Tag: ಸಾಹಿಲ್ ಸಂಘಾ

  • ಮುರಿದು ಬಿತ್ತು ದಿಯಾ, ಸಾಹಿಲ್ 11 ವರ್ಷದ ಬಾಂಧವ್ಯ

    ಮುರಿದು ಬಿತ್ತು ದಿಯಾ, ಸಾಹಿಲ್ 11 ವರ್ಷದ ಬಾಂಧವ್ಯ

    ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಮತ್ತು ಸಾಹಿಲ್ ಸಂಘಾ ಅವರ ಐದು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇಬ್ಬರು ಪ್ರತ್ಯೇಕವಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ದಿಯಾ ಮಿರ್ಜಾ ಇನ್‍ಸ್ಟಾಗ್ರಾಂನಲ್ಲಿ ತಾವು ಬೇರೆಯಾಗುತ್ತಿರುವ ಬಗ್ಗೆ ಒಂದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಆ ಪತ್ರದ ಕೊನೆಯಲ್ಲಿ ದಿಯಾ ಮತ್ತು ಸಾಹಿಲ್ ಇಬ್ಬರೂ ಸಹಿ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ:
    ಸುಮಾರು 11 ವರ್ಷಗಳ ಕಾಲ ನಮ್ಮ ಬದುಕನ್ನು ಹಂಚಿಕೊಂಡು ಒಟ್ಟಿಗೆ ಇದ್ದೆವು. ಆದರೆ ಈಗ ಇಬ್ಬರು ಒಪ್ಪಿಗೆ ಮೇರೆಗೆ ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ. ನಾವು ದೂರವಾದರೂ ಸ್ನೇಹಿತರಾಗಿಯೇ ಇರುತ್ತೇವೆ. ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ. ಇದೇ ರೀತಿ ಪರಸ್ಪರ ಪ್ರೀತಿ ಮತ್ತು ಗೌರವದಿಂದ ಇರುತ್ತೇವೆ. ನಮ್ಮಿಬ್ಬರು ಒಟ್ಟಿಗಿದ್ದ ಬಾಂಧವ್ಯಕ್ಕೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

    ನಿರಂತರವಾಗಿ ಪ್ರೀತಿ ತೋರಿಸುತ್ತಿರುವ ಕುಟುಂಬ, ಸ್ನೇಹಿತರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಈ ವಿಷಯದ ಕುರಿತು ನಾವು ಇನ್ಮುಂದೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

    ದಿಯಾ ಮತ್ತು ಸಾಹಿಲ್ ಅವರು 11 ವರ್ಷಗಳ ಹಿಂದೆ ಪರಿಚಯವಾಗಿದ್ದು, ಸುಮಾರು 6 ವರ್ಷಗಳ ಕಾಲ ಇಬ್ಬರು ಡೇಟಿಂಗ್‍ನಲ್ಲಿ ಇದ್ದರು. ನಂತರ ಪರಸ್ಪರ ಇಬ್ಬರು ಪ್ರೀತಿಸಿ 2014ರ ಅಕ್ಟೋಬರ್ 18 ರಂದು ವಿವಾಹವಾಗಿದ್ದರು. ನಟಿ ದಿಯಾ ಮಿರ್ಜಾ ‘ರೆಹನಾ ಹೈ ಟೆರ್ರೆ ದಿಲ್ ಮೇ’, ‘ತೆಹ್ಜೀಬ್’, ‘ಕೊಯಿ ಮೇರೆ ದಿಲ್ ಮೇ ಹೈ’, ‘ಲಗೆ ರಹೋ ಮುನ್ನಾ ಭಾಯ್’ ಮತ್ತು ‘ಫೈಟ್ ಕ್ಲಬ್’ ಸಿನಿಮಾಗಳಲ್ಲಿ ನಟಿಸಿದ್ದು, ಹೆಸರುವಾಸಿಯಾಗಿದ್ದಾರೆ. ‘ಸಂಜು’ ಅವರ ಕೊನೆಯ ಬಾಲಿವುಡ್ ಸಿನಿಮಾವಾಗಿದೆ. ಸಾಹಿಲ್ ಅವರು ಸಿನಿಮಾ ನಿರ್ಮಾಪಕರಾಗಿದ್ದಾರೆ.