ಮಂಗಳೂರು: ದೇಶ ಭಕ್ತಿಗೀತೆಯ ನೃತ್ಯ ಪ್ರದರ್ಶನದ ವೇಳೆ ವೀರ ಸಾವರ್ಕರ್ ಫೋಟೋ ಪ್ರದರ್ಶಿಸಿದ್ದಕ್ಕೆ ಶಾಲಾ ಮುಖ್ಯೋಪಾಧ್ಯಾಯರನ್ನು ಕರೆಸಿ ಬಹಿರಂಗ ಕ್ಷಮಾಪಣೆ ಹೇಳಿಸಿದ ಘಟನೆ ಮಂಗಳೂರು ಹೊರವಲಯದ ಗುರುಪುರದಲ್ಲಿ ನಡೆದಿದೆ.
ಸಾವರ್ಕರ್ ಫೋಟೋ ಹಿಡಿದು ನೃತ್ಯ ಮಾಡಿದ್ದಕ್ಕೆ ಆಡಳಿತರೂಢ ಎಸ್‌ಡಿಪಿಐ ಮತ್ತು ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಶಾಲಾ ಮುಖ್ಯೋಪಾಧ್ಯಾಯರನ್ನು ಪಂಚಾಯತ್ ಸದಸ್ಯರು ಕರೆಸಿ ಬಹಿರಂಗ ಕ್ಷಮಾಪಣೆ ಹೇಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ಅವಮಾನಿಸಿದ್ದಾರೆಂದು ಹಡ್ಸನ್ ಸರ್ಕಲ್ ಮತ್ತು ಕೆಆರ್ ವೃತ್ತದಲ್ಲಿ ಕಾಂಗ್ರೆಸ್ ಫ್ಲೆಕ್ಸ್‌ನಲ್ಲಿದ್ದ ಟಿಪ್ಪು ಫೋಟೋ ಹರಿದು ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಮಾಲ್‍ನಲ್ಲಿ ಸಾವರ್ಕರ್ ಭಾವಚಿತ್ರ ವಿವಾದ ಮತ್ತೊಂದು ತಿರುವು ಪಡೆದುಕೊಂಡಿತ್ತು. ಸಾವರ್ಕರ್ ಭಾವಚಿತ್ರ ಹರಿದಿದ್ದಕ್ಕೆ ಪ್ರತಿಯಾಗಿ ಟಿಪ್ಪು ಭಾವಚಿತ್ರ ವಿರೂಪಗೊಳಿಸಲಾಗಿತ್ತು. ಬೆಂಗಳೂರಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಬ್ಯಾನರ್‌ನಲ್ಲಿ ಹಾಕಲಾಗಿದ್ದ ಟಿಪ್ಪು ಫೋಟೋ ಹರಿದು ರಾಷ್ಟ್ರ ರಕ್ಷಣ ಪಡೆಯ ಕಾರ್ಯಕರ್ತರು ವಿಕೃತಿ ಮೆರೆದಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ
ಶನಿವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿತ್ತು. ರಾಜಧಾನಿ ಬೆಂಗಳೂರಿನಾದ್ಯಂತ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರ ಧ್ವಜಗಳು, ಲೈಟಿಂಗ್ಸ್‌ಗಳು ರಾರಾಜಿಸುತ್ತಿದೆ. ಆಗಸ್ಟ್ 15 ರಂದು ಕೈ ಪಡೆ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದು ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಕಾಂಗ್ರೆಸ್‍ನ ಪ್ರಮುಖ ನಾಯಕರ ಫೋಟೋ ಇರುವ ಫ್ಲೆಕ್ಸ್‌ಗಳನ್ನು ರಸ್ತೆಯುದ್ದಕ್ಕೂ ಹಾಕಿದ್ದಾರೆ. ಇದು ಪುನೀತ್ ಕೆರೆಹಳ್ಳಿ ಕಣ್ಣು ಕೆಂಪಾಗಿಸಿತ್ತು. ಸಾವರ್ಕರ್ ಭಾವಚಿತ್ರ ಹರಿದಿದ್ದಕ್ಕೆ ಪ್ರತಿಯಾಗಿ ಪುನೀತ್ ಕೆರೆಹಳ್ಳಿ ಮತ್ತು ತಂಡ ಟಿಪ್ಪು ಫೋಟೋ ಹರಿದ ವೀಡಿಯೋವೊಂದು ಹರಿದಾಡುತ್ತಿತ್ತು. ಹಾಗಾಗಿ ಬೆಂಗಳೂರು ಪೊಲೀಸರು ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಪುನೀತ್ ಕೆರೆಹಳ್ಳಿ ಮತ್ತು ಆತನ ಸ್ನೇಹಿತರಾದ ಅನಂತ್‍ರಾವ್ ಹಾಗೂ ಕುಮಾರ್ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್‌ನಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ನೆಹರೂ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
ಗದಗ: ಡಿಕೆಶಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸೇರಿದರೆ ಒಳ್ಳೆಯದು ಎಂದು ಹೇಳುವ ಮೂಲಕ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವ ಸಿಸಿ. ಪಾಟೀಲ್ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಲಾಪಾನಿ ಶಿಕ್ಷೆ ಅಂದರೆ ಡಿಕೆಶಿಗೆ ಗೊತ್ತಿದೆಯಾ? ಟಿಪ್ಪು ಸುಲ್ತಾನನ ಕೊಡುಗೆ ಏನಿದೆ? ಟಿಪ್ಪು ಸುಲ್ತಾನ್ ಭಾವಚಿತ್ರ ಹರಿದವರನ್ನು ಬಂದಿಸಬೇಕಾ? ಸಾವರ್ಕರ್ ಭಾವಚಿತ್ರ ತೆರವು ಮಾಡಿದವರನ್ನು ಮೆರವಣಿಗೆ ಮಾಡಬೇಕಾ? ತುಷ್ಟಿಕರಣಕ್ಕೆ ಇತಿಮಿತಿ ಇರಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಕಾನೂನುಗಳು ಕುರಾನ್‌ಗೆ ವಿರುದ್ಧವಾಗಿವೆ – ರಶ್ದಿ ಮೇಲಿನ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದಿಷ್ಟು
ಇಂತವರ ಕೈಗೆ ದೇಶ, ರಾಜ್ಯ ಸಿಕ್ಕರೆ ಏನಾಗುತ್ತದೆ. ಕೇವಲ ಓಟ್ ಬ್ಯಾಂಕ್‍ಗಾಗಿ ಮತ್ತೊಮ್ಮೆ ಶಾಸಕರಾಗಲು ರಾಜ್ಯ, ದೇಶವನ್ನು ಅಡವಿಡುವ ಕೆಲಸ ಮಾಡಬಾರದು. ಸಾವರ್ಕರ್ ಅವರ ಹೋರಾಟದ ಪ್ರತಿಫಲವಾಗಿಯೇ ಇಂದು ಸಾವಿರಾರು ಕೋಟಿ ಒಡೆಯರಾಗಿ ಮೆರೆಯುತ್ತಿದ್ದಾರೆ ಅಂತ ಡಿಕೆಶಿ ವಿರುದ್ದ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ತಿರಂಗಾ ಯಾತ್ರೆಗೆ ಬಂದವರಿಗೆ ಫ್ರೀ ಪೆಟ್ರೋಲ್, ಹೆಲ್ಮೆಟ್ ಆಫರ್ – ಕೊಡದಿದ್ದಕ್ಕೆ ಬೈಕ್ ಸವಾರರ ಗಲಾಟೆ
ಈ ವೇಳೆ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಎಮ್.ಎಸ್ ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೆದ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ರಾಜು ಕುರುಡಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಒಂದಿಲ್ಲೊಂದು ವಿವಾದದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಿರ್ಮಾಪಕರ ಮೇಲೆ ದೂರು, ನಿರ್ದೇಶಕರ ವಿರುದ್ದ ಆಪಾದನೆ ಹೀಗೆ ಒಂದಿಲ್ಲೊಂದು ಕಾರಣಕ್ಕಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಅವರು ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದಾರೆ ಎನ್ನುವ ಕಾರಣಕ್ಕಾಗಿ ವಿವಾದಕ್ಕೆ ಸಿಲುಕಿದ್ದಾರೆ.
ವೀರ ಸಾವರ್ಕರ್ ಬಗ್ಗೆ ಸ್ವರಾ ಭಾಸ್ಕರ್ ಅವಹೇಳನಕಾರಿಯಾಗಿ ಬರೆದಿದ್ದಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಸ್ವರಾ ಮನೆಗೆ ಪತ್ರ ಬರೆದಿದ್ದು, ಜೀವ ತಗೆಯುವುದಾಗಿ ಬೆದರಿಕೆ ಹಾಕಲಾಗಿದೆ. ಹಾಗಾಗಿ ಸ್ವರಾ ಭಾಸ್ಕರ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಕೊಲೆ ಮಾಡುವುದಾಗಿ ಬರೆದ ಪತ್ರದೊಂದಿಗೆ ದೂರನ್ನೂ ಅವರು ದಾಖಲಿಸಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ
ಈ ಹಿಂದೆ ಸಲ್ಮಾನ್ ಖಾನ್ ಗೂ ಕೊಲೆ ಬೆದರಿಕೆ ಪತ್ರ ಬರೆಯಲಾಗಿತ್ತು. ಹಾಗಾಗಿ ಅವರಿಗೆ ಭದ್ರತೆಯನ್ನು ನೀಡಿತ್ತು ಪೊಲೀಸ್ ಇಲಾಖೆ. ತಮಗೂ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡುವಂತೆ ಸ್ವರಾ ಭಾಸ್ಕರ್ ವಿನಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಪತ್ರ ಬರೆದವರು ಯಾರು ಎನ್ನುವುದು ತಮಗೆ ಗೊತ್ತಿಲ್ಲ. ಹಾಗಾಗಿ ಅವರ ಬಗ್ಗೆ ಆತಂಕ ಹೆಚ್ಚಾಗುತ್ತಿದೆ ಎಂದೂ ಅವರು ಹೇಳಿದ್ದಾರಂತೆ. ಬಾಲಿವುಡ್ ನಟ ನಟಿಯರ ಮೇಲೆ ಈ ರೀತಿಯ ಬೆದರಿಕೆ ಕರೆಗಳು ಮತ್ತು ಪತ್ರಗಳು ಹೆಚ್ಚಾಗುತ್ತಿರುವುದರಿಂದ, ಸ್ವತಃ ಪೊಲೀಸ್ ಇಲಾಖೆಗೂ ಇದು ತಲೆನೋವಾಗಿದೆಯಂತೆ.
ನಿನ್ನೆ ಮಧ್ಯಾಹ್ನ ಸಾವರ್ಕರ್ ಫೋಟೋ ವಿಚಾರದಲ್ಲಿ ಪ್ರಾಂಶುಪಾಲರಿಗೆ ದೂರು ನೀಡಿದ್ದ ವಿದ್ಯಾರ್ಥಿಗಳ ಮೇಲೆ ಇತರೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಎಫ್‌ಐ, ಎನ್‌ಎಸ್‌ಯುಐ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಇದರ ಮಧ್ಯೆ ಬಸವಕಲ್ಯಾಣದ ಪೀರ್ ಪಾಶಾ ದರ್ಗಾನೇ ಮೂಲ ಅನುಭವ ಮಂಟಪ. ಇದನ್ನು ಸರ್ಕಾರ ವಶಕ್ಕೆ ಪಡೆದು ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿರುವ ಬಸವಭಕ್ತರು ನಾಳೆ ಹೋರಾಟಕ್ಕೆ ಮುಂದಾಗಿದ್ದಾರೆ. `ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಹೆಸರಿನಲ್ಲಿ ರ‍್ಯಾಲಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಲು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಇಸ್ಲಾಂ ಅನ್ನೋದು ಧರ್ಮವಲ್ಲ, ಕಾಮುಕರ ಗ್ಯಾಂಗ್: ರಾಧಾಕೃಷ್ಣ ಅಡ್ಯಂತಾಯ ವಿವಾದಾತ್ಮಕ ಹೇಳಿಕೆ
ತಿರುವನಂತಪುರಂ: ಪರಮೆಕ್ಕಾವು ದೇವಸ್ವಂನಲ್ಲಿ ಮುಂಬರುವ ತ್ರಿಶೂರ್ ಪೂರಂ ಹಬ್ಬದಲ್ಲಿ ಉಪಯೋಗಿಸುವ ಛತ್ರಿಯಲ್ಲಿ ಹಿಂದೂತ್ವದ ಐಕಾನ್ ಆಗಿರುವ ವೀರ ಸಾವರ್ಕರ್ ಅವರ ಚಿತ್ರವನ್ನು ಹಾಕಲು ದೇವಾಲಯದ ಆಡಳಿತ ವರ್ಗ ನಿರ್ಧರಿಸಿತ್ತು. ಆದರೆ ಇದೀಗ ಇದು ವಿವಾದಕ್ಕೆ ಒಳಗಾಗಿದೆ.
ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಕೇರಳದ ಇತರ ಪ್ರಮುಖ ನಾಯಕರು ಸೇರಿದಂತೆ ವಿವಿಧ ನವೋದಯ ಮತ್ತು ಸ್ವಾತಂತ್ರ್ಯ ಚಳವಳಿಯ ನಾಯಕರನ್ನು ಒಳಗೊಂಡ ಛತ್ರಿಗಳಲ್ಲಿ ಸಾವರ್ಕರ್ ಅವರ ಚಿತ್ರವನ್ನೂ ಹೊಂದಿದ್ದವು. ಈ ನಿರ್ಧಾರಕ್ಕೆ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ದೇವಾಲಯದ ಅಧಿಕಾರಿಗಳು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಈ ಬಗ್ಗೆ ದೇವಸ್ವಂ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅಥವಾ ದೇಗುಲಕ್ಕೆ ಧಕ್ಕೆಯಾಗುವ ಅಥವಾ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ. ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿರುವ ತ್ರಿಶೂರ್ ಪೂರಂ ಅನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ತ್ರಿಶೂರ್ ಪೂರಂ ರಾಜಕೀಯಕ್ಕಿಂತ ಮೇಲಿದೆ ಎಂದರು.
ಮಂಡಳಿಯು ಛತ್ರಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ದೇವಾಲಯದ ಅಧಿಕಾರಿಗಳು ತ್ರಿಶೂರ್ ಪೂರಂ ಬಗ್ಗೆ ಯಾವುದೇ ವಿವಾದಗಳನ್ನು ಬಯಸುವುದಿಲ್ಲ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ನಾಯಕಿ ಪದ್ಮಜಾ ವೇಣುಗೋಪಾಲ್ ಮಾತನಾಡಿ, ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್‍ರಂತಹ ಇತರ ಪ್ರಮುಖ ನಾಯಕರೊಂದಿಗೆ ಸಾವರ್ಕರ್ ಅವರ ಚಿತ್ರವನ್ನು ಸೇರಿಸುವ ಮೂಲಕ ಸಂಘ ಪರಿವಾರದ ಅಜೆಂಡಾವನ್ನು ತ್ರಿಶೂರ್ ಪೂರಂನಲ್ಲಿ ಬಲವಂತವಾಗಿ ಹಾಕಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ದೇವಸ್ಥಾನದ ಮೈಕ್‍ನಲ್ಲಿ ಮೊಳಗಿದ ರಾಮಜಪ, ಶಿವನಜಪ
ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಸಾವರ್ಕರ್ ಅವರನ್ನು ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ನವೋದಯ ನಾಯಕರಾದ ಮನ್ನತ್ ಪದ್ಮನಾಭನ್, ಚಟ್ಟಂಬಿ ಸ್ವಾಮಿಕಲ್ ಅವರ ಜೊತೆಗೆ ಸೇರಿಸಿಕೊಳ್ಳಲು ಕೇರಳ ಸರ್ಕಾರ ಅನುಮತಿ ನೀಡಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ. ಎಡ ಸರ್ಕಾರ ಆಡಳಿತವಿರುವ ರಾಜ್ಯದಲ್ಲಿ ಪರಿವಾರದ ಅಜೆಂಡಾವನ್ನು ಜಾರಿಗೊಳಿಸಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತರು ಪೊಲೀಸರ ವಶಕ್ಕೆ
ಚಿಕ್ಕಮಗಳೂರು: ಇವತ್ತು ಹಿಜಬ್ ಅಂತಾರೆ, ನಾಳೆ ಸಂವಿಧಾನವೇ ಬೇಡ ಷರಿಯಾತ್ತೇ ಬೇಕು ಅಂತಾರೆ ಅಂತಹ ಮಾನಸಿಕತೆಗೆ ಕಾಂಗ್ರೆಸ್ ಗೊಬ್ಬರ-ನೀರು ಹಾಕುವುದನ್ನು ಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಎಐಟಿ ವೃತ್ತದ ಬಳಿ ಮಾತನಾಡಿದ ಅವರು, ಖಿಲಾಫತ್ ಚಳವಳಿಗೆ ಗೊಬ್ಬರ-ನೀರು ಹಾಕಿ ದೇಶ ವಿಭಜನೆ ಆಯ್ತು. ಈಗ ಹಿಜಬ್‍ಗೆ ಗೊಬ್ಬರ ನೀರು ಹಾಕುವುದನ್ನು ಕಾಂಗ್ರೆಸ್ ಬಿಡಬೇಕು. ರಾಜ್ಯದಲ್ಲಿ ಶೇ.99ರಷ್ಟು ಜನ ನ್ಯಾಯಾಲಯದ ಆದೇಶ ಪಾಲನೆ ಮಾಡಿ ಸಮವಸ್ತ್ರ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ. ಶೇ.1ರಷ್ಟು ಜನ ಈ ವಿಷಯವನ್ನು ಜೀವಂತವಾಗಿಡಲು ಬಯಸಿದ್ದಾರೆ. ಅವರ ನಾಟಕ ಕ್ಯಾಮೆರಾ ಅವರ ಕಡೆ ತಿರುಗಲಿ ಎಂದಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಬುಲ್ಡೋಜರ್ ಕಾನೂನು ಜಾರಿ ಬಗ್ಗೆ ಸಿಎಂ ಜೊತೆ ಚರ್ಚೆ: ಆರ್.ಅಶೋಕ್
ಪರೀಕ್ಷೆ ಬರೆಯದೇ ವಾಪಸ್ ಹೋದವರನ್ನು ಕೆಲವರು ಹೀರೋ, ಹೀರೋಯಿನ್ ರೀತಿ ಬಿಂಬಿಸುತ್ತಿದ್ದಾರೆ. ನಿಮಗೆ ಹಿಜಬ್ ದೊಡ್ಡದೋ, ಪರೀಕ್ಷೆ ದೊಡ್ಡದೋ ಎಂದು ಪ್ರಶ್ನಿಸಿದರು. ಹಿಜಬ್ ದೊಡ್ಡದು ಎನ್ನುವವರು ಕ್ಯಾಮೆರಾ ಮುಂದೆ ನಾಟಕ ಆಡ್ತಿದ್ದಾರೆ. ಶೇ.99 ರಷ್ಟು ಜನ ಸರ್ಕಾರದ ನಿಲುವು, ಕೋರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ ಅವರಿಗೆ ಸ್ವಾಗತ. 1983 ರಿಂದ ಇಲ್ಲದ ಚಳವಳಿ ಈಗ ಏಕೆ ಶುರುವಾಗುತ್ತದೆ? ಹುಬ್ಬಳ್ಳಿ ಗಲಾಟೆ ಅಚಾನಕ್ಕಾಗಿ ಆಗಿರುವ ಸಂಗತಿಯಲ್ಲ. ಡಿ.ಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ. ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಅವರು ಜಿನ್ನಾ ಮಾನಸಿಕತೆಯಲ್ಲಿ ಇರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ಇದನ್ನೂ ಓದಿ: PSI ನೇಮಕಾತಿಯ ಯಾವುದೇ ಬ್ಯಾಚ್‌ನಲ್ಲಿ ಅಕ್ರಮ ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ
ಜಿನ್ನಾ ಮಾನಸಿಕತೆಯನ್ನು ಗಾಂಧಿ ಮಾನಸಿಕತೆಯಲ್ಲಿ ಎದುರಿಸಲು ಆಗಲ್ಲ. ಗಾಂಧಿ ಮಾನಸಿಕತೆಯಲ್ಲಿ ಎದುರಿಸಿದಾಗ ದೇಶ ವಿಭಜನೆಯ ಬೆಲೆ ತೆರಬೇಕಾಯಿತು. 46 ಲಕ್ಷ ಜನರ ಮಾರಣಹೋಮ ನಡೆಯಿತು. ಅದ್ದರಿಂದ ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು. ಆಗ ಮಾತ್ರ ದೇಶ ಉಳಿಸಿಕೊಳ್ಳಲು ಸಾಧ್ಯ. ಇದೇ ವೇಳೆ, ಪಿಎಸ್‍ಐ ಅಕ್ರಮದಲ್ಲಿ ಕಾಂಗ್ರೆಸ್ ಆಥವಾ ಬಿಜೆಪಿ ಯಾರೇ ಇದ್ದರೂ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ಕಂಡು ಬಂದ ಕೂಡಲೇ ಸಿಎಂ ಹಾಗೂ ಗೃಹ ಸಚಿವರಿಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗುತ್ತದೆ. ತನಿಖೆಯನ್ನು ಸಿಐಡಿಗೆ ವಹಿಸಿದ್ದು ಎಷ್ಟೇ ಪ್ರಭಾವಿಗಳಿದ್ರು ಕಠಿಣ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾರ್ನಿಂಗ್ ನೀಡಿದ್ದಾರೆ.
ಸತೀಶ್ ರೆಡ್ಡಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇನ್ನೂ ಕೃತ್ಯದ ಹಿಂದೆ ಬೇರೆ ಯಾವುದಾದರೂ ಷಡ್ಯಂತ್ರ ಇರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಸತೀಶ್ ರೆಡ್ಡಿಗೆ ಮತ್ತಷ್ಟು ಭದ್ರತೆವಹಿಸಿ ಎಚ್ಚರಿಕೆಯಿಂದ ಇರಲು ಪೊಲೀಸರು ಸೂಚನೆ ನೀಡಿದ್ದಾರೆ. ಹಾಗಾಗಿ ಮನೆಯ ಆವರಣದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ಅಪರಿಚಿತರು ಭೇಟಿಗೆ ಮನೆಯ ಬಳಿ ಬರುವುದನ್ನು ನಿಷೇಧ ಹೇರಲಾಗಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!
ಇಂದು ಸತೀಶ್ ರೆಡ್ಡಿ ಮನೆಗೆ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಧೈರ್ಯ ಹೇಳಿದ್ದು, ಈ ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಸಹ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಮಂಗಳೂರಿನ ಕಬಕ ಗ್ರಾಮಪಂಚಾಯತ್ ನಲ್ಲಿ ಸ್ವಾತಂತ್ರೋತ್ಸವದ ರಥದಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಎಸ್‍ಡಿಪಿಐ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿ, ಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಒತ್ತಡ ಹೇರಲು ಅವರು ಯಾರು ಎಂದು ಪ್ರಶ್ನಿಸಿದ್ದು, ಈ ಘಟನೆ ಖಂಡನಾರ್ಹವಾಗಿದ್ದು ಈಗಾಗಲೇ ಎಸ್‍ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಉಡುಪಿ: ವೀರ ಸಾವರ್ಕರ್‌ಗೆ ಕಾಂಗ್ರೆಸ್ ಯಾವತ್ತೂ ಗೌರವ ಕೊಟ್ಟಿಲ್ಲ. ಕಾಂಗ್ರೆಸ್‍ನ ಮರಿಮೊಮ್ಮಕ್ಕಳು ಕೂಡ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಂಡಮಾನ್ ನಿಕೋಬಾರ್‌ನಲ್ಲಿರುವ ಸಾವರ್ಕರ್ ಹೆಸರನ್ನು ತೆಗೆದು ಹಾಕಲು ಕಾಂಗ್ರೆಸ್ ನಿರ್ಧರಿಸಿತ್ತು. ಮಣಿಶಂಕರ್ ಅಯ್ಯರ್ ಈ ಕೃತ್ಯಕ್ಕೆ ಮುಂದಾಗಿದ್ದರು. ಹೋರಾಟದಲ್ಲಿ ನೂರಾರು ದಿನಗಳ ಕಾಲ ಜೈಲಿನಲ್ಲಿದ್ದ ವ್ಯಕ್ತಿ ಸಾವರ್ಕರ್. ಸಾವರ್ಕರ್‌ಗೆ ಕಾಂಗ್ರೆಸ್ ಯಾವತ್ತೂ ಗೌರವ ಕೊಟ್ಟಿಲ್ಲ. ಕಾಂಗ್ರೆಸ್‍ನ ಮರಿಮೊಮ್ಮಕ್ಕಳು ಕೂಡ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಸ್ವಾತಂತ್ರ ಹೋರಾಟಗಾರರಿಗೆ ಇವರು ಗೌರವ ಕೊಡಲ್ಲ. ದೇಶ ಮೊದಲು ಎಂಬ ಕಲ್ಪನೆಯನ್ನು ಇವರಿಂದ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿ
ಸಿಟಿ ರವಿ, ಪ್ರಿಯಾಂಕ್ ಖರ್ಗೆ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಟೀಕೆಗಳು ಎಲ್ಲೆಯನ್ನು ಮೀರಬಾರದು. ಟೀಕಿಸುವಾಗ ಬಳಸುವ ಶಬ್ದ ಪ್ರಯೋಗಗಳನ್ನು ಜನ ಗಮನಿಸುತ್ತಾರೆ. ಮಾತಿನಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಾಜಪೇಯಿ ವ್ಯಕ್ತಿತ್ವ ಯಾವ ರೀತಿಯದ್ದು ಎಲ್ಲರಿಗೂ ಗೊತ್ತಿದೆ. ಅಜಾತಶತ್ರು ಎಂದು ಅವರೇ ಅವರನ್ನು ಕರೆಸಿಕೊಂಡದ್ದಲ್ಲ. ಜನ ಅವರನ್ನು ಅಜಾತ ಶತ್ರು ಎಂದು ಕರೆಯುತ್ತಿದ್ದರು. ವಾಜಪೇಯಿ ಬಗ್ಗೆ ಮಾತನಾಡಿದರೆ ಅವರ ವ್ಯಕ್ತಿತ್ವ ತೋರಿಸುತ್ತದೆ. ವಾಜಪೇಯಿಗೆ ಇದರಿಂದ ಯಾವುದೇ ನಷ್ಟವಿಲ್ಲ. ಟೀಕಿಸುವ ಪ್ರತಿಯೊಬ್ಬರಿಗೂ ಈ ಮಾತು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ
ಗದಗ: ಬೆಂಗಳೂರಿನ ಯಲಹಂಕ ಫ್ಲೈಓವರ್‌ಗೆ ವೀರ ಸಾವರ್ಕರ್ ಅವರ ಹೆಸರಿಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಚಿವ ಸಿ.ಸಿ.ಪಾಟೀಲ್ ಸಿಡಿಮಿಡಿಗೊಂಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಸಚಿವರು, ಫ್ಲೈಓವರಿಗೆ ವೀರ ಸಾವರ್ಕರ್ ಹೆಸರಿಡದೇ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್‍ನವರು ಮೊದಲು ತಿಳಿಯಲಿ. ಸಾವರ್ಕರ್ ಅವರ ಬಗ್ಗೆ ಮಾತಾಡುವಂತ ಯೋಗ್ಯತೆ ಯಾವೋಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲಾ ಎಂದು ವಾಗ್ದಾಳಿ ನಡೆಸಿದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್, ಇಂದಿರಾ ಗಾಂಧಿ ರೋಡ್, ಆಯೋಜನೆ ಈ ಯೋಜನೆ ಅಂತೆಲ್ಲಾ ಇದೆ. ಎಲ್ಲಾದರೂ ನರೇಂದ್ರ ಮೋದಿ ರೋಡ್, ಬಿ.ಎಸ್.ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಇವರೇ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ? ಕಾಂಗ್ರೆಸ್ಸಿಗರು ಹೇಳೋದು ಆಚಾರ ತಿನ್ನೋದು ಬದನೆಕಾಯಿ ಎಂದು ಗುಡುಗಿದರು.
ಬಿಜೆಪಿ ಪಕ್ಷದಲ್ಲಿ ಎದ್ದಿರುವ ಬಂಡಾಯದ ವಿಚಾರವಾಗಿ ಮಾತನಾಡಿದ ಸಚಿವರು, ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಬಾಧಿತ, ಸುಭದ್ರವಿದೆ. ಹಲವಾರು ಹಿರಿಯ ಶಾಸಕರು ನಮ್ಮಲ್ಲಿ ಭಿನ್ನಮತ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ನಾಯಕರು ಸಹ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದಾರೆ. ನಮ್ಮ ಬಗ್ಗೆ ಯಾರು ಏನೂ ಚಿಂತೆ ಮಾಡುವ ಅಗತ್ಯವಿಲ್ಲ, ಸರ್ಕಾರ ಸುಭದ್ರವಾಗಿರುತ್ತದೆ. ಮುಂದಿನ ಅವಧಿಗೆ ಪಕ್ಷವನ್ನು ಬಿಎಸ್‍ವೈ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.
ಕಪ್ಪತ್ತಗುಡ್ಡದಲ್ಲಿ ಸರ್ಕಾರ ಮೈನಿಂಗ್ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಆರೋಪಕ್ಕೆ ಸಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಕಪ್ಪತ್ತಗುಡ್ಡ ರಕ್ಷಣೆ ಸರ್ಕಾರದ ಹೊಣೆ. ನಾನು ಮೂಲತಃ ಬೆಳಗಾವಿ ಜಿಲ್ಲೆಯವನು. ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸತೀಶ್ ಜಾರಕಿಹೊಳಿ ಆಧಾರ ರಹಿತ ಆರೋಪ ಮಾಡಿದರೆ ಅವರ ಮೇಲೆ ಬ್ಲಾಕ್ ಆಂಡ್ ವೈಟ್ ಅಲಿಗೇಷನ್ ಸಾಕಷ್ಟಿವೆ. ಸಮಯ ಸಂದರ್ಭ ಬಂದಾಗ ಮುಂದಿನ ದಿನಗಳಲ್ಲಿ ಎಲ್ಲಾ ಪುಟಗಳನ್ನ ತೆರೆದಿಡುತ್ತೇನೆ ಎಂದು ಟಾಂಗ್ ಕೊಟ್ಟರು.
ಮುಂಬೈ-ಗದಗ ಎಕ್ಸ್‍ಪ್ರೆಸ್ ರೈಲು ಬರಲಿದೆ. ರಾಜ್ಯದ ಜನ ಮುಂಬೈ ನಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು ಮುಂಬೈ ಕನ್ನಡಿಗರನ್ನ ಅನಿವಾರ್ಯವಾಗಿ ಕರೆಸಿಕೊಳ್ಳಬೇಕಿದೆ. ಎಷ್ಟು ಜನ ಮುಂಬೈನಿಂದ ಬರುತ್ತಾರೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ನಂತರ 7 ದಿನ ಸರ್ಕಾರದ ನಿಯಮಗಳ ಪ್ರಕಾರ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.
ಮುಂಬೈನಿಂದ ಗದಗ ಜಿಲ್ಲೆಗೆ ನಿರೀಕ್ಷೆ ಮೀರಿ ಜನ ಬಂದರೂ ಕ್ವಾರಂಟೈನ್ ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲ ಆಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್ ಸಾಲದಿದ್ದರೆ, ಕೊರತೆ ಕಂಡುಬಂದರೆ ಮುಂದೆ ತಾಲೂಕ ಕೇಂದ್ರಗಳಿಗೂ ಕಳಿಸುತ್ತೆವೆ ಎಂದು ತಿಳಿಸಿದರು.