ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Assembly Election 2023) ಮುಗಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸಿಂಗಾಪುರ್ ಗೆ ತೆರಳಿದ್ದಾರೆ.
ಮಧ್ಯರಾತ್ರಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಿಂಗಾಪುರ್ (Singapore) ನತ್ತ ಪ್ರಯಾಣ ಬೆಳೆಸಿದ್ದಾರೆ. ಕಳೆದ ಆರು ತಿಂಗಳಿನಿಂದ ಸತತ ಪ್ರಚಾರ, ಪ್ರವಾಸದಿಂದ ಸುಸ್ತಾಗಿದ್ದ ಹೆಚ್‍ಡಿಕೆ ಎರಡು ದಿನಗಳ ಕಾಲ ವಿಶ್ರಾಂತಿಗಾಗಿ ಸಿಂಗಾಪುರ್ ಪ್ರಯಾಣ ಬೆಳೆಸಿದ್ದಾರೆ.
ಸಿಂಗಾಪುರ್: ಬಿಯರ್ ಹೊಸ ಬ್ರ್ಯಾಂಡ್‌ವೊಂದು ಸಿಂಗಾಪುರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿಶೇಷ ಬ್ರ್ಯಾಂಡ್‌ನ ಬಿಯರ್ ಸಿಂಗಾಪುರ ಮದ್ಯಪ್ರಿಯರ ಮನಗೆದ್ದಿದೆ.
ಬ್ರಿಯರ್ ಬ್ರ್ಯಾಂಡ್ ಹೆಸರು ʼನ್ಯೂಬ್ರೂʼ (NEWBrew). ಶೌಚ ನೀರನ್ನು ಮರುಬಳಸಿ ಕುಡಿಯುವ ನೀರಾಗಿ ಸಂಸ್ಕರಿಸಿ ಈ ಬಿಯರ್ ತಯಾರಿಸಲು ಬಳಸಲಾಗುತ್ತದೆ. ಹೊಸ ಬ್ರ್ಯಾಂಡ್‌ನ ಬಿಯರ್ ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ಮದ್ಯಪ್ರಿಯರು ಆಸಕ್ತಿಯಿಂದ ಕೊಳ್ಳುತ್ತಿದ್ದಾರೆ. ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್
ಆಲ್ಕೊಹಾಲ್‌ಯುಕ್ತ ಪಾನೀಯವು ದೇಶದ ರಾಷ್ಟ್ರೀಯ ಜಲ ಸಂಸ್ಥೆ, PUB ಮತ್ತು ಸ್ಥಳೀಯ ಕ್ರಾಫ್ಟ್ ಬ್ರೂವರಿ ಬ್ರೂವರ್ಕ್ಜ್ ಸಹಯೋಗದಲ್ಲಿ ತಯಾರಿಸಲ್ಪಟ್ಟಿದೆ. ʼನ್ಯೂಬ್ರೂʼ ಏಪ್ರಿಲ್‌ನಿಂದ ಸೂಪರ್ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.
ಇದನ್ನು ಟಾಯ್ಲೆಟ್ ನೀರನ್ನು ಮರುಬಳಸಿ ತಯಾರಿಸಲಾಗಿದೆ ಎಂದು ಸ್ಪಷ್ಟವಾಗಿ ನಂಬಲು ಸಾಧ್ಯವಾಗಲಿಲ್ಲ ಎಂದು ಗ್ರಾಹಕ ಚೆವ್ ವೀ ಲಿಯಾನ್ ಹೇಳಿದ್ದಾರೆ. ಸೂಪರ್ ಮಾರುಕಟ್ಟೆಯಲ್ಲಿ ಹೊಸ ಬ್ರ್ಯಾಂಡ್‌ನ ಬಿಯರ್ ಖರೀದಿಸಿದ ಅವರು, ಇದು ಸಾಮಾನ್ಯವಾಗಿ ಇತರೆ ಬಿಯರ್‌ಗಳಂತೆಯೇ ರುಚಿ ಹೊಂದಿದೆ. ನನಗೆ ಬಿಯರ್ ಅಂದರೆ ಇಷ್ಟ ಎಂದು ತಿಳಿಸಿದ್ದಾರೆ.
ಕೊಳಚೆ ನೀರನ್ನು ಕುಡಿಯುವ ನೀರಾಗಿ ಸಂಸ್ಕರಿಸುವ ಪರಿಕಲ್ಪನೆಗೆ ಆರಂಭದಲ್ಲಿ ವ್ಯಾಪಕ ವಿರೋಧವಿತ್ತು. ಕಳೆದ ದಶಕದಲ್ಲಿ ಪ್ರಪಂಚದಾದ್ಯಂತ ಶುದ್ಧ ನೀರಿನ ಪೂರೈಕೆ ತೊಂದರೆ ಎದುರಾಗಿತ್ತು. ಈ ವೇಳೆ ಸಂಸ್ಕರಿಸಿದ ನೀರಿಗೆ ಬೆಂಬಲ ವ್ಯಕ್ತವಾಯಿತು.
ನಾನಾ ಬ್ರ್ಯಾಂಡ್ ಬಿಯರ್‌ಗಳು ಮಾರುಕಟ್ಟೆಯಲ್ಲಿದ್ದು, ಇದು ವಿಶೇಷ ಎಂದು ನಮಗೆ ಮನವರಿಕೆಯಾಗುವುದಿಲ್ಲ. ಬಿಯರ್ ಬೇಕೆನಿಸಿದರೆ, ಸಾಮಾನ್ಯ ನೀರಿನಿಂದ ತಯಾರಿಸಿದ ಯಾವುದನ್ನಾದರೂ ಆರಿಸಿಕೊಳ್ಳುತ್ತೇನೆ ಎಂದು ಸಿಂಗಾಪುರದ ವಿದ್ಯಾರ್ಥಿ ಲೋ ಯು ಚೆನ್ ಹೇಳಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಬೆಲೆಯ ಪನ್ನೀರ್ – ಕೆಜಿಗೆ 80 ಸಾವಿರ ರೂಪಾಯಿ
ಮಂಗಳೂರು: ಸಿಂಗಾಪುರ್‌ನಲ್ಲಿ ನಡೆದ ಅಂತರಾಷ್ಟ್ರೀಯ ಐಸ್ ಸ್ಕೇಟಿಂಗ್‍ನಲ್ಲಿ ಮಂಗಳೂರಿನ ಅನಘಾ ಎರಡು ಚಿನ್ನದ ಪದಕ ಗೆದ್ದಿದ್ದಾರೆ.
ಸಿಂಗಾಪುರ್‌ನ ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಸಿಂಗಾಪುರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೌತ್ ಈಸ್ಟ್ ಏಪ್ಯಾನ್ ಓಪನ್ ಶಾರ್ಟ್ ಟ್ರಾಕ್ ಟ್ರೋಪಿ-2020 ಐಸ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಆಯೋಜಿಸಿತ್ತು. ಈ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಅನಘಾ ಎರಡು ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಸಿಂಗಾಪುರದ ಜೆಕ್ಯೂಬ್ ಐಸ್ ರಿಂಕ್‍ನಲ್ಲಿ ಜನವರಿ 4 ಹಾಗೂ 5 ರಂದು ನಡೆದ ಈ ಚಾಂಪಿಯನ್ ಶಿಪ್ ನ ಹುಡುಗಿಯರ ಜ್ಯೂನಿಯರ್ ವಿಭಾಗದ 500 ಮೀಟರ್ ಹಾಗೂ 333 ಮೀಟರ್ ಐಸ್ ಸ್ಕೇಟಿಂಗ್‍ನಲ್ಲಿ ಅನಘಾ ಚಿನ್ನದ ಪದಕ ಪಡೆದಿದ್ದಾರೆ. 14 ದೇಶದ ಸ್ಕೇಟಿಂಗ್ ಪಟುಗಳಿದ್ದ ಈ ಚಾಂಪಿಯನ್‍ಶಿಪ್‍ನಲ್ಲಿ ಅನಘಾ ಎರಡು ಚಿನ್ನದ ಪದಕ ಪಡೆದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್‍ನ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಐಸ್ ಸ್ಕೇಟಿಂಗ್‍ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಅನಘಾ ದೆಹಲಿಯಲ್ಲಿ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.
ಬೆಂಗಳೂರು: ಫಾರಿನ್ ಟ್ರಿಪ್‍ಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಸಿಕ್ಕಾಪಟ್ಟೆ ನಂಟು. ಅದರಲ್ಲೂ ಸಿಂಗಾಪುರ್ ಅಂದ್ರೆ ಹೆಚ್‍ಡಿಕೆಗೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಸಿಂಗಾಪುರ್ ಗೆ ಹೋಗುತ್ತಲೇ ಇರುತ್ತಾರೆ. ಈಗ ಮತ್ತೆ ಕುಮಾರಸ್ವಾಮಿ ಸಿಂಗಾಪುರ್ ಗೆ ತೆರಳಿದ್ದಾರೆ. ಹೊಸ ವರ್ಷ ಸೆಲೆಬ್ರೆಷನ್ ಗಾಗಿ ಕುಮಾರಸ್ವಾಮಿ ಫ್ಯಾಮಿಲಿ ಸಮೇತ ಸಿಂಗಾಪುರ್ ಗೆ ಹಾರಿದ್ದಾರೆ.
ಕಳೆದ ಎರಡು-ಮೂರು ವರ್ಷಗಳಿಂದ ಕುಮಾರಸ್ವಾಮಿ ಹೊಸ ವರ್ಷವನ್ನು ಸಿಂಗಾಪುರ್ ನಲ್ಲಿಯೇ ಆಚರಣೆ ಮಾಡುತ್ತಿದ್ದಾರೆ. ಕಳೆದ ವರ್ಷ ಸಿಎಂ ಆಗಿದ್ದಾಗಲೂ ಅವರು ಸಿಂಗಾಪುರ್ ಗೆ ಹೋಗಿದ್ರು. ಈಗ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸ್ವಲ್ಪ ರಾಜಕೀಯ ಚಟುವಟಿಕೆಯಿಂದ ಹೆಚ್‍ಡಿಕೆ ದೂರ ಉಳಿದಿದ್ದಾರೆ. ಹೀಗಾಗಿ ಸಿಂಗಾಪುರ್ ಹಾರಿದ್ದಾರೆ.
ಪತ್ನಿ ಅನಿತಾ, ಮಗ ನಿಖಲ್, ಕೆಲ ಆಪ್ತ ಜೆಡಿಎಸ್ ನಾಯಕರು ಕೂಡ ಹೆಚ್‍ಡಿಕೆ ಜೊತೆ ತೆರಳಿದ್ದಾರೆ ಅಂತ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬ ಆಚರಣೆಗೆ ಗೋವಾಕ್ಕೆ ಹೋಗಿದ್ರು. ಈಗ ಹೊಸ ವರ್ಷವನ್ನು ಸೆಲೆಬ್ರೇಷನ್ ಮಾಡೋಕೆ ಸಿಂಗಾಪುರ್ ಗೆ ಹೋಗಿದ್ದಾರೆ.
ಬೆಂಗಳೂರು: ಹೊಸವರ್ಷ ಆಚರಣೆ ನಿಮಿತ್ತ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಪತ್ನಿ ಹಾಗೂ ಮಗನೊಂದಿಗೆ ಐದು ದಿನಗಳ ಕಾಲ ಸಿಂಗಾಪುರ ಪ್ರವಾಸ ಕೈಗೊಳ್ಳಲಿದ್ದಾರೆ.
ಹೌದು, ಸಿಎಂ ಕುಮಾರಸ್ವಾಮಿಯವರು ಹೊಸ ವರ್ಷದ ಆಚರಣೆಯನ್ನೂ ಈ ಬಾರಿಯೂ ಸಿಂಗಾಪುರದಲ್ಲಿಯೇ ಆಚರಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಅಲ್ಲಿಯೇ 5 ದಿನಗಳ ವಿಶ್ರಾಂತಿ ಪಡೆದುಕೊಳ್ಳುತ್ತಾರೆಂದು ತಿಳಿದು ಬಂದಿದೆ.
ಕಳೆದ ಕೆಲ ವರ್ಷಗಳಿಂದ ಕುಮಾರಸ್ವಾಮಿ ಕುಟುಂಬ ವಿದೇಶದಲ್ಲಿಯೇ ಹೊಸ ವರ್ಷ ಆಚರಣೆ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯೂ ಹೊಸವರ್ಷಾಚರಣೆಯ ಪ್ರಯುಕ್ತ ಹೆಂಡತಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ರೊಂದಿಗೆ ಕುಟುಂಬ ಸಮೇತ ತೆರಳಲಿದ್ದಾರೆ.
ಇದೇ ಶುಕ್ರವಾರ ಸಿಂಗಾಪುರ್ ಗೆ ಪ್ರವಾಸ ಕೈಗೊಳ್ಳುವ ಅವರು ಐದು ದಿನಗಳವರೆಗೆ ಅಲ್ಲಿಯೇ ಇದ್ದು, ಬಳಿಕ ಜನವರಿ 2 ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜಕೀಯದ ಜಂಜಾಟದಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವ ಜೊತೆಗೆ ಹೊಸ ವರ್ಷವನ್ನು ಆಚರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ವಿದೇಶಕ್ಕೆ ಹಾರಲಿದ್ದಾರೆ.