Tag: ಸಿಇಒ

  • ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

    ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

    ವಾಷಿಂಗ್ಟನ್‌: ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್‌ ಖರೀದಿಸಿರುವ ಎಲಾನ್‌ ಮಸ್ಕ್‌, ಈಗ ತಾತ್ಕಾಲಿಕವಾಗಿ ತಾವೇ ಸಿಇಒ ಆಗಲಿದ್ದಾರೆ.

    ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್ ಅವರು ಟೆಸ್ಲಾ ಕಂಪನಿಯ ಸಿಇಒ ಆಗಿದ್ದಾರೆ. ದಿ ಬೋರಿಂಗ್ ಕಂಪನಿ ಮತ್ತು ಸ್ಪೇಸ್‌ಎಕ್ಸ್‌ನ ಇತರ ಎರಡು ಉದ್ಯಮಗಳ ಮುಖ್ಯಸ್ಥರು ಕೂಡ ಆಗಿದ್ದಾರೆ. ತಮ್ಮದೇ ಒಡೆತನಕ್ಕೆ ಸೇರಿರುವ ಟ್ವಿಟ್ಟರ್‌ ಸಿಇಒ ಕೂಡ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮಗೆ ನಿಮ್ಮ ಸಲಹೆ ಬೇಡ: ನೆದರ್ಲೆಂಡ್‌ಗೆ ತಿರುಗೇಟು ನೀಡಿದ ಭಾರತ

    ನವೆಂಬರ್‌ನಲ್ಲಿ ಟ್ವಿಟ್ಟರ್‌ನ ಸಿಇಒ ಆಗಿ ನೇಮಕಗೊಂಡಿದ್ದ ಪರಾಗ್ ಅಗರವಾಲ್, ಮಸ್ಕ್‌ಗೆ ಕಂಪನಿಯ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಇಂಟೀರಿಯಮ್‌ ಬೇಸಿಸ್‌ ಮೇಲೆ ಟ್ವಿಟ್ಟರ್‌ನ ಸಿಇಒ ಆಗಲು ಮಸ್ಕ್ ಯೋಜಿಸಿದ್ದಾರೆ ಎಂದು ಸಿಎನ್‌ಬಿಸಿ ಗುರುವಾರ ವರದಿ ಮಾಡಿದೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ಇತ್ತೀಚೆಗೆ ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್‌ ಮಸ್ಕ್‌ 44 ಮಿಲಿಯನ್‌ ಡಾಲರ್ (3.36 ಲಕ್ಷ ಕೋಟಿ ರೂ.‌ಗೆ) ಟ್ವಿಟ್ಟರ್‌ ಖರೀದಿಸಿದರು. ಪೂರ್ತಿ ಷೇರು ಖರೀದಿಸಿ, ಕಂಪನಿಯನ್ನೇ ತನ್ನದಾಗಿಸಿಕೊಳ್ಳುವ ಮೂಲಕ ಮಸ್ಕ್‌ ಸುದ್ದಿಯಾಗಿದ್ದರು.

  • ಸೀನಿಯರ್ ಉದ್ಯೋಗಿಗಳಿಗೆ BMW ಕಾರ್ ಗಿಫ್ಟ್ ನೀಡಿದ ಐಟಿ ಕಂಪನಿ ಸಿಇಒ

    ಸೀನಿಯರ್ ಉದ್ಯೋಗಿಗಳಿಗೆ BMW ಕಾರ್ ಗಿಫ್ಟ್ ನೀಡಿದ ಐಟಿ ಕಂಪನಿ ಸಿಇಒ

    ಚೆನ್ನೈ: ಐಟಿ ಕಂಪನಿ ಸಿಇಒ, ಸೀನಿಯರ್  ಐದು ಮಂದಿ ಉದ್ಯೋಗಿಗಳಿಗೆ ದುಬಾರಿ ಬೆಲೆ ಬಾಳುವ ಬಿಎಮ್‍ಡಬ್ಲ್ಯೂ ಕಾರ್ ಉಡುಗೊರೆ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ತಮ್ಮ ಕೈಬಿಡದೆ ಜೊತೆಗಿದ್ದು, ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಐವರು ಸೀನಿಯರ್ ಉದ್ಯೋಗಿಗಳಿಗೆ ಚೆನ್ನೈ ಮೂಲದ ಕಿಸ್ ಫ್ಲೋ ಇಂಕ್ (Kissflow Inc)  ಎನ್ನುವ ಐಟಿ ಕಂಪನಿ, ಸಿಇಒ ಸುರೇಶ್ ಸಂಬಂದಂ ಅವರು BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

    BMW ಕಾರಿನ ಬೆಲೆ 1 ಕೋಟಿ ರೂ. ಕಾರು ಉಡುಗೊರೆಯಾಗಿ ನೀಡುವ ವಿಚಾರವನ್ನು ಗೌಪ್ಯವಾಗಿರಿಸಲಾಗಿತ್ತು. ನಂತರ ಉಡುಗೊರೆ ನೀಡುವುದಕ್ಕೆ ಕೆಲವೇ ಗಂಟೆ ಮೊದಲು ಉದ್ಯೋಗಿಗಳಿಗೆ ತಿಳಿಸಲಾಗಿತ್ತು. ಕಾರು ನೀಡುವ ಸಂದರ್ಭ ಉದ್ಯೋಗಿಗಳ ಕುಟುಂಬಸ್ಥರೂ ಜೊತೆಗಿದ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ

    ಅನೇಕ ಸೀನಿಯರ್ ಉದ್ಯೋಗಿಗಳು ಕಂಪನಿ ಬೆಳೆಯುವುದಿಲ್ಲವೆಂದು ಅರ್ಧಕ್ಕೆ ಕೆಲಸ ಬಿಟ್ಟು ಬೇರೆ ಕಂಪನಿ ಸೇರಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಅನೇಕ ಮಂದಿ ಸಂಸ್ಥೆ ತೊರೆದಿದ್ದರು. ಆದರೆ ಐವರು ಮಂದಿ ಎಂಥ ಸಮಸ್ಯೆ ಎದುರಾದಾಗಲೂ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ ಎಂದು ಸಿಇಒ ಹೇಳಿದ್ದಾರೆ.

  • ಏರ್ ಇಂಡಿಯಾ ಸಿಇಒ ಹುದ್ದೆ ನಿರಾಕರಿಸಿದ ಟರ್ಕಿಶ್ ಏರ್‌ಲೈನ್ಸ್‌ ಮಾಜಿ ಅಧ್ಯಕ್ಷ

    ನವದೆಹಲಿ: ಏರ್ ಇಂಡಿಯಾ ತನ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಲು ಟರ್ಕಿಶ್ ಏರ್‍ಲೈನ್ಸ್‍ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿ ಅವರಿಗೆ ಅವಕಾಶ ನೀಡಿತ್ತು. ಆದರೆ ಟಾಟಾ ಗ್ರೂಪ್‍ನ ಪ್ರಸ್ತಾಪವನ್ನು ಐಸಿ ನಿರಾಕರಿಸಿದ್ದಾರೆ.

    ಫೆಬ್ರವರಿ 14ರಂದು ಟಾಟಾ ಸನ್ಸ್ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವುದಾಗಿ ಘೋಷಿಸಿತ್ತು. ಆದರೆ ಈ ಅವಕಾಶವನ್ನು ಐಸಿ ನಿರಾಕರಿಸಿದ್ದಾರೆ ಎಂದು ಏರ್ ಇಂಡಿಯಾ ಮಂಗಳವಾರ ತಿಳಿಸಿದೆ. ಇದನ್ನೂ ಓದಿ: Microsoft ಸಿಇಒ ಸತ್ಯ ನಾಡೆಲ್ಲಾ ಪುತ್ರ ನಿಧನ!

    ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕನಾಗಿ ಇಲ್ಕರ್ ಐಸಿ ಅವರನ್ನು ನೇಮಕ ಮಾಡಲು ಸರ್ಕಾರ ಅನುಮತಿ ನೀಡಬಾರದು ಎಂದು ಆರ್‍ಎಸ್‍ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣಾ ವೇದಿಕೆ ಕಳೆದ ಶುಕ್ರವಾರ ಹೇಳಿತ್ತು. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    ಇದೀಗ ಟಾಟಾ ಸನ್ಸ್‍ನಿಂದ ನೇಮಕಗೊಂಡ ಕೇವಲ 2 ವಾರಗಳ ಬಳಿಕ ಐಸಿ ಏರ್ ಇಂಡಿಯಾದ ಸಿಇಒ ಹುದ್ದೆಯನ್ನು ನಿರಾಕರಿಸಿದ್ದಾರೆ.

  • Microsoft ಸಿಇಒ ಸತ್ಯ ನಾಡೆಲ್ಲಾ ಪುತ್ರ ನಿಧನ!

    Microsoft ಸಿಇಒ ಸತ್ಯ ನಾಡೆಲ್ಲಾ ಪುತ್ರ ನಿಧನ!

    ವಾಷಿಂಗ್ಟನ್‌: ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸತ್ಯ ನಾಡೆಲ್ಲಾ ಅವರ ಪುತ್ರ ಜೈನ್ ನಾಡೆಲ್ಲಾ ಸೋಮವಾರ ನಿಧನರಾಗಿದ್ದಾರೆ.

    ಸತ್ಯ ನಾಡೆಲ್ಲಾ ಪುತ್ರ ಜೈನ್ ನಾಡೆಲ್ಲಾ ಕೇವಲ 26 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೈನ್ ನಾಡೆಲ್ಲಾ ಹುಟ್ಟಿನಿಂದ ಝೈನ್ ಸೆರೆಬ್ರಲ್ ಪಾಲ್ಸಿ ಕಾಯಿಲೆ(ಸ್ನಾಯು ಸಂಬಂಧಿ ಅಸ್ವಸ್ಥತೆ) ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್‍ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾದಿಂದ ಫಿರಂಗಿ ದಾಳಿ

     

    ಮೈಕ್ರೋಸಾಫ್ಟ್ ಸಿಇಒ ಸೋಮವಾರ ತನ್ನ ಸಿಬ್ಬಂದಿಗೆ ಇಮೇಲ್ ಮೂಲಕ ದುಃಖಕರ ವಿಚಾರವನ್ನು ತಿಳಿಸಿದ್ದಾರೆ. ಸಾಫ್ಟ್‍ವೇರ್ ಕಂಪನಿಯ ಇಮೇಲ್‍ನಲ್ಲಿ ಝೈನ್ ನಿಧನ ಹೊಂದಿದ್ದಾರೆ. ಕುಟುಂಬಕ್ಕೆ ಖಾಸಗಿಯಾಗಿ ದುಃಖಿಸಲು ಸಮಯ, ಅವಕಾಶ ನೀಡುವಂತೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಂಕರ್‌ನ ಕರಾಳ ಪರಿಸ್ಥಿತಿ ಬಿಚ್ಚಿಟ್ಟ ರಾಯಚೂರು ವಿದ್ಯಾರ್ಥಿ

  • ಐಪಿಎಲ್ 2022: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

    ಐಪಿಎಲ್ 2022: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

    ಬೆಂಗಳೂರು: ಕೋಲ್ಕತ್ತಾ ನೈಟ್ ರೈಡರ್ಸ್ ಬುಧವಾರ ಫೆಬ್ರವರಿ 16ರಂದು ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮುಂಬರುವ ಆವೃತ್ತಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.

    ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅವರನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದೇವೆ. ಕೆಕೆಆರ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ಶ್ರೇಯಸ್ ಅವರಿಗೆ ನೀಡಲು ನಾವು ಸಂತೋಷಪಡುತ್ತೇವೆ. ಅವರು ಈಗಾಗಲೇ ಒಬ್ಬ ಒಳ್ಳೆಯ ಗುಣಮಟ್ಟದ ಬ್ಯಾಟ್ಸ್‌ಮನ್ ಆಗಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಅವರು ತಂಡದ ನಾಯಕರಾಗಿ ಮಿಂಚುತ್ತಾರೆ ಅಂತ ನಮಗೆ ವಿಶ್ವಾಸವಿದೆ ಎಂದು ಕೆಕೆಆರ್ ತಂಡದ (ಸಿಇಒ) ಮತ್ತು ಎಂಡಿ ವೆಂಕಿ ಮೈಸೂರು ಅವರು ಟ್ವೀಟ್ ಮಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಶ್ರೇಯಸ್ ಅಯ್ಯರ್ ಅವರು ಭಾರತದ ಉಜ್ವಲ ಭವಿಷ್ಯದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಕೆಕೆಆರ್ ತಂಡದ ನಾಯಕರನ್ನಾಗಿ ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಅವರ ಆಟವನ್ನು ಮತ್ತು ಅವರ ನಾಯಕತ್ವ ಕೌಶಲ್ಯಗಳನ್ನು ದೂರದಿಂದಲೇ ಆನಂದಿಸಿದ್ದೇನೆ. ಕೆಕೆಆರ್ ತಂಡದ ಯಶಸ್ಸು ಮತ್ತು ಅವರ ಆಟದ ಶೈಲಿಯನ್ನು ಮುನ್ನಡೆಸಲು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

    ಕೆಕೆಆರ್‌ನ ನಾಯಕತ್ವವನ್ನು ಸ್ವೀಕರಿಸಿದ ಶ್ರೇಯಸ್ ಅಯ್ಯರ್ ಮಾತನಾಡಿ, ಕೆಕೆಆರ್‌ ನಂತಹ ಪ್ರತಿಷ್ಠಿತ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆದಿರುವುದಕ್ಕೆ ನನಗೆ ಅತ್ಯಂತ ಗೌರವವಾಗಿದೆ. ಐಪಿಎಲ್ ಪಂದ್ಯಾವಳಿಯಾಗಿ ವಿವಿಧ ದೇಶಗಳು ಮತ್ತು ಸಂಸ್ಕೃತಿಗಳ ಅತ್ಯುತ್ತಮ ಆಟಗಾರರನ್ನು ಒಟ್ಟಿಗೆ ತರುತ್ತದೆ. ಪ್ರತಿಭಾವಂತ ವ್ಯಕ್ತಿಗಳ ಈ ಶ್ರೇಷ್ಠ ತಂಡವನ್ನು ಮುನ್ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಈ ತಂಡವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದ ಕೆಕೆಆರ್‌ನ ಮಾಲೀಕರು, ನಿರ್ವಹಣೆಗಾರರು ಮತ್ತು ಬೆಂಬಲ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ತಂಡದ ಗುರಿಗಳನ್ನು ಸಾಧಿಸಲು ನಾವು ಸರಿಯಾದ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ ಎಂದು ನನಗೆ ವಿಶ್ವಾಸವಿದೆ.

    ಭಾರತೀಯ ಕ್ರಿಕೆಟ್‍ಗೆ ಬಂದಾಗ ಕೋಲ್ಕತ್ತಾ ಮತ್ತು ಈಡನ್ ಗಾರ್ಡನ್‍ಗಳು ಬಹಳ ಶ್ರೀಮಂತ ಇತಿಹಾಸವನ್ನು ಹೊಂದಿವೆ. ಈ ಶ್ರೀಮಂತ ಇತಿಹಾಸಕ್ಕೆ ಕೊಡುಗೆ ನೀಡಲು ಮತ್ತು ನಮ್ಮ ಅಭಿಮಾನಿಗಳು ನಮ್ಮ ಬಗ್ಗೆ ಹೆಮ್ಮೆಪಡಲು ನಾನು ಎದುರು ನೋಡುತ್ತಿದ್ದೇನೆ. ಕೊರ್ಬೊ ಲೋರ್ಬೊ ಜೀಟ್ಬೊ! ಎಂಬ ತಂಡದ ಘೋಷ ವಾಕ್ಯವನ್ನು ಬರೆದು ಟ್ವೀಟ್ ಮಾಡಿದ್ದಾರೆ.

