Tag: ಸಿಂಗಾಪುರ್ ಫ್ರೈಡ್ ರೈಸ್

  • ‘ಸಿಂಗಪುರ್ ಫ್ರೈಡ್ ರೈಸ್’ ಸೂಪರ್ ರೆಸಿಪಿ

    ‘ಸಿಂಗಪುರ್ ಫ್ರೈಡ್ ರೈಸ್’ ಸೂಪರ್ ರೆಸಿಪಿ

    ಸ್ಪೈಸಿ  ಮತ್ತು ಸ್ವೀಟ್ ಇಷ್ಟಪಡುವವರಿಗೆ ‘ಸಿಂಗಪುರ್ ಫ್ರೈಡ್ ರೈಸ್’ ಫೇವರೆಟ್‌. ಇತ್ತೀಚೆಗೆ ‘ಸಿಂಗಪುರ್ ಫ್ರೈಡ್ ರೈಸ್’ ಟ್ರೆಂಡಿ ಫುಡ್ ಆಗಿದೆ. ಈ ಫ್ರೈಡ್ ರೈಸ್ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿಸಲಾಗುತ್ತೆ.

    ಬೇಕಾಗಿರುವ ವಿಧಾನ:
    * ಬೇಯಿಸಿದ ಅನ್ನ – 1/2 ಕೆಜಿ
    * ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 1 ಟೀಸ್ಪೂನ್
    * ಕತ್ತಿರಿಸಿದ ಈರುಳ್ಳಿ – 1/2 ಕಪ್
    * ಕ್ಯಾರೆಟ್ – 1/2 ಕಪ್
    * ಮೆಣಸು – 1/8 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 1


    * ವಿನೆಗರ್ – 1/2 ಟೀಸ್ಪೂನ್
    * ಚಿಲ್ಲಿ ಪೌಡರ್ – 2 ಟೀಸ್ಪೂನ್
    * ಸೋಯಾ ಸಾಸ್ – 1 ಟೀಸ್ಪೂನ್
    * ಬೆಳ್ಳುಳ್ಳಿ ಸಾಸ್ – 1 ಟೀಸ್ಪೂನ್
    * ಕ್ಯಾಪ್ಸಿಕಂ – 1/2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಅಕ್ಕಿಯನ್ನು ತೊಳೆದು ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಅಕ್ಕಿಯಿಂದ ಬೇಯಿಸಿ ತಣ್ಣಗಾಗಲು ಬಿಡಿ.
    * ಹೆಚ್ಚಿನ ಉರಿಯಲ್ಲಿ ಬಾಣಲೆ ಮೇಲೆ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಬೆಳ್ಳುಳ್ಳಿ ಸ್ಪ್ರಿಂಗ್ ಆನಿಯನ್ಸ್, ಮೆಣಸಿನಕಾಯಿ ಮತ್ತು ಕ್ಯಾರೆಟ್ ಸೇರಿಸಿ, 2 ನಿಮಿಷಗಳ ಕಾಲ ಫ್ರೈ ಮಾಡಿ.
    * ಕ್ಯಾಪ್ಸಿಕಂ ಸೇರಿಸಿ, ಸ್ವಲ್ಪ ಉಪ್ಪನ್ನು ಸೇರಿಸಿ ಹುರಿಯಿರಿ
    * ಫ್ರೈ ಮಾಡಿದ ಕರಿಗೆ ಅನ್ನವನ್ನ ಸೇರಿಸಿ ಸಮವಾಗಿ ಬೆರೆಸಿ. ವಿನೆಗರ್ ಮತ್ತು ಸಾಸ್‍ಗಳನ್ನು ಮಿಶ್ರಣ ಮಾಡಿ.
    * ಕಾಳುಮೆಣಸಿನ ಪುಡಿಯನ್ನು ಸೇರಿಸಿ, 2 ರಿಂದ 3 ನಿಮಿಷಗಳ ಕಾಲ ಫ್ರೈ ಮಾಡಿ. ಗೋಡಂಬಿಯಿಂದ ಅಲಂಕರಿಸಿ.

    ‘ಸಿಂಗಾಪುರ್ ಫ್ರೈಡ್ ರೈಸ್’ ಬಡಿಸಲು ಸಿದ್ಧವಾಗಿದೆ.