Tag: ಸಾವರ್ಕರ್

  • ಸಿದ್ದರಾಮಯ್ಯ ಎಷ್ಟೇ ತುಷ್ಟೀಕರಣದ ರಾಜಕಾರಣ ಮಾಡಲಿ ಮೊಟ್ಟೆ ಎಸೆಯಬೇಡಿ – ಪ್ರಹ್ಲಾದ್‌ ಜೋಶಿ‌

    ಸಿದ್ದರಾಮಯ್ಯ ಎಷ್ಟೇ ತುಷ್ಟೀಕರಣದ ರಾಜಕಾರಣ ಮಾಡಲಿ ಮೊಟ್ಟೆ ಎಸೆಯಬೇಡಿ – ಪ್ರಹ್ಲಾದ್‌ ಜೋಶಿ‌

    ಹುಬ್ಬಳ್ಳಿ: ಸಾವರ್ಕರ್ ಭಾವಚಿತ್ರ ಮುಸ್ಲಿಂ ಏರಿಯಾದಲ್ಲಿ ಏಕೆ ಹಾಕಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಖಂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದೂ ಕೂಡ ಸರಿಯಲ್ಲ ಎಂದರು

    ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು. ಸಿದ್ದರಾಮಯ್ಯ ವಿಪಕ್ಷ ನಾಯಕರು. ಅವರು ಏಲ್ಲಿ ಬೇಕಾದ್ರು ಹೋಗಬಹುದು. ಅವರ ಮೇಲೆ ಮೊಟ್ಟೆ ಎಸೆಯುವಂತದ್ದು ಸರಿಯಲ್ಲ. ಸಿದ್ದರಾಮಯ್ಯ ಅಷ್ಟೇ ಅಲ್ಲ ಯಾವ ಪಕ್ಷದ ನಾಯಕರಿಗೂ ಹೀಗೆ ಮಾಡಬಾರದು ಎಂದು ಜೋಶಿ ಹೇಳಿದ್ದಾರೆ.

    ಸಾವರ್ಕರ್ ಭಾವಚಿತ್ರ ಕುರಿತಂತೆ ಸಿದ್ದರಮಯ್ಯ ಅವರ ಮುಸ್ಲಿಂ ಏರಿಯಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಜೋಶಿ, ಸಾವರ್ಕರ್ ಬಗ್ಗೆ ಹೀಗೆ ಮಾತನಾಡುತ್ತಿರುವ ಇವರು ನಕಲಿ ಕಾಂಗ್ರೆಸಿಗರು ಎಂದಿದ್ದಾರೆ.

    “ಸಾವರ್ಕರ್ ಗುರುತಿಸಲ್ಪಡುವ ಭಾರತದ ಸುಪುತ್ರ” ಎಂದು ಸ್ವತಃ ಇಂಧಿರಾ ಗಾಂಧಿ ಅವರು ಹೇಳಿದ್ದರು. ಗಾಂಧಿಜೀ ಸೇರಿದಂತೆ ಅಂದಿನ ಕಾಂಗ್ರೆಸ್ ನಾಯಕರು ಸಾವರ್ಕರ್ ಬಿಡುಗಡೆಗೆ ಬ್ರಿಟೀಷ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಅವರೆಲ್ಲ ಒರಿಜಿನಲ್ ಕಾಂಗ್ರೆಸಿಗರು.‌ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಾವರ್ಕರ್ ಅವರ ಹೋರಾಟ, ವ್ಯಕ್ತಿತ್ವಕ್ಕೆ ಗೌರವ ಕೊಡುತ್ತಿದ್ದರು. ಈಗಿರುವವರು ನಕಲಿ ಕಾಂಗ್ರೆಸಿಗರು. ಇವರು ಸಾವರ್ಕರ್ ವಿರುದ್ಧ ಮಾತನಾಡುತ್ತಿದ್ದಾರೆ. ಇವರು ಒರಿಜಿನಲ್ ಕಾಂಗ್ರೆಸಿಗರಲ್ಲ ಎಂದು ಜೋಶಿ ಟೀಕಿಸಿದ್ದಾರೆ.

    ತುಷ್ಠಿಕರಣ ರಾಜಕಾರಣದ ಭಾಗವಾಗಿ ಸಿದ್ದರಾಮಯ್ಯ ಅವರು ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ. ಮುಸ್ಲಿಂ ಒಲೈಕೆಗ ರಾಜಕಾರಣದಲ್ಲಿ ನಿರತರಾಗಿದ್ಧಾರೆ.‌ ಸಿದ್ದರಾಮಯ್ಯ ಅವರು ಕಾಂಗ್ರೆಸಿಗರಲ್ಲ. ಹೀಗಾಗಿ ಅವರ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದರು.

    ಅವರು ಯಾರನ್ನಾದ್ರು ಒಲೈಸಿಕೊಳ್ಳಲಿ. ಆದರೆ, ಸಾವರ್ಕರ್ ಬಗ್ಗೆ ಮಾತಾಡುವುದು ಸರಿಯಲ್ಲ. ಅವರೊಬ್ಬ “ರಿಮಾರ್ಕಬಲ್ ಸನ್ ಆಫ್ ಇಂಡಿಯಾ” ಅಂತಾ ಇಂದಿರಾ ಗಾಂಧಿ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇದನ್ನ ತಿಳಿದುಕೊಳ್ಳಲಿ ಎಂದು ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ ಹೋರಾಟಗಾರರಲ್ಲ, ಸಾವರ್ಕರ್‌ ಒಬ್ಬ ಮೂಲಭೂತವಾದಿ: ಯತೀಂದ್ರ ಸಿದ್ದರಾಮಯ್ಯ

    ಸ್ವಾತಂತ್ರ ಹೋರಾಟಗಾರರಲ್ಲ, ಸಾವರ್ಕರ್‌ ಒಬ್ಬ ಮೂಲಭೂತವಾದಿ: ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ಸಾವರ್ಕರ್ ಏನು ಸ್ವಾತಂತ್ರ ಹೋರಾಟಗಾರರಲ್ಲ. ಸಾವರ್ಕರ್‌ ಮೂಲಭೂತವಾದಿ ಎಂದು ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

    ಟಿ.ನರಸೀಪುರದಲ್ಲಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಎರಡನೇ ದರ್ಜೆಯ ಪ್ರಜೆಗಳಾಗಿ ಇರಬೇಕು. ಹಿಂದೂ ರಾಷ್ಟ್ರವನ್ನು, ಹಿಂದೂ ಅಧಿಕಾರ ಒಪ್ಪಿಕೊಂಡು ಎರಡನೇ ದರ್ಜೆ ನಾಗರೀಕರಾಗಿ ಇರಬೇಕೆಂದು ಹೇಳಿದ ಸಾವರ್ಕರ್ ಅನ್ಯಮತ ದ್ವೇಷಿ ಎಂದಿದ್ದಾರೆ.

    ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಮರನ್ನು ಸಾವರ್ಕರ್ ಯಾವತ್ತಿಗೂ ಭಾರತೀಯರು ಎಂದು ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಸಹಜವಾಗಿ ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾಗಳಲ್ಲಿ ಇದ್ದಾಗ ಕೋಪ ಬರುತ್ತದೆ. ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದಾಗ ಕೋಪ ಬರುವುದಿಲ್ಲವೇ? ಹಾಗಾಗಿ ಮುಸ್ಲಿಂ ಏರಿಯಾಗಳಲ್ಲಿ ಸಾವರ್ಕರ್ ಫೋಟೋ ಹಾಕಿದಾಗ ಪ್ರಚೋದನಕಾರಿಯಾಗುತ್ತದೆ. ಇಂತಹ ಘಟನೆಗಳನ್ನು ತಡೆಗಟ್ಟುವುದನ್ನು ಬಿಟ್ಟು ಅನಗತ್ಯ ವಿಚಾರವನ್ನ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಹೇಳಉವ ಮೂಲಕ ತಂದೆಯ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮು ದ್ವೇಷ ಹೆಚ್ಚಾಗಿ ಹರಡುತ್ತಿದೆ. ಒಬ್ಬರೊನ್ನಬ್ಬರು ಸಾಯಿಸುವುದು ಕೊಲೆ ಮಾಡುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಬದಲು ಮುಖ್ಯಮಂತ್ರಿಗಳೇ ಸ್ವತಃ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯ ವೈಫಲ್ಯತೆಯನ್ನ ಮುಚ್ಚಿ ಹಾಕಲು ಅನಗತ್ಯ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ- ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

    ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ- ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

    ಉಡುಪಿ: ರಾಜ್ಯದ ಬಹುಚರ್ಚಿತ ವಿಷಯವಾಗಿರುವ ಸಾವರ್ಕರ್ ಭಾವಚಿತ್ರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಕಳೆದ ಮೂರು ದಿನಗಳಿಂದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ನಗರಸಭೆಗೆ ಪತ್ರ ಕಳುಹಿಸಿದೆ.

