Tag: ಸಾವನದುರ್ಗ

  • ಚಾರಣಕ್ಕೆ ಬಂದಿದ್ದ ಯುವಕ ನಾಪತ್ತೆ ಪ್ರಕರಣ – 4 ದಿನಗಳ ಕಾರ್ಯಾಚರಣೆ ಬಳಿಕ ಶವವಾಗಿ ಪತ್ತೆ

    ಚಾರಣಕ್ಕೆ ಬಂದಿದ್ದ ಯುವಕ ನಾಪತ್ತೆ ಪ್ರಕರಣ – 4 ದಿನಗಳ ಕಾರ್ಯಾಚರಣೆ ಬಳಿಕ ಶವವಾಗಿ ಪತ್ತೆ

    ರಾಮನಗರ: ಸ್ನೇಹಿತನ ಜೊತೆ ಚಾರಣಕ್ಕೆ (Trekking) ಬಂದ ಯುವಕ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಶವವಾಗಿ ಪತ್ತೆಯಾದ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ.

    ಚಾರಣದ ವೇಳೆ ಕಾಲುಜಾರಿ ಕಂದಕಕ್ಕೆ ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಕಳೆದ ಭಾನುವಾರ ಉತ್ತರ ಪ್ರದೇಶ (Uttar Pradesh) ಮೂಲದ ಯುವಕ ಗಗನ್‌ದೀಪ್ ಸಿಂಗ್ ಸ್ನೇಹಿತನ ಜೊತೆ ಮಾಗಡಿ ತಾಲೂಕಿನ ಸಾವನದುರ್ಗ (Savandurga) ಏಕಶಿಲಾ ಬೆಟ್ಟಕ್ಕೆ ಚಾರಣ ಬಂದಿದ್ದ. ಈ ವೇಳೆ ಅರಣ್ಯ ಪ್ರದೇಶದಲ್ಲಿ ದಾರಿ ತಪ್ಪಿದ ಗಗನ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ಕೂಡಾ ಸ್ವಿಚ್‌ಆಫ್ ಆಗಿತ್ತು. ಇದನ್ನೂ ಓದಿ: ಟ್ರಕ್, ಬಸ್ ನಡುವೆ ಅಪಘಾತ – 13 ಜನರ ಸಜೀವ ದಹನ

    ಬಳಿಕ ಗಗನ್ ಸ್ನೇಹಿತ ಈ ಸಂಬಂಧ ಮಾಗಡಿ ಪೊಲೀಸರ ಸಹಾಯ ಕೋರಿದ್ದರು. ಈ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ನಿರಂತರ ಹುಡುಕಾಟ ನಡೆಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ಥರ್ಮಲ್ ಡ್ರೋನ್, ಶ್ವಾನದಳ ಸೇರಿ ಎಸ್‌ಡಿಆರ್‌ಎಫ್ ತಂಡದಿಂದಲೂ ಶೋಧ ನಡೆಸಿ ಸತತ 100 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಗಗನ್‌ದೀಪ್ ಸಿಂಗ್ ಶವ ಪತ್ತೆಯಾಗಿದೆ. ಸದ್ಯ ಮೃತದೇಹ ಹೊರತೆಗೆಯುತ್ತಿರುವ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳಿಂದ ಮಲಗುಂಡಿ ಸ್ವಚ್ಛ ಪ್ರಕರಣ – ಐವರ ಬಂಧನ, ವಾರ್ಡನ್‌ಗೆ ಜಾಮೀನು

  • ಸ್ನೇಹಿತರ ಜೊತೆ ಚಾರಣಕ್ಕೆ ಬಂದಿದ್ದ ಯುವಕ ನಾಪತ್ತೆ

    ಸ್ನೇಹಿತರ ಜೊತೆ ಚಾರಣಕ್ಕೆ ಬಂದಿದ್ದ ಯುವಕ ನಾಪತ್ತೆ

    ರಾಮನಗರ: ಸ್ನೇಹಿತರ ಜೊತೆ ಚಾರಣಕ್ಕೆ (Trekking) ಬಂದಿದ್ದ ಉತ್ತರ ಪ್ರದೇಶ (Uttar Pradesh) ಮೂಲದ ಯುವಕ ನಾಪತ್ತೆ ಆಗಿರುವ ಘಟನೆ ಮಾಗಡಿ ತಾಲೂಕು ಸಾವನದುರ್ಗದಲ್ಲಿ (Savandurga) ನಡೆದಿದೆ.

    ಏಕಶಿಲಾ ಬೆಟ್ಟ ಸಾವನದುರ್ಗ ಚಾರಣಿಗರ ಪಾಲಿಗೆ ಸ್ವರ್ಗವಾಗಿದ್ದು, ಸಾಲು ಸಾಲು ರಜೆ ಇದ್ದ ಕಾರಣ ಭಾನುವಾರ ಸ್ನೇಹಿತನೊಂದಿಗೆ ಉತ್ತರ ಪ್ರದೇಶ ಮೂಲದ ಗಗನ್‌ದೀಪ್ ಸಿಂಗ್ (30) ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ನಾಪತ್ತೆಯಾಗಿದ್ದು, ಗಗನ್ ಸ್ನೇಹಿತ ಬೆಟ್ಟದಿಂದ ಇಳಿದು ಬಂದು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗೆ ನಾಪತ್ತೆ ಸಂಬಂಧ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಸ್ ಗೀಸರ್‌ಗೆ ಮತ್ತೊಂದು ಬಲಿ – ವಿಷಾನಿಲ ಸೋರಿಕೆಯಾಗಿ ಸ್ನಾನ ಮಾಡಲು ಹೋಗಿದ್ದ ಯುವತಿ ಸಾವು

    ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಗಗನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಭಾನುವಾರ ಮಧ್ಯಾಹ್ನದಿಂದಲೂ ನಾಪತ್ತೆ ಆಗಿರುವ ಗಗನ್‌ಗಾಗಿ ಹುಡುಕಾಟ ನಡೆದಿದ್ದು, ಈವರೆಗೂ ಸುಳಿವು ಪತ್ತೆ ಆಗಿಲ್ಲ. ಪತ್ತೆಗೆ ಡ್ರೋನ್ ಸಹ ಬಳಕೆ ಮಾಡಲಾಗಿದೆಯಾದರೂ ಇನ್ನೂ ಯುವಕ ಪತ್ತೆ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಕಾರ್ಮಿಕ ಸಾವು; ಮತ್ತೊಬ್ಬನ ರಕ್ಷಣೆ

  • ನಿಷೇಧಿತ ಪ್ರದೇಶಗಳಲ್ಲಿ ಡೇ-ನೈಟ್ ಟ್ರಕ್ಕಿಂಗ್

    ನಿಷೇಧಿತ ಪ್ರದೇಶಗಳಲ್ಲಿ ಡೇ-ನೈಟ್ ಟ್ರಕ್ಕಿಂಗ್

    ರಾಮನಗರ: ಸಿಲಿಕಾನ್ ಸಿಟಿ ಕೂಗಳತೆ ದೂರದಲ್ಲಿನ ರಾಮನಗರ ಅಂದರೆ ಟೆಕ್ಕಿಗಳಿಗೆ ತುಂಬಾನೆ ಇಷ್ಟ. ವೀಕೆಂಡ್ ಬಂತು ಅಂದರೆ ಸಾಕು ಟ್ರಕ್ಕಿಂಗ್, ವೀಕೆಂಡ್ ಟ್ರಿಪ್ ಅಂತ ಹೋಗುತ್ತಿರುತ್ತಾರೆ. ಆದರೆ ಡೇ ಆ್ಯಂಡ್ ನೈಟ್ ಹಲವೆಡೆ ಅನಧಿಕೃತವಾಗಿ ಟ್ರಕ್ಕಿಂಗ್ ಮಾಡುತ್ತಿದ್ದಾರೆ.

    ಹೌದು. ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಹಲವಾರು ಪ್ರವಾಸಿ ತಾಣಗಳಿವೆ. ಪ್ರವಾಸಿ ತಾಣಗಳ ಜೊತೆಗೆ ಬೆಟ್ಟಗುಡ್ಡಗಳು ಸಹ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಾ ಇದೆ. ಆದರೆ ಇದೀಗ ಈ ಬೆಟ್ಟಗುಡ್ಡಗಳಿಗೆ ಅನುಮತಿಯಿಲ್ಲದೇ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಯುತ್ತಿರುವ ಘಟನೆ ಸಾಮಾನ್ಯವಾಗಿ ಹೋಗಿದೆ. ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ ಟ್ರಕ್ಕಿಂಗ್ ನಿಷೇಧಿಸಿದ್ದರೂ ಕೂಡಾ ಟ್ರಕ್ಕಿಂಗ್‍ನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ.

    ಅಡ್ವೆಂಚರ್ ನೇಷನ್ ಎಂಬ ವೆಬ್‍ಸೈಟ್‍ ನಲ್ಲಿ ಚಾರಣಿಗರು ಅದರಲ್ಲೂ ಟೆಕ್ಕಿಗಳೇ ಹೆಚ್ಚಿನದಾಗಿ ಬುಕ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೇ ರಾತ್ರಿಯಿಡೀ ಟ್ರಕ್ಕಿಂಗ್, ಬೋನ್‍ಫೈರ್ ಕ್ಯಾಂಪ್ ಜೊತೆಗೆ ಬೆಳಗ್ಗಿನ ವೇಳೆ ರಾಕ್ ಕ್ಲೈಂಬಿಂಗ್ ನಡೆಸುತ್ತಾ ಅರಣ್ಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇನ್ನೂ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್, ಸ್ವಿಮ್ಮಿಂಗ್ ಸಹ ನಡೆಸುತ್ತಾ ಇದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪರಿಸರ ಪ್ರಿಯ ಕೊತ್ತಿಪುರ ಶಿವಣ್ಣ ಹೇಳಿದ್ದಾರೆ.

    ಅಂದಹಾಗೆ ಸಾವನದುರ್ಗ ಮತ್ತು ಮಂಚನಬೆಲೆ ಹಿನ್ನೀರಿನ ಬಳಿ ಪ್ರವೀಣ್ ಕೃಷ್ಣ ಎಂಬವರು 2.5 ಎಕರೆ ವಿಸ್ತೀರ್ಣದಲ್ಲಿ ಅಡ್ವೆಂಚರ್ ನೇಷನ್ ರೆಸಾರ್ಟ್ ನ್ನು ನಿರ್ಮಿಸಿದ್ದಾರೆ. ಈ ರೆಸಾರ್ಟ್ ಗೆ ಆನ್‍ಲೈನ್‍ನಲ್ಲಿ ಟ್ರಕ್ಕಿಂಗ್‍ಗೆ ಬುಕ್ ಮಾಡಿದ ಚಾರಣಿಗರನ್ನ ಸಾವನದುರ್ಗದ ದಬ್ಬಗುಳಿ ತನಕ ಕರೆತರಲಾಗುತ್ತದೆ. ಬಳಿಕ ಈ ರೆಸಾರ್ಟ್ ನಲ್ಲಿ ತಂಗಲು ವ್ಯವಸ್ಥೆ ಮಾಡಿ ರಾತ್ರಿ ವೇಳೆ ಫೈರ್ ಕ್ಯಾಂಪ್ ಅಲ್ಲದೇ ರಾಕ್ ಕ್ಲೈಂಬಿಂಗ್‍ ಗೆ ಚಾರಣಿಗರು ಹೋಗುತ್ತಿದ್ದಾರೆ. ಆನ್‍ಲೈನ್‍ ನಲ್ಲಿ ಟ್ರಕ್ಕಿಂಗ್ ಬುಕ್ಕಿಂಗ್ ಆಗುತ್ತಿದ್ದಂತೆ ಮಾಹಿತಿಗಾಗಿ ಅಡ್ವೆಂಚರ್ ಪ್ರತಿನಿಧಿ ಕರೆ ಮಾಡಿ ಮಾಹಿತಿಯನ್ನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

    ಸಾವನದುರ್ಗ ಟ್ರಕ್ಕಿಂಗ್‍ಗೆ ದಿನವೊಂದಕ್ಕೆ 1250 ರೂಪಾಯಿಯನ್ನು ಓರ್ವ ಚಾರಣಿಗನಿಗೆ ನಿಗದಿ ಮಾಡಲಾಗಿದೆ. 3 ದಿನ 5 ದಿನದ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇದಲ್ಲದೇ ಹಂದಿಗುಂದಿ ಅರಣ್ಯಪ್ರದೇಶ ಹಾಗೂ ಶೋಲೆ ಖ್ಯಾತಿಯ ರಾಮದೇವರ ಬೆಟ್ಟದಲ್ಲೂ ಸಹ ರಾಕ್ ಕ್ಲೈಂಬಿಂಗ್, ಟ್ರಕ್ಕಿಂಗ್ ನಡೆಸಲಾಗುತ್ತಿದೆ. ಆದರೂ ಕೂಡಾ ಅರಣ್ಯ ಇಲಾಖೆಗೆ ಸರಿಯಾದ ಮಾಹಿತಿ ಇಲ್ಲವಾಗಿದೆ ಎಂದು ಅಡ್ವೆಂಚರ್ ನೇಷನ್ ರೆಸಾರ್ಟ್ ಮ್ಯಾನೇಜರ್ ಮಹಾದೇವ್ ತಿಳಿಸಿದ್ದಾರೆ.

    ಒಂದೆಡೆ ರಾಜಾರೋಷವಾಗಿ ಅರಣ್ಯದಲ್ಲಿ ರೆಸಾರ್ಟ್ ನಡೆಯುತ್ತಾ ಇದೆ. ಇನ್ನೊಂದೆಡೆ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳಲ್ಲಿ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಟ್ರಕ್ಕಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv