Tag: ಸಿಂಧು ಲೋಕನಾಥ್

  • ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ: ನಟಿ ಸಿಂಧು ಲೋಕನಾಥ್ ಕಹಿಕಾವ್ಯ

    ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ: ನಟಿ ಸಿಂಧು ಲೋಕನಾಥ್ ಕಹಿಕಾವ್ಯ

    ವಿಕ್ಕಿ ಪೀಡಿಯಾ ಅವರ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ (Naanu Nandini) ಹಾಡು ವೈರಲ್ ಆಗುತ್ತಿದ್ದಂತೆಯೇ ಅನೇಕರು ನಾನಾ ವಿಧದಲ್ಲಿ ಈ ಹಾಡನ್ನು ಬಳಸಿಕೊಳ್ಳುತ್ತಿದ್ದಾರೆ. ಸಾಹಿತ್ಯವನ್ನು ಬದಲಾಯಿಸಿ ತಮ್ಮದೇ ಆದ ರೀತಿಯಲ್ಲಿ ಸಾಂಗ್ ಮಾಡುತ್ತಿದ್ದಾರೆ. ಆದರೆ ನಟಿ ಸಿಂಧು ಲೋಕನಾಥ್ (Sindhu Loknath) ಸಾಹಿತ್ಯವನ್ನೇ ಬದಲಾಯಿಸಿ ಒಂದಷ್ಟು ನಟಿಯರನ್ನು ಕಾಲೆಳೆದಿದ್ದಾರೆ. ಜೊತೆಗೆ ಸಿನಿಮಾ ರಂಗದ ಕಹಿ ಸತ್ಯವನ್ನೂ ಅವರು ಹೊರಗೆ ಹಾಕಿದ್ದಾರೆ.

    ಸಿಂಧು ಲೋಕನಾಥ್ ಸಾಹಿತ್ಯದಲ್ಲಿ ಬಂದ ನಂದಿನಿ ಹಾಡು ತಮಾಷೆ ಅಂತೆ ಅನಿಸಿದರೂ, ವಾಸ್ತವವನ್ನು ತೆರೆದಿಟ್ಟಿದೆ. ಪ್ರತಿಭೆ ಇಲ್ಲದೇ ಇದ್ದರೂ, ಅವಾರ್ಡ್ ಪಡೆಯುವವರ ವಿರುದ್ಧ ಈ ಹಾಡನ್ನು ತಿರುಗಿಸಿದ್ದಾರೆ. ಗ್ಲಾಮರ್ ಇದೆ ಅಂದ ಮಾತ್ರಕ್ಕೆ ಅವಕಾಶ ಪಡೆಯುತ್ತೇನೆ ಎನ್ನುವವರ ಬಗ್ಗೆಯೂ ಅವರು ತಿವಿದಿದ್ದಾರೆ.

    ಸಿಂಧು ಬರೆದ ಹಾಡು

     

    ನಾನು ನಂದಿನಿ ಬೆಂಗಳೂರಿಗೆ ಬಂದೀನಿ

    ಸಿನಿಮಾ ಮಾಡ್ತೀನಿ, ಹೀರೋಯಿನ್ ಆಗ್ತೀನಿ

    ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ

    ಬಂದಿದ್ದ್ ದುಡ್ಡೆಲ್ಲ ಮಜಾ ಉಡಾಯಿಸ್ತೀನಿ

    ಬಾರೇ ನಂದಿನಿ ಬೆಂಗಳೂರು ತೋರಸ್ತೀನಿ

    ಬೇ ಬೇ ಬೇಡಾ

    ಬಾರೇ ನಂದಿನಿ ಡ್ರೈವ್ ಕರ್ಕೊಂಡು ಹೋಗ್ತೀನಿ

    ಓಹ್‍ ಬೇಡ ಓಹ್ ಬೇಡ.

    ಬಾರೇ ನಂದಿನಿ ಟಾಲಿವುಡ್ ತೋರಸ್ತೀನಿ

    ಬೇ ಬೇ ಬೇಡ

    ಬಾರೇ ನಂದಿನಿ ಕಾಲಿವುಡ್ ತೋರಸ್ತೀನಿ

    ಬೇ ಬೇ ಬೇಡ..

    ನೋಡಮ್ಮ ಇಲ್ಲಿ ನೀನು ಆಕ್ಟಿಂಗ್ ಕಲಿಬೇಕು

    ಇಲ್ಲದಿದ್ರೆ ನಿಂಗಿಲ್ಲ ಕಷ್ಟ ಆಗುತ್ತದೆ

    ಸರ್ ನಾನು ಗ್ಲಾಮರಸ್ ಬಟ್ಟೆ ಹಾಕೊತೀನಿ

    ಯಾಕಂದ್ರೆ ನಾನ್ ಆಕ್ಟಿಂಗ್ ಅಷ್ಟಕ್ ಅಷ್ಟೆ, ಐ ಕ್ಯಾನ್ ಟ್ರೈ, ಐ ಕ್ಯಾನ್ ಆಕ್ಟ್, ಇಫ್ ನಾಟ್ ಐ ವಿಲ್ ಫ್ಲೈ ಟು ಬಾಲಿವುಡ್

    ನಾನು ನಂದಿನಿ ಬೆಂಗಳೂರಿಗೆ ಬಂದೀನಿ

    ಸಿನಿಮಾ ಮಾಡ್ತೀನಿ, ಹೀರೋಯಿನ್ ಆಗ್ತೀನಿ

    ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ

    ಹೀಗೆ ಸಾಹಿತ್ಯವೊಂದನ್ನು ಬರೆದು ವಿಕ್ಕಿ ಪೀಡಿಯಾ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಅನೇಕರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಅವರು ಹೆಸರನ್ನೂ ಹಾಕಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಕ್ಕಿಂ ಪ್ರವಾಸದಲ್ಲಿ ನಟಿ ಸಿಂಧು ಲೋಕನಾಥ್

    ಸಿಕ್ಕಿಂ ಪ್ರವಾಸದಲ್ಲಿ ನಟಿ ಸಿಂಧು ಲೋಕನಾಥ್

    ಸ್ಯಾಂಡಲ್‌ವುಡ್ ಬ್ಯೂಟಿ ಸಿಂಧು ಲೋಕನಾಥ್ ಪರಿಚಯ, ಡ್ರಾಮಾ, `ಲವ್ ಇನ್ ಮಂಡ್ಯ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಈಗ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಬೈಕ್‌ನಲ್ಲಿ ಒಬ್ಬರೇ ಟ್ರಾವೆಲ್ ಮಾಡುತ್ತಾ ಹೊಸ ಜಾಗಗಳಿಗೆ ಭೇಟಿ ಕೊಡ್ತಿದ್ದಾರೆ. ಈ ಫೋಟೋಗಳು ಸದ್ಯ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Sindhu Loknath (@sindhuloknath)

    ಚಂದನವನದ `ಡ್ರಾಮಾ’ ಚೆಲುವೆ ಸಿಂಧು ಲೋಕನಾಥ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಶೂಟಿಂಗ್ ಮಧ್ಯೆ ಹೊಸ ಜಾಗಗಳಿಗೆ ಆಗಾಗ ಭೇಟಿ ಕೊಡ್ತಿರತ್ತಾರೆ. ಟ್ರಾವೆಲಿಂಗ್‌ನ ಅತೀ ಹೆಚ್ಚು ಇಷ್ಟ ಪಡುವ ನಟಿ ಸಿಂಧು ಇದೀಗ ಸಿಕ್ಕಿಂಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿಂದ ಸಿಕ್ಕಂಗೆ ಒಬ್ಬರೇ ಜರ್ನಿ ಮಾಡಿ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿಂಧು ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

     

    View this post on Instagram

     

    A post shared by Sindhu Loknath (@sindhuloknath)

    ಇನ್ನು ಸಿಂಧು ಲೋಕನಾಥ್ ಕಡೆಯದಾಗಿ ಕಾಣಿಸಿಕೊಂಡ ಸಿನಿಮಾ, ಕಾಣದಂತೆ ಮಾಯವಾದನು, ಕೃಷ್ಣ ಟಾಕೀಸ್ ಚಿತ್ರದಲ್ಲಿ ನಟಿಸಿದ್ದರು. ಇದೀಗ `60 ಡೇಸ್’ ಎಂಬ ಸಿನಿಮಾಗೆ ಬಣ್ಣ ಹಚ್ಚಿದ್ದು, ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ಸಿಗಲಿದೆ.

  • ಸ್ಪೆಷಲ್ ಹಾಡಿಗೆ ಮಾದಕ ಹೆಜ್ಜೆ ಹಾಕಿದ ಸಿಂಧೂ ಲೋಕನಾಥ್

    ಸ್ಪೆಷಲ್ ಹಾಡಿಗೆ ಮಾದಕ ಹೆಜ್ಜೆ ಹಾಕಿದ ಸಿಂಧೂ ಲೋಕನಾಥ್

    ಹಿಂದೆ ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರ ಲೋಕಕ್ಕೆ ಪರಿಚಿತರಾದ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ತಯಾರಾಗಿದೆ. ಅದೇ 1975. ಕ್ರೈಮ್ ಥ್ರಿಲ್ಲರ್ ಕಥಾಹೂರಣ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರತಿಭಾನ್ವಿತ ತಾರಾಬಳಗವಿದೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ಈ ಸಿನಿಮಾದ ಮೆಲೋಡಿ ಪಬ್ ಸಾಂಗ್ ವೊಂದರಲ್ಲಿ ಸಿಂಧೂ ಲೋಕನಾಥ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದ್ದು, ಚಿತ್ರತಂಡ ಈ ಬಗ್ಗೆ ಮಾಧ್ಯಮದವರ ಮುಂದೆ ಹಾಜರಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    ನನ್ನ ಸಿನಿಮಾ ಜರ್ನಿಯಲ್ಲಿ ಈ ರೀತಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿರುವುದು. ಸಾಂಗ್ ತುಂಬಾ ಚೆನ್ನಾಗಿದೆ. ಈ ಸಾಂಗ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹೊಸಬರ ತಂಡ ಇಡೀ ಟೀಂಗೆ ಒಳ್ಳೆದಾಗಲಿ ಎಂದು ಸಿಂಧು ಲೋಕನಾಥ್ ತಮ್ಮ ಅನುಭವ ಹಂಚಿಕೊಂಡಿರು. ಸಿಸಿಬಿ ಸಹಾಯವಾಗುವ, ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವಿಷ್ಯವಿದು. ನಿರ್ಮಾಪರು ಕೇಳಿದೆಲ್ಲವನ್ನೂ ಕೊಟ್ಟಿದ್ದಾರೆ. ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದರು. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಚಿತ್ರೀಕರಣ ನಡೆದಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿದೆ.

  • ತಪ್ಪು ದಾರಿ ಹಿಡಿದ ಹುಡುಗಿಯ ಪಾತ್ರದಲ್ಲಿ ನಟಿ ಸಿಂಧು ಲೋಕನಾಥ್

    ತಪ್ಪು ದಾರಿ ಹಿಡಿದ ಹುಡುಗಿಯ ಪಾತ್ರದಲ್ಲಿ ನಟಿ ಸಿಂಧು ಲೋಕನಾಥ್

    ಸಿಂಧು ಲೋಕನಾಥ್ ಸದ್ದಿಲ್ಲದೇ ಸಿನಿಮಾವೊಂದರ ಶೂಟಿಂಗ್ ಮುಗಿಸಿದ್ದು, ಈ ಸಿನಿಮಾದಲ್ಲಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದಾರಂತೆ. ಆ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ಈಗ ‘ಪದ್ಮವ್ಯೂಹ’ ಸಿನಿಮಾದ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಇದೊಂದು ಯುವ ಪೀಳಿಗೆಯ ಸುತ್ತ ಹೆಣೆದಿರುವ ಕತೆಯಾಗಿದ್ದು, ಈ ಚಿತ್ರದಲ್ಲಿ ಸಿಂಧು ಡ್ರಗ್ ಅಡಿಕ್ಟ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    ಶ್ರೀಮಂತ ಹುಡುಗಿಯು ತಪ್ಪು ದಾರಿ ತುಳಿದಾಗ ಅವಳ ಜೀವನ ಎತ್ತ ಸಾಗುತ್ತದೆ ಎನ್ನುವುದು ಇವರ ಪಾತ್ರದ ಹಿಂದಿರುವ ಹಿನ್ನೆಲೆಯಂತೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿಸಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

    ದಯಾನಂದ್ ಮತ್ತು ಅಮರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ರಾಕೇಶ್ ಅಡಿಗ, ವಿನಯ್ ಗೌಡ ಮತ್ತು ಕುಶಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರಂತೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

    ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾವಾಗಿದ್ದು, ಮೊದಲ ಬಾರಿಗೆ ಸಿಂಧು ಇಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದಾರಂತೆ. ಪಾತ್ರಕ್ಕೆ ಹಲವು ಸಿನಿಮಾಗಳನ್ನೂ ನೋಡಿದ್ದಾರಂತೆ. ಯಾರಿಗೂ ಕೇರ್ ಮಾಡದಂತಹ ಹುಡುಗಿಯ ಪಾತ್ರ ಇದಾಗಿದ್ದರಿಂದ ಅನೇಕ ಹುಡುಗಿಯರಿಗೆ ಈ ಪಾತ್ರ ಕನೆಕ್ಟ್ ಆಗಬಹುದು ಎಂದಿದ್ದಾರೆ ಸಿಂಧು. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಮೊನ್ನೆಯಷ್ಟೇ ಖಾಸಗಿ ವಾಹಿನಿಯ ಟಾಕ್ ಶೋನಲ್ಲಿ ಸಿಂಧು ಕಾಣಿಸಿಕೊಂಡಿದ್ದರು. ನೀನಾಸಂ ಸತೀಶ್ ಜತೆ ಡ್ಯುಯೆಟ್ ಹಾಡಿ, ಪ್ರೇಕ್ಷಕರನ್ನು ರಂಜಿಸಿದ್ದರು. ಈ ಕಂತು ಸಾಕಷ್ಟು ಜನರಿಗೆ ಹಿಡಿಸಿತ್ತು. ಇದೀಗ ಸಿನಿಮಾ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಖುಷಿ ಪಡಿಸಿದ್ದಾರೆ ಸಿಂಧು.

  • ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಡ್ರಾಮಾ, ಲವ್ ಇನ್ ಮಂಡ್ಯ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನ ಬೆಸ್ಟ್ ಪೇರ್ ಎನಿಸಿಕೊಂಡಿದ್ದ ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಎಂಟು ವರ್ಷಗಳಿಂದ ಯಾವುದೇ ಚಿತ್ರದಲ್ಲೂ ಜತೆಯಾಗಿ ನಟಿಸಿರಲಿಲ್ಲ. ಇದೀಗ ಇಬ್ಬರನ್ನೂ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿದೆ. ಸತೀಶ್ ಮತ್ತು ಸಿಂಧು ಮತ್ತೆ ಜತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮನರಂಜನೆ ನೀಡಲಿದ್ದಾರೆ. ಇದನ್ನೂ ಓದಿ : ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಡ್ರಾಮಾ ಸಿನಿಮಾದಲ್ಲಿ ಮೂಕಿಯಾಗಿ ನಟಿಸಿದ್ದ ಸಿಂಧು, ಸಿಕ್ಕಾಪಟ್ಟೆ ಮಾತನಾಡುವ ಸತೀಶ್ ಪಾತ್ರವನ್ನು ಇಷ್ಟ ಪಡುತ್ತಾರೆ. ಆನಂತರ ಇಬ್ಬರದ್ದೂ ಒಂದು ಪ್ರತ್ಯೇಕ ಲವ್ ಸ್ಟೋರಿ ಶುರುವಾಗುತ್ತದೆ. ಆ ಪ್ರೀತಿ ಪ್ರೇಕ್ಷಕನಿಗೆ ಸಖತ್ ಇಷ್ಟವಾಗಿತ್ತು. ಆ ರೀತಿಯಲ್ಲಿ ಈ ಇಬ್ಬರೂ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದರು. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ನಂತರ ಬಂದ ‘ಲವ್ ಇನ್ ಮಂಡ್ಯ’ ಚಿತ್ರಕ್ಕೆ ಸತೀಶ್ ನಾಯಕನಾದರೆ, ಸಿಂಧು ನಾಯಕಿ. ಹಳ್ಳಿ ಸೊಗಡಿನ ಈ ಸಿನಿಮಾದಲ್ಲಿ ಮತ್ತದೆ ತರ್ಲೆ ಪಾತ್ರ ಸತೀಶ್ ಅವರದ್ದು. ಮುಗ್ಧ ಹುಡುಗಿಯಾಗಿ ಸಿಂಧು ಕಾಣಿಸಿಕೊಂಡಿದ್ದರು. ಈ ಸಿನಿಮಾದ ‘ಒಪ್ಕೊಂಡ್ ಬಿಟ್ಳು ಕಣ್ಲಾ’ ಹಾಡಂತೂ ನಿತ್ಯಮಂತ್ರದಂತೆ ಕೇಳಿಸುತ್ತಿತ್ತು. ಅಷ್ಟರ ಮಟ್ಟಿಗೆ ಪಾಪ್ಯುಲರ್ ಆಗಿತ್ತು. ಇದೇ ಸಿನಿಮಾದ ಮತ್ತೊಂದು ಸಾಂಗ್ ‘ಕರೆಂಟು ಹೋದ ಮೇಲೆ’   ಗೀತೆಯಲ್ಲಂತೂ ಇಬ್ಬರೂ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ್ದರು. ಇಬ್ಬರ ಕೆಮೆಸ್ಟ್ರಿ ಕಂಡು ಅಭಿಮಾನಿ ವರ್ಗವೇ ಬೆರಗಾಗಿತ್ತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಆ ನಂತರ ಈ ಜೋಡಿಯ ಸಿನಿಮಾ ಬರಲಿಲ್ಲ. ಇದೀಗ ಕಿರುತೆರೆಯ ಜನಪ್ರಿಯ ಶೋ ‘ಗೋಲ್ಡನ್ ಗ್ಯಾಂಗ್’ ನಲ್ಲಿ ಸಿಂಧು ಮತ್ತು ಸತೀಶ್ ಕಾಣಿಸಿಕೊಂಡಿದ್ದಾರೆ. ತರ್ಲೆ, ತಮಾಷೆಯ ಜತೆ ಜತೆಗೆ ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದರು. ಅಂದಹಾಗೆ ಈ ವಾರ ಲೂಸಿಯಾ ಟೀಮ್ ಕೂಡ ಇವರೊಂದಿಗೆ ಇರಲಿದೆ.

  • ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಂದು ಚಾಲನೆ

    ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಂದು ಚಾಲನೆ

    – ದೇಶದ ವಿವಿಧ ಭಾಗಗಳಿಂದ ಆಗಮಿಸಲಿರುವ ಕರಕುಶಲ ಕರ್ಮಿಗಳು
    – 80 ಕ್ಕೂ ಹೆಚ್ಚು ಅಂಗಡಿಗಳು ಉತ್ಪಾದಕರಿಂದ ನೇರವಾಗಿ ಖರೀದಿಸುವ ಅವಕಾಶ

    ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನವೆಂಬರ್ 12 ರಿಂದ ಆರಂಭವಾಗಲಿರುವ ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ಖ್ಯಾತ ಚಲನಚಿತ್ರ ನಟಿ ಸಿಂಧು ಲೋಕನಾಥ್ ಚಾಲನೆ ನೀಡಲಿದ್ದಾರೆ.

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನವೆಂಬರ್ 12 ರಿಂದ 10 ದಿನಗಳ ಕಾಲ ಆಯೋಜಿಸಿರುವ ಈ ಕಲಾ ಮತ್ತು ಕರಕುಶಲ ಮೇಳವನ್ನು ಸಿಂಧು ಲೋಕನಾಥ್ ಚಾಲನೆ ನೀಡಲಿದ್ದು, ಈ ಮೇಳೆಕ್ಕೆ ದೇಶದ ವಿವಿಧ ಭಾಗಗಳಿಂದ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಮಾಡಲಿದ್ದಾರೆ. ಅದು ಅಲ್ಲದೆ, ಈ ಉತ್ಪನ್ನಗಳನ್ನು ಖರೀದಿಸುವ ಅವಕಾಶವೂ ಈ ಮೇಳದಲ್ಲಿ ಇರಲಿದೆ. ಇದನ್ನೂ ಓದಿ: ಕಾರಿನಲ್ಲಿ ಕೈ ಸನ್ನೆ ಮಾಡಿ ಜೀವ ಉಳಿಸಿಕೊಂಡ ಬಾಲಕಿ

    ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ವಿವಿಧ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

    ಚಿತ್ತಾರ ಹಾಗೂ ಗ್ರಾಂಡ್ ಫ್ಲಿಯಾ ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ. 80ಕ್ಕೂ ಹೆಚ್ಚಿನ ಅಂಗಡಿಗಳ ಮೂಲಕ ಉತ್ಪಾದಕರಿಂದ ನೇರವಾಗಿ ಕರಕುಶಲ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದು ಮೇಳದ ಆಯೋಜಕರಾದ ಅಫ್ತಾಬ್ ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ

  • ಹೇರ್ ಕಟ್ ಮಾಡಿಸಿದರೆ ಖಿನ್ನತೆಗೆ ಒಳಗಾಗಿದ್ದೇನೆಂಬ ಅರ್ಥವಲ್ಲ: ಸಿಂಧು ಲೋಕನಾಥ್ ಕಿಡಿ

    ಹೇರ್ ಕಟ್ ಮಾಡಿಸಿದರೆ ಖಿನ್ನತೆಗೆ ಒಳಗಾಗಿದ್ದೇನೆಂಬ ಅರ್ಥವಲ್ಲ: ಸಿಂಧು ಲೋಕನಾಥ್ ಕಿಡಿ

    ಬೆಂಗಳೂರು: ನಾನು ಬಾಯ್ಸ್ ರೀತಿಯ ಹೇರ್ ಕಟ್ ಮಾಡಿಸಿದ್ದೇನೆ ಹೊರತು ಖಿನ್ನತೆ ಒಳಗಾಗಿ ಕೂದಲನ್ನು ಕತ್ತರಿಸಿಕೊಂಡಿಲ್ಲ ಎಂದು ನಟಿ ಸಿಂಧು ಲೋಕನಾಥ್ ಅವರು ಹೇಳಿದ್ದಾರೆ.

    ಇತ್ತೀಚೆಗೆ ಸಿಂಧು ಲೋಕನಾಥ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬಾಯ್ ಹೇರ್ ಕಟ್ ಮಾಡಿಸಿಕೊಂಡಿರುವ ಫೋಟೋ ಹಾಕಿ ಕೆಲ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದ ಕೆಲವರು ಸಿಂಧು ಖಿನ್ನತೆಗೆ ಒಳಗಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.

    https://www.facebook.com/SindhuLoknath/posts/2625571134327685

    ಈಗ ಈ ವಿಚಾರವಾಗಿ ಮತ್ತೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕ್ಲಾಸ್ ತೆಗೆದುಕೊಂಡಿರುವ ಸಿಂಧು ಲೋಕನಾಥ್, ನಾನು ಕೂದಲನ್ನು ಕತ್ತರಿಸಿದ್ದೇನೆ ಎಂದರೆ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಅಥವಾ ನಾನು ಖಿನ್ನತೆ ಒಳಗಾಗಿದ್ದೇನೆ ಎಂಬ ಅರ್ಥವಲ್ಲ. ನಾನು ಬೇರೆ ರೀತಿಯ ಹೇರ್ ಸ್ಟೈಲ್ ಮಾಡಲು ಇಷ್ಟಪಡುತ್ತೇನೆ ಅದಕ್ಕೆ ಬಾಯ್ ಕಟ್ ಮಾಡಿಸಿದ್ದೇನೆ ಎಂದಿದ್ದಾರೆ.

    https://www.facebook.com/SindhuLoknath/posts/2633693606848771

    ಪೋಸ್ಟ್‌ನಲ್ಲಿ ಏನಿದೆ?
    ನಾನು ಇಲ್ಲಿ ಪೋಸ್ಟ್ ಮಾಡಿರುವ ಕೆಲ ಫೋಟೋಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ, ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ತೋರಿಸಿದವರಿಗೆ. ಅಂಥವರಿಗೆ ನಾನು ಕೆಲ ಮಾತುಗಳನ್ನು ಹೇಳಲು ಬಯಸುತ್ತೇನೆ. ನಾನು ಕೂದಲನ್ನು ಕತ್ತರಿಸಿದ್ದೇನೆ ಎಂದರೆ ಅದರ ಅರ್ಥ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂಬುದಲ್ಲ. ನಾನು ಹೇರ್ ಕಟ್ ಮಾಡಿಸಿದರೆ ಖಿನ್ನತೆ ಒಗಾಗಿದ್ದೇನೆ ಎಂಬ ಅರ್ಥವಲ್ಲ ಅಥವಾ ಲಿಂಗ ಪಕ್ಷಪಾತ ಮಾಡುತ್ತೇನೆ ಎಂದಲ್ಲ. ನಾನು ಹೇರ್ ಕಟ್ ಮಾಡಿಸಿರುವುದು ಬೇರೆ ಸ್ಟೈಲ್‍ಗಾಗಿ ಎಂದು ಸಿಂಧು ಕಿಡಿಕಾರಿದ್ದಾರೆ.

    ನನ್ನ ಕತ್ತರಿಸಿದ ಕೂದಲ ಮೇಲೆ ವಿವಾದವನ್ನು ಹುಟ್ಟು ಹಾಕಿದವರಿಗೆ ನಾನು ಹೇಳುವುದೆನೆಂದರೆ. ನನ್ನ ಕೂದಲು ಮುಂಚೆಗಿಂತಲೂ ತುಂಬ ಚೆನ್ನಾಗಿ ಬೆಳೆಯುತ್ತದೆ. ನಾನು ಹಿಂದೆ ಹಾಕಿರುವ ಪೋಸ್ಟ್ ಅನ್ನು 10 ಬಾರಿ ಸರಿಯಾಗಿ ಓದಿ ಆಗ ನಿಮಗೆ ನಾನು ಏನನ್ನು ಬರೆದಿದ್ದೇನೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಒಂದು ಉಪಯೋಗಕ್ಕಾಗಿ ಬೇರೆಯವರನ್ನು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಖಿನ್ನತೆಗೆ ಒಳಗಾಗಿದ್ದಾರೆ ಎಂದು ಇನ್ನೊಬ್ಬರ ವೈಯಕ್ತಿಕ ಜೀವನಕ್ಕೆ ತಲೆ ಹಾಕಬೇಡಿ. ಅದು ಅವರ ಇಮೇಜ್ ಅನ್ನು ಹಾಳು ಮಾಡುತ್ತದೆ ಎಂದು ಸಿಂಧು ತಿಳಿಸಿದ್ದಾರೆ.

    ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ವ್ಯಕ್ತಿಗಳನ್ನು ಖಿನ್ನತೆಯ ಕಡೆಗೆ ತಳ್ಳುವುದನ್ನು ಬಿಡಿ. ನಾನು ಮೌನವಾಗಿದ್ದೇನೆ ಎಂದು ನೀವು ನನ್ನ ಬಗ್ಗೆ ಸುಳ್ಳು ಸುದ್ದಿ ಮಾಡುವ ಸ್ವಾತಂತ್ರ್ಯವನ್ನು ತೆಗೆದುಕೊಂಡರೆ, ಅದರ ವಿರುದ್ಧ ಧ್ವನಿ ಎತ್ತುವ ಸ್ವಾಂತತ್ರ್ಯ ನನಗೂ ಇದೆ. ಈ ಕೊರೊನಾ ರೀತಿಯ ಸಮಯದಲ್ಲಿ ಒಳ್ಳೆಯ ಸುದ್ದಿಗಳನ್ನು ನೀಡಲು ಮುಂದಾಗಿ. ನಾನೂ ಕೂಡ ನನ್ನ ಒಳ್ಳೆಯ ವಿಚಾರವನ್ನು ಸುದ್ದಿ ಮಾಡಲು ಅನುಮತಿ ಕೊಟ್ಟಿದ್ದೇನೆ. ಆದರೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಸಿಂಧು ಖಾರವಾಗಿ ಪೋಸ್ಟ್ ಹಾಕಿದ್ದಾರೆ.

    ಇದರ ಜೊತೆಗೆ ಈ ಸುಳ್ಳು ಸುದ್ದಿಯನ್ನು ನಂಬಿ, ನನ್ನ ಆರೋಗ್ಯವನ್ನು ವಿಚಾರಿಸಲು ಕರೆ ಮಾಡಿದ ಜನರಿಗೆ ಮತ್ತು ನನ್ನ ಆರೋಗ್ಯದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ಧನ್ಯವಾದ. ನಾನೂ ಚೆನ್ನಾಗಿ ಇದ್ದೇನೆ ಎಂದು ಸಿಂಧು ಫುಟ್ ಬಾಲ್ ಆಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

  • ಸಿನಿಮಾದಲಷ್ಟೆ ನಟಿ, ನಿಮ್ಮಂತೆ ನಾನೂ ಮನುಷ್ಯಳೇ: ಸಿಂಧು ಲೋಕನಾಥ್

    ಸಿನಿಮಾದಲಷ್ಟೆ ನಟಿ, ನಿಮ್ಮಂತೆ ನಾನೂ ಮನುಷ್ಯಳೇ: ಸಿಂಧು ಲೋಕನಾಥ್

    ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಅನೇಕ ನಟ-ನಟಿಯರು ಮಾನಸಿಕ ಖಿನ್ನತೆಯ  ಬಗ್ಗೆ ತಮ್ಮ ಅಭಿಪ್ರಾಯ, ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸ್ಯಾಂಡಲ್‍ವುಡ್ ನಟಿ ಸಿಂಧು ಲೋಕ್‍ನಾಥ್ ತಮ್ಮ ಬಗ್ಗೆ ಮಾತನಾಡಿದ್ದಾರೆ.

    ನಟಿ ಸಿಂಧು ಲೋಕನಾಥ್ ಇನ್‍ಸ್ಟಾಗ್ರಾಂನಲ್ಲಿ “ನಾನು ಸಿನಿಮಾದಲ್ಲಿ ಮಾತ್ರ ನಟಿ, ನಿಮ್ಮಂತೆ ನಾನು ಕೂಡ ಮನುಷ್ಯಳು’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಸಿಂಧು ಲೋಕನಾಥ್ ಇದ್ದಕ್ಕಿದ್ದಂತೆ ಏಕೆ ಹೀಗೆ ಪೋಸ್ಟ್ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ.

    ಪೋಸ್ಟ್‌ನಲ್ಲಿ ಏನಿದೆ?
    “ನಾನೊಬ್ಬ ನಟಿ, ಅಂದರೆ ನಾನು ತೆರೆಯ ಮೇಲಷ್ಟೆ ನಟಿ. ತೆರೆಯ ಹಿಂದೆ ಅಲ್ಲ. ನಾನು ಜೀವನದಲ್ಲಿ ಮಾಡುವುದೆಲ್ಲವೂ ನಟನೆ ಅಲ್ಲ. ನಾನೂ ಸಹ ಎಲ್ಲರಂತೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಭಾವನೆಗಳನ್ನು ಸುಳ್ಳು, ನಕಲಿ ಮಾಡಲಾಗುವುದಿಲ್ಲ. ನಾನು ಭಯಪಡುತ್ತೇನೆ. ನಾನು ಕಷ್ಟಪಡುತ್ತೇನೆ, ನನಗೂ ನೋವಾಗುತ್ತದೆ, ಅಳುತ್ತೇನೆ, ನಾನು ಕೂಡ ಸಂತೋಷ ಮತ್ತು ನೋವನ್ನು ಸಮಾನವಾಗಿ ಅನುಭವಿಸುತ್ತೇನೆ” ಎಂದಿದ್ದಾರೆ.

    “ನಾನು ಸಿನಿಮಾ ನಟಿ ಆಗಿರುವುದರಿಂದ ಸಾಮಾನ್ಯ ಮನುಷ್ಯಳಲ್ಲವೆಂದು ನಿಮಗೆ ಕಾಣಿಸಬಹುದು. ಆದರೆ ಆಳದಲ್ಲಿ ನಾನು ಸಾಮಾನ್ಯಳು. ಎಲ್ಲಕ್ಕಿಂತ ಮುಖ್ಯವಾಗಿ  ನಿಮ್ಮಂತೆ ನಾನೂ ಸಹ ಒಬ್ಬ ಸಾಮಾನ್ಯ ಮನುಷ್ಯಳು” ಎಂದು ಸಿಂಧು ಲೋಕನಾಥ್ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    ಸಿಂಧು 2009ರಲ್ಲಿ ಬಿಡುಗಡೆಗೊಂಡ ‘ಪರಿಚಯ’ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ನಂತರ 2012ರಲ್ಲಿ ತೆರೆಕಂಡ ‘ಲೈಫ್ ಇಷ್ಟೇನೆ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಸಿಂಧು ಲೋಕ್‍ನಾಥ್ ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    https://www.instagram.com/p/CBfB7pvHAHk/?igshid=18c29hisu1425

  • ಕಾಮಿಡಿ, ಲವ್, ಆ್ಯಕ್ಷನ್, ಫ್ಯಾಂಟಸಿ ಹದವಾಗಿ ಬೆರೆತ ‘ಕಾಣದಂತೆ ಮಾಯಾದನು’

    ಕಾಮಿಡಿ, ಲವ್, ಆ್ಯಕ್ಷನ್, ಫ್ಯಾಂಟಸಿ ಹದವಾಗಿ ಬೆರೆತ ‘ಕಾಣದಂತೆ ಮಾಯಾದನು’

    ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ಹಾಗೂ ಸಿಂಧು ಲೋಕನಾಥ್ ನಟಿಸಿರುವ `ಕಾಣದಂತೆ ಮಾಯವಾದನು’ ಚಿತ್ರ ಇಂದು ಯಶಸ್ವಿಯಾಗಿ ತೆರೆಕಂಡಿದೆ. ಟ್ರೈಲರ್, ಹಾಡುಗಳ ಮೂಲಕ ಎಲ್ಲರ ಮನೆಗೆದ್ದಿದ್ದ ಚಿತ್ರ ಚಿತ್ರಮಂದಿರದಲ್ಲೂ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

    ‘ಕಾಣದಂತೆ ಮಾಯವಾದನು’ ಒಂದು ಕುತೂಹಲ ಭರಿತ ಸಿನಿಮಾವಾಗಿದ್ದು, ಚಿತ್ರದುದ್ದಕ್ಕೂ ಟ್ವಿಸ್ಟ್ ಅಂಡ್ ಟನ್ಸ್ರ್ಗಳು ಸಖತ್ ಮನರಂಜನೆಯನ್ನು ನೀಡುತ್ತೆ. ರಮ್ಮಿ ಚಿತ್ರದ ನಾಯಕ. ರೌಡಿ ಜಯಣ್ಣನಿಂದ ಕೊಲೆಯಾಗುವ ರಮ್ಮಿ ಮತ್ತೆ ಭೂತವಾಗಿ ಬಂದು ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ಹಾಗೆಯೇ ತನ್ನನ್ನು ಸಾಯಿಸಿದವನ ಮೇಲೆ ಯಾವ ರೀತಿ ರಿವೇಂಜ್ ತೀರಿಸಿಕೊಳ್ಳುತ್ತಾನೆ ಎಂದು ಫ್ಯಾಂಟಸಿ ರೂಪದಲ್ಲಿ ಕಟ್ಟಿಕೊಡಲಾಗಿದೆ.

    ವಿಭಿನ್ನ ಕಥಾಹಂದರ ಚಿತ್ರದಲ್ಲಿದ್ದು ಹೊಸ ಅಭಿರುಚಿಯಲ್ಲಿ ಕಟ್ಟಿಕೊಡೋ ಪ್ರಯತ್ನವನ್ನು ಮಾಡಲಾಗಿದೆ. ಅಲ್ಲಲ್ಲಿ ಕೊಂಚ ಲ್ಯಾಗ್ ಅನ್ಸಿದ್ರು ಹಾಸ್ಯ, ಆ್ಯಕ್ಷನ್ ಸೀಕ್ವೆನ್ ಗಳು ಅದನ್ನು ಸರಿದೂಗಿಸಿಕೊಂಡು ಹೋಗಿದೆ. ಧರ್ಮಣ್ಣ ಕಡೂರ್ ತಮ್ಮ ಹಾಸ್ಯದ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಾರೆ. ಇನ್ನು ಕಾಮಿಡಿ, ಆ್ಯಕ್ಷನ್, ಡಾನ್ಸ್ ಎಲ್ಲಾ ಕಡೆಗಳಲ್ಲೂ ವಿಕಾಸ್ ಅಭಿನಯ ಭರವಸೆಯನ್ನು ಮೂಡಿಸಿದ್ದು. ಸಿಂಧು ಲೋಕನಾಥ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಮನರಂಜನೆಯನ್ನು ಚಿತ್ರಮಂದಿರದ ಒಳಗೆ ಹೋದವರಿಗೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

    ಚಿತ್ರ: ಕಾಣದಂತೆ ಮಾಯವಾದನು
    ನಿರ್ದೇಶಕ: ರಾಜ್ ಪತ್ತಿಪಾಟಿ
    ನಿರ್ಮಾಪಕ: ಚಂದ್ರಶೇಖರ್ ನಾಯ್ಡು
    ಸಂಗೀತ: ಗುಮ್ಮಿನೇನಿ ವಿಜಯ್
    ಛಾಯಾಗ್ರಹಣ: ಸುಜ್ಞಾನ್
    ತಾರಾಂಗಣ: ವಿಕಾಸ್, ಸಿಂಧು ಲೋಕನಾಥ್, ರಾಘವ್ ಉದಯ್, ಭಜರಂಗಿ ಲೋಕಿ, ಇತರರು

    ರೇಟಿಂಗ್: 3.5/5

  • ಥಿಯೇಟರ್‌ನಿಂದ ಹೊರ ಬಂದ್ರು ‘ಕಾಣದಂತೆ ಮಾಯವಾದನು’ ಪ್ರೇಕ್ಷಕರ ತಲೆಯಲ್ಲಿರುತ್ತೆ!

    ಥಿಯೇಟರ್‌ನಿಂದ ಹೊರ ಬಂದ್ರು ‘ಕಾಣದಂತೆ ಮಾಯವಾದನು’ ಪ್ರೇಕ್ಷಕರ ತಲೆಯಲ್ಲಿರುತ್ತೆ!

    ಸ್ಯಾಂಡಲ್‍ವುಡ್‍ನಲ್ಲಿ ನಿರ್ದೇಶಕ, ಪೋಷಕ ನಟನಾಗಿ ಗುರುತಿಸಿಕೊಂಡಿದ್ದ ವಿಕಾಸ್ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ರಾಜ್ ಪಾತಿಪಾಟಿ ನಿರ್ದೇಶನದಲ್ಲಿ ಮೂಡಿಬಂದಿರೋ ಕಾಣದಂತೆ ಮಾಯವಾದನು ಚಿತ್ರದಲ್ಲಿ ವಿಕಾಸ್, ಸಿಂಧು ಲೋಕ್‍ನಾಥ್ ಜೋಡಿಯಾಗಿ ಅಭಿನಯಿಸಿದ್ದು, ಸಖತ್ ಕ್ಯೂರಿಯಾಸಿಟಿಯನ್ನು ಸ್ಯಾಂಡಲ್‍ವುಡ್‍ನಲ್ಲಿ ಈ ಚಿತ್ರ ಹುಟ್ಟಿಸಿದೆ.

    ಸಿನಿ ಪ್ರೇಕ್ಷಕನಿಗೆ ಬೇಕಾದ ಲವ್ ಆಕ್ಷನ್ ಹಾರಾರ್, ಸೆಂಟಿಮೆಂಟ್ ಎಲ್ಲಾ ಕಂಟೆಟ್ ಚಿತ್ರದಲ್ಲಿದ್ದೂ 5ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ಚಿತ್ರದ ಟ್ರೈಲರ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಮೆಲೋಡಿ ಹಾಡಿಗೆ ದನಿಯಾಗುವುದರ ಜೊತೆಗೆ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಪವರ್ ಸ್ಟಾರ್ ಹಾಡಿರುವ ಹಾಡು ಸೂಪರ್ ಹಿಟ್ ಆಗಿದ್ದು ಗುಮ್ಮಿನೇನಿ ವಿಜಯ್ ಸಂಗೀತ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ಯಾಥೊ ಹಾಡಿಗೆ ವಿಜಯ್ ಪ್ರಕಾಶ್ ದನಿಯಾಗಿದ್ದು, ವಿ.ನಾಗೇಂದ್ರ ಪ್ರಸಾಧ್, ಚೇತನ್ ಕುಮಾರ್ ಸಾಹಿತ್ಯ ಕೃಷಿ ಚಿತ್ರಕ್ಕಿದೆ.

    ಆಕ್ಷನ್ ಸೀಕ್ವೆನ್ಸ್ ಗಳು ಚಿತ್ರದಲ್ಲಿದ್ದು ಲೀಲಾಜಾಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ನಟ ವಿಕಾಸ್. ಚಿತ್ರದ ಮೊದಲ ಹಾಗೂ ಕೊನೆಯ ದೃಶ್ಯ ಇದುವರೆಗೂ ಕನ್ನಡ ಸಿನಿಮಾದಲ್ಲಿ ಬಂದಿಲ್ಲ. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬಂದ ಮೇಲೆ ಬಹಳ ದಿನ ಪ್ರೇಕ್ಷರ ತಲೆಯಲ್ಲಿರುತ್ತೆ ಎಂದು ವಿಕಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಚಿತ್ರದ ತಾರಾಬಳಗವೂ ದೊಡ್ಡದಿದ್ದು ಸುಚೇಂದ್ರ ಪ್ರಸಾಧ್, ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್, ಧರ್ಮಣ್ಣ ಕಾಣದಂತೆ ಮಾಯವಾದನ್ನು ಬಳಗದಲ್ಲಿ ಬಣ್ಣ ಹಚ್ಚಿದ್ದಾರೆ. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದಿರೋ ಈ ಚಿತ್ರ ಇಂದು ಬಿಡುಗಡೆಯಾಗಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ , ಧರ್ಮಣ್ಣ ಚಿತ್ರದಲ್ಲಿ ನಟಿಸಿದ್ದು ಸ್ಟಾರ್ ಸಿನಿಮಾಟೋಗ್ರಾಫರ್ ಸುಜ್ಞಾನ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.