ಮಜಾ ಮಾಡಿದ್ದ ಪೊಲೀಸ್‍ಗೆ ಸಿಎಂ ಅವಾರ್ಡ್

    ಠಾಣೆಯನ್ನೇ ಬಾರ್ ಮಾಡಿ ಮದ್ಯ ಕುಡಿದು ಮಜಾ ಮಾಡಿದ್ದ ಪೊಲೀಸ್‍ಗೆ ಸಿಎಂ ಅವಾರ್ಡ್

    ವಿಜಯಪುರ: ಪೊಲೀಸ್ ಠಾಣೆಯನ್ನು ಬಾರ್ ಮಾಡಿ ಮದ್ಯ ಕುಡಿದು ಮಜಾ ಮಾಡಿದ್ದ ಪೊಲೀಸ್‍ಗೆ ಸಿಎಂ ಅವಾರ್ಡ್ ದೊರಕಿದೆ.

    ಒಂದು ವರ್ಷದ ಹಿಂದೆ ವಿಜಯಪುರದ ಜಲನಗರ ಪೊಲೀಸ್ ಠಾಣೆಯ ಎಎಸ್‍ಐ ಆಗಿದ್ದ ಸಿದ್ದರಾಮ ಮಾಲೇಗಾವ ಠಾಣೆಯಲ್ಲೇ ಮದ್ಯ ಸೇವನೆ ಮಾಡಿ ಅಮಾನತ್ತಾಗಿದ್ದರು. ಆದರೆ ಇದೀಗ ಎಎಸ್‍ಐ ಸಿದ್ದರಾಮ ಅವರು ಮುಖ್ಯಮಂತ್ರಿಗಳ ಪ್ರಶಸ್ತಿ ಸಿಕ್ಕಿದೆ.

    ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ದುಡಿದು ಹೆಸರು ಮಾಡಿದವರಿಗೆ ಸಿಎಂ ಅವಾರ್ಡ್ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಕೊಡುತ್ತಾರೆ. ಈ ಪದಕ ಪಡೆಯಬೇಕು ಎಂದರೆ ಜೀವಮಾನವಿಡಿ ಪ್ರಮಾಣಿಕತೆಯಿಂದ ಹಾಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಇಲಾಖೆಯಲ್ಲಿ ದುಡಿದಿರಬೇಕಾಗುತ್ತದೆ.

    ಆದರೆ ಈಗ ಠಾಣೆಯನ್ನೇ ಬಾರ್ ಮಾಡಿ ಮದ್ಯ ಕುಡಿದು ಕುಪ್ಪಳಿಸಿದ್ದ ಸಿದ್ದರಾಮಗೆ ಈ ಅವಾರ್ಡ್ ಸಿಕ್ಕಿದ್ದು ಪ್ರಾಮಾಣಿಕ ಪೊಲೀಸ್‍ರಿಗೆ ಮತ್ತು ಸಾರ್ವಜನಿಜರಿಗೆ ನೋವನ್ನುಂಟು ಮಾಡಿದೆ. ಈ ಅವರ್ಡ್‍ಗೆ ಸಿದ್ದರಾಮ ಹೆಸರನ್ನು ಶಿಫಾರಸ್ಸು ಮಾಡಿದ್ದು, ನೋಡಿದರೆ ಹಣ ಕೆಲಸ ಮಾಡಿದೆಯಾ ಎಂಬ ಅನುಮಾನವನ್ನು ಸಾರ್ವಜನಿಕರು ಮತ್ತು ನೊಂದ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv