Tag: ಸಿಇಒ

  • ಭ್ರಷ್ಟಾಚಾರಕ್ಕೆ ಡಿಸಿಗಳು, ಸಿಇಒಗಳು ಆಸ್ಪದ ಕೊಡಬೇಡಿ: ಡಿಕೆಶಿ ಎಚ್ಚರಿಕೆ

    ಭ್ರಷ್ಟಾಚಾರಕ್ಕೆ ಡಿಸಿಗಳು, ಸಿಇಒಗಳು ಆಸ್ಪದ ಕೊಡಬೇಡಿ: ಡಿಕೆಶಿ ಎಚ್ಚರಿಕೆ

    ಬೆಂಗಳೂರು: ಭ್ರಷ್ಟಾಚಾರಕ್ಕೆ (Corruption) ಆಸ್ಪದ ನೀಡದಂತೆ ಡಿಸಿಗಳು (DC) ಹಾಗೂ ಸಿಇಒಗಳಿಗೆ (CEO) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಎಚ್ಚರಿಕೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ನಡೆದ ಡಿಸಿಗಳು, ಸಿಇಓಗಳ ಸಭೆಯಲ್ಲಿ ಮಾತನಾಡಿದ ಅವರು, ಡಿಸಿಗಳು, ಸಿಇಒಗಳಿಗೆ ಬದ್ಧತೆಯ ಪಾಠ ಮಾಡಿದರು. ಡಿಸಿಗಳು, ಸಿಇಒಗಳು ಸರ್ಕಾರದ ಮುಖ್ಯ ಭಾಗ. ನಿಮ್ಮ ಕಾರ್ಯವೈಖರಿ ಸರ್ಕಾರದ ಹಣೆಬರಹ ನಿರ್ಧರಿಸುತ್ತದೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ರೆವೆನ್ಯೂ ಇನ್ಸ್ಪೆಕ್ಟರ್‌ಗಳು, ಪಿಡಿಒಗಳ ಕಾರ್ಯವೈಖರಿ ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅದರ ಬಗ್ಗೆ ಗಮನ ಹರಿಸಿ. ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡೋದು ಬೇಡ ಎಂದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸೋ ಕೆಲಸ ಮಾಡಿ: ಡಿಸಿ, ಸಿಇಒಗಳಿಗೆ ಸಿಎಂ ಸೂಚನೆ

    ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಹಕಾರ ನೀಡಿದ್ದೀರಿ. ಅದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 70% ರಷ್ಟು ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿಲ್ಲ. ಇದರಿಂದ ಅವರು ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದಲೂ ಸರ್ಕಾರಕ್ಕೆ ಕೆಟ್ಟ ಹೆಸರು. ಸರ್ಕಾರದ ಕೈಪಿಡಿ ನಿಯಮಗಳನ್ನು ಪಾಲಿಸಿ. ಅಧಿಕಾರಿಗಳಿಗೆ ಸಿಇಒಗಳು ಬದ್ಧತೆ ನಿಗದಿ ಮಾಡಬೇಕು ಎಂದು ಸೂಚನೆ ನೀಡಿದರು. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ- ಡಿಸಿ, ಸಿಇಓಗಳಿಗೆ ಸಿಎಂ ಸೂಚನೆ

    15 ದಿನದೊಳಗೆ ಅಧಿಕಾರಿಗಳು ಕೆಲಸದ ಕೇಂದ್ರ ಸ್ಥಳದಲ್ಲಿ ವಾಸ್ತವ್ಯ ಹೂಡಿರುವ ವಿಳಾಸದ ಡೈರಿ ಮಾಡಿ ಸಾರ್ವಜನಿಕರ ಗಮನಕ್ಕೆ ತರಬೇಕು. ಕೇಂದ್ರ ಸ್ಥಳದಲ್ಲಿ ಉಳಿಯಲು ಆಗದವರು ಜಾಗ ಖಾಲಿ ಮಾಡಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ಕೊಡಬೇಡಿ. ಆರ್‌ಟಿಐ ದುರ್ಬಳಕೆಗೂ ಅವಕಾಶ ಕೊಡಬೇಡಿ. ನಿಮ್ಮ ಮೇಲೆ ಹೆಚ್ಚು ನಿರೀಕ್ಷೆ ಇದೆ. ನರೇಗಾ ಹಣ ಸದ್ಬಳಕೆ ಮಾಡಿ. ಸಮರ್ಪಕ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ. ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತನ್ನಿ ಎಂದು ಹೇಳಿದರು. ಇದನ್ನೂ ಓದಿ: ದಲಿತ ಕುಟುಂಬಕ್ಕೆ ಧಮ್ಕಿ ಆರೋಪ – ವೀಡಿಯೋ ಫೇಕ್ ಎಂದ ಡಿ ಸುಧಾಕರ್

    ಸಿಎಸ್‌ಆರ್ ಫಂಡ್ ಸದ್ಬಳಕೆಗೆ ಶ್ರಮಿಸಿ. ಮೂರು ಗ್ರಾಮ ಪಂಚಾಯ್ತಿಗೆ ಒಂದು ಪಬ್ಲಿಕ್ ಮಾದರಿ ಶಾಲೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸಿಎಸ್‌ಆರ್ ಫಂಡ್‌ನಿಂದ ಕಟ್ಟಡ ಕಟ್ಟಿಕೊಡುತ್ತಾರೆ. ಪಬ್ಲಿಕ್ ಶಾಲೆಗಳ ಆಡಳಿತ ಮಂಡಳಿ ದತ್ತು ತೆಗೆದುಕೊಂಡು ಬೋಧನೆಗೆ ವ್ಯವಸ್ಥೆ ಮಾಡಿಕೊಡಲಿವೆ. ರಾಜ್ಯದ ಕೆಲವು ಉದ್ಯಮಗಳು ಸಿಎಸ್‌ಆರ್ ಫಂಡ್ ಅನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಿವೆ. ಅದನ್ನು ತಡೆದು ನಮ್ಮಲ್ಲೇ ಬಳಕೆ ಮಾಡಲು ನೀವೆಲ್ಲರೂ ನಿಗಾ ವಹಿಸಬೇಕು ಎಂದರು. ಇದನ್ನೂ ಓದಿ: ಅನಿಷ್ಟ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ವಿಟ್ಟರ್‌ಗೆ ಹೊಸ ಸಿಇಒ – ಅಧಿಕೃತವಾಗಿ ಘೋಷಿಸಿದ ಮಸ್ಕ್

