Tag: ಸಾವರ್ಕರ್

  • ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ

    ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ

    ಚಾಮರಾಜನಗರ: ಮಂಡ್ಯದ ಸಂಸದೆ ಸುಮಲತಾ (Sumalatha Ambareesh) ಅವರು ಬಿಜೆಪಿ (BJP) ಸೇರ್ಪಡೆಯಾಗುವ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ತಿಳಿಸಿದ್ದಾರೆ.

    `ಮಂಡ್ಯದಲ್ಲಿ (Mandya) ಬಿಜೆಪಿ ಫ್ಲೆಕ್ಸ್‌ಗಳಲ್ಲಿ ಸುಮಲತಾ ಫೋಟೋ’ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ (Chamarajanagar) ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಸಂಸದೆ ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಬಿಜೆಪಿ ಫ್ಲೆಕ್ಸ್‌ಗಳಲ್ಲಿ ಅವರ ಹಿತೈಷಿಗಳು ಫೋಟೋ ಹಾಕಿಸಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಸೆಂಬ್ಲಿ ಎಲೆಕ್ಷನ್ ಮೇಲೆ ಬಿಜೆಪಿ ಚಾಣಾಕ್ಯನ ಕಣ್ಣು- ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ

    ಇದೇ ವೇಳೆ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೊ ಹಾಕಿದ್ದನ್ನು (Savarkar Photo Controversy) ಸಮರ್ಥಿಸಿಕೊಂಡ ಕಟೀಲ್, ಕಾಂಗ್ರೆಸ್ (Congress) ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಸಾವರ್ಕರ್ ದೇಶಭಕ್ತ. ನಾವು ದೇಶಭಕ್ತರ ಪರವಾಗಿ ವಾದ ಮಾಡುತ್ತೇವೆ. ಆದ್ರೆ ಕಾಂಗ್ರೆಸ್‌ನವರು ರಾಷ್ಟ್ರ ವಿರೋಧಿಗಳ ಪರವಾಗಿ ವಾದ ಮಾಡ್ತಾರೆ. ಕುಕ್ಕರ್ ಹಿಡಿದುಕೊಂಡು ಬಂದವನ ಪರವಾಗಿ ವಾದ ಮಾಡ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಕಡೆಗಣನೆ ಎಂಬ ಸತೀಶ್ ಜಾರಕಿಹೊಳಿ (Satish Jarkiholi) ಆರೋಪಕ್ಕೆ ಪ್ರತಿಕ್ರಿಯಿಸಿ, ಚರ್ಚೆಗೆ ಅವರೇ ಅವಕಾಶ ಕೊಡಬೇಕು. ಹೊರಗಡೆ ನಿಂತು ಮಾತನಾಡುವುದಲ್ಲ. ಸತೀಶ್ ಜಾರಕಿಹೊಳಿ ಒಬ್ಬ ಜವಬ್ದಾರಿಯುತ ಶಾಸಕ. ಅವರು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ (UttarKarnataka) ಬಗ್ಗೆ ಮಾತನಾಡಬೇಕು. ಆದ್ರೆ ಚರ್ಚೆ ಮಾಡೋದಕ್ಕೆ ಅವರು ಅವಕಾಶ ಕೇಳಿಲ್ಲ. ಅವಕಾಶ ಸಿಕ್ಕಾಗ ಕಾಂಗ್ರೆಸ್ ನವರು ಬೀದಿಯಲ್ಲಿ ಹೋರಾಟ ಮಾಡುತ್ತಾರೆ. 4 ವರ್ಷಗಳಿಂದ ಯಾವ ಜನಪರ ಹೋರಾಟ ಮಾಡಿದ್ದಾರೆ? ಅವಕಾಶ ಸಿಕ್ಕಾಗೆಲ್ಲಾ ಪಲಾಯನವಾದ ಮಾಡ್ತಿದ್ದಾರೆ ಎಂದು ತಿವಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪರದೇಶಿ ಟಿಪ್ಪುವನ್ನು ಹೊಗಳಿ, ಸಾವರ್ಕರ್ ಫೋಟೋ ಕಂಡರೂ ಉರಿದು ಬೀಳುವವರು ದೇಶ ವಿರೋಧಿಗಳು: ಬಿಜೆಪಿ

    ಪರದೇಶಿ ಟಿಪ್ಪುವನ್ನು ಹೊಗಳಿ, ಸಾವರ್ಕರ್ ಫೋಟೋ ಕಂಡರೂ ಉರಿದು ಬೀಳುವವರು ದೇಶ ವಿರೋಧಿಗಳು: ಬಿಜೆಪಿ

    ಬೆಂಗಳೂರು: ಅರ್ಜುನನನ್ನು ಶಂಕಿಸಬಹುದು. ಆದರೆ ಗಾಂಢೀವವನ್ನು ಶಂಕಿಸಬಹುದೇ? ಸಾವರ್ಕರ್ ಎಂದರೆ ಗಾಂಢೀವ! ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‍ಗೆ (Congress) ಜನರಿಗಿಂತ ನಿಮ್ಹಾನ್ಸ್ ಆಸ್ಪತ್ರೆಯ ನುರಿತ ಮನೋವೈದ್ಯರ ಅವಶ್ಯಕತೆ ಹೆಚ್ಚಾಗಿದೆ. ಪರದೇಶಿ ಟಿಪ್ಪುವನ್ನು (Tippu) ಹೊಗಳುವವರು, ದೇಶಪ್ರೇಮಿ ಸಾವರ್ಕರ್ (Savarkar) ಫೋಟೋ ಕಂಡರೂ ಉರಿದು ಬೀಳುವವರು ಒಂದೋ ದೇಶ ವಿರೋಧಿಯಾಗಿರಬೇಕು ಅಥವಾ ಮಾನಸಿಕ ಅಸ್ವಸ್ಥರಾಗಿರಬೇಕು ಎಂದು ಬಿಜೆಪಿ (BJP) ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

    ಟ್ವೀಟ್‍ನಲ್ಲಿ ಏನಿದೆ?
    1970ರಲ್ಲಿ ಇಂದಿರಾ ಗಾಂಧಿ (Indira Gandhi) ಸರ್ಕಾರ ವೀರ ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಸಾವರ್ಕರ್ ಕುರಿತು ಡಾಕ್ಯುಮೆಂಟರಿ ನಿರ್ಮಾಣಕ್ಕಾಗಿ ಸಾವರ್ಕರ್ ಸ್ಮಾರಕ ಸಮಿತಿಗೆ ಸ್ವತಃ ಇಂದಿರಾ ಗಾಂಧಿ ದೇಣಿಗೆ ನೀಡಿದ್ದರು. ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ? ಸಾವರ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಖುದ್ದು ಸಾವರ್ಕರ್ ಹೋರಾಟವನ್ನು ಕೊಂಡಾಡಿ ಅವರೊಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿ ಪತ್ರ ಬರೆದಿದ್ದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಇದರ ಜೊತೆಗೆ ವೀರ ಸಾವರ್ಕರ್ ಸ್ಮಾರಕ ನಿಧಿಗೆ ವೈಯುಕ್ತಿಕವಾಗಿ 11,000 ರೂಪಾಯಿ ದೇಣಿಗೆ ಕೂಡಾ ನೀಡಿದ್ದರು. ಸಾವರ್ಕರ್ ಅಸ್ಪೃಶ್ಯತಾ ನಿವಾರಣೋಪಾಯಗಳು ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿತ್ತು, ಆದರೆ ಕಾಂಗ್ರೆಸ್ಸಿಗರಿಗೆ ಆಗಲೇ ಇಲ್ಲ! ‘ಅಸ್ಪೃಶ್ಯತೆ ನಿವಾರಿಸಲು ನನ್ನ ಆಶಯಕ್ಕನುಗುಣವಾಗಿ ಸಮಾಜದೊಳಗಿದ್ದು ಶ್ರಮಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಸಾವರ್ಕರ್ ಕೂಡಾ ಒಬ್ಬರು’ ಎಂದು ಅಂಬೇಡ್ಕರ್ ಕೊಂಡಾಡಿದ್ದರು. ತಾಯಿ ಭಾರತಿಗೆ ಕನ್ನಡದಾರತಿ ಎತ್ತುವೆ ಎಂದ ಆಲೂರು ವೆಂಕಟರಾಯರಿಗೆ, ಭಾರತ ಜನನಿಯ ತನುಜಾತೆ ಎಂದ ಕುವೆಂಪುರವರಿಗೆ, ಭಾಷೆಯಲ್ಲ, ಕಾವ್ಯವೇ ನವಮೇಘರೂಪ ಎಂದ ಬೇಂದ್ರೆಯವರಿಗೆ ಪ್ರೇರಣೆಯಾದವರು ಸಾವರ್ಕರ್. ಅಂಥಹ ವೀರ ಸಾವರ್ಕರ್ ಅವರು ಕಾಂಗ್ರೆಸ್ಸಿಗೆ ಮಾತ್ರ ವಿರೋಧಿಸುವುದೇಕೆ? ಸಿಂಗಾಪುರದ “ಫ್ರೀ ಇಂಡಿಯಾ ರೇಡಿಯೋ” ಭಾಷಣದಲ್ಲಿ ನೇತಾಜಿ, “ರಾಜಕೀಯ ಪ್ರಬುದ್ಧತೆಯಿಲ್ಲದ ಕಾಂಗ್ರೆಸ್ ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಯಾಳಿಸುತ್ತಿರುವಾಗ ಸಾವರ್ಕರ್ ಸೇನೆಗೆ ಸೇರಿ ಎನ್ನುತ್ತಿರುವುದು ಸ್ಫೂರ್ತಿದಾಯಕ” ಎಂದಿದ್ದರು.

    ಸಾವರ್ಕರ್ ನಿಂದಕರೆಲ್ಲರೂ ನೇತಾಜಿ ನಿಂದಕರೂ ಆಗಿದ್ದಾರೇಕೆಂದು ಈಗ ತಿಳಿಯಿತೇ? ಕಾಂಗ್ರೆಸ್ ಇಂದು ಸಾವರ್ಕರ್‌ರನ್ನು ವಿರೋಧಿಸಬಹುದು. ಆದರೆ ಸಾವರ್ಕರ್‌ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವವರ ಸಾಲಲ್ಲಿ ಗಾಂಧೀಜಿಯೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್‌ರನ್ನು ಪ್ರೀತಿಯಿಂದ ‘ಭಾಯ್’ ಎಂದು ಸಂಬೋಧಿಸುತ್ತಿದ್ದರು. ಕಾಂಗ್ರೆಸ್ ಗಾಂಧೀಜಿಯನ್ನೂ ವಿರೋಧಿಸುವುದೇ? ಒಂದು ಸಮುದಾಯದ ಓಲೈಕೆಯಲ್ಲೇ ನಿರತರಾಗಿರುವ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‍ಗೆ ಟಿಪ್ಪು, ಶಾರಿಕ್‍ನಂಥವರೇ ದೇವರಾಗಿದ್ದಾರೆಯೇ ವಿನಾ, ದಲಿತರಿಗೂ ಪತಿತ ಪಾವನ ಮಂದಿರ ಕೊಟ್ಟ ಸಾವರ್ಕರ್ ದೇವರಾಗಲಿಲ್ಲ. ಇದನ್ನೂ ಓದಿ: ನಾವು ಹಿಂದೂಗಳೇ – ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ: ಡಿಕೆಶಿ

    ಸಮಾಜವಾದಿ ಸಿದ್ದರಾಮಯ್ಯ ಈಗೆಲ್ಲಿ ಹೋದರು? ಮಾನ್ಯ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ, ಸಾವರ್ಕರ್ ಅವರನ್ನು ಓದುವುದು ಬೇಡ. ಕೇವಲ ನಿಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮಾತನ್ನು ನೀವು ಅರ್ಥ ಮಾಡಿಕೊಂಡಿದ್ದರೂ, ಸಾವರ್ಕರ್ ಅವರ ಭಾವಚಿತ್ರಕ್ಕೆ ನೀವೇ ಹಾರ ಹಾಕುತ್ತಿದ್ದಿರೇನೋ! ಮಸ್ತಕದಲ್ಲೂ ಏನಿಲ್ಲ, ಪುಸ್ತಕವೂ ಓದಲ್ಲ ಎನ್ನುವವರಿಗೆ ಏನೆನ್ನೋಣ? ಅಂಡಮಾನಿನ ಕತ್ತಲ ಕೋಣೆಯಲ್ಲಿ ವೀರ ಸಾವರ್ಕರ್ ಕಾಲ ಕಳೆಯದಿರುತ್ತಿದ್ದರೆ, ಅವರ ಚಿಂತನೆಗಳು ರಾಷ್ಟ್ರದಲ್ಲಿ ಹರಿಯದಿರುತ್ತಿದ್ದರೆ ಭಾರತ 1947 ರಲ್ಲಿ ಸ್ವತಂತ್ರವಾಗುತ್ತಲೂ ಇರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಲೂ ಇರಲಿಲ್ಲ! ಅಂದು ವೀರ ಸಾವರ್ಕರ್ ಕತ್ತಲ ಕೋಣೆಯಲ್ಲಿ ಕಾಲ ಕಳೆಯದಿರುತ್ತಿದ್ದರೆ, ಇಂದು ವಿರೋಧಿಸುವವರಿಗೆ ಧ್ವನಿಯೇ ಇರುತ್ತಿರಲಿಲ್ಲ. ಇಂದಿನ ಆಡಳಿತದ ಯಾವ ಸಂಕೇತಗಳೂ ಇರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸುಳ್ಳಿನ ರಾಜ – ನಮ್ಮ ಒತ್ತಾಯದಿಂದ ಅಧಿವೇಶನ ನಡೆಯುತ್ತಿದೆ: ಡಿಕೆಶಿ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಏಯ್‌ ಯತ್ನಾಳ್‌ – ಕಾರಿಡಾರ್‌ನಲ್ಲಿ ಸಿದ್ದು ಇತಿಹಾಸ ಪಾಠ

    ಏಯ್‌ ಯತ್ನಾಳ್‌ – ಕಾರಿಡಾರ್‌ನಲ್ಲಿ ಸಿದ್ದು ಇತಿಹಾಸ ಪಾಠ

    ಬೆಳಗಾವಿ: ಸುವರ್ಣ ಸೌಧದ(Suvarna Soudha) ಕಾರಿಡಾರ್‌ನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌(Basanagouda Patil) ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಇತಿಹಾಸದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

    ಕಾರಿಡಾರ್‌ನಲ್ಲಿ ಯತ್ನಾಳ್‌ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಸಿದ್ದರಾಮಯ್ಯ, ಏಯ್‌ ಯತ್ನಾಳ್‌ ಎಂದಿದ್ದಾರೆ. ಇದಕ್ಕೆ ಯತ್ನಾಳ್‌, ಸಾಹೇಬ್ರೆ ನಮಸ್ಕಾರ ಎಂದು ಹೇಳಿ ನಾನು ನಿಮ್ಮ ಬಗ್ಗೆಯೇ ಮಾತನಾಡುತ್ತಿದ್ದೆ ಎಂದು ಉತ್ತರ ನೀಡಿದರು. ಇದನ್ನೂ ಓದಿ: ನಾವು ಹಿಂದೂಗಳೇ – ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ: ಡಿಕೆಶಿ

    ಸಿದ್ದರಾಮಯ್ಯ, ನೀವು ನನ್ನ ಬಗ್ಗೆನೇ ಮಾತನಾಡಬೇಕು. ಟಿಪ್ಪು, ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ ಹೋರಾಟಗಾರರು ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಯತ್ನಾಳ್‌, ಹೌದು. ಚೆನ್ನಮ್ಮ, ರಾಯಣ್ಣ ಪ್ರತಿಮೆಯನ್ನು ಸುವರ್ಣ ಸೌಧದಲ್ಲಿ ನಿರ್ಮಾಣ ಮಾಡುತ್ತೇವ ಎಂದು ಮರು ಉತ್ತರ ನೀಡಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ರಾಷ್ಟ್ರೀಯ ನಾಯಕರ ಫೋಟೋ ಇಡಬೇಕು. ದಾರ್ಶನಿಕರ ಫೋಟೊ ಇಡಬೇಕು. ನಾವು ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡುತ್ತೇವೆ. ಆ ಕಾರಣಕ್ಕೆ ಇವರು ವಿಷಯಾಂತರ ಮಾಡಲು ಈ ವಿಚಾರವನ್ನು ಎತ್ತಿದ್ದಾರೆ. ನಾವು ಸಾವರ್ಕರ್ ಫೋಟೋವನ್ನು ವಿರೋಧ ಮಾಡುತ್ತಿಲ್ಲ. ಅವರ ಜೊತೆ ಈ ಎಲ್ಲಾ ಮಹನೀಯರ ಫೋಟೋವನ್ನು ಹಾಕಬೇಕು ಎಂದು ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಬೆಳಗಾವಿ: ಸುವರ್ಣಸೌಧದ(Suvarna Soudha) ವಿಧಾನಸಭೆ ಸಭಾಂಗಣದ ಒಳಗಡೆ ಸಾವರ್ಕರ್‌(Savarkar) ಸೇರಿ 7 ಮಂದಿಯ ಫೋಟೋವನ್ನು ಅನಾವರಣ ಮಾಡಲಾಗಿದೆ.

    ಮಹಾತ್ಮ ಗಾಂಧೀಜಿ, ಡಾ. ಬಿ.ಆರ್‌. ಅಂಬೇಡ್ಕರ್‌, ಲಾಲ್ ಬಹಾದ್ದೂರ್ ಶಾಸ್ತ್ರೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಬಸವಣ್ಣ, ಸ್ವಾಮಿ ವಿವೇಕಾನಂದ, ವಿ ಡಿ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಲಾಗಿದೆ.

    ಮಾಧ್ಯಮಗಳನ್ನ ನಿರ್ಬಂಧ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸ್ಪೀಕರ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಸ್ಪೀಕರ್‌ ಕುಳಿತುಕೊಳ್ಳುವ ಆಸನದ ಮೇಲೆ ಬಸವಣ್ಣನ ಫೋಟೋ ಹಾಕಲಾಗಿದೆ.

    ಸಿದ್ದರಾಮಯ್ಯ ಕಿಡಿ:
    ಸ್ಪೀಕರ್ ಕಚೇರಿಯಿಂದ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನ್‌ ನಾಯಕರ ಫೋಟೋ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ ಫೋಟೋ ಹಾಕುವುದು ಗೊತ್ತಾಯಿತು.

    Live Tv
    [brid partner=56869869 player=32851 video=960834 autoplay=true]

  • ಒಂದೇ ಏಟಿಗೆ ಎರಡು ಹಕ್ಕಿ – ಬಿಜೆಪಿ `ಸಾವರ್ಕರ್’ ಅಸ್ತ್ರ ಸೀಕ್ರೆಟ್ ಏನು?

    ಒಂದೇ ಏಟಿಗೆ ಎರಡು ಹಕ್ಕಿ – ಬಿಜೆಪಿ `ಸಾವರ್ಕರ್’ ಅಸ್ತ್ರ ಸೀಕ್ರೆಟ್ ಏನು?

    ಬೆಂಗಳೂರು: ರಾಜ್ಯ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು, ಈ ಬಾರಿ ಬಿಜೆಪಿಗೆ(Karnataka BJP) ಹಿಂದೂ ಅಸ್ತ್ರದ ಜೊತೆಗೆ ಸಾವರ್ಕರ್(Savarkar) ಕೂಡ ಒಂದು ಅಜೆಂಡಾ ಆಗುವ ಸಾಧ್ಯತೆ ಇದೆ.

    ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ(Belagavi Winter Session) ನಡೆಯಲಿದ್ದು, ಮತ್ತೆ ಸಾವರ್ಕರ್ ಸಮರ ಜೋರಾಗುವಂತಿದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.

     

    ಈಗಾಗಲೇ ವಿಧಾನಸಭೆಯ ಸಿಬ್ಬಂದಿ ಎಲ್ಲಾ ಫೋಟೋಗಳಿಗೆ ಕರ್ಟನ್ ಹಾಕಿ ಮುಚ್ಚಿದ್ದಾರೆ. ಬೆಳಗ್ಗೆ 10:30ಕ್ಕೆ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಅಧಿವೇಶನ ಆರಂಭಕ್ಕೂ ಮುನ್ನವೇ ಸಾವರ್ಕರ್ ಫೋಟೋ ಅನಾವರಣವಾಗಲಿದೆ.

    ಈ ಬಗ್ಗೆ ಸ್ಪೀಕರ್ ಕಾಗೇರಿ ಪ್ರತಿಕ್ರಿಯಿಸಿ, ಕಾರಣಾಂತರಗಳಿಂದ ಫೋಟೋ ಅನಾವರಣ ವಿಳಂಬವಾಗಿದೆ. ಯಾರ ಭಾವಚಿತ್ರ ಎನ್ನುವುದು ನಾಳೆ ಬನ್ನಿ ನೋಡ್ತೀರಾ ಅಂತ ಕುತೂಹಲ ಉಳಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಗಾಂಧೀಜಿ ಮರ್ಡರ್ ಕೇಸಲ್ಲಿ ಇರೋ ವ್ಯಕ್ತಿ – ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ


    ಸಚಿವ ಸಿಸಿ ಪಾಟೀಲರು, ಸಾವರ್ಕರ್ ದೇಶಾಭಿಮಾನಿ ಅಂತ ಎದೆ ತಟ್ಟಿ ಹೇಳ್ತೀನಿ ಅಂದ್ರೆ ವಿರೋಧಿಸೋದು ಮುಟ್ಟಾಳತನ ಎಂದರೆ ವಿಪಕ್ಷದವರು ಸಹಕರಿಸಲಿ ಅಂತ ಎಂಎಲ್‍ಸಿ ರವಿಕುಮಾರ್ ಆಗ್ರಹಿಸಿದ್ದಾರೆ.

    ಓಟರ್‌ಗೇಟ್‌-ಚಿಲುಮೆ ಹಗರಣ ಪ್ರಸ್ತಾಪಿಸಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್(Congress) ಪ್ಲಾನ್ ಮಾಡಿತ್ತು. ಬೆಳಗಾವಿ ಗಡಿ ವಿಚಾರದಲ್ಲಿ ಸರ್ಕಾರ ವಿಫಲ ಅಂತ ಬಿಂಬಿಸಲು ಕಾಂಗ್ರೆಸ್ ಮುಂದಾಗಿತ್ತು. ಈಗ ಸಾವರ್ಕರ್ ಭಾವಚಿತ್ರ ಅಳವಡಿಕೆಯಿಂದ ಬಿಜೆಪಿ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ಮಾಡಿದೆ ಎನ್ನಲಾಗುತ್ತಿದೆ. ಸಾವರ್ಕರ್ ಫೋಟೋವನ್ನು ಕಾಂಗ್ರೆಸ್ ವಿರೋಧಿಸಲು ಬಂದರೆ ಡಿಕೆಶಿಯ `ಕುಕ್ಕರ್’ ಬಾಂಬ್ ಪ್ರಯೋಗ ಮಾಡಲು ಮುಂದಾಗಿದೆ. ಬೆಳಗಾವಿಯಲ್ಲೇ ಸಾವರ್ಕರ್ ಕಿಡಿ ಹೊತ್ತಿಸಿ ಹಿಂದುತ್ವ ಅಜೆಂಡಾ ಫಿಕ್ಸ್ ಪ್ಲಾನ್ ಮಾಡಿದ ಎಂಬ ವಿಶ್ಲೇಷಣೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಗಾಂಧೀಜಿ ಮರ್ಡರ್ ಕೇಸಲ್ಲಿ ಇರೋ ವ್ಯಕ್ತಿ – ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ

    ಸಾವರ್ಕರ್ ಗಾಂಧೀಜಿ ಮರ್ಡರ್ ಕೇಸಲ್ಲಿ ಇರೋ ವ್ಯಕ್ತಿ – ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ

    ಬೆಳಗಾವಿ: ಮಹಾತ್ಮ ಗಾಂಧೀಜಿ (Mahatma Gandhiji) ಹತ್ಯೆಯಲ್ಲಿ ವೀರ ಸಾವರ್ಕರ್ (Savarkar) ಕೈವಾಡವಿದೆ. ಅವರ ಫೋಟೋ ಸದನದಲ್ಲಿ ಅಳವಡಿಸುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.

    ಸದನದೊಳಗೆ ಸಾವರ್ಕರ್ ಭಾವಚಿತ್ರ ಅಳವಡಿಕೆ ಸಂಬಂಧ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸದನದಲ್ಲಿ ಸಾವರ್ಕರ್ ಫೋಟೊ ಅಳವಡಿಕೆ ನನ್ನ ಗಮನಕ್ಕೆ ಬಂದಿಲ್ಲ. ವೀರ ಸಾವರ್ಕರ್ ಮೊದಲೇ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದವರು. ಪೋಟೋ ಸದನದಲ್ಲಿ ಹಾಕಿದರೆ ಅವರ ಆತ್ಮಕ್ಕೆ ಶಾಂತಿ ಸಿಗಬೇಕಲ್ಲವೇ? ಎಂದು ಸಿದ್ದರಾಮಯ್ಯ ನಸುನಕ್ಕರು.

    ವೀರ ಸಾವರ್ಕರ್ ಫೋಟೊ ಸದನದಲ್ಲಿ ಅಳವಡಿಸುವ ಅಗತ್ಯ ಇಲ್ಲ. ಇಲ್ಲಿಯವರೆಗೆ ಸದನದಲ್ಲಿ ಸಾವರ್ಕರ್ ಫೋಟೊ ಹಾಕಿರಲಿಲ್ಲ, ಹಾಗಿದ್ದರೆ ಈಗೇಕೆ? ಫೋಟೋ ಹಾಕುವುದರಿಂದ ವೀರ ಸಾವರ್ಕರ್ ಆತ್ಮಕ್ಕೆ ಶಾಂತಿ ಸಿಗಬೇಕಲ್ಲ? ಫೋಟೋ ಅಳವಡಿಕೆ ಕಾರ್ಯಕ್ರಮಕ್ಕೆ ನನಗೇನೂ ಆಹ್ವಾನ ಬಂದಿಲ್ಲ. ಸಾವರ್ಕರ್ ಪೋಟೋ ಅಳವಡಿಕೆ ವಿಚಾರವನ್ನು ಸರ್ವ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸುವರ್ಣ ಸೌಧದಲ್ಲಿ ನಾಳೆ ಸಾವರ್ಕರ್ ಫೋಟೋ ಅನಾವರಣ – ಬಿಜೆಪಿಯಿಂದ ಸಿದ್ಧತೆ

    ಬಿಜೆಪಿ ನಾಯಕರು ತಮ್ಮ ಹಿಡನ್ ಅಜೆಂಡಾ ಸದನದೊಳಗೆ ತರುತ್ತಿದ್ದಾರೆ. ಸಾವರ್ಕರ್ ಗಾಂಧೀಜಿ ಮರ್ಡರ್ ಕೇಸ್‌ನಲ್ಲಿ ಇರುವ ವ್ಯಕ್ತಿ ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಷಾ ವಿವಾದದ ಕಿಡಿ – ಮರಾಠಿ ಸಿನಿಮಾ ಪೋಸ್ಟರ್‌ಗಳಿಗೆ ಮಸಿ

    Live Tv
    [brid partner=56869869 player=32851 video=960834 autoplay=true]

  • ಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ: ಗಾಂಧಿ ಮರಿ ಮೊಮ್ಮಗನ ಸ್ಫೋಟಕ ಹೇಳಿಕೆ

    ಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ: ಗಾಂಧಿ ಮರಿ ಮೊಮ್ಮಗನ ಸ್ಫೋಟಕ ಹೇಳಿಕೆ

    ಮುಂಬೈ: ವಿನಾಯಕ ದಾಮೋದರ್ ಸಾವರ್ಕರ್ (Savarkar) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿಕೆಯೊಂದನ್ನು ನೀಡಿದ ಬಳಿಕ ರಾಜಕೀಯ ವಾತಾವರಣ ಬಿಸಿಯಾಗಿದೆ. ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾದರೆ, ಶಿವಸೇನೆ ಕೂಡಾ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ, ಇದು ಪಕ್ಷದಲ್ಲಿ ವಿಭಜನೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.

    ಈ ನಡುವೆ ಮಹಾತ್ಮ ಗಾಂಧಿಯವರ (Mahatma Gandhi) ಮರಿಮೊಮ್ಮಗ ತುಷಾರ್ ಗಾಂಧಿ (Tushar Gandhi) ಸಾವರ್ಕರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೇ ನಾಥೂರಾಂ ಗೋಡ್ಸೆ (Nathuram Godse) ಅವರಿಗೆ ಬಾಪು ಅವರನ್ನು ಕೊಲ್ಲಲು ಸಮರ್ಥ ಬಂದೂಕನ್ನು ಪಡೆಯಲು ಸಹಾಯ ಮಾಡಿದ್ದರು ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಬಳಿಕ ಇದೀಗ ತುಷಾರ್ ಅವರ ಹೇಳಿಕೆ ವಿವಾದ ಸೃಷ್ಟಿಸುವ ಸಾಧ್ಯತೆಯಿದೆ.

    ಟೀಟ್‌ನಲ್ಲೇನಿದೆ?
    ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲದೇ, ಬಾಪು ಅವರನ್ನು ಕೊಲ್ಲಲು ನಾಥೂರಾಂ ಗೋಡ್ಸೆಗೆ ಸಮರ್ಥ ಬಂದೂಕನ್ನು ಹುಡುಕಲು ಸಹಾಯ ಮಾಡಿದ್ದರು. ಬಾಪು ಹತ್ಯೆಗೂ 2 ದಿನಗಳ ಮೊದಲು ಗೋಡ್ಸೆ ಬಳಿ ಪ್ರಬಲವಾದ ಯಾವುದೇ ಶಸ್ತ್ರಗಳಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಮನೆಯ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ – ಮುತಾಲಿಕ್

    ಟ್ವೀಟ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತುಷಾರ್ ಗಾಂಧಿ ತಮ್ಮ ಹೇಳಿಕೆಯನ್ನು ವಿವರಿಸಿದ್ದಾರೆ. ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸ್ ಎಫ್‌ಐಆರ್ ಪ್ರಕಾರ ನಾಥೂರಾಂ ಗೋಡ್ಸೆ ಮತ್ತು ವಿನಾಯಕ ಆಪ್ಟೆ ಸಾವರ್ಕರ್ ಅವರು 1948 ರ ಜನವರಿ 26, 27 ರಂದು ಭೇಟಿಯಾಗಿದ್ದರು. ಅವರ ಭೇಟಿಯಾಗುವವರೆಗೂ ಗೋಡ್ಸೆ ಬಳಿ ಬಂದೂಕು ಇರಲಿಲ್ಲ. ಅವರು ಬಂದೂಕು ಹುಡುಕುತ್ತಾ ಮುಂಬೈನಾದ್ಯಂತ ಸುತ್ತಾಡಿದ್ದಾರೆ. ಆದರೆ ಈ ಭೇಟಿಯ ಬಳಿಕ ಅವರು ನೇರವಾಗಿ ದೆಹಲಿಗೆ ಹೋಗಿ, ಅಲ್ಲಿಂದ ಗ್ವಾಲಿಯರ್‌ಗೆ ಹೋದರು. ಅಲ್ಲಿ ಅವರಿಗೆ ಒಳ್ಳೆಯ ಪಿಸ್ತೂಲ್ ಸಿಕ್ಕಿದೆ. ಇದೆಲ್ಲವೂ ಬಾಪು ಹತ್ಯೆಯ 2 ದಿನಗಳ ಮೊದಲು ನಡೆದಿದೆ. ಇದು ಆರೋಪ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು

    ಸಾವರ್ಕರ್ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು

    ಮುಂಬೈ: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಸ್ವಾತಂತ್ರ್ಯ ಹೋರಾಟಗಾರ ವಿಡಿ ಸಾವರ್ಕರ್ (Savarkar) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ರಾಹುಲ್ ಗಾಂಧಿ ಹೇಳಿಕೆಯಿಂದ ಸ್ಥಳೀಯ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಬಾಳಾಸಾಹೆಬಂಚಿ ಶಿವಸೇನಾ ನಾಯಕಿ ವಂದನಾ ಡೋಂಗ್ರೆ ಥಾಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಹುಲ್ ವಿರುದ್ಧ ಐಪಿಸಿ ಸೆಕ್ಷನ್ 500, 501ರ ಅಡಿಯಲ್ಲಿ ನಾನ್-ಕಾಗ್ನಿಜಬಲ್ (NCR) ಅಪರಾಧದ ಪ್ರಕರಣವನ್ನು ದಾಖಲಿಸಲಾಗಿದೆ.

    ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರಿಗೆ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾವರ್ಕರ್ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್ ಅವರಂತಹ ನಾಯಕರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದು ಸೇವಕನಾಗಿರುತ್ತೇನೆ ಎಂದಿದ್ರು: ರಾಹುಲ್ ಗಾಂಧಿ

    ವೀರ ಸಾವರ್ಕರ್ ಅವರು ಬ್ರಿಟಿಷರಿಗೆ ಪತ್ರ ಬರೆದಿದ್ದು, ಅದರಲ್ಲಿ ಅವರು ಬ್ರಿಟಿಷರ ವಿಧೇಯ ಸೇವಕರಾಗಿ ಉಳಿಯುತ್ತೇನೆ ಎಂದು ಬೇಡಿಕೊಂಡಿದ್ದರು. ಅವರು ಬ್ರಿಟಿಷರಿಗೆ ಸಹಾಯವನ್ನೂ ಮಾಡಿದ್ದು, ಮಹಾತ್ಮ ಗಾಂಧಿಯಂತಹ ನಾಯಕರಿಗೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದಾರೆ.

    ರಾಹುಲ್ ಗಾಂಧಿ ಹೇಳಿಕೆಗೆ ವಂದನಾ ಡೋಂಗ್ರೆ, ನಮ್ಮ ಮಹಾಪುರುಷರ ಮಾನಹಾನಿಯನ್ನು ನಾನು ಸಹಿಸುವುದಿಲ್ಲ. ಇದರಿಂದ ಸ್ಥಳೀಯ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಸ್ಕ್ ಗಡುವಿಗೂ ಮೊದಲೇ ನೂರಾರು ಟ್ವಿಟ್ಟರ್ ಉದ್ಯೋಗಿಗಳು ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದು ಸೇವಕನಾಗಿರುತ್ತೇನೆ ಎಂದಿದ್ರು: ರಾಹುಲ್ ಗಾಂಧಿ

    ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದು ಸೇವಕನಾಗಿರುತ್ತೇನೆ ಎಂದಿದ್ರು: ರಾಹುಲ್ ಗಾಂಧಿ

    ಮುಂಬೈ: ಸಾವರ್ಕರ್ (Savarkar) ಅವರು ಬ್ರಿಟಿಷರಿಗೆ (British) ಪತ್ರ ಬರೆದು, ತಾವು ವಿಧೇಯ ಸೇವಕನಾಗಿರುತ್ತೇನೆ ಎಂದು ಅವರಲ್ಲಿ ಬೇಡಿಕೊಂಡಿದ್ದರು ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್ ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಹಾರಾಷ್ಟ್ರದಲ್ಲಿ (Maharashtra) ಸಾಗುತ್ತಿದ್ದು, ಈ ವೇಳೆ ಮಾತನಾಡಿದ ರಾಹುಲ್, ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ. ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಯನ್ನು ಬರೆದಿದ್ದಾರೆ. ಇದು ಸಾವರ್ಕರ್ ಅವರೇ ಬ್ರಿಟಿಷರಿಗೆ ಬರೆದಿರುವ ಪತ್ರ ಎಂದು ಪತ್ರವೊಂದನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ.

    ನಾನು ನಿಮ್ಮ ವಿಧೇಯ ಸೇವಕನಾಗಿ ಉಳಿದುಕೊಳ್ಳಲು ಬಯಸುತ್ತೇನೆ ಎಂದು ಪತ್ರದಲ್ಲಿದ್ದ ಕೊನೆಯ ಸಾಲನ್ನು ಓದಿದ ರಾಹುಲ್, ಸಾವರ್ಕರ್ ಅವರು ಭಯದಿಂದಲೇ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರು ಸೇರಿದಂತೆ ಇತರ ನಾಯಕರಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿ ಕಾರಿದರು.

    ಅವರು ಅಂಡಮಾನ್‌ನಲ್ಲಿ 2-3 ವರ್ಷಗಳ ಕಾಲ ಜೈಲಿನಲ್ಲಿದ್ದು, ನಿರಂತರವಾಗಿ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಲವ್‌ ಜಿಹಾದ್‌ಗೆ ಕಠಿಣ ಕಾನೂನು ತನ್ನಿ – ದೆಹಲಿ ಪ್ರಕರಣ ಉಲ್ಲೇಖಿಸಿ ಯೋಗಿ ಆದಿತ್ಯನಾಥ್‌ಗೆ ಬಿಜೆಪಿ ಶಾಸಕ ಪತ್ರ

    ರಾಗಾ ಹೇಳಿಕೆಗೆ ಠಾಕ್ರೆ ತಿರುಗೇಟು:
    ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಸಾವರ್ಕರ್ ಅವರ ಬಗ್ಗೆ ತಮ್ಮ ಪಕ್ಷಕ್ಕೆ ಅಪಾರವಾದ ಗೌರವವಿದೆ. ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ.

    ಸಾವರ್ಕರ್ ಅವರು ಬೇರೆ ಹೆಸರಿನಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಅವರು ಎಷ್ಟು ಧೈರ್ಯಶಾಲಿ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರಿಂದ ಪಿಂಚಣಿ ಪಡೆದು, ಅವರಿಗಾಗಿ ಕೆಲಸ ಮಾಡುತ್ತಿದ್ದರು ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಸಾವರ್ಕರ್ ಮೇಲೆ ನಮಗೆ ಅಪಾರವಾದ ನಂಬಿಕೆ ಹಾಗೂ ಗೌರವವಿದೆ. ಅದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮತದಾರರ ಪಟ್ಟಿ ದುರ್ಬಳಕೆ ಹಿಂದೆ ಕಾಂಗ್ರೆಸ್ ಮಾಡಿದ್ದನ್ನೇ ಈಗ ಬಿಜೆಪಿ ಮಾಡುತ್ತಿದೆ: ಹೆಚ್‍ಡಿಕೆ

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು?: ಹೆಚ್‍ಡಿಕೆ ಲೇವಡಿ

    ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು?: ಹೆಚ್‍ಡಿಕೆ ಲೇವಡಿ

    ಮಡಿಕೇರಿ: ಒಂದು ದೇಶ ಒಂದೇ ಭಾಷೆ ಹಿಂದಿ ಆಗಿರಬೇಕು. ಹಿಂದೂ ರಾಷ್ಟ್ರವಾಗಿರಬೇಕು ಎಂದು ಸಾತ್ಯಕಿ ಸಾವರ್ಕರ್ (Satyaki Ashok Savarkar) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy), ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು. ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಅವರ ಉಪದೇಶ ಕಟ್ಟಿಕೊಂಡು ನನಗೆ ಏನೂ ಆಗಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಸಾವರ್ಕರ್ (VD Savarkar) ಮೊಮ್ಮಗ ಯಾರು ಅವರು, ಯಾರು ಆ ಮನುಷ್ಯ ಅವನಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು. ಮೊದಲು ಜನರ ಬದುಕನ್ನು ಕಟ್ಟಲು ನೋಡಿ. ಕೊಡಗಿ (Kodagu) ನಲ್ಲಿ ಮೂರು ವರ್ಷದಿಂದ ಭೂಕುಸಿತದಿಂದ ಮನೆ, ಬೆಳೆ ಹಾಳಾಗಿದೆ. ಅವರಿಗೆ ಏನು ಕೊಟ್ಟಿದ್ದೀರಿ ಮೊದಲು ಹೇಳಿ. ಆಮೇಲೆ ನಿಮ್ಮ ಹಿಂದಿ ಭಾಷೆ ಬಗ್ಗೆ ಚರ್ಚೆ ಮಾಡಿ. ಸಾವರ್ಕರ್ ಮಗನೋ, ಮೊಮ್ಮಗನೋ ಇಲ್ಲಿಗೆ ಬಂದು ನಮಗೆ ಬೋಧನೆ ಮಾಡುವುದು ಏನಿದೆ. ಮೊದಲು ಜನರ ಬದುಕನ್ನು ಕಟ್ಟಲು ನೋಡಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಇದೇ ಸಂದರ್ಭ ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ (Anand Mamani) ನಿಧನಕ್ಕೆ ಹೆಚ್‍ಡಿಕೆ ಸಂತಾಪ ಸೂಚಿಸಿದ್ದಾರೆ. ಆನಂದ ಮಾಮನಿ ಅವರು ಸರಳ ಸಜ್ಜನಿಕೆ, ಸೌಮ್ಯ ವ್ಯಕ್ತಿ, ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಸಾವು ಬರಬಾರದಿತ್ತು. ಅವರು ಬಿಜೆಪಿ ಪಕ್ಷಕ್ಕೆ ಸೇರುವುದಕ್ಕೆ ಮುನ್ನ ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದರು. ಅವರ ತಂದೆ ನಮ್ಮ ಪಕ್ಷದ ವತಿಯಿಂದ 1997-98ರಲ್ಲಿ ವಿಧಾನಸಭೆ ಸಭಾಪತಿ ಆಗಿದ್ರು. ದೇವರು ಆ ಕುಟುಂಬಕ್ಕೆ ಮಾಮನಿ ಅಗಲಿಕೆಯ ನೋವನ್ನ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]