Tag: ಸಿಂಗಂ ಅಗೇನ್

  • ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ‘ಕ್ರೀವ್’ ಸಕ್ಸಸ್ ನಂತರ ಹೊಸ ಚಿತ್ರವನ್ನು ಕರೀನಾ ಕಪೂರ್ (Kareena Kapoor) ಒಪ್ಪಿಕೊಂಡಿದ್ದಾರೆ. ‌’ಸಿಂಗಂ ಅಗೇನ್’ (Singham Again) ಸಿನಿಮಾದಲ್ಲಿ ನಟಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‌’ಸಿಂಗಂ ಅಗೇನ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದನ್ನೂ ಓದಿ:‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡ ಕಿಯಾರಾ ಅಡ್ವಾಣಿ

    ‌’ಸಿಂಗಂ ಅಗೇನ್’ ಸಿನಿಮಾದ ಟ್ರೈಲರ್ ನೋಡಿದವರಿಗೆ ಕರೀನಾ ಎಂಟ್ರಿ ಅಚ್ಚರಿ ಮೂಡಿಸಿದೆ. ಈ ಚಿತ್ರದಲ್ಲಿ ಇರುವುದು ರಾಮಾಯಣದ ಕಥೆಯಾಗಿದೆ. ಕರೀನಾ ಅವರಿ ಸೀತೆಯ ಪಾತ್ರ ಮಾಡಿದ್ದಾರೆ.

    ಶ್ರೀಲಂಕಾದಲ್ಲಿ ಇರುವ ನಟೋರಿಯಸ್ ವ್ಯಕ್ತಿಯಾಗಿ ಅರ್ಜುನ್ ಕಪೂರ್ ಜೀವ ತುಂಬಿದ್ದಾರೆ. ನಾಯಕಿಯನ್ನು ವಿಲನ್ ಅಪಹರಣ ಮಾಡಿದ ಬಳಿಕ ಆಕೆಯನ್ನು ಮರಳಿ ಕರೆದುಕೊಂಡು ಬರಲು ಲಂಕೆಗೆ ಸಿಂಗಂ ಅಜಯ್ ದೇವಗನ್ ಪ್ರಯಾಣ ಮಾಡುತ್ತಾನೆ. ಅವನಿಗೆ ಲಕ್ಷ್ಮಣ (ಟೈಗರ್ ಶ್ರಾಫ್), ಆಂಜನೇಯ (ರಣವೀರ್ ಸಿಂಗ್), ಜಟಾಯು (ಅಕ್ಷಯ್ ಕುಮಾರ್) ಮುಂತಾದವರು ಸಾಥ್ ನೀಡುತ್ತಾರೆ. ರಾಮಾಯಣದಂತೆಯೇ ಈ ಕಥೆಯನ್ನು ‌’ಸಿಂಗಂ ಅಗೇನ್’ ಸಿನಿಮಾದಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ತೋರಿಸಲಿದ್ದಾರೆ.

    ಸೀತಾ ಮಾತೆಯನ್ನು ರಾವಣ ಅಪಹರಿಸಿಕೊಂಡು ಹೋಗುತ್ತಾನೆ. ಇದನ್ನೇ ಇಟ್ಟುಕೊಂಡು ರೋಹಿತ್ ಶೆಟ್ಟಿ ಅವರು ‘ಸಿಂಗಂ ಅಗೇನ್’ ಚಿತ್ರ ಮಾಡಿದ್ದಾರೆ. ಆದರೆ ಈ ಸಿನಿಮಾವನ್ನು ಆಧುನಿಕವಾಗಿ ಮಾಡಿದ್ದಾರೆ. ಇಲ್ಲಿ ರಾಮನಾಗಿ ಅಜಯ್ ದೇವಗನ್ ನಟಿಸಿದ್ರೆ, ಸೀತೆಯಾಗಿ ಕರೀನಾ ಕಪೂರ್ ಜೀವ ತುಂಬಿದ್ದಾರೆ. ಇನ್ನೂ ದೀಪಿಕಾ ಪಡುಕೋಣೆ ಲೇಡಿ ಸಿಂಗಂ ಆಗಿ ನಟಿಸಿದ್ರೆ, ರಣ್‌ವೀರ್ ಸಿಂಗ್ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ.

  • ‘ಯುನಿಸೆಫ್ ಇಂಡಿಯಾ’ಗೆ ರಾಯಭಾರಿಯಾದ ಕರೀನಾ ಕಪೂರ್

    ‘ಯುನಿಸೆಫ್ ಇಂಡಿಯಾ’ಗೆ ರಾಯಭಾರಿಯಾದ ಕರೀನಾ ಕಪೂರ್

    ಬಾಲಿವುಡ್ ಬೆಡಗಿ ಕರೀನಾ ಕಪೂರ್ (Kareena Kapoor) ಯುನಿಸೆಫ್ ಇಂಡಿಯಾ (UNICEF India) ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 2014ರಿಂದ ಯುನಿಸೆಫ್ ಜೊತೆ ಉತ್ತಮ ನಂಟು ಹೊಂದಿರುವ ಕರೀನಾ ಇದೀಗ ರಾಯಭಾರಿಯಾಗಿ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಗೌರವದ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ತಮಿಳಿನ ನಟ ಕಾರ್ತಿ ಜೊತೆ ಶ್ರೀಲೀಲಾ ಡ್ಯುಯೇಟ್

    ಕರೀನಾ ಪೋಸ್ಟ್‌ನಲ್ಲಿ, ನನಗೆ ಇದು ಭಾವನಾತ್ಮಕ ದಿನ. ನಾನು ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ಗೌರವವಿದೆ. ಕಳೆದ 10 ವರ್ಷಗಳಲ್ಲಿ ಯುನಿಸೆಫ್ ಇಂಡಿಯಾ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ನಾನು ಆ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ದಣಿವರಿಯದೇ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಇದೀಗ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಿಂದ ಕರೀನಾ ಕಪೂರ್ ಹೊರಬಂದಿದ್ದಾರೆ ಎನ್ನಲಾಗಿದೆ. ಡೇಟ್ಸ್ ಸಮಸ್ಯೆಯಿಂದ ಸಿನಿಮಾ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಅವರ ಜಾಗಕ್ಕೆ ನಯನತಾರಾ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ಅಂದಹಾಗೆ, ಕರೀನಾ ಕಪೂರ್ ಕಡೆಯದಾಗಿ ‘ಕ್ರೂ’ (Crew) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಿಂಗಂ ಅಗೇನ್ ಚಿತ್ರದಲ್ಲಿ ಕರೀನಾ ನಟಿಸಲಿದ್ದಾರೆ.

  • ‘ಪುಷ್ಪ 2’ಗೆ ಹೆದರಿ ಸೈಡಿಗೆ ಹೋದ ಬಾಲಿವುಡ್ ಸಿಂಗಂ

    ‘ಪುಷ್ಪ 2’ಗೆ ಹೆದರಿ ಸೈಡಿಗೆ ಹೋದ ಬಾಲಿವುಡ್ ಸಿಂಗಂ

    ಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 (Pushpa 2) ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಅದೇ ರೀತಿಯ ಬಾಲಿವುಡ್ ನ ಹೆಸರಾಂತ ನಟ ಅಜಯ್ ದೇವಗನ್ (Ajay Devgan) ನಟನೆಯ ಸಿಂಗಂ ಅಗೇನ್ ಚಿತ್ರ ಕೂಡ ಅದೇ ದಿನಾಂಕದಂದು ರಿಲೀಸ್ ಆಗಬೇಕಿತ್ತು. ಆದರೆ, ಸಿಂಗಂ (Singam Again) ಸೈಡ್ ಗೆ ಹೋಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಪುಷ್ಪ 2 ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿ ಪಂಡಿತರ ಲೆಕ್ಕಾಚಾರದಂತೆ ಸಾವಿರಾರು ಕೋಟಿ ರೂಪಾಯಿ ವ್ಯಾಪಾರ ಮಾಡುವ ಶಕ್ತಿ ಈ ಚಿತ್ರಕ್ಕಿದೆಯಂತೆ. ಅಲ್ಲದೇ, ದೊಡ್ಡ ಮಟ್ಟದಲ್ಲಿ ಮತ್ತು ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಿಂಗಂ ಅಗೇನ್ ಚಿತ್ರದ ರಿಲೀಸ್ ಅನ್ನು ಮುಂದೂಡಿಕೆ ಮಾಡುವ ಯೋಚನೆ ಮಾಡಲಾಗಿದೆಯಂತೆ.

     

    ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಗಂ ಅಗೇನ್, ಅನೇಕ ಹೆಸರಾಂತ ಕಲಾವಿದರು ಇದ್ದಾರೆ. ಆದರೂ, ರೋಹಿತ್ ಶೆಟ್ಟಿ ತಮ್ಮ ಸಿನಿಮಾವನ್ನು ಪುಷ್ಪ 2 ಎದುರು ರಿಲೀಸ್ ಮಾಡಲು ಮನಸ್ಸು ಮಾಡುತ್ತಿಲ್ಲ ಎನ್ನುವುದು ಬಿಟೌನ್ ಸಮಾಚಾರ.