    ಟ್ವಿಟ್ಟರ್‌ಗೆ ಹೊಸ ಸಿಇಒ – ಅಧಿಕೃತವಾಗಿ ಘೋಷಿಸಿದ ಮಸ್ಕ್

    ವಾಷಿಂಗ್ಟನ್: ಕಳೆದ ವರ್ಷ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ (Twitter) ಅನ್ನು ಖರೀದಿಸಿದ್ದ ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಕೊನೆಗೂ ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಹೊಸ ಸಿಇಒ (Twitter CEO) ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಎನ್‌ಬಿಸಿ ಯುನಿವರ್ಸಲ್ ಜಾಹೀರಾತು ವಿಭಾಗದ ಮಾಜಿ ಮುಖ್ಯಸ್ಥೆ ಲಿಂಡಾ ಯಾಕರಿನೊ (Linda Yaccarino) ಅವರನ್ನು ಮಸ್ಕ್ ಟ್ವಿಟ್ಟರ್‌ನ ಹೊಸ ಸಿಇಒ ಆಗಿ ನೇಮಿಸಿದ್ದಾರೆ.

     

    ನಾನು ಲಿಂಡಾ ಯಾಕರಿನೋ ಅವರನ್ನು ಟ್ವಿಟ್ಟರ್‌ನ ಹೊಸ ಸಿಇಒ ಆಗಿ ಸ್ವಾಗತಿಸಲು ಉತ್ಸುಕನಾಗಿದ್ದೇನೆ. ಯಾಕರಿನೊ ಪ್ರಾಥಮಿಕವಾಗಿ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಗಮನಹರಿಸಿದರೆ, ನಾನು ಉತ್ಪನ್ನ ವಿನ್ಯಾಸ ಹಾಗೂ ಹೊಸ ತಂತ್ರಜ್ಞಾನದ ಮೇಲೆ ಗಮನಹರಿಸುತ್ತೇನೆ ಎಂದು ಮಸ್ಕ್ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಯಾಕರಿನೊ ಕಾರ್ಪ್ ಎಂಟರ್‌ಟೈನ್‌ಮೆಂಟ್ ಹಾಗೂ ಮಾಧ್ಯಮ ವಿಭಾಗದ ಜಾಹೀರಾತು ವ್ಯವಹಾರವನ್ನು ಆಧುನೀಕರಿಸುವಲ್ಲಿ ಕೆಲಸ ಮಾಡಿದ್ದಾರೆ. ಟ್ವಿಟ್ಟರ್‌ನ ಹೊಸ ಸಿಇಒ ಆಗಲು ಮಾತುಕತೆ ನಡೆಸಿದ ಬಳಿಕ ಅವರು ಶುಕ್ರವಾರ ಬೆಳಗ್ಗೆ ಎನ್‌ಬಿಸಿಯಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗಲೂ ಮೈಕ್ರೋಫೋನ್ ಆನ್! – ವಾಟ್ಸಪ್‌ನ ನಂಬಬೇಡಿ ಎಂದ ಮಸ್ಕ್

    ಎಲೋನ್ ಮಸ್ಕ್ ಟ್ವಿಟ್ಟರ್‌ಗೆ ಹೊಸ ಸಿಇಒ ಹುಡುಕುತ್ತಿದ್ದುದಾಗಿ ಹಲವು ತಿಂಗಳುಗಳ ಹಿಂದೆಯೇ ಹೇಳಿದ್ದರು. ಯಾರಾದರೂ ಮೂರ್ಖತನ ಹೊಂದಿದವರು ಟ್ವಿಟ್ಟರ್ ಸಿಇಒ ಹುದ್ದೆ ವಹಿಸಿಕೊಂಡ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ ಎಂದು ಹಾಸ್ಯವನ್ನೂ ಆಡಿದ್ದರು.

    ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಕಳೆದ ವರ್ಷ ಅಕ್ಟೊಬರ್ ನಂತರ ಕಂಪನಿಯ ಸುಮಾರು 80% ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದ್ದರು. ಮಾತ್ರವಲ್ಲದೇ ಉದ್ಯೋಗಿಗಳಿಗೆ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಆದೇಶಿಸಲಾಗಿದೆ. ಇತ್ತೀಚೆಗೆ ಟ್ವಿಟ್ಟರ್ ಖಾತೆಗಳಲ್ಲಿ ಬಳಕೆದಾರರು ಬ್ಲೂ ಟಿಕ್ ಪಡೆಯಲು ಪಾವತಿಸುವ ಕ್ರಮವನ್ನು ಜಾರಿಗೆ ತರಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್‌ ಐಫೋನ್‌ ತಯಾರಕ ಫಾಕ್ಸ್‌ಕಾನ್‌

  • ಭಾರತ ಮೂಲದ ನೀಲ್ ಮೋಹನ್ YouTubeನ ಹೊಸ CEO

    ಭಾರತ ಮೂಲದ ನೀಲ್ ಮೋಹನ್ YouTubeನ ಹೊಸ CEO

    ವಾಷಿಂಗ್ಟನ್: ವಿಶ್ವದಲ್ಲೇ ಅತಿ ದೊಡ್ಡ ಆನ್‌ಲೈನ್ ವೀಡಿಯೋ ಪ್ಲಾಟ್‌ಫಾರ್ಮ್ ಎನಿಸಿಕೊಂಡಿರುವ ಯೂಟ್ಯೂಬ್‌ಗೆ (YouTube) ಹೊಸ ಸಿಇಒ (CEO) ಆಗಿ ಭಾರತ ಮೂಲದ ನೀಲ್ ಮೋಹನ್ (Neal Mohan) ನೇಮಕಗೊಂಡಿದ್ದಾರೆ.

