Tag: ಸಿಎಂ ಅಭ್ಯರ್ಥಿ

  • ಗುಜರಾತ್‌ ಚುನಾವಣೆ – AAP ಸಿಎಂ ಅಭ್ಯರ್ಥಿಗೆ ಸೋಲು

    ಗುಜರಾತ್‌ ಚುನಾವಣೆ – AAP ಸಿಎಂ ಅಭ್ಯರ್ಥಿಗೆ ಸೋಲು

    ಗಾಂಧಿನಗರ: ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ (Gujarat Election) ಆಮ್‌ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಇಸುದನ್‌ ಗಧ್ವಿ (Isudan Gadhvi) ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ.

    ಗುಜರಾತ್‌ನಲ್ಲಿ ಎಎಪಿ ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಧ್ವಿ ಅವರು ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ 18,000 ಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಇದನ್ನೂ ಓದಿ: Gujarat Election Result: ಜಿಗ್ನೇಶ್‌ ಮೇವಾನಿಗೆ ಜಯ

    ನಾಲ್ಕನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್‌ನ ಹಾಲಿ ಶಾಸಕ ವಿಕ್ರಮ್ ಮೇಡಂ ಅವರಿಗಿಂತ ಗಾಧ್ವಿ ಮುನ್ನಡೆ ಸಾಧಿಸಿದ್ದರು. ಬಿಜೆಪಿಯ ಮುಲುಭಾಯ್ ಬೇರಾ ಮೂರನೇ ಸ್ಥಾನದಲ್ಲಿದ್ದರು. ಆದರೆ ನಂತರದ ಸುತ್ತಿನ ಮತ ಎಣಿಕೆಯಲ್ಲಿ ಬೇರಾ ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.

    ಗುಜರಾತ್‌ನಲ್ಲಿ ಬಿಜೆಪಿ (BJP) ದಾಖಲೆಯ ಗೆಲುವು ಸಾಧಿಸಿದೆ. ಈ ಗೆಲುವಿನ ಭಾಗವಾಗಿ ಗುಜರಾತ್‌ನ 17ನೇ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಭೂಪೇಂದ್ರ ಪಟೇಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿದ್ದ ಪಟೀದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್‍ಗೆ ಗೆಲುವು

    Live Tv
    [brid partner=56869869 player=32851 video=960834 autoplay=true]

  • Punjab Election: ಚನ್ನಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ – ರಾಹುಲ್‌ ಗಾಂಧಿ ಅಧಿಕೃತ ಘೋಷಣೆ

    Punjab Election: ಚನ್ನಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ – ರಾಹುಲ್‌ ಗಾಂಧಿ ಅಧಿಕೃತ ಘೋಷಣೆ

    ಚಂಡೀಗಢ: ಪಂಜಾಬ್‌ ಚುನಾವಣೆಯ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಚರಣ್‌ಜಿತ್‌ ಸಿಂಗ್‌ ಚನ್ನಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಧಿಕೃತವಾಗಿ ಘೋಷಿಸಿದ್ದಾರೆ.

    ಪಂಜಾಬ್‌ನ ಲೂದಿಯಾನದಲ್ಲಿ ನಡೆದ ಸಮಾರಂಭದಲ್ಲಿ ಈ ಸಂಬಂಧ ರಾಹುಲ್‌ ಗಾಂಧಿ ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಬಡತನದ ಕುಟುಂಬದಿಂದ ಬಂದವರು. ಮುಂಬರುವ ಪಂಜಾಬ್‌ ಚುನಾವಣೆಗೆ ಚನ್ನಿ ಅವರು ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಡಿ ಅಧಿಕಾರಿಗಳಿಂದ ಚರಣ್‍ಜಿತ್ ಸಿಂಗ್ ಚನ್ನಿ ಸೋದರಳಿಯನ ಬಂಧನ

    ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಚನ್ನಿ, ಎಲ್ಲರಿಗೂ ನನ್ನ ಕೃತಜ್ಞತೆಗಳು. ಇದು ನಾನು ಒಬ್ಬಂಟಿಯಾಗಿ ಹೋರಾಡಲು ಸಾಧ್ಯವಾಗದ ದೊಡ್ಡ ಯುದ್ಧ. ನನ್ನಲ್ಲಿ ಹಣವಿಲ್ಲ, ಹೋರಾಡಲು ಧೈರ್ಯವಿಲ್ಲ. ಪಂಜಾಬ್‌ನ ಜನರು ಈ ಯುದ್ಧದಲ್ಲಿ ಹೋರಾಡುತ್ತಾರೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮೊದಲು ಮಾತನಾಡಿದ್ದ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು, ರಾಹುಲ್‌ ಗಾಂಧಿಯವರ ನಿರ್ಧಾರವನ್ನು ಒಪ್ಪಿಕೊಂಡಿದ್ದೇನೆ. ಅಧಿಕಾರ ಕೊಟ್ಟರೆ ಮಾಫಿಯಾ ಮುಗಿಸುತ್ತೇನೆ, ಜನಜೀವನ ಸುಧಾರಿಸುತ್ತೇನೆ. ಅಧಿಕಾರ ನೀಡದಿದ್ದರೆ ಯಾರನ್ನು ಸಿಎಂ ಮಾಡುತ್ತೀರೋ ಅವರ ಜೊತೆಯೇ ನಗುನಗುತ್ತಾ ಸಾಗುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ನಮ್ಮಣ್ಣ ಒಬ್ಬ ಕ್ರೂರಿ ಮನುಷ್ಯ -ನವಜೋತ್ ಸಿಂಗ್ ಸಹೋದರಿ ಸುಮನ್

    ಫೆಬ್ರವರಿ 20 ರಂದು ಪಂಜಾಬ್‌ ಚುನಾವಣೆ ನಡೆಯಲಿದೆ. ನಂತರ ಮಾರ್ಚ್‌ 10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

  • ಪಂಜಾಬ್ ವಿಧಾನಸಭೆ ಚುನಾವಣೆ- ಎಎಪಿಯಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ಜೋರು

    ಪಂಜಾಬ್ ವಿಧಾನಸಭೆ ಚುನಾವಣೆ- ಎಎಪಿಯಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ಜೋರು

    ನವದೆಹಲಿ: ಪಂಜಾಬ್ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಲ್ಲಿ ಆಮ್ ಅದ್ಮಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಜೋರಾಗುತ್ತಿದೆ. ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಹೊತ್ತಲ್ಲಿ ರಾಜಕೀಯ ಪಕ್ಷಗಳಲ್ಲಾಗುತ್ತಿರುವ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.

    ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ಬಳಿಕ ಆಮ್ ಅದ್ಮಿ ಸೇರ್ಪಡೆಯಾಗಬಹುದು ಎಂದು ಪಂಜಾಬ್ ನಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎನ್ನುವ ಊಹೆಗಳು ಕೇಳಿ ಬಂದಿವೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ

    ಈ ಚರ್ಚೆಗಳ ಬೆನ್ನಲ್ಲೇ ಪಂಜಾಬ್ ಗೆ ಭೇಟಿ ನೀಡಿದ ದೆಹಲಿಯ ಸಿಎಂ ಮತ್ತು ಆಮ್ ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ನವಜೋತ್ ಸಿಂಗ್ ಸಿಧು ನಮ್ಮ ಸಂಪರ್ಕದಲ್ಲಿ ಇಲ್ಲ. ಇದೊಂದು ಊಹಾತ್ಮಕ ಪಕ್ಷ ಎಂದು ಪ್ರತಿಕ್ರಿಯಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಲೋಕಸಭಾ ಸದಸ್ಯ ಭಗವಂತ್ ಮನ್ ನನ್ನ ಕಿರಿಯ ಸಹೋದರ. ಅವರು ಪಂಜಾಬ್ ಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಈ ಹೇಳಿಕೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದ್ದು, ಭಗವಂತ್ ಮನ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

  • ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ: ಉಮೇಶ್ ಕತ್ತಿ

    ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ: ಉಮೇಶ್ ಕತ್ತಿ

    – ಸಿಎಂ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿವೆ
    – ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ನನ್ನಲ್ಲಿಲ್ಲ

    ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ವಿಚಾರವಾಗಿ, ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ ಎಂದು ಆಹಾರ ಸಚಿವ ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕತ್ತಿ, ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು, ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿ ಇವೆ. ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ನನ್ನಲ್ಲಿ ಇಲ್ಲ, ಕಳಂಕರಹಿತ ವ್ಯಕ್ತಿತ್ವ ಇದೆ. ಅದರ ಜೊತೆ ಹುಕ್ಕೇರಿ ಜನರ ಆಶೀರ್ವಾದ ಇದೆ. ರಾಜ್ಯದ ಜನ ಆಶೀರ್ವದಿಸಿದ್ರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದ್ರೆ ನಾನು ಸಿಎಂ ಆಗುವ ಆಸೆ ಉಳ್ಳವನು ಎಂದಿದ್ದಾರೆ.

    ಪಕ್ಷ ಮನಸ್ಸು ಮಾಡಿದ್ರೆ ರಾಜ್ಯದ ಸಿಎಂ ಆಗಬೇಕೆಂದು ಮನಸು ಮಾಡಿದ್ದೇನೆ. ಆದರೆ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ, ಹೀಗಾಗಿ ಅದರ ಬಗ್ಗೆ ಚರ್ಚಿಸಲ್ಲ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದೇನೆ. ರಾಜ್ಯದಲ್ಲಿ ಸಿಎಂ ಇದ್ದಾರೆ, ಸರ್ಕಾರ ಇದೇ ಒಳ್ಳೆಯ ಸರ್ಕಾರ ನಡೀತಿದೆ. ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಆದಾಗ ಆ ಬಗ್ಗೆ ವಿಚಾರ ಮಾಡುತ್ತೇನೆ. ಈಗ ಸಿಎಂ ಸ್ಥಾನ ಬದಲಾವಣೆ ಆದರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ಯಾರೇ ಸಿಎಂ ಆದರೂ ಅಖಂಡ ರಾಜ್ಯ ಆಳುವ ಸಿಎಂ ಇರಬೇಕು. ಸಿಎಂ ಹುದ್ದೆ ಖಾಲಿ ಆದ್ರೆ ಮುಂದಿನ ಅಭ್ಯರ್ಥಿ ನಾನೇ. ಸಿಎಂ ಸ್ಥಾನ ಬದಲಾವಣೆ ಆದ್ರೆ ನಂದೇ ನಂಬರ್ ಇದೆ. ಅವಧಿ ಮತ್ತು ಕಳಂಕರಹಿತ ಎಲ್ಲ ಅರ್ಹತೆ ಇರುವ ಕ್ಯಾಂಡಿಡೇಟ್ ನಾನು. ನಸೀಬ್ ಗಟ್ಟಿ ಇದ್ರೆ, ಹೈಕಮಾಂಡ್ ನಿರ್ಣಯ ಮಾಡಿದರೆ ನಾನು ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದೇನೆ. ಈ ಬಗ್ಗೆ ಬೆಳಗಾವಿಯಲ್ಲಿ ನಾನು ಯಾವುದೇ ಸಭೆ ಮಾಡಿಲ್ಲ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನೀವೇ ಹೇಳುತ್ತಿದ್ದೀರಿ. ಯತ್ನಾಳ್ ಬೆಳಗಾವಿಗೆ ಬರುತ್ತಿರುತ್ತಾರೆ. ನಾನು ವಿಜಯಪುರಕ್ಕೆ ಹೋಗುತ್ತಿರುತ್ತೇನೆ. ಎಲ್ಲರೂ ಕೂಡಿ ಊಟ ಮಾಡಿದ್ದೇವೆ ವಿನಃ ನಾವು ಯಾವುದೇ ಸಭೆ ಮಾಡಿಲ್ಲ ಎಂದರು. ಇದನ್ನೂ ಓದಿ: ಸಿಎಂ ಮಾಡಿ ಅಂದವರಿಗೆ ಮೋದಿ ಕಪಾಳಕ್ಕೆ ಹೊಡಿತಾರೆ: ಯತ್ನಾಳ್

    ನಳಿನ್‍ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ನಳಿನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ಅವರು ತಮ್ಮ ಅನಿಸಿಕೆ ಹೇಳಿರಬಹುದು. ನಾನು ನಳಿನ್ ಕುಮಾರ್ ಕಟೀಲ್ ಅನಿಸಿಕೆ ನೋಡಿಲ್ಲ, ನೋಡಿದ ಮೇಲೆ ಪ್ರತಿಕ್ರಿಯಿಸುತ್ತೇನೆ. ಕಟೀಲ್ ತಮ್ಮ ಆಡಿಯೋ ಅಲ್ಲ ಅಂದಾಗ ನಾನೇನು ಪ್ರತಿಕ್ರಿಯೆ ನೀಡಲಿ. ಆ ಆಡಿಯೋ ಯಾರು ಮಾಡಿದ್ದು ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ನೀವೇ ಮಾಡಿರಬಹುದು ಎಂದು ಉಮೇಶ್ ಕತ್ತಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು. ಇದನ್ನೂ ಓದಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಬುದ್ಧರು: ಉಮೇಶ್ ಕತ್ತಿ

    ದೆಹಲಿ ಭೇಟಿ ವಿಚಾರವಾಗಿ, ಜೋಳದ ಬೆಂಬಲ ಬೆಲೆ ಚರ್ಚೆಗೆ ನಾನು 6 ಬಾರಿ ದೆಹಲಿ ಭೇಟಿ ನೀಡಿದ್ದು ನಿಜ. ಜೋಳದ ಬೆಂಬಲ ಬೆಲೆ ಮೂರುವರೆ ಸಾವಿರದಿಂದ ನಾಲ್ಕು ಸಾವಿರವರೆಗೂ ಮಾಡಬೇಕೆಂಬ ಆಸೆ ಇದೆ ಎಂದು ನುಡಿದರು.

  • ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ: ರೇವಣ್ಣ

    ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ: ರೇವಣ್ಣ

    ಹಾಸನ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ. ನಮ್ಮಲ್ಲಿ ಕಚ್ಚಾಟವಿಲ್ಲ, ಆರಾಮಾಗಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಅಧಿಕಾರ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇವೆ, ಇಲ್ಲ ಸುಮ್ಮನ್ನಿರುತ್ತೇವೆ. ಈ ಹಿಂದೆ ಅಧಿಕಾರ ಕೊಟ್ಟಿದ್ದರು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ನಾನು ಮುಖ್ಯಮಂತ್ರಿ ಎಂದು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ ಎಂದು ತಿಳಿಸಿದರು.

    ಕೋವಿಡ್ ಹೆಸರಿನಲ್ಲಿ ಗ್ರಾ.ಪಂ. ಅನುದಾನವನ್ನು ಕಡಿತ ಮಾಡಿದ್ದಾರೆ, ಎಂಎಲ್‍ಎ ಅನುದಾನವನ್ನು ಕೊಟ್ಟಿಲ್ಲ. ಗ್ರಾಮ ಪಂಚಾಯಿತಿಯ ಹಕ್ಕನ್ನು ಕಸಿದುಕೊಳ್ಳಬೇಡಿ. ಸರ್ಕಾರ ಇದನ್ನು ಸರಿಪಡಿಸದಿದ್ದರೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಒಳಗೊಂಡಂತೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ನಂತರ ರಾಜ್ಯಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

