Tag: ಸಿಂಪಲ್ ಕ್ವೀನ್

  • ತುಂಡೈಕ್ಳ ಹೃದಯ ಕದ್ದ ರೌಡಿ ಬೇಬಿಯ ದೇಸಿ ಲುಕ್

    ತುಂಡೈಕ್ಳ ಹೃದಯ ಕದ್ದ ರೌಡಿ ಬೇಬಿಯ ದೇಸಿ ಲುಕ್

    ನಟಿ ಸಾಯಿ ಪಲ್ಲವಿಗೂ ಸೀರೆಗೂ ಸಿಕ್ಕಾಪಟ್ಟೆ ಕನೆಕ್ಷನ್ ಇದೆ. ಸಿಂಪಲ್ ಆಗಿ ಡ್ರೆಸ್ ಮಾಡುವ ಮೂಲಕವಾಗಿ ಎಲ್ಲರ ಗಮನ ಸೆಳೆಯುವ ಸಾಯಿಪಲ್ಲವಿ ಇದೀಗ ಚಂದದ ಆಕಾಶ ಬಣ್ಣದ ಸೀರೆಯಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಎಲ್ಲರನ್ನ ತಮ್ಮತ್ತ ಆಕರ್ಷಿತರನ್ನಾಗಿ ಮಾಡಿದ್ದಾರೆ.

    ಸಾಯಿ ಪಲ್ಲವಿ ನೀಲಿ ಬಣ್ಣದ ಸೀರೆಯಲ್ಲಿ ನಿಂತು ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ನೆಟ್ಟಿಗರು ಸಾಯಿ ಪಲ್ಲವಿ ಲುಕ್‍ಗೆ ಮನಸೋತಿದ್ದಾರೆ.

    ನಟಿ ಸಿಂಪಲ್ ಮತ್ತು ದುಬಾರಿ ಸೀರೆಗೆ ಹೊಂದುವಂತೆ ತೋಳಿಲ್ಲದ ಬ್ಲೌಸ್ ಧರಿಸಿದ್ದಾರೆ. ಬೆಳ್ಳಿ ಕಿವಿಯೋಲೆ ಧರಿಸಿ ಕೂದಲನ್ನು ಎಂದಿನಂತೆ ಫ್ರೀ ಬಿಟ್ಟಿದ್ದಾರೆ. ಸಾಯಿ ಪಲ್ಲವಿ ನೀಲಿ ಸೀರೆಯಲ್ಲಿ ಸಿಂಪಲ್ ಆಗಿ ಸೂಪರ್ ಆಗಿ ಕಾಣುತ್ತಿದ್ದರು.

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿ ಪಲ್ಲವಿ ಎಲ್ಲ ವಿಷಯಗಳನ್ನು ಸರಳವಾಗಿಡಲು ಇಷ್ಟಪಡುತ್ತಾರೆ. ಹಾಗೆಯೇ ತೆರೆಯ ಮೇಲೆ ಯಾವುದೇ ಮೇಕಅಪ್‍ಗೆ ಆದ್ಯತೆ ನೀಡದ ಏಕೈಕ ನಟಿ ಇವರಾಗಿದ್ದಾರೆ. ತೆರೆ ಮೇಲೆ ಮತ್ತು ತೆರೆ ಹಿಂದೆ ಸಿಂಪಲ್ ಆಗಿ ಕಾಣಿಸಿಕೊಳ್ಳುವುದೆ ಹೆಚ್ಚು. ಈ ನಟಿಯ ಸರಳ ನೋಟಕ್ಕೆ ಹಲವಾರು ಅಭಿಮಾನಿಗಳಿದ್ದಾರೆ.

    ಸೌತ್ ಸಾಯಿ ಪಲ್ಲವಿ ಅವರ ನೀಲಿ ಸೀರೆಯ ನೋಟ ವೈರಲ್ ಆಗಿದೆ. ಸಿಂಪಲ್ ಕ್ವೀನ್ ಸಾಯಿಪಲ್ಲವಿಯ ದೇಸಿ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದೆ. ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಸಿನಿಮಾ ಏಪ್ರಿಲ್ 16 ರಂದು ಬಿಡುಗಡೆಯಾಗಲಿದೆ.