Tag: ಸಾವರ್ಕರ್

  • ಸಾವರ್ಕರ್ ರಥಯಾತ್ರೆಗೆ ಬಿಎಸ್‌ವೈ ಚಾಲನೆ- ಸಿದ್ದರಾಮಯ್ಯಗೆ ಠಕ್ಕರ್ ಕೊಡಲು ಬಿಜೆಪಿ ಪ್ಲ್ಯಾನ್

    ಸಾವರ್ಕರ್ ರಥಯಾತ್ರೆಗೆ ಬಿಎಸ್‌ವೈ ಚಾಲನೆ- ಸಿದ್ದರಾಮಯ್ಯಗೆ ಠಕ್ಕರ್ ಕೊಡಲು ಬಿಜೆಪಿ ಪ್ಲ್ಯಾನ್

    ಮೈಸೂರು: ಸ್ವಾತಂತ್ರ್ಯ ಸೇನಾನಿ ಸಾವರ್ಕರ್ ವಿಚಾರದಲ್ಲಿ ದೊಡ್ಡ ವಿವಾದ ಸೃಷ್ಟಿಸಿರುವ ಕಾಂಗ್ರೆಸ್‍ಗೆ ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ರಥ ಯಾತ್ರೆ ಮೂಲಕ ತಿರುಗೇಟು ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಥಯಾತ್ರೆಗೆ ಮಾಜಿ ಸಿಎಂ ಬಿಎಸ್‌ವೈ ಚಾಲನೆ ನೀಡಿದರು.

    ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಾವರ್ಕರ್ ರಥ ಯಾತ್ರೆ ಆರಂಭವಾಗಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಈ ರಥ ಯಾತ್ರೆಗೆ ಚಾಲನೆ ನೀಡಿದರು. ಈ ರಥವೂ ಮೈಸೂರಿನ ಅನೇಕ ಭಾಗಗಳಲ್ಲಿ ಸಂಚರಿಸಲಿದೆ. ರಥದಲ್ಲಿ ಸಾವರ್ಕರ್ ಅವರ ಜೀವನ ಚರಿತ್ರೆಯ ಅಂಶಗಳನ್ನು ಮೂಡಿಸಲಿದ್ದು, ಸಾವರ್ಕರ್ ಇತಿಹಾಸವನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಈ ರಥಯಾತ್ರೆ ಆಯೋಜಿಸಲಾಗಿದೆ. ಇದನ್ನೂ ಓದಿ: ಮನೆ ಮನೆಗೆ ಸಾವರ್ಕರ್ ಅಭಿಯಾನ ಆರಂಭ – 6 ರೂ.ಗೆ ಪುಸ್ತಕ ಬಿಡುಗಡೆ

    ಮೈಸೂರಲ್ಲಿ ಇಂದಿನಿಂದ 8 ದಿನ ಸಾವರ್ಕರ್ ರಥ ಯಾತ್ರೆ ನಡೆಯಲಿದೆ. ದೊಡ್ಡ ಎಲ್‍ಇಡಿ ಪರದೆಯನ್ನು ರಥದಲ್ಲಿ ಅಳವಡಿಸಿದ್ದು, ಎಲ್‍ಇಡಿಯಲ್ಲಿ ಸಾವರ್ಕರ್ ಕುರಿತು ಟಿವಿಗಳಲ್ಲಿ ಬಂದ ಚರ್ಚೆಗಳು, ಸಾವರ್ಕರ್ ಅವರ ಜೀವನ ಪ್ರಮುಖ ಅಂಶಗಳ ವೀಡಿಯೋಗಳನ್ನು ಹಾಕಲಾಗುತ್ತಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಈ ರಥ ನಿಲ್ಲಲಿದ್ದು, ಜನರಿಗೆ ಸಂಕ್ಷಿಪ್ತವಾಗಿ ಸಾವರ್ಕರ್ ಅವರ ಜೀವನವನ್ನು ತಿಳಿಸುವ ಕೆಲಸ ಮಾಡಲಾಗುತ್ತದೆ. ಈ ಮೂಲಕ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರಲ್ಲೇ ಸಿದ್ದರಾಮಯ್ಯ ಅವರಿಗೆ ಠಕ್ಕರ್‌ ನೀಡಲು ಬಿಜೆಪಿ ಸಿದ್ಧವಾಗಿದೆ.  ಇದನ್ನೂ ಓದಿ: ಮುಸ್ಲಿಮರನ್ನು ಕೇಳಲು ತೊಡೆ ನಡುಗುತ್ತಾ: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಗಣೇಶನ ಹಬ್ಬದಂದೇ ಅದ್ಧೂರಿ ಸಾವರ್ಕರ್‌ ಉತ್ಸವ ಆಚರಣೆಗೆ ಸಿದ್ಧತೆ

    ಗಣೇಶನ ಹಬ್ಬದಂದೇ ಅದ್ಧೂರಿ ಸಾವರ್ಕರ್‌ ಉತ್ಸವ ಆಚರಣೆಗೆ ಸಿದ್ಧತೆ

    ಬೆಂಗಳೂರು: ಗಣೇಶನ ಹಬ್ಬಕ್ಕೆ ಸರಿಯಾಗಿ ಇನ್ನೊಂದು ವಾರ ಬಾಕಿ ಇದೆ. ಕೋವಿಡ್‌ ನಿರ್ಬಂಧ ಇಲ್ಲದೇ  ಗಣೇಶೋತ್ಸವದ ಜೊತೆ ಅದ್ಧೂರಿಯಾಗಿ ಸಾವರ್ಕರ್‌ ಉತ್ಸವ ನಡೆಸಲು ಹಿಂದೂ ಸಂಘಟನೆಗಳು ಕರೆ ನೀಡಿವೆ.

    ರಾಜ್ಯದ ಜನತೆಗೆ ಸಾವರ್ಕರ್ ಜೀವನ ಚರಿತ್ರೆ, ಸಾವರ್ಕರ್ ಅನುಭವಿಸಿದ ಕಷ್ಟಗಳನ್ನ ಹೇಳ ಹೊರಟಿರುವ ಸಂಘಟನೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯುವಪಡೆಯನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೀರಿ: ಡಿ.ಕೆ.ಶಿವಕುಮಾರ್

    ಪ್ರತಿ ಜಿಲ್ಲೆಯಲ್ಲೂ ಆಸಕ್ತ ಯುವಕ ಯುವತಿಯರಿಗೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಾವರ್ಕರ್ ಬಗ್ಗೆ ಭಾಷಣ ಮಾಡಲು ತರಬೇತಿ ನೀಡಲಾಗುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಾಗಾರ ಆರಂಭಿಸಲಾಗಿದೆ.

    ಈ ಕಾರ್ಯಾಗಾರದ ಸಂಪೂರ್ಣ ಜವಾಬ್ದಾರಿಯನ್ನ ಯುವಾ ಬ್ರಿಗೇಡ್ ವಹಿಸಿಕೊಂಡಿದೆ. ಈ ಮೂಲಕ ಸಾವರ್ಕರ್ ಉತ್ಸವದಲ್ಲಿ ಅದ್ಧೂರಿ ಭಾಷಣಗಳನ್ನ ಯುವಪಡೆಯ ಮೂಲಕವೇ ಜನರಿಗೆ ತಲುಪಿಸುವ ತಯಾರಿ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೀರಿ: ಡಿ.ಕೆ.ಶಿವಕುಮಾರ್

    ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೀರಿ: ಡಿ.ಕೆ.ಶಿವಕುಮಾರ್

    ಬೆಂಗಳೂರು: ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೆಯಿರಿ, ಆದರೆ ಜನರನ್ನು ನೆಮ್ಮದಿಯಿಂದ ಬದುಕಲು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

    ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಹಳ್ಳಿಗೆ ಹೋಗೋದು, ಜನರ ಸಮಸ್ಯೆ ಕೇಳೋದು ಅವರ ಕರ್ತವ್ಯ. ಹಾಗೆ ಹೋದಾಗ ಕಲ್ಲು, ಮೊಟ್ಟೆ ಹೊಡೀತಾರೆ ಅಂದ್ರೆ ಅವರ ಮನಸ್ಥಿತಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ.

    ಕೊಡಗಿಗೆ ಯಾವುದೇ ಬಂಡವಾಳ ಹರಿದು ಹೋಗುತ್ತಿಲ್ಲ. ಕೇವಲ ಪ್ರವಾಸೋದ್ಯಮದಿಂದ ಅಲ್ಲಿನ ಜನ ಬದುಕುತ್ತಿದ್ದಾರೆ. ಅವರ ಅನ್ನ ಕಿತ್ತುಕೊಳ್ಳಬೇಡಿ. ಇದೇ ರೀತಿಯಲ್ಲಿ ಅಶಾಂತಿ ಉಂಟಾದ್ರೆ ಜನರ ಬದಕು ಕಷ್ಟ ಆಗುತ್ತೆ. ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೆಯಿರಿ, ಆದರೆ ನೆಮ್ಮದಿಯಿಂದ ಜನರನ್ನು ಬದುಕಲು ಬಿಡಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸದೇ ಹೋದ್ರೆ 2024ರಲ್ಲಿ ಮೋದಿಗೆ ಸೋಲು: ಸುಬ್ರಮಣಿಯನ್ ಸ್ವಾಮಿ

    ದೇಶದಲ್ಲಿ ರಾಜ್ಯದ ಗೌರವ ಮಣ್ಣುಪಾಲಾಗುತ್ತಿದೆ. ಶಿಕ್ಷಣ, ಪ್ರವಾಸಕ್ಕೆ ಹೊರಗಡೆಯಿಂದ ಜನರು ಬರುತ್ತಿದ್ದಾರೆ. ಅದರಿಂದ ವ್ಯಾಪಾರ ನಡೀತಾ ಇದೆ. ಅದಕ್ಕೂ ಕಲ್ಲು ಹಾಕುವ ಕೆಲಸ ಮಾಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

    ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಇದಕ್ಕೆ ಬೊಮ್ಮಾಯಿ ಅವರೇ ಉತ್ತರ ಕೊಡಬೇಕು. ನಮ್ಮ ಕಾರ್ಯಕರ್ತರು ಎಚ್ಚರವಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ನೆಹರೂ ಫೋಟೋ ಬಿಟ್ಟು ಅಪಮಾನ ಮಾಡಿದ್ರು. ಇದಕ್ಕೆ ಉತ್ತರ ಕೊಡಲು ನಮಗೂ ಬರುತ್ತೆ. ಆದ್ರೆ ಶಾಂತಿ ಕಾಪಡಬೇಕು ಅನ್ನೋದು ನಮ್ಮ ಉದ್ದೇಶ, ಹಾಗಾಗಿ ಸುಮ್ಮನಿದ್ದೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಶುಭಮನ್‌ ಗಿಲ್‌ ಚೊಚ್ಚಲ ಶತಕದ ಅಬ್ಬರ – ಕ್ಲೀನ್‌ಸ್ವೀಪ್‌ನಲ್ಲಿ ಸರಣಿಗೆದ್ದ ಭಾರತ

    ಆಗಸ್ಟ್ 26ರ `ಮಡಿಕೇರಿ ಚಲೋ’ ವಿಚಾರವಾಗಿ ಮಾತನಾಡಿ, ಮಡಿಕೇರಿ ಚಲೋ ಕೊಡಗು ಎಸ್‌ಪಿ ವಿರುದ್ಧ ಅಲ್ಲ, ಸರ್ಕಾರದ ವಿರುದ್ಧ ನಮ್ಮ ಹೋರಾಟ. ಕಲ್ಲು, ಮೊಟ್ಟೆ ಹೊಡೆದವನು ಹೀರೋ ಆಗಲ್ಲ. ಬಿಜೆಪಿ ಎಲ್ಲಿ ಪ್ರತಿಭಟನೆ ಮಾಡ್ತೋ ಅಲ್ಲೆ ಖಂಡಿಸುತ್ತೇವೆ. ಅದಕ್ಕಾಗಿ ಈ ಹೋರಾಟ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಫೋಟೋ ಮುಟ್ಟಿದ್ರೆ ಕೈ ಕಟ್ ಮಾಡ್ತೇವೆ- ಮುತಾಲಿಕ್ ವಿವಾದಾತ್ಮಕ ಹೇಳಿಕೆ

    ಸಾವರ್ಕರ್ ಫೋಟೋ ಮುಟ್ಟಿದ್ರೆ ಕೈ ಕಟ್ ಮಾಡ್ತೇವೆ- ಮುತಾಲಿಕ್ ವಿವಾದಾತ್ಮಕ ಹೇಳಿಕೆ

    ಬೆಳಗಾವಿ: ಮುಸ್ಲಿಮರು ಮತ್ತು ಕಾಂಗ್ರೆಸ್ಸಿನವರು ಗಣೇಶೋತ್ಸವ ಮಂಡಳಿಗಳಲ್ಲಿನ ಸಾವರ್ಕರ್ ಫೋಟೋ ಮುಟ್ಟಿದ್ರೇ ಕೈ ಕತ್ತರಿ ಬಿಸಾಕುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ಕಾಮತ್ ಗಲ್ಲಿಯ ಗಣಪತಿ ಮಂಡಳಿಗೆ ಸಾವರ್ಕರ್ ಫೋಟೋ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, ರಾಜ್ಯದ ಹತ್ತು ಸಾವಿರ ಗಣಪತಿ ಮಹಾಮಂಡಳಿಗಳಿಗೆ ಬ್ಯಾನರ್, ಫೋಟೋ ನೀಡುತ್ತೇವೆ. ಗಣಪತಿ ಪ್ರತಿಷ್ಠಾಪನೆ ಮಾಡುವವರೆಗೂ ಅಭಿಯಾನವನ್ನು ಮಾಡುತ್ತೇವೆ. ಎಲ್ಲ ಸಾರ್ವಜನಿಕ ಗಣಪತಿ ಮಂಟಪದಲ್ಲಿ ಬ್ಯಾನರ್ ಹಾಕುತ್ತೇವೆ. ಪ್ರತಿಯೊಂದು ಗಣೇಶ ಮಂಡಳಿ, ಓಣಿಯಲ್ಲಿ ಸಾರ್ವಕರ್ ಅಭಿಯಾನ ಮಾಡ್ತೀವಿ. ಸಾರ್ವಕರ್ ಮುಸ್ಲಿಮರ ವಿರೋಧಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ಪಟ ಕ್ರಾಂತಿಕಾರಿ. ಹೀಗಾಗಿ ಅವರನ್ನ ಮುಟ್ಟಿದ್ರೆ ಕೈ ಕತ್ತರಿ ಬಿಸಾಕುತ್ತೇವೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಇದನ್ನು ಎಚ್ಚರಿಕೆ ಅಂತಾ ತಿಳಿದುಕೊಂಡು ಹೆಜ್ಜೆ ಇಡಬೇಕು. ಯಾರು ಸಾವರ್ಕರ್ ಅವರನ್ನ ಅವಮಾನ ಮಾಡುವ ಕೆಲಸ ಮಾಡಬಾರದು. ಮಾಡಿದ್ರೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲಕ್ಷ ಲಕ್ಷ ಹಣ ಪ್ರಿಯತಮೆ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಿದ ಬಿಬಿಎಂಪಿ ಅಧಿಕಾರಿ!

    ಕಾಂಗ್ರೆಸ್ ನಲ್ಲಿ ಇಂದಿರಾಗಾಂಧಿ, ನೆಹರು, ಗಾಂಧೀಜಿ ಅವರನ್ನ ಬಿಟ್ಟರೆ ಬೇರೆಯವರು ಹೋರಾಟಗಾರರಲ್ಲ ಅಂತಾ ತಿಳಿದುಕೊಂಡಿದ್ದಾರೆ. ಇಂದಿರಾಗಾಂಧಿ ಪ್ರಧಾನಿ ಇದ್ದಾಗ ಸಾವರ್ಕರ್ ಅವರ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದಾರೆ. ಸಾವರ್ಕರ್ ಸಮನಾಗಿ ಗಾಂಧೀಜಿನೂ ಇಲ್ಲ, ನೆಹರೂ ಇಲ್ಲ. ಅಂತಹ ಶ್ರೇಷ್ಠ ವ್ಯಕ್ತಿಯನ್ನ ಅವಮಾನ ಮಾಡೊದನ್ನ ನಿಲ್ಲಿಸಬೇಕು ಎಂದರು.

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಸಿದ್ಧತೆ

    ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಸಿದ್ಧತೆ

    ಬೆಳಗಾವಿ/ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಸಾವರ್ಕರ್ ವಿವಾದ ಜೋರಾಗಿದೆ. ಈ ಮಧ್ಯೆ ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಸಿದ್ಧತೆ ನಡೆದಿದೆ.

    ಈ ಬಾರಿ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವವಾಗಿ ಆಚರಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಿನ್ನೆಯಷ್ಟೇ ಹೇಳಿದ್ದರು. ಇದರ ಬೆನ್ನಲ್ಲೇ ಈ ಬಾರಿ ಬೆಳಗಾವಿಯ ಐತಿಹಾಸಿಕ ಸಾರ್ವಜನಿಕ ಗಣೇಶೋತ್ಸವ ವೇಳೆ ಬೆಳಗಾವಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಪ್ರತಿಯೊಂದು ಗಣೇಶ ಮಂಟಪಗಳಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಫೋಟೋ ಇರಿಸುತ್ತೇವೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಇದನ್ನೂ ಓದಿ: ಐಸಿಸ್‍ನ ಮೊದಲ ಭಾರತೀಯ ಬಾಂಬರ್ ಬೆಂಗಳೂರಿನ ಟೆಕ್ಕಿ

    ವಿಜಯಪುರ ಜಿಲ್ಲೆಯಲ್ಲೂ ಈ ಬಾರಿಯ ಗಣೇಶೋತ್ಸವದಲ್ಲಿ ವೀರ ಸಾವರ್ಕರ್ ವಿಷಯ ಹಾಗೂ ಭಾವಚಿತ್ರ ರಾರಾಜಿಸಲಿವೆ. ಜಿಲ್ಲೆಯ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ವಿಶೇಷವಾಗಿ ಸಾವರ್ಕರ್ ಭಾವಚಿತ್ರ ಹಾಕಲು ಶ್ರೀರಾಮ ಸೇನೆ ಕಾರ್ಯಕರ್ತರು ಮುಂದಾಗಿದ್ದಾರೆ. ಅಲ್ಲದೆ ಗಣೇಶೋತ್ಸವದಲ್ಲಿ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ, ಅವರು ಅನುಭವಿಸಿದ ಸಂಕಷ್ಟಗಳ ವೀಡಿಯೋಗಳನ್ನು ಪ್ರಸಾರ ಮಾಡಲು ಮುಂದಾಗಿವೆ. ಇದರ ಜೊತೆಗೆ ಸಾವರ್ಕರ್ ಚರಿತ್ರೆಯ ಪುಸ್ತಕ, ನಾಟಕ ಸೇರಿದಂತೆ ಇನ್ನು ಹಲವು ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ವಿಜಯಪುರ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ಪ್ರತ್ಯಕ್ಷ

    ವಿಜಯಪುರ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ಪ್ರತ್ಯಕ್ಷ

    ವಿಜಯಪುರ: ರಾಜ್ಯದಲ್ಲಿ ಸಾವರ್ಕರ್ ಪರ-ವಿರೋಧ ವಾದ ತಾರಕಕ್ಕೇರುತ್ತಿರುವ ನಡುವೆಯೇ ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ರಾರಾಜಿಸಿದೆ.

    ಜಲನಗರದ ಕಚೇರಿ ಗೋಡೆಗಳ ಮೇಲೆ ಸಾವರ್ಕರ್ ಭಾವಚಿತ್ರ ಪ್ರತ್ಯಕ್ಷವಾಗಿದೆ. ರಾತ್ರೋರಾತ್ರಿ ಸಾವರ್ಕರ್ ಫೋಟೋ ಪ್ರತ್ಯಕ್ಷವಾಗಿದ್ದು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ್ ನೇತೃತ್ವದಲ್ಲಿ ಕೃತ್ಯ ನಡೆಸಲಾಗಿದೆ ಎಂಬ ಆರೋಪವಿದೆ. ಈ ವಿವಾದ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಯನ್ನು ಅರಿತ ಪೊಲೀಸರು ಫೋಟೋಗಳನ್ನು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ

    ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರಾಜ್ಯದ ವಿವಿಧೆಡೆ ಸಾವರ್ಕರ್ ಫ್ಲೆಕ್ಸ್, ಫೋಟೋ ಹಾಕುವ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಕೆಲದಿನಗಳ ಹಿಂದೆ ಸಿದ್ದರಾಮಯ್ಯ ಮಡಿಕೇರಿ ಪ್ರವಾಸ ಕೈಗೊಂಡಿದ್ದಾಗ ಸಾವರ್ಕರ್ ಫೋಟೋ ಪ್ರದರ್ಶಿಸಿ ಅವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು. ಆ ಬಳಿಕ ಸಾವರ್ಕರ್ ಫೋಟೋ ಎಲ್ಲೆಡೆ ಕಂಡು ಬರುತ್ತಿದ್ದು, ಇದೀಗ ಸಾವರ್ಕರ್ ಫೋಟೋ ಕಾಂಗ್ರೆಸ್ ಕಚೇರಿಯ ಗೋಡೆಗಳ ಮೇಲೆ ಹಾಕಿರುವುದು ವಿವಾದಕ್ಕೆ ಇನ್ನಷ್ಟು ಬೆಂಕಿ ಹಚ್ಚಿದಂತಾಗಿದೆ. ಇದನ್ನೂ ಓದಿ: 23 ಏಮ್ಸ್‌ಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಸ್ಥಳೀಯ ನಾಯಕರ ಹೆಸರಿಡಿ – ಕೇಂದ್ರಕ್ಕೆ ಪ್ರಸ್ತಾವ

    Live Tv
    [brid partner=56869869 player=32851 video=960834 autoplay=true]

  • ತಾಕತ್ ಇದ್ರೆ ಟಿಪ್ಪು ಫೋಟೋವನ್ನ ನಿಮ್ಮ ಮನೇಲಿ ಹಾಕಿ: ಕಾಂಗ್ರೆಸ್ಸಿಗರಿಗೆ ರೇಣುಕಾಚಾರ್ಯ ಸವಾಲು

    ತಾಕತ್ ಇದ್ರೆ ಟಿಪ್ಪು ಫೋಟೋವನ್ನ ನಿಮ್ಮ ಮನೇಲಿ ಹಾಕಿ: ಕಾಂಗ್ರೆಸ್ಸಿಗರಿಗೆ ರೇಣುಕಾಚಾರ್ಯ ಸವಾಲು

    ದಾವಣಗೆರೆ: ಕಾಂಗ್ರೆಸ್ ಅವರಿಗೆ ತಾಕತ್ ಇದ್ದರೆ ಟಿಪ್ಪು ಫೋಟೋವನ್ನು ನಿಮ್ಮ ಮನೆ, ಕಚೇರಿಗಳಲ್ಲಿ ಹಾಕಿಕೊಳ್ಳಿ ಎಂದು ಕಾಂಗ್ರೆಸ್ ಮುಖಂಡರಿಗೆ ಶಾಸಕ ರೇಣುಕಾಚಾರ್ಯ ಸವಾಲು ಹಾಕಿದರು.

    ಹೊನ್ನಾಳಿಯ ನಿವಾಸದ ಮುಂಭಾಗದಲ್ಲಿ ಸಾವರ್ಕರ್‌ ಫೋಟೋವನ್ನು ಹಾಕಿಕೊಂಡು ನಂತರ ಮಾತನಾಡಿದ ಅವರು, ನಾವು ಸಾವರ್ಕರ್ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರ ಫೋಟೋವನ್ನು ನಮ್ಮ ಮನೆಗಳಲ್ಲಿ, ಕಚೇರಿಗಳಲ್ಲಿ ಹಾಕಿಕೊಳ್ಳುತ್ತೇವೆ. ಅದೇ ರೀತಿ ಕಾಂಗ್ರೆಸ್‍ನವರು ಟಿಪ್ಪು ಫೋಟೋವನ್ನು ಕಚೇರಿ, ಮನೆಗಳಲ್ಲಿ ಹಾಕಿಕೊಳ್ಳಿ ಎಂದ ಅವರು, ಸತ್ತವರ ಜಯಂತಿ ಮಾಡಲು ಇಸ್ಲಾಂ ಧರ್ಮದಲ್ಲಿ ಅವಕಾಶ ಇಲ್ಲ. ಸತ್ತವರ ಫೋಟೋಗಳನ್ನು ಅವರ ಮನೆಯಲ್ಲಿ ಹಾಕಿಕೊಳ್ಳುವುದಿಲ್ಲ ಎಂದು ತಿಳಿಸಿದರು.

    Congress

    ವೀರ ಸಾವರ್ಕರ್ ನಾವೆಲ್ಲಾ ಫೋಟೋಗಳನ್ನು ಮನೆಗಳಲ್ಲಿ ಹಾಕಿಕೊಳ್ಳತ್ತಿದ್ದೇವೆ. ಇದು ಹೆಮ್ಮೆಯ ಸಂಗತಿಯಾಗಿದ್ದು ಏರಿಯಾಗಳಲ್ಲಿ, ನಗರ ಪ್ರದೇಶಗಳಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಮಾಡುತ್ತೇವೆ. ವೀರ ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನೀಯರಾಗಿದ್ದಾರೆ. ಸಾವರ್ಕರ್ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳುತ್ತಾರೆ. ಆದರೆ ಟಿಪ್ಪು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ ಹೇಳಲಿ. ಅದೇ ರೀತಿ ಕಾಂಗ್ರೆಸ್‍ನವರು ನಾವು ಹಿಂದೂ ಎಂದು ಹೇಳಿಕೊಳ್ಳಿ ನೋಡೋಣ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಧ್ಯಾಹ್ನ ನಾಟಿ ಕೋಳಿ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಭೇಟಿ ಕೊಟ್ರಾ ಸಿದ್ದರಾಮಯ್ಯ?

    ಸಿದ್ದರಾಮಯ್ಯನವರ ಕಾರಿಗೆ ಕೊಡಗಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸದ ಅವರು, ಮೊಟ್ಟೆ ಎಸೆದವನು ಕಾಂಗ್ರೆಸ್‍ನಲ್ಲಿ ಇದ್ದರು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಬಿಜೆಪಿ ನಾಯಕರು ಪ್ರವಾಸ ಮಾಡಲಿ ಪ್ರತಿಭಟನೆ ಮಾಡ್ತಿವಿ ಎಂದು ಡಿಕೆಶಿ ಹೇಳುತ್ತಾರೆ. ನಾವು ಕೂಡ ಸವಾಲ್ ಹಾಕ್ತಿವಿ ಬೇಕಿದ್ರೆ ಪ್ರತಿಭಟನೆ ಮಾಡಿಸಿ ನೋಡೋಣ ಎಂದರು.

    ಮೊಟ್ಟೆ ಎಸೆದಿದ್ದು ಬಿಜೆಪಿ ಕಾರ್ಯಕರ್ತ ಅಲ್ಲ, ಕಾಂಗ್ರೆಸ್‍ನವರು. ಸಿದ್ದರಾಮಯ್ಯನವರ ಪ್ರವಾಸ ಮಾಡುವುದನ್ನು ಬಿಜೆಪಿ ಕಾರ್ಯಕರ್ತರು ತಡೆಯುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಹೇಗೆ ಅಧಿಕಾರ ಇದೆಯೋ ಹಾಗೇ ವಿರೋಧ ಪಕ್ಷಕ್ಕೆ ಇದೆ. ಧರ್ಮ ಧರ್ಮದ ನಡುವೆ ಬೆಂಕಿ ಇಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ನಮಗೆ ಸಂಘರ್ಷ ಬೇಕಾಗಿಲ್ಲ ಸಾಮರಸ್ಯಬೇಕು ಎಂದು ಹೇಳಿದರು. ಇದನ್ನೂ ಓದಿ: ಒಂದೆಡೆ ಧರ್ಮ ಒಡೆಯೋ, ಮತ್ತೊಂದೆಡೆ ಸಾವರ್ಕರ್‌ಗೆ ಅವಹೇಳನ ಮಾಡ್ತಿರೋದನ್ನ ಜನ ಗಮನಿಸ್ತಿದ್ದಾರೆ: ಸಿದ್ದುಗೆ ವಿಜಯೇಂದ್ರ ಗುದ್ದು

    Live Tv
    [brid partner=56869869 player=32851 video=960834 autoplay=true]

  • ಸಂಸತ್ತಿನ ಒಳಗಡೆ ಫೋಟೋ ಇರುವಾಗ ಸರ್ಕಲ್‍ಗೆ ಸಾವರ್ಕರ್ ಹೆಸರು ಇಟ್ಟರೆ ತಪ್ಪೇನು – ಭರತ್ ಶೆಟ್ಟಿ ಪ್ರಶ್ನೆ

    ಸಂಸತ್ತಿನ ಒಳಗಡೆ ಫೋಟೋ ಇರುವಾಗ ಸರ್ಕಲ್‍ಗೆ ಸಾವರ್ಕರ್ ಹೆಸರು ಇಟ್ಟರೆ ತಪ್ಪೇನು – ಭರತ್ ಶೆಟ್ಟಿ ಪ್ರಶ್ನೆ

    ಮಂಗಳೂರು: ಈಗಾಗಲೇ ರಾಜ್ಯದಲ್ಲಿ ಸಾವರ್ಕರ್ ಪರ ವಿರೋಧ ಚರ್ಚೆ ಆಗುತ್ತಿರುವ ಬೆನ್ನಲ್ಲೆ ಮಂಗಳೂರಿನಲ್ಲಿ ಸರ್ಕಲ್‍ಗೆ ಸಾವರ್ಕರ್ ಹೆಸರಿನ ಪ್ರಸ್ತಾಪ ಕೇಳಿ ಬಂದಿದ್ದು ಚರ್ಚೆಗೆ ಕಾರಣವಾಗಿದೆ.

    ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಂಗಳೂರು ನಗರ ಹೊರವಲಯದ ಸುರತ್ಕಲ್ ಜಂಕ್ಷನ್‍ಗೆ ಸಾವರ್ಕರ್ ಹೆಸರಿಡಲು ಒತ್ತಾಯಿಸಿದ್ದಾರೆ. ಈ ಕುರಿತು ಶಾಸಕ ಭರತ್ ಶೆಟ್ಟಿ ಅವರು ಕಳೆದ ವರ್ಷವೇ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್ ಜಂಕ್ಷನ್‍ಗೆ ಸಾವರ್ಕರ್ ಹೆಸರಿಡುವ ಪ್ರಸ್ತಾಪ ತೀವ್ರ ಚರ್ಚೆಗೆ ಕಾರಣವಾಗಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಶಾಸಕ ಭರತ್ ಶೆಟ್ಟಿ ಮಾತನಾಡಿ, ಹಿಂದೂ ಸಂಘಟನೆಗಳು, ಸ್ಥಳೀಯರು ಸಾವರ್ಕರ್ ಹೆಸರಿಡಲು ಮನವಿ ಸಲ್ಲಿಸಿದ್ದರು. ಒಂಬತ್ತು ತಿಂಗಳ ಹಿಂದೆ ಈ ಪ್ರಕ್ರಿಯೆ ಶುರು ಆಗಿದೆ. ಸ್ವಾತಂತ್ರ್ಯ ಸೇನಾನಿ ವೀರಸಾವರ್ಕರ್ ವಿರುದ್ಧ ಯಾಕೆ ಈ ಮನಸ್ಥಿತಿಯಲ್ಲಿದ್ದಾರೆ ಗೊತ್ತಿಲ್ಲ. ಸಂಸತ್ತಿನ ಒಳಗಡೆ ಸಾವರ್ಕರ್ ಫೋಟೋ ಇರುವಾಗ ವಿರೋಧ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    ವೋಟ್ ಬ್ಯಾಂಕ್ ರಾಜಕೀಯಕ್ಕೆ ಸಾವರ್ಕರ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೂ, ಮುಸ್ಲಿಮ್ ಎಂದು ಹೇಳಿಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ವಿರೋಧ ವ್ಯಕ್ತಪಡಿಸುವವರು ಒಮ್ಮೆ ಇತಿಹಾಸ ಓದಿಕೊಂಡು ಬರಲಿ. ಯಾರು ಯಾವುದೇ ಅಡೆತಡೆ ಮಾಡಿದರೂ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ

    Live Tv
    [brid partner=56869869 player=32851 video=960834 autoplay=true]

  • ಮದುವೆ ಮನೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್

    ಮದುವೆ ಮನೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್

    ತುಮಕೂರು: ರಾಜ್ಯದಲ್ಲಿ ಸಾವರ್ಕರ್ ಫೋಟೋ ವಿವಾದ ನಡುವೆ ಮದುವೆ ಮನೆಯಲ್ಲಿ ನವಜೋಡಿಗೆ ಬಿಜೆಪಿ ಕಾರ್ಯಕರ್ತರು ಸಾವರ್ಕರ್ ಫೋಟೋ ಗಿಫ್ಟ್ ನೀಡಿದ್ದಾರೆ.

    ಈ  ತುಮಕೂರಿನ ಸಿದ್ದಿ ವಿನಾಯಕ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ದಯಾನಂದ- ಸೌಮ್ಯ ಮದುವೆ ನಡೆದಿದೆ. ಈ ಮದುವೆಯ ಆರತಕ್ಷತೆಯ ಸಮಯದಲ್ಲಿ ನವಜೋಡಿಗೆ ಬಿಜೆಪಿ ಎಸ್‍ಟಿ ಯುವ ಮೋರ್ಚಾ ಕಾರ್ಯಕರ್ತರು ಸಾವರ್ಕರ್ ಫೋಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ವಿರೋಧಿಸಿ ಧಾರವಾಡದಲ್ಲಿ ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕೃತಿ ದಹಿಸಿ ಸಾವರ್ಕರ್ ಭಾವಚಿತ್ರಕ್ಕೆ ಮೊಟ್ಟೆಯಿಂದ ಹೊಡೆದಿದ್ದರು. ಅಷ್ಟೇ ಅಲ್ಲದೇ ಸಾವರ್ಕರ್ ಫೋಟೋಗಳನ್ನೂ ಕಾರ್ಯಕರ್ತರು ಸುಟ್ಟಿದ್ದರು.

    ಇದನ್ನೂ ಓದಿ: ಧರ್ಮದ ಹೆಸರಲ್ಲಿ ಬ್ರಾಹ್ಮಣರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ: ಬಿಜೆಪಿ ನಾಯಕ

    ಇತ್ತೀಚೆಗಷ್ಟೇ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಒಂದು ಗುಂಪು ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು. ಈ ವೇಳೆ ಯುವಕನೋರ್ವನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಇದೇ ವೇಳೆ ಸಾವರ್ಕರ್ ಫೋಟೊವನ್ನು ಬೀಳಿಸುವುರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಬೀಳಿಸುವುದರ ಮೂಲಕ ರಾಷ್ಟ್ರಧ್ವಜಕ್ಕೂ ಅವಮಾನವನ್ನು ಮಾಡಿದ್ದರು. ಇದನ್ನೂ ಓದಿ: ಮೊಟ್ಟೆ ಕಾಳಗ: ಆ.26ಕ್ಕೆ ಮಡಿಕೇರಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಮಧ್ಯೆ ಕೋಳಿ ಜಗಳ!

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ನಾಟಕ ಆಡ್ತಿದ್ದಾರೆ – ಪ್ರಮೋದ್ ಮುತಾಲಿಕ್ ಕಿಡಿ

    ಸಿದ್ದರಾಮಯ್ಯ ನಾಟಕ ಆಡ್ತಿದ್ದಾರೆ – ಪ್ರಮೋದ್ ಮುತಾಲಿಕ್ ಕಿಡಿ

    ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಎಲ್ಲ ಮಠಕ್ಕೆ ಹೋಗ್ತಾರೆ. ಉದ್ದುದ್ದ, ಅಡಡ್ಡ ನಮಸ್ಕಾರ ಮಾಡ್ತಾ ನಾಟಕ ಮಾಡ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

    ಸಿದ್ದರಾಮಯ್ಯ ಅವರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾಟಕ ಮಾಡ್ತಿದ್ದಾರೆ. ಇದು ರಂಭಾಪುರಿ ಶ್ರೀ, ಶೃಂಗೇರಿ ಶ್ರೀಗಳಿಗೂ ಗೊತ್ತು. ಎಲ್ಲ ಮಠಾಧೀಶರಿಗೂ ಈ ರಾಜಕಾರಣಿಗಳ ನಾಟಕ ಗೊತ್ತು ಎಂದಿದ್ದಾರೆ.

    ಸಿದ್ದರಾಮಯ್ಯ ನಾಸ್ತಿಕರು, ದೇವರನ್ನು ನಂಬಲಾರದವರು. ಕುಂಕುಮ ಹಚ್ಚಿದವರನ್ನು ಕಂಡರೆ ಹೊಟ್ಟೆ ಉರಿಯುತ್ತದೆ. ಕೇಸರಿ ಬಟ್ಟೆ ಕಂಡರೆ ಬೆಂಕಿ ಬಿದ್ದಂತೆ ಆಗುತ್ತೆ. ಅಂಥವರು ಯಾಕೆ ಮಠಕ್ಕೆ ಹೋಗ್ತಾರೆ? ಅನ್ನೋದು ಎಲ್ಲರಿಗೂ ಗೊತ್ತು. ಮತದ ದಾಹಕ್ಕಾಗಿ ನೀವು ಹೋಗುತ್ತಿದ್ದೀರಿ, ಭಕ್ತಿಯಿಂದ ಅಲ್ಲ. ನಿಮ್ಮ ನಾಟಕ ಬೇಡ. ನಿಮ್ಮ 60 ವರ್ಷದ ನಿಮ್ಮ ಬಣ್ಣ ಬಯಲಾಗಿದೆ. ದುರಾಡಳಿತ, ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಮತದಾರರೇ ನಿಮಗೆ ಮಣ್ಣು ಮುಕ್ಕಿಸುತ್ತಾರೆ ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: 8 ಅಂಗಡಿಗಳಲ್ಲಿ ಸರಣಿ ಕಳ್ಳತನ – ಬಟ್ಟೆ ಅಳತೆ ನೋಡಿ ಕದ್ದೊಯ್ದ ಖದೀಮರು

    ಇನ್ನೂ ಧಾರವಾಡದಲ್ಲಿ ಸಾವರ್ಕರ್ ಫೋಟೋ ಸುಟ್ಟ ಘಟನೆ ಸಂಬಂಧ ಮಾತನಾಡಿದ ಮುತಾಲಿಕ್, ಸಾವರ್ಕರ್ ಭಾವಚಿತ್ರ ಸುಟ್ಟು ಹಾಕಿದ್ದು ಹೇಯ ಹಾಗೂ ದೇಶದ್ರೋಹಿ ಕೃತ್ಯ. ನೀವು ಸುಟ್ಟಿರೋದು ಭಾವಚಿತ್ರವಲ್ಲ, ಭಾರತ ಮಾತೆಯನ್ನ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬ್ಯಾನ್ ನಿರ್ಧಾರ ತಗೆದುಕೊಳ್ಳುವಷ್ಟು ನಟ ಅನಿರುದ್ಧ ಕಿರಿಕ್ ಮಾಡಿದ್ರಾ?: ಪಿನ್ ಟು ಪಿನ್ ಮಾಹಿತಿ

    ಸಾವರ್ಕರ್ ಅರ್ಧ ಜೀವನ ಜೈಲಿನಲ್ಲಿ ಕಳೆದವರು. ಕಾಂಗ್ರೆಸ್‌ನವರಿಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು ಅಷ್ಟೇ. ನಿಮ್ಮ ಉದ್ದೇಶ ಏನು? ಎಂದು ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ವಿಚಾರ ತಪ್ಪು ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದರೆ ಸಾವರ್ಕರ್‌ಗೆ ಅಪಮಾನ ಮಾಡಿದ್ದು ಸರಿಯಲ್ಲ. ಇಂದಿರಾ ಗಾಂಧಿಯವರೇ ಸಾರ್ವಕರ್ ದೇಶಭಕ್ತ ಎಂದು ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ ನೀವು ಅಯೋಗ್ಯರು. ಈ ಕೂಡಲೇ ಭಾರತ ಮಾತೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]