    ಸರ್ಕಾರಕ್ಕೆ ನಾಚಿಕೆಯಾಗಬೇಕು, ಇದನ್ನು ಸರ್ಕಾರ ಎನ್ನುತ್ತಾರಾ? ಸರ್ಕಾರ ಲೂಟಿಕೋರರ ಕೈಸೇರಿದೆ, ಕೊರೊನಾ ಹೆಸರಿನಲ್ಲಿ ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ. ಮೋದಿಯವರೇ ಸರ್ಕಾರವನ್ನು ಲೂಟಿಕೋರರ ಕೈಗೆ ಕೊಟ್ಟಿದ್ದೀರಾ, ಕೇಂದ್ರ ಸರ್ಕಾರ ನೀಡುವ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ, ಅಚ್ಛೆ ದಿನ್ ಬರುತ್ತೆ ಎಂದು ಮೋದಿ ಹೇಳುತ್ತಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ವರದಿ ತರಿಸಿಕೊಳ್ಳಿ. ಇದು ದಪ್ಪ, ಎಮ್ಮೆ ಚರ್ಮದ ಸರ್ಕಾರ. ಸರ್ಕಾರಕ್ಕೂ ಕೊರೊನಾ ಇದೆಯೋ ಗೊತ್ತಿಲ್ಲ, ಅದನ್ನು ರಿಪೇರಿ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜೆಡಿಎಸ್ ಸದಸ್ಯರಿಂದ ಬಿಜೆಪಿಗೆ ಬೆಂಬಲ
    ಅರಸೀಕೆರೆ ನಗರಸಭೆಯ 7 ಜೆಡಿಎಸ್ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯ ಬಂಡಾಯ ಬಾವುಟ ಹಾರಿಸಿದ್ದಾರೆ. ತಮಗೆ ಪ್ರತ್ಯೇಕ ಆಸನ ನೀಡುವಂತೆ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 31 ಸದಸ್ಯರನ್ನು ಒಳಗೊಂಡಿರುವ ಅರಸೀಕೆರೆ ನಗರಸಭೆಯಲ್ಲಿ 21 ಮಂದಿ ಜೆಡಿಎಸ್ ನಿಂದ ಗೆದ್ದುಬಂದಿದ್ದು, ಬಿಜೆಪಿಯಿಂದ 6 ಹಾಗೂ ಪಕ್ಷೇತರ 3 ಮತ್ತು ಕಾಂಗ್ರೆಸ್ ಒಬ್ಬರು ಆಯ್ಕೆಯಾಗಿದ್ದಾರೆ.

    ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ಧ ಮುನಿಸಿಕೊಡಿರುವ ಜೆಡಿಎಸ್‍ನ ಏಳು ಸದಸ್ಯರು, ತಮಗೆ ಯಾವುದೇ ರೀತಿ ಸ್ಪಂದನೆಯನ್ನು ಈಗಿರೋ ನಾಯಕರು ನೀಡುತ್ತಿಲ್ಲ. ಮೀಸಲಾತಿಯನ್ವಯ ಈಗ ಬಿಜೆಪಿಯವರು ಅರಸೀಕೆರೆ ನಗರಸಭೆ ಅಧ್ಯಕ್ಷರಾಗಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡಬೇಕಾದರೆ ನಮ್ಮೆಲ್ಲರ ಸಹಕಾರ ಬೇಕಾಗಿರುತ್ತದೆ. ಇದರಿಂದ ನಾವೂ ಉತ್ತಮವಾಗಿ ಜನಸೇವೆ ಮಾಡಬಹುದು ಎಂಬ ಕಾರಣ ನೀಡಿ, ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿ, ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಡಿಸಿಗೆ ಮನವಿ ಮಾಡಿದ್ದಾರೆ. ಜೊತೆಗೆ ಅರಸೀಕೆರೆ ನಗರಸಭೆಗೆ ಜೆಡಿಎಸ್‍ನಿಂದ 21 ಜನ ಆಯ್ಕೆಯಾಗಿದ್ದು, ಆ ಸಂಖ್ಯೆಯ ಮೂರನೇ ಒಂದು ಭಾಗವಾಗಿ ನಾವು ಏಳುಜನ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯನ್ನು ನೀಡಿದ್ದೇವೆ. ಹೀಗಾಗಿ ನಾವು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದಂತೆ ಆಗುವುದಿಲ್ಲ ಎನ್ನುತ್ತಿದ್ದಾರೆ.

    ಶಿವಲಿಂಗೇಗೌಡ ಆಕ್ರೋಶ
    ಈ ಬೆಳವಣಿಗೆಯಿಂದ ಕೆರಳಿದ ಶಾಸಕ ಶಿವಲಿಂಗೇಗೌಡ, ಈ ರಾಜಕೀಯ ಕುಚೇಷ್ಟೆ ಹಿಂದೆ ನೇರವಾಗಿ ಬಿಜೆಪಿ ಇದೆ ಎಂದು ಆರೋಪ ಮಾಡಿದ್ದಾರೆ. ಜೊತೆಗೆ ಅರಸೀಕೆರೆಗೆ ರಾಜಕೀಯ ಆಸರೆ ಪಡೆಯಲು ಬಂದವರೊಬ್ಬರು ಇದನ್ನೆಲ್ಲ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನೇ ಕೆಡವಿದವರಿಗೆ ಅರಸೀಕೆರೆ ನಗರಸಭೆ ಕೆಡವಲು ಆಗಲ್ವೇ ಎಂದು ಪರೋಕ್ಷವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ರಾಜಕೀಯ ದಾಳದ ಬಗ್ಗೆ ತಿರುಗಿಬಿದ್ದಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಈ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಅರಸೀಕೆರೆಯಲ್ಲಿ ಜೆಡಿಎಸ್ ಸಂಖ್ಯಾ ಬಲ ಜಾಸ್ತಿ ಇದ್ದರೂ ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಅಲಂಕರಿಸಿದ್ದಾರೆ. ಆದರೆ ಜೆಡಿಎಸ್ ಭದ್ರ ಕೋಟೆಯಾಗಿರುವ ಅರಸೀಕೆರೆಯಲ್ಲಿ ಬಿಜೆಪಿ ಇಷ್ಟೆಲ್ಲಾ ಕಸರತ್ತು ಮಾಡುತ್ತಿದೆ ಎಂದರೆ ಅದರ ಹಿಂದೆ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಇದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಎನ್.ಆರ್.ಸಂತೋಷ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ, ಅರಸೀಕೆರೆಯಿಂದ ಸ್ಪರ್ಧೆಗೆ ಸಿದ್ಧ ಎಂದು ಈ ಹಿಂದೆ ಕೂಡ ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೆ ನಿರಂತರವಾಗಿ ಅರಸೀಕೆರೆಯಲ್ಲಿ ಓಡಾಡುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್, ಈಗ ತೆರೆಮರೆಯಲ್ಲೇ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಜೆಡಿಎಸ್ ನಾಯಕರು ತಮ್ಮ ಸದಸ್ಯರನ್ನು ಹೇಗೆ ಮನವೊಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  • ನಾನು ಅಸ್ಸಾಂನ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ: ರಂಜನ್ ಗೊಗೊಯ್

    ನಾನು ಅಸ್ಸಾಂನ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ: ರಂಜನ್ ಗೊಗೊಯ್

    ನವದೆಹಲಿ: ನಾನು ಅಸ್ಸಾಂನ ಬಿಜೆಪಿ ಪಕ್ಷದ ಸಿಎಂ ಅಭ್ಯರ್ಥಿಯಲ್ಲ ಎಂದು ಸುಪ್ರೀಂ ಕೋರ್ಟ್‍ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.

    ಮುಂದಿನ ವರ್ಷ ಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗುವ ಅವಕಾಶವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ತರುಣ್ ಗೊಗೊಯಿ ಶನಿವಾರ ಬೆಳಗ್ಗೆ ಹೇಳಿದ್ದರು.

