Tag: ಸಾವಿರ ಕೋಟಿ

  • ಬಾಕ್ಸ್ ಆಫೀಸ್ ಚಿಂದಿ: 1000 ಕೋಟಿ ಕ್ಲಬ್ ಸೇರಿದ ‘ಪಠಾಣ್’ ಸಿನಿಮಾ

    ಬಾಕ್ಸ್ ಆಫೀಸ್ ಚಿಂದಿ: 1000 ಕೋಟಿ ಕ್ಲಬ್ ಸೇರಿದ ‘ಪಠಾಣ್’ ಸಿನಿಮಾ

    ಶಾರುಖ್ ಖಾನ್ ನಟನೆಯ ಪಠಾಣ್ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆಗಿ 27ನೇ ದಿನಕ್ಕೆ ಸಾವಿರ ಕೋಟಿ (Thousand Crore) ಕ್ಲಬ್ (Club) ಸೇರಿದೆ. ಈ ವರ್ಷದಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಅತೀ ಹೆಚ್ಚು ಹಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪಠಾಣ್ ಸಿನಿಮಾದ ಹಾಡೊಂದು ವಿವಾದಕ್ಕೀಡಾದಾಗ ಈ ಸಿನಿಮಾವನ್ನು ಗೆಲ್ಲಿಸಲೇಬಾರದು ಎಂದು ಹಲವರು ಕರೆ ನೀಡಿದರು. ಪ್ರತಿಭಟನೆಗಳು ನಡೆದವು, ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಯಿತು. ಚಿತ್ರಮಂದಿರಗಳ ಮೇಲೆ ದಾಳಿ ನಡೆದವು. ಸಿನಿಮಾದ ಪೋಸ್ಟರ್ ಹರಿದು ಹಾಕಲಾಯಿತು. ಪೋಸ್ಟರ್ ಸುಡಲಾಯಿತು. ಏನೆಲ್ಲ ಸಂಕಷ್ಟಗಳು ಎದುರಾದರೂ, ಪಠಾಣ್ ಮಾತ್ರ ಗೆಲುವು ಸಾಧಿಸಿದೆ.

    ಪಠಾಣ್ ಒಂದೊಳ್ಳೆ ಸಿನಿಮಾ. ಎಲ್ಲರ ಮೆಚ್ಚುಗೆಗೂ ಅದು ಪಾತ್ರವಾಗಲಿದೆ. ದೇಶಭಕ್ತಿ ಸಾರುವಂತಹ ಕಥೆಯನ್ನು ಇದು ಒಳಗೊಂಡಿದೆ ಎಂದು ಶಾರುಖ್ ಹೇಳಿದರೂ, ವಿರೋಧಿಗಳು ಮಾತ್ರ ಕೇಳಲಿಲ್ಲ. ಕೆಲವು ರಾಜ್ಯಗಳಲ್ಲಿ ಸಿನಿಮಾವನ್ನು ನಿಷೇಧ ಮಾಡುವಂತೆ ಒತ್ತಡ ತರಲಾಯಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಪಠಾಣ್ ಸಿನಿಮಾಗಾಗಿ ಇಡೀ ಬಾಲಿವುಡ್ ಒಂದಾಯಿತು. ಈ ಸಿನಿಮಾವನ್ನು ಗೆಲ್ಲಿಸುವ ಮೂಲಕ ಬಾಲಿವುಡ್ ಗೆಲ್ಲಿಸೋಣ ಎನ್ನುವ ಮಾತು ಕೇಳಿ ಬಂತು. ಹಾಗಾಗಿ ಶಾರುಖ್ ವಿರೋಧಿಗಳು ಕೂಡ ಈ ಸಿನಿಮಾವನ್ನು ಮೆಚ್ಚಿ ಮಾತನಾಡಿದರು. ಮೊದ ಮೊದಲು ತೆಗಳುತ್ತಿದ್ದವರು, ಆ ಮೇಲೆ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದರು. ಇದೆಲ್ಲದರ ಪರಿಣಾಮ ಇದೀಗ ಪಠಾಣ್ ಸಾವಿರ ಕೋಟಿ ಬಾಚಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಹಿಂದಿಯ ಬಿಗ್ ಬಾಸ್ ಶೋ ನಡೆಸುವುದಕ್ಕಾಗಿ ಸಲ್ಮಾನ್ ಖಾನ್ (Salman Khan) ಭಾರೀ ಮೊತ್ತದ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಬಾಲಿವುಡ್ ಅಂಗಳಲ್ಲಿ ಸಖತ್ ಸದ್ದು ಮಾಡಿತ್ತು. ಅದೊಂದು ದೊಡ್ಡ ಮೊತ್ತದ ಸಂಭಾವನೆ ಆಗಿರುವ ಕಾರಣದಿಂದಾಗಿ, ಉಳಿದ ಭಾಷೆಯಲ್ಲಿ ಬಿಗ್ ಬಾಸ್ ನಡೆಸಿಕೊಡುವ ಸಿಲಿಬ್ರಿಟಿಗಳು ಇನ್ನೆಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಸಲ್ಮಾನ್.

    ಬಿಗ್ ಬಾಸ್ (Bigg Boss) ಶೋ ನಡೆಸುವುದಕ್ಕಾಗಿ ಸಲ್ಮಾನ್ ಸಾವಿರ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಅವರಿಗೂ ತಲುಪಿದೆ. ಈ ಸುದ್ದಿ ಓದಿ ಸ್ವತಃ ಸಲ್ಮಾನ್ ಬೆಚ್ಚಿ ಬಿದ್ದಿದ್ದಾರೆ. ಐಟಿ ದಾಳಿ ಮಾಡಿಸಲು ಯಾರಾದರೂ ಹುನ್ನಾರ ನಡೆಸಿದ್ದಾರಾ? ಎಂದು ತಮಾಷೆ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸಲ್ಮಾನ್, ತಾವು ಈವರೆಗೂ ಸಾವಿರ ಕೋಟಿ ದುಡ್ಡನ್ನೇ ನೋಡಿಲ್ಲ. ಇನ್ನು ಸಂಭಾವನೆ ಪಡೆಯುವುದು ದೂರದ ಮಾತು ಅಂದಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಈಗ ಹರಿದಾಡುತ್ತಿರುವ ಸಾವಿರ ಕೋಟಿ ಸಂಭಾವನೆಯಲ್ಲಿ (Salary) ಕಾಲು ಭಾಗದ ಹಣ ಬಂದರೆ ಅದೇ ನನಗೆ ಸಾವಿರ ಕೋಟಿ. ಆದರೆ, ಅದು ಸಾಧ್ಯವಿಲ್ಲವೆ? ನನಗೂ ಸಾವಿರ ಕೋಟಿ ಸಂಭಾವನೆ ಪಡೆಯಬೇಕು ಎನ್ನುವ ಆಸೆಯಿದೆ. ಅಂಥದ್ದೊಂದು ಕಾಲ ಯಾವಾಗ ಕೂಡಿ ಬರುತ್ತದೆಯೋ ಕಾದು ನೋಡಬೇಕು ಎಂದು ಅವರು ಮಾತನಾಡಿದ್ದಾರೆ. ಸಾವಿರ ಕೋಟಿ ಸಂಭಾವನೆಯನ್ನು ಪಡೆಯುತ್ತೇನೆ ಎನ್ನುವುದು ಸುಳ್ಳು ಎಂದೂ ಅವರು ತಿಳಿಸಿದ್ದಾರೆ.

    salman

    ಕಳೆದ ಕೆಲವು ಸೀಸನ್ ಗಳಿಂದಲೂ ಈ ಸಾವಿರ ಕೋಟಿ (Thousand Crores) ಲೆಕ್ಕಾಚಾರದ ಸುದ್ದಿ ಹೈಪ್ ಪಡೆಯುತ್ತಲೇ ಇತ್ತು. ಈವರೆಗೂ ಈ ಕುರಿತಾಗಿ ಸಲ್ಮಾನ್ ಪ್ರತಿಕ್ರಿಯಿಸಿರಲಿಲ್ಲ. ಈ ಬಾರಿ ಆ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ಸತ್ಯವನ್ನೂ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸಾವಿರ ಕೋಟಿ ಸಂಭಾವನೆಯನ್ನು ಪಡೆಯುವ ಆಸೆಯನ್ನೂ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]