    ಕಳೆದ 9 ವರ್ಷಗಳಿಂದ ಯೂಟ್ಯೂಬ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಸುಸಾನ್ ವೊಜ್ಸಿಕಿ (Susan Wojcicki) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಅವರ ಸ್ಥಾನವನ್ನು ಈಗ ನೀಲ್ ಮೋಹನ್ ವಹಿಸಿಕೊಳ್ಳಲಿದ್ದಾರೆ. 54 ವರ್ಷದ ಸುಸಾನ್ ತಮ್ಮ ಕುಟುಂಬ ಹಾಗೂ ವೈಯಕ್ತಿಕ ಜೀವನಕ್ಕೆ ಇದೀಗ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

    ನೀಲ್ ಮೋಹನ್ ಯಾರು?: ಭಾರತ ಮೂಲದ ನೀಲ್ ಮೋಹನ್ ಅವರು ಈ ಹಿಂದೆ ಯೂಟ್ಯೂಬ್‌ನ ಮುಖ್ಯ ಉತ್ಪನ್ನಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2008ರಲ್ಲಿ ಯೂಟ್ಯೂಬ್‌ನ ಮಾತೃ ಕಂಪನಿಯಾಗಿರುವ ಗೂಗಲ್‌ಗೆ (Google) ಸೇರಿದ ಅವರು 15 ವರ್ಷಗಳ ಕಾಲ ವೊಜ್ಸಿಕಿ ಅವರ ಯೋಜನೆಗಳಿಗೆ ಸಹಕರಿಸಿದ್ದಾರೆ. ಡಿಸ್‌ಪ್ಲೇ ಹಾಗೂ ವೀಡಿಯೋ ಜಾಹೀರಾತುಗಳ ಹಿರಿಯ ಉಪಾಧ್ಯಕ್ಷರಾಗಿದ್ದ ಅವರು 2015ರಲ್ಲಿ ಯೂಟ್ಯೂಬ್‌ನ ಮುಖ್ಯ ಉತ್ಪನ್ನಾಧಿಕಾರಿಯಾಗಿ ನೇಮಕಗೊಂಡರು. ಇದನ್ನೂ ಓದಿ: Aero India 2023: ಇಂದು ಕೊನೆಯ ದಿನದ ಏರ್‌ಶೋ ಕಣ್ತುಂಬಿಕೊಳ್ಳಿ

    ನೀಲ್ ಮೋಹನ್ 1996 ರಲ್ಲಿ ಅಮೆರಿಕದ ಸ್ಟ್ಯಾಂಡ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟಿçಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ 2005 ರಲ್ಲಿ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ತಮ್ಮ ಎಂಬಿಎ ಮುಗಿಸಿದರು. ಯೂಟ್ಯೂಬ್ ಮಾತ್ರವಲ್ಲದೇ ಅವರು ಬಟ್ಟೆ ಮತ್ತು ಫ್ಯಾಶನ್ ಕಂಪನಿ ಸ್ಟಿಚ್ ಫಿಕ್ಸ್‌ಗೆ ಮಂಡಳಿಯ ನಿರ್ದೇಶಕರಾಗಿ ಸೇವೆಯನ್ನೂ ಸಲ್ಲಿಸಿದ್ದಾರೆ. 23 ಆಂಡ್‌ಮಿ ಜೈವಿಕ ತಂತ್ರಜ್ಞಾನ ಸಂಶೋಧನಾ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್ ಯುದ್ಧದಲ್ಲಿ ಮಡಿದ ಮಗನ ಹೆಸರಲ್ಲಿ ಮನೆ ನಿರ್ಮಿಸಿದ ತಂದೆ-ತಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜವಾಬ್ದಾರಿ ತೆಗೆದುಕೊಳ್ಳೋ ಮೂರ್ಖ ಸಿಕ್ಕ ತಕ್ಷಣ ಸಿಇಒ ಹುದ್ದೆಯಿಂದ ಕೆಳಗಿಯುತ್ತೇನೆ: ಮಸ್ಕ್

    ಜವಾಬ್ದಾರಿ ತೆಗೆದುಕೊಳ್ಳೋ ಮೂರ್ಖ ಸಿಕ್ಕ ತಕ್ಷಣ ಸಿಇಒ ಹುದ್ದೆಯಿಂದ ಕೆಳಗಿಯುತ್ತೇನೆ: ಮಸ್ಕ್

    ವಾಷಿಂಗ್ಟನ್: ಟ್ವಿಟ್ಟರ್ ಸಿಇಒ (Twitter CEO) ಎಲೋನ್ ಮಸ್ಕ್ (Elon Musk) ಇತ್ತೀಚೆಗೆ ತಾವು ತಮ್ಮ ಹುದ್ದೆಯನ್ನು ತೊರೆಯಬೇಕೇ ಅಥವಾ ಹೀಗೇ ಮುಂದುವರಿಯಬೇಕೇ ಎಂಬ ಬಗ್ಗೆ ಸಮೀಕ್ಷೆಯೊಂದರ ಮೂಲಕ ಬಳಕೆದಾರರ ಅಭಿಪ್ರಾಯವನ್ನು ಪಡೆದುಕೊಂಡಿದ್ದರು. ಸಮೀಕ್ಷೆಯಲ್ಲಿ ಮಸ್ಕ್‌ಗೆ ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಲು ಹೆಚ್ಚಿನ ಬಳಕೆದಾರರು ಸೂಚಿಸಿದ್ದು, ಇದೀಗ ಮಸ್ಕ್ ತಾವು ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ.

    ಎಲೋನ್ ಮಸ್ಕ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ತಾವು ಕೆಳಗಿಳಿಯಲು ಒಂದು ಷರತ್ತನ್ನೂ ನೀಡಿದ್ದಾರೆ. ನನ್ನ ಜವಾಬ್ದಾರಿ ತೆಗೆದುಕೊಳ್ಳಲು ಯಾರಾದರೂ ಮೂರ್ಖ ಸಿಕ್ಕ ತಕ್ಷಣವೇ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಬಳಿಕ ಕಂಪನಿಯ ಸಾಫ್ಟ್‌ವೇರ್ ಹಾಗೂ ಸರ್ವರ್ ತಂಡಗಳನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

    ಕಳೆದ 2 ದಿನಗಳ ಹಿಂದೆ ಮಸ್ಕ್ ಸಮೀಕ್ಷೆಯನ್ನು ಪ್ರಾರಂಭಿಸಿದ್ದರು ಹಾಗೂ ಅದರ ಫಲಿತಾಂಶಕ್ಕೆ ಬದ್ಧನಾಗಿರುವುದಾಗಿ ಹೇಳಿದ್ದರು. ವೋಟ್ ಮಾಡುವಾಗ ಜಾಗರೂಕರಾಗಿರಿ. ಟ್ವಿಟ್ಟರ್ ಮುಖ್ಯಸ್ಥನಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಕೈಯಲ್ಲಿದೆ ಎಂದು ಮಸ್ಕ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    ಭಾನುವಾರ ಮಸ್ಕ್ ಸಮೀಕ್ಷೆಯ ಗಡುವು ಮುಗಿದಿದ್ದು, 1.7 ಕೋಟಿ ಮಂದಿ ವೋಟ್ ಮಾಡಿದ್ದಾರೆ. ವೋಟ್ ಮಾಡಿದ ಶೇ.57.5 ರಷ್ಟು ಬಳಕೆದಾರರು ಸಿಇಒ ಹುದ್ದೆಯನ್ನು ತೊರೆಯುವಂತೆ ಮಸ್ಕ್‌ಗೆ ಸೂಚಿಸಿದ್ದಾರೆ. ಶೇ.42.5 ರಷ್ಟು ಬಳಕೆದಾರರು ಟ್ವಿಟ್ಟರ್ ಸಿಇಒ ಸ್ಥಾನದಲ್ಲಿಯೇ ಮುಂದುವರಿಯಲು ತಿಳಿಸಿದ್ದಾರೆ. ತಮ್ಮ ಸ್ಥಾನದಿಂದ ಕೆಳಗಿಳಿಯಲು ಹೆಚ್ಚಿನವರು ಸೂಚಿಸಿರುವುದರಿಂದ ಮಸ್ಕ್ ಇದೀಗ ತಾವು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳೀಬೇಕಾ? – ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ ಎಂದ ಮಸ್ಕ್

    Live Tv
    [brid partner=56869869 player=32851 video=960834 autoplay=true]

  • ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳೀಬೇಕಾ? – ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ ಎಂದ ಮಸ್ಕ್

    ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳೀಬೇಕಾ? – ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ ಎಂದ ಮಸ್ಕ್

    ವಾಷಿಂಗ್ಟನ್: ಈಗಾಗಲೇ ಹಲವು ಸಮೀಕ್ಷೆಗಳನ್ನು ನಡೆಸಿ, ಅದರ ಫಲಿತಾಂಶಕ್ಕೆ ತಕ್ಕಂತೆ ನಡೆದುಕೊಂಡಿರುವ ಮಸ್ಕ್ ಇದೀಗ ತಾನು ಟ್ವಿಟ್ಟರ್ ಸಿಇಒ (Twitter CEO) ಸ್ಥಾನದಿಂದ ಕೆಳಗಿಳಿಯಬೇಕಾ ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆ ಪ್ರಾರಂಭಿಸಿದ್ದಾರೆ.

    ಹೌದು, ಇತ್ತೀಚೆಗಷ್ಟೇ ಟ್ವಿಟ್ಟರ್ ಅನ್ನು ಖರೀದಿಸಿದ ಬಿಲಿಯನೇರ್ ಎಲೋನ್ ಮಸ್ಕ್ (Elon Musk) ತಾವು ಅದರ ಸಿಇಒ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಯೋಜನೆ ಮಾಡಿರುವುದು ತಿಳಿದುಬಂದಿದೆ. ಮಸ್ಕ್ ತಾವು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಪ್ರಶ್ನೆಯನ್ನು ಕೇಳಿ ಸಮೀಕ್ಷೆಗೆ ‘ಎಸ್’ ಹಾಗೂ ‘ನೋ’ ಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಬಳಕೆದಾರರಲ್ಲಿ ಕೇಳಿದ್ದಾರೆ.

    ಮಸ್ಕ್ ಕೇವಲ ಸಮೀಕ್ಷೆಯನ್ನು ನಡೆಸದೇ ಇದರ ಫಲಿತಾಂಶಕ್ಕೆ ಬದ್ಧನಾಗಿರುವುದಾಗಿ ತಿಳಿಸಿದ್ದಾರೆ. ವೋಟ್ ಮಾಡುವಾಗ ಜಾಗರೂಕರಾಗಿರಿ. ಟ್ವಿಟ್ಟರ್ ಮುಖ್ಯಸ್ಥನಾಗಿ ನಾನು ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಕೈಯಲ್ಲಿದೆ ಎಂದು ಮಸ್ಕ್ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

    ಮಸ್ಕ್ ಟ್ವಿಟ್ಟರ್‌ನ ಸಿಇಒ ಆಗಿ ಹೆಚ್ಚು ಕಾಲ ಉಳಿಯಲು ಬಯಸುವುದಿಲ್ಲ ಎಂದು ಈ ಹಿಂದೆಯೇ ತಿಳಿಸಿದ್ದರು. ಮಾತ್ರವಲ್ಲದೇ ಮುಖ್ಯಸ್ಥ ಸ್ಥಾನಕ್ಕೆ ಬೇರೆಯವರನ್ನು ಹುಡುಕುತ್ತಿರುವ ಸುಳಿವನ್ನೂ ನೀಡಿದ್ದರು.

    ಟೆಸ್ಲಾ ಸಿಇಒ ಮೈಕ್ರೋ ಬ್ಲಾಗಿಂಗ್ ಸೈಟ್ ಅನ್ನು ವಹಿಸಿಕೊಂಡಾಗಿನಿಂದ ಕಂಪನಿಯಲ್ಲಿ ಮಾಡಿರುವ ಹಲವಾರು ಬದಲಾವಣೆಗಳಿಂದ ಭಾರೀ ಟೀಕೆಗೆ ಒಳಗಾಗಿದ್ದಾರೆ. ಅವುಗಳಲ್ಲಿ ಕಂಪನಿಯ ಅರ್ಧಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿರುವುದು, ಹಿಂದೆ ನಿರ್ಬಂಧಿಸಿದ್ದ ಬಳಕೆದಾರರ ಖಾತೆಯನ್ನು ಮರಳಿ ತಂದಿರುವುದು ಸೇರಿವೆ. ಇದನ್ನೂ ಓದಿ: ಫಿಫಾ ವಿಶ್ವಕಪ್ 2026: ಕತಾರ್‌ಗೆ ಬೈ – ಹಾಯ್ ಹಲೋ ಅಮೆರಿಕ

    Live Tv
    [brid partner=56869869 player=32851 video=960834 autoplay=true]

  • ಪರಾಗ್ ಸ್ಥಾನಕ್ಕೆ ಶ್ರೀರಾಮ್ – ಮತ್ತೆ ಭಾರತೀಯನಿಗೆ ಒಲಿಯುತ್ತಾ ಟ್ವಿಟ್ಟರ್ ಪಟ್ಟ?

    ಪರಾಗ್ ಸ್ಥಾನಕ್ಕೆ ಶ್ರೀರಾಮ್ – ಮತ್ತೆ ಭಾರತೀಯನಿಗೆ ಒಲಿಯುತ್ತಾ ಟ್ವಿಟ್ಟರ್ ಪಟ್ಟ?

    ವಾಷಿಂಗ್ಟನ್: ಕಳೆದ ವಾರಾಂತ್ಯದಲ್ಲಷ್ಟೇ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಇದರ ಸಿಇಒ (CEO) ಹುದ್ದೆ ಮುಂದೆ ಯಾರಿಗೆ ದಕ್ಕಲಿದೆ ಎಂಬ ಪ್ರಶ್ನೆ ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ಭಾರತ ಮೂಲದ ಪರಾಗ್ ಅಗರ್ವಾಲ್ (Parag Agrawal) ಸಿಇಒ ಹುದ್ದೆಯಲ್ಲಿದ್ದು, ಆ ಸ್ಥಾನವನ್ನು ಮತ್ತೊಮ್ಮೆ ಭಾರತ ಮೂಲದ ವ್ಯಕ್ತಿಯೇ ತುಂಬುವ ನಿರೀಕ್ಷೆ ಇದೀಗ ಹುಟ್ಟಿಕೊಂಡಿದೆ.

    ಇತ್ತೀಚೆಗೆ ಎಲೋನ್ ಮಸ್ಕ್ ಟ್ವಿಟ್ಟರ್‌ನ ಉನ್ನತ ಹುದ್ದೆಯನ್ನು ಭರಿಸುವ ವಿಚಾರವಾಗಿ ಕೆಲ ಆತ್ಮೀಯರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಆತ್ಮೀಯರ ಬಳಗದಲ್ಲಿ ಸಿಲಿಕಾನ್ ವ್ಯಾಲಿ ಹೂಡಿಕೆ ಸಂಸ್ಥೆ ಆಂಡ್ರೀಸೆನ್ ಹೊರೊವಿಟ್ಜ್‌ನಲ್ಲಿ ಪಾಲುದಾರರಾಗಿರುವ ಭಾರತ ಮೂಲದ ಶ್ರೀರಾಮ್ ಕೃಷ್ಣನ್ (Sriram Krishnan) ಕೂಡಾ ಒಬ್ಬರು. ಇದೀಗ ಶ್ರೀರಾಮ್ ಕೃಷ್ಣನ್ ಟ್ವಿಟ್ಟರ್‌ನ ಮುಂದಿನ ಸಿಇಒ ಆಗಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಭಾರೀ ಮಟ್ಟದಲ್ಲಿ ವ್ಯಕ್ತವಾಗಿದೆ.

    ಶ್ರೀರಾಮ್ ಕೃಷ್ಣನ್ ಯಾರು?
    ಚೆನ್ನೈ ಮೂಲದ ಶ್ರೀರಾಮ್ ಕೃಷ್ಣನ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ. 2003ರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಇವರು ಪ್ರಸ್ತುತ ತಮ್ಮ ಪತ್ನಿಯೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋವಿನ ನೋಯ್ ವ್ಯಾಲಿಯಲ್ಲಿ ವಾಸವಿದ್ದಾರೆ.

    ಕೃಷ್ಣನ್ ಅವರು ಈ ಹಿಂದೆ ಟ್ವಿಟ್ಟರ್ ಮಾತ್ರವಲ್ಲದೇ ಯಾಹೂ!, ಫೇಸ್‌ಬುಕ್ ಹಾಗೂ ಸ್ನ್ಯಾಪ್ ಕಂಪನಿಯಲ್ಲಿ ವ್ಯವಸ್ಥಾಪಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕ್ಲಬ್‌ಹೌಸ್‌ನ ಪ್ರಮುಖ ಹೂಡಿಕೆದಾರನಾಗಿರುವ ಆಂಡ್ರೀಸೆನ್ ಹೋರೊವಿಟ್ಜ್‌ಗೆ ಕೃಷ್ಣನ್ ಅವರು 2021ರಲ್ಲಿ ಸೇರ್ಪಡೆಗೊಂಡಿದ್ದರು. ಅವರ ಪತ್ನಿ ರಾಮಮೂರ್ತಿ ಕೂಡಾ ನೆಟ್‌ಫ್ಲಿಕ್ಸ್ ಹಾಗೂ ಫೇಸ್‌ಬುಕ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ದುಡ್ಡು ಕೊಡಬೇಕು

    _Elon Musk

    ವರದಿಗಳ ಪ್ರಕಾರ ಕೃಷ್ಣನ್ ಹಾಗೂ ಎಲೋನ್ ಮಸ್ಕ್ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾದ ಹಾಥೋರ್ನ್ನಲ್ಲಿರುವ ಸ್ಪೇಸ್‌ಎಕ್ಸ್ ಪ್ರಧಾನ ಕಛೇರಿಯಲ್ಲಿ ಭೇಟಿಯಾದರು. 2021ರ ಫೆಬ್ರವರಿಯಲ್ಲಿ ಕೃಷ್ಣನ್ ಹಾಗೂ ಅವರ ಪತ್ನಿ ರಾಮಮೂರ್ತಿ ನಡೆಸಿದ ‘ದಿ ಗುಡ್ ಟೈಮ್ಸ್ ಶೋ’ ಕಾರ್ಯಕ್ರಮದಲ್ಲಿ ಮಸ್ಕ್ ಕಾಣಿಸಿಕೊಂಡಿದ್ದರು.

    ಶ್ರೀರಾಮ್ ಕೃಷ್ಣನ್ ಅವರು ಇತ್ತೀಚಿಗೆ ಒಂದು ಟ್ವೀಟ್ ಮಾಡಿದ್ದು, ನಾನು ಎಲೋನ್ ಮಸ್ಕ್ ಹಾಗೂ ಇತರ ಕೆಲ ಉನ್ನತ ವ್ಯಕ್ತಿಗಳೊಂದಿಗೆ ಟ್ವಿಟ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ವಿಟ್ಟರ್ ಅತ್ಯಂತ ಪ್ರಮುಖವಾದ ಕಂಪನಿಯಾಗಿದ್ದು, ಇದು ಪ್ರಪಂಚದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ಕೆಲಸವನ್ನು ಎಲೋನ್ ಮಸ್ಕ್ ಮಾಡಿ ತೋರಿಸುತ್ತಾರೆ ಎಂಬುದನ್ನು ನಾನು ನಂಬುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    Live Tv
    [brid partner=56869869 player=32851 video=960834 autoplay=true]

  • ಕಾಫಿ ದೈತ್ಯ ಸ್ಟಾರ್‌ಬಕ್ಸ್‌ಗೆ ಭಾರತ ಮೂಲದ ಲಕ್ಷ್ಮಣ್ CEO ಆಗಿ ನೇಮಕ

    ಕಾಫಿ ದೈತ್ಯ ಸ್ಟಾರ್‌ಬಕ್ಸ್‌ಗೆ ಭಾರತ ಮೂಲದ ಲಕ್ಷ್ಮಣ್ CEO ಆಗಿ ನೇಮಕ

    ವಾಷಿಂಗ್ಟನ್: ವಿಶ್ವದ ಅತಿ ದೊಡ್ಡ ಕಾಫಿ ಉತ್ಪನ್ನ ಕಂಪನಿ ಸ್ಟಾರ್‌ಬಕ್ಸ್‌ಗೆ ಇದೀಗ ಹೊಸದಾಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ(ಸಿಇಒ) ನೇಮಿಸಲಾಗಿದೆ.

    55 ವಯಸ್ಸಿನ ಲಕ್ಷ್ಮಣ್ ನರಸಿಂಹನ್ ಅವರು ಈ ಹಿಂದೆ ರೆಕಿಟ್ ಕಂಪನಿಯ ಸಿಇಒ ಆಗಿದ್ದರು. ಪೆಪ್ಸಿಕೊವಿನ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿಯೂ ಇವರು ಕಾರ್ಯ ನಿರ್ವಹಿಸಿದ್ದು, ಇದೀಗ ಆ ಸ್ಥಾನಕ್ಕೆ ಹೋವರ್ಡ್ ಸ್ಕುಲ್ಟ್ಜ್ ಅವರನ್ನು ಬದಲಿಸಲಾಗಿದೆ. ಇದನ್ನೂ ಓದಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಜ್ರಕುಮಾರ್ ಇನ್ನಿಲ್ಲ

