Tag: ಸಿಂಗದೂರು ಚೌಡೇಶ್ವರಿ ದೇವಾಲಯ

  • ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬಿಎಸ್‍ವೈ ಭೇಟಿ

    ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬಿಎಸ್‍ವೈ ಭೇಟಿ

    ಶಿವಮೊಗ್ಗ: ನವರಾತ್ರಿ ಹಾಗೂ ದಸರಾ ಹಬ್ಬದ ಹಿನ್ನಲೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S. Yediyurappa) ಅವರು ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ  (Sigandur Chowdeshwari Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನಾಡಿನ ಸಮೃದ್ಧಿ ಹಾಗೂ ಸರ್ವಾಂಗೀಣ ಅಭಿವೃದ್ಧಿ ಆಗುವಂತೆ ಚೌಡೇಶ್ವರಿ ದೇವಿಯಲ್ಲಿ ಬಿಎಸ್ ವೈ ಪ್ರಾರ್ಥಿಸಿದರು. ಇದೇ ವೇಳೆ ಸಿಗಂದೂರಿಗೆ ಸಂಪರ್ಕ‌ ಕಲ್ಪಿಸಲು ಶರಾವತಿ ನದಿಗೆ ಕಟ್ಟುತ್ತಿರುವ ಸೇತುವೆ ಕಾಮಗಾರಿ ವೀಕ್ಷಣೆ ನಡೆಸಿದರು. ಇದನ್ನೂ ಓದಿ: ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ – 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗ ಸೂಚನೆ

    ದೇವಿಯ ಆಶೀರ್ವಾದ ಪಡೆದು ಬಳಿಕ ತೆರಳಿದ್ದಾರೆ. ಈ ವೇಳೆ ಸಂಸದ ರಾಘವೇಂದ್ರ ಹಾಗೂ ಸ್ಥಳೀಯ ಮುಖಂಡರು ಬಿಎಸ್‍ವೈಗೆ ಸಾಥ್ ನೀಡಿದ್ದಾರೆ.

    ಈ ಸೇತುವೆ ಕಾಮಗಾರಿ ಶೀಘ್ರವಾಗಿ ಮುಗಿದರೆ ಭಕ್ತರಿಗೆ ದೇವಸ್ಥಾನಕ್ಕೆ ಬಂದು ಹೋಗಲು ಅನುಕೂಲ ಆಗುತ್ತದೆ. ಕಾಮಗಾರಿ ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ತಿಳಿಸಿದರು. ಇದನ್ನೂ ಓದಿ: ನನ್ನ ಬದುಕು ಇರೋದು ನಿಮ್ಮ ಋಣ ತೀರಿಸೋಕೆ, ನಿಮ್ಮ ಮನೆ ಮಗನಿಗೆ ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ: ಹೆಚ್‌ಡಿಕೆ ಭಾವುಕ

  • ವೀಕೆಂಡ್‍ನಲ್ಲಿ ಪ್ರಸಿದ್ಧ ಸಿಗಂದೂರು ದೇವಾಲಯ ಬಂದ್

    ವೀಕೆಂಡ್‍ನಲ್ಲಿ ಪ್ರಸಿದ್ಧ ಸಿಗಂದೂರು ದೇವಾಲಯ ಬಂದ್

    – ಆಗಸ್ಟ್ 13ರವರೆಗೆ ಎಲ್ಲಾ ಸೇವೆಗಳು ಸ್ಥಗಿತ
    – ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ

    ಶಿವಮೊಗ್ಗ: ರಾಜ್ಯದೆಲ್ಲೆಡೆ ಕೋವಿಡ್ ಮೂರನೇ ಅಲೆ ಈಗಾಗಲೇ ವ್ಯಾಪಿಸುತ್ತಿದ್ದು, ಸರ್ಕಾರ ಹಾಗೂ ಆಯಾ ಜಿಲ್ಲಾಡಳಿಗಳು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಮುಂದಾಗಿವೆ. ಅದರಂತೆ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಗಂದೂರು ದೇವಾಲಯ ವಾರಾಂತ್ಯದಲ್ಲಿ ಬಂದ್ ಆಗಲಿದೆ. ಈ ಆದೇಶ ವಾರಾಂತ್ಯದ ದಿನಗಳಲ್ಲಿ ಭೇಟಿ ನೀಡುತ್ತಿದ್ದ ಭಕ್ತರಿಗೆ ನಿರಾಸೆ ಉಂಟು ಮಾಡಿದರೂ, ಇದು ಅನಿವಾರ್ಯವಾಗಿದೆ.

    ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಸೂಚನೆ ನೀಡಿದೆ. ಸಿಗಂದೂರು ಚೌಡೇಶ್ವರಿ ದೇವಿಗೆ ಜಿಲ್ಲೆ, ಹೊರ ಜಿಲ್ಲೆ ಅಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲಿ ಭಕ್ತರು ಇದ್ದಾರೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಅಲ್ಲದೇ ಸಾಮಾನ್ಯ ದಿನಗಳಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಗಿಂತ ವಾರಾಂತ್ಯದ ದಿನಗಳಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆ ದುಪ್ಪಟ್ಟಾಗಿರುತ್ತದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವೀಕೆಂಡ್ ನಲ್ಲಿ ದೇವಾಲಯ ಬಂದ್ ಮಾಡಲು ನಿರ್ಧರಿಸಿದೆ.

    ವೀಕೆಂಡ್ ನಲ್ಲಿ ಬಂದ್ ಆಗಲಿರುವ ಸಿಗಂದೂರು ದೇವಾಲಯದಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದ್ದು, ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ದೇವಿಯ ದರ್ಶನಕ್ಕೆ ಭೇಟಿ ನೀಡುವಾಗ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ರೋಷನ್ ಬೇಗ್ ನಿವಾಸದಲ್ಲಿ ಮುಂದುವರಿದ ಇಡಿ ದಾಳಿ