    ಹಿಂದೂ ಮಹಾಸಭಾದ ಮುಖಂಡ ಪ್ರಮೋದ್ ಉಚ್ಚಿಲ ಮತ್ತು ಇಬ್ಬರು ಗೆಳೆಯರು ಉಡುಪಿ ಬ್ರಹ್ಮಗಿರಿ ಸರ್ಕಲ್‍ನಲ್ಲಿ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಸಂದರ್ಭ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಒಳಗೊಂಡ ಕಟೌಟ್ ಹಾಕಿದ್ದರು. ಈ ಕಟೌಟ್ ಸಮಾಜದ ಶಾಂತಿಯನ್ನ ಕೆಡಿಸುತ್ತದೆ ಎಂದು ಪಿಎಫ್‍ಐ ಮತ್ತು ಎಸ್ಡಿಪಿಐ ಉಡುಪಿ ನಗರ ಠಾಣೆಗೆ ದೂರು ನೀಡಿತ್ತು. ಕಾಂಗ್ರೆಸ್‍ನ ಕೆಲ ಜಿಲ್ಲಾ ನಾಯಕರು ಈ ಕಟೌಟ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

    ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದರು. ಯುವಮೋರ್ಚಾದ ಕೆಲ ಕಾರ್ಯಕರ್ತರು ಬೆಳವಣಿಗೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ಮಾಡಿದ್ದರು. ಈ ನಡುವೆ ಯಶ್ ಪಾಲ್ ಸುವರ್ಣ ನಗರಸಭೆಗೆ ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪ್ರತಿಮೆ ರಚಿಸಲು ಅನುಮತಿ ಕೋರಿ ಅರ್ಜಿ ಪತ್ರವನ್ನು ಬರೆದಿದ್ದಾರೆ.

    ಪತ್ರದಲ್ಲೇನಿದೆ..?: ಉಡುಪಿ ನಗರಸಭೆಯ ಅಜ್ಜರಕಾಡು ವ್ಯಾಪ್ತಿಯಲ್ಲಿ ಬ್ರಹ್ಮಗಿರಿ ವೃತ್ತದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪುತ್ಥಳಿ ನಿರ್ಮಿಸಿ ಸಾವರ್ಕರವರ ಪುತ್ತಳಿ ನಿರ್ಮಿಸಿ ವೀರಸಾವರ್ಕರ್ ಅವರಿಗೆ ಸಮಸ್ತ ದೇಶಪ್ರೇಮಿಗಳ ಪರವಾಗಿ ಗೌರವ ಸಲ್ಲಿಸಲು ನಿರ್ಧರಿಸಿದ್ದೇವೆ. ಇದನ್ನೂ ಓದಿ: 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    ಭಾರತ ಸ್ವಾತಂತ್ರ್ಯಗೊಂಡ 75 ವರ್ಷಗಳನ್ನು ಪೂರೈಸಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದ ವೀರ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅತ್ಯಂತ ಸಮಂಜಸ ಸಮಯ ಬಂದೊದಗಿದ್ದು ತಾವು ನಗರಸಭೆಯ ಮೂಲಕ ಈ ಪುತ್ತಳಿ ಅಳವಡಿಸಲು ಅನುಮತಿ ನೀಡಿ ಸಹಕರಿಸಬೇಕಾಗಿ ವಿನಂತಿ.

    ಹೀಗಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಯಶ್ ಪಾಲ್ ಅವರಿಂದ ತಲುಪಿದ ಪತ್ರಕ್ಕೆ ಉಡುಪಿ ನಗರಸಭೆ ಸ್ವೀಕೃತಿಯನ್ನು ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್

    ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್

    ಬೆಂಗಳೂರು: ರಾಜ್ಯದಲ್ಲಿ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳು ವಿಭಿನ್ನವಾಗಿ ಸಾರ್ವಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಮುಂದಾಗಿದ್ದು, ಈ ಬಗ್ಗೆ ಮೆಗಾ ಪ್ಲ್ಯಾನ್ ಸಿದ್ಧಪಡಿಸಿವೆ.

    ಹೌದು. ರಾಜ್ಯದಲ್ಲಿ ವೀರ ಸಾವರ್ಕರ್ ವಿವಾದ ದಿನೇ ದಿನೇ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದೆ. ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ಶುರುವಾದ ವಿವಾದ ಸದ್ಯ ಎಲ್ಲೆಡೆ ಹರಡ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ನೀಡಲು ಹಿಂದೂ ಸಂಘಟನೆಗಳು ಮುಂದಾಗಿದ್ದು, ಈ ಬಾರಿಯ ಗಣೇಶೋತ್ಸವದ ಮೂಲಕವೇ ಸಾವರ್ಕರ್‍ಗೆ ಇಡೀ ರಾಜ್ಯಾದ್ಯಂತ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ.

    ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆಯೊಡೆಯೋಕೆ ಶಿವಮೊಗ್ಗದ ಘಟನೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿಂದೂ ಕಾರ್ಯಕರ್ತರನ್ನ ಬೆಂಕಿಯಾಗಿಸಿದೆ. ಇತ್ತೀಚಿಗೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆಗಳು ಸೇರಿದಂತೆ ಹಲವು ವಿಚಾರಗಳು ಹಿಂದೂ ಸಂಘಟನೆಗಳನ್ನ ಕೆರಳಿಸಿದ್ದು, ಎಲ್ಲಾ ಕಾರಣಕ್ಕಾಗಿಯೇ ಹಿಂದೂಗಳನ್ನ ಈ ಮೂಲಕ ಒಗ್ಗೂಡಿಸಬೇಕು ಜೊತೆಗೆ ಸಾವರ್ಕರ್ ವಿರೋಧಿಗಳಿಗೂ ತಕ್ಕ ಉತ್ತರ ಕಲಿಸಲೇಬೇಕು ಅನ್ನೋ ನಿಟ್ಟಿನಲ್ಲಿ ಸಿಡಿದಿದ್ದಾರೆ.‌

    ಹಿಂದೂ ಸಂಘಟನೆಗಳ ಈ ಮೆಗಾ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ, ಈ ಬಾರಿ ಇಡೀ ರಾಜ್ಯದ ಎಲ್ಲಾ ಗಣೇಶ ಮೂರ್ತಿಗಳ ಜೊತೆಗೆ ಸಾವರ್ಕರ್ ಫೋಟೋ ಇಡಲಿದ್ದೇವೆ. ಇದಕ್ಕೆ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನೂ ಇದಕ್ಕೆ ಬದ್ಧನಾಗಿರಲಿದ್ದು. ಯಾರು ಬಂದು ಫೋಟೋ ತೆಗೆಸುತ್ತಾರೋ ನೋಡೇ ಬಿಡೋಣ ಎಂಬ ಸವಾಲಾಕಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಬದಲಾವಣೆ – ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಶಾಕ್ ಸಾಧ್ಯತೆ

    ಈ ಬಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್ ಬಗೆಗಿನ ಜೀವನ ಚರಿತ್ರೆ, ವೀಡಿಯೋಗಳು, ಅವರ ಬಗೆಗಿನ ಪುಸ್ತಕವನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲೂ ಸಂಘಟನೆಗಳು ಚಿಂತನೆ ನಡೆಸಿವೆ. ಜೊತೆಗೆ ಭಾರತದಲ್ಲಿ ಮತ್ತೆ ಸಾವರ್ಕರ್ ಯುಗವನ್ನ ಆರಂಭಿಸುತ್ತೇವೆ. ಹಾಗಾಗಿ ಈ ಬಾರಿಯ ಗಣೇಶೋತ್ಸವ ಸಾವರ್ಕರ್ ಗಣೇಶೋತ್ಸವ ಆಗಲಿದೆ ಅಂತಿದ್ದಾರೆ.

    ಸಾವರ್ಕರ್ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಹಲವು ವಿವಾದಗಳ ಜೊತೆ ತಿಕ್ಕಾಟಗಳು ಕೂಡ ಒಂದರ ಹಿಂದೊಂದು ಆರಂಭವಾಗ್ತಿವೆ. ಈ ವಿವಾದ ಮತ್ತೆಲ್ಲಿಗೆ ಹೋಗಿ ತಲುಪಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಹಜ ಸ್ಥಿತಿಯತ್ತ ಶಿವಮೊಗ್ಗ: ಇಂದಿನಿಂದ ಶಾಲಾ-ಕಾಲೇಜು ಓಪನ್

    ಸಹಜ ಸ್ಥಿತಿಯತ್ತ ಶಿವಮೊಗ್ಗ: ಇಂದಿನಿಂದ ಶಾಲಾ-ಕಾಲೇಜು ಓಪನ್

    ಶಿವಮೊಗ್ಗ: ಉದ್ವಿಗ್ನಗೊಂಡಿರುವ ಶಿವಮೊಗ್ಗದಲ್ಲಿ ಇಂದು ಸಹ ನಿಷೇಧಾಜ್ಞೆ ಮುಂದುವರಿದಿದೆ. ಇಂದಿನಿಂದ ಶಾಲಾ-ಕಾಲೇಜುಗಳು ಮತ್ತೆ ಆರಂಭಗೊಂಡಿವೆ.

    ಘಟನೆ ನಡೆದಾಗಿನಿಂದ ಶಿವಮೊಗ್ಗದಲ್ಲೇ ಇರುವ ಎಡಿಜಿಪಿ ಅಲೋಕ್ ಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. 40 ವರ್ಷದೊಳಗಿನ ಜನರ ಮೇಲೆ ಪೊಲೀಸ್ ಕಣ್ಗಾವಲು ಇಡಲಾಗಿದೆ. ನಗರದಲ್ಲಿ 10 ಕೆಎಸ್‍ಆರ್‍ಪಿ ತುಕಡಿ, 10 ಡಿಎಆರ್, 1 ಆರ್‍ಎಎಫ್, 3 ಅಡಿಷನಲ್ ಎಸ್‍ಪಿ, 10 ಡಿವೈಎಸ್ಪಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.

    ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಈ ಮಧ್ಯೆ ಭದ್ರಾವತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಇದನ್ನೂ ಓದಿ: ದಲಿತ ಬಾಲಕನ ಸಾವಿನಿಂದ ಹೆಚ್ಚಿದ ಕಾವು – ಕಾಂಗ್ರೆಸ್‌ನ 12 ಕೌನ್ಸಿಲರ್‌ಗಳು ದಿಢೀರ್ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • `ಮುಸ್ಲಿಂ’ ಏರಿಯಾದಲ್ಲಿ ಸಾವರ್ಕರ್ ಫೋಟೋ ಬೇಕಿತ್ತಾ..? – ಸಿದ್ದರಾಮಯ್ಯ ಹೇಳಿಕೆ ಫುಲ್ ವೈರಲ್

    `ಮುಸ್ಲಿಂ’ ಏರಿಯಾದಲ್ಲಿ ಸಾವರ್ಕರ್ ಫೋಟೋ ಬೇಕಿತ್ತಾ..? – ಸಿದ್ದರಾಮಯ್ಯ ಹೇಳಿಕೆ ಫುಲ್ ವೈರಲ್

    ಬೆಂಗಳೂರು: ಶಿವಮೊಗ್ಗದ ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕೋಕೆ ಹೋದರು ಎಂಬ ಸಿದ್ದರಾಮಯ್ಯ ಹೇಳಿಕೆ ಟ್ವಿಟ್ಟರ್‍ನಲ್ಲಿ ಸಾಕಷ್ಟು ಟ್ರೆಂಡ್ ಸೃಷ್ಟಿಸಿದೆ.

    ಸಿದ್ದರಾಮಯ್ಯ ಅವರು ಹೇಳಿದ್ದ `ಮುಸ್ಲಿಂ ಏರಿಯಾ’ ಪದ ಟ್ವಿಟ್ಟರ್‍ನಲ್ಲಿ ಟ್ರೆಂಡ್ ಆಗಿದೆ. ಅಲ್ಲದೆ ಪಕ್ಷದಲ್ಲೂ ಸಿದ್ದರಾಮಯ್ಯ ವಿರೋಧಿ ಬಣ ಕೂಟ ಟೀಕಿಸಿದೆ ಅಂತ ತಿಳಿದು ಬಂದಿದೆ. ಮಂಗಳವಾರ ಶಿವಮೊಗ್ಗ ಗಲಭೆ ಸಂಬಂಧ ಮಾಜಿ ಸಚಿವ ಈಶ್ವರಪ್ಪನವರು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ನನ್ನ ಗಂಡ ನಮಾಜ್‌ಗೆ ಹೋಗಿದ್ರು, ಗಲಾಟೆಗೂ ನನ್ನ ಪತಿಗೂ ಸಂಬಂಧ ಇಲ್ಲ: ಆರೋಪಿ ಜಬಿ ಪತ್ನಿ

    ಬಳಿಕ ಘಟನೆಯನ್ನು ಖಂಡಿಸುವಾಗ ಇವತ್ತಿನ ಪರಿಸ್ಥಿತಿಗೆ ಸಿದ್ದರಾಮಯ್ಯ, ಡಿಕೆಶಿ ಕಾರಣ ಅಂತ ಈಶ್ವರಪ್ಪ ಟೀಕಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ, ಈ ಬಿಜೆಪಿಯವರಿಗೆ ಕಾಮಾಲೆ ರೋಗ ಬಂದಿದೆ. ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅನ್ನೋದು. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಿದ್ದಾರೆ. ಹಾಕಲಿ ಬೇಡ ಅನ್ನಲ್ಲ. ಆದ್ರೆ ಟಿಪ್ಪು ಫೋಟೋ ತೆಗೀತಾರೆ. ಹೀಗೆ ಮಾಡಿದ್ರೆ ಗಲಭೆ ಆಗಲ್ವಾ..? ತಪ್ಪು ಅವರು ಮಾಡಿ ಕಾಂಗ್ರೆಸ್ ಮೇಲೆ ಹಾಕ್ತಾರೆ. ಮಗೂನು ಚಿವುಟುತ್ತಾರೆ ತೊಟ್ಟಿಲು ತೂಗ್ತಾರೆ. ಘಟನೆಯಲ್ಲಿ ಎಸ್‍ಡಿಪಿಐ ಇದ್ದರೆ ಕ್ರಮ ತೆಗೆದುಕೊಳ್ಳಿ. ಸರ್ಕಾರ ನಿಮ್ಮದೇ ಇದೆ. ಎಸ್‍ಡಿಪಿಐ, ಪಿಎಫ್‍ಐ ಸಮರಸ್ಯ ಹಾಳು ಮಾಡುತ್ತಿದ್ದಾರೆ ಅಂತ ನಿಮ್ಮ ಬಳಿ ದಾಖಲೆ ಇದ್ರೆ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದರು.

    ಸಿದ್ದರಾಮಯ್ಯ ಹಿಂದೂ ವಿರೋಧಿ, ಅಲ್ಪಸಂಖ್ಯಾತರ ಓಲೈಕೆ ಮಾಡ್ತಾರೆ ಅನ್ನೋ ಆರೋಪ ಮೊದಲಿನಿಂದಲೂ ಈ ಬಣ ಮಾಡ್ತಿತ್ತು. ಇದೀಗ ಈ ಬಗ್ಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. `ಮುಸ್ಲಿಂ’ ವಿರೋಧಿ ಪದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಹಂತದಲ್ಲಿ ಓಲೈಕೆ ಬೇಕಿತ್ತೇ…? ಅಂತ ಟೀಕೆಯೂ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

    ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

    ಬೆಂಗಳೂರು: ಟಿಪ್ಪು ವರ್ಸಸ್‌ ಸಾವರ್ಕರ್‌ ವಿವಾದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ ಎಂದು ಕಿಡಿಕಾರಿದೆ.

    ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಟಿಪ್ಪುವಿನ ಫೋಟೋ ಎಲ್ಲಿ ಬೇಕಾದರೂ ಹಾಕಬಹುದು. ಆದರೆ ಸಾವರ್ಕರ್ ಫೋಟೋ ಹಾಕಲು ಮಾತ್ರ ಸಿದ್ದರಾಮಯ್ಯ ಅವರಿಗೆ ಧರ್ಮ ಅಡ್ಡ ಬರುತ್ತದೆ. ಓಲೈಕೆ ರಾಜಕಾರಣದ ಪರಮಾವಧಿಯಿದು. ಜಿಹಾದಿ ಮಾನಸಿಕತೆಯನ್ನು ಕಾಂಗ್ರೆಸ್‌ ಪಕ್ಷ ಬೆಳೆಸುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಟೀಕಿಸಿದೆ. ಇದನ್ನೂ ಓದಿ: ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್

    ಸಿದ್ದರಾಮಯ್ಯ ಅವರು ಸ್ವತಂತ್ರ ಭಾರತದ ಜಿನ್ಹಾ! ಮುಸ್ಲಿಂ ಏರಿಯಾಗಳನ್ನು ಈ ದೇಶದ ಅಖಂಡತೆಯಿಂದ ಛಿದ್ರಗೊಳಿಸುವುದಕ್ಕೆ ಹೊರಟಿದ್ದೀರಾ? ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದು ಕುಟುಕಿದೆ.

    ಸಿದ್ದರಾಮಯ್ಯ ಬೀದಿಗೆ ಬಿಟ್ಟ ರಕ್ತಬೀಜಾಸುರರೇ ಶಿವಮೊಗ್ಗದಲ್ಲಿ ಗಲಾಟೆ ಸೃಷ್ಟಿಸಿದ್ದು ಎಂಬ ಗುಮಾನಿ ಈಗ ಸತ್ಯವಾಗಿದೆ. ಜಿಹಾದಿ ಮಾನಸಿಕತೆಯ ಉಗ್ರರ ಪರವಾಗಿ ಸಿದ್ದರಾಮಯ್ಯ ವಕಾಲತ್ತು ವಹಿಸುವುದರಲ್ಲಿ ಅಚ್ಚರಿಯಿಲ್ಲ ಎಂದು ಬಿಜೆಪಿ ಟ್ವೀಟ್‌ ಮಾಡಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಮತ್ತೊಂದು ವಿವಾದ – ಮಾಣಿಕ್ ಷಾ ಮೈದಾನದ ದ್ವಾರಗಳ ಮೇಲಿದ್ದ ಟಿಪ್ಪು, ಚೆನ್ನಮ್ಮ ಹೆಸರಿಗೆ ಬಣ್ಣ!

    Live Tv
    [brid partner=56869869 player=32851 video=960834 autoplay=true]

  • ನಿಷೇಧಾಜ್ಞೆಯ ಮಧ್ಯೆ  ಭದ್ರಾವತಿಯಲ್ಲೂ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

    ನಿಷೇಧಾಜ್ಞೆಯ ಮಧ್ಯೆ ಭದ್ರಾವತಿಯಲ್ಲೂ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

    ಶಿವಮೊಗ್ಗ: ಫ್ಲೆಕ್ಸ್‌ ವಿಚಾರಕ್ಕೆ ನಡೆಯುತ್ತಿರುವ ಕಿತ್ತಾಟ ಈಗ ಭದ್ರಾವತಿಗೆ ಬಂದಿದ್ದು, ನಗರದ ಭಜರಂಗದಳದ ಕಾರ್ಯಕರ್ತನ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

    ಸುನೀಲ್ (25) ಮೇಲೆ ಇಂದು ಬೆಳಗ್ಗೆ 8:30ರ ವೇಳೆಗೆ ಭದ್ರಾವತಿಯ ನೆಹರು ನಗರದಲ್ಲಿ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಸುನೀಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

    ಮುಂಜಾಗ್ರತಾ ಕ್ರಮವಾಗಿಯೇ ಭದ್ರಾವತಿಯಲ್ಲೂ 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಾಗಿದೆ. ನಿಷೇಧಾಜ್ಞೆ ನಡುವೆಯೂ ನಾಲ್ವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೆಟ್ರೋ ಸ್ಟೇಷನ್ ಒಳಗೂ ಸಾವರ್ಕರ್ ಫೋಟೋಗೆ ಆಕ್ಷೇಪ- ಟ್ವಿಟ್ಟರ್‌ನಲ್ಲಿ ಅಭಿಯಾನ

    ಮೆಟ್ರೋ ಸ್ಟೇಷನ್ ಒಳಗೂ ಸಾವರ್ಕರ್ ಫೋಟೋಗೆ ಆಕ್ಷೇಪ- ಟ್ವಿಟ್ಟರ್‌ನಲ್ಲಿ ಅಭಿಯಾನ

    ಬೆಂಗಳೂರು: ಶಿವಮೊಗ್ಗದ ಬಳಿಕ ಇದೀಗ ಸಾವರ್ಕರ್ ಫೋಟೋ ವಿವಾದ ಸಿಲಿಕಾನ್ ಸಿಟಿಗೂ ತಟ್ಟಿದೆ. ನಮ್ಮ ಮೆಟ್ರೋ ಸ್ಟೇಷನ್ ಒಳಗೆ ಸಾರ್ವಕರ್ ಫೋಟೋಗೆ ಈಗ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಅಮೃತ ಮಹೋತ್ಸವದ ಅಂಗವಾಗಿ ಮೆಟ್ರೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಲಾಗಿದೆ. ಆದರೆ ಇದೀಗ ಮೆಟ್ರೋ ನಿಲ್ದಾಣದಲ್ಲಿ ಹಾಕಿರುವ ಫೋಟೋ ವಿವಾದ ಸೃಷ್ಟಿಸುತ್ತಿದೆ. ಫೋಟೋ ತೆಗೆಯುವಂತೆ ಕೆಲವರು ಟ್ವೀಟ್ ಮಾಡಿ ಅಭಿಯಾನ ಆರಂಭಿಸಿದ್ದಾರೆ.

    ಬ್ರಿಟಿಷ್ ರ ಕ್ಷಮೆ ಕೇಳಿದವರನ್ನು ನಾವೇಕೆ ಗೌರವಿಸಬೇಕು. ಇದು ಯಾರ ಆದೇಶ ಅಂತಾ ಟ್ವೀಟ್ ಮಾಡಿ ಟ್ಯಾಗ್ ಮಾಡಲಾಗುತ್ತಿದೆ. ಆದರೆ ಇಷ್ಟೆಲ್ಲಾ ವಿವಾದ ಆದರೂ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (BMRCL) ಸಾರ್ವಕರ್ ಫೋಟೋ ತೆರವು ಮಾಡಿಲ್ಲ. ಇದನ್ನೂ ಓದಿ: ಸಾವರ್ಕರ್ ಪೋಸ್ಟರ್ ವಿವಾದ – ನಾಲ್ವರು ಅರೆಸ್ಟ್

    ಟಿಕೆಟ್ ಕೌಂಟರ್‍ಗೆ ಎಂಟ್ರಿಯಾಗುವ ಭಾಗದಲ್ಲಿ ಫೋಟೋ ಹಾಕಲಾಗಿದೆ. ಒಟ್ಟಿನಲ್ಲಿ ಟ್ವಿಟ್ಟರ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾದರೂ ಬಿಎಂಆರ್ ಸಿಎಲ್ ಮಾತ್ರ ವಿವಾದದ ಗಂಭೀರತೆ ಅರಿದಂತೆ ಕಾಣುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಯೋಗ್ಯತೆ ಇಲ್ಲದವರು ಈಗ ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ – ಗುಡುಗಿದ ಬಿ.ಎಲ್ ಸಂತೋಷ್

    ಯೋಗ್ಯತೆ ಇಲ್ಲದವರು ಈಗ ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ – ಗುಡುಗಿದ ಬಿ.ಎಲ್ ಸಂತೋಷ್

    ಚಿಕ್ಕಬಳ್ಳಾಪುರ: ಯೋಗ್ಯತೆ ಇಲ್ಲದವರು ವೀರ ಸಾವರ್ಕರ್ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಸಾರ್ವಕರು ವಿರೋಧಿಗಳ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಗುಡುಗಿದ್ದಾರೆ.

    ಸಮೃದ್ದ ಭಾರತ ಎನ್‍ಜಿಒ ಸಂಸ್ಥೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರೈಡ್‌ ಫಾರ್ ನೇಷನ್ ಎಂಬ ಬೈಕ್ ರ‍್ಯಾಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬಿ.ಎಲ್ ಸಂತೋಷ್ ಭಾಗಿಯಾಗಿದ್ದರು. ಬೈಕ್ ರೈಡರ್ಸ್ ಉದ್ದೇಶಿಸಿ ಭಾಷಣ ಮಾಡಿದ ಬಿ.ಎಲ್ ಸಂತೋಷ್ ಸಾವರ್ಕರ್ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನೃತ್ಯದಲ್ಲಿ ಸಾವರ್ಕರ್‌ ಫೋಟೋ – ಮುಖ್ಯೋಪಾಧ್ಯಾಯರನ್ನು ಕರೆಸಿ ಕ್ಷಮೆ ಹೇಳಿಸಿದ ಪಂಚಾಯತ್‌

    ಸಾವರ್ಕರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಯಾರು ಹೆಸರು ಹೇಳಲು ಯೋಗ್ಯತೆ ಇಲ್ಲದಂತಹ ವಂಶದಲ್ಲಿ ಹುಟ್ಟಿದ್ದಾರೋ ಅಂತವರು ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ. ಹಿಂದಿನ ನಾಲ್ಕು ತಲೆಮಾರು ಮುಂದಿನ 25 ತಲೆಮಾರಿನ ಜನರಿಗೆ ಸಾವರ್ಕರ್ ಬಗ್ಗೆ ಮಾತನಾಡಲು ಯೋಗ್ಯತೆ ಇರಲ್ಲ. ಅಂತವರು ಸಾವರ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ – ಯುವಕನಿಗೆ ಚಾಕು ಇರಿತ

    Live Tv
    [brid partner=56869869 player=32851 video=960834 autoplay=true]