    ಅಕ್ಟೋಬರ್ 1 ರಂದು ಲಕ್ಷ್ಮಣ್ ನರಸಿಂಹನ್ ಕಂಪನಿಗೆ ಸೇರಲಿದ್ದು, 2023ರ ಏಪ್ರಿಲ್‌ನಲ್ಲಿ ಚುಕ್ಕಾಣಿ ಹಿಡಿಯಲಿದ್ದಾರೆ. ಅಲ್ಲಿಯವರೆಗೆ ಹಂಗಾಮಿ ಸಿಇಒ ಹೋವರ್ಡ್ ಸ್ಕುಲ್ಟ್ಜ್ ಕಂಪನಿಯನ್ನು ಮುನ್ನಡೆಸಲಿದ್ದಾರೆ. ಲಕ್ಷ್ಮಣ್ ನರಸಿಂಹನ್ ಅವರು ಏಪ್ರಿಲ್ 1 ರವರೆಗೆ ಹೋವರ್ಡ್ ಸ್ಕುಲ್ಟ್ಜ್ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಸ್ಟಾರ್‌ಬಕ್ಸ್ ಹೇಳಿದೆ. ಇದನ್ನೂ ಓದಿ: ಸರ್ಕಾರದ ‘ಪುಣ್ಯಕೋಟಿ’ ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್

    ಏಪ್ರಿಲ್‌ನಿಂದ ಜೂನ್ ತಿಂಗಳಿನಲ್ಲಿ ಚೀನಾದಲ್ಲಿ ಕೋವಿಡ್ ನಿರ್ಬಧಗಳಿಂದಾಗಿ ಸ್ಟಾರ್‌ಬಕ್ಸ್ ವ್ಯಾಪಾರ ನಿಧಾನಗತಿಗೆ ಇಳಿದಿದ್ದರೂ ಅಮೆರಿಕದಲ್ಲಿ ಭಾರೀ ಬೇಡಿಕೆ ಹೊಂದಿರುವುದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಬೆಂಗಳೂರು: ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸಲೀಲ್ ಪರೇಖ್ ಈ ವರ್ಷ ತಮ್ಮ ವೇತನವನ್ನು ಬರೋಬ್ಬರಿ ಶೇ.88 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಹೆಚ್ಚಳದೊಂದಿಗೆ ಪರೇಖ್ ಇದೀಗ ವರ್ಷಕ್ಕೆ 79.75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

    ಈ ಹಿಂದೆ ಪರೇಖ್ 42 ಕೋಟಿ ರೂ. ವಾರ್ಷಿಕ ವೇತನವನ್ನು ಪಡೆಯುತ್ತಿದ್ದರು. ಇದೀಗ ತಮ್ಮ ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿರುವುದರೊಂದಿಗೆ ದೇಶದಲ್ಲೇ ಅತೀ ಹೆಚ್ಚು ಮೊತ್ತದ ಸಂಭಾವನೆ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.

    ಇನ್ಫೋಸಿಸ್ ತನ್ನ ಷೇರುದಾರರ ವಾರ್ಷಿಕ ವರದಿಯಲ್ಲಿ ಸಿಇಒ ವೇತನದ ವಿವರಗಳನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಇನ್ಫೋಸಿಸ್ ಕಂಪನಿಯ ಉದ್ಯಮದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ಇದರಲ್ಲಿ ಪರೇಖ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆ ಅವರ ವೇತನವನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

    ಪರೇಖ್ ಇನ್ಫೋಸಿಸ್‌ನ ಸಿಇಒ ಆಗಿ ಮರುನೇಮಕಗೊಂಡ ಕೆಲವೇ ದಿನಗಳಲ್ಲಿ ಅವರ ವೇತನ ಹೆಚ್ಚಳವಾಗಿದೆ. ಪರೇಖ್ 2022 ಜುಲೈ 1 ರಿಂದ 2027 ಮಾರ್ಚ್ 31ರ ವರೆಗೆ 5 ವರ್ಷಗಳ ಕಾಲ ಇನ್ಫೋಸಿಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಟೆಕ್ ಉದ್ಯಮದಲ್ಲಿ ಪರೇಖ್ ಮಾತ್ರವೇ ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳದೇ, ಹಲವು ಇತರ ಟೆಕ್ ಕಂಪನಿಗಳೂ ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದೆ. ಜಾಗತಿಕವಾಗಿ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ತಂತ್ರಜ್ಞಾನದ ಉದ್ಯಮದಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಕಂಪನಿಗಳು ಉದ್ಯಮದಲ್ಲಿ ಪ್ರಗತಿ ಕಾಣುತ್ತಿವೆ. ಇದನ್ನೂ ಓದಿ: ಸಿನಿಮಾಗಾಗಿ ಕಂಬಳದ ಕೋಣ ಓಡಿಸಿದ ರಿಯಲ್ ಹೀರೋ ಶ್ರೀನಿವಾಸ್ ಗೌಡ

  • ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

    ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಕೊಳ್ಳುವ ಯೋಜನೆ ಬೆನ್ನಲ್ಲೇ ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಮಂಡಳಿಯಿಂದ ಹೊರನಡೆದಿದ್ದಾರೆ.

    ಜಾಕ್ ಡೋರ್ಸೆ ಟ್ವಿಟ್ಟರ್ ಸಿಇಒ ಆಗಿ ಮತ್ತೆ ಬರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಡೋರ್ಸೆ ಮಂಡಳಿಯಿಂದ ಕೆಳಗಿಳಿದು, ಮತ್ತೆ ಟ್ವಿಟ್ಟರ್ ಸಿಇಒ ಆಗಿ ಹಿಂದಿರುಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ: ಕೆಲವು ಐಫೋನ್‌ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸಪ್

    Elon Musk twitter 1

    ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಆದರೆ 44 ಬಿಲಿಯನ್ ಡಾಲರ್‌(ಸುಮಾರು 3 ಲಕ್ಷ ಕೋಟಿ ರೂ.) ಒಪ್ಪಂದವನ್ನು ಅನೇಕ ಕಾರಣಗಳಿಂದಾಗಿ ತಡೆ ಹಿಡಿಯಲಾಗಿದೆ.

