Tag: ಸಾವರ್ಕರ್ ಫ್ಲೆಕ್ಸ್

  • ಸಾವರ್ಕರ್ ಫ್ಲೆಕ್ಸ್ ಹರಿದಿದ್ದಕ್ಕೆ PFI ನಿಷೇಧವಾಯ್ತು: ಕೆ.ಎಸ್.ಈಶ್ವರಪ್ಪ

    ಸಾವರ್ಕರ್ ಫ್ಲೆಕ್ಸ್ ಹರಿದಿದ್ದಕ್ಕೆ PFI ನಿಷೇಧವಾಯ್ತು: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಶಿವಮೊಗ್ಗದಲ್ಲಿ (Shivamogga) ಸಾವರ್ಕರ್ ಅವರ ಫ್ಲೆಕ್ಸ್ ಹರಿದಿದ್ದಕ್ಕೆ ಪಿಎಫ್‍ಐ ನಿಷೇಧ ಮಾಡುವಂತಹ ಸ್ಥಿತಿ ಬಂತು. ಇನ್ನು ಯಾರೂ ಅವರ ಫೋಟೋ ಹರಿಯುವ ಧೈರ್ಯ ಮಾಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S. Eshwarappa) ತಿಳಿಸಿದರು.

    ಶಿವಮೊಗ್ಗದಲ್ಲಿ (Shivamogga) ನಡೆದ ಸಾವರ್ಕರ್ (Savarkar) ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವರ್ಕರ್ ಅವರು ಅಂದು ಮಾಡಿದ ತ್ಯಾಗ, ಬಲಿದಾನ ಇಂದು ಸಮಾಜವನ್ನು ಜಾಗೃತಗೊಳಿಸಿದೆ. ಅಂದು ಸಾವರ್ಕರ್ ಅವರಿಗೆ ಹಿಂಸೆ ನೀಡಲಾಗಿತ್ತು. ಅವರಿಗಾಗಿ ಮಿಡಿಯುತ್ತಿದ್ದ ಸಾಕಷ್ಟು ಮಂದಿ ಕೈ, ಕೈ ಹಿಚುಕಿಕೊಳ್ಳುತ್ತಾ ಇದ್ದರು. ಇದೀಗ ಜೈಕಾರ ಹಾಕಲಾಗುತ್ತಿದೆ ಎಂದರು.

    ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚು ಇಂದು ದೇಶದಲ್ಲಿ ಜಾಗೃತಿ ಉಂಟು ಮಾಡಿದೆ. ಕಾಶಿ, ಮಥುರಾ, ಬದ್ರಿಯಂತಹ ಶ್ರದ್ದಾ ಕೇಂದ್ರಗಳ ಮೌಲ್ಯವನ್ನು ನರೇಂದ್ರ ಮೋದಿ (Narendra Modi) ಅವರು ಹೆಚ್ಚು ಮಾಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಯಾರೊಬ್ಬರೂ ದೇಶ ಭಕ್ತರ ತಂಟೆಗೆ ಹೋಗುವುದಿಲ್ಲ. ದೇಶ ದ್ರೋಹಿಗಳನ್ನು ಬಿಡುವುದಿಲ್ಲ ಎಂಬ ಸಂದೇಶ ಸಾರಲಿ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ

    ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ

    ಶಿವಮೊಗ್ಗ: ಕೆಲ ದಿನಗಳ ಹಿಂದೆ ನಗರದಲ್ಲಿ ಸಾವರ್ಕರ್ ಫ್ಲೆಕ್ಸ್‌‌ ವಿಚಾರವಾಗಿ ನಡೆದ ಗಲಭೆ ಹಿನ್ನೆಲೆ ನಗರದ ಎಸ್‍ಡಿಪಿಐ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಶಿವಮೊಗ್ಗದ ಅಮೀರ್ ಅಹಮ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರ ಸಂಬಂಧ ನಡೆದ ಗಲಾಟೆ ವೇಳೆ ಪ್ರೇಮ್ ಸಿಂಗ್‍ಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಈ ಪ್ರಕರಣ ಸಂಬಂಧ ಆರೋಪಿಗಳಾದ ತನ್ವೀರ್, ನದೀಮ್, ರೆಹಮಾನ್ ಹಾಗೂ ಜಬೀವುಲ್ಲಾ ಮನೆ ಮೇಲೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಎಸ್‍ಡಿಪಿಐ ಸಂಘಟನೆ ಜೊತೆ ಸಂಪರ್ಕ ಶಂಕೆ ಹಿನ್ನೆಲೆ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಎಸ್‍ಡಿಪಿಐ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದ ಇಬ್ಬರು ರೌಡಿಶೀಟರ್‌ಗಳು ಗಡೀಪಾರು

    ದಾಳಿಯಲ್ಲಿ ಮಹತ್ವದ ದಾಖಲೆ ಸಂಗ್ರಹಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ಕುಂಸಿ ಪಿಐ ಹರೀಶ್ ಪಟೇಲ್, ವಿ ನೋಬ ನಗರ ಪೊಲೀಸ್ ಠಾಣೆ ಪಿಐ ರವಿಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಪಿಐ ಸಂತೋಷ್, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇದನ್ನೂ ಓದಿ: ಹಾಡಹಗಲೇ ಬಾಲಕಿ ಕಿಡ್ನ್ಯಾಪ್‍ಗೆ ಯತ್ನ

    ಘಟನೆ ಹಿನ್ನೆಲೆ:
    ಆಗಸ್ಟ್‌ 15 ರಂದು ಶಿವಮೊಗ್ಗದ ಅಮೀರ್ ಅಹಮ್ಮದ್ ವೃತ್ತದಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಒಂದು ಗುಂಪು ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು. ಈ ವೇಳೆ ಎರಡು ಕೋಮಿನ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ಸಾವರ್ಕರ್ ಫೋಟೊವನ್ನು ಬೀಳಿಸುವುದರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಬೀಳಿಸುವುದರ ಮೂಲಕ ರಾಷ್ಟ್ರಧ್ವಜಕ್ಕೂ ಅವಮಾನವನ್ನು ಮಾಡಿದ್ದರು. ಆದಾದ ಬಳಿಕ ಪ್ರೇಮ್ ಸಿಂಗ್‍ ಎಂಬಾತನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು.

    Live Tv
    [brid partner=56869869 player=32851 video=960834 autoplay=true]

  • Exclusive: ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ಹೊಡೆಯಿರಿ – ಶಿವಮೊಗ್ಗ ಗಲಾಟೆಯ ಪ್ಲ್ಯಾನ್ ವೀಡಿಯೋ ಔಟ್

    Exclusive: ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ಹೊಡೆಯಿರಿ – ಶಿವಮೊಗ್ಗ ಗಲಾಟೆಯ ಪ್ಲ್ಯಾನ್ ವೀಡಿಯೋ ಔಟ್

    ಶಿವಮೊಗ್ಗ: ಸಾವರ್ಕರ್ – ಟಿಪ್ಪು ಫ್ಲೆಕ್ಸ್ ವಿಚಾರವಾಗಿ ನಗರದ ಅಮೀರ್ ಅಹ್ಮದ್ ಸರ್ಕಲ್‍ನಲ್ಲಿ ನಡೆದಿದ್ದ ಗಲಾಟೆಯ ಎಕ್ಸ್‌ಕ್ಲೂಸಿವ್ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಾವರ್ಕರ್ ಫ್ಲೆಕ್ಸ್ ತೆರವಿನ ಬಳಿಕ ಕಿಡಿಗೇಡಿಗಳ ಗುಂಪು ಎಎ ಸರ್ಕಲ್‍ನಲ್ಲಿ ಜಮಾಯಿಸಿದ್ದರು. ಅಲ್ಲದೇ ಎಲ್ಲರೂ ಕರೆ ಮಾಡಿಕೊಂಡು ಒಟ್ಟಿಗೆ ಸೇರಿ ಮಾತನಾಡಿಕೊಳ್ಳುತ್ತಿರುವ ದೃಶ್ಯ ಸಿಕ್ಕಿದೆ. ಇದನ್ನೂ ಓದಿ: ಸಿದ್ದರಾಮೋತ್ಸವ ಉತ್ಸಾಹದಲ್ಲಿದ್ದ ಕಾಂಗ್ರೆಸ್‍ಗೆ ಶಾಕ್- ಲಿಂಗಾಯತ ಅಸ್ತ್ರಕ್ಕೂ ಚೆಕ್‍ಮೇಟ್

    ಮುಸ್ಲಿಂ ಮುಖಂಡನೋರ್ವ ಯುವಕರಿಗೆ ಯಾರು ಕೂಡ ಸುಮ್ಮನೆ ಕೂರಬೇಡಿ, ಎಲ್ಲರೂ ಗುಂಪು ಸೇರಿಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ, ಟೂಲ್ಸ್‌ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಿ, ಕಲ್ಲು ತೂರಾಟ ನಡೆಸಿ ಎಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ವೀಡಿಯೋದಲ್ಲಿ ಲಭ್ಯವಾಗಿದೆ.  ಇದನ್ನೂ ಓದಿ: ಸೀಟಿಗಾಗಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ಕಿತ್ತಾಟ – ವೀಡಿಯೋ ವೈರಲ್

    ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಒಂದು ಗುಂಪು ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು. ಈ ವೇಳೆ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಈ ವೇಳೆ ಸಾವರ್ಕರ್ ಫೋಟೊವನ್ನು ಬೀಳಿಸುವುರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ರಾಷ್ಟ್ರಧ್ವಜವನ್ನು ನೆಲಕ್ಕೆ ಬೀಳಿಸುವುದರ ಮೂಲಕ ರಾಷ್ಟ್ರಧ್ವಜಕ್ಕೂ ಅವಮಾನ ಮಾಡಿದ್ದರು.

    ಇದೇ ವಿಚಾರವಾಗಿ ಪ್ರೇಮ್ ಸಿಂಗ್ (26) ಚಾಕು ಇರಿದ ಘಟನೆ ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ ನಡೆದಿತ್ತು. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ನಿಂತಿದ್ದ ಪ್ರೇಮ್ ಸಿಂಗ್ ಮೇಲೆ ದಾಳಿ ನಡೆಸಿ ಚಾಕು ಇರಿದಿದ್ದರು.

    Live Tv
    [brid partner=56869869 player=32851 video=960834 autoplay=true]