  • ನೀವು ಯಾವ ಪಕ್ಷ ಎಂದ ಚಾಮರಾಜನಗರ ಸಿಇಒಗೆ ಗ್ರಾಮಸ್ಥರಿಂದ ತರಾಟೆ

    ನೀವು ಯಾವ ಪಕ್ಷ ಎಂದ ಚಾಮರಾಜನಗರ ಸಿಇಒಗೆ ಗ್ರಾಮಸ್ಥರಿಂದ ತರಾಟೆ

    ಚಾಮರಾಜನಗರ: ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರನ್ನು ನೀವು ಯಾವ ಪಕ್ಷ ಎಂದು ಕೇಳಿದ ಜಿಲ್ಲಾ ಪಂಚಾಯಿತಿ ಸಿಇಒಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ನರೇಗಾದಡಿ ಜಲಶಕ್ತಿ ಯೋಜನೆಗಳ ಪರಿಶೀಲನೆಗೆ ಹನೂರು ತಾಲೂಕು ಹೂಗ್ಯಂ ಗ್ರಾಮಕ್ಕೆ ತೆರಳಿದ್ದ ಚಾಮರಾಜನಗರ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್‍ಗೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಮನವಿ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯೆಯನ್ನು ಸಿಇಒ ನೀವು ಯಾವ ಪಕ್ಷ ಎಂದು ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ನಾವು ಯಾವ ಪಕ್ಷವಾದರೇನು? ಕೆಲಸ ಮಾಡಲು ಬಂದಿದ್ದೀರಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.

    ಬಿಜೆಪಿಯಾದರೆ ಒಂದು ರೀತಿ, ಕಾಂಗ್ರೆಸ್ ಆದರೆ ಮತ್ತೊಂದು ರೀತಿ ಕೆಲಸ ಮಾಡಿಕೊಡುತ್ತೀರಾ ಎಂದು ಪ್ರಶ್ನಿಸಿದಾಗ ಉತ್ತರಿಸಲಾಗದೆ ಸಿಇಒ ತಬ್ಬಿಬ್ಬಾಗಿದ್ದಾರೆ. ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • 9ನೇ ತರಗತಿ ವಿದ್ಯಾರ್ಥಿನಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ

    9ನೇ ತರಗತಿ ವಿದ್ಯಾರ್ಥಿನಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ

    – ಐಎಎಸ್ ಶ್ರೇಣಿಯ ಅಧಿಕಾರಿಯಾದ ಪ್ರಗತಿ

    ಯಾದಗಿರಿ: ರಾಷ್ಟ್ರೀಯ ಹೆಣ್ಣು ಮಗು ದಿನದ ಅಂಗವಾಗಿ, ಗ್ರಾಮೀಣ ಭಾಗದ ಓರ್ವ ಬಡ ವಿದ್ಯಾರ್ಥಿನಿ ಕೆಲ ಸಮಯ ಐಎಎಸ್ ಶ್ರೇಣಿಯ ಅಧಿಕಾರಿಯಾಗಿ ಜಿ.ಪಂ ಸಿಇಒ ಹುದ್ದೆಯನ್ನು ಅಲಂಕರಿಸಿ ಸಂಭ್ರಮಿಸಿದ್ದಾಳೆ.

    ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರ ಗ್ರಾಮದ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಗತಿ ಅಥಿತಿ ಜಿ.ಪಂ ಸಿಇಒ ಆಗಿ ಪಟ್ಟಕ್ಕೇರಿದ ಬಾಲಕಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಯಾದಗಿರಿಯ ಜಿ.ಪಂ ಹಾಲಿ ಸಿಇಒ ಶಿಲ್ಲಾ ಶರ್ಮಾ ತಮ್ಮ ಹುದ್ದೆಯನ್ನು ಪ್ರಗತಿಗೆ ಬಿಟ್ಟುಕೊಟ್ಟಿದ್ದಾರೆ.