    ಡಾರ್ಸೆ ಟ್ವಿಟ್ಟರ್ ಸಿಇಒ ಹುದ್ದೆಯಿಂದ ಕೆಳಗಿಳಿದಂದಿನಿಂದ ಮಂಡಳಿಯನ್ನು ತೊರೆಯುವ ಬಗ್ಗೆ ತಿಳಿಸಿದ್ದರು. 2022ರ ಷೇರುದಾರರ ಸಭೆಯಲ್ಲಿ ತಮ್ಮ ಅವಧಿ ಮುಗಿಯುವವರೆಗೆ ಮಂಡಳಿಯ ಭಾಗವಾಗಿಯೇ ಇರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಚಾಂಪಿಯನ್‍ಷಿಪ್‍ಗೆ ಮಾನ್ಯತೆ ಪಡೆದ ಐರ್ಲೆಂಡ್, ಬಾಂಗ್ಲಾದೇಶ

    2021ರ ನವೆಂಬರ್‌ನಲ್ಲಿ ಡಾರ್ಸೆ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆಗೆ ನಿಖರವಾದ ಕಾರಣವನ್ನು ಉಲ್ಲೇಖಿಸಿರಲಿಲ್ಲ. ಡೋರ್ಸೆ ಪ್ರಸ್ತುತ ಹಣಕಾಸು ಪಾವತಿ ಪ್ಲಾಟ್‌ಫಾರ್ಮ್ ಆಗಿರುವ ಬ್ಲಾಕ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಇದಕ್ಕೆ ಸ್ಕ್ವೇರ್ ಎಂಬ ಹೆಸರಿತ್ತು.

  • ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಒಂದೇ ಬಾರಿಗೆ ಸಂಬಳ ಡಬಲ್

    ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಒಂದೇ ಬಾರಿಗೆ ಸಂಬಳ ಡಬಲ್

    ನ್ಯೂಯಾರ್ಕ್: ಮೈಕ್ರೋಸಾಫ್ಟ್ ಕಂಪನಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ, ಶೀಘ್ರದಲ್ಲೇ ಸಂಬಳ ಹೆಚ್ಚಳವಾಗಲಿದೆ. ಈ ಸುದ್ದಿಯನ್ನು ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಖಚಿತಪಡಿಸಿದ್ದಾರೆ.

    ಮೈಕ್ರೋಸಾಫ್ಟ್ ಕಂಪನಿಯು ತಮ್ಮ ಜಾಗತಿಕ ಅರ್ಹತೆಯ ಬಜೆಟ್ ಅನ್ನು ಸುಮಾರು ದ್ವಿಗುಣಗೊಳಿಸಿದೆ. ಪ್ರಪಂಚದಾದ್ಯಂತದ ದೊಡ್ಡ ಟೆಕ್ ಕಂಪನಿಗಳು ಉನ್ನತ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಹಿನ್ನೆಲೆ ತಮ್ಮ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸುತ್ತಿದೆ.

    ಉದ್ಯೋಗಿಗಳಿಗೆ ಮೇಲ್ ಮಾಡಿರುವ ಸತ್ಯಾ ನಾಡೆಲ್ಲಾ, ನಮ್ಮ ಗ್ರಾಹಕರು ಮತ್ತು ಪಾಲುದಾರರನ್ನು ಸಶಕ್ತಗೊಳಿಸಲು ನೀವು ಮಾಡುವ ಅದ್ಭುತ ಕೆಲಸದಿಂದಾಗಿ ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ನಿಮ್ಮ ಪ್ರಭಾವದಿಂದ ನಾವು ದೊಡ್ಡದಾಗಿ ಬೆಳೆದಿದ್ದೇವೆ. ನಮ್ಮ ಕಂಪನಿಯು ಪ್ರಪಂಚದಾದ್ಯಂತ ಆಳವಾಗಿ ಮೆಚ್ಚುಗೆ ಪಡೆದಿದೆ. ಅದಕ್ಕಾಗಿ ನಾನು ನಿಮಗೆ ದೊಡ್ಡ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    BRIBE

    ಉದ್ಯೋಗಿಗಳ ವೇತನವನ್ನು ಕೇವಲ ಮೈಕ್ರೋಸಾಫ್ಟ್ ಕಂಪನಿ ಮಾತ್ರ ಹೆಚ್ಚಿಸಿಲ್ಲ. ಈ ಹಿಂದೆ ಫೆಬ್ರವರಿಯಲ್ಲಿ ಅಮೆಜಾನ್ ಕಂಪನಿಯು ಸಹಿತ ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಿಗಳಿಗೆ ಕ್ರಮವಾಗಿ 3,50,000 ಡಾಲರ್, 1,60,000 ಡಾಲರ್ ವರೆಗೆ ಗರಿಷ್ಠ ಮೂಲ ವೇತನವನ್ನು ಏರಿಸಿತ್ತು.

    ಜನವರಿಯಲ್ಲಿ, ಗೂಗಲ್ ತನ್ನ ನಾಲ್ವರು ಉನ್ನತ ಕಾರ್ಯನಿರ್ವಾಹಕರ ಸಂಬಳವನ್ನು ಹೆಚ್ಚಿಸಿತ್ತು. ಅವರ ಮೂಲ ವೇತನವನ್ನು 6,50,000 ಡಾಲರ್‌ನಿಂದ 10 ಲಕ್ಷ ಡಾಲರ್‌ವರೆಗೆ ಏರಿಸಿತ್ತು.