Tag: ಸಿಂದಗಿ

  • ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಬೆಂಗಳೂರು: ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನನ್ನ ಮಗನಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿಸುತ್ತೇನೆ ಎಂದು ಬಿಜೆಪಿ (BJP) ಮುಖಂಡ ವಿಜೂಗೌಡ ಪಾಟೀಲ್ (Vijugouda Patil) ಹೇಳಿದ್ದಾರೆ.

    ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್ ಬಳಿ ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಟೋಲ್ ಬಳಿ ಹೋಗಿದ್ದು ನಿಜ. ಟೋಲ್‌ನಲ್ಲಿದ್ದ ಸಿಬ್ಬಂದಿ ಯಾರ ವಾಹನ ಅಂತ ಕೇಳಿದ್ದಾರೆ. ನಾನು ವಿಜೂಗೌಡ ಅವರ ಮಗ ಅಂತ ಹೇಳಿದ್ದಾನೆ. ಯಾವ ವಿಜೂಗೌಡ? ಅವರ ಮಗ ಆದ್ರೆ ಏನಂತೆ ಟೋಲ್ ಕಟ್ಟಿ ಹೋಗಬೇಕು ಅಂತ ಹೇಳಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ವಿಜಯಪುರ | ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರನಿಂದ ಹಲ್ಲೆ

    ನಾವು ಅಲ್ಲಿ ದಿನ ಹೋಗೋದು ಬರೋದು ಮಾಡುತ್ತೇವೆ. ನಮ್ಮನ್ನ ಗುರುತು ಹಿಡಿಬೇಕು ಅಂತ ಹೇಳಿದ್ದಾನೆ. ನನ್ನ ಮಗ ಹೊಡೆದಿಲ್ಲ. ಹಿಂದಿನಿಂದ ಬಂದು ಅವನ ಸ್ನೇಹಿತರೆಲ್ಲ ಸೇರಿ ಹೊಡೆದಿದ್ದಾರೆ. ನನ್ನ ಮಗ ಜಗಳ ಬಿಡಿಸಲು ಹೋಗಿದ್ದಾನೆ ಅಷ್ಟೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಎಲ್ಲರೂ ಟೋಲ್ ಕಟ್ಟಲೇಬೇಕು. ಕಟ್ಟುವುದಿಲ್ಲ ಅಂತ ನನ್ನ ಮಗ ಹೇಳಿಲ್ಲ. ಆದರೆ ಯಾರದ್ರೂ ತಂದೆ ಬಗ್ಗೆ ಮಾತನಾಡಿದರೆ ಕೋಪ ಬರುತ್ತದೆ ಅಲ್ವಾ? ಹಾಗಾಗಿ ನನ್ನ ಮಗ ಕೋಪದಿಂದ ಮಾತನಾಡಿದ್ದಾನೆ. ಈ ವಿಚಾರದಲ್ಲಿ ನಾನು ನನ್ನ ಮಗನನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.

    ಯಾರೆಲ್ಲ ಹಲ್ಲೆ ಮಾಡಿದ್ದಾರೆ ಅವರೆಲ್ಲರಿಗೂ ನಾನು ಬೈದಿದ್ದೇನೆ. ಅಲ್ಲದೇ ಕ್ಷಮಾಪಣೆ ಕೇಳಬೇಕು ಅಂತ ಹೇಳಿದ್ದೇನೆ. ಯಾರೂ ತಪ್ಪು ಮಾಡಿದ್ರೂ ಕ್ಷಮೆ ಕೇಳಬೇಕು. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.

    ಉಪ್ಪು ತಿಂದವರೂ ನೀರು ಕುಡಿಯಲೇ ಬೇಕು. ತಪ್ಪು ಯಾರೇ ಮಾಡಿದ್ರೂ ಅದು ತಪ್ಪೇ. ನನ್ನ ಮಗ ತಪ್ಪು ಮಾಡಿದ್ರೆ ಕ್ಷಮೆ ಕೇಳಿಸುತ್ತೇನೆ. ನನ್ನ ಮಗ ತಪ್ಪು ಮಾಡಿರುವ ಬಗ್ಗೆ ನನಗೆ ಇನ್ನೂ ಸಂಶಯವಿದೆ. ನಾನೇ ಖುದ್ದು ಸ್ಥಳಕ್ಕೆ ಹೋಗಿ ಯಾರು ತಪ್ಪು ಮಾಡಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.

  • ವಿಜಯಪುರ | ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರನಿಂದ ಹಲ್ಲೆ

    ವಿಜಯಪುರ | ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರನಿಂದ ಹಲ್ಲೆ

    ವಿಜಯಪುರ: ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ (BJP) ಮುಖಂಡ ವಿಜೂಗೌಡ ಪಾಟೀಲ್ (Vijugouda Patil) ಪುತ್ರ ಹಲ್ಲೆ ನಡೆಸಿರುವ ಘಟನೆ ವಿಜಯಪುರ-ಕಲಬುರಗಿ ಟೋಲ್‌ನಲ್ಲಿ ನಡೆದಿದೆ.

    ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ್ ಅವರ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಸ್ನೇಹಿತರು ವಿಜಯಪುರದಿಂದ ಕಪ್ಪು ಬಣ್ಣದ ಥಾರ್‌ನಲ್ಲಿ ಸಿಂದಗಿ ಕಡೆ ಹೊರಟಿದ್ದರು. ಈ ವೇಳೆ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್‌ನಲ್ಲಿ ಹಣ ಪಾವತಿಸಲು ಕೇಳಿದ್ದಾರೆ. ಆಗ ಸಮರ್ಥಗೌಡ ನಾನು ವಿಜೂಗೌಡ ಪಾಟೀಲ್ ಪುತ್ರ ಎಂದು ಹೇಳಿದ್ದಾನೆ. ಆಗ ಟೋಲ್ ಸಿಬ್ಬಂದಿ ಯಾವ ವಿಜೂಗೌಡ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಸಮರ್ಥಗೌಡ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ವಯನಾಡು ಪ್ರಮೋಷನ್: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

    ಸಮರ್ಥಗೌಡ ಮಾತ್ರವಲ್ಲದೇ ಆತನ ಸ್ನೇಹಿತರು ಕೂಡ ಹಲ್ಲೆ ನಡೆಸಿದ್ದಾರೆ. ಇದರಿಂದ ಟೋಲ್ ಸಿಬ್ಬಂದಿ ಹಣ ತೆಗೆದುಕೊಳ್ಳದೇ ಹಾಗಾಯೇ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಗಾಯಾಳು ಸಂಗಪ್ಪ ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲಾಗಿದ್ದು, ಟೋಲ್ ಸಿಬ್ಬಂದಿ ದೂರು ದಾಖಲಿಸಲು ಮುಂದಾಗಿದ್ದಾರೆ.ಇದನ್ನೂ ಓದಿ: ಚಿತ್ತಾಪುರ RSS ಪಥಸಂಚಲನ ವಿವಾದ – ನ.5ಕ್ಕೆ ಬೆಂಗಳೂರಲ್ಲಿ ಶಾಂತಿಸಭೆ, ನ.7ಕ್ಕೆ ಮತ್ತೆ ವಿಚಾರಣೆ

  • ವಿಜಯಪುರ | ಸಿಂದಗಿ ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

    ವಿಜಯಪುರ | ಸಿಂದಗಿ ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

    ವಿಜಯಪುರ: ಜಿಲ್ಲೆಯ ಸಿಂದಗಿ (Sindagi) ಬೈಪಾಸ್ ಬಳಿ ಸಿಂದಗಿ ಶಾಸಕ (Sindagi MLA) ಅಶೋಕ್ ಮನಗೂಳಿ (Ashok Managuli) ಅವರ ಕಾರಿಗೆ ವಾಹನವೊಂದು ಡಿಕ್ಕಿಹೊಡೆದಿದೆ.

    ಶಾಸಕರ ಕಾರಿನಲ್ಲಿ ಅವರ ಪುತ್ರಿ, ಸಹೋದರನ ಮಗ ಪ್ರಯಾಣಿಸುತ್ತಿದ್ದರು. ಈ ವೇಳೆ KA 03 NT 2827 ನಂಬರ್‌ನ ವಿಧಾನಸೌಧ ಪಾಸ್ ಹೊಂದಿರುವ ಇನ್ನೋವಾ ಹೈಕ್ರಾಸ್ ಕಾರಿಗೆ ಹಾಗೂ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಇದನ್ನೂ ಓದಿ: ಲಾಡ್ಜ್‌ನಲ್ಲಿ ಯುವಕ ಅನುಮಾನಾಸ್ಪದ ಸಾವು ಕೇಸ್ – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ಫೇಲ್ಯೂರ್ ಪತ್ತೆ

    ಕಲಬುಗಿಯಿಂದ ಸಿಂದಗಿ ಕಡೆಗೆ ಬರ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

  • ವಿಜಯಪುರ| ಸಿಂದಗಿ ಪಟ್ಟಣದಲ್ಲಿ ಒಂದೇ ದಿನ 4 ಬಾರಿ ಭೂಮಿ ಕಂಪಿಸಿದ ಅನುಭವ; ಜನರಲ್ಲಿ ಆತಂಕ

    ವಿಜಯಪುರ| ಸಿಂದಗಿ ಪಟ್ಟಣದಲ್ಲಿ ಒಂದೇ ದಿನ 4 ಬಾರಿ ಭೂಮಿ ಕಂಪಿಸಿದ ಅನುಭವ; ಜನರಲ್ಲಿ ಆತಂಕ

    ವಿಜಯಪುರ: ಜಿಲ್ಲೆಯ ಸಿಂದಗಿ (Sindagi) ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ನಿನ್ನೆ (ಶುಕ್ರವಾರ) ಒಂದೇ ದಿನದಲ್ಲಿ 4 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ.

    ಸಿಂದಗಿ ಪಟ್ಟಣದ ಸುತ್ತಮುತ್ತು ಕಂಪನದ ಅನುಭವ ಆಗಿದ್ದು, ಮಧ್ಯಾಹ್ನ 3 ಗಂಟೆ, ರಾತ್ರಿ 10:11, ಮತ್ತೆ ರಾತ್ರಿ 10:25, ಮತ್ತೊಮ್ಮೆ ರಾತ್ರಿ 10:47 ಒಟ್ಟು 4 ಬಾರಿ ಭೂಮಿ ಕಂಪನಿಸಿದಂತೆ ಭಾಸವಾಗಿದೆ.

    ಜೋರಾದ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಸಿಂದಗಿ ಜನರಲ್ಲಿ ಆತಂಕ ಮೂಡಿದ್ದು, ಮನೆ ಬಿಟ್ಟು ಅನೇಕರು ಹೊರಬಂದಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಈ ರೀತಿ ಸರಣಿ ರೂಪದಲ್ಲಿ ಭೂಕಂಪನದ ಅನುಭವ ಆಗಿತ್ತು.

    ಕಳೆದ 7 ದಿನಗಳಿಂದ ಭಾರಿ ಪ್ರಮಾಣ ಸದ್ದು ಭೂಮಿಯಲ್ಲಿ ಕಂಡು ಬಂದಿದ್ದು, ಸಿಂದಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

  • ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ

    ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ – ಜನರಲ್ಲಿ ಆತಂಕ

    ವಿಜಯಪುರ: ನಗರದ ಸಿಂದಗಿ ಬೈಪಾಸ್ (Sindagi Bypass) ಬಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ (Leopard) ಓಡಾಟ ನಡೆಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

    ನಗರದ ಮುನೇಶ್ವರಬಾಗ್ ಪ್ರದೇಶದಲ್ಲಿ ಚಿರತೆ ಓಡಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದ ಜನರು ಸುರಕ್ಷಿತ ಕ್ರಮ ತೆಗೆದುಕೊಳ್ಳುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

    ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ನಗರದ ಸಿಂದಗಿ ನಾಕಾ, ಮುನೇಶ್ವರಭಾಗ್ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಚಿರತೆ ಓಡಾಟದಿಂದ ಮನೆ ಬಿಟ್ಟು ಜನರು ಹೊರ ಬರುತ್ತಿಲ್ಲ. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಜನರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜನ ಕೋವಿಡ್‌ ವಿರುದ್ಧ ಹೋರಾಡುತ್ತಿರುವಾಗ ʻಶೀಷ್‌ ಮಹಲ್‌ʼ ನವೀಕರಣ – ಮೋದಿ ಮತ್ತೆ ಕಿಡಿ

  • ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ವಿಜಯಪುರ: ಸಿಂದಗಿ (Sindagi) ಪಟ್ಟಣದ ವಿರಕ್ತ ಮಠದ (Virakta Mutt) ಆಸ್ತಿ ಇದೀಗ ವಕ್ಫ್ ಆಸ್ತಿಯಾಗಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್‌ (Waqf Board) ಎಂದು ನೋಂದಣಿಯಾಗಿದೆ.

    ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ ಇತ್ತು. 2018 – 2019 ರಲ್ಲಿ ವಕ್ಫ್ ಬೋರ್ಡ್‌ ಎಂದು ಸೇರ್ಪಡೆಯಾಗಿದೆ.  ಇದನ್ನೂ ಓದಿ: ವಿಜಯಪುರ ಆಯ್ತು ಈಗ ಯಾದಗಿರಿಯ 1440 ರೈತರಿಗೆ ವಕ್ಫ್‌ ಬಿಗ್ ಶಾಕ್!

    ವಕ್ಫ್ ಬೋರ್ಡ್‌ಗೆ 1.28 ಎಕರೆ ಆಸ್ತಿಯನ್ನು ಸೇರಿಸಿದ್ದಕ್ಕೆ ಮಠದ ಭಕ್ತರ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಮಠ ಖಬರಸ್ಥಾನ ವಕ್ಫ್ ಬೋರ್ಡ್‌ ಆಗಿದ್ದು ಹೇಗೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇದೆ ರೀತಿ ಸಿಂದಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳು ಆಸ್ತಿ ವಕ್ಫ್ ಬೋರ್ಡ್‌ ಸೇರಿದೆ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ವಕ್ಫ್‌ ಬೋರ್ಡ್‌ಗೆ ಸೇರ್ಪಡೆಯಾದ ವಿಚಾರ ತಿಳಿದು ಭಕ್ತರು ಈಗ ಮಠದ ಮುಂದೆ ಜಮಾಯಿಸುತ್ತಿದ್ದಾರೆ.

  • ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವನ್ಯಜೀವಿಗಳ ಅಂಗಾಂಗಳ ಅಕ್ರಮ ಸಾಗಾಟ ಆರೋಪಿಗಳ ಬಂಧನ

    ವಿಜಯಪುರ: ಅಕ್ರಮವಾಗಿ ವನ್ಯಜೀವಿಗಳ (Wild Animals) ಅಂಗಾಂಗಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಂದಗಿ (Sindagi) ತಾಲ್ಲೂಕಿನ ಬಾಗಲೂರ (Bagalur) ಬಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಮಹಾರಾಷ್ಟ್ರದ (Maharashtra) ಅಸವಲದಾರಾ ಗ್ರಾಮದ ಪವನ್ ಹಾಗೂ ಭೋಸಲೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮಗಳು ಹಾಗೂ ವಿವಿಧ ಜಾತಿಯ ವನ್ಯ ಪ್ರಾಣಿಗಳ ಅಂಗಾಂಗಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

    ಆರೋಪಿಗಳ ಬಳಿ ಏನೆಲ್ಲ ಇತ್ತು?
    807 ಉಡದ ಶಿಶ್ನಗಳು, 116 ಇಂದ್ರಜಾಲಗಳು, 2 ಕಾಡು ಬೆಕ್ಕಿನ ಪಾದಗಳು, 2 ಕಾಡು ಬೆಕ್ಕು ಉಗುರುಗಳು, 3 ಕರಡಿಯ ಉಗುರುಗಳು, 28 ನೀರು ಪಕ್ಷಿಗಳ ಕಾಲುಗಳು, 2 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 4 ಕರಡಿಯ ಹಲ್ಲುಗಳು, 32 ಮುಂಗಸಿಯ ಕಾಲುಗಳು, 7 ಮುಂಗುಸಿಯ ದವಡೆಗಳು, 16 ಮುಂಗುಸಿಯ ಚರ್ಮದಿಂದ ಮಾಡಿದ ಉಂಡೆಗಳು, 26 ಕಾಡು ಹಂದಿಯ ಹಲ್ಲುಗಳು, 3 ಅಪರಿಚಿತ ಕಾಡು ಪ್ರಾಣಿಯ ಉಗುರುಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸಂಬಂಧ ಸಿಂದಗಿ ಸಿಐಡಿ ಅರಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

  • ನಮ್ಮಂತವರನ್ನು ನೆಗ್‍ಲೆಕ್ಟ್ ಮಾಡ್ತಾರೆ, ಬೇಕಾದಾಗ ಕರೀತಾರೆ ಬೇಡವಾದ್ರೆ ಕರಿಯಲ್ಲ: ಯತ್ನಾಳ್

    ನಮ್ಮಂತವರನ್ನು ನೆಗ್‍ಲೆಕ್ಟ್ ಮಾಡ್ತಾರೆ, ಬೇಕಾದಾಗ ಕರೀತಾರೆ ಬೇಡವಾದ್ರೆ ಕರಿಯಲ್ಲ: ಯತ್ನಾಳ್

    ಬೆಳಗಾವಿ: ನಮ್ಮಂತವರನ್ನ ನೆಗ್‍ಲೆಕ್ಟ್ ಮಾಡ್ತಾರೆ. ಸಿಂದಗಿಯಲ್ಲಿ ಜವಾಬ್ದಾರಿ ಕೊಟ್ಟಾಗ 31 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆವು. ಯಾವಾಗ ಬೇಕು ಅವಾಗ ಕರೀತಾರೆ. ಬೇಡವಾದ್ರೆ ಕರಿಯಲ್ಲ. ಇದರಿಂದ ಪಕ್ಷಕ್ಕೆ ಹಾನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ನಾವೆಲ್ಲಾ ಯಾರು..? ಸಚಿವರಾ ಅಂತಾ ಕುಟುಕಿದ ಯತ್ನಾಳ್, ನಮ್ಮಂತಹ ಅಪ್ರಾಮಾಣಿಕ. ಭ್ರಷ್ಟರನ್ನ ಅಯೋಗ್ಯರನ್ನ ಎಲ್ಲಿ ಸಚಿವರನ್ನಾಗಿ ಮಾಡ್ತಾರೆ. ಪ್ರಾಮಾಣಿಕರನ್ನ ಮಾತ್ರ ಸಚಿವರನ್ನಾಗಿ ಮಾಡುತ್ತಾರೆ. ನಮ್ಮನ್ನ ಸಚಿವರನ್ನಾಗಿ ಮಾಡದಿದ್ದರೆ, ಬದಲಾವಣೆ ಮಾಡದಿದ್ದರೆ ಆ ಕಡೆಗೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

    ನಮ್ಮಂತವರನ್ನ ನೆಗ್‍ಲೆಕ್ಟ್ ಮಾಡ್ತಾರೆ. ಸಿಂದಗಿಯಲ್ಲಿ ಜವಾಬ್ದಾರಿ ಕೊಟ್ಟಾಗ 31 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆವು. ಯಾವಾಗ ಬೇಕು ಅವಾಗ ಕರೀತಾರೆ. ಬೇಡವಾದರೆ ಕರಿಯಲ್ಲ. ಇದರಿಂದ ಪಕ್ಷಕ್ಕೆ ಹಾನಿ. ಯಡಿಯೂರಪ್ಪ ಯಾವುದೋ ಯಾತ್ರೆ ತಗೊಂಡು ಬಂದ್ರು ಅವಾಗಲೂ ಕರಿಯಲಿಲ್ಲ. ಬಿಎಸ್ ವೈ ರಂತೆ ಬೊಮ್ಮಾಯಿಯವರು ಇದ್ದಾರಾ..? ಬೊಮ್ಮಾಯಿಯವರ ಬಳಿ ನವಗ್ರಹಗಳಿವೆ. ರಾಹು ಕೇತು ಸಹ ಗ್ರಹಗಳು. ನವಗ್ರಹಗಳನ್ನ ಆಗಾಗ ಶಾಂತಿ ಮಾಡಿಸಬೇಕು ಎಂದರು.

    ಸಿಎಂ ಬೊಮ್ಮಾಯಿಯವರು ಶಾಂತಿ ಮಾಡಿಸಿದ್ದಾರೆ. ಕಾಶಿಗೆ ಹೋಗಿ ಬಂದಿದ್ದಾರೆ. ಬೆಳಗಾವಿಯ ಫಲಿತಾಂಶ ಸೇರಿದಂತೆ ಎಲ್ಲ ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಬೇಕು. ರಾಜ್ಯದ ನಾಯಕರು ಎಲ್ಲರನ್ನೂ ಕರೆದು ಚುನಾವಣೆ ಬಗ್ಗೆ ಮಾಹಿತಿ ಪಡೆದು ಸರಿಪಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ

  • ಹಾನಗಲ್ ಸೋಲಿಗೆ ಹೈಕಮಾಂಡ್ ಬೇಸರ – ಕುಮಾರಣ್ಣ ತಪ್ಪು ಮಾಡಿದ್ರು ಅಂದ ರೇವಣ್ಣ

    ಹಾನಗಲ್ ಸೋಲಿಗೆ ಹೈಕಮಾಂಡ್ ಬೇಸರ – ಕುಮಾರಣ್ಣ ತಪ್ಪು ಮಾಡಿದ್ರು ಅಂದ ರೇವಣ್ಣ

    ಬೆಂಗಳೂರು: ಹಾನಗಲ್ ಬೈ ಎಲೆಕ್ಷನ್ ಸೋಲಿನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆ. ಸಿಂದಗಿಯಲ್ಲಿ ಭರ್ಜರಿಯಾಗಿ ಗೆದ್ದರೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಶುಭಕೋರಿಲ್ಲ. ಆದರೆ ಪಕ್ಕದ ತೆಲಂಗಾಣದ ಹುಜಾರಾಬಾದ್, ಬಿಹಾರ, ಮಧ್ಯಪ್ರದೇಶ, ಅಸ್ಸಾಂ ರಾಜ್ಯದ ಉಪಚುನಾವಣೆ ಗೆಲುವಿಗೆ ಅಭಿನಂದಿಸಿ ನಡ್ಡಾ ಟ್ವೀಟ್ ಮಾಡಿದ್ದಾರೆ.

    ನವೆಂಬರ್ 6ರಂದು ದೆಹಲಿಗೆ ತೆರಳಲಿದ್ದು, 7ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತಾಡಿದ ಸಿಎಂ, ಹಾನಗಲ್ ಸೋಲಿನ ಹೊಣೆಯನ್ನು ಸಾಮೂಹಿಕವಾಗಿ ವಹಿಸಿಕೊಳ್ತೇವೆ. ಸೋಲಿನ ಪರಾಮರ್ಶೆ ಮಾಡ್ತೇವೆ ಅಂದಿದ್ದಾರೆ. ಜೊತೆಗೆ ಹಾನಗಲ್‍ನಲ್ಲಿ ಬಿಜೆಪಿ ಸೋಲಿಗೆ ಬಿಜೆಪಿ ದುರಾಡಳಿತವೇ ಕಾರಣ ಅನ್ನೋ ಕಾಂಗ್ರೆಸ್ ಆರೋಪಕ್ಕೆ ಬೊಮ್ಮಾಯಿ ಕೆಂಡಾಮಂಡಲರಾಗಿದ್ದಾರೆ.

    ಸಿಂದಗಿ ಜನರು ಯಾಕೆ ಹೆಚ್ಚಿನ ಮತ ನೀಡಿದ್ರು..? ಅಂತ ಠಕ್ಕರ್ ಕೊಟ್ಟಿದ್ದಾರೆ. ಸಚಿವ ಈಶ್ವರಪ್ಪ ಅವರಂತೂ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿಲ್ವಾ ಅಂತ ಛೇಡಿಸಿದ್ದಾರೆ. ಆದರೆ ಡಿಕೆಶಿ ಮಾತ್ರ ಸಿಂದಗಿಯಲ್ಲಿ ನಮಗೆ ಹೆಚ್ಚಿನ ಮತ ಸಿಕ್ಕಿದೆ. 2023ಕ್ಕೆ ಗುರಿ ಮುಟ್ಟುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಮೋದಿ ಸರ್ಕಾರದಿಂದ ಬಂಪರ್ – ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

    ಹಾಸನದಲ್ಲಿ ರೇವಣ್ಣ ಮಾತಾಡಿ, ನಮ್ಮ ಕುಮಾರಣ್ಣ ಕೆಲವು ತಪ್ಪು ಮಾಡ್ದಾ. ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಯಾರ್ಯಾರ ಜಾತಕ ಏನಿದೆ..? ನಮಗೆ ಗೊತ್ತಿದೆ ಟೈಂ ಬಂದಾಗ ಹೇಳ್ತಿನಿ ಅಂತ ಗುಡುಗಿದ್ದಾರೆ. ಈ ಮಧ್ಯೆ ನಾಳೆ ಬೊಮ್ಮಾಯಿ ಸರ್ಕಾರಕ್ಕೆ 100 ದಿನ ತುಂಬುತ್ತಿದೆ. ಹೀಗಾಗಿ 11ನೇ ರಂದು ಸಚಿವ ಸಂಪುಟ ಸಭೆ ನಡೆಸಿ, 100 ದಿನದ ಸಾಧನೆ, ಜಾರಿಗೆ ತಂದ ಯೋಜನೆಗಳನ್ನು ಜನತೆ ಮುಂದಿಡಲು ಸಿಎಂ ನಿರ್ಧರಿಸಿದ್ದಾರೆ. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

  • ಜನಾದೇಶವನ್ನ ಸ್ವಾಗತಿಸುತ್ತೇವೆ, ಇವಿಎಂ ದೂರಲ್ಲ – ಕಾಂಗ್ರೆಸ್ಸಿಗರ ಕಾಲೆಳೆದ ಸಿ.ಟಿ ರವಿ

    ಜನಾದೇಶವನ್ನ ಸ್ವಾಗತಿಸುತ್ತೇವೆ, ಇವಿಎಂ ದೂರಲ್ಲ – ಕಾಂಗ್ರೆಸ್ಸಿಗರ ಕಾಲೆಳೆದ ಸಿ.ಟಿ ರವಿ

    ಚಿಕ್ಕಮಗಳೂರು: ಸಿಂದಗಿ-ಹಾನಗಲ್ ಉಪಚುನಾವಣೆಯಲ್ಲಿ ನಾವು ಜನಾದೇಶವನ್ನ ಸ್ವಾಗತಿಸುತ್ತೇವೆ. ಇವಿಎಂ ಅನ್ನ ದೂರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.

    ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರೆ ವಿಪಕ್ಷ ನಾಯಕರು ಇವಿಎಂ ಮೇಲೆ ದೂರುತ್ತಿದ್ದರು. ಆದರೆ ನಾವು ಖಂಡಿತ ಇವಿಎಂ ಮೇಲೆ ಕಂಪ್ಲೆಂಟ್ ಮಾಡುವುದಿಲ್ಲ. ಜನಾದೇಶವನ್ನ ಸ್ವೀಕಾರ ಮಾಡುತ್ತೇವೆ ಎಂದಿದ್ದಾರೆ.

    ಸಿಂದಗಿಯಲ್ಲಿ 31000ಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದರೆ, ಹಾನಗಲ್‍ನಲ್ಲಿ ವಿರೋಚಿತವಾದ ಹೋರಾಟ ಕೊಟ್ಟಿದ್ದೇವೆ. ನಮಗೆ ಕರ್ನಾಟಕದಲ್ಲಿ ಮಿಶ್ರ ಫಲಿತಾಂಶ. ಒಂದು ಕಡೆ ಭರ್ಜರಿ ಜಯ, ಮತ್ತೊಂದೆಡೆ ನಿರೀಕ್ಷೆಯಂತೆ ಗೆಲ್ಲಲು ಸಾಧ್ಯವಾಗಿಲ್ಲ. ಗೆದ್ದ ಇಬ್ಬರಿಗೂ ಅಭಿನಂದಿಸಿ ಎಲ್ಲಾದರೂ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

    ಕರೆಕ್ಷನ್ ಎಂಬುದು ನಿರಂತರವಾಗಿರುವ ಪ್ರಕ್ರಿಯೆ. ನಾವು ಇದನ್ನು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವಿರುದ್ಧದ ಜನಾದೇಶ ಎಂದು ಭಾವಿಸುವುದಿಲ್ಲ. ಮಾನೆ, ವ್ಯಕ್ತಿಗತವಾಗಿ ಸೋತ ದಿನದಿಂದ ಕ್ಷೇತ್ರದಲ್ಲಿ ಸಂಪರ್ಕದಲ್ಲಿದ್ದರು. ನಮ್ಮಲ್ಲಿ ನಾಮಪತ್ರ ಸಲ್ಲಿಸುವ ಹಿಂದಿನ ದಿನದವರೆಗೂ ಅಭ್ಯರ್ಥಿ ಅಂತಿಮವಾಗದೇ ಇರುವುದು ಭಾಗಶಃ ಪರಿಣಾಮ ಬೀರಿದೆ ಎಂದರು. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ

    ಇದೇ ವೇಳೆ ಜೆಡಿಎಸ್ ಸೋಲಿನ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಸತ್ಯ ಹೇಳಿದರೆ ಅವರಿಗೆ ಬೇಸರ. ಸತ್ಯ ಯಾವಾಗಲೂ ಕಹಿಯಾಗಿರುತ್ತೆ. ಜೆಡಿಎಸ್‍ಗೆ ಆ ಭಾಗದ ಎರಡೂ ಕ್ಷೇತ್ರದಲ್ಲೂ ಸಂಘಟನೆ ಇರಲಿಲ್ಲ. ಅಲ್ಲಿ ಮಾಜಿ ಶಾಸಕರ ಕಾರಣಕ್ಕೋಸ್ಕರ ಅವರ ನಿಧನದಿಂದ ಸಿಂಪತಿ ಕಾರಣಕ್ಕೆ ಒಂದು ಜಯ ಸಿಕ್ಕಿತ್ತು. ಈ ಬಾರಿ ಅವರ ಮಗನೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಬಿಜೆಪಿ 31,000 ಲೀಡ್ ನಲ್ಲಿ ಗೆದ್ದಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಂದಗಿಯಲ್ಲಿ ಲಿಂಗಾಯತರು ಮತ ಹಾಕಿಲ್ಲ, ರಾಷ್ಟ್ರೀಯ ಪಕ್ಷಗಳು ಹಣದ ಹೊಳೆ ಹರಿಸಿ ಗೆದ್ದಿವೆ: ಹೆಚ್‍ಡಿಡಿ ಆರೋಪ

    ಆರ್ಗನೈಸೇಷನ್, ಐಡಿಯಾಲಜಿ ಹಾಗೂ ನೇತೃತ್ವ ಇಲ್ಲದಿದ್ರೆ ಏನಾಗಬೇಕೋ ಅದೇ ಆಗುತ್ತೆ. ಹಾನಗಲ್‍ನಲ್ಲಿ ಸಾವಿರಕ್ಕೂ ಕಡಿಮೆ ಮತ ಬಂದಿದೆ ಅಂದರೆ, ಅವರು ಭವಿಷ್ಯದ ರಾಜಕಾರಣದ ಬಗ್ಗೆ ಯೋಚಿಸಬೇಕು. ಮುಂದೆ ಪ್ರಾದೇಶಿಕ ಪಕ್ಷಕ್ಕೆ ಜನ ಬೆಂಬಲ ನೀಡುತ್ತಾರೆ ಎಂದು ಆಶಾವಾದ ಇಟ್ಟುಕೊಂಡಿರುವವರು ಆಲೋಚಿಸಬೇಕು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.