    ಶಿಲ್ಲಾ ಶರ್ಮಾ ತಮ್ಮ ಕಾರ್ಯಾದ ಬಗ್ಗೆ ವಿವರಣೆ ನೀಡಿ ಬಳಿಕ ಅಥಿತಿ ಸಿಇಒ ಪ್ರಗತಿ ಸಭೆಯ ನೇತೃತ್ವವನ್ನು ವಹಿಸಿಕೊಂಡರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವನಗೌಡ ಯಡಿಯಾಪುರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ಸಹ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಗತಿ ಹೆಣ್ಣಿನ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಸಹಕಾರ ನೀಡಬೇಕೆಂದು ಭಾಷಣ ಮಾಡಿ ಇತರರಿಗೆ ಪ್ರೇರಣೆಯಾದಳು.

    ಇನ್ನೂ ಸಿಇಒ ಕುರ್ಚಿಯಲ್ಲಿ ಕುಳಿತಿದ್ದ ಪ್ರಗತಿಯನ್ನು ಕಂಡು ಆಕೆಯ ಸ್ನೇಹಿತೆಯರು ಮತ್ತು ಶಾಲಾ ಸಿಬ್ಬಂದಿ ಸಂತಸಪಟ್ಟರು. ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯಾಧಿಕಾರಿ ಪ್ರಭಾಕರ್ ಅವರ ತಂಡ, ಹೆಣ್ಣಿನ ಮಹತ್ವವನ್ನು ಸಾರಲು ಈ ಅಪರೂಪದ, ಕಾರ್ಯಕ್ರಮ ಆಯೋಜನೆ ಮಾಡಿದ್ದರು.

  • ಯುಪಿಎಸ್‍ಸಿ ಟಾಪರ್ ಈಗ ಬಳ್ಳಾರಿ ಜಿ.ಪಂ.ನ ಸಿಇಒ ಆಗಿ ನೇಮಕ

    ಯುಪಿಎಸ್‍ಸಿ ಟಾಪರ್ ಈಗ ಬಳ್ಳಾರಿ ಜಿ.ಪಂ.ನ ಸಿಇಒ ಆಗಿ ನೇಮಕ

    ಬಳ್ಳಾರಿ: ಯುಪಿಎಸ್‍ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವ ನಂದಿನಿ ಕೆ.ಆರ್. ಅವರು ಇಂದು ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಮೂಲತಃ ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದವರಾದ ನಂದಿನಿ ಅವರು, 2016ರ ಬ್ಯಾಚ್‍ನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಉತ್ತೀಣರಾಗಿದ್ದರು. ಈ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಕಡುಬಡತನದ ಹಿನ್ನೆಲೆಯಲ್ಲಿ ಬಂದ ನಂದಿನಿ ಅವರು ಇದೀಗ ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರೋದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.

    ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿ ಆಯ್ಕೆಯಾಗಿರುವ ನಂದಿನಿ ಅವರಿಗೆ ಮುಂಚೂಣಿಯಾಗಿ ಸಿಇಒ ಹುದ್ದೆಯನ್ನ ಅಲಂಕರಿಸಲು ಬಳ್ಳಾರಿ ಜಿಲ್ಲಾ ಪಂಚಾಯಿತಿ ಒಂದು ರೀತಿಯ ಸ್ಫೂರ್ತಿದಾಯಕವಾಗಿದೆ. ಈ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕೆ.ನಿತೀಶ್ ಅವರು ಆಯ್ಕೆಯಾಗಿದ್ದರು. ನಿತೀಶ್ ಅವರ ಹಿಂದೆ ಸಿಇಓ ಆಗಿ ಆಯ್ಕೆಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಅವರ ಕಾರ್ಯವೈಖರಿ ಜನಮನ್ನಣೆ ಗಳಿಸಿತ್ತು. ಇದೀಗ ನಂದಿನಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

  • ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

    ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

    ಯಾದಗಿರಿ: ಸರ್ಕಾರದಿಂದ ಸಿಗಬೇಕಾದ ಕೂಲಿ ಹಣ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸಿದ ಕಾರ್ಮಿಕ ಮಹಿಳೆಯೊಬ್ಬರು ಜಿ.ಪಂ ಸಿಇಓ ಅವರನ್ನು ಪ್ರಶ್ನೆ ಮಾಡಿದ್ದರು. ಈ ವೇಳೆ ನನಗೆ ಕಳೆದ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದು ಯಾದಗಿರಿ ಜಿ.ಪಂ ಸಿಇಓ ಕವಿತಾ ಮನ್ನಿಕೇರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಎರಡು ತಿಂಗಳ ಕೂಲಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ತಮ್ಮ ಕೂಲಿ ಹಣ ನೀಡುವಂತೆ ಇಂದು ಕಾರ್ಮಿಕ ಮಹಿಳೆಯರು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡದರು. ಆದರೆ ಈ ವೇಳೆ ಮಹಿಳೆಯೊಬ್ಬರು ತಮ್ಮ ಕೂಲಿ ಹಣ ಕೂಡಲೇ ಪಾವತಿ ಮಾಡುವಂತೆ ಅಗ್ರಹಿಸಿದ್ದರು. ಕಾರ್ಮಿಕರ ಬೇಡಿಕೆ ಕೇಳಿದ ಸಿಇಒ ಕವಿತಾ ಅವರು ತಮಗೇ ಕಳೆದ 6 ತಿಂಗಳಿಂದ ಸಂಬಳ ಆಗಿಲ್ಲ ಎಂದು ತಿಳಿಸಿದರು.

    ಇತ್ತ ಜಿಲ್ಲಾ ಪಂಚಾಯಿತಿ ಸಿಇಓ ಅವರು ಹೇಳಿದ ಮಾತಿಗೆ ಕೆಲ ಪ್ರತಿಭಟನೆ ನಿಂತ ಮಹಿಳೆಯರು ಕ್ಷಣ ಕಾಲ ಕಂಗಾಲಾದರು. ಪ್ರತಿಭಟನೆ ನಿರತ ಮಹಿಳೆಯ ಮುಂದೇ ನಗುತ್ತಲೇ ನೋವು ಹೊರಹಾಕಿದ ಸಿಇಓ ಕವಿತಾ ಮನ್ನಿಕೇರಿ ಅವರು, ನಿಮ್ಮ ಸಮಸ್ಯೆಗಳು ನನಗೆ ಗೊತ್ತಿದೆ. ನಾನು ಒಬ್ಬ ಹೆಣ್ಣು ಮಗಳು, ನಿಮ್ಮ ಬೇಡಿಕೆಗಳನ್ನು ನಾನು ಸರ್ಕಾರದ ಗಮನ ತರುತ್ತೇನೆ. ಈಗ ಬೆಂಗಳೂರಿನಲ್ಲಿ ಸದನ ನಡೆಯುತ್ತಿದ್ದು, ಆದಷ್ಟು ಶೀಘ್ರ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ ಎಂದು ಕಾರ್ಮಿಕ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರು.

    ತೀವ್ರ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಜನ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗುತ್ತಿದ್ದು, ಬಹುತೇಕ ಹಳ್ಳಿಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸರ್ಕಾರ ಯೋಜನೆಗಳು ಸರಿಯಾದ ಸಮಯಕ್ಕೆ ಅನುಷ್ಠಾನ ಆಗದ ಹಿನ್ನೆಲೆಯಲ್ಲಿ ಬಡ ಜನರ ಹೊತ್ತೊಟ್ಟಿನ ಊಟಕ್ಕಾಗಿ ಪದರಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಪ್ರತಿಭಟನಾಕಾರರು ತಮ್ಮ ನೋವನ್ನು ತೋಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನವದೆಹಲಿ: ನಾನು ಏನಾದರೂ ರಾಜಕೀಯ ಪ್ರವೇಶ ಮಾಡಿದರೆ, ನನ್ನ ನೇರ ಮಾತುಗಳಿಂದಲೇ ಮೂರನೇ ಮಹಾಯುದ್ಧ ನಡೆಯೋದು ಗ್ಯಾರೆಂಟಿ ಎಂದು ಪೆಪ್ಸಿಕೋ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಹೇಳಿದ್ದಾರೆ.

    ಮಾನವೀಯತೆ, ಉದ್ಯಮದಲ್ಲಿ ಸಾಧನೆ ಮತ್ತು ಮಹಿಳಾ ಪರ ನಿಲುವಿಗಾಗಿ ಏಷ್ಯಾ ಸೊಸೈಟಿ ಸಂಸ್ಥೆ 62 ವರ್ಷದ ಇಂದ್ರಾ ನೂಯಿ ಅವರಿಗೆ “ಗೇಮ್ ಚೇಂಜರ್ ಅವಾರ್ಡ್ ಆಫ್ ದಿ ಇಯರ್” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

    ಈ ಸಮಾರಂಭದಲ್ಲಿ ನಡೆದ ಮಾತುಕತೆಯಲ್ಲಿ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂತ್ರಿಮಂಡಲವನ್ನ ಸೇರಲು ಇಚ್ಛಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನೂಯಿ, “ನನಗೂ ಮತ್ತು ರಾಜಕೀಯಕ್ಕೂ ಹೊಂದಿಕೊಳ್ಳಲು ಅಸಾಧ್ಯ. ಏಕೆಂದರೆ ನಾನು ಎಲ್ಲವನ್ನ ನೇರವಾಗಿ ಹೇಳಿಕೊಳ್ಳುತ್ತೇನೆ. ನಾನು ರಾಜತಾಂತ್ರಿಕಳಲ್ಲ. ಯಾವ ರಾಜತಾಂತ್ರಿಕತೆಯ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನೇನಾದರೂ ರಾಜಕೀಯ ಪ್ರವೇಶ ಮಾಡಿದರೆ ನನ್ನಿಂದಲೇ ಮೂರನೇ ಮಹಾಯುದ್ಧ ಉಂಟಾಗುವುದು ಖಚಿತ. ರಾಜಕೀಯಕ್ಕೆ ನನ್ನನ್ನು ದೂಡುವ ಕೆಲಸವನ್ನ ಮಾಡಬೇಡಿ” ಎಂದರು.

    ನೂಯಿಯವರ 40 ವರ್ಷದ ಉದ್ಯಮದ ಕಾರ್ಯ ವೈಖರಿಯ ಬಗ್ಗೆ ಕೇಳಿದಾಗ,”ನಾನು ದಿನದಲ್ಲಿ ಸುಮಾರು 18-20 ತಾಸಿನವರೆಗೆ ಕೆಲಸ ಮಾಡುತ್ತಿದ್ದೆ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ನನಗೆ ಈಗ ಹುದ್ದೆಯಿಂದ ಕೆಳಗಿಳಿದ ನಂತರ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಬೆಳಗ್ಗೆ 4 ಘಂಟೆಗೆ ಶುರುವಾಗುತ್ತಿದ್ದ ನನ್ನ ದಿನಚರಿಯಿಂದ ಈಗ ನನಗೆ ಮುಕ್ತಿ ದೊರೆತಿದೆ ಎಂದು ಹೇಳಿದರು.

    ವಿಶ್ವದ ಎರಡನೇ ತಂಪು ಪಾನೀಯದ ಪೆಪ್ಸಿಕೋ ಕಂಪೆನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ನೂಯಿ 12 ವರ್ಷಗಳ ನಂತರ ಕಂಪೆನಿಯಿಂದ ಹೊರಬರುತ್ತಿದ್ದಾರೆ. ಅಕ್ಟೋಬರ್ 3ಕ್ಕೆ ಅವರ ಅವಧಿ ಮುಕ್ತಾಯವಾಗಿದ್ದು, 2019 ರವರೆಗೂ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಇಂದ್ರಾ ನೂಯಿರವರು 1980 ರಲ್ಲಿ ರಾಜ್ ನೂಯಿ ಎಂಬವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv