Tag: ಸಿಂಧ್ ನದಿ

  • J&K | ಬೆಳ್ಳಂಬೆಳಗ್ಗೆ ಅವಘಡ – ಸಿಂಧ್ ನದಿಗೆ ಬಿದ್ದ ITBP ಯೋಧರನ್ನು ಕರೆದೊಯ್ಯುತ್ತಿದ್ದ ಬಸ್

    J&K | ಬೆಳ್ಳಂಬೆಳಗ್ಗೆ ಅವಘಡ – ಸಿಂಧ್ ನದಿಗೆ ಬಿದ್ದ ITBP ಯೋಧರನ್ನು ಕರೆದೊಯ್ಯುತ್ತಿದ್ದ ಬಸ್

    – ಕೆಲ ಶಸ್ತ್ರಾಸ್ತ್ರಗಳು ನಾಪತ್ತೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಗಂಡೇರ್ಬಲ್‌ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಐಟಿಬಿಪಿ (Indo Tibetan Border Police) ಯೋಧರನ್ನು ಕರೆದೊಯ್ಯುತ್ತಿದ್ದ ಬಸ್‌ ಭಾರೀ ಮಳೆಯ ನಡುವೆ ಸಿಂಧ್‌ ನದಿಗೆ ಉರುಳಿ ಬಿದ್ದಿದೆ.

    ಈಗಾಗಲೇ ಎಸ್‌ಡಿಆರ್‌ಎಫ್‌ (SDRF) ತಂಡ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಸಂಬಂಧಪಟ್ಟ ಸಂಸ್ಥೆಗಳೂ ನೆರವಿಗೆ ಧಾವಿಸಿವೆ.‌ ಭಾರೀ ಮಳೆಯ ಹಿನ್ನೆಲೆ ದುರಂತ ಸಂಭವಿಸಿದ್ದು, ಕೆಲವು ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ

    ರಕ್ಷಣಾ ತಂಡಗಳ ಹುಡುಕಾಟದ ವೇಲೆ ಈವರೆಗೆ ಮೂವರು ಶಸ್ತ್ರಾಸ್ತ್ರಗಳು ಸಿಕ್ಕಿವೆ. ಇನ್ನುಳಿದ ಶಸ್ತ್ರಾಸ್ತ್ರಗಳಿಗೆ ಹುಡುಕಾಟ ನಡೆಯುತ್ತಿದೆ. ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್‌ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್‌

  • ಪ್ರವಾಹದ ಬಳಿಕ ನದಿ ಕಿನಾರೆಯಲ್ಲಿ ಬೆಳ್ಳಿ ನಾಣ್ಯಗಳು ಪತ್ತೆ

    ಪ್ರವಾಹದ ಬಳಿಕ ನದಿ ಕಿನಾರೆಯಲ್ಲಿ ಬೆಳ್ಳಿ ನಾಣ್ಯಗಳು ಪತ್ತೆ

    – ನಾಣ್ಯ ಹುಡುಕಾಟಕ್ಕೆ ನದಿಗೆ ಇಳಿದ ಗ್ರಾಮಸ್ಥರು

    ಭೋಪಾಲ್: ಪ್ರವಾಹದ ಬಳಿಕ ಮಧ್ಯಪ್ರದೇಶದ ಗ್ರಾಮದ ಬಳಿಯ ನದಿ ದಡದಲ್ಲಿ ಬೆಳ್ಳಿ ನಾಣ್ಯಗಳು ಸಿಗುತ್ತಿದ್ದು, ಇಡೀ ಗ್ರಾಮಸ್ಥರು ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಅಶೋಕ ನಗರ ದ ಪಂಚವಾಲಿ ಗ್ರಾಮದ ಬಳಿಯಲ್ಲಿರುವ ಸಿಂಧ್ ನದಿಯ ದಡದಲ್ಲಿ ಬೆಳ್ಳಿ ನಾಣ್ಯಗಳು ಸಿಗುತ್ತಿವೆ.

    ಕಳೆದ ಒಂದು ವಾರದಿಂದ ಸಿಂಧ್ ನದಿಯ ಪ್ರವಾಹ ಕಂಡು ಜನರು ಆತಂಕಕ್ಕೊಳಗಾಗಿದ್ದರು. ಮಳೆ ಕಡಿಮೆಯಾದ ಹಿನ್ನೆಲೆ ಪ್ರವಾಹ ಇಳಿಮುಖವಾಗಿದೆ. ಆದ್ರೆ ಭಾನುವಾರ ನದಿ ದಡದ ಬಳಿ ಹೊರಟಿದ್ದ ಕೆಲವರಿಗೆ ಬೆಳ್ಳಿ ನಾಣ್ಯ ಸಿಕ್ಕಿವೆ. ಹಾಗೆ ಹುಡುಕುತ್ತಾ ಹೊರಟವರಿಗೆ ಕೆಲವು ನಾಣ್ಯಗಳು ಸಿಕ್ಕಿವೆ. ಕ್ಷಣಾರ್ಧದಲ್ಲಿ ಈ ಸುದ್ದಿ ಗ್ರಾಮದ ತುಂಬೆಲ್ಲ ವ್ಯಾಪಿಸಿದೆ. ಇಡೀ ಗ್ರಾಮಸ್ಥರು ನದಿ ದಡಕ್ಕೆ ಆಗಮಿಸಿ ಬೆಳ್ಳಿ ನಾಣ್ಯಗಳನ್ನು ಹುಡುಕುತ್ತಿದ್ದಾರೆ.

    ಗ್ರಾಮಸ್ಥರಿಗೆ ಸಿಕ್ಕಿರುವ ನಾಣ್ಯಗಳ ಮೇಲೆ ಇಂಗ್ಲಿಷ್ ನಿಂದ ಬರೆಯಲಾಗಿದ್ದು, 1862 ಇಸವಿಯ ಅಚ್ಚು ಇದೆ. ಜೊತೆಗೆ ಒಂದು ರೂಪಾಯಿ, ಭಾರತ ಅಂತ ಟಂಕಿಸಲಾಗಿದೆ. 1862ರಲ್ಲಿಯ ನಾಣ್ಯಗಳು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇದನ್ನೂ ಓದಿ: ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

    ಸದ್ಯ ನಾಣ್ಯಗಳ ಫೋಟೋ ಮತ್ತು ನದಿಯಲ್ಲಿ ಜನರು ಹುಡುಕಾಟ ನಡೆಸುತ್ತಿರುವ ವೀಡಿಯೋಗಳು ವೈರಲ್ ಆಗಿವೆ. ಈ ನಾಣ್ಯಗಳು ಗ್ರಾಮದ ಬಳಿ ಹೇಗೆ ಬಂದವು? ಯಾರಿಗೆ ಎಷ್ಟು ನಾಣ್ಯ ಸಿಕ್ಕಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಯಾರೋ ಮನೆಯಲ್ಲಿ ಈ ನಾಣ್ಯಗಳನ್ನು ಬಚ್ಚಿಟ್ಟಿರಬೇಕು. ಮನೆ ಪ್ರವಾಹಕ್ಕೆ ಸಿಲುಕಿರೋದರಿಂದ ನಾಣ್ಯಗಳು ಚೆಲ್ಲಾಪಿಲ್ಲಿ ಆಗಿರಬಹುದು ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!