Tag: ಸಿಂಧೂರ ಲಕ್ಷ್ಮಣ

  • `ಸಿಂಧೂರ ಲಕ್ಷ್ಮಣ’ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ

    `ಸಿಂಧೂರ ಲಕ್ಷ್ಮಣ’ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ

    ನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ `ಸಿಂಧೂರ ಲಕ್ಷ್ಮಣ'(Sindhura Lakshmana) ಸದ್ಯದಲ್ಲೇ ಸೆಟ್ಟೇರುತ್ತಿರುವ ವಿಷ್ಯ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕನ್ನಡದ ನಟ ರಾಕ್ಷಸ ಡಾಲಿ(Dhannanjay) ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ನಿರ್ಮಾಪಕ ಉಮಾಪತಿ(Producer Umapathy) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇತ್ತೀಚೆಗೆ ಡಾಲಿ ನಟಿಸಿರುವ ಸಲಗ, ರತ್ನನ್ ಪ್ರಪಂಚ, ಬೈರಾಗಿ, ಪುಷ್ಪ, ಹೆಡ್‌ಬುಷ್, ಅಷ್ಟು ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. `ಹೆಡ್‌ಬುಷ್’ ನಂತರ ಸ್ಟಾರ್ ನಿರ್ಮಾಪಕ ಉಮಾಪತಿ ನಿರ್ಮಾಣದ ಚಿತ್ರಕ್ಕೆ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಹೋರಾಟಗಾರ `ವೀರ ಸಿಂಧೂರ ಲಕ್ಷ್ಮಣ’ನಾಗಿ ಡಾಲಿ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಈ ವಿಷ್ಯಕ್ಕೆ ಟ್ವಿಸ್ಟ್ ಸಿಕ್ಕಿದೆ. ನಿರ್ಮಾಪಕ ಉಮಾಪತಿ ಈ ಚಿತ್ರದ ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ:‘ಸಲಾರ್’ ಸಿನಿಮಾದಲ್ಲಿ ಕನ್ನಡದ ಯುವ ನಾಯಕ ಪ್ರಮೋದ್ ನಟಿಸಿದ್ದು ನಿಜ : ಪ್ರಶಾಂತ್ ನೀಲ್

    `ಸಿಂಧೂರ ಲಕ್ಷ್ಮಣ ಚಿತ್ರದ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಇಬ್ಬರೂ ಹೀರೋ ಇದ್ದಾರೆ. ಅವರೊಂದಿಗೆ ಮಾತುಕತೆ ಆಗಿ ಅಫಿಷಿಯಲ್ ಆಗಿ ಅಡ್ವಾನ್ಸ್ ಕೊಡುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಎಲ್ಲವೂ ಓಕೆ ಆದ ಮೇಲೆ ನಾನು ಅಧಿಕೃತವಾಗಿ ತಿಳಿಸುತ್ತೇನೆ. ಸದ್ಯಕ್ಕೆ ನಾನು ಚುನಾವಣೆ ಕಡೆ ಗಮನ ಹರಿಸುತ್ತೇನೆ. ಫೆಬ್ರವರಿ ಸಮಯದಲ್ಲಿ ಈ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಅಲ್ಲಿಯವರೆಗೂ ಎಲ್ಲರಿಗೂ ಸೀಕ್ರೆಟ್ ಆಗಿರುತ್ತದೆ ಎಂದು `ರಾಬರ್ಟ್’ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.

    ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿ ಸಿಂಧೂರ ಲಕ್ಷ್ಮಣನನ್ನು ಅಗಾಧವಾಗಿ ಗೌರವಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮದೇ ಶೈಲಿಯಲ್ಲಿ ಸಿಂಧೂರ ಲಕ್ಷ್ಮಣಹೋರಾಡಿದ್ದರು. ಬಡವರ ಬಳಿಯೇ ತೆರಿಗೆ ವಸೂಲಿ ಮಾಡುತ್ತಿದ್ದ ಬ್ರಿಟಿಷರ ನಿದ್ದೆಗೆಡಿಸಿದ್ದ ಈ ಸಿಂಧೂರ ಲಕ್ಷ್ಮಣ, ಇದೀಗ ಈ ಪಾತ್ರಕ್ಕೆ ಡಾಲಿ ಜೀವತುಂಬಲಿದ್ದಾರೆ. ಈಗಾಗಲೇ ಸ್ಕ್ರೀಪ್ಟ್ ವರ್ಕ್ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕುರಿತು ಮತ್ತಷ್ಟು ಅಪ್‌ಡೇಟ್ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಂಧೂರ ಲಕ್ಷ್ಮಣ ಸಿನಿಮಾ ಆಗುತ್ತಾ? ಅಂದುಕೊಂಡಿದ್ದು ನಡೆಯೋದು ಅನುಮಾನ?

