Tag: ಸಿಂಧು ಶ್ರೀನಿವಾಸ್ ಮೂರ್ತಿ

  • ಕಿಶೋರ್‌ಗೆ ‘ಆಚಾರ್ & ಕೋ’ ನಿರ್ದೇಶಕಿ ಆ್ಯಕ್ಷನ್ ಕಟ್

    ಕಿಶೋರ್‌ಗೆ ‘ಆಚಾರ್ & ಕೋ’ ನಿರ್ದೇಶಕಿ ಆ್ಯಕ್ಷನ್ ಕಟ್

    ನ್ನಡದ ನಟ ಕಿಶೋರ್ (Kishore) ಬಹುಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ‘ಆಚಾರ್ & ಕೋ’ (Achar & Co) ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ (Sindhu Srinivas Murthy) ನಿರ್ದೇಶನದಲ್ಲಿ ನಟಿಸಲು ಕಿಶೋರ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ

    ಸಾವು, ಅಂತ್ಯಸಂಸ್ಕಾರ ಮತ್ತು ಅನುಸರಿಸುವ ಆಚರಣೆಗಳ ವಿಷಯದ ಬಗ್ಗೆ ಕಥೆ ಹೇಳಲು ಕಿಶೋರ್ ಹೊರಟಿದ್ದಾರೆ. ವಿಭಿನ್ನ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. 13 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಇಲ್ಲಿ ಕಿಶೋರ್‌ಗೆ ಮಹಿಳಾ ನಿರ್ದೇಶಕಿ ಸಿಂಧು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದನ್ನೂ ಓದಿ:ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಇತ್ತೀಚೆಗೆ ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ನಿರ್ದೇಶನದ ಚೊಚ್ಚಲ ಸಿನಿಮಾಗೆ ಕಿಶೋರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ಮಹಿಳಾ ನಿರ್ದೇಶಕಿ ಜೊತೆ ಅವರು ಕೈಜೋಡಿಸಿದ್ದಾರೆ. ಹಾಗಾಗಿ ಈ ಸುದ್ದಿ ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

    ಅಂದಹಾಗೆ, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ (Sikandar) ಸಿನಿಮಾದಲ್ಲಿ ಕಿಶೋರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಮಾ.30ರಂದು ಈ ಚಿತ್ರ ರಿಲೀಸ್‌ ಆಗಿದ್ದು, ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ‘ಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ‘ಫ್ಯಾಮಿಲಿ ಡ್ರಾಮ’: ಟ್ರೈಲರ್ ರಿಲೀಸ್

    ‘ಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ‘ಫ್ಯಾಮಿಲಿ ಡ್ರಾಮ’: ಟ್ರೈಲರ್ ರಿಲೀಸ್

    ಲೋಕಸಭಾ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ.  ಈಗ ಎಲ್ಲಿ ನೋಡಿದರೂ ರಾಜಕೀಯದ್ದೆ ಸುದ್ದಿ ಸದ್ದು. ಈ ನಡುವೆ ಸಿನಿಮಾ ಕ್ಷೇತ್ರ ಕೊಂಚ ಮಂಕಾಗಿದೆ. ಚುನಾವಣಾ ಬಿಸಿಯ ನಡುವೆಯೂ ‘ಫ್ಯಾಮಿಲಿ ಡ್ರಾಮ’ ಸಿಕ್ಕಾಪಟ್ಟೆ ಸದ್ದು  ಮಾಡುತ್ತಿದೆ. ಇದ್ಯಾವ ಫ್ಯಾಮಿಲಿ ಡ್ರಾಮ (Family Drama) ಅಂತೀರಾ? ಸ್ಯಾಂಡಲ್‌ವುಡ್ ನಲ್ಲಿ ರಿಲೀಸ್‌ಗೆ ಸಿದ್ದವಾಗುತ್ತಿರುವ ಹೊಸ ಸಿನಿಮಾ. ಸದ್ಯ ಸಿನಿಮಾತಂಡ ಟ್ರೈಲರ್ (Trailer) ಮೂಲಕ ಸಿನಿಮಾ ಅಭಿಮಾನಿಗಳ ಮುಂದೆ ಬಂದಿದೆ. ಸಾಕಷ್ಟು ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ ‘ಫ್ಯಾಮಿಲಿ ಡ್ರಾಮ’.

    ಕ್ರಿಯೇಟಿವ್ ಆಗಿ ಮೂಡಿ ಬಂದಿರುವ ಈ ಟ್ರೈಲರ್ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಸಿನಿಮಾದ ಕಂಟೆಂಟ್ ಜೊತೆಗೆ ಟೆಕ್ನಿಕಲ್ ವಿಚಾಗಳು ಸಹ ಗಮನ ಸೆಳೆಯುತ್ತಿದೆ. ಯುವ ಪ್ರತಿಭೆ ಆಕರ್ಷ್ (Aakarsh) ನಿರ್ದೇಶನದಲ್ಲಿ  ಮೂಡಿ ಬಂದಿರುವ ಸಿನಿಮಾವಿದು. ಆಕರ್ಷ್‌ಗೆ ಇದು ಮೊದಲ ನಿರ್ದೇಶನದ ಸಿನಿಮಾ. ಹಾಗಂತ ಸಿನಿಮಾರಂಗ ಹೊಸದೇನಲ್ಲ. ಕಾಂತಾರ ಸ್ಚಾರ್ ರಿಷಬ್ ಶೆಟ್ಟಿ ಅವರ ಟೀಮ್‌ನಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ನಿರ್ದೇಶಕ. ಸದ್ಯ ರಿಲೀಸ್‌ಗೆ ರೆಡಿಯಾಗಿರುವ ‘ಲಾಫಿಂಗ್ ಬುದ್ದ’ ಸಿನಿಮಾದಲ್ಲಿ ಆಕರ್ಷ್ ಕೆಲಸ ಮಾಡಿದ್ದಾರೆ. ಜೊತೆಗೆ ಒಂದಿಷ್ಟು ಶಾರ್ಟ್ ಫಿಲ್ಮ್‌ಗಳನ್ನು ಮಾಡಿದ್ದಾರೆ.

    ಇನ್ನೂ ಈ ಸಿನಿಮಾದಲ್ಲಿ ಆಚಾರ್ ಆಂಡ್ ಕೋ ಸಿನಿಮಾದ  ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ (Sindhu Srinivas Murthy), ಡೇರ್ ಡೆವಿಲ್  ಮುಸ್ತಾಫ ಸಿನಿಮಾದಲ್ಲಿ ನಟಿಸಿರುವ ಅಭಯ್, ಪೂರ್ಣ ಮೈಸೂರು ಹಾಗೂ ಅನನ್ಯ ಅಮರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಆಚಾರ್ ಅಂಡ್ ಕೋ ಬಳಿಕ ಸಿಂಧು ಒಪ್ಪಿಕೊಂಡ ಚಿತ್ರ ಇದಾಗಿದೆ. ‘ಫ್ಯಾಮಿಲಿ ಡ್ರಾಮ’ ಡಾರ್ಕ್ ಕಾಮಿಡಿ ಸಿನಿಮಾ. ಮುಗ್ದ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ  ಕಥೆಯೇ ಫ್ಯಾಮಿಲಿ ಡ್ರಾಮ. ಸಾಕಷ್ಟು ಹೊಸತನದೊಂದಿಗೆ, ವಿಭಿನ್ನವಾಗಿ, ಕ್ರಿಯೇಟಿವ್ ಆಗಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಆಕರ್ಷ್ ಅಂಡ್ ಟೀಂ.

    ಚಿತ್ರದ ಟ್ರೈಲರ್  ಎಷ್ಟು ಗಮನ ಸೆಳೆಯುತ್ತಿದೆಯೂ ಹಾಗೆ ಪೋಸ್ಚರ್ ಕೂಡ ಅಷ್ಟೇ ಕ್ರಿಯೇಟಿವ್ ಆಗಿ ಮಾಡಿದ್ದಾರೆ. ಫಿಲಿಫೈನ್ಸ್ ನ ಕ್ರಿಯೇಟಿವ್ ಡಿಸೈನರ್ ಬಳಿ  ಫ್ಯಾಮಿಲಿ ಡ್ರಾಮ ಚಿತ್ರದ ಪೋಸ್ಟರ್ ಅನ್ನು ಡಿಸೈನ್ ಮಾಡಿಸಿದ್ದು ವಿಶೇಷವಾಗಿದೆ. ರೆಟ್ರೋ ಶೈಲಿಯಲ್ಲಿ ಡಿಸೈನ್‌ಗಳನ್ನು ನೋಡಬಹುದು. ಇನ್ನೂ ವಿಶೇಷ ಎಂದರೆ ಸಿನಿಮಾದ ಸಂಗೀತ ಕೂಡ  ರೆಟ್ರೋ ಶೈಲಿಯಲ್ಲಿ ಇದೆ. ಇವತ್ತಿನ ಕಾಲಘಟ್ಟದ ಕಥೆಯಾದರೂ ಸಂಗೀತ ರೆಟ್ರೋ ಶೈಲಿಯಲ್ಲಿ ಇರುವುದು ಈ ಸಿನಿಮಾದ ವಿಶೇಷವಾಗಿದೆ. ಅಂದಹಾಗೆ ಚಿತ್ರಕ್ಕೆ ಚೇತನ್ ಅಮಯ್ಯ ಸಂಗೀತ ಸಂಯೋಜನೆ ಮಾಡದ್ದಾರೆ.

  • 6 ನಿಮಿಷದ ಕಿರುಚಿತ್ರ ತೋರಿಸಿ, ಪುನೀತ್ ಬ್ಯಾನರ್ ನಲ್ಲಿ ಸಿನಿಮಾ ಮಾಡಿದ ನಿರ್ದೇಶಕಿ

    6 ನಿಮಿಷದ ಕಿರುಚಿತ್ರ ತೋರಿಸಿ, ಪುನೀತ್ ಬ್ಯಾನರ್ ನಲ್ಲಿ ಸಿನಿಮಾ ಮಾಡಿದ ನಿರ್ದೇಶಕಿ

    ಪುನೀತ್ ರಾಜ್ ಕುಮಾರ್ ನಿಧನದ ನಂತರ, ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿರುವ ಸಿನಿಮಾ ‘ಆಚಾರ್ ಅಂಡ್ ಕೋ’ ಈ ಸಿನಿಮಾ ಅನೌನ್ಸ್ ಆಗುವ ಮುನ್ನವೇ ಪಬ್ಲಿಕ್ ಟಿವಿ ಡಿಜಿಟಲ್ ಈ ವಿಷಯವನ್ನು ಬ್ರೇಕ್ ಮಾಡಿತ್ತು. ಇದೀಗ ಆ ಸಿನಿಮಾದ ಸಂಪೂರ್ಣ ಶೂಟಿಂಗ್ ಕೂಡ ಮುಗಿದಿದ್ದು, ಸದ್ಯ ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿರುವ ಚಿತ್ರವಾಗಿದ್ದು, 60 ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಮೈಸೂರಿನಲ್ಲಿ 60ರ ದಶಕದ ಬೆಂಗಳೂರು ಮರುಸೃಷ್ಟಿ ಮಾಡಿ ಬಹುತೇಕ ಅಲ್ಲಿಯೇ ಶೂಟಿಂಗ್ ಮಾಡಿದ್ದಾರಂತೆ. ಇಂಥದ್ದೊಂದು ಅವಕಾಶ ಮಾಡಿಕೊಟ್ಟ ಪುನೀತ್ ಮತ್ತು ಅಶ್ವಿನಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಸಿಂಧು. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಪುನೀತ್ ಬ್ಯಾನರ್ ನಲ್ಲಿ ನಿರ್ಮಾಣವಾದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಸಿಂಧು ನಟಿಸಿದ್ದರು. ಅದೇ ವೇಳೆಯಲ್ಲೇ ಆಚಾರ್ ಅಂಡ್ ಕೋ ಸಿನಿಮಾದ ಕಥೆಯನ್ನು ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರಿಗೆ ಹೇಳಿದ್ದರಂತೆ. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎನ್ನುವುದನ್ನು ಆರು ನಿಮಿಷದ ಕಿರುಚಿತ್ರ ಮಾಡಿಯೂ ತೋರಿಸಿದ್ದರಂತೆ. ಇದನ್ನು ಕಂಡು ಖುಷಿಯಾದ ಪುನೀತ್, ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾ ಮಾಡಲು ಹೇಳಿದರಂತೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಇದೀಗ ಪುನೀತ್ ಅವರ ಆಸೆಯಂತೆ ಸಿನಿಮಾದ ಬಹುತೇಕ ಶೂಟಿಂಗ್ ಅನ್ನು ಪೂರ್ಣಗೊಳಿಸಿರುವ ಸಿಂಧು, ಅಂದುಕೊಂಡಂತೆ ಚಿತ್ರೀಕರಣ ಮಾಡಿದ ಖುಷಿಯಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಬಿಂದು ಮಾಲಿನ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಸುಧಾ ಬೆಳವಾಡಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.