    ಈ ವಿಚಾರವಾಗಿ ಇಂದು ಮಾತನಾಡಿರುವ ರಂಜನ್ ಗೊಗೊಯಿಯವರು, ನಾನು ರಾಜಕಾರಣಿಯಲ್ಲ ಮತ್ತು ಅಂತಹ ಯಾವುದೇ ಮಹತ್ವಾಕಾಂಕ್ಷೆ ಅಥವಾ ಉದ್ದೇಶವನ್ನು ಹೊಂದಿಲ್ಲ. ಈ ರೀತಿಯ ವಿಚಾರದಲ್ಲಿ ಯಾರೂ ನನ್ನ ಉಲ್ಲೇಖ ಮಾಡಿಲ್ಲ ಎಂದು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶಿತರಾಗಿರುವ ಗೊಗೊಯ್ ತಿಳಿಸಿದ್ದಾರೆ. ಈ ಮೂಲಕ ತರುಣ್ ಗೊಗೊಯಿ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

    ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರಿಗೂ ಮತ್ತು ಸದನಕ್ಕೆ ಆಯ್ಕೆಯಾಗಿ ರಾಜಕೀಯ ಪಕ್ಷದ ನಾಮನಿರ್ದೇಶಿತ ವ್ಯಕ್ತಿಯ ನಡುವಿನ ವ್ಯತ್ಯಾಸವನ್ನು ಜನರು ಅರ್ಥಮಾಡಿಕೊಳ್ಳದಿರುವುದು ದುರದೃಷ್ಟಕರ. ನಾನು ಪ್ರಜ್ಞಾಪೂರ್ವಕವಾಗಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯನಾಗಲೂ ತೀರ್ಮಾನ ಮಾಡಿದ್ದೇನೆ. ಇದು ನಾನು ಸ್ವಾತಂತ್ರ್ಯವಾಗಿರಲು ಮತ್ತು ನನಗೆ ಆಸಕ್ತಿ ಇರುವ ವಿಚಾರದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಹಾಯಕವಾಗುತ್ತದೆ ಎಂದು ರಂಜನ್ ಗೊಗೊಯ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

    ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ತರುಣ್ ಗೊಗೊಯಿ ಅವರು, ಬಿಜೆಪಿ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯಿ ಅವರ ಹೆಸರಿಗೆ ಎಂಬ ಮಾಹಿತಿ ತಮ್ಮ ವಿಶ್ವಾಸನೀಯ ಮೂಲಗಳಿಂದ ಮಾಹಿತಿ ಲಭಿಸಿದೆ. ಮಾಜಿ ಸಿಐಜೆ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಮುಂಬರುವ ನಿರೀಕ್ಷಿತ ಸಿಎಂ ಅಭ್ಯರ್ಥಿಯಾಗಿಯೂ ಕೂಡ ಅವರು ಅಂಗೀಕರಿಸಬಹುದು ಎಂದಿದ್ದರು.

    `ಎಲ್ಲವೂ ರಾಜಕೀಯ. ಅಯೋಧ್ಯೆ ರಾಮಮಂದಿರ ವಿವಾದ ಕುರಿತು ರಂಜನ್ ಗೊಗೊಯಿ ನೀಡಿದ ತೀರ್ಪಿನಿಂದ ಬಿಜೆಪಿ ಸಂತೋಷದಿಂದ ಇದೆ. ಈ ಹಿನ್ನೆಲೆಯಲ್ಲೇ ಅವರು ರಾಜಕೀಯ ಪ್ರವೇಶ ಮಾಡಿ ರಾಜ್ಯಸಭಾ ಸ್ಥಾನವನ್ನು ಅಂಗೀಕರಿಸಿದ್ದರು. ರಾಜ್ಯಸಭಾ ಸದಸ್ಯ ಸ್ಥಾನ ಅವರು ಏಕೆ ನಿರಾಕರಿಸಲಿಲ್ಲ? ಸುಲಭವಾಗಿ ಮಾನವ ಹಕ್ಕುಗಳ ಕಮಿಷನ್‍ನಲ್ಲಿ ಅಧ್ಯಕ್ಷರಾಗಬಹುದಿತ್ತು. ಅವರಿಗೆ ರಾಜಕೀಯ ಆಶ್ರಯವಿದ್ದು, ಆದ್ದರಿಂದಲೇ ನಾಮಿನೇಷನ್ ಅಂಗೀಕರಿಸಿದ್ದರು’ ಎಂದು ತರುಣ್ ಗೊಗೊಯಿ ಕಿಡಿಕಾರಿದ್ದರು.