    ಸಿಂಧೂರ ಲಕ್ಷ್ಮಣ ಸಿನಿಮಾ ಆಗುತ್ತಾ? ಅಂದುಕೊಂಡಿದ್ದು ನಡೆಯೋದು ಅನುಮಾನ?

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಹಾಗಾಗಿ ಅವರ ಹಳೆಯ ಕನಸೊಂದು ಮತ್ತೆ ಚಿಗುರೊಡೆದ ಬಗ್ಗೆ ಮಾತನಾಡಿದ್ದಾರೆ. ನಿನ್ನೆಯಷ್ಟೇ ಹಾಸ್ಯನಟ ಚಿಕ್ಕಣ್ಣಗಾಗಿ ಸಿನಿಮಾ ಶುರು ಮಾಡಿರುವ ಅವರು, ಈಗಾಗಲೇ ಹೇಳಿಕೊಂಡಂತೆ ‘ವೀರ ಸಿಂಧೂರ ಲಕ್ಷ್ಮಣ’ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ. ಕಳೆದೊಂದು ವರ್ಷದಿಂದ ಸುಮ್ಮನೆ ಇದ್ದವರು, ಇದೀಗ ಏಕಾಏಕಿಯಾಗಿ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಇಷ್ಟೊತ್ತಿಗೆ ಶೂಟಿಂಗ್ ಶುರುವಾಗಿ, ಕೊನೆಯ ಹಂತದ ಚಿತ್ರೀಕರಣದಲ್ಲಿ ಇರಬೇಕಿತ್ತು. ಕನ್ನಡದ ಸ್ಟಾರ್ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಅವರೇ ಲಕ್ಷ್ಮಣನ ಪಾತ್ರ ಮಾಡಲಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಆ ನಟನಿಗೂ ಮತ್ತು ನಿರ್ಮಾಪಕರಿಗೆ ಮನಸ್ತಾಪದ ಕಾರಣದಿಂದಾಗಿ ಪ್ರಾಜೆಕ್ಟ್ ತಣ್ಣಗಾಯಿತು. ಇದೀಗ ಮತ್ತೆ ಆ ಸಿನಿಮಾವನ್ನು ಮಾಡುವುದಾಗಿ ಉಮಾಪತಿ ನಿನ್ನೆಯಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಈ ಸಿನಿಮಾ ನಿರ್ದೇಶನ ಮಾಡಬೇಕಾಗಿದ್ದು ತರುಣ್ ಸುಧೀರ್. ತರುಣ್ ಅವರ ತಂದೆ ನಟ ಸುಧೀರ್ ಅವರು ಸಿಂಧೂರ ಲಕ್ಷ್ಮಣ ಪಾತ್ರದ ಮೂಲಕ ರಂಗಭೂಮಿಯಲ್ಲಿ ಫೇಮಸ್ ಆದವರು. ಹಾಗಾಗಿ ಈ ಪಾತ್ರವನ್ನು ಯಾರು ಚೆನ್ನಾಗಿ ನಿಭಾಯಿಸಬಲ್ಲರು ಎಂದು ಅವರಿಗೆ ಅಂದಾಜಿತ್ತು. ಹಾಗಾಗಿ ಸ್ಟಾರ್ ನಟನನ್ನೇ ಆಯ್ಕೆ ಮಾಡಿಕೊಂಡರು. ಆಮೇಲೆ ಅದೇನಾಯಿತೋ? ಈ ಸಿನಿಮಾವನ್ನು ಬಿಟ್ಟು, ಅದೇ ನಟರಿಗೆ ಮತ್ತೊಂದು ಕಥೆ ಬರೆದುಕೊಂಡರು ತರುಣ್. ಹಾಗಾಗಿ ಸಿಂಧೂರ ಲಕ್ಷ್ಮಣ ಸದ್ಯಕ್ಕಂತೂ ಅನುಮಾನ.

    ಈ ಸಿನಿಮಾ ಮೂಡಿ ಬಂದರೆ, ಒಂದೊಳ್ಳೆ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದೇ ಸದ್ಯಕ್ಕಿರುವ ಗೊಂದಲ. ಈ ಗೊಂದಲ ನಿವಾರಣೆ ಆಗುವುದು ತೀರಾಕಷ್ಟ. ಯಾಕೆಂದರೆ, ಸಂಬಂಧಗಳು ಅಷ್ಟೊಂದು ಸರಿ ಹೋಗಿಲ್ಲ. ಹಾಗಾಗಿ ಉಮಾಪತಿ ಬೇರೆ ನಟರಿಗೆ ಈ ಸಿನಿಮಾ ಮಾಡುತ್ತಾರಾ? ಅಥವಾ ಆಗಿರುವ ಗೊಂದಲಗಳನ್ನು ಸರಿ ಮಾಡಿಕೊಂಡು ಆ ಸ್ಟಾರ್ ನಟನ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv

  • ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ಡಿ ಬಾಸ್

    ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ಡಿ ಬಾಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೌರಾಣಿಕ ಪಾತ್ರಗಳಿಗೆ ಹೇಳಿ ಮಾಡಿಸಿದ ನಟ ಎನ್ನುವಂತಾಗಿದ್ದು, ಅದರಂತೆ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಸಿನಿಮಾಗಳಲ್ಲಿ ತಮ್ಮ ಖದರ್ ತೋರಿಸಿದ್ದಾರೆ. ಅದೇ ರೀತಿ ರಾಜ ವೀರ ಮದಕರಿ ಸಿನಿಮಾದ ಚಿತ್ರೀಕರಣ ಸಹ ಆರಂಭವಾಗಿದೆ. ಹೀಗಿರುವಾಗಲೇ ಡಿ ಬಾಸ್‍ಗಾಗಿ ಮತ್ತೊಂದು ಐತಿಹಾಸಿಕ ಸಿನಿಮಾ ಸಿದ್ಧವಾಗುತ್ತಿದೆ.

    ಹೌದು ರಾಬರ್ಟ್ ಸಿನಿಮಾ ಚಿತ್ರೀಕಣ ಬಹುತೇಕ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಡಿ ಬಾಸ್ ರಾಜ ವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕೇರಳದಲ್ಲಿ ಅಲ್ಪ ಪ್ರಮಾಣದ ಚಿತ್ರೀಕರಣ ಮುಗಿದಿದ್ದು, ಕರ್ನಾಟಕದಲ್ಲಿ ಚಿತ್ರೀಕರಣ ಮುಂದುವರಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಚೀತ್ರೀಕರಣ ಸಂಪೂರ್ಣ ಸ್ಥಗಿತವಾಯಿತು.

    ಇತ್ತೀಚೆಗೆ ರಾಜ್ಯ ಸರ್ಕಾರ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಶೂಟಿಂಗ್ ಕೆಲಸ ಗರಿಗೆದರಿದೆ. ಹೀಗಾಗಿ ಇನ್ನು ಚಿತ್ರೀಕರಣ ಶುರುವಾಗಲಿದೆ. ಲಾಕ್‍ಡೌನ್ ಮಧ್ಯೆಯೇ ಇದೀಗ ಇನ್ನೊಂದು ವಿಚಾರ ಬಹಿರಂಗವಾಗಿದ್ದು, ಡಿ ಬಾಸ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರಂತೆ. ಈ ಕುರಿತು ದರ್ಶನ್ ಆಸಕ್ತಿ ತೋರಿದ್ದು, ಸಿನಿಮಾ ಮಾಡುವ ಕುರಿತು ಮಾತುಕತೆ ಸಹ ನಡೆಸಿದ್ದಾರಂತೆ.

    ಉಮಾಪತಿ ಅವರು ಈಗಾಗಲೇ ಚಿತ್ರ ನಿರ್ಮಿಸುವ ಹಕ್ಕನ್ನು ಪಡೆದಿದ್ದಾರಂತೆ, ಚಿತ್ರ ನಿರ್ಮಿಸುವ ಕುರಿತು ಯೋಜನೆ ಇರುವುದು ನಿಜ. ಆದರೆ ಸದ್ಯ ಈ ಚಿತ್ರ ಸೆಟ್ಟೇರುವುದಿಲ್ಲ. ಏಕೆಂದರೆ ದರ್ಶನ್ ಈಗಾಗಲೇ ಮತ್ತೊಂದು ಐತಿಹಾಸಿಕ ರಾಜ ವೀರ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ಎರಡು ಚಿತ್ರಗಳ ನಡುವೆ ಅಂತರ ನೋಡಿಕೊಂಡು ಸಿನಿಮಾ ಮಾಡಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ತಾರಕ್ ಬಳಿಕ ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್, ಡಿ ಬಾಸ್‍ಗೆ ಮತ್ತೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಅಲ್ಲದೆ ರಾಜ ವೀರ ಮದಕರಿ ನಾಯಕ ಸಿನಿಮಾ ನಂತರ ದರ್ಶನ್ ಈ ಚಿತ್ರದಲ್ಲಿ ನಟೆಸಲಿದ್ದಾರೆ ಎಂದು ತಿಳಿದು ಬಂದಿದೆ.

    ಸಿಂಧೂರ ಲಕ್ಷ್ಮಣ ರಾಜ್ಯದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಈಗಾಗಲೇ ಸಂಗೊಳ್ಳಿ ರಾಯಣ್ಣನಾಗಿ ತಮ್ಮ ಅಬ್ಬರಿಸಿರುವ ಡಿ ಬಾಸ್, ಇದೀಗ ಸಿಂಧೂರ ಲಕ್ಷ್ಮಣನಾಗಿ ಘರ್ಜಿಸಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಚಿತ್ರ ಯಾವ ರೀತಿ ಸಿದ್ಧವಾಗಲಿದೆ ಕಾದು ನೋಡಬೇಕಿದೆ.