Tag: ಸಿಂಗಾಪುರ್ ನೂಡಲ್ಸ್

  • ಟೇಸ್ಟಿ ಟೇಸ್ಟಿ ಸಿಂಗಾಪುರ್ ನೂಡಲ್ಸ್ ರೆಸಿಪಿ

    ಟೇಸ್ಟಿ ಟೇಸ್ಟಿ ಸಿಂಗಾಪುರ್ ನೂಡಲ್ಸ್ ರೆಸಿಪಿ

    ನೆಯಲ್ಲಿ ಏನಾದ್ರೂ ಸುಲಭವಾಗಿ ನಾನ್‌ವೆಜ್ ಸ್ಟ್ರೀಟ್ ಫುಡ್ ಸ್ಟೈಲ್‌ನಲ್ಲಿ ಅಡುಗೆ ಮಾಡಬೇಕು ಎಂದುಕೊಂಡಿದ್ರೆ ಒಮ್ಮೆ ಸಿಂಗಾಪುರ್ ನೂಡಲ್ಸ್ ಮಾಡಿ. ಸಿಂಗಾಪುರ್ ನೂಡಲ್ಸ್‌ನ ಮೂಲ ಸಿಂಗಾಪುರ ಅಲ್ಲ ಬದಲಿಗೆ ಹಾಂಗ್ ಕಾಂಗ್ ಎನ್ನೋದು ಹಾಸ್ಯಕರ ಸಂಗತಿ. ಸಿಗಡಿ ಮೀನು ಹಾಗೂ ಪೋರ್ಕ್‌ನಿಂದ ಮಾಡೋ ಈ ರೆಸಿಪಿ ತುಂಬಾ ಸಿಂಪಲ್ ಆಗಿದ್ದು, ತಕ್ಷಣವೂ ತಯಾರಾಗುತ್ತದೆ. ಟೇಸ್ಟಿ ಸಿಂಗಾಪುರ್ ನೂಡಲ್ಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಅಕ್ಕಿ ನೂಡಲ್ಸ್ – 400 ಗ್ರಾಂ
    ಬೇಯಿಸಿದ ಸಿಗಡಿ ಮೀನು – ಮಧ್ಯಮ ಗಾತ್ರದ 10
    ತಳ್ಳಗೆ ಕತ್ತರಿಸಿದ ಪೋರ್ಕ್ – 250 ಗ್ರಾಂ
    ಹೆಚ್ಚಿದ ಕೆಂಪು ಮೆಣಸು – 1
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 3 ಎಸಳು
    ಮೊಟ್ಟೆ – 2
    ಎಣ್ಣೆ – 3 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕರಿಬೇವು – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಸೋಯಾ ಸಾಸ್ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿ ನೂಡಲ್ಸ್ ಅನ್ನು ಕುದಿಯುತ್ತಿರುವ ನೀರಿಗೆ ಹಾಕಿ 2-3 ನಿಮಿಷಗಳ ಕಾಲ ನೆನೆಸಿ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಆಫ್ ಮಾಡಿ, ನೀರನ್ನು ಹರಿಸಿ, ಪಕ್ಕಕ್ಕಿಡಿ.
    * ಒಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಅದರಲ್ಲಿ ಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಈಗ ಮೊಟ್ಟೆಯನ್ನು ಪಕ್ಕಕ್ಕಿಟ್ಟು ಬಾಣಲೆಯನ್ನು ಒರೆಸಿಕೊಳ್ಳಿ.
    * ಈಗ ಮಧ್ಯಮ ಉರಿಯಲ್ಲಿ ಉಳಿದ ಎಣ್ಣೆಯನ್ನು ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
    * ಉರಿಯನ್ನು ಕಡಿಮೆ ಮಾಡಿಕೊಂಡು ಕರಿಬೇವು ಹಾಗೂ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.
    * ಕೆಂಪು ಮೆಣಸು ಸೇರಿಸಿ ಸುಮಾರು 2 ನಿಮಿಷ ಬೇಯಿಸಿ.
    * ಬಳಿಕ ಹಂದಿ ಮಾಂಸವನ್ನು ಸೇರಿಸಿ 1 ನಿಮಿಷ ಬೇಯಿಸಿ.
    * ಸ್ಪ್ರಿಂಗ್ ಆನಿಯನ್ ಹಾಗೂ ಸಿಗಡಿ ಸೇರಿಸಿ ಇನ್ನೊಂದು 30 ಸೆಕೆಂಡುಗಳ ಕಾಲ ಬೇಯಿಸಿ.
    * ಈಗ ಬೇಯಿಸಿಟ್ಟಿದ್ದ ನೂಡಲ್ಸ್ ಹಾಗೂ ಸೋಯಾ ಸಾಸ್ ಹಾಗೂ ಉಪ್ಪು ಹಾಕಿ 1 ನಿಮಿಷ ಮಿಶ್ರಣ ಮಾಡಿ. ಬಳಿಕ ಹುರಿದಿಟ್ಟಿದ್ದ ಮೊಟ್ಟೆಯನ್ನು ಸೇರಿಸಿ.
    * ಸಾಧ್ಯವಾದರೆ ನೂಡಲ್ಸ್ ಅನ್ನು ಸುಮಾರು 30 ಸೆಕೆಂಡುಗಳ ಕಾಲ ಹೆಚ್ಚಿನ ಉರಿಯಲ್ಲಿ ಟಾಸ್ ಮಾಡಿ.
    * ಇದೀಗ ಟೇಸ್ಟಿ ಸಿಂಗಾಪುರ್ ನೂಡಲ್ಸ್ ತಯಾರಾಗಿದ್ದು, ಬೆಚ್ಚಗೆ ಬಡಿಸಿ. ಇದನ್ನೂ ಓದಿ: ಈ ಸೀಸನ್‌ನಲ್ಲಿ ಮಾಡಿ ಟೇಸ್ಟಿ ಮ್ಯಾಂಗೋ ಚಿಕನ್