Tag: ಸಿಂಪಲ್ಲಾಗೊಂದ್ ಲವ್ ಸ್ಟೋರಿ

  • ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

    ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

    ಹೃದಯಾಘಾತದಿಂದ ಇಂದು ನಿಧನರಾಗಿರುವ ಆರ್.ಜೆ. ರಚನಾ ಸಿನಿಮಾದಲ್ಲಿಯೂ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ್ದ ‘ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಸಿನಿಮಾದಲ್ಲಿ ಆರ್.ಜೆ ರಚನಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ಅವರು ಆರ್.ಜೆ ಆಗಿಯೇ ಕಾಣಿಸಿಕೊಂಡಿದ್ದು ವಿಶೇಷ. ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ರಚನಾ ಕುಟುಂಬ

     

    ಸಿನಿಮಾದ ನಾಯಕನ ಪಾತ್ರ ತನ್ನ ಹುಡುಗಿಯ ಜತೆ ಟ್ರಾವೆಲ್ ಮಾಡಿದರೆ, ರೇಡಿಯೋ ಸ್ಟೇಶನ್ ನಲ್ಲಿ ಕುಳಿತುಕೊಂಡೇ ಇಡೀ ಕಥೆಯನ್ನು ರಚನಾ ಹೇಳುತ್ತಾ ಹೋಗುವುದು ಸಿನಿಮಾದ ವಿಶೇಷಗಳಲ್ಲಿ ಒಂದು. ಇದನ್ನೂ ಓದಿ : ಕಂಚಿನ ಕಂಠದ ಆರ್.ಜೆ ರಚನಾ ಹೃದಯಾಘಾತದಿಂದ ನಿಧನ

    ರಚನಾ ಅವರ ಧ್ವನಿಯೇ ಈ ಪಾತ್ರಕ್ಕೆ ಆಯ್ಕೆ ಮಾಡಿಸಿತ್ತು ಎನ್ನುತ್ತಾರೆ ನಿರ್ದೇಶಕ ಸುನಿ. ರಚನಾ ಅವರ ಧ್ವನಿಯಲ್ಲಿ ಮೋಡಿ ಮಾಡುವಂತಹ ಶಕ್ತಿಯಿದೆ. ಅಲ್ಲದೇ, ಜನರಿಗೆ ಮನದಟ್ಟು ಮಾಡುವಂತಹ ಕಲೆಯೂ ಇದೆ. ಅದನ್ನು ನಾನು ಗುರುತಿಸಿಯೇ ಆ ಪಾತ್ರವನ್ನು ಅವರಿಗೆ ನೀಡಿದ್ದು ಎಂದಿದ್ದರು ಸಿಂಪಲ್ ಸುನಿ. ಇದನ್ನೂ ಓದಿ : ವೇದಿಕಾಗೆ ಸಿಕ್ತು ಬಂಪರ್ ಆಫರ್

    2013ರಲ್ಲಿ ಈ ಸಿನಿಮಾ ತೆರೆ ಕಂಡಾಗ ಸ್ವತಃ ರಚನಾ ಅವರೇ ಸಂಭ್ರಮದಿಂದ ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಮತ್ತೆ ಮತ್ತೆ ಸಿನಿಮಾದಲ್ಲಿ ನಟಿಸುವ ಆಸೆಯನ್ನೂ ಅವರು ವ್ಯಕ್ತ ಪಡಿಸಿದ್ದರು.