Tag: ಸಾವರಿಯಾ

  • ಟ್ರೆಡಿಷನಲ್ ಫೋಟೋಶೂಟ್‌ನಲ್ಲಿ ಮಿಂಚಿದ ಸೋನಂ ಕಪೂರ್

    ಟ್ರೆಡಿಷನಲ್ ಫೋಟೋಶೂಟ್‌ನಲ್ಲಿ ಮಿಂಚಿದ ಸೋನಂ ಕಪೂರ್

    ಬಾಲಿವುಡ್ (Bollywood) ನಟಿ ಸೋನಂ ಕಪೂರ್ (Sonam Kapoor) ಮತ್ತೆ ಸುದ್ದಿಯಲ್ಲಿದ್ದಾರೆ. ಬಗೆ ಬಗೆಯ ಫೋಟೋಶೂಟ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಇದೀಗ ಸಾಂಪ್ರದಾಯಿಕ ಲುಕ್‌ನಲ್ಲಿ ಸೋನಂ ಕಂಗೊಳಿಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ವಿರುಷ್ಕಾ ಜೋಡಿ ಭೇಟಿ

    `ಸಾವರಿಯಾ’ (Savariya) ಚಿತ್ರದ ಮೂಲಕ ರಣ್‌ಬೀರ್ ಕಪೂರ್‌ಗೆ (Ranbir Kapoor) ನಾಯಕಿಯಾಗಿ ಸೋನಂ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೋನಂ ಸೈ ಎನಿಸಿಕೊಂಡರು. ಆದರೆ ಅವರ ವೃತ್ತಿ ಬದುಕಿಗೆ ಟರ್ನಿಂಗ್‌ ಪಾಯಿಂಟ್ ಕೊಡುವಂತಹ ಪಾತ್ರ, ಸಿನಿಮಾ ಅವರಿಗೆ ಸಿಗಲೇ ಇಲ್ಲ. ಬಳಿಕ ಆನಂದ್ ಅಹುಜಾ ಜೊತೆ ಅದ್ದೂರಿಯಾಗಿ ನಟಿ ಮದುವೆಯಾದರು. ಈಗ ಮುದ್ದು ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

     

    View this post on Instagram

     

    A post shared by Sonam Kapoor Ahuja (@sonamkapoor)

    ಸದ್ಯ ಕಪ್ಪು ಬಣ್ಣದ ಸೆಲ್ವಾರ್‌ನಲ್ಲಿ ಸೋನಂ (Sonam) ಮಿಂಚಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ನಟಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿರುವ ನಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಮಗನ ಆಗಮನ ನಂತರವೂ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಲು ನಟಿ ರೆಡಿಯಾಗಿದ್ದಾರೆ. ಹೊಸ ಬಗೆಯ ಪಾತ್ರದ ಮೂಲಕ ಸೋನಂ, ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ.