ಮುಂಬೈ: ಸಿಂಗಂ ತರಹದ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ ಎಂದು ಬಾಂಬೆ ಹೈಕೋರ್ಟ್ (Bombay High Court) ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದೆ.
“ಸಿಂಗಂ” ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ತೋರಿಸಿರುವಂತೆ ಕಾನೂನಿನ ಪ್ರಕ್ರಿಯೆಯ ಬಗ್ಗೆ ತಲೆ ತ್ವರಿತ ಹೀರೋ ಪೊಲೀಸ್ ಪಾತ್ರದಲ್ಲಿ ನ್ಯಾಯವನ್ನು ನೀಡುವ ಸಿನಿಮೀಯ ಚಿತ್ರವು ತುಂಬಾ ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಟರ್ಪಾಲ್ ಶೆಡ್‍ನಲ್ಲಿ ವಾಸಿಸುವ ಒಂಟಿ ಮಹಿಳೆಗೆ ನೋಟಿಸ್

ಇಂಡಿಯನ್ ಪೊಲೀಸ್ ಫೌಂಡೇಶನ್ ತನ್ನ ವಾರ್ಷಿಕ ದಿನ ಮತ್ತು ಪೊಲೀಸ್ ಸುಧಾರಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಪೊಲೀಸ್ ಸುಧಾರಣೆಗಳ ಕುರಿತು ಮಾತನಾಡಿದ ಅವರು, ನಮ್ಮನ್ನು ನಾವು ಸುಧಾರಿಸಿಕೊಳ್ಳದ ಹೊರತು ಕಾನೂನು ಜಾರಿ ಯಂತ್ರವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋಲೀಸರು ಬೆದರಿಸುವವರು, ಭ್ರಷ್ಟರು ಮತ್ತು ಹೊಣೆಗಾರಿಕೆ ಇಲ್ಲದವರು ಎಂಬ ಭಾವನೆ ಜನರಲ್ಲಿ ಮೂಡಿದೆ. ಸಾರ್ವಜನಿಕ ಜೀವನದಲ್ಲಿರುವ ನ್ಯಾಯಾಧೀಶರು, ರಾಜಕಾರಣಿಗಳು ಮತ್ತು ಪತ್ರಕರ್ತರ ಬಗ್ಗೆಯೂ ಇದೇ ಅಭಿಪ್ರಾಯ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ
ಚಲನಚಿತ್ರಗಳಲ್ಲಿ ಪೊಲೀಸರು ದಪ್ಪ ಕನ್ನಡಕ ಹಾಕುತ್ತಾರೆ. ನ್ಯಾಯಾಧೀಶರ ವಿರುದ್ಧವೇ ಪೊಲೀಸರು ಕಾಣಿಸಿಕೊಳ್ಳುತ್ತಾರೆ. ತಪ್ಪಿತಸ್ಥರನ್ನು ಹೋಗಲು ಬಿಡುತ್ತಾರೆ ಅಂತ ನ್ಯಾಯಾಲಯಗಳನ್ನು ಪೊಲೀಸರು ದೂಷಿಸುತ್ತಾರೆ. ಕೊನೆಗೆ ನಾಯಕನ ಪಾತ್ರ ಮಾಡುವ ಪೊಲೀಸ್ ಏಕಾಂಗಿಯಾಗಿ ನ್ಯಾಯ ಒದಗಿಸುತ್ತಾನೆ ಎನ್ನುವ ಸಾರಾಂಶ ಇರುತ್ತದೆ ಎಂದು ಸಿನಿಮಾಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]




ಬಿಟೌನ್‌ನಲ್ಲಿ ಸಾಕಷ್ಟು ಚಿತ್ರಗಳನ್ನ ನಿರ್ದೇಶನ ಮತ್ತು ನಿರ್ಮಾಣ ಮಾಡುವುದರ ಮೂಲಕ ಗಮನ ಸೆಳೆದಿರೋ ರೋಹಿತ್ ಶೆಟ್ಟಿ ಈ ಬಾರಿ ಖಡಕ್ ಪೊಲೀಸ್ ಆಫೀಸರ್ ಕಥೆಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಮುಂಬೈನ ಮಾಜಿ ಕಾಪ್ ರಾಕೇಶ್ ಮಾರಿಯಾ ಜೀವನ ಚರಿತ್ರೆಯನ್ನ ರಿಲಯನ್ಸ್ ಎಂಟರ್‌ಟೈನ್ಮೆಂಟ್‌ನೊಂದಿಗೆ ಈ ಚಿತ್ರ ನಿರ್ಮಾಣ ಮಾಡಲು ಸಾಥ್ ನೀಡಿದ್ದಾರೆ.






















