Tag: ಸಿಂದಗಿ ಉಪಚುನಾವಣೆ

  • ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣದ ಹೊಳೆ – ಹೆಚ್‍ಡಿಕೆ ಗಂಭೀರ ಆರೋಪ

    ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣದ ಹೊಳೆ – ಹೆಚ್‍ಡಿಕೆ ಗಂಭೀರ ಆರೋಪ

    – ಪ್ರತಿ ಹಳ್ಳಿಗೆ 30-40 ಲಕ್ಷ ರೂ. ರೆಸಾರ್ಟ್‍ನಲ್ಲೇ ಬೀಡುಬಿದ್ದ ಮಂತ್ರಿಗಳು
    – ಸಚಿವ ಸೋಮಣ್ಣ ಕೊನೆ ಹಂತದ ಆಟ ಆರಂಭಿಸಿದ್ದಾರೆ

    ವಿಜಯಪುರ: ಬಹಿರಂಗ ಪ್ರಚಾರ ಅಂತ್ಯವಾದ ಮೇಲೆಯೂ ಆಡಳಿತಾರೂಢ ಬಿಜೆಪಿಯು ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುವ ಹೀನ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆಯಿಂದ ಸಚಿವರಾದ ವಿ.ಸೋಮಣ್ಣ, ಸಿಸಿ ಪಾಟೀಲ್, ಗೋವಿಂದ ಕಾರಜೋಳ ಸೇರಿದಂತೆ ಏಳೆಂಟು ಮಂತ್ರಿಗಳು ಇವತ್ತಿಗೂ ಸಮೀಪದ ರೆಸಾರ್ಟ್ ನಲ್ಲಿಯೇ ಇದ್ದಾರೆ. ಬುಧವಾರ ಸಂಜೆವರೆಗೂ ಕುಮಾರಸ್ವಾಮಿ ಅವರಿಗೆ ಸಿಂದಗಿಯಲ್ಲಿ ಓಡಾಡಲು ಫ್ರೀಯಾಗಿ ಬಿಟ್ಟಿದ್ದೇವೆ. ಗುರುವಾರದಿಂದ ನಮ್ಮ ಆಟ ತೋರಿಸುತ್ತೇವೆ ಎಂದು ಸೋಮಣ್ಣ ಅವರು ನಿನ್ನೆಯೇ ಹೇಳಿದ್ದರು. ಈಗ ಅವರು ತಮ್ಮ ಕೊನೆಯ ಹಂತದ ಆಟ ತೋರಿಸಲು ಹೊರಟಿದ್ದಾರೆ ಎಂದು ದೂರಿದರು.

    ನನಗೆ ಬಂದ ಮಾಹಿತಿ ಪ್ರಕಾರ ಪ್ರತಿ ಹಳ್ಳಿಗೆ 30ರಿಂದ 40 ಲಕ್ಷ ರೂಪಾಯಿ ಹಂಚಿಕೆ ಆಗಿದೆ. ಖುದ್ದು ಸಚಿವರೇ ಈ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಬಂದಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದಲೂ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಕೆಲಸ ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಟಿ-20 ವಿಶ್ವಕಪ್‍ನಲ್ಲಿ ಪಾಕ್ ಗೆಲುವನ್ನು ಆಚರಿಸುವವರು ದೇಶದ್ರೋಹ ಆರೋಪ ಎದುರಿಸಬೇಕಾಗುತ್ತದೆ: ಯೋಗಿ ಆದಿತ್ಯನಾಥ್

    ಮತಗಟ್ಟೆಗೆ ಐದು ಲಕ್ಷ, 1 ಮತಕ್ಕೆ 1 ಸಾವಿರ!
    ಕೆಲ ಹಳ್ಳಿಗಳಲ್ಲಿ ಐದರಿಂದ ಆರು ಮತಗಟ್ಟೆಗಳಿವೆ. ಅಂದರೆ ಪ್ರತೀ ಮತಗಟ್ಟೆಗೆ ತಲಾ 5 ಲಕ್ಷ ರೂ. ನೀಡಲಾಗುತ್ತಿದೆ ಹಾಗೂ ಒಂದು ಮತಕ್ಕೆ 1,000 ರೂ. ಫಿಕ್ಸ್ ಮಾಡಿದ್ದಾರೆ ಎಂದಾಯಿತು. ಬಿಜೆಪಿ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಿದ ಮೇಲೆ ಎಲ್ಲ ಚುನಾವಣೆಗಳನ್ನು ಗೆದ್ದಿರುವುದು ಹಣದ ಹೊಳೆ ಹರಿಸಿಯೇ ಎಂದು ಕುಮಾರಸ್ವಾಮಿ ಹೇಳಿದರು.  ಇದನ್ನೂ ಓದಿ: ದೆಹಲಿ ವಿವಿಯ ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

    ಸಾರ್ವತ್ರಿಕ ಚುನಾವಣೆ ಬಂದಾಗ ಹೀಗೆ ಹಣ ಹಂಚುವ ದಂಧೆ ಇಷ್ಟು ಸುಲಭವಾಗಿ ನಡೆಯಲ್ಲ ಎಂದ ಅವರು, ಮುಖ್ಯಮಂತ್ರಿಯವರು ಹಣದ ಚೀಲ ಹೊತ್ತು ಅಭ್ಯಾಸ ಇರುವುದು ಕಾಂಗ್ರೆಸ್ ನವರಿಗೆ ಅಂತಾರೆ. ಆದರೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಾಗ ಸರ್ಕಾರಿ ಅಧಿಕಾರಿಯ ಕಾರಿನಲ್ಲೇ ಹಣ ಸಿಕ್ಕಿಬಿತ್ತು. ಆ ಹಣ ಸಿಕ್ಕಿದ್ದು ಗುಂಡ್ಲುಪೇಟೆಯಲ್ಲಿ. ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಕಾಂಗ್ರೆಸ್ ಪಕ್ಷದವರು ಮಾಡಿದ ತಂತ್ರಗಾರಿಕೆಯನ್ನೇ ಈಗ ಬಿಜೆಪಿಯವರು ಅಳವಡಿಸಿಕೊಂಡಿದ್ದಾರೆಂದು ದೂರಿದರು.

    ಇಷ್ಟಾದರೂ ಕ್ಷೇತ್ರದ ಮತದಾರರು ಹಣಕ್ಕಿಂತ ಹೆಚ್ಚಾಗಿ ತಮಗೆ ಬದುಕು ತೋರಿಸಿರುವ ಜೆಡಿಎಸ್ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ. ದೇವೇಗೌಡರು ಹಾಗೂ ನಾನು ನೀಡಿರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅಭಿಮಾನ ಇದೆ. ಈವರೆಗೂ ನಾನು ಎಂಬತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿದ್ದೇನೆ. ಎಲ್ಲೇ ಹೋದರೂ ಜನ ನಮ್ಮ ಪಕ್ಷ ನೀಡಿರುವ ಕೊಡುಗೆಗಳ ಬಗ್ಗೆಯೇ ಮಾತನಾಡಿದ್ದರು, ರಾಷ್ಟ್ರೀಯ ಪಕ್ಷಗಳು ಒಡ್ಡುವ ಆಮಿಷಗಳಿಗೆ ಜನರು ಒಳಗಾಗಬಾರದು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

    ಎರಡೂ ರಾಷ್ಟ್ರೀಯ ಪಕ್ಷಗಳು ಹಣ ಬಲದಿಂದ ಚುನಾವಣೆ ಗೆಲ್ಲಬೇಕು ಎಂದು ಹೊರಟಿವೆಯೇ ವಿನಾ ಅಭಿವೃದ್ಧಿಯಿಂದಲ್ಲ ಎಂದ ಅವರು, ಕ್ಷೇತ್ರದ ಜನರಿಗೆ ನಾವು ಅಭಿವೃದ್ಧಿ ವಿಷಯಗಳನ್ನಷ್ಟೇ ಹೇಳಿದ್ದೇವೆ. ಆ ಮೂಲಕ ನಾವು ಸಿಂದಗಿ ಕ್ಷೇತ್ರದಲ್ಲಿ ಜಯ ಸಾಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

  • ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ – ಬಿಜೆಪಿ ಗೇಲಿ

    ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ – ಬಿಜೆಪಿ ಗೇಲಿ

    ಬೆಂಗಳೂರು: ಒಂದೆಡೆ ಅಭಿವೃದ್ಧಿ ವಿಷಯದ ಚರ್ಚೆ ಆದರೆ ಮತ್ತೊಂದೆಡೆ ಅಕ್ಕಿ ಸಮರ. ಬಿಜೆಪಿ ಟ್ವಿಟರ್‍ನಲ್ಲಿ ಸರಣಿ ಟ್ವೀಟ್ ಮಾಡಿ ಟೀಕಿಸಿದೆ.

    ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಸಿದ್ದರಾಮಯ್ಯ ಸಾಧನೆ. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಪ್ರತಿ ಪ್ರಜೆ ಮೇಲೆ 44 ಸಾವಿರಕ್ಕೂ ಹೆಚ್ಚು ಸಾಲದ ಹೊರೆ ಹೇರಿದ್ದೀರಿ. ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ..? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ? ಘೋಷಣೆ ಮಾಡಿದ ಮಾತ್ರಕ್ಕೆ ಮನೆ ರ್ಮಾಣವಾಗುತ್ತದೆಯೇ..? ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ .. ಬುರುಡೆರಾಮಯ್ಯ ಅಂತ ಬಿಜೆಪಿ ಛೇಡಿಸಿದೆ. ಇದನ್ನೂ ಓದಿ: ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ: ಸಿದ್ದರಾಮಯ್ಯ

    ಈ ಬೆನ್ನಲ್ಲೇ ಸಿದ್ದರಾಮಯ್ಯ ಪ್ರತಿಕಾ ಪ್ರಕಟಣೆಯನ್ನೇ ಹೊರಡಿಸಿದ್ದಾರೆ. 2013ರಲ್ಲಿ ಅನ್ನಭಾಗ್ಯ ಯೋಜನೆ ತಂದು, ಪ್ರತಿ ಕುಟುಂಬಕ್ಕೆ 35 ಕೆಜಿ ಅಕ್ಕಿಯನ್ನು ಕೆಜಿಗೆ ಕೇವಲ 1 ರೂ.ಗೆ ನೀಡಿದ್ದೇವೆ. 2017 ಏಪ್ರಿಲ್‍ನಿಂದ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಬೇಳೆ ವಿತರಿಸಿದ್ವಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಅಕ್ಕಿಯನ್ನು 2 ಕೆಜಿಗೆ ಇಳಿಸಿದೆ ಅಂತ ವಿವರಣೆ ನೀಡಿದ್ದಾರೆ. ಜೊತೆಗೆ ಹಾನಗಲ್‍ನಲ್ಲಿ ಮಾತಾಡಿ, ನನ್ನ ಯೋಜನೆ ಜನರಿಗೆ ತಲುಪಿಲ್ಲ ಅಂತಾರೆ. ನಾನು ಕೊಟ್ಟ 7 ಕೆಜಿ ಅಕ್ಕಿ ನಿಮಗೆ ತಲುಪಿಲ್ವಾ..? ಅಂತ ಹಾನಗಲ್ ಜನಕ್ಕೆ ಸಿದ್ದರಾಮಯ್ಯ ಪ್ರಶ್ನಿಸಿದಾಗ.. ನಮಗೆ ಸಿಕ್ಕಿದೆ ಅಂತ ಜನ ಉತ್ತರ ಹೇಳಿದ್ದಾರೆ. ಇದನ್ನೂ ಓದಿ:  ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

  • ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್: ಸಿಎಂ

    ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್: ಸಿಎಂ

    – ಈ ದೇಶದ ಪ್ರತಿಯೊಬ್ಬರು ಸಹ ಆರ್‌ಎಸ್‌ಎಸ್
    – ಮೋದಿ ಬಂದ ಮೇಲೆ ಅಚ್ಚೇ ದಿನ ಬಂದಿದೆ

    ಬೆಳಗಾವಿ: ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

    ಸಿಂದಗಿ ಉಪಚುನಾವಣೆ ಆಲಮೇಲ ಗ್ರಾಮದ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಕಾಂಗ್ರೆಸ್ ಸರ್ಕಾರದ ಭಾಗ್ಯ ಯಾರ ಮನೆಗೂ ಸಹ ಬರಲಿಲ್ಲ. ಕಾಂಗ್ರೆಸ್ ಅವರು ಬಂದಿದ್ದೇ ನಮಗೆ ದೌರ್ಭಾಗ್ಯ. ಕಾಂಗ್ರೆಸ್ ಅಧಿಕಾರ ಬಿಟ್ಟು ಇರಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಕಬ್ಬಿನಂತೆ ಇರ್ತಾರೆ, ಅಧಿಕಾರ ಇಲ್ಲದಿದ್ದಾಗ ಹತ್ತಿಯಂತೆ ಇರ್ತಾರೆ. ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದವರು ಕಾಂಗ್ರೆಸ್ ನವರು ಎಂದು ಕಿಡಿಕಾರಿದರು.

    ಮೈತ್ರಿ ಸರ್ಕಾರ ಜನರ ಸರ್ಕಾರ ಅಲ್ಲ, ಕೆಲವರು ಅಲ್ಲಿಂದ ಬಂದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಹೌದು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ, ಆದರೆ ಸುಭಾಷ್ ಚಂದ್ರ ಬೋಸ್, ಲೋಕಮಾನ್ ತಿಲಕ್, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್, ವೀರಸಾವರ್ಕರ್ ಇವರೆಲ್ಲ ಏನು ಕಾಂಗ್ರೆಸ್ಸಿನವರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ

    ಪ್ರತಿ ಒಬ್ಬರು ಸಹ ಆರ್‌ಎಸ್‌ಎಸ್!

    ಲಕ್ಷಾಂತರ ಜನ ದೇಶಕ್ಕಾಗಿ ಜೀವ ನೀಡಿದ್ರು. ಆದರೆ ಇವರಿಗೆ ಇಂದಿರಾ ಗಾಂಧಿ ಹಾಗೂ ಅವರ ಮನೆತನದವರು ಮಾತ್ರ ಗೊತ್ತು. ಬೊಮ್ಮಾಯಿ ನಮ್ಮ ಜೊತೆ ಇದ್ದವರು, ಆರ್‌ಎಸ್‌ಎಸ್ ಅವರಾ ಎಂದು ಕೇಳುತ್ತಾರೆ. ಈ ದೇಶದ ಪ್ರತಿ ಒಬ್ಬರು ಸಹ ಆರ್‌ಎಸ್‌ಎಸ್ ನವರು. ಆರ್‌ಎಸ್‌ಎಸ್ ಅವರು ನಾವಲ್ಲ ಅಂದ್ರೆ ಅವರು ಯಾರು ನೀವೇ ತಿಳಿದುಕೊಳ್ಳಿ. ಸಿದ್ದರಾಮಣ್ಣ ನಮ್ಮ ಜೊತೆ ಚೆನ್ನಾಗಿದ್ದರು, ಕಾಂಗ್ರೆಸ್ ಹೋಗಿ ಕೆಟ್ಟರು ಎಂದು ತಿರುಗೇಟು ನೀಡಿದರು.

    ಗುತ್ತಿ ಬಸವಣ್ಣ ಯೋಜನೆಗೆ ಬಿಜೆಪಿ ಅಭ್ಯರ್ಥಿ ಬೂಸನೂರ ಹೋರಾಟ ನಡೆಸಿದ್ದರು. ಕೆಲಸ ಮಾಡುವ ಛಲ ಇರಬೇಕು. ಮಾಡಿಲ್ಲ ಅಂದ್ರೆ ಕೇಳುವ ಗಂಡಸುತನ ಇರಬೇಕು. ಈ ಯೋಜನೆಗಾಗಿ ಭೂಸನೂರ ಅವರ ಹೋರಾಟ ಅಪಾರವಾಗಿದೆ. 2009ರ ನವಂಬರ್ ಚಿಮ್ಮಲಗಿ ಏತ ನೀರಾವರಿಗೆ ಚಾಲನೆ ನೀಡಿದೆ. ನಮ್ಮ ಸರ್ಕಾರದಲ್ಲಿ ಯೋಜನೆಗೆ ಜಾರಿಗೆ ತಂದಿದ್ದು, ನಮ್ಮ ಸರ್ಕಾರದಲ್ಲಿ ನೀರು ಹರಿಸುವ ಕೆಲಸ ಸಹ ನಡೆಯಲ್ಲಿದೆ. ಹೀಗಾಗಿ ಭೂಸನೂರ ಅವರ ಮೇಲೆ ಆಶೀರ್ವಾದ ಇರಲ್ಲಿ ಎಂದು ಕೇಳಿಕೊಂಡರು. ಇದನ್ನೂ ಓದಿ: ದಾಖಲೆಗಳಿದ್ರೂ ಮನೆ ಕೆಡವಿ ದರ್ಪ ತೋರಿದ ಅಧಿಕಾರಿಗಳು

    ವಚನ ಭ್ರಷ್ಟರಾಗಿದ್ದಾರೆ!

    ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕೃಷ್ಣೆ ನಡೆಗೆ ಅಂದ್ರು, ಆದರೆ 5 ವರ್ಷದಲ್ಲಿ ಅದಕ್ಕೆ ಬೇಕಾದ ಅನುದಾನ ಸಹ ನೀಡಲಿಲ್ಲ. ಈ ಮೂಲಕ ಕೃಷ್ಣೆಯ ಮೇಲೆ ಆಣೆ ಮಾಡಿ ಕಾಂಗ್ರೆಸ್ ಅವರು ವಚನ ಭ್ರಷ್ಟರಾಗಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.

    ಟ್ವೀಟ್ ವಾರ್ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಅವರು ಸಣ್ಣವರಾಗಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಯಾರು ಎಂದು ಕೇಳ್ತಿದ್ದಾರೆ. ಸೋನಿಯಾ ಗಾಂಧಿ ನಾನೇ ಅಧ್ಯಕ್ಷೆ ಎಂದರು. ಗಾಂಧಿಜೀ ಅವರು ಅವತ್ತೆ ಕಾಂಗ್ರೆಸ್ ಪಕ್ಷವನ್ನ ತ್ಯಾಗ ಮಾಡಿ ಎಂದಿದ್ದರು. ಆದರೆ ಅಧಿಕಾರದ ಆಸೆಗೆ ಅಂದಿನ ನಾಯಕರು ಕಾಂಗ್ರೆಸ್ ಬಿಡಲಿಲ್ಲ. ಆದರೆ ಜನ ಇದೀಗ ಕಾಂಗ್ರೆಸ್ ಮುಗಿಸಲಿದ್ದಾರೆ ಎಂದರು.

    ಮೋದಿ ಅವರು ಬಂದ ಮೇಲೆ ಅಚ್ಚೆ ದಿನ ಬಂದಿದೆ. 10 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡಿದ್ದಾರೆ. ಬಡ ಕುಟುಂಬಗಳಿಗೆ ಗ್ಯಾಸ್ ನೀಡಿದ್ದರು. ಬಡವರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದ್ದಾರೆ. ಮೋದಿ ಅವರು ತಮ್ಮ ದಿಟ್ಟತನದಿಂದ ಕೋವಿಡ್ ನಿರ್ವಹಣೆ ಮಾಡಿದ್ದಾರೆ. ದೇಶದ ಪ್ರತಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಶೇ.83 ಮೊದಲ ಡೋಸ್ ಹಾಗೂ ಶೆ. 34 ಎರಡನೇ ಡೋಸ್ ನೀಡಲಾಗಿದೆ ಎಂದು ತಿಳಿಸಿದರು.

  • ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ: ದೇವೇಗೌಡ

    ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ: ದೇವೇಗೌಡ

    – ಎಂ ಸಿ ಮನಗೂಳಿ ನೆನೆದ ದೇವೇಗೌಡರು

    ವಿಜಯನಗರ: ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಿಡಿಕಾರಿದರು.

    ಸಿಂದಗಿ ಉಪಚುನಾವಣೆ ಹಿನ್ನೆಲೆ ಎಲ್ಲೆಡೆ ಪ್ರಚಾರ ಕೈಗೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಎಂ.ಸಿ ಮನಗೂಳಿ ನನ್ನ ಸಹಪಾಠಿಯಾಗಿ ಕೆಲಸ ಮಾಡಿದ್ದರು. ನನ್ನ ಜೊತೆ ಅವರು 1994 ರಿಂದ ಕೆಲಸ ಮಾಡಿದ್ದರು. ಅದು ಅಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರು. ಪ್ರಸ್ತುತ ಅವರು ನಮ್ಮನ್ನ ಅಗಲಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ

    ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ. 2023 ರ ಚುನಾವಣೆಗೆ ಇಡೀ ರಾಜ್ಯ ಸುತ್ತುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ ಮಾಡುವೆ. ಯಾವ ಪಕ್ಷದ ಜೊತೆ ಚುನಾವಣೆ ಸಂಬಂಧವಿಲ್ಲ ಎಂದು ನಿಖರವಾಗಿ ಹೇಳಿದರು.

    ಸಿಂದಗಿ ಕ್ಷೇತ್ರದಲ್ಲಿ ಅಳಿಲು ಸೇವೆ ಮಾಡಿದ್ದೇವೆ. ಅದಕ್ಕೆ ಸಿಂದಗಿ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಒಂಭತ್ತು ಜನ ಅಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. ನಾನು, ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲರೊಂದಿಗೆ ಎರಡು ದಿನ ಚರ್ಚೆ ಮಾಡಿದ್ದೆವು. ಎಲ್ಲರ ಒಮ್ಮತದಿಂದ ನಾಜಿಯಾ ಅಂಗಡಿಯವರನ್ನಾ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದೇವೆ. ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ, ಸಿಎಂ, ಪಿಎಂ ಆಗಿ ಸೇವೆ ಮಾಡಿದ್ದೇನೆ. ಇಂತಹ ಇಳಿ ವಯಸ್ಸಿನ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.

    ಜಯ ಗಳಿಸೋ ದೃಢವಾದ ಸಂಕಲ್ಪದಿಂದ ಚುನಾವಣೆ ಎದುರಿಸುತ್ತಿದ್ದೇವೆ. ಕೇವಲ ಸಭೆ ಸಮಾರಂಭ ಮಾಡದೇ ಜನರ ಮನೆ ಬಾಗಿಲಿಗೆ ತೆರಳಿ, ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತೇವೆ. ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ

    ಪ್ರಚಾರಕ್ಕೆ ಕುಮಾರಸ್ವಾಮಿ ಆಗಮಿಸುತ್ತಾರೆ. ಮತದಾರರ ತೀರ್ಪು ಅಂತಿಮವಾಗಿದ್ದು, ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ನಾನು ಯಾರ ಬಗ್ಗೆಯೂ ಆಪಾದನೆ ಮಾಡಲ್ಲ. ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲ್ಲ. ಉಪಚುನಾವಣೆ ಫಲಿತಾಂಶ ಒಂದು ಪಕ್ಷದ ಅಳಿವು ಉಳಿವಿಗೆ ಕಾರಣವಾಗಲ್ಲ. ಜೆಡಿಎಸ್ ಪಕ್ಷವನ್ನು ಮುಗಿಸೋಕೆ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನ ಪಟ್ಟವು, ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

    ಈ ಸುದ್ದಿಗೋಷ್ಠಿಯನ್ನು ದೇವೇಗೌಡರು ಪದಾಧಿಕಾರಿಗಳ ಜೊತೆಗೆ ನಡೆಸಿದ್ದು, ಸಭೆ ಬಳಿಕ ಇಂಡಿಗೆ ತೆರಳುತ್ತಿದ್ದಾರೆ.

  • ಸಿಂದಗಿ ಉಪಚುನಾವಣೆ- ನಾಳೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

    ಸಿಂದಗಿ ಉಪಚುನಾವಣೆ- ನಾಳೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

    ವಿಜಯಪುರ: ಸಿಂದಗಿ ಉಪಚುನಾವಣೆ ರಂಗೇರಿದೆ. ನಾಳೆ ಜಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ ನಾಮಪತ್ರ ಸಲ್ಲಿಸಲಿದ್ದಾರೆ.

    ನಾಮಪತ್ರ ಸಲ್ಲಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು ಭಾಗಿಯಾಗಲಿದ್ದಾರೆ. ನಾಮಪತ್ರ ಸಲ್ಲಿಕೆಯ ನಂತರ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಮಂಗಲ ಕಲ್ಯಾಣ ಮಂಟಪದಲ್ಲಿ ಕಾರ್ತಕರ್ತ ಸಭೆ ನಡೆಯಲಿದೆ. ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಬಂಧನ- ರಮ್ಯಾಗೆ ಅನುಮಾನ

    ಕಾರ್ಯಕರ್ತ ಸಭೆ ನಂತರ ಕುಮಾರಸ್ವಾಮಿ ಮತಯಾಚನೆ ಮಾಡಲಿದ್ದಾರೆ. ಬಿಜೆಪಿ ಗೆಲುವಿಗಾಗಿ ನನಗೆ ಟಿಕೆಟ್ ಸಿಕ್ಕಿಲ್ಲ, ನಮ್ಮ ಮಾವನವರು ಸೇರಿದಂತೆ ನಮ್ಮ ಕುಟುಂಬದವರು ಮೊದಲಿನಿಂದಲೂ ಜೆಡಿಎಸ್ ಸಕ್ರಿಯ ಕಾರ್ತಕರ್ತರು. ಹೀಗಾಗಿ ನಮಗೆ ಟಿಕೆಟ್ ನೀಡಿದ್ದಾರೆ. ಮತಕ್ಷೇತ್ರದಲ್ಲಿ ಜೆಡಿಎಸ್ ನ ಪಡೆಯೇ ಇದೆ. ನಮ್ಮ ಗೆಲವು ನಿಶ್ಚಿತ ಎಂದು ಜೆಡಿಎಸ್ ಅಭ್ಯರ್ಥಿ ನಾಜಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಬಾಗಲಕೋಟೆ, ಶಿವಮೊಗ್ಗಕ್ಕೆ ಯಾಕೆ ಎರಡು ಸಚಿವ ಸ್ಥಾನ?: ಯತ್ನಾಳ್

    ಬಾಗಲಕೋಟೆ, ಶಿವಮೊಗ್ಗಕ್ಕೆ ಯಾಕೆ ಎರಡು ಸಚಿವ ಸ್ಥಾನ?: ಯತ್ನಾಳ್

    – ನಮ್ಮವರೇನು ವೋಟ್ ಕೊಟ್ಟಿಲ್ವಾ?

    ವಿಜಯಪುರ: ಬಾಗಲಕೋಟೆ ಮತ್ತು ಶಿವಮೊಗ್ಗಕ್ಕೆ ಎರಡು ಸಚಿವ ಸ್ಥಾನ ನೀಡಿರೋದು ಯಾಕೆ? ಕಲಬುರಗಿ, ಚಾಮರಾಜನಗರ ಮತ್ತು ಮೈಸೂರಿನವರು ಮತ ನೀಡಿಲ್ಲವಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪಕ್ಷದ ವಿರುದ್ಧವೇ ಗುಡುಗಿದ್ದಾರೆ.

    ನ್ಯಾಯಯುತವಾಗಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು. ಸಿಂದಗಿ ಉಪಚುನಾವಣೆಗೂ ಮೊದಲೇ ಸಚಿವ ಸ್ಥಾನ ನೀಡುವ ಕುರಿತು ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲ ಜಿಲ್ಲೆಗೆ ಒಂದೊಂದು ಸಚಿವ ಸ್ಥಾನ ನೀಡಬೇಕು. ಕೆಲವರಿಗೆ ಯತ್ನಾಳ್ ಸಚಿವ ಆಗಬಾರದು ಅನ್ನೋದಿದೆ. ಹಣೆ ಬರಹದಲ್ಲದ್ದರೆ ಯಾರಿಂದಲೂ ತಪ್ಪಿಸಲು ಆಗಲ್ಲ. ಈ ಬಾರಿ ವಿಜಯಪುರಕ್ಕೆ ಅನ್ಯಾಯ ಆಗಲ್ಲ. ನಮ್ಮ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ನಂಬಿಕೆ ಇದೆ. ಜಿಲ್ಲೆಯಲ್ಲಿ ಮೂಲ ಬಿಜೆಪಿಗರು ಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದೆ: ಯತ್ನಾಳ್

    ಸಿಎಂ ಕುರ್ಚಿ ಮೇಲೆ ಯತ್ನಾಳ್ ಕಣ್ಣು ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಾಲ ಕೂಡಿ ಬಂದರೆ ಯಾರು ತಪ್ಪಿಸೋಕೆ ಆಗಲ್ಲ. ಕಾಲ ಯಾರನ್ನು ಕೇಳಿ ಬರಲ್ಲ. ಸಿಎಂ ಸ್ಥಾನದ ರೇಸ್ ನಲ್ಲಿ ಬೊಮ್ಮಾಯಿ ಅವರ ಹೆಸರು ಇರಲಿಲ್ಲ, ಆದ್ರೂ ಸಿಎಂ ಆದರಲ್ಲ. ಕಾಲಕ್ರಮೇಣ ಬದಲಾವಣೆ ನಡದೆ ನಡೆಯುತ್ತೆ. ಒಳ್ಳೆಕಾಲ ಬಂದೇ ಬರುತ್ತೆ ನಾವೇಕೆ ನಿರೀಕ್ಷೆ ಮಾಡಬಾರದು ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವ ನೈತಕತೆ ಇಲ್ಲ: ಸಿ.ಟಿ.ರವಿ

  • ಸಿಂದಗಿ ಉಪಚುನಾವಣೆಯಲ್ಲಿ ಸ್ಪರ್ಧೆ- ಲಕ್ಷ್ಮಣ ಸವದಿ ಸ್ಪಷ್ಟನೆ

    ಸಿಂದಗಿ ಉಪಚುನಾವಣೆಯಲ್ಲಿ ಸ್ಪರ್ಧೆ- ಲಕ್ಷ್ಮಣ ಸವದಿ ಸ್ಪಷ್ಟನೆ

    ಬೆಳಗಾವಿ/ಚಿಕ್ಕೋಡಿ: ಸಿಂದಗಿ ಉಪಚುನಾವಣೆಯಲ್ಲಿ ನನ್ನ ಸ್ಪರ್ಧೆಗಳು ಊಹಾಪೋಹಗಳು ಹರಿದಾಡುತ್ತಿವೆ. ಸಿಂದಗಿಯಲ್ಲಿ ಸ್ಥಳೀಯ ಮುಖಂಡರಿದ್ದು, ನಾನು ಅಥವಾ ನನ್ನ ಮಗ ಸಿಂದಗಿಯಿಂದ ಸ್ಪರ್ಧೆ ಮಾಡಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ಮೈದಾನದಲ್ಲಿ ಕಾಗವಾಡ ತಾಲೂಕಿನಲ್ಲಿ ನೂತನವಾಗಿ ಗ್ರಾಮ ಪಂಚಾಯತಿ ಸದಸ್ಯರ ಸತ್ಕಾರ ಸಮಾರಂಭ ಮುಕ್ತಾಯ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಬಸವಕಲ್ಯಾಣದಿಂದದಲೂ ಸ್ಪರ್ಧಿಸಲು ಕೆಲವರು ಸೂಚಿಸಿದ್ದರು. ಆದ್ರೆ ವಿನಂತಿಯಿಂದ ತಿರಸ್ಕಾರ ಮಾಡಿದ್ದೇನೆ ಎಂದು ಹೇಳಿದರು.

    ಟಿಕೆಟ್ ದರ ಹೆಚ್ಚಳವಿಲ್ಲ: ಬಸ್ ಟಿಕೆಟ್ ದರ ಹೆಚ್ಚಿಗೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಈಗಾಗಲೇ ಕೊರೊನಾದಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸಿದ್ದಾರೆ. ಯಾವುದೇ ತೆರನಾಗಿ ಮೂರು ನಿಗಮಗಳಲ್ಲಿ ಟಿಕೆಟ್ ದರ ಹೆಚ್ಚಿಗೆ ಮಾಡುವುದಿಲ್ಲ. ಕಳೆದ ಬಾರಿ 12 ಪ್ರತಿಷತ ಟಿಕೆಟ್ ದರ ಹೆಚ್ಚಿಗೆ ಮಾಡಿದ್ದೇವೆ. ಈ ಸಲ ಟಿಕೇಟ್ ದರ ಹೆಚ್ಚು ಮಾಡುವ ಪ್ರಸ್ತಾಪ ಇಲ್ಲ ಎಂದರು.

    10ರಲ್ಲಿ 7 ಬೇಡಿಕೆ ಈಡೇರಿಕೆ: ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಪ್ರತಿಕ್ರಿಯಿಸಿದ ಸವದಿ, ಈ ಹಿಂದೆ ಸಾರಿಗೆ ನೌಕರರು ಅನಿರ್ದಿಷ್ಟಿತವಾಗಿ ಪ್ರತಿಭಟನೆ ಮಾಡಿದರು. ಅವರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದೀವಿ. ಈಗಾಗಲೇ ಏಳು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಅವರು ಇಟ್ಟಿರುವ ಮೂರು ಬೇಡಿಕೆಗಳಲ್ಲಿ ಇವತ್ತಿನ ಹಣಕಾಸು ವ್ಯವಸ್ಥೆಯನ್ನು ನೋಡಿಕೊಂಡು ಅವರಿಗೆ ಆರನೇ ಆಯೋಗ ಶಿಪಾರಸ್ಸಿನ ಮೇರೆಗೆ ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ ಎಂದು ಹೇಳಿದರು. ಯಾರು ಕಡಿಮೆ ಇಂಧನ ಬಳಕೆ ಮಾಡಿ ಬಸ್ ಸಂಚರಿಸುತ್ತಾರೆ ಅಂತವರಿಗೆ ನಾಲ್ಕು ವಿಭಾಗದಲ್ಲಿ ನಾಲ್ಕು ಜನರನ್ನು ಆಯ್ಕೆ ಮಾಡಿ 10 ಗ್ರಾಂ ಬಂಗಾರದ ಪದಕ ನೀಡಲಾಗುವುದು ಎಂದು ತಿಳಿಸಿದರು.