Tag: ಸಿಂಗಾರಿ ಬೀಡಿ

  • ಬೀಡಿ ಉದ್ಯಮಿ ಮನೆಗೆ ಇಡಿ ಹೆಸರಿನಲ್ಲಿ ದಾಳಿ – 30 ಲಕ್ಷದೊಂದಿಗೆ ಪರಾರಿ

    ಬೀಡಿ ಉದ್ಯಮಿ ಮನೆಗೆ ಇಡಿ ಹೆಸರಿನಲ್ಲಿ ದಾಳಿ – 30 ಲಕ್ಷದೊಂದಿಗೆ ಪರಾರಿ

    ಮಂಗಳೂರು: ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳೆಂದು ಮನೆಗೆ ದಾಳಿ ಮಾಡಿ 30 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ (Vittla) ಬೋಳಂತೂರುನಲ್ಲಿ ನಡೆದಿದೆ.

    ಸಿಂಗಾರಿ ಬೀಡಿ (Singari Beedi) ಉದ್ಯಮ ನಡೆಸುತ್ತಿದ್ದ ಬೋಳಂತೂರು ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರ ಮನೆಗೆ ಶುಕ್ರವಾರ ತಡ ರಾತ್ರಿ ತಮಿಳುನಾಡು ಮೂಲದ ಕಾರಿನಲ್ಲಿ ನಾಲ್ಕು ಜನರ ತಂಡ ಆಗಮಿಸಿದೆ.  ಇದನ್ನೂ ಓದಿ: ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಬೆಳಗ್ಗಿನ ಜಾವದವರೆಗೂ ತನಿಖೆ ನಡೆಸುವ ನಾಟಕವಾಡಿದ್ದರು. ಬಳಿಕ ಮನೆಯಲ್ಲಿ ಸಿಕ್ಕಿದ್ದ 30 ಲಕ್ಷ ನಗದು ಹಿಡಿದುಕೊಂಡು ಪರಾರಿಯಾಗಿದ್ದರು.

    ಅನುಮಾನಗೊಂಡ ಸುಲೈಮಾನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.