Tag: ಸಿಇಒ ದೀಪಿಂದರ್ ಗೋಯಲ್

  • ಇಂದಿನಿಂದ ಝೊಮ್ಯಾಟೋ ಉದ್ಯೋಗಿಗಳಿಗೆ ಕೊವೀಡ್ ಲಸಿಕೆ ವಿತರಣೆ: ಸಿಇಒ ಘೋಷಣೆ

    ಇಂದಿನಿಂದ ಝೊಮ್ಯಾಟೋ ಉದ್ಯೋಗಿಗಳಿಗೆ ಕೊವೀಡ್ ಲಸಿಕೆ ವಿತರಣೆ: ಸಿಇಒ ಘೋಷಣೆ

    ದೆಹಲಿ: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲೂ ಕೆಲಸ ಮಾಡಿದ ಝೊಮ್ಯಾಟೋ ಆನ್‍ಲೈನ್ ಫುಡ್ ಆರ್ಡರ್ ಕಂಪನಿಯ ಉದ್ಯೋಗಿಗಳು, ಸಿಬ್ಬಂದಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ತಿಳಿಸಿದ್ದಾರೆ.

    ಹೀಗಾಗಿ ಜೊಮ್ಯಾಟೋದ ಸುಮಾರು 1.5 ಲಕ್ಷ ಉದ್ಯೋಗಿಗಳು ಕಂಪನಿಯ ವತಿಯಿಂದ ಉಚಿತವಾಗಿ ಕೊರೊನಾ ಲಸಿಕೆ ಪಡೆಯಲಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ಈಗಾಗಲೇ ಲಸಿಕೆ ವಿತರಣೆ ನಡೆಯುತ್ತಿದ್ದು, ಸಾವಿರಕ್ಕೂ ಹೆಚ್ಚು ಮಂದಿ ವ್ಯಾಕ್ಸಿನೇಶನ್ ಮಾಡಿಸಿಕೊಂಡಿದ್ದಾರೆ. ಇಂದಿನಿಂದ ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಝೊಮ್ಯಾಟೋ ಉದ್ಯೋಗಿಗಳಿಕೆ ಲಸಿಕೆ ನೀಡಲು ಪ್ರಾರಂಭಿಸಲಾಗುವುದು. ಮುಂದಿನ ವಾರದಲ್ಲಿ ಇನ್ನಷ್ಟು ನಗರಗಳಲ್ಲಿ ಈ ಅಭಿಯಾನ ಶುರುವಾಗುತ್ತದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

    ನಮಗೆ ನಮ್ಮ ಗ್ರಾಹಕರ ಸುರಕ್ಷತೆ ಮೊದಲ ಆದ್ಯತೆ. ಕೊರೊನಾ ವೈರಸ್ ಕಾಲದಲ್ಲೂ ನಮ್ಮ ಡೆಲಿವರಿ ಪಾಲುದಾರರು ಸುರಕ್ಷಿತವಾಗಿ, ತಮಗೆ ಅಪಾಯವಿದ್ದರೂ ಲೆಕ್ಕಿಸದೆ ಕೆಲಸ ಮಾಡಿದ್ದಾರೆ. ಹೀಗೆ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ ಸುಮಾರು 1.5 ಲಕ್ಷ ಉದ್ಯೋಗಿಗಳಿಗೆ ನೀಡುವ ಲಸಿಕೆ ವೆಚ್ಚವನ್ನು ಕಂಪನಿಯೇ ಭರಿಸಲಿದೆ ಎಂದೂ ಹೇಳಿದ್ದಾರೆ.

    ಇನ್ನು ಲಸಿಕೆ ಪಡೆಯುವ ಬಗ್ಗೆ, ಅದರ ಮಹತ್ವದ ನಮ್ಮ ಆಹಾರ ವಿತರಣಾ ಪಾಲುದಾರರಿಗೆ ಅರಿವು ಮೂಡಿಸಲಾಗುವುದು. ಝೊಮ್ಯಾಟೋ ಆ್ಯಪ್​ನಲ್ಲೂ ಇದು ಗೋಚರವಾಗುವಂತೆ ಮಾಡುತ್ತೇವೆ ಎಂದು ಸಿಇಒ ತಿಳಿಸಿದ್